ವಿಭಾಗಗಳು

ಸುದ್ದಿಪತ್ರ


 

ಭಾನುವಾರದ ಸುಂದರ ಸಂಜೆ…

ನಿಜಕ್ಕೂ ಫೆಬ್ರವರಿ ಹದಿನೇಳರ ಭಾನುವಾರದ ಸಂಜೆ ನನಗೆ ಅವಿಸ್ಮರಣೀಯವಾದ ಭಾವ ಜಾಗೃತಿಯ ಸಾರ್ಥಕ ಸಮಯವಾಗಿತ್ತು. ಅತ್ಯಂತ ಉಲ್ಲಾಸದಾಯಕವಾಗಿತ್ತು.
ಹೀಗೆ ನನ್ನನ್ನು ಆಳವಾಗಿ ತಟ್ಟಿದ ಕಾರ್ಯಕ್ರಮದ ಹೆಸರು- “ವಂದೇ ಮಾತರಂ ಗೀತ ಸಂಧ್ಯಾ”
ಮೈತ್ರಿ ಸಂಸ್ಕೃತಿ ಪ್ರತಿಷ್ಟಾನದ ಸಂಸ್ಕೃತೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ‘ಭಾರತ ವೈಭವ’ ಶೀರ್ಷಿಕೆಯಡಿಯಲ್ಲಿ ನಿರೂಪಣೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು.

ವಂದೇ ಮಾತರಂ

‘ವಂದೇ ಮಾತರಂ…’ ಈ ಎರಡು ಪದಗಳು ಸಾಕು ಮಿಂಚಿನ ಸಂಚಾರಕ್ಕೆ. ಯಾವ ಎರಡು ಪದಗಳನ್ನು ಉಚ್ಚ ಕಂಠದಲ್ಲಿ ಮೊಳಗಿಸುತ್ತ ಸಾವಿರಾರು ರಾಷ್ಟ್ರ ಪ್ರೇಮಿಗಳು ಹುತಾತ್ಮರಾದರೋ, ಲಕ್ಶಾಂತರ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಪಣ ತೊಟ್ಟೂ ನಿಂತರೋ ಅಂತಹ ಪ್ರೇರ್‍ಅಕ ರಣ ಮಂತ್ರ ಅದು!

ಬಹುಶಃ ನಿಮಗೆ ‘ವಂದೇ ಮಾತರಂ’ ಹುಟ್ಟಿದ ಬಗೆ ಗೊತ್ತಿರಬಹುದು.
ಖ್ಯಾತ ಕವಿ ಶ್ರೀ ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ತಾಯಿ ಭಾರತಿಯೊಡಲಿನ ನಿಸರ್ಗ ಸೌಂದರ್ಯಕ್ಕೆ ಮಾರುಹೋದರು. ಜೊತೆಜೊತೆಗೆ ಆಕೆಗೊದಗಿದ ದುರ್ಗತಿಯನ್ನೂ, ಅದಕ್ಕೆ ಪ್ರತಿಯಾಗಿ ಧೀರಭಾರತೀಯರ ಹೋರಾಟವನ್ನೂನೆನೆಯುತ್ತ ಸಾಗಿದರು. ಅದರ ಪರಿಣಾಮ, ರಾತ್ರಿಯ ನಿದ್ರೆಯಲ್ಲೂ ಅವೆಅವೇ ಚಿತ್ರಣಗಳು. ಕನವರಿಕೆಯಲ್ಲಿ ಮೂಡಿಬಂದಿದ್ದು ‘ವಂದೇ ಮಾತರಂ’ ದಿವ್ಯಗೀತೆ!
ಬಂಕಿಮ ಚಂದ್ರರ ಸಂಬಂಧಿ ತರುಣನೊಬ್ಬ ಅವರು ಕನವರಿಸಿದ ಸಾಲುಗಳನ್ನು ಬರೆದುಕೊಂಡ. ಬಂಕಿಮ ಚಂದ್ರರು೮ ಎಚ್ಚರವಾದ ಬಳಿಕ ಅವರಿಗೆ ಅವನ್ನು ತೋರಿಸಿದ. ಸಂಭ್ರಾಂತರಾದ ಬಂಕಿಮಚಂದ್ರರು ಅದಕ್ಕೆ ಅಂತಿಮ ಸ್ಪರ್ಷ ನೀಡಿದರು. ಮುಂದೆ ಅವರ ಜನಪ್ರಿಯ ಕೃತಿ ‘ಆನಂದಮಠ’ದಲ್ಲಿ ಈ ಗೀತೆ ರಣ ಮಂತ್ರವಾಗಿ ಹರಿಯಿತು.

೧೯೦೫ರಲ್ಲಿ ಆಂಗ್ಲರು ಕೇಕು ಕತ್ತರಿಸಿದ ಹಾಗೆ ಬಂಗಾಳವಿಭಜನೆ ಮಾಡಹೊರಟಿದ್ದರಲ್ಲ, ಆಗ ಅದರ ವಿರುದ್ಧ ಹಿಂದೂ ಮುಸ್ಲಿಮರೆನ್ನದೆ ಎಲ್ಲರನ್ನೂ ಒಗ್ಗೂಡಿಸಿ ಹೋರಾಟಕ್ಕೆ ಹಚ್ಚಿದ್ದು ಈ ‘ವಂದೇ ಮಾತರಂ’ ಘೋಷ. ಬಂಗಾಳ ವಿಭಜನೆಯ ಮೂಲಕ ಯಾರ ನಡುವೆ ಬಿರುಕು ಮೂಡಿಸಬೇಕೆಂದು ಅವರು ಅಲೋಚಿಸಿದ್ದರೋ ಅದೇ ಹಿಂದೂ ಮುಸ್ಲಿಮರು ಜಾತಿ ಭೇದ ಮರೆತು ವಂದೇ ಮಾತರಂ ಘೋಷಣೇಯಡಿಯಲ್ಲಿ ಒಟ್ಟಾದರು, ಆಂಗ್ಲರ ಕುತಂತ್ರಕ್ಕೆ ಮಾರುತ್ತರ ನೀಡಿದರು!

ಬಿಡಿ. ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಸ್ಫೂರ್ತಿ ವಾಕ್ಯವಾಗಿ ಹರಿದುಬಂದು ರಾಷ್ಟ್ರ ಗೀತೆಯಾಗಬೇಕಿದ್ದ ‘ವಂದೇ ಮಾತರಂ’ಆ ಸ್ಥಾನಕ್ಕೆ ಆಯ್ಕೆಯಾಗದೆಹೋಗಿದ್ದು, “ಅದು ಪಾಶ್ಚಾತ್ಯರ ಬ್ಯಾಂಡ್ ಸೆಟ್ಟಿಗೆ ಹೊಂದೋಲ್ಲ” ಅನ್ನುವ ಕಾರಣಕ್ಕೆ! ಈ ಬಾಲಿಶ, ಅಸಹ್ಯಕರ ಕಾರಣ ನೀಡಿದವರ್ಯಾರು ಗೊತ್ತಾ? ನಮ್ಮ ದೇಶದ ಮೊದಲ ಪ್ರಧಾನಿ ಜವಹರ ಲಾಲ ನೆಹರೂ!!

ಕ್ಷಮಿಸಿ. ಹೇಳಹೊರಟಿದ್ದು ವಂದೇ ಮಾತರಂ ‘ಕಾರ್ಯಕ್ರಮ’ದ ಬಗ್ಗೆ.ಏನು ಮಾಡಲಿ?  ಆ ದಿವ್ಯ ಮಂತ್ರ ಸ್ಮರಣೆಗೆ ಬಂದಾಗಲೆಲ್ಲ ಈ ವಿವರಗಳು ಹಿಂಬಾಲಿಸಿ ಬಂದುಬಿಡುತ್ತವೆ.

ಗೀತ ಸಂಧ್ಯಾ

ಶಂಕರ ಶಾನುಭಾಗ್ ಉತ್ತಮ ಸಂಸ್ಕಾರ ಹೊಂದಿರುವ ಸಹೃದಯಿ ಸಂಗೀತ ಕಲಾವಿದರು. ಅವರ ಕಂಠವನ್ನ ‘ಕಂಚಿನ ಕಂಠ’ ಎಂದರೆ ಕ್ಲೀಷೆಯಲ್ಲ ಅನ್ನೋದು, ಅವರ ವಿಶಿಷ್ಟ ಶೈಲಿಯ ವಂದೇ ಮಾತರಂ ಗೀತೆಯ ಗಾಯನದಲ್ಲೇ ಗೊತ್ತಾಗಿಹೋಗುತ್ತದೆ.
ಭಾವಾವಿಶ್ಟರಾಗಿ ಶಾನುಭಾಗ್ ‘ಹೂ ಹರೆಯದ ಹೊಂಗನಸುಗಳೇ… ಏಳಿ ಏಳೀ ಏಳಿ ಎಚ್ಚರಾಗಿ ಕನಸುಕಂಗಳೇ’ ಹಾಡುವಾಗ ಶ್ರೋತೃಗಳ ಮುಖದಲ್ಲಿನ ಹುಮ್ಮಸ್ಸು ನೋದಬೇಕು ನೀವು!
ಶಂಕರರ ತಂಡದಲ್ಲಿನ ಪ್ರತಿಯೊಬ್ಬ ಗಾಯಕ- ಗಾಯಕಿಯೂ ಹೀಗೇ. ಮನದುಂಬಿ, ಅಂತರಾಳದಿಂದ ಹಾಡುತ್ತರೆ. ರಾಷ್ಟ್ರಭಕ್ತಿಯ ಗೀತೆಗಳನ್ನು ಹಾಡುವಾಗ ಅಕ್ಷರಶಃ ಕಣ್ಣೀರುಮಿಡಿಯುತ್ತಾರೆ.

ಭಾನುವಾರದ ಸಂಜೆಯ ಈ ಸುಂದರ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಶಣೆಯಾಗಿದ್ದವರು ದಿವಂಗತ ಕರ್ನಲ್ ವಸಂತರ ತಾಯಿ ಮತ್ತು ಪತ್ನಿ. ಜೊತೆಗೆ, ವಯೋವೃದ್ಧರಾದ ನಿವೃತ್ತ ಕರ್ನಲ್ ಶ್ರೀ ಕಾತ್ಕರ್ ಅವರು.

“ನೀವೆಲ್ಲ ನಿಮ್ಮ ನಿಮ್ಮ ಕುಟುಂಬಕ್ಕಾಗಿ ದುಡಿಯುತ್ತೀರಿ. ಅಲ್ಲಿ ನಿಮ್ಮದೇ ಕುಟುಂಬದ ರಕ್ಷಣೆಗಾಗಿ ಯೋಧರು ಜೀವದ ಹಂಗು ತೊರೆದು ನಿಂತಿದ್ದಾರೆ. ಸದಾ ಇದನ್ನು ನೆನಪಿಡಿ. ದಯವಿಟ್ಟು ಯೋಧ ಕುಟುಂಬಗಳೊಡನೆ ಸಹಕರಿಸಿ ಮಾನವೀಯತೆ ತೋರಿ” ಎಂದು ವಿನಂತಿಸುತ್ತ ನಮಗೆ ನಮ್ಮ ಕರ್ತವ್ಯದ ಪಾಠ ಹೇಳಿದವರು ದಿ. ಕರ್ನಲ್ ವಸಂತರ ಪತ್ನಿ.

ಇನ್ನು, ಕರ್ನಲ್ ಕಾಟ್ಕರ್…
ಅವರಂತೂ ಕಾರ್ಯಕ್ರಮದ ಭಾವುಕ ವಾತಾವರಣದಲ್ಲಿ ಸಂಪೂರ್ಣ ಅಮಿಮರೆತಿದ್ದರು.
ಎಂಭತ್ತು ಮೀರಿದ ಈ ವಯಸ್ಸಿನಲ್ಲೂ ಅವರ ಚೀನಾ ಯುದ್ಧದ ಪ್ರತಿ ಕ್ಷಣಗಳು ತಾಜಾ ಆಗಿವೆ. ಅವುಗಳಾಲ್ಲಿ ಕೆಲವನ್ನು ಅವರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಂಚಿಕೊಂಡರು.

ಕರ್ನಲ್ ಹೇಳಿದ ಒಂದು ಘಟನೆ…

“ಲಡಾಖ್ ನಲ್ಲಿ ಶೂನ್ಯಕ್ಕಿಂತ ಅತ್ಯಂತ ಕೆಳಗಿನ ಉಷ್ಣಾಂಶದಲ್ಲಿ ಮಂಜುಗಟ್ಟಿದ ವಾತಾವರಣಾಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆಯೂ  ನಾವು ಚೀನೀಯರ ವಿರುದ್ಧ ಸೆಟೆದು ನಿಂತಿದ್ದೆವು. ನಮಮ್ ಪ್ಲಟೂನ್ ನಲ್ಲಿ ಪ್ರಮೋದ್ ಎನ್ನುವ ತೀರ ಚಿಕ್ಕ ವಯಸ್ಸಿನ ತರುಣ ಸೈನಿಕನಿದ್ದ. ಸದಾಚಟುವಟಿಕೆಯ ಆತ, ವಿಧವೆ ತಾಯಿಯ ಏಕಮಾತ್ರ ಮಗನಾಗಿದ್ದ.
ಅತ್ತ ನಾವು ಮರಗಟ್ಟಿಸುವ ಚಳಿಯಲ್ಲಿ ಹಗಲಿರುಳು ಬಂದೂಕು ಹಿಡಿದು ನಿಂತಿದ್ದಾಗ ಪ್ರಮೋದನ ತಾಯಿಯಿಂದ ಒಂದು ಪತ್ರ ಬಂದಿತು. ಪಾಪ, ಅವರು ಅದನ್ನು ಬರೆದು ಅದೆಷ್ಟು ದಿನವಗಿತ್ತೋ, ಹಿಮದ ಹಾದಿಯಲ್ಲಿ ನಡುಗುತ್ತ, ಕೊನೆಗೂ ಅದು ಅವನ ಕೈ ತಲುಪಿತ್ತು. ಆ ಹೊತ್ತಿಗಾಗಲೇ ಚೀನೀಯರು ನಮಗೆ ತೀರ ಹತ್ತಿರ ಬಂದುಬಿಟ್ಟಿದ್ದರು.
ಅಂತಹ ಉತ್ಕಟ ಕ್ಷಣದಲ್ಲಿ ಆ ತಾಯಿ ಬರೆದ ಸಾಲುಗಳು ಎಂಥವಿತ್ತು ಗೊತ್ತೇ?
“ಮಗೂ, ಚೀನೀಯರು ದೇಶದ ಗಡಿ ದಾಟಲಿದ್ದಾರೆಂದು ಸುದ್ದಿ ಇದೆ. ನೀನದಕ್ಕೆ ಬಿಡಕೂಡದು. ಹಾಗೇನಾದರೂ ಅವರು ದಾಟುವುದೇ ಆದರೆ, ಪ್ರಮೋದನ ಹೆಣದ ಮೇಲೆ ದಾಟಿಕೊಂಡು ಒಳಬರಬೇಕು!”
ನಮ್ಮ ಕೆಚ್ಚು ಹೆಚ್ಚಲಿಕ್ಕೆ ಇನ್ನೇನು ಬೇಕಿತ್ತು? ಕೂಡಲೆ ನಾವೆಲ್ಲ ಸೇರಿ ಆ ತಾಯಿಗೆ ಪತ್ರ ಬರೆದೆವು. “ಅಮ್ಮಾ, ಹಾಗೇನಾದರೂ ಚೀನೀಯರು ದೇಶದೊಳಕ್ಕೆ ನುಗ್ಗುವರೆನ್ನುವುದೇ ಆದರೆ, ಒಬ್ಬನಲ್ಲ, ಆರು ಪ್ರಮೋದರ ಹೆಣ ದಾಟಿ ಬರಬೇಕು. ಹೆದರಬೇಡ, ನಾವು ಜೀವದ ಹಂಗು ತೊರೆದು ಕಾದುತ್ತೇವೆ!”

~

ಹ್ಹ್! ನಮ್ಮ ನಮಮ್ ಕಲ್ಪನೆಯ ಸುಖದ ದ್ವೀಪಗಳಲ್ಲಿ ಬದುಕುತ್ತಿರುವ ನಮಗೆ, ದೇಶಕ್ಕಾಗಿ ಸಾಯೋದು ಅಂದರೇನು ಗೊತ್ತೇ?
ಬೇಡ. ದೇಶಕ್ಕಾಗಿ ಬದುಕಲಿಕ್ಕಾದರೂ….?

13 Responses to ಭಾನುವಾರದ ಸುಂದರ ಸಂಜೆ…

 1. navada

  ಕರ್ನಲ್ ರ ಅನುಭವ ಕಂಬನಿ ಮಿಡಿಸಿತು. ಗಡಿಯಲ್ಲಿ ಕಾಯುತ್ತಿರುವ ಇಂಥ ಪ್ರಮೋದರಿಗೆ ಸಹಸ್ರ ಪ್ರಣಾಮಗಳು. ವಂದೇಮಾತರಂ ಕಾರ್ಯಕ್ರಮದ ಬಗ್ಗೆ ಕೇಳಿದ್ದೆ, ಅನುಭವಿಸಬೇಕು.
  ನಾವಡ

 2. ಸುಧೀಂದ್ರ ಬುಧ್ಯ

  ಚಕ್ರವರ್ತಿ ಯವರಿಗೆ ನಮಸ್ಕಾರ,

  ಕಾರ್ಯಕ್ರಮದ ವಿವರವನ್ನು ಮನಮುಟ್ಟುವ ಹಾಗೆ ಬರೆದು ತಿಳಿಸಿದ್ದೀರಿ. ಸದಾ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂರುವ( ನನ್ನನ್ನೂ ಸೇರಿಸಿ) ಜನಕ್ಕೆ ಸೈನಿಕರ ಕಷ್ಟ, ಅವರ ತ್ಯಾಗ ಬಲಿದಾನಗಳು ಅರ್ಥವಾಗದು.

  ನನ್ನದೊಂದು ಕೋರಿಕೆ ಇಂಥಹ ಕಾರ್ಯಕ್ರಮಗಳು ನಡೆದಾಗ ಮುಂಚೆಯೇ ಈ ಬಗ್ಗೆ ಬ್ಲಾಗ ನಲ್ಲಿ ವಿವರ ನೀಡಿದರೆ ಎಲ್ಲರೂ ಪಾಲ್ಗೊಳ್ಳಲು ಅನುಕೂಲವಾಗುತ್ತದೆ.

  ನಿಮ್ಮ ವಿಚಾರಗಳು ನನಗೆ ಇಷ್ಟವಾಗುತ್ತವೆ.

  — ಮದ್ದೂರು ಸುಧೀಂದ್ರ ಬುಧ್ಯ

 3. Chakravarty

  ನಾವಡ ಮತ್ತು ಸುಧೀಂದ್ರರಿಗೆ ನಮಸ್ತೇ.

  ನಿಮ್ಮ ಸ್ಪಂದನ ಖುಶಿ ಕೊಟ್ಟಿತು. ಖಂಡಿತ ನನ್ನ ಬ್ಲಾಗ್ ನಲ್ಲಿ ಇಂತಹ ಕಾರ್ಯಕ್ರಮಗಳ ವಿವರ ಪ್ರಕಟಿಸುವೆ. ಈ ಬಗೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅನುಭವ ನಿಮ್ಮದಾಗಲಿ. ಖಂಡಿತ ಬಿಡುವು ಮಾಡಿಕೊಂಡು ಭಾಗವಹಿಸಿ.
  ಧನ್ಯವಾದ.

  ವಂದೇ,
  ಚಕ್ರವರ್ತಿ.

 4. ಸುಧೀಂದ್ರ ಬುಧ್ಯ

  ಚಕ್ರವರ್ತಿಯವರೆ ನಮಸ್ಕಾರ,

  ಇದು ನನ್ನ ಬ್ಲಾಗ್ http://sudheendr.wordpress.com

  ನಾನೂ ಕೂಡ ಪತ್ರಿಕೆಗಳಿಗೆ ಆಗಾಗ ಬರೆಯುತ್ತಿರುತ್ತೇನೆ. ನಿಮ್ಮ ವಿಚಾರಗಳು ನನಗೆ ತುಂಬಾ ಇಷ್ಟ.
  ಒಮ್ಮೆ ಭೇಟಿಮಾಡುವ ಹಂಬಲ ನನ್ನದು.
  ನಿಮ್ಮ ವಿಳಾಸ ಅಥವಾ ದೂರವಾಣಿ ಸಂಖ್ಯೆ ಕೊಡಿ.

  ರಾಮ್ ರಾಮ್
  ಮದ್ದೂರು ಸುಧೀಂದ್ರ ಬುದ್ಯ

 5. Chakravarty

  ನಮಸ್ತೇ ಸುಧೀಂದ್ರ,
  ನನ್ನ ದೂರವಾಣಿ ಸಂಖ್ಯೆ: 9448423963.
  ಖಂಡಿತ ಅವಕಾಶವದಾಗ ಭೇಟಿಯಾಗೋಣ.
  ವಂದೇ,
  ಚಕ್ರವರ್ತಿ

 6. ಸಂಜು

  ಜಾಗೃತ ಭಾರತ . . . . ಸಮೃಧ್ದ ಭಾರತ

  ಇದು ಅವತ್ತಿನ ಸಭಾಂಗಣದ ಚಿತ್ರದಲ್ಲಿದ್ದ ಸಾಲುಗಳು . . . .ಸಹಸ್ತ್ರ ಯೋಧರಿಗೆ ಅರ್ಪಣೆ . . . ಅಂತಾ ಹೇಳಿ ಮೈತ್ರಿ ಸಂಸ್ಕೃತ ಸಂಸ್ಥೆಯವರು ಆಯೋಜಿಸಿದ ಕಾಯ್ರಕ್ರಮ “ವಂದೇ ಮಾತರಂ” . .

  ಆವತ್ತು ನಾನಗೆ ಹೀಗೆ ಎಲ್ಲಿಂದಲೊ ಸಿಕ್ಕ ವಿಳಾಸದಿಂದ ಅಲ್ಲಿಗೆ ಹೋಗಿ ನೋಡಿದಾಗ ಮಲ್ಲೆಶ್ವರಂದಲ್ಲಿ ಕಂಡಿದ್ದು ಸುಂದರ ವಾತಾವರಣದ ವಿದ್ಯಾಮಂದಿರ ಅಲ್ಲಿ ನೇರದಿದ್ದ ಹಲವು ಜನರ ಮುಖದಲ್ಲಿದ್ದ ಆತುರತೆ …ಭಾವುಹತೆ ನೋಡಿ ಸಂತೋಷ , ಕುತುಹಲ ಕಾಡಿತು . . ಒಳಗಡೆ ಬಂದು ನೋಡಿದಾಗ ಹಲವು ಪುಷ್ಪಗಳಿಂದ ಅಲಂಕಾರಗೊಂಡಿದ್ದ ಭಾರತ ಮಾತೆಯ ಚಿತ್ರಪಟ ಕಂಡು ದೇಶಭಕ್ತಿಯ ಭಾವ ಮಿಂಚಿತು . . . ಅಲ್ಲಿಂದ ಒಂದೆರಡು ಹೆಜ್ಜೆ ಬಂದರೆ ಕಂಡಾದ್ದು ಸಭಾಂಗಣ . . . ತಾಯಿ ಭಾರತಿಯ ಸುಂದರ ಚಿತ್ರ . . ಜೋತೆಗೆ ಅಲ್ಲಲ್ಲಿ ಒಡಾಡುತ್ತಿದ್ದ ವಿದ್ಯರ್ಥಿಗಳು . . ಒಂದಿಷ್ಟು ಕುರ್ಚಿಗಳು . . ಜೋತೆಗೆ ಅಭ್ಯಾಸದಲ್ಲಿ ತೊಡಗಿದ್ದ ಶಂಕರ ಶಾನಭೋಗರು . . .ಹಿಗೆಲ್ಲಾ ನೋಡಿದೋಡನೆ . .ಏನೋ ಒಂದು ರೀತಿಯ ಸಂತೋಷಕರವಾತಾವರಣದ ಸವಿ ಸವಿಯುವ ಹೊತ್ತು ಬರ್ತಾ ಇದೆ ಅನಿಸಿತು . . ಹೀಗೆ ಸ್ವಲ್ಪ ಸಮಯದ ನಂತರ ಕಣ್ಣಿಗೆ ಬಿದ್ದದ್ದು (ಅವರನ್ನೆ ಹುಡುಕುತ್ತಿದ್ದ)ಚಕ್ರವರ್ತಿ ಸೂಲಿಬೆಲೆಯವರು ….. ವ್ಹಾ ! ಅದೆಂಥಾ ಮನುಷ್ಯಾ ರೀ . . ಯಾವಾಗಲು ಮೋಗದಲ್ಲಿ ನಗೆಯನ್ನಾ ಸೂಸುತ್ತಾ …ಬಂದವರ ಬಗ್ಗೆ ಒಳ್ಳೆಯ ಸುಸಂಸ್ಕೃತ ರೀತಿಯಲ್ಲಿ ಮಾತಾಡುತ್ತಿದ್ದರು ..

  ಅಷ್ಟರಲ್ಲಿ ಕಾರ್ಯಕ್ರಮ ಶುರುವಾಯಿತು . . ಮೋದಲು ಮೈಕ್ ಹಿಡಿದದ್ದು ಗಣಪತಿ ಹೆಗಡೆಯವರು ಎಂಥ ಭಾವ ಇದೆರೀ ಅವರ ಮಾತಿನಲ್ಲಿ . . .ಒಳ್ಳೆಯ ಸುಸಂಸ್ಕೃತಿಯ ಮಾತಿಗಲು . .ಎಲ್ಲಿಯೂ ಪಾಶ್ಚಾತಿಕರಣದ ಬೆರಿಕೆ ಇಲ್ಲ ಹೀಗೆ ಶೂರುವಾಯಿತು ಕಾರ್ಯ್ಯಕ್ರಮ . .ಆಮೇಲೆ ಮಾತಾಡಿದ್ದು . . . ಕೃ.ನರಹರಿಜೀಯವರು . .ಅವರು ನಮ್ಮ ದೇಶದ ಬಗ್ಗೆ ಶುರು ಮಾಡುತ್ತಾ ಸಾವರಕರ್ ಅವರ ಬದುಕಿನಲಿ ಹಾಯುತ್ತಾ ವಾಸ್ಥವಕ್ಕೆ ಬಂದರು . . .ನಂತರ ಬಂದದ್ದು ಚಕ್ರವತ್ರಿ ಸೂಲಿಬೆಲೆಯವರು ಯಾವಾಗ ಮೈಕ್ ಕೈಯಲ್ಲಿ ಹಿಡಿದುಕೊಂಡರೋ ಅದೆಲ್ಲಿ ಅಡಗಿತ್ತೋ ದೇಶಭಕ್ತಿ . .ಮಾತನಾಡಲು ಶುರುಮಾಡಿದರು . . .ಎಷ್ಟೊ ಹೊತ್ತು ಮಾತಾಡುತ್ತಿದ್ದ ಜನ ಒಂದು ಕ್ಶಣ ಸ್ಥಬ್ಧವಾದರು . . ಅವರ ಆತು ಕೇಳುತ್ತಾ ಕೇಳುತ್ತಾ ಶುರುವಾಯಿತು ಸಮೂಹಗಾನ “ವಂದೇ ಮಾತರಂ” . . ಅಲ್ಲರು ಎದ್ದು ನಿಂತು ವಂದೇ ಮಾತರಂಕ್ಕೆ ಕೊಟ್ಟ ಗೌರವ ವಿಷೇಶವಾಗಿತ್ತು . . .

  ಮತ್ತೆ ಚಕ್ರವರ್ತಿಯವರ ಮಾತು ಒಂದೊಂದು ಮಾತು ರೋಮಾಂಚನಗೊಳಿಸುತ್ತಿದ್ದವು . …ನಂತರ
  “ನಾಡದೇವಿಯ . . . .”
  “ಆಕಾಶಕ್ಕೆದ್ದು ನಿಂತ . . . ”
  “ಭಾರತಭೂಶಿರ ಸುಂದರ ಮಂದಿರ . . ”
  “ವಿಲಾಸತುಸು ರಸಮಗ್ರೇ. . .”
  “ಸಾವಿರಗಳ ಕಮಲತಿ . . . .”
  “ಏಲೆಗಲು ನೂರಾರು . . ”
  “ಭಾರತ ಮಾತೆ . . ”
  “ಯೆ ಮೇರೆ ವತನ್ ಕೇ ಲೋಗೊ . . ”
  “ಈ ಮಣ್ಣು ನನ್ನದು . . .”
  “ತಡವೇಕೆ ತಾಯಿ ಕರೆಗೆ . . .”
  “ಐದು ಬೇರಳು ಕೂಡಿ . . .”
  “ತಾಯೆ ಭೂಮಿ ತಾಯೆ . . .”

  ಹೀಗೆ ಒಂದಾದ ಮೇಲೊಂದು ಸಿಡಿಲುಗಳ ಆರ್ಭಟ . . . ಒಂದು ಕಡೆ ಚಕ್ರವರಿಯವರದಾದರೆ ಇನ್ನೊಂದು ಕಡೆ ಶಂಕರ ಅವರ ತಂಡದವರಿಂದ . . . ನಂತರ ಹಾಡಿದ್ದು ಹಾಡು ” ಹೂ ಹರೆಯದ ಹೋಂಗನಸುಗಳೇ . . .ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ . . .” ಅರೇ ಎಂಥಾ ಹಾಡು ರೀ. . . ಮೈಯಲ್ಲಾ ರೋಮಾಂಚನವಾಯಿತು ಒಂದು ಕ್ಶಣ . . ಆವಾಗಲೆ ಎದ್ದು ಏನಾದರು ಮಾಡೋಣಾ ಅನ್ನಿಸಿತು . . .

  ನಂತರ ಮಾತಾಡಿದ್ದು ದಿವಂಗತ ಕರ್ನಲ್ ವಂಸತಾವರ ತಾಯಿ ಮತ್ತು ಧರ್ಮಪತ್ನಿ . . ಅವರು ಮಾತಾಡಿ ನಮಗೆ ಅರಿವು ಮೂಡಿಸಿದರು . . .ಆಮೇಲೆ ಮಾತಾಡಿದ್ದು . . ಕರ್ನಲ್ ಕಾಟ್ಕರಾವರು . . .ಅವರು ಮಾತಾಡುತ್ತಿದ್ದಾಗ ಸಭಾಂಗಣವೇಲ್ಲಾ ಸ್ಮಶಾನ ಮೌನ . . . ಎಲ್ಲೊ ಮನದ ಮುಲೆಯಲ್ಲಿ ಅಳೂಕಿದ ಕಣ್ಣಿರು . . ಅವರು ಮಾತು ಆಡಿದ ಮೇಲೆ ಕರತಾಡಾಗಳ ಸದ್ದು ಕೇಳಬೇಕಿತು . . . ಹೀಗೆ ಒಂದು ಸುಸಂಸ್ಕೃತ ರೀತಿಯಿಂದ ಮುಡಿಬಂದ ಕಾರ್ಯಕ್ರಮ “ವಂದೇ ಮಾತರಂ” . . .

  ಅದರ ರೂವಾರಿಗಳಾದಂಥಹ ನಿಮಗೆ ಮತ್ತು ಶಂಕರ್ ಅವರಿಗೆ ಮನದಾಳದ ಕೃತಜ್ನತೆಗಳನ್ನು ಅರ್ಪಿಸುತ್ತಾ ಹೀಗೆ ಇದನ್ನಾ ಒಂದು ಯಾತ್ರೆಯಂತೆ ಮಾಡಿ ನಾಡಿನ ಜನತೆಗೆ ದೇಶಭಕ್ತಿಯ ಅರಿವು ಮುಡಿಸುವ ಪ್ರಯತ್ನ ನಿಮ್ಮದಾಗಲಿ . . .ನಾವೆಲ್ಲ ನಿಮ್ಮ ಜೋತೆಗಿದ್ದೆವೆ . . .

  ವಂದೇ ಮಾತರಂ . . .

  ವಂದೇ ಮಾತರಂ

  ವಂದೇ ಮಾತರಂ!
  ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!

  ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದುಲ ಶೋಭಿನೀಂ
  ಸುಹಾಸಿನೀಂ ಸುಮಧುರ ಭಾಷಿಣೀಂ, ಸುಖದಾಂ ವರದಾಂ ಮಾತರಂ!

  ವಂದೇ ಮಾತರಂ

  ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ,
  ದ್ವಿ ಕೋಟಿ ಕೋಟಿ ಭುಜೈರ್ಧೃತಕರಕರಾವಲೇ ಕೇ ಬಲೇ ಮಾ ತುಮಿ ಅಬಲೇ
  ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!

  ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ ತ್ವಂ ಹೀ ಪ್ರಾಣಹ ಶರೀರಾ ಬಹುತೇ
  ತುಮೀ ಮಾ ಶಕ್ತಿ ಹೃದಯೇ, ತುಮೀ ಮಾ ಭಕ್ತಿ ತೊಮಾರಿ ಪ್ರತಿಮಾ ಗಡಿ ಮಂದಿರ ಮಂದಿರೇ

  ತ್ವಂ ಹೀ ದುರ್ಗಾ ದಶ ಪ್ರಹಾರಣ ಧಾರಿಣೀ ಕಮಲಾ ಕಮಲಾದಳ ವಿಹಾರಿಣೀ
  ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಂ ನಮಾಮಿ ಕಮಲಂ ಅಮಲಂ ಅತುಲಂ
  ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!

  ಶ್ಯಾಮಲಂ ಸರಳಂ ಸುಶ್ಮಿತಂ ಭೂಷಿತಾಂ ಧರಣೀಂ ಭರಣೀಂ ಮಾತರಂ!

 7. Chakravarty

  namaste sanju.

  nimma abhimaanakke, preetige dhanyavaada.
  AdarU ondu vishaya heLabayasuve. yAre Agali, yAvudE Agali, vyaktiginta vichaara muKhya. nannannu neevu preetisOdu nanna vichaaragaLigAgi allavE?
  dayaviTTu nimma yAvudE comment gaLalli vichaarada kuritu mAtra mAtanADi. heege neevu nanna bagge hELuvudannella OdikoLLuvudu nanage mujugarada viShaya.
  mattondu maatu- dayaviTTu kannada Type mADuvAga jAgarUkateyinda mADi. onderaDu tappugaLu sahaja. Adare baree tappugaLE tumbi hOdare OduvudAdarU hege?
  ivelladara horatAgi, nimma rAShTrABhimAnakke nanna hRutpUrvaka mechchuge ide.
  preetiyirali.

  vande,
  Chakravarti

 8. sanju

  Dhanyavadagalu Ji . . . nanna tappina bagge arivu mudisiddakkagi . . .

  mattu nanu nimaginta nimma vicharagalige maru hogiddene . . adakkagi adanna nimma moolkane janarige gottagalendu aataraha baredidde. . . . . nimma vicharagalu mukhya . . . indu . . nale . . munde . . . aaddarinda adakke nanu runi . . .

  vande

 9. shreenidhids

  ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

  ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

  ಡೇಟು: ೧೬ ಮಾರ್ಚ್ ೨೦೦೮
  ಟೈಮು: ಇಳಿಸಂಜೆ ನಾಲ್ಕು
  ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

  ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

  ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

  ಅಲ್ಲಿ ಸಿಗೋಣ.

 10. ವಿನಾಯಕ

  ಲೇಖನ ಚೆನ್ನಾಗಿದೆ..

 11. ಸುಶ್ರುತ ದೊಡ್ಡೇರಿ

  ಪ್ರಿಯ ಚಕ್ರವರ್ತಿ,
  ನಮಸ್ಕಾರ. ಹೇಗಿದ್ದೀರಿ?

  ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

  ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

  ಡೇಟು: ೧೬ ಮಾರ್ಚ್ ೨೦೦೮
  ಟೈಮು: ಇಳಿಸಂಜೆ ನಾಲ್ಕು
  ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

  ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

  ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

  ಅಲ್ಲಿ ಸಿಗೋಣ,
  ಇಂತಿ,

  ಸುಶ್ರುತ ದೊಡ್ಡೇರಿ

 12. Alex

  Your blog is interesting!

  Keep up the good work!

 13. gaurav

  namaskara geleyare

Leave a Reply