ವಿಭಾಗಗಳು

ಸುದ್ದಿಪತ್ರ


 

ಈ ಬಾರಿ ಪರೀಕ್ಷೆ ಮೋದಿಗಲ್ಲ, ನಮಗೇ!

ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿರೋದು ಈಗಲೇ. ನರೇಂದ್ರ ಮೋದಿಯವರಂತಹ ನಾಯಕ ಆಗಾಗ ಬರಲಾರ. ಅದು ಅಪರೂಪಕ್ಕೊಮ್ಮೆ ಸಿದ್ಧಿಸುವ ರತ್ನ. ಬಿಡಬಾರದಷ್ಟೇ. ಗುಜರಾತಿನ ಚುನಾವಣೆ ಈ ನಿಟ್ಟಿನಲ್ಲಿ ಬಲು ದೊಡ್ಡ ಪರೀಕ್ಷೆ, ನರೇಂದ್ರ ಮೋದಿಗಲ್ಲ ಬದಲಿಗೆ ನಾವು ಭಾರತದ ವಿಕಾಸದೊಟ್ಟಿಗೆ ನಡೆಯುವೆವಾ ಎಂಬುದಕ್ಕೆ.

ಸಮಸ್ಯೆಗಳು ಸರಮಾಲೆಯಾಗಿ ಬರುತ್ತವೆ ಅನ್ನೋದು ಖಂಡಿತ ಸುಳ್ಳಲ್ಲ. ಎದುರಿಸಬಲ್ಲವ ಛಾತಿ ಅಗಲಿಸಿ ನಿಂತಿರಬೇಕಷ್ಟೇ. ಇಲ್ಲವಾದಲ್ಲಿ ಸಂಕಟದ ಹೊತ್ತಲ್ಲಿ ಎಂಥವನೂ ಕುಗ್ಗಿ ಹೋಗಿ ಬಿಡಬಲ್ಲ. ಭಾರತಕ್ಕೆ ಒಂದು ಬಗೆಯಲ್ಲಿ ಸವಾಲಿನ ದಿನಗಳು ಶುರುವಾಗಿವೆ. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತದ ಆಲೋಚನೆಯ ದಿಕ್ಕನ್ನೇ ಬದಲಾಯಿಸಿಬಿಟ್ಟಿದ್ದರು. ಹೊಸ ಹೊಸ ಹಾದಿಯನ್ನು ತಾವೇ ನಿಮರ್ಾಣ ಮಾಡಿಕೊಂಡ ಮೋದಿ ಜಗತ್ತಿಗೇ ವಿಕಾಸದ ಕಿಡಿತಾಕಿಸಿಬಿಟ್ಟರು. ಭಾರತ ಈ ಪರಿಯ ಬದಲಾವಣೆ ಕಂಡೀತೆಂದು ಕನಸಲ್ಲೂ ಯೋಚಿಸಿರದ ಅವರಿಗೆಲ್ಲ ತಮ್ಮ ತಾವೇ ಚಿವುಟಿಕೊಂಡು ನೋಡಬೇಕಾದ ಪರಿಸ್ಥಿತಿ. ಮೂರೂವರೆ ವರ್ಷಗಳ ನಂತರ ಈಗ ಜಾಗತಿಕ ಮಟ್ಟದಲ್ಲಿ ಹೊಸ ಹೊಸ ಸಮಸ್ಯೆಗಳು ಎದುರಾಗುವಾಗ ನಾವೆಲ್ಲ ಜೊತೆಗೂಡಿ ನಿಲ್ಲಬೇಕಾಗಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿಯಂತಹ ನಿರ್ಣಯಗಳನ್ನು ಚುನಾವಣೆಯ ಹೊಸ್ತಿಲಲ್ಲೇ ಕೈಗೊಳ್ಳುವಾಗಲೂ ಹಿಂಜರಿಯದ ಮೋದಿಯವರಿಗೆ ಈಗ ಎದುರಾಗಿರುವ ಸಂಕಟ ಖಂಡಿತ ಸಾಮಾನ್ಯವಲ್ಲ!

ಕಳೆದೊಂದು ವಾರದಿಂದ ಸೌದಿ ಅರೇಬಿಯಾದ ರಾಜ ಮನೆತನದಲ್ಲಿ ಉಂಟಾಗಿರುವ ಬಿರುಕಿನ ವಾತಾವರಣ ನೀವೆಲ್ಲ ಗಮನಿಸುತ್ತಿರಬೇಕು. ಭ್ರಷ್ಟಾಚಾರದ ನೆಪದಲ್ಲಿ 208 ಜನರನ್ನು ಬಂಧಿಸಲಾಗಿದೆ. ರಾಜ ಸಲ್ಮಾನ್ ಅಧಿಕಾರಕ್ಕೆ ಬಂದೊಡನೆ ಭ್ರಷ್ಟಾಚಾರ ನಿಗ್ರಹ ದಳದ ಸದಸ್ಯ ಶೇಖ್ ಸೌದ್ ಅಲ್ ಮೊಜೀಬ್ರಿಂದ ವರದಿ ಪಡೆದು ಈ ಬಂಧನ ನಡೆಸಲಾಯ್ತು. ಅಲ್ಲಿನ ಸಿರಿವಂತರನೇಕರ ಬ್ಯಾಂಕ್ ಅಕೌಂಟುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹೀಗೆ ಬಂಧಿಸಲ್ಪಟ್ಟವರಲ್ಲಿ ಕೋಟ್ಯಧಿಪತಿಗಳಿದ್ದಾರೆ, ಮಾಜಿ ಮಂತ್ರಿಗಳು, ವ್ಯಾಪಾರಿಗಳೂ ಅಲ್ಲದೇ ರಾಜ ಮನೆತನದವರೂ ಇದ್ದಾರೆ! ತನಿಖೆ ಮುಂದುವರೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದಲ್ಲದೇ ಅವರ ಆಸ್ತಿಯನ್ನೂ ಸಕರ್ಾರಕ್ಕೆ ಒಪ್ಪಿಸಲಾಗುವುದೆಂದೂ ಮಾತಾಡಿಕೊಳ್ಳಲಾಗುತ್ತಿದೆ. ಜಗತ್ತಿನ ಎಲ್ಲಾ ಪ್ರಮುಖ ರಾಷ್ಟ್ರಗಳೂ ಕಳೆದ ಒಂದು ವಾರದಿಂದ ಸೂಕ್ಷ್ಮವಾಗಿ ಗಮನಿಸುತ್ತಿರುವ ಸಂಗತಿ ಇದೊಂದೇ. ಮುಂದೇನಾಗಬಹುದೆಂಬ ಕಾತುರ ಎಲ್ಲರಿಗೂ ಖಂಡಿತ ಇದೆ.

1

ಸೌದಿ ಭ್ರಷ್ಟಾಚಾರ ಮುಕ್ತವಾಗಿಬಿಡುವುದು ಮೊದಲ ಸಾಧ್ಯತೆ. ಸಂತಸವೇ. ಇಂದು ಜಗತ್ತನ್ನೆಲ್ಲ ಆವರಿಸಿಕೊಂಡಿರುವ ಸಾಂಕ್ರಾಮಿಕ ರೋಗ ಭ್ರಷ್ಟಾಚಾರವೇ. ಅದಕ್ಕೆ ಗಡಿಯಿಲ್ಲ, ಜಾತಿ-ಮತ-ಪಂಥಗಳ ಗೊಡವೆಯಿಲ್ಲ. ರಾಜನೊಬ್ಬ ಅದರ ವಿರುದ್ಧ ಚಾಟಿ ಬೀಸಲಾರಂಭಿಸಿದೊಡನೆ ಆಯಾ ರಾಷ್ಟ್ರದ ಜನ ಬಿಡಿ; ಇತರೆ ಅನೇಕ ರಾಷ್ಟ್ರಗಳಲ್ಲಿ ಜನರ ರಾತ್ರಿಯ ನಿದ್ದೆ ಹಾರಿ ಹೋಗುತ್ತದೆ. ಮೋದಿಯ ನೋಟು ಅಮಾನ್ಯೀಕರಣದ ನಿರ್ಣಯಕ್ಕೆ ಮಮತಾ, ಸಿದ್ದರಾಮಯ್ಯನವರು ಕೋಪಿಸಿಕೊಂಡದ್ದು ಒತ್ತಟ್ಟಿಗಿರಲಿ ಪಾಕಿಸ್ತಾನದ ವ್ಯಾಪಾರಿಯೊಬ್ಬ ಆತ್ಮಹತ್ಯೆಯನ್ನೇ ಮಾಡಿಕೊಂಡುಬಿಟ್ಟ. ಅಮೇರಿಕಾದ ಕಂಪನಿಗಳು ಜಗತ್ತಿನ ಅನೇಕ ರಾಷ್ಟ್ರಗಳ ಪ್ರಧಾನ ಮಂತ್ರಿಗಳನ್ನು ತಮ್ಮ ಹಣದ ದೌಲತ್ತಿನ ಮೂಲಕ ನಿಯಂತ್ರಿಸುವ ಒಂದು ಕಾಲ ಖಂಡಿತ ಇತ್ತು. ಈಗ ಸ್ವತಃ ಚೀನೀ ಸಕರ್ಾರ ಆ ಕೆಲಸ ಮಾಡುತ್ತಿದೆ. ಯಾವುದಾದರೂ ರಾಷ್ಟ್ರ ಪ್ರಾಮಾಣಿಕತೆಯತ್ತ ಹೊರಳಿದರೆ ಕಿರಿಕಿರಿಯಾಗುವುದೇ ಅದಕ್ಕೇ; ಅಧಿಕಾರ ಕಳೆದು ಹೋಗುತ್ತಲ್ಲ ಅಂತ. ಸೌದಿ ರಾಷ್ಟ್ರದ ಬಗ್ಗೆ ಜಗತ್ತಿಗೆಲ್ಲ ಕಾತರತೆ ಇರೋದು ಈ ಕಾರಣದಿಂದ. ಆದರೆ ಇಡಿಯ ಬಂಧನ ಪ್ರಹಸನವಾಗಿ ಹೊಸ ರಾಜ ತನ್ನ ತಾನು ಇವರೆಲ್ಲರ ಕೇಂದ್ರವಾಗಿಸಿಕೊಳ್ಳುವ, ತಾನೇ ಇವರೆಲ್ಲರಿಗಿಂತಲೂ ಪ್ರಭಾವಿ ಎಂದು ತೋರಿಸಿಕೊಳ್ಳುವ ತವಕದಲ್ಲಿದ್ದಾನಾ ಎಂಬುದು ಮುಖ್ಯ. ಹಾಗೇನಾದರೂ ಆದರೆ ಭ್ರಷ್ಟಾಚಾರದ ಪರಿಧಿಯ ಅಳತೆ ಬದಲಾಗುವುದಿಲ್ಲ, ಕೇಂದ್ರವಷ್ಟೇ ಬದಲಾದೀತು! ಹಾಗಲ್ಲದೇ ಆತ ಸಮರ್ಥವಾಗಿ ರಾಜ್ಯಾಡಳಿತ ಹಿಡಿದು ನಿಂತರೆ ಅದು ಸೌದಿಯ ಸಾಮಥ್ರ್ಯವನ್ನು ಖಂಡಿತ ಹೆಚ್ಚಿಸಲಿದೆ. ಸೌದಿ ಅರೇಬಿಯಾ ಬಲವಾದರೆ ನಿಸ್ಸಂಶಯವಾಗಿ ನಮ್ಮ ಬಳಕೆಯ ತೈಲದ ಬೆಲೆ ಏರಲಿದೆ. ಅದು ಸಹಜವಾಗಿಯೇ ಭಾರತದ ಪಾಲಿಗೆ ಕಂಟಕಪ್ರಾಯ. ಇಡಿಯ ಮುಸ್ಲೀಂ ರಾಷ್ಟ್ರಗಳು ಕಳೆದ ನಾಲ್ಕಾರು ವರ್ಷಗಳಿಂದ ಸಹಜ ಬದುಕಿಗೂ ತೆವಳುವ ಸ್ಥಿತಿ ಬಂದಿರುವುದು ಪೆಟ್ರೋಲಿನ ಬೆಲೆ ಇಳಿಮುಖವಾದ್ದರಿಂದಲೇ. ಅವರ ಐಷಾರಾಮಿ ಬದುಕು ಮತ್ತು ಜಗತ್ತನ್ನೆಲ್ಲ ನಾಶಗೊಳಿಸುವ ಅವರ ಆಶಯದ ಹಿಂದಿದ್ದುದು ಪೆಟ್ರೋಲಿನ ದುಡ್ಡಿನ ಮದವೇ. ಅದು ಕಳೆಯುವ ಭೀತಿ ಆವರಿಸಿಕೊಂಡ ಮೇಲೆ ಅವರು ತಮ್ಮೊಳಗೇ ಕಾದಾಡಲು ಶುರು ಮಾಡಿಬಿಟ್ಟಿದ್ದರು. ಈಗ ಮತ್ತೆ ಪರಿಸ್ಥಿತಿಗಳು ಬದಲಾಗುತ್ತಿವೆ.

2

ಮೋದಿಯವರು ಅಧಿಕಾರಕ್ಕೆ ಬರುವ ವೇಳೆಗೆ ಪ್ರತಿ ಬ್ಯಾರಲ್ಲಿಗೆ 100 ಡಾಲರ್ನಷ್ಟಿದ್ದ ತೈಲ ಭಾರತದ ಆಥರ್ಿಕತೆಯ ಮೇಲೆ ಲಕ್ಷಾಂತರ ಕೋಟಿಗಳಷ್ಟು ಹೊರೆಯುಂಟು ಮಾಡಿತ್ತು. ನರೇಂದ್ರ ಮೋದಿಯವರ ಪುಣ್ಯವೇನೋ ಎಂಬಂತೆ ಅವರು ಅಧಿಕಾರಕ್ಕೆ ಬರುವ ವೇಳೆಗೆ ತಗ್ಗಿದ ಪೆಟ್ರೋಲು ಬೆಲೆಯಿಂದ ಬೊಕ್ಕಸಕ್ಕೆ ಸಾಕಷ್ಟು ಲಾಭವಾಗಿ ಮೋದಿಯವರು ಅದನ್ನು ರಾಷ್ಟ್ರದ ಅಭ್ಯುದಯಕ್ಕೆ ಬಳಸಲಾರಂಭಿಸಿದರು. ಈ ಹಿಂದೆ ನಮ್ಮ ತಲೆಯ ಮೇಲಿದ್ದ ಸಾಲ ತೀರಿಸಲು ಒಂದಂಶ ವ್ಯಯವಾದರೆ, ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಅಂಶ ಬಳಕೆಯಾಯ್ತು. ಬಜೆಟ್ನಲ್ಲಿ ಅರುಣ್ಜೇಟ್ಲಿ ಸುಮಾರು 4 ಲಕ್ಷಕೋಟಿ ರೂಪಾಯಿಗಳನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟದ್ದು ಇದೇ ಧೈರ್ಯದ ಮೇಲೆ. ಇತ್ತೀಚೆಗೆ ಮೋದಿ ಭಾರತಮಾಲಾ ಯೋಜನೆಗೆ 7 ಲಕ್ಷಕೋಟಿ ಮೀಸಲಿಟ್ಟರಲ್ಲ ಅದೂ ಇದರದೇ ಭರವಸೆಯ ಮೇಲೆ. ಇನ್ನು ಮುಂದೆ ಇದು ಕಷ್ಟವಾಗಲಿದೆ. ತೈಲದ ಮೇಲಿನ ಸುಂಕ ಒಂದು ರೂಪಾಯಿ ಕಡಿಮೆಯಾದರೂ ದೇಶದ ಬೊಕ್ಕಸಕ್ಕೆ 13 ಸಾವಿರ ಕೋಟಿ ರೂಪಾಯಿಯಷ್ಟು ಆದಾಯ ಕೊರತೆಯಾಗುವುದಂತೆ. 2016 ರಲ್ಲಿ ತೈಲದ ಮೇಲಿನ ಅಬಕಾರಿ ತೆರಿಗೆಯಿಂದ ಸುಮಾರು ಒಂದೂವರೆ ಲಕ್ಷಕೋಟಿಯಷ್ಟು ಆದಾಯ ಬಂದಿತ್ತು. ಭಾರತದ ಒಟ್ಟಾರೆ ಅಬಕಾರಿ ಆದಾಯದ ಅರ್ಧದಷ್ಟು ತೈಲದಿಂದಲೇ ಬರುವಂಥದ್ದು! ಈಗ ತೈಲ ಬೆಲೆಯನ್ನು ನಿಯಂತ್ರಣದಲ್ಲಿರಿಸಲು ತೆರಿಗೆಯನ್ನು ಕಡಿಮೆ ಮಾಡಲೇಬೇಕು ಮತ್ತು ಇದು ಮಹತ್ವಾಕಾಂಕ್ಷಿ ಯೋಜನೆಗೆ ಬೇಕಾದ ಮೂಲ ಧನದಲ್ಲೂ ಕಡತ ಉಂಟು ಮಾಡಿಸುವುದು ನಿಸ್ಸಂಶಯ! ಇದು ವಿಕಾಸದ ಕಲ್ಪನೆಯೇ ಇಲ್ಲದ ಕಾಂಗ್ರೆಸ್ಸಿಗರಿಗೆ ತೊಂದರೆ ಇಲ್ಲ ಎನಿಸಬಹುದೇನೋ? ಮೋದಿಯಂತಹ ಸದಾ ವಿಕಾಸದ ಆಲೋಚನೆಯ ವ್ಯಕ್ತಿಗೆ ಚಿಂತೆಯ ವಿಷಯವಂತೂ ಹೌದು.

ಇನ್ನೂ ಸಹಜವಾಗಿಯೇ ತೈಲ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಏರುತ್ತದೆ. ಆಮದು ವೆಚ್ಚ ಏರುತ್ತದೆ. ಜಿಎಸ್ಟಿಯ ವಿರೋಧೀ ಅಲೆಗೆ ಇದೂ ಒಂದು ಸೇರ್ಪಡೆಯಾಗುತ್ತದೆ. ಮೂರುವರೆ ವರ್ಷದಲ್ಲಿ ಹಗಲು ರಾತ್ರಿಗಳನ್ನು ಒಂದು ಮಾಡಿ ಮೋದಿಯವರು ಮಾಡಿದ್ದ ಸಾಧನೆಯೆಲ್ಲವನ್ನೂ ನುಂಗಿ ಬಿಡುತ್ತದೆ ಇದು. ಅದಕ್ಕೇ ಆರಂಭದಲ್ಲಿ ಹೇಳಿದ್ದು. ಈ ಬಾರಿ ಭಾರತಕ್ಕೊಂದು ಸವಾಲು ಅಂತ. ಅದಾಗಲೇ ಕಾಂಗ್ರೆಸ್ಸು ತಾನು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯ ಮಂತ್ರಿಗಳ ಮೂಲಕ ತೈಲವನ್ನು ಜಿಎಸ್ಟಿ ಅಡಿಯಲ್ಲಿ ತರಬೇಕೆಂದು ಆಗ್ರಹಿಸುತ್ತಿದೆ. ಇದೊಂದು ಬಗೆಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ. ಹಾಗಾದರೆ ತೈಲದ ಮೇಲಿನ ಇತರೆ ಸುಂಕಗಳನ್ನು ಹೇರಲಾಗದೆಂದು ಅರಿವಿದೆ ಅದಕ್ಕೆ. ಆ ಹಣದಕ್ಕದೇ ಬೆಳವಣಿಗೆಯ ದರವೂ ಕುಂಠಿತವಾಗಲಿ ಅಂತ ಅದರ ಬಯಕೆ. 2019 ರ ಚುನಾವಣೆಗೆ ಒಂದಷ್ಟು ಆರೋಪಗಳನ್ನು ಮಾಡುವ ಕಾತುರತೆ ಇದೆ ಅದಕ್ಕೆ.

4

ಹಾಗಂತ ಎಲ್ಲವೂ ಮುಗಿದು ಹೋಗಿಲ್ಲ. ಒಂದು ಮೂಲದ ಪ್ರಕಾರ ಅಮೇರಿಕಾ, ಸೌದಿ ಮತ್ತು ಇಸ್ರೇಲುಗಳು ಜೊತೆಯಾಗಿ ಇರಾನನ್ನು ಮಟ್ಟ ಹಾಕಲು ಯೋಜನೆ ರೂಪಿಸುತ್ತಿದೆಯಂತೆ. ಹಾಗೇನಾದರೂ ಆದರೆ ಮತ್ತೊಂದು ಕದನ ಮತ್ತಷ್ಟು ಹೋರಾಟ. ಸೌದಿಯನ್ನು ಮಟ್ಟ ಹಾಕಲು ಷಿಯಾ ರಾಷ್ಟ್ರಗಳಿಗೆ ಇರುವ ಏಕೈಕ ಉಪಾಯ ತೈಲ ಬೆಲೆಯನ್ನು ಇಳಿಸುವುದು ಮಾತ್ರ! ಅದು ಮಾತ್ರ ತಮಗೆ ವರದಾನವಾಗಬಹುದು. ಅಷ್ಟರೊಳಗೆ ಭಾರತದ ನಗರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ವಿದ್ಯುತ್ಚಾಲಿತ ಕಾರುಗಳಿಗೆ ಬೇಡಿಕೆ ಉಂಟಾದರೆ ಬಹಳ ಒಳಿತಾಗಲಿದೆ. ಒಂದಂತೂ ಸತ್ಯ. ಹೆಚ್ಚು ಹೆಚ್ಚು ತೈಲ ಬಳಸಿ ಮುಸಲ್ಮಾನ ರಾಷ್ಟ್ರಗಳಿಗೆ ಲಾಭ ಮಾಡಿಕೊಡುತ್ತಿದ್ದೇವೆಂದರೆ ಅದರರ್ಥ ಭಯೋತ್ಪಾದನೆಗೆ ಹೆಚು ಹೆಚ್ಚು ಹಣ ವ್ಯಯವಾಗುತ್ತದೆ ಅಂತ. ಬರಲಿರುವ ನಾಲ್ಕಾರು ವರ್ಷಗಳಲ್ಲಿ ತೈಲದ ಮೇಲಿನ ಈ ನಿರ್ಭರತೆಯನ್ನು ಕಡಿಮೆ ಮಾಡುತ್ತ ಪಯರ್ಾಯಕ್ಕೆ ಮೊರೆ ಹೋದರೆ ಬಹುಶಃ ಭಾರತ ಅನೇಕ ಸಮಸ್ಯೆಗಳಿಂದ ಮುಕ್ತವಾಗಬಹುದು. ಮೋದಿ ಅಧಿಕಾರಕ್ಕೆ ಬರುವ ಮುನ್ನ ಅಂತಹುದೊಂದು ಆಲೋಚನೆಯೂ ಸಾಧ್ಯವಾಗುತ್ತಿರಲಿಲ್ಲ ಏಕೆಂದರೆ ನಿತ್ಯದ ಬಳಕೆಗೇ ವಿದ್ಯುತ್ತು ಕೊರತೆ ಇತ್ತು ಆಗ. ಆದರೆ ಈಗ ನಾವು ಆ ಕ್ಷೇತ್ರದಲ್ಲಿ ಸ್ವಾವಲಂಬಿತನ ಸಾಧಿಸಿದ್ದೇವೆ. ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೂ ನಾವೇ ನಿಂತೆವೆಂದರೆ ಅದು ಇನ್ನೂ ಬಲ ತುಂಬಬಲ್ಲುದು. ಇಡಿಯ ದೇಶ ಈಗ ಆ ದಿಕ್ಕಿನಲ್ಲಿ ಯೋಚಿಸಬೇಕು. ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿರೋದು ಈಗಲೇ. ನರೇಂದ್ರ ಮೋದಿಯವರಂತಹ ನಾಯಕ ಆಗಾಗ ಬರಲಾರ. ಅದು ಅಪರೂಪಕ್ಕೊಮ್ಮೆ ಸಿದ್ಧಿಸುವ ರತ್ನ. ಬಿಡಬಾರದಷ್ಟೇ. ಗುಜರಾತಿನ ಚುನಾವಣೆ ಈ ನಿಟ್ಟಿನಲ್ಲಿ ಬಲು ದೊಡ್ಡ ಪರೀಕ್ಷೆ, ನರೇಂದ್ರ ಮೋದಿಗಲ್ಲ ಬದಲಿಗೆ ನಾವು ಭಾರತದ ವಿಕಾಸದೊಟ್ಟಿಗೆ ನಡೆಯುವೆವಾ ಎಂಬುದಕ್ಕೆ. ಫಲಿತಾಂಶ ಹೇಗೆ ಬರಬಹುದೋ ನೋಡೋಣ!!

Leave a Reply