ವಿಭಾಗಗಳು

ಸುದ್ದಿಪತ್ರ


 

ಅನುಭಾವ ಬಿಂದುಗಳು…

– 1 – 

ಕಾಣದ ನಿನ್ನ
ಅರಸಿ ಅರಸಿಯೇ ಬೇಸತ್ತೆ.
ಊಹೂಂ…!
ಇಲ್ಲಿಯೂ ದಕ್ಕಲಿಲ್ಲzen
ಅಲ್ಲೂ ದಕ್ಕಲಿಲ್ಲ.
ಮಾಡಿಟ್ಟ ಅಡುಗೆಯ ಬಿಟ್ಟು
ಭಿಕ್ಷಾಟನೆಗೆ
ಹೋಗಿದ್ದೇ ತಪ್ಪಾಯಿತೇನೋ?

– 2 –

ಮಾತಿಗೆ ನಿಲುಕದವನು
ಎನ್ನುತ್ತಲೇ
ಮಾತಾಡುತ್ತಾರೆ
ನಿನ್ನ ಬಗ್ಗೆ
ರೇಜಿಗೆ ಹುಟ್ಟುವುಷ್ಟು
ನಿನ್ನ ಕಂಡ ಮೇಲೆ
ಮಾತಾಡಲು
ಅವರಿಗೆ ಅದೆಲ್ಲಿ
ಪುರುಸೊತ್ತು!?

– 3 – 

ಹೂವು ಚೆಂದ, ಸುಂದರ
ಅನ್ನುತ್ತಲೇ ಉಳಿದೆವು,
ದುಂಬಿ ಹೀರಿತು ಮಕರಂದ.
ನಿನ್ನ ಬಗ್ಗೆ
ಹೇಳಿದ್ದೇ ಬಂತು,
ಅವ ಸವಿದ ನಿನ್ನಂದ!

– 4 – 

ಬದುಕಿಗಿಂತ ಸಾವೇ ಮೇಲು
ಅನ್ನುತ್ತಾರೆ ಕೆಲವರು.
ಬದುಕಿನ ಸವಿ ಹೀರಲಾಗದೆ,
ಸಾವಿನ ಸಾಹಸ ಮಾಡಲಾಗದೆ
ನಿತ್ಯ ಸಾಯುತ್ತಾರೆ,
ಬದುಕಿದ್ದೂ ಸತ್ತಂತಿರುತ್ತಾರೆ.

– 5 – 

ಹುಟ್ಟಿದೊಡನೆ ಅಮ್ಮನ್ನ ಕಳಕೊಂಡೆ
ಅವಳು ಹಾಲೂಡಿಸಿದ್ದರೆ,
ಈ ಅಲ್ಕೋಹಾಲು ನಾನೇಕೆ ಕುಡಿಯುತ್ತಿದ್ದೆ?
ಹಾಗಂತ ಹಲುಬುತ್ತಲೇ ಇದ್ದೆ.
ನೆನ್ನೆಯಷ್ಟೇ ಸಮಾಧಾನವಾಯಿತು
ಬಾರಿನ ನನ್ನ ಟೇಬಲ್ಲ ಪಕ್ಕದಲ್ಲಿ
ಪಾರ್ಟಿ ನಡೆದಿತ್ತು
ಅಧಿಕಾರಿಗಳು, ರಾಜಕಾರಣಿಗಳು
ಜಾಮಿನ ಮೇಲೆ ಜಾಮಿಳಿಸುತ್ತಿದ್ದರು,
‘ಹಾಲೂಡಿಸಿದ ತಾಯಿ’ಗೆ ವಿಷ ಕೊಟ್ಟು!

11 Responses to ಅನುಭಾವ ಬಿಂದುಗಳು…

 1. Tina

  ಚಕ್ರವರ್ತಿ,
  ಮೊದಲೆರಡು ಸ್ಟಾಂಜಾಗಳು ಬಹಳ ಹಿಡಿಸಿದವು. ಇದೇ ಮೊದಲ ಸಾರಿ ನಿಮ್ಮ ಕವಿತೆ ಓದುತ್ತ ಇರುವುದು. ಇನ್ನೂ ಹೆಚ್ಚಿಗೆ ಬರೀತೀರ ತಾನೆ?
  -ಟೀನಾ.

 2. Chakravarty

  ನಮಸ್ತೇ ಟೀನಾ,
  ಈ ಥರದ್ದನ್ನ ನಾನು ಬರೀತಿರೋದೂ ಇದೇ ಮೊದಲ ಸಾರ್ತಿ. ಇದು ಮುಂದುವರಿಯುತ್ತದೆ ಅಂದುಕೊಳ್ಳುತ್ತೇನೆ!
  ಧನ್ಯವಾದ
  – ಚಕ್ರವರ್ತಿ

 3. Vikram Hathwar

  ಮೊದಲನೆಯದು ತುಂಬಾ ಚೆನ್ನಾಗಿದೆ. ಇನ್ನಷ್ಟು ಬರಲಿ.

 4. chakravarty

  Dhanyavaada Vikram.
  – Chakravarty

 5. hariharapura sridhar

  ಅನುಭಾವ ಬಿಂದುಗಳು…
  In ಅನುಭಾವ ಬಿಂದುಗಳು on January 2, 2008 at 4:11 pm

  – 1 –

  ಕಾಣದ ನಿನ್ನ
  ಅರಸಿ ಅರಸಿಯೇ ಬೇಸತ್ತೆ.
  ಊಹೂಂ…!
  ಇಲ್ಲಿಯೂ ದಕ್ಕಲಿಲ್ಲ
  ಅಲ್ಲೂ ದಕ್ಕಲಿಲ್ಲ.
  ಮಾಡಿಟ್ಟ ಅಡುಗೆಯ ಬಿಟ್ಟು
  ಭಿಕ್ಷಾಟನೆಗೆ
  ಹೋಗಿದ್ದೇ ತಪ್ಪಾಯಿತೇನೋ?

  ಎಷ್ಟು ಸರಳ!ಆದರೆ ಎಂತಹಾ ಚಾಟಿ ಏಟು?
  ಚನ್ನಾಗಿದೆ, ಚಕ್ರವರ್ತಿಗಳೇ,ತುಂಬಾ ಜನರ ಪರಿಸ್ತಿತಿ ಇದು. ಮನೆಯಲ್ಲಿ ಮೃಷ್ಟಾನ್ನ ಇಟ್ಟು ಕೊಂಡು ಬೀದಿ ಬೀದಿ ಅಲೆಯೋ ಜನ ಇದಾರೆ. ತಿಳಿದುಕೊಳ್ಳಲು ಸಾಕಷ್ಟು ಇದೆ. ಹೀಗೆಯೇ ಬರೆಯಿರಿ, ಧನ್ಯವಾದಗಳು
  ಹರಿಹರಪುರಶ್ರೀಧರ್
  hariharapurasridhar.blogspot.com

 6. Sanju

  ತುಂಬಾ ಸಂತೋಷ ವಾಯಿತು Sir , ನಿಮ್ಮ ಈ ತರಹದ ಸಾಲುಗಳನ್ನು ಓದಿ . ಹೀಗೆ ಮುಂದುವರೆಯುತ್ತದೆ ಎಂದು ಆಶಿಸುತ್ತೇನೆ . . 😉

 7. Akshay Shet Bhatkal

  ನಿಮ್ಮ ಕವಿತೆಯ ಸಾಲುಗಳನ್ನು ಓದಿ ತುಂಬಾ ಸಂತೋಷವಾಯಿತು ಇನ್ನು ಹೆಚ್ಚಿನ ಕವಿತೆಗಳು ಸುಂದರವಾಗಿ ಮೂಡಿಬರಲಿ ಎಂದು ಹಾರೈಸುತ್ತೇನೆ ….ಮುಸ್ಸಂಜೆಯ ಶುಭ ಕಾಮನೆಗಳು

 8. Radhakrishna

  ಅನುಭವ ಅನುಭಾವಗಳ ಬೆಸುಗೆ ಇದು.. ಕಾದ ಇಳೆಗೆ ಮಳೆಯು ಸುರಿದು ಮಣ್ಣಿನ ವಾಸನೆ ಹರಡಿದಂತೆ..

 9. suvarna

  i read all this very use full me

 10. dharma raj

  sundara kavite, nagna satya

 11. shambulingappa m

  Dear Chakravathi sir…. tumba artha garbitha salugalu.ಬದುಕಿಗಿಂತ ಸಾವೇ ಮೇಲು
  ಅನ್ನುತ್ತಾರೆ ಕೆಲವರು.
  ಬದುಕಿನ ಸವಿ ಹೀರಲಾಗದೆ,
  ಸಾವಿನ ಸಾಹಸ ಮಾಡಲಾಗದೆ
  ನಿತ್ಯ ಸಾಯುತ್ತಾರೆ,
  ಬದುಕಿದ್ದೂ ಸತ್ತಂತಿರುತ್ತಾರೆ. e tarada salugalu indina yuvakaru yochisuvante ive. we are expecting some more, thank u

Leave a Reply