ವಿಭಾಗಗಳು

ಸುದ್ದಿಪತ್ರ


 

ಅಖಂಡ ಭಾರತಕ್ಕೆ ತಯಾರಿ ನಡೀತಿದ್ಯಾ?

ಡೋನಾಲ್ಡ್ ಟ್ರಂಪ್ ಅಮೇರಿಕಾದ ಚುನಾವಣಾ ಪ್ರಚಾರ ಭಾಷಣದಲ್ಲಿ ಮನಸೋ ಇಚ್ಛೆ ಮಾತನಾಡುವಾಗಲೆಲ್ಲ ಮಿಶೆಲ್ ಒಬಾಮಾ ‘ಅವರೆಷ್ಟು ಪಾತಾಳಕ್ಕೆ ಕುಸಿಯುವರೋ, ನಾವಷ್ಟೇ ಎತ್ತರಕ್ಕೇರುತ್ತೇವೆ’ ಎಂದಿದ್ದಳು. ಇಲ್ಲಿ ಅಕ್ಷರಶಃ ಅದು ನಿಜವಾಯ್ತು. ಪಾಕೀಸ್ತಾನ ಜಗತ್ತಿನ ದೃಷ್ಟಿಯಲ್ಲಿ ಛೀಮಾರಿಗೆ ಒಳಗಾಯ್ತು. ಬುಹರ್ಾನ್ವನಿಯನ್ನು ಹುತಾತ್ಮನಾಗಿಸಿದ ಪಾಕೀಸ್ತಾನ ಸಕರ್ಾರಕ್ಕೆ ರಾಜನಾಥ್ ಸರಿಯಾಗಿ ಚಾಟಿಯೇಟು ಕೊಟ್ಟಿದ್ದರು. ಭಯೋತ್ಪಾದನೆಯ ಬೆಂಬಲಕ್ಕೆ ನಿಂತ ಪಾಕೀಸ್ತಾನದ ಬಣ್ಣ ಅವರದೇ ನೆಲದಲ್ಲಿ ಬಯಲು ಮಾಡಿದ್ದರು. ವೆಸ್ಟ್ ಇಂಡೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಡಬಲ್ ಸೆಂಚುರಿ ಹೊಡೆದಂತೆ ಇದೂ ಕೂಡ!

‘ಆತ್ಮರಕ್ಷಣೆಗಾಗಿ ಕಾದಾಡುವವ ಸದಾ ತನ್ನ ಮನೆ-ಮಠ ಕಳೆದುಕೊಳ್ಳುವ ಚಿಂತೆಯಲ್ಲಿಯೇ ದಿನ ದೂಡುತ್ತಿರುತ್ತಾನೆ. ಆಕ್ರಮಣಕಾರಿಯಾಗಿ ಹೊರಡುವವ ಕಳೆದುಕೊಳ್ಳಲ್ಲಿಕ್ಕಿರುವುದು ಪ್ರಾಣ ಬಿಟ್ಟರೆ ಮತ್ತೇನಿಲ್ಲ’ ಇದು ಆಕ್ರಮಣ ಮಾಡಿ ತಾನು ಕಾಲಿಟ್ಟ ಜಾಗವನ್ನೆಲ್ಲ ನಡುಗಿಸಿದ ಚೆಂಗೀಸ್ಖಾನನ ಮಾತು. ಬಂಕೀಂ ಚಂದ್ರ ಚಟಜರ್ಿಯೂ ಹೇಳುತ್ತಾರೆ, ‘ಭಾರತದ ತತ್ತ್ವ ಶಾಸ್ತ್ರವೇ ನಮ್ಮನ್ನು ಆಕ್ರಮಣ ಮಾಡದಂತೆ ತಡೆದು ಬಿಟ್ಟಿದೆ. ನಾವು ಕದನ ಕಲಿಗಳಂತೆ ಕಾದಾಡಿದ್ದೇವೆ ನಿಜ, ಆದರೆ ಎಲ್ಲವೂ ಆತ್ಮರಕ್ಷಣೆಗೆ ಮಾತ್ರ.’
ಗೊತ್ತಿಲ್ಲ. ಅದೇ ನಮ್ಮ ಇತಿಹಾಸದ ಘೋರ ಪ್ರಮಾದವೂ ಇರಬಹುದು. ಅದರಿಂದಲೇ ಅಟಕ್ನಿಂದ ಕಟಕ್ವರೆಗೆ ಹಬ್ಬಿದ್ದ ಭಾರತ ಇಂದು ಈ ರೂಪದ ಭಾರತವಾಗಿ ಉಳಿದಿದೆ. ಅದರಲ್ಲೂ ಒಂದಷ್ಟು ಭೂಭಾಗ ಕಸಿದ ಪಾಕೀಸ್ತಾನ ಚೈನಾಗಳು ನಮ್ಮನ್ನು ನೋಡಿ ಕೇಕೆ ಹಾಕಿ ನಗುತ್ತಿವೆ. ಈಗ ಮತ್ತೆ ಕಳೆದುಕೊಂಡ ಭೂಭಾಗ ಮರಳಿ ಪಡೆಯುವ ಸಮಯ ಒದಗಿ ಬಂದಿದೆ. ತೀರಾ ಚಂಗೀಸ್ಖಾನನಲ್ಲದಿದ್ದರೂ ತನ್ನ ಗಡಿಯನ್ನು ಮೂಲಸ್ವರೂಪಕ್ಕೆ ತರುವಲ್ಲಿ ಪ್ರಯಾಸಪಟ್ಟ ಶಿವಾಜಿಯನ್ನಾದರೂ ಆರಾಧಿಸಬೇಕಿದೆ. ಸ್ವಾತಂತ್ರ್ಯಾನಂತರ 70 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಭಾರತ ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಊರಿದಂತೆ ಕಂಡು ಬಂದಿದೆ.
ಬುಹರ್ಾನ್ ವನಿಯನ್ನು ಕೊಂದು ಬಿಸಾಡುವ ವೇಳೆಗಾಗಲೇ ಭಾರತದ ರಕ್ಷಣಾನೀತಿ ನಿಚ್ಚಳವಾಗಿತ್ತು. ಪಾಕೀಸ್ತಾನದೊಂದಿಗೆ ವ್ಯವಹರಿಸಬೇಕಾದ ರೀತಿ-ನೀತಿಯನ್ನು ನಮ್ಮವರು ಸ್ಪಷ್ಟವಾಗಿ ನಿರ್ಧರಿಸಿದ್ದರು. ಹೀಗಾಗಿಯೇ ಆರಂಭದ ದಿನಗಳಲ್ಲಿ ಕಾಶ್ಮೀರದ ಗಲಾಟೆ, ಬುದ್ಧಿಜೀವಿಗಳ ಕಿರಿ-ಕಿರಿ ಎಲ್ಲವನ್ನೂ ಮೆಟ್ಟಿನಿಂತು ಸಕರ್ಾರ ಸೈನಿಕರಿಗೆ ಮುಕ್ತ ಪರವಾನಗಿ ಕೊಟ್ಟು ಭಯೋತ್ಪಾದನೆಯ ಮಟ್ಟ ಹಾಕಲು ಬೆಂಬಲವಾಗಿ ನಿಂತಿತು. ಪಾಕೀಸ್ತಾನಕ್ಕಷ್ಟೇ ಅಲ್ಲ ಇದು ಚೀನಾಕ್ಕೂ ತಲೆನೋವಾಗಿತ್ತು! ಈ ಹಿನ್ನೆಲೆಯಲ್ಲಿಯೇ ಗೃಹ ಸಚಿವ ರಾಜನಾಥಸಿಂಗರ ಸಾಕರ್್ ಸಮ್ಮೇಳನದ ಭೇಟಿ ಜಾಗತಿಕ ಮಹತ್ವ ಪಡಕೊಂಡಿದ್ದು ಅವರು ಅತ್ತ ಹೊರಟು ನಿಂತಾಗಲೇ ಪಾಕಿಸ್ಥಾನದಲ್ಲಿ ಭಿನ್ನ ಭಿನ್ನ ಚಟುವಟಿಕೆಗಳು ಗರಿಗೆದರಿದ್ದವು. ಲಷ್ಕರ್-ಎ-ತಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಭಾರತದ ಗೃಹಮಂತ್ರಿ ಪಾಕೀಸ್ತಾನದೊಳಕ್ಕೆ ಕಾಲಿಟ್ಟರೆ ರಾಷ್ಟ್ರವ್ಯಾಪಿ ಪ್ರತಿಭಟನೆಯ ಬೆದರಿಕೆಯೊಡ್ಡಿದ. ಹಿಜ್ಬುಲ್ ಮುಜಾಹಿದೀನ್ ನಾಯಕ ಸಯದ್ ಸಲಾವುದ್ದೀನ್ ಒಂದು ಹೆಜ್ಜೆ ಮುಂದೆ ಹೋಗಿ ಪಾಕೀಸ್ತಾನದ ರಾಯಭಾರಿಯನ್ನೇ ಭಾರತದಿಂದ ಮರಳಿ ಕರೆಸಿಕೊಳ್ಳಬೇಕೆಂದು ಸಕರ್ಾರವನ್ನು ಎಚ್ಚರಿಸಿದ. ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಹಗಲು-ರಾತ್ರಿ ಇದೇ ಸುದ್ದಿಯನ್ನು ಬಿತ್ತರಿಸಿ ಪಾಕೀಸ್ತಾನದ ಆಳುವ ಸಕರ್ಾರದ ತಲೆ ಕೆಡಿಸಿಬಿಟ್ಟರು. ಈಗ ರಾಜ್ನಾಥ್ ಸಿಂಗರಿಗೆ ಸಮ್ಮೇಳನಕ್ಕೆ ಹೋಗುವುದು ಅನಿವಾರ್ಯವೇ ಆಯಿತು.
ಪಾಕೀಸ್ತಾನದಂತಹ ರಾಷ್ಟ್ರಕ್ಕೆ ಇಂತಹ ಹೊತ್ತಲ್ಲಿ ಹೊರಡುವುದೆಂದರೆ ಗಂಡೆದೆಯ ಮಾತೇ ಸರಿ. ರಾಜನಾಥ್ ಸಿಂಗರು ಹಿಂದು ಮುಂದು ನೋಡಲಿಲ್ಲ. ಅವರ ಆಗಮನಕ್ಕೆ ಭರ್ಜರಿ ತಯಾರಿ ನಡೆದಿರುವಾಗ ಹೋಗದಿದ್ದರೆ ತಪ್ಪಾದೀತೆಂಬ ಅರಿವು ಅವರಿಗೆ ಖಂಡಿತ ಇತ್ತು. ವಿಶೇಷ ರಕ್ಷಣೆಯೊಂದಿಗೆ ಪಾಕೀಸ್ತಾನಕ್ಕೆ ಕಾಲಿಟ್ಟರು ಕೂಡ. ಭಾರತ ತನ್ನ ಘನತೆಗೆ ತಕ್ಕಂತೆ ನಡಕೊಂಡಿತು, ಪಾಕೀಸ್ತಾನ ತನ್ನ ಯೋಗ್ಯತೆಗೆ ತಕ್ಕಂತೆ!

Felicitation function for the "Emergency Detainees"
ರಾಜ್ನಾಥ್ ಸಿಂಗರು ಉಳಕೊಂಡ ಹೋಟೆಲ್ನಲ್ಲಿ ಹೊರಗೆ ಭಯೋತ್ಪಾದಕ ಸಂಘಟನೆಗಳು ಪ್ರತಿಭಟನೆ ನಡೆಸಲು ಅನುಕೂಲ ಮಾಡಿಕೊಟ್ಟಿತು ಪಾಕ್ ಸಕರ್ಾರ. ವಿದೇಶದಿಂದ ಗಣ್ಯರು ಬಂದಾಗ ಅವರಿಗೆ ಕಿರಿ ಕಿರಿಯಾಗದಂತೆ ನೋಡಿಕೊಳ್ಳಬೇಕೆಂಬ ಕನಿಷ್ಠ ಸೌಜನ್ಯವೂ ಸಕರ್ಾರದ ಪ್ರಮುಖರಿಗಿರಲಿಲ್ಲ.
ಇತ್ತ ಭಾರತ ಇದೇ ವೇಳೆಗೆ ತವಾಂಗ್, ಈಸ್ಟ್ ಕಾಮೆಂಗ್, ಅಪ್ಪರ್ ಸಬಾನ್ಸಿರಿ, ವೆಸ್ಟ್ ಸಿಯಾಂಗ್, ಅಪ್ಪರ್ ಸಿಯಾಂಗ್ ಮೂಲಕ ಹಾದು ವಿಜಯ್ನಗರ ತಲುಪುವ ಅರುಣಾಚಲ ಗಡಿಗೆ ಹೊಂದಿಕೊಂಡಂತಹ 2000 ಕಿ.ಮೀ ಉದ್ದದ ಗಡಿಗೆ ಅನುಮತಿಕೊಟ್ಟು ಕೆಲಸ ಶುರುಮಾಡಲು ಆದೇಶಿಸಿತು. ಸಂಸತ್ನ ಗ್ರಂಥಾಲಯದ ಕಟ್ಟಡದ ಹೊರಗೆ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಸಿದ್ಧವಿರುವ ಡಿ ಆರ್ ಡಿ ಓ ನ ಹೊಸ ಆವಿಷ್ಕಾರ ನವೀಕೃತ ಅಜರ್ುನ್ ಟ್ಯಾಂಕನ್ನು ಇಟ್ಟು ಪ್ರದರ್ಶನ ಮಾಡಲಾಯಿತು. ಅಷ್ಟಕ್ಕೇ ನಿಲ್ಲಲಿಲ್ಲ ಭಾರತ ಸಕರ್ಾರ. ಇದೇ ಹೊತ್ತಲ್ಲಿ ಖಾಸಗಿ ಕಂಪನಿಗಳಿಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಅಧಿಕಾರಿಗಳನ್ನು ಭಾರತೀಯ ಸೇನಾ ನೆಲೆಗಳಿಗೆ ಒಯ್ದು ಅಲ್ಲಿನ ಟ್ಯಾಂಕರ್ಗಳ, ಶಸ್ತ್ರಾಸ್ತ್ರಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಜಗತ್ತಿನ ಬಲುದೊಡ್ಡ ಶಸ್ತ್ರ ಖರೀದಿ ರಾಷ್ಟ್ರವಾಗಿದ್ದ ಭಾರತ ಮುಂಬರುವ ದಿನಗಳಲ್ಲಿ ಶಸ್ತ್ರ ಮಾರಾಟಮಾಡುವ ರಾಷ್ಟ್ರವಾಗಲಿರುವ ಮುನ್ಸೂಚನೆ ಅದು. ಇದು ಸ್ಪಷ್ಟ ಆಕ್ರಮಣಕಾರಿ ನೀತಿಯೇ. ಭಾರತದ ಟಾಟಾ, ಮಹೀಂದ್ರಾ, ಎಲ್ & ಟಿಗಳೆಲ್ಲ ಈ ಉದ್ದಿಮೆಗಿಳಿದರೆ ಅಕ್ಕಪಕ್ಕದ ರಾಷ್ಟ್ರಗಳು ಹೇಗೆ ನೆಮ್ಮದಿಯಿಂದ ನಿದ್ದೆ ಮಾಡಬಲ್ಲವು ಹೇಳಿ. ಚೆಂಗೀಸ್ಖಾನ್ ಹೇಳಿದನಲ್ಲ ಆತ್ಮರಕ್ಷಣೆಗಾಗಿಯೇ ಬದುಕಿದರೆ ಸರ್ವಸ್ವವನ್ನೂ ಕಳೆದುಕೊಳ್ಳುವುದು ಖಾತ್ರಿ. ಆಕ್ರಮಣಕಾರಿಯಾಗಿ ಚಿಂತಿಸಿದರೆ ಅಕ್ಕಪಕ್ಕದವರು ಬಾಲ ಮುದುರಿಕೊಂಡು ಕೂರುತ್ತಾರೆ ಅಷ್ಟೇ.

22
ಈ ಬಾರಿಯ ಆಕ್ರಮಣ ಬರಿಯ ಬಾಯ್ಮಾತಿನದಲ್ಲ. ಭಾರತ ಸಕರ್ಾರ ಪಾಕೀಸ್ತಾನಕ್ಕೆ ರಾಜನಾಥರು ಕಾಲಿಟ್ಟ ಹೊತ್ತಲ್ಲೇ ಚೀನಾದ ಬದ್ಧ ವೈರಿ ವಿಯೆಟ್ನಾಂನೊಂದಿಗೆ 5ನೇ ವ್ಯೂಹಾತ್ಮಕ ಮಾತುಕತೆ ನಡೆಸಿತು. ಅದಾದೊಡನೆ ಪತ್ರಿಕಾ ಹೇಳಿಕೆ ಕೊಟ್ಟ ವಿಯೆಟ್ನಾಂನ ರಕ್ಷಣಾಮಂತ್ರಾಲಯ ‘ಸಮುದ್ರ ಏಕಸ್ವಾಮ್ಯತೆಯ ಕುರಿತಂತೆ ಮಾತಿನ ಮೂಲಕವೇ ಪರಿಹರಿಸಿಕೊಳ್ಳಬೇಕು ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ತಕ್ಕಂತೆ ಪರಿಹಾರ ಹುಡುಕಿಕೊಳ್ಳಬೇಕು’ ಎಂದಿತು. ಎಲ್ಲಿಯೂ ದಕ್ಷಿಣ ಚೀನಾ ಸಮುದ್ರದ ಉಲ್ಲೇಖವಿರದಿದ್ದರೂ ಅರ್ಥ ಮಾತ್ರ ಸ್ಪಷ್ಟವಾಗಿತ್ತು. ಭಾರತ ಬೆನ್ನಿಗೆ ನಿಂತೊಡನೆ ವಿಯೆಟ್ನಾಂಗೆ ಬಲ ಬಂದಿತ್ತು
ಚೀನಾದ ಸಮಯ ಹಾಳಾಗಿದೆ ಎಂಬುದನ್ನು ಸುತ್ತಲಿನ ಘಟನೆಗಳು ಒಂದೊಂದಾಗಿ ಸಾಬೀತು ಪಡಿಸುತ್ತಲೇ ಇದ್ದವು. ಚೀನಾದ ಪಾರಂಪರಿಕ ವೈರಿ ಜಪಾನ್ ಕೂಡ ಗುಟುರು ಹಾಕಿ ಜಾಗತಿಕ ನಿಯಮಗಳನ್ನು ಮೀರಿ ತಂಟೆಗೆ ಬಂದರೆ ತಕ್ಕ ಶಾಸ್ತಿ ಮಾಡುವ ಎಚ್ಚರಿಕೆ ಕೊಟ್ಟುಬಿಟ್ಟಿತು. ಅದಾಗಲೇ ಭಾರತದ ನೇತೃತ್ವದಲ್ಲಿ ಅಮೇರಿಕಾ, ಆಸ್ಟ್ರೇಲಿಯಾ, ವಿಯೆಟ್ನಾಂ ಮತ್ತು ಫಿಲಿಪ್ಪಿನ್ಸ್ಗಳೆಲ್ಲ ಜಪಾನಿಗೆ ಬೆಂಬಲ ತೋರಿದ್ದರೆ ಚೀನಾ ಕೈ ಬೆರಳೆಣಿಕೆಯ ಏಷ್ಯಾದ ರಾಷ್ಟ್ರಗಳ ಸ್ನೇಹವನ್ನು ನೆಚ್ಚಿ ಕಾಲ ಕಳೆಯಬೇಕಿತ್ತು.
ಈ ಎಲ್ಲಾ ಕಿರಿಕಿರಿಗಳಿಂದ ಮುಕ್ತವಾಗಲು ಚೀನಾಕ್ಕಿದ್ದ ಏಕೈಕ ಮಾರ್ಗ ಪಾಕೀಸ್ತಾನವನ್ನು ಛೂ ಬಿಟ್ಟು ಭಾರತವನ್ನು ಶಾಂತಗೊಳಿಸಿ ಮತ್ತೆ ಏಷ್ಯಾ ಖಂಡದ ಬಲಿಷ್ಠ ರಾಷ್ಟ್ರದ ಪಟ್ಟಕ್ಕೇರುವುದು. ಈ ದೃಷ್ಟಿಯಿಂದಲೂ ಸಾಕರ್್ ಸಮ್ಮೇಳನದಲ್ಲಿ ಭಾರತದ ನಡೆ ಬಲು ಮಹತ್ವ ಪಡೆದಿತ್ತು. ರಾಜನಾಥ್ ಸಿಂಗ್ ದ್ವಿಪಕ್ಷೀಯ ಮಾತುಕತೆ ಇಲ್ಲವೇ ಇಲ್ಲವೆಂಬುದನ್ನು ದೃಢವಾಗಿ ಘೋಷಿಸಿಯೇ ಪಾಕೀಸ್ತಾನಕ್ಕೆ ತೆರಳಿದ್ದರು. ಅಲ್ಲಿ ಪಾಕೀಸ್ತಾನದ ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ ಚಚರ್ೆ ಶುರುವಾದೊಡನೆ ಪಾಕೀಸ್ತಾನ ಮತ್ತೆ ತನ್ನ ಬುದ್ಧಿ ತೋರಲಾರಂಭಿಸಿತು. ಭಾರತದ ಗೃಹ ಸಚಿವರ ಮಾತುಗಳನ್ನು ಚಿತ್ರೀಕರಿಸಿ ಪ್ರಕಟಿಸ ಬಯಸಿದ್ದ ಎಲ್ಲಾ ಪತ್ರಕರ್ತರಿಗೆ ಅವಕಾಶ ನಿರಾಕರಿಸಲಾಯಿತು. ಅಕ್ಷರಶಃ ‘ಬ್ಲ್ಯಾಕ್ ಔಟ್’!
ಕೆಲವೊಮ್ಮೆ ವಿರೋಧ ಮಾಡುವುದೂ ಎದುರಾಳಿಗೆ ಗೆಲುವು ತಂದುಕೊಡುತ್ತದೆ. ಅದನ್ನೇ ‘ಶತ್ರುಗಳ ಆಶೀವರ್ಾದ’ ಅನ್ನೋದು. ಬಹುಶಃ ಚಿತ್ರೀಕರಣಕ್ಕೆ ಅವಕಾಶಕೊಟ್ಟಿದ್ದರೆ ಭಾರತ-ಪಾಕೀಸ್ತಾನದಲ್ಲಿ ಒಂದಷ್ಟು ಜನ ಅದನ್ನು ಕೇಳಿ ಒಬ್ಬರ ಮೇಲೊಬ್ಬರು ಕೆಸರೆರೆಚಿಕೊಂಡು ಸುಮ್ಮನಾಗುತ್ತಿದ್ದರೋ ಏನೋ? ಅವರಿಗೆ ತಡೆಯೊಡ್ಡಿ ಪಾಕ್ ಸಕರ್ಾರ ರಾಜ್ನಾಥ್ ಸಿಂಗರನ್ನು ಹೀರೋ ಮಾಡಿಬಿಟ್ಟಿತು. ಅಂತರರಾಷ್ಟ್ರೀಯ ಮಾಧ್ಯಮಗಳು ಇದನ್ನೂ ವಿಶೇಷ ಸುದ್ದಿಯಾಗಿ ಸ್ವೀಕರಿಸಿತು. ಅವರ ಭಾಷಣದ ಲಿಖಿತ ಪ್ರತಿ ಜಗತ್ತಿನಾದ್ಯಂತ ಹರಿದಾಡಿತು. ಪಾಕೀಸ್ತಾನದ ಮಾನ ಮೂಕರ್ಾಸಿಗೆ ಹರಾಜಾಯಿತು. ಡೋನಾಲ್ಡ್ ಟ್ರಂಪ್ ಅಮೇರಿಕಾದ ಚುನಾವಣಾ ಪ್ರಚಾರ ಭಾಷಣದಲ್ಲಿ ಮನಸೋ ಇಚ್ಛೆ ಮಾತನಾಡುವಾಗಲೆಲ್ಲ ಮಿಶೆಲ್ ಒಬಾಮಾ ‘ಅವರೆಷ್ಟು ಪಾತಾಳಕ್ಕೆ ಕುಸಿಯುವರೋ, ನಾವಷ್ಟೇ ಎತ್ತರಕ್ಕೇರುತ್ತೇವೆ’ ಎಂದಿದ್ದಳು. ಇಲ್ಲಿ ಅಕ್ಷರಶಃ ಅದು ನಿಜವಾಯ್ತು. ಪಾಕೀಸ್ತಾನ ಜಗತ್ತಿನ ದೃಷ್ಟಿಯಲ್ಲಿ ಛೀಮಾರಿಗೆ ಒಳಗಾಯ್ತು. ಬುಹರ್ಾನ್ವನಿಯನ್ನು ಹುತಾತ್ಮನಾಗಿಸಿದ ಪಾಕೀಸ್ತಾನ ಸಕರ್ಾರಕ್ಕೆ ರಾಜನಾಥ್ ಸರಿಯಾಗಿ ಚಾಟಿಯೇಟು ಕೊಟ್ಟಿದ್ದರು. ಭಯೋತ್ಪಾದನೆಯ ಬೆಂಬಲಕ್ಕೆ ನಿಂತ ಪಾಕೀಸ್ತಾನದ ಬಣ್ಣ ಅವರದೇ ನೆಲದಲ್ಲಿ ಬಯಲು ಮಾಡಿದ್ದರು. ವೆಸ್ಟ್ ಇಂಡೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಡಬಲ್ ಸೆಂಚುರಿ ಹೊಡೆದಂತೆ ಇದೂ ಕೂಡ!
ಅದರ ಹಿಂದು ಹಿಂದೆಯೇ ಅಮೇರಿಕಾದ ಪೆಂಟಗಾನ್ನ ವಕ್ತಾರ ಆಡಂ ಸ್ಟಂಪ್ ಪಾಕೀಸ್ತಾನಕ್ಕೆ ಕೊಡಬೇಕಾಗಿದ್ದ 300 ಮಿಲಿಯನ್ ಡಾಲರುಗಳ ಸಹಾಯ ಹಿಂಪಡೆದಿದ್ದೇವೆ ಎಂದು ಘೋಷಿಸಿದ. ಅದಕ್ಕೆ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಅವರ ಚಟುವಟಿಕೆ ತೃಪ್ತಿದಾಯಕವಾಗಿಲ್ಲವೆಂದು ಕಾರಣ ಕೊಟ್ಟ. ಪಾಕೀಸ್ತಾನ ಸಮಜಾಯಿಷಿ ಕೊಡುತ್ತ ಹೈರಾಣಾಗಿಬಿಟ್ಟಿದೆ. ಅದಕ್ಕೀಗ ಬದುಕಲು ಹಣ ಬೇಕು. ಚೀನಾದೆದುರು ಜೊಲ್ಲು ಸುರಿಸಿಕೊಂಡು ನಿಂತಿದೆ!
ಹ್ಞಾಂ! ಅಂದಹಾಗೆ ಹಾಫೀಜ್ ಸಯೀದ್ ಕಾಶ್ಮೀರದಲ್ಲಿ ಬೀಡುಬಿಟ್ಟಿರುವ 8 ಲಕ್ಷ ಭಾರತೀಯ ಸೈನಿಕರ ಕುರಿತಂತೆ ಬಾಯಿಗೆ ಬಂದದ್ದೆಲ್ಲಾ ಹರಟುತ್ತಿದ್ದಾನೆ. ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಭಾರತ ಬಳಸುತ್ತಿದೆಯೆಂಬ ಅತಿರೇಕದ ಮಾತುಗಳನ್ನಾಡುತ್ತಿದ್ದಾನೆ. ಭಾರತೀಯರನ್ನು ಭಡಕಾಯಿಸುವ ಅವನ ಯಾವ ಪ್ರಯತ್ನವೂ ಯಶಸ್ಸು ಕಾಣುತ್ತಿಲ್ಲ. ಭಾರತ ಸಕರ್ಾರ ಮಾತ್ರ ಇವ್ಯಾವನ್ನೂ ತಲೆಗೆ ಹಾಕಿಕೊಳ್ಳದೇ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದೇ ತಮ್ಮ ಗುರಿ ಎಂದು ಘೋಷಿಸಿದೆ ಮತ್ತು ಬಲೂಚಿಸ್ತಾನವನ್ನು ಪಾಕೀಸ್ತಾನದಿಂದ ಪ್ರತ್ಯೇಕಿಸಲು ಎಲ್ಲಾ ಮಾರ್ಗಗಳನ್ನೂ ಬಳಸುತ್ತಿದೆ.
ಚೆಂಗೀಸ್ಖಾನ್ ಹೇಳಿದ್ದನಲ್ಲ. ಆಕ್ರಮಣ ಮಾಡುವವರೆಗೂ ಕಾಯುತ್ತ ಕುಳಿತಿದ್ದರೆ ದೇಶವನ್ನು ಚೂರು ಚೂರಾಗಿಸಿಕೊಳ್ಳುತ್ತೇವೆ. ಆಕ್ರಮಣಕ್ಕೇ ಸಿದ್ಧವಾಗಿ ನಿಂತುಬಿಟ್ಟರೆ ಎದುರಾಳಿ ಕೈಕುಲುಕಿ ಮಿತ್ರನಾಗಿದ್ದುಬಿಡುತ್ತಾನೆ. ನಮಗಂತೂ ಗುರಿ ಸ್ಪಷ್ಟವಾಗಿದೆ.
ಆಗಸ್ಟ್ 14 ಬಂತಲ್ಲ, ಮತ್ತೊಮ್ಮೆ ಅಖಂಡ ಭಾರತದ ಸಂಕಲ್ಪ ಮಾಡೋಣ. ಆಗಬಹುದಾ?

Leave a Reply