ವಿಭಾಗಗಳು

ಸುದ್ದಿಪತ್ರ


 

ಅವನೆಡೆಗೆ ನಾನೊಬ್ಬನೇ!

ನೈವೇದ್ಯಕ್ಕೆಂದು
ತುಪ್ಪ ಕಾಸಿ
ಗಡಿಗೆಗೆ ತುಂಬಿಟ್ಟೆ
ಆರಲೆಂದು ಬಿಟ್ಟೆ!

ಮರಳಿ ನೋಡುವಾಗ
ಅರ್ಧ ತುಪ್ಪ ಗಡಿಗೆ
ಕುಡಿದಿತ್ತು, ಇನ್ನರ್ಧ
ಬೀದಿ ನಾಯಿ!!

ನಾಯಿಯಲ್ಲೂ
ದೇವರಿದ್ದಾನಲ್ಲ,
ಗಡಿಗೆ ಕೊಟ್ಟು
ದೇವರೆಡೆ ನಡೆದೆ
‘ನಾನೊಬ್ಬನೇ!’

Leave a Reply