ವಿಭಾಗಗಳು

ಸುದ್ದಿಪತ್ರ


 

ಇತಿಹಾಸದ ಪುಟಗಳಲ್ಲಿ ಮುಲಾಜಿನ ಗೋಜಲು

shri_ram-20050507-103342.jpg

ರಾಮಾಯಣದ ಅತ್ಯಂತ ಮಹತ್ವದ ತಿರುವ ಕಂಡ ಪ್ರಸಂಗ ಅದು. ದಶರಥ ತಾನು ಕೈಕೇಯಿಗೆ ಯಾವಗಲೋ ಕೊಟ್ಟ ಮಾತನ್ನು ಈಡೇರಿಸಲಿಕ್ಕಾಗಿ ಪಟ್ಟಾಭಿಷಕ್ತನಾಗಬೇಕಿದ್ದ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಂತೆ ಕೇಳಿಕೊಳ್ಳುತ್ತಾನೆ. ರಾಮನೇನೋ ತಂದೆಯ ಆಜ್ಞಾಪಾಲನೆಗೆ ಸಿದ್ಧನಾಗಿಬಿಟ್ಟ. ಆದರೆ ಲಕ್ಷ್ಮಣನ ಮುಖ ಕೆಂಪುಕೆಂಪಾಯಿತು. “ಅಣ್ಣ, ಅಪ್ಪನನ್ನು ಕೊಂದು ರಾಜ್ಯ ವಶಪಡಿಸಿಕೊಳ್ಳೋಣ” ಎಂದ. ರಾಮ ತಮ್ಮನನ್ನು ಸಂತೈಸುತ್ತ, ” ತಂದೆಯ ಮಾತನ್ನು ನಡೆಸಿಕೊದುವುದೆ ಪುತ್ರಧರ್ಮ. ಅದರಲ್ಲಿಯೆ ನಮಗೆ ಶ್ರೇಯಸ್ಸು” ಎಂದುಬಿಟ್ಟ. ತಂದೆಯ ಮಾತಿಗಾಗಿ ರಾಜ್ಯಬಿಟ್ಟು ತೆರಳಿದ ರಾಮ, ಮರಳಿ ಬರುವ ವೇಳೆಗೆ ಜಗ ಬೆಳಗುವ ರಾಮನಾಗಿ ಬಂದ. ಆದರೆ ಪತ್ನಿಯ ದಾಕ್ಷಿಣ್ಯಕ್ಕೆ ಒಳಗಾಗಿ ಮಗನನ್ನೇ ಕಾಡಿಗೆ ಅಟ್ಟಿದ ದಶರಥ, ಪುತ್ರವ್ಯಾಮೋಹದಲ್ಲಿಯೇ ಕೊನೆಯುಸಿರೆಳೆದ.

~

ಯಾರದೋ ಮರ್ಜಿಗೆ, ಮುಲಾಜಿಗೆ ಒಳಗಾಗಿ ಕೈಗೊಂಡ ನಿರ್ಣಯಗಳು ಮತ್ತೆಲ್ಲೋ ಒಳ್ಳೆಯ ಕೆಲಸ ಮಾಡಿದರೆ ಪುಣ್ಯ. ಅನೇಕ ವೇಳೆ ಅವು ಭವಿಷ್ಯವನ್ನೇ ಮೊಟಕುಗೊಳಿಸುವಂಥಹ ನಿರ್ಣಯಗಳಾಗಿಬಿಡುತ್ತವೆ.
ಧೃತರಾಷ್ಟ್ರ ತನ್ನ ಮಕ್ಕಳಿಗೇ ರಾಜ್ಯ ಸಿಗಬೆಕೆಂದು ಹಟ ಹಿದಿದು ಪಾಂದವರಿಗೆ ಅನ್ಯಾಯ ಮಾಡಿದನಲ್ಲ, ಪರಿಣಾಮ ಏನಾಯ್ತು ಗೊತ್ತ? ಯುದ್ಧ ಮತ್ತು ಸರ್ವನಾಶ! ಧರ್ಮರಾಜ್ಯ ಸ್ಥಾಪನೆಯಾಗಲಿಕ್ಕೆ ಕೃಷ್ಣ ಕಾರಣನಾದ ಎನ್ನುವುದನ್ನು ಬಿಟ್ಟರೆ ಇಡಿಯ ಮಹಾಭಾರತ ಅನೇಕ ತುಮುಲಗಳ ಆಗರವಾಗಿ ಕಾಣುವುದಿಲ್ಲವೇ? ಅತ್ತ ಧೃತರಾಷ್ಟ್ರ ತನ್ನ ಪುತ್ರ ವ್ಯಾಮೋಹದ ಮುಲಾಜಿಗೆ ಒಳಗಾದರೆ, ಅವನ ಮಗ ದುರ್ಯೋಧನ ತನ್ನದೇ ಅಹಂಕಾರದ ದಾಕ್ಷಿಣ್ಯಕ್ಕೆ ಒಳಗಾಗಿದ್ದ. ಕೃಷ್ಣ ಬಂದು ಧರ್ಮೋಪದೇಶ ಮಾಡಿದರೆ,
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ
ಎಂದುಬಿಟ್ಟ.  “ಧರ್ಮ ಗೊತ್ತಿದ್ದರೂ ಆಚರಿಸುವ  ಮನಸಿಲ್ಲ, ಅಧರ್ಮವೆಮ್ದು ತಿಳಿದರೂ ಬಿಡಲು ಮನಸಿಲ್ಲ” ಎಂಡು ತನ್ನ ಅಹಂಕಾರಕ್ಕೆ ಶರಣಾಗಿಬಿಟ್ಟ! ಅಬ್ಬಬ್ಬ… ಈ ಪರಿಯ ದಾಸ್ಯ ಅದೆಷ್ಟು ಕಷ್ಟ, ನಿಕೃಷ್ಟ!?

ಹಲವು ಬಾರಿ ನಂಬಿಕೊಂಡ ಆದರ್ಶಗಳೂ ದಾಕ್ಷಿಣ್ಯವಾಗಿಯೇ ಕಾಡುತ್ತವೆ. ಬಹುಶಃ ಆದರ್ಶಗಳ ಮರ್ಜಿಗೆ ಒಳಗಾಗುವುದು ಅಂದರೆ ಅದೇ ಇರಬೇಕು.

~

ಪೃಥ್ವಿರಾಜ್ ಚೌಹಾನನ ಮೇಲೆ ಮಹಮದ್ ಘೋರಿ ದಾಳಿ ಮಾಡಿದ್ದು ನೆನಪಿಸಿಕೊಳ್ಳಿ. ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಘಟ್ಟ ಅದು. ತರೈನ್ ಎನ್ನುವ ಪ್ರದೇಶದಲ್ಲಿ ಅವರಿಬ್ಬರಿಗೂ ಮುಖಾಮುಖಿಯಾಯ್ತು. ಪೃಥ್ವಿರಾಜನ ಸೇನೆಯೆದುರು ಘೋರಿಯ ಸೇನೆ ಪತರಗುಟ್ಟಿ ಹೋಯಿತು. ಆಮೆಲೇನು?  ಘೋರಿ ಪೃಥ್ವಿರಾಜನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಕ್ಷಮೆ ಯಾರಿಗೆ? ಅದನ್ನು ಪಾತ್ರರಿಗೆ ನೀಡಬೇಕು. ಘೋರಿಯಂತಹ ಅಪಾತ್ರರಿಗಲ್ಲ. ಆದರ್ಶಗಳ ಮುಲಾಜಿಗೆ ಬಿದ್ದ ಪೃಥ್ವಿರಾಜ್ ಚೌಹಾಣ್ ಘೋರಿಯನ್ನು ಕ್ಷಮಿಸಿದ್ದಷ್ಟೇ ಅಲ್ಲ, ಗೌರವಯುತವಾಗಿ ಮರಳಲು ಅನುವು ಮಾಡಿಕೊಟ್ಟ ಕೂಡ!
ಮರು ವರ್ಷವೇ ತರೈನ್ ನಲ್ಲಿ ಮತ್ತೆ ದಾಳಿಯಾಯ್ತು. ಈ ಬಾರಿ ತನ್ನವರೇ ಮೋಸ ಮಾಡಿದುದರ ಫಲವಾಗಿ ಚೌಹಾನನ ಸೇನೆ ಸೋತಿತು. ಘೋರಿಯ ಕೈ ಮೇಲಾಯ್ತು. ಆತ ಚೌಹಾನನನ್ನು ಬಂಧಿಸಿ, ತನ್ನೂರಿಗೆ ಕರೆದೊಯ್ದ. ಅಲ್ಲಿ ಅವನ ಎರಡೂ ಕಣ್ಣೂಗಳನ್ನು ಕೀಳಿಸಿ ಬರ್ಬರ ಕೊಲೆ ಮಾಡಿಸಿದ.
ಅದಕ್ಕೇ ಹೇಳೋದು. ಅಯೋಗ್ಯರಿಗೆ ಒಳ್ಳೆಯದನ್ನು ಮಾಡಬಾರದೆಂಬುದೂ ಒಂದು ಆದರ್ಶ. ಏನಂತೀರಿ?

ray_sirajuddaula.jpg

೧೭೫೭ರಲ್ಲೂ ಹಾಗೇ ಆಯಿತು. ಸಿರಾಜುದ್ದೌಲ ಬಂಗಾಳಾದ ನವಾಬನಾಗಿದ್ದಾಗ ಆಂಗ್ಲರ ವಿರುದ್ಧ ತಿರುಗಿ ಬಿದ್ದ. ಪೋರ್ಟ್ ವಿಲಿಯಂ ಮೇಲೆ ಏರಿ ಹೋದ. ಪತರಗುಟ್ಟಿದ ರಾಬರ್ಟ್ ಕ್ಲೈವ್, ಸಿರಾಜುದ್ದೌಲನ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್  ಜಾಫರನನ್ನು ಒಲಿಸಿಕೊಂಡ. ರಾಜ್ಯದ ಆಮಿಷ ತೋರಿದ. ಈ ಬಾರಿ ಮೀರ್ ಜಾಫರ್ ಯುದ್ಧಕ್ಕೆ ಮುನ್ನ ನವಾಬನ ಬಳಿ ಹೋಗಿ, “ನನ್ನಂತಹ ಸೇನಾಪತಿ ಇರುವಾಗ ನವಾಬರೇ ಯುದ್ಧಕ್ಕೆ ಬರುವುದು ಸರಿಯಲ್ಲ, ಹಾಗೆ ಮಾಡಿದರೆ ಅದು ನನ್ನ ಸಾಮರ್ಥ್ಯಕ್ಕೆ ಅವಮಾನ ಮಾಡಿದಂತೆ. ಬೆರಳೆಣಿಕೆಯಷ್ಟಿರುವ ಆಂಗ್ಲರನ್ನು ಸೋಲಿಸಿ ಬರುತ್ತೇನೆ” ಎಂದ. ನವಾಬನಿಗೂ ಹೌದೆನ್ನಿಸಿತು. ತನ್ನ ಸೇನಾಪತಿಗೆ ಅವಮಾನ ಮಾಡುವುದು ಸರಿಯೇ ಅನ್ನುವ ದ್ವಂದ್ವ ಅವನನ್ನು ಕಾಡಿತು. ಮೀರ್ ಜಾಫರನ ಮುಲಾಜಿಗೆ ಒಳಗಾದ. ಭಾರತದ ಇತಿಹಾಸವೇ ಬದಲಾಯ್ತು. ರಾಬರ್ಟ್ ಕ್ಲೈವ್ ಕದನದಲ್ಲಿ ಸಲೀಸಾಗಿ ಗೆದ್ದ. ನವಾಬನನ್ನು ಪದಚ್ಯುತಗೊಳಿಸಿ ಮೀರ್ ಜಾಫರನನ್ನು ಪಟ್ಟಕ್ಕೇರಿಸಲಾಯ್ತು. ಬ್ರಿಟನ್ನಿನ ಪ್ರಭುತ್ವ ಭಾರತದಲ್ಲಿ ಸ್ಥಿರವಾಗಲು ಅದೊಂದು ಹೆದ್ದಾರಿಯಾಯ್ತು. ಒಂದು ನಿರ್ಧಾರ ಇತಿಹಾಸ ಬದಲಿಸುವ ಎಂತಹ ಕೆಲಸ ಮಾಡಿತು ನೋಡಿ!

~

ಗಾಂಧೀಜಿಯೂ ಇಂತಹ, ಇತರರಿಂದ ಪ್ರಭಾವಿತರಾದ ನಿರ್ಣಯ ಕೈಗೊಳ್ಳುತ್ತಲೇ ಇದ್ದರು. ಅವರು ನೆಹರೂರನ್ನು ತಮ್ಮ ಉತ್ತರಾಧಿಕಾರಿ ಎಂದು ಕರೆದಿದ್ದು ಏಕೆ ಎಂಬ ಪ್ರಶ್ನೆ ಒಂದು ಹಂತದ ನಂತರ ಅವರನ್ನೇ ಕಾಡಿರಲಿಕ್ಕೆ ಸಾಕು. ಮೋತೀಲಾಲ ನೆಹರೂ ಕಾಂಗ್ರೆಸ್ ಪಾರ್ಟಿಗೆ ತುಂಬಾ ದುಡಿದಿದ್ದರು ಎಂಬ ದಾಕ್ಷಿಣ್ಯವ? ಅಥವಾ ಶೋಕೀಲಾಲನಾಗಿದ್ದ ಯುವಕ ತನ್ನ ಚಿಂತನೆಗಳಿಗೆ ಮನಸೋತು ಬಂದಿದ್ದಾನೆಂಬ ಮುಲಾಜಿಗೋ? ದೇವರೇ ಬಲ್ಲ. ಹಾಗೆ ನೋದಿದರೆ ಯಾವ ಕಾರಣಕ್ಕೂ ನೆಹರೂ ಗಾಂಧೀಜಿಯ ಉತ್ತರಾಧಿಕಾರಿಯಾಗುವ ಯೋಗ್ಯತೆ ಹೊಂದಿರಲಿಲ್ಲ. ಗಾಂಧೀಜಿಯ ಸ್ವದೇಶೀ ಚಿಂತನೆಗಳು ಯೋಚಿಸಲಿಕ್ಕೂ ಅನರ್ಹ ಎಂದವರು ನೆಹರೂ. ಗಾಂಧೀಜಿಯಷ್ಟು ಸತ್ಯಪರಾಯಣತೆ, ಆದರ್ಶಗಳಿಗೆ ಬದ್ಧತೆ, ಇವ್ಯಾವುವೂ ಅವರಿಗಿರಲಿಲ್ಲ. ಅಷ್ಟಾದರೂ ಗಾಂಧೀಜಿ ಮೈಮರೆತು ನೆಹರೂಗೆ ಅಷ್ಟು ಮಹತ್ವದ ಸ್ಥಾನ ಕೊಟ್ಟರು. “ನನ್ನ ನಂತರ ನೆಹರೂ ನನ್ನ ಮಾತಾಡುತ್ತಾರೆ” ಎಂದುಬಿಟ್ಟರು. ಕಾಂಗ್ರೆಸ್ಸಿನ ಸೆಂಟ್ರಲ್ ಕಮಿಟಿ ಪಟೇಲರೇ ದೇಶದ ಪ್ರಧಾನಿಯಾಗಲಿ ಎಂದು ಘಂಟಾಘೋಷವಾಗಿ ಹೇಳಿದರೂ ಗಾಂಧೀಜಿ ಮನಸ್ಸು ಮಾಡಲಿಲ್ಲ.

ಪ್ರಧಾನ ಮಂತ್ರಿಗಿರಿ ಪಡೆದು ಆಳುವ ಖುರ್ಚಿಯೇರಿದ ನೆಹರೂ, ಖುರ್ಚಿ ತಪ್ಪಿಸಿಕೊಂಡ ನೆಹರೂನಷ್ಟು ಅಪಾಯಕಾರಿಯಲ್ಲ ಅಂತ ಗಾಂಧೀಜಿಗೆ ಅನಿಸಿತ್ತಾ? ಅಥವಾ ಅವರಪ್ಪನಿಗೆ ಮಾತು ಕೊಟ್ಟಿದ್ದೇನೆಂಬ ಒಂದೇ ಕಾರಣಕ್ಕೆ, ಆ ದರ್ದಿಗೆ ಅವರನ್ನು ಪ್ರಧಾನಿಯಾಗಲು ಬಿಟ್ಟರಾ?
ಏನೇ ಆಗಲಿ, ಆ ನಿರ್ಣಯ ರಾಷ್ಟ್ರದ ಪಾಲಿಗೆ ಭಯಾನಕವಾಗಿದ್ದನ್ನು ಮಾತ್ರ ಯಾರೂ ಅಲ್ಲಗಳೆಯಲಾರರು.

withnehru.gif

ಈ ನಡುವೆ ಪಟೇಲರಿಗೆ ಯಾವ ಮುಲಾಜಿತ್ತು ಎಂಬುದೂ ಪ್ರಶ್ನೆಯೇ. ಉಗ್ರ ಪ್ರತಾಪಿಯಾಗಿದ್ದ ಪಟೇಲರು ಗಾಂಧೀಜಿಯನ್ನು ಧಿಕ್ಕರಿಸದೆ ಉಳಿದ ಕಾಅರ್ಣವೆನು? ಗಾಂಧೀಜಿಯ ಸಮಸ್ಯೆಗಳ ಅರಿವು ಪಟೇಲರಿಗಿತ್ತಾ? ಪಟೇಲರೂ ಗಾಂಧೀಜಿಯ ದಾಕ್ಷಿಣ್ಯಕ್ಕೆ ಒಳಗಾಗಿದ್ದರಾ? ಪ್ರಶ್ನೆ ಆಳಕ್ಕಿಳಿಯುತ್ತಲೇ ಹೋಗುತ್ತದೆ. ಅಲ್ಲವೇ?

ಈ ಕಾರಣಗಳಿಂದಾಗಿ ದೇಶ ದಾರಿ ತಪ್ಪಿತೆಂದಷ್ಟೇ ಹೇಳಬಹುದು. ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರ ಆಹುತಿಯಾಯ್ತು. ಆನಂತರದ ಪಂಚವಾರ್ಷಿಕ ಯೋಜನೆಗಳ ಭಾರದಲ್ಲಿ ದೇಶ ನಲುಗಿತು. ಹಳಿ ತಪ್ಪಿದ್ದ ಶಿಕ್ಷಣ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಕೃಷಿ ವ್ಯವಸ್ಥೆ, ಯಾವುವೂ ಮತ್ತೆ ಸರಿದಾರಿಗೆ ಬರಲೇ ಇಲ್ಲ. ಒಂದು ತಪ್ಪು ನಿರ್ಣಯ ಭಾರತವನ್ನು ಎರಡನೇ ಬಾರಿಗೆ  ಗುಲಾಮಗಿರಿಗೆ ನೂಕಿತೆಂದರೆ ತಪ್ಪಿಲ್ಲ.

ದಾಕ್ಷಿಣ್ಯಕ್ಕೆ ಬಸಿರಾಗುವ ಈ ಪ್ರಕ್ರಿಯೆ ಸ್ವಾತಂತ್ರ್ಯಾನಂತರವೂ ನಿಲ್ಲಲಿಲ್ಲ. ನಮ್ಮ ಮೇಲೆ ದಾಳಿ ಮಾಡಿ ನಮ್ಮ ಭೂಮಿಯನ್ನೇ ವಶಪಡಿಸಿಕೊಂಡ ಚೀನಾದ ವಿರುದ್ಧ ನಾವು ಮಾತಾಡಲೂ ಇಲ್ಲ. ದೇಸದೊಳಗಿನ ಚೀನಾ ನಿಷ್ಠ ಕಮ್ಯುನಿಸ್ಟರು ಬೇಸರಗೊಂಡರೆ!? ಎಂಬ ನೋವು ನಮಗೆ.

~

ಕಳೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಬಡಿದೆವಲ್ಲ, ಆಗಲೂ ನಮ್ಮದು ದಾಕ್ಷಿಣ್ಯವೇ. ಆರಂಭದಲ್ಲಿ ನಾವು ಕೆಳಗಿದ್ದೆವು, ಉಗ್ರರು ಮೇಲಿದ್ದರು. ಆಗ ಸಂಧಾನದ ಮಾತಿರಲಿಲ್ಲ. ನಮ್ಮ ಸೈನಿಕರು ಸಾಹಸಗೈದು ಮೇಲೇರುತ್ತಿದ್ದಂತೆ ಪಾಕ್ ಸೈನ್ಯ ತತ್ತರಿಸಿಬಿಟ್ಟಿತು. ಎಂದಿನಂತೆ ನಮ್ಮ ಸರ್ಕಾರ ಅಮೆರಿಕದ ಮುಲಾಜಿಗೆ ಒಳಗಾಗಿ ಪಾಕ್ ಸೈನಿಕರಿಗೆ ಮುಕ್ತಮಾರ್ಗ ತೋರಿಸಿತು. ನಮಮ್ ಸೈನಿಕರೇ ಅವರ ರಕ್ಷಣೆಗೆ ನಿಂತು ಅವರನ್ನು ಅವರ ದೇಶಕ್ಕೆ ಕಲೀಸಬೇಕಾಯ್ತು! ಇದಕ್ಕಿಂತ ಹೀನ ಸ್ಥಿತಿ ಯಾವುದೂ ಇಲ್ಲ ಅಂದ್ಕೊಂಡ್ರಾ?

ಖಂಡಿತ ಇದೆ. ಮೌಲಾನಾ ಮಸೂದ್ ಅಜರ್ ಬಿಡುಗಡೆಗೆಂದು ಉಗ್ರರು ವಿಮಾನಾಪಹರಣ ಮಾಡಿದ್ದು ನೆನಪಿಸಿಕೊಳ್ಳಿ. ಅವತ್ತು ವಿಮಾನದಲ್ಲಿದ್ದ ಆ ಪ್ರಯಾಣಿಕರ ಮನೆಯವರು ಗಲಾಟೆ ಮಾಡಿದರೆಂಬ ಕಾರಣಕ್ಕೆ ಈ ದೇಶದ ವಿದೇಶಾಂಗ ಸಚಿವರು ವಿಮಾನದಲ್ಲಿ ಆ ಉಗ್ರಗಾಮಿಯನ್ನು ತಮ್ಮೊಂದಿಗೆ ಕುಳ್ಳರಿಸಿಕೊಂಡು ಬಿಟ್ಟು ಬಂದರಲ್ಲ, ಅದು ಯಾವ ಮಟ್ಟದ ಕೃತ್ಯ, ನೀವೇ ಹೇಳಿ…  ಪ್ರತಿ ಬಾರಿಯೂ ಹೀಗೇ ಆದರೆ?

ಇವೆಲ್ಲಕ್ಕೂ ಕಿರೀಟಪ್ರಾಯವಾದಂಥದ್ದು, ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವಿನ ಕಥೆ. ಬರಿಯ ಓಟಿನ ದಾಕ್ಷಿಣ್ಯಕ್ಕೆ ಬಿದ್ದು ಅವನನ್ನು ನೇಣಿಗೇರಿಸದೆ ಕುಳಿತಿದ್ದಾರಲ್ಲ, ಈ ನಿರ್ಣಯ ಸರಿಯಾ?

ಹುಡುಕುತ್ತ ಹೋದರೆ ಅಸಂಖ್ಯ ಘಟನೆಗಳಿವೆ. ಯಾವುದೇ ನಿರ್ಧಾರದ ಹಿಂದೆ ದೂರಾಲೋಚನೆ ಇರಬೇಕು. ಹಾಗಾಗಬೇಕೆಂದರೆ ಆ ನಿರ್ಧಾರಕ್ಕೆ ದಾಕ್ಷಿಣ್ಯದ ಸೋಂಕು ತಾಕಬಾರದು. ಯಾರದೋ ಮುಲಾಜಿಗೆ, ಮರ್ಜಿಗೆ, ದರ್ದಿಗೆ ಒಳಗಾದರೆ ಅಂದುಕೊಂಡ ಕಾರ್ಯ ಯಶಸ್ವಿಯಾಗಲಾರದು. ಅಲ್ಲವೇ?

7 Responses to ಇತಿಹಾಸದ ಪುಟಗಳಲ್ಲಿ ಮುಲಾಜಿನ ಗೋಜಲು

 1. ಅರುಂಧತಿ

  Wow ಹೀಗೂ ಇರತ್ತೇ ಅಂತಾ . . .ಇಅವತ್ತು ಗೊತ್ತಾಯಿತು . . .ಯಾರ ಮುಲಾಜಿಗೆ ಬೀಳಬಾರದೆಂಬ ಚುಚ್ಚಿನ ಮಾತನ್ನು ಹೀಗೆ ಬೇರೆಬಗೆಯಿಂದ ಹೇಳಿದ್ದಕ್ಕೆ ಧನ್ಯವಾದಗಳು . . . ಯಾಕೆ ಹೀಗೆ ಆಗತ್ತೋ ಗೋತ್ತಿಲ್ಲಾ . .ಆ ವೇಳೆಯಲ್ಲಿ ಅವರಿಗೆನಾದರು ನಾನು ಅವರ ಮಾತನ್ನು (ಮುಲಾಜೀಗೆ ) ಬೀಳದಿದ್ದರೆ ನಮಗೆ ಊಳಿವೇ ಇಲ್ಲ ಎಂಬ ಭಾವ ಮನದಲ್ಲಿ ಮೂಡೀ ಹೀಗೆ ಮಾಡುತ್ತಾರೋ ಏನೋ . . .ಗೊತ್ತಿಲ್ಲಾ . . . , ನೀವು ಅಂದ ಹಾಗೆ ಗಾಂಧಿಜಿ ನೆಹೆರೂ ಅವರ ಮುಲಾಜಿಗೆ ಬಿದ್ದ ಸಂಗತಿಗಳನ್ನು ನಿಮ್ಮ “ನೆಹೆರೂ ಪರದೆ ಸರಿಯಿತು ” ದಲ್ಲಿ ನಾವು ಕಾಣಬಹುದು . . ಆಗ ಪಟೇಲರು ಯಾಕೆ ಸುಮ್ಮನಿದ್ದರು ಅದು ತಿಳಿಯಲಾಗಲಿಲ್ಲ . . .ಅಂಥಹ ಯಕ್ಕಶ್ಚಿತ್ ನನ್ನು ಕೇಳಗಿಳಿಸಿ ತಾವೇ ಮುಂದೆ ಬಂದಿದ್ದರೆ ನಮ್ಮ ನಾಡಿಗೆ ಇವತು ಈ ತರಹದ ನೋವು ಪಡಲಾಗುತ್ತಿರಲಿಲ್ಲ ಅಂತಾ ನನಗೆ ಅನಿಸುತ್ತದೆ . . . ಇದು ನನ್ನ ಯೋಚನೆಗೆ ಸಿಮಿತವಾದ ಮಾತು ಅಷ್ಟೆ . . . , ಇತಿಹಾಸದ ಪದರಿಗಳಲ್ಲಿ ಈ ತರಹದ ಉಧಾಹರಣೆಗಳಿ ಬೇಕಾದಷ್ಟೀವೇ ಅಂತಾ ನೀವೆ ಹೇಳಿದ್ದಿರಿ . . .ಒಂದಂತು ತಿಳಿಯಿತಿ ಬೇರೆಯವರ ಮುಲಾಜಿಗೆ ಬಿಳದಂತೆ – ಬಿದ್ದರು ಹತ್ತು ಬಾರಿ ಯೋಚನೆ ಮಾಡಿ . . ಮುಂದಿನ ಕಾರ್ಯಕ್ಕೆ ಹೆಜ್ಜೆ ಇಡುವುಡಬೇಕೆಂಬ ಮಾತನ್ನು ಈ ತರಹ ಹೇಳಿದ್ದಕ್ಕೆ ಧನ್ಯವಾದಗಳು . ಅಣ್ಣಾ . . .

  ಹೀಗೆ ನಿಮ್ಮ ಲೇಖನಗಳನ್ನು ಬರೆಯಿತ್ತಿರಿ . . .

  ನಮಸ್ಕಾರ

 2. chetana

  ಮುಲಾಜಿಗೆ ಒಳಗಾಗದೇ ನೇರವಾಗಿ ನಡೆಯೋದು ಎಲ್ಲರಿಗೂ ಸಾಧ್ಯವಾಗೋಲ್ಲ. ಸ್ವಾಮಿ ವಿವೇಕಾನಂದರಿಗೆ ಆ ತಾಕತ್ತಿತ್ತು. ಮೈಸೂರಿನ ಮಹಾರಾಜರಿಗೆ ಅವರೊಮ್ಮೆ ಹೇಳಿದ್ದರು, ‘ಜೀವಕ್ಕೆ ಹೆದರಿ ಸುಳ್ಳು ಹೇಳುವ ಪರಂಪರೆ ನನ್ನದಲ್ಲ. ಸಾಯುವ ಕ್ಷಣದಲ್ಲೂ ಸತ್ಯವನ್ನೇ ನುಡಿಯುವವ ನಾನು’
  ಅದು ಬಲು ಕಷ್ಟ!!

  ವಂದೇ,
  ಚೇತನಾ

 3. ramesh

  ಆರ್ ಎಸ್ ಎಸ್ ಹುಟ್ಟಿದ್ದರಿಂದ ಆದ ಅನಾಹುತದ ಬಗ್ಗೆ ಬರೆದೇ ಇಲ್ಲ. ಹಾಗೇ ತಮ್ಮಂಥವರ ಅರೆ ಬರೆ ಮಾಹಿತಿ ಇರುವ ಕೋಮುವಾದಿ ಬರೆಹಗಾರರನ್ನು ಬರೆಯಲು ಬಿಟ್ಟದ್ದರಿಂದ ಆಗಿರುವ ಅನಾಹುತಗಳನ್ನೂ ಪಟ್ಟಿ ಮಾಡದ್ದರೆ ಒಳ್ಳೆಯದಿತ್ತು.

 4. Chakravarty

  ರಮೇಶ್ ಅವರಿಗೆ ನಮಸ್ತೇ.
  ತಾವು ದಯವಿಟ್ಟು ಕೋಮುವಾದದ ಅರ್ಥ ವಿಸ್ತಾರವನ್ನು, ಜಾತ್ಯತೀತತೆಯ ವಿವರವನ್ನೂ ನೀಡಬೇಕೆನ್ನೋದು ನನ್ನ ಕೋರಿಕೆ.
  ಹಾಗೇ, ಆರ್ ಎಸ್ ಎಸ್ ನಿಂದಾದ ಅನಾಹುತಗಳ ಬಗೆಗೆ ನನಗೆ ತಿಳಿದಿಲ್ಲವಾದ್ದರಿಂದ ತವು ಬರೆದರೆ ಒಳ್ಳೆಯದು. ನನ್ನ ಬ್ಲಾಗ್ ನಲ್ಲಿ ಜಾಗ ಕೊಡುವೆ. ಚರ್ಚೆ ಮಾಡುವಾ.
  ಮತ್ತು, ನನ್ನಂತಹ ಲೇಖಕನನ್ನು ಬರೆಯಲು ಬಿಟ್ಟಿರುವುದರಿಂದ ಏನಾಗಿದೆ? ಇದನ್ನೂ ನೀವೇ ಹೇಳಬೇಕು. ಜೊತೆಗೆ-ಯಾವ ಯಾವ ಸಂಗತಿಗಳಲ್ಲಿ ನನ್ನದು ಅರೆಬರೆ ಜ್ಞಾನ ಅನ್ನೋದನ್ನು ತಿಳಿಸಲು ಮರೆಯಬೇಡಿ.

  ಸುಖಾಸುಮ್ಮನೆ ಕಮೆಂಟಿಸೋದು ಸುಲಭ. ತಪ್ಪುಗಳಿದ್ದರೆ, ನಿಮ್ಮ ತಕರಾರಿದ್ದರೆ ಅದು ಎಲ್ಲೆಲ್ಲಿ ಅಂತ ಎತ್ತಿ ತೋರಿಸಿ ಚರ್ಚೆಗೆ ಬನ್ನಿ. ಅದು ಬಿಟ್ಟು ಈ ರೀತಿ ಬಾಲಿಷವಾಗಿ ಪ್ರತಿಕ್ರಿಯಿಸುವುದು ನಿಮ್ಮ ಉರಿಯನ್ನು ತೋರಿಸುತ್ತೆ ಅನ್ನೋದು ನೆನಪಿರಲಿ.

  ವಂದೇ,
  ಚಕ್ರವರ್ತಿ

 5. ರಾಕೇಶ್ ಶೆಟ್ಟಿ

  ರಮೇಶ್
  ಚಕ್ರವರ್ತಿಯವರು ಹೇಳಿದ ಹಾಗೆ , ನಿಮಗೆ ಈ ಕೋಮುವಾದದ ಬಗ್ಗೆ ಏನು ಗೊತ್ತಿದೆ , ಹಾಗೆ ಈ ದೇಶದಲ್ಲಿ ತಾವೇ seculars ಅಂತ ಹೇಳಿಕೊಳ್ಳುವವರ ಬಗ್ಗೆಯಾದರು ಗೊತ್ತಿದೆಯಾ?
  RSS ಹುಟ್ಟಿದಾಗ ಭೂಕಂಪವೆನಾದ್ರು ಆಗಿತ್ತ ಸ್ವಲ್ಪ ಹೇಳ್ತಿರಾ??
  ನಿಮ್ಮಂತವರು ಇರೋದರಿಂದಲೇ ನಮ್ಮ ದೇಶ ಈ ಸ್ಥಿತಿ ತಲುಪಿದೆ. ನಿಮಗೆ ಅಷ್ಟೊಂದು ನೈತಿಕತೆ ಇದ್ದರೆ ಚಕ್ರವರ್ತಿಯವರ ಮಾತಿಗೆ ಉತ್ತರ ನೀಡಿ.
  ಚರ್ಚೆ ಆರೋಗ್ಯ ಪೂರ್ಣವಾಗಿರಲಿ.

 6. Hemanth

  Ramesh:-
  “ninu Nijavada Hinduvadare aa reethi matanaduttiralilla.. swalp itihasada Putagalannu teredu nodu..Gottagutte..

 7. dharma raj

  nalmeya guruvige vandane..
  ramesh avru bahusha congress na history odidare andkotine. deshada swatantryake RSS na kaanike gotidre hige matadta irlila
  VANDE MATARAM

Leave a Reply