ವಿಭಾಗಗಳು

ಸುದ್ದಿಪತ್ರ


 

ಅನುಭಾವ ಬಿಂದುಗಳು (ಹೊಸ ಕಂತು)

ಅನುಭವಿಸಿದರೆ
ಒಂಟಿತನವೂ
ಹಾಯೆನಿಸುತ್ತದೆ.
~
ಇನ್ನೇಕೆ ದಾರಿ
ನನಗೆ…
ನಿನ್ನ
ಹೆಜ್ಜೆ ಗುರುತು
ಸಿಕ್ಕಿತಲ್ಲ.
~
ಅರೆ!
ಅರಳಿದ ಪದ್ಮದ
ಸೌಂದರ್ಯಕ್ಕೆ ಸೋತ
ಕುಂಡಲಿನಿಯ ಹಾವು
ಕುಣಿಯುತ್ತ
ಸಹಸ್ರಾರ ಸೇರಿದೆ
~
ನೀನು
ನನಗಿಷ್ಟ
ಅದು
ಕನ್ನಡಿಗೂ ಗೊತ್ತು.
ಅದಕ್ಕೇ ಅವಕ್ಕೆ
ನೀನಂದರೆ
ಅಷ್ಟಕ್ಕಷ್ಟೇ.
~
ಕಣ್ಣಿಲ್ಲದವಗೆ
ಮಾತ್ರ
ಕತ್ತಲಿನ
ಅನುಭವ.
~
ಹೃದಯದ ತಂತು
ಎಲ್ಲರೂ
ಮೀಟಲಲ್ಲ.
ಸಂಗೀತ
ಆಲಿಸುವ ತಾಳ್ಮೆಯೂ
ಬೇಕಲ್ಲ!
~
ಸೂರ್ಯೋದಯದೊಂದಿಗೆ
ಶುರುವಾಗೋ
ನನ್ನ ಗರತಿತ್ವ
ಸೂರ್ಯಾಸ್ತಕ್ಕೆ
ಮುಗಿದುಹೋಗುತ್ತೆ!
~
ನಂಬಿಕೆಯೇ
ವಿಶ್ವಾಸ ಕಳಕೊಂಡರೆ
ಇನ್ನು
ಎಷ್ಟೆಂದು ನಂಬೋದು!?

Leave a Reply