ವಿಭಾಗಗಳು

ಸುದ್ದಿಪತ್ರ


 

ಎರಡನೇ ಹಂತದ ಕ್ವಿಟ್ ಇಂಡಿಯಾಗೆ ಇದು ಸಕಾಲ…

ಇಷ್ಟಕ್ಕೂ ಇವರು ಕಟ್ಟಿಕೊಟ್ಟ ಸುಳ್ಳು ಇತಿಹಾಸದ ಪ್ರಭಾವ ಅದೇನು ಗೊತ್ತೇ? ರಾಮ ಮಂದಿರದ ಕುರಿತಂತೆ ಸುನ್ನಿ ವಕ್ಫ್ ಬೋಡರ್್ ಕೋಟರ್್ನಲ್ಲಿ ದಾವೆ ಹೂಡಿದಾಗ ಅದಕ್ಕೆ ಬೇಕಾದ ಎಲ್ಲ ಹೇಳಿಕೆಗಳನ್ನು ಸಿದ್ಧಪಡಿಸಿದ ಈ ಬುದ್ಧಿಜೀವಿಗಳು ತಾವೇ ಬರೆದ ಇತಿಹಾಸಗ್ರಂಥಗಳಿಂದ ಸಾಕ್ಷಿಗಳನ್ನೂ ಒದಗಿಸಿದರು. ಈ ಗ್ರಂಥಗಳಿಗೆ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ನ ಅನುಮೋದನೆ ಇದ್ದುದರಿಂದ ನ್ಯಾಯಾಲಯವೂ ಈ ಸಾಕ್ಷಿಗಳನ್ನು ಒಪ್ಪಿಕೊಳ್ಳಲೇಬೇಕು! ಇತ್ತೀಚೆಗೆ ಕನರ್ಾಟಕದಾದ್ಯಂತ ಟಿಪ್ಪೂ ಜಯಂತಿಗೆ ಬುದ್ಧಿಜೀವಿಗಳು ಸಾಕ್ಷಿಸಮೇತ ಆತುಕೊಂಡರಲ್ಲ ಎಲ್ಲವೂ ಹುಟ್ಟಿದ್ದು ಈ ಸಾಹಿತ್ಯ ‘ರತ್ನ’ಗಳಿಂದಲೇ!

India_Flags_Reuters

1964ರ ಮಾತು. ಹೌರಾ ರೇಲ್ವೇ ನಿಲ್ದಾಣದಲ್ಲಿ ಆತ್ಮರಕ್ಷಣೆಗೆಂದು ಪೊಲೀಸರು ನೆರೆದಿದ್ದವರ ಮೇಲೆ ಗುಂಡು ಹಾರಿಸಿದ್ದರು. ಮರುದಿನವೇ ಕಮ್ಯುನಿಸ್ಟ್ ವಿದ್ಯಾಥರ್ಿ ಪಡೆ ತಮ್ಮ ಶಕ್ತಿ ಪ್ರದರ್ಶನದ ತಹತಹದಿಂದಲೇ ಬೀದಿಗಿಳಿದವು. ಸಕರ್ಾರದ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದವು. ಸಕರ್ಾರದ ವಿರುದ್ಧ, ಶಿಕ್ಷಣ ವ್ಯವಸ್ಥೆಯ ವಿರುದ್ಧ ಘೋಷಣೆ ಕೂಗಿದವು. ಅದರ ಜೊತೆಗೇ ಚೀನಾದೊಂದಿಗೆ ಗಡಿ ತಂಟೆ ನಿವಾರಿಸಿಕೊಳ್ಳಿರೆಂದು ಆಗ್ರಹಿಸಿದವು. ಚೀನಾದೊಂದಿಗೆ ಯುದ್ಧ ಮಾಡಲೇಬಾರದೆಂದು ದನಿಯೇರಿಸಿದ್ದಲ್ಲದೇ ಮಾವೋ ತ್ಸೆ ತುಂಗನಿಗೆ ಜಯಘೋಷ ಹಾಕಿದರು ವಿದ್ಯಾಥರ್ಿಗಳು. ಅದೇ ದಿನ ಚೀನೀ ಸೈನಿಕರು ಗಡಿ ಭಾಗದ ನಾಥುಲಾದಲ್ಲಿದ್ದ ಭಾರತೀಯ ಸೈನಿಕರ ಮೇಲೆ ಶೆಲ್ಲಿಂಗ್ ನಡೆಸಿ ರಕ್ತದ ಓಕುಳಿಯಾಡುತ್ತಿದ್ದರು!
2016. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಾಕೀಸ್ತಾನದ ಪರ ಘೋಷಣೆಗಳು ಮೊಳಗುತ್ತಿದ್ದವು. ಭಾರತ ತುಂಡರಿಸುವ ಬೆದರಿಕೆ ಒಡ್ಡುತ್ತಿದ್ದರು ಕಮ್ಯುನಿಸ್ಟ್ ಉಗ್ರಗಾಮಿಗಳು. ಅದೇ ಹೊತ್ತಲ್ಲಿ ಸಿಯಾಚಿನ್ನಲ್ಲಿ ಹಿಮಪಾತಕ್ಕೆ ಸಿಲುಕಿ ಒಂಭತ್ತು ಸೈನಿಕರು ಶವವಾಗಿದ್ದರು; ಹನುಮಂತಪ್ಪ ಒಂದು ಔನ್ಸ್ ಆಮ್ಲಜನಕಕ್ಕಾಗಿ ಹಪಹಪಿಸುತ್ತಿದ್ದ.
ಸೈನಿಕರ ದೇಶಭಕ್ತಿ, ಹರಿದ ರಕ್ತ ಇವ್ಯಾವುವೂ ಕಮ್ಯುನಿಸ್ಟ್ ನಾಯಕರಿಗೆ, ಇತಿಹಾಸಕಾರರಿಗೆ, ಪತ್ರಕರ್ತರಿಗೆ, ಸೋಗುಲಾಡಿ ಬುದ್ಧಿಜೀವಿಗಳಿಗೆ ವಿಷಯವೇ ಅಲ್ಲ. ಅವರು ಕಾಲಕ್ಕೆ ತಕ್ಕಂತೆ ಬಳುಕುತ್ತ, ಹಳೆಯದನ್ನು ಮುಚ್ಚಿಡುತ್ತ ಸಾಗುವ ಅವಕಾಶವಾದಿಗಳು ಅಷ್ಟೇ. ಕಳೆದ ಆರೇಳು ದಶಕಗಳಲ್ಲಿ ಬೋಧಿಸಿದ ಸಿದ್ಧಾಂತಕ್ಕಿಂತ ಬಲು ದೂರ ನಿಂತು ಬಡವರನ್ನು ಕಡು ಬಡವರನ್ನಾಗಿಸಿ ತಾವು ಮಾತ್ರ ಸಿರಿವಂತರಾಗಿ ಮೆರೆದ ಅನೇಕ ಉದಾಹರಣೆಗಳಿವೆ. ಪ್ರಾಮಾಣಿಕತೆಯ ಬೊಂಬಡ ಬಜಾಯಿಸುವ ಕಮ್ಯುನಿಸ್ಟ್ ವಿಚಾರಧಾರೆಯ ಇತಿಹಾಸಕಾರರು ಕೇಂದ್ರ ಸಕರ್ಾರದಿಂದ ದೊಡ್ಡ ದೊಡ್ಡ ಮೊತ್ತದ ಯೋಜನೆಗಳನ್ನು ಪಡಕೊಂಡು ಪೂರೈಸದೇ ಬಿಟ್ಟಿರುವ ಸಂಗತಿ ದಶಕದ ಹಿಂದೆಯೇ ಬೆಳಕಿಗೆ ಬಂತು.
ಇವಕ್ಕೆಲ್ಲಾ ಮೂಲ ಕಾರಣ ಮೊದಲ ಪ್ರಧಾನಿ ನೆಹರೂರವರೇ. ಹೊರನೋಟಕ್ಕೆ ಗಾಂಧೀಜಿಯ ಹಿಂದ್ ಸ್ವರಾಜ್ನ ವಕ್ತಾರರಂತೆ ಮಾತನಾಡುತ್ತಿದ್ದ ನೆಹರೂ ಆಂತರ್ಯದಲ್ಲಿ ರಷ್ಯಾದ ಆರಾಧಕರಾಗಿದ್ದರು. 1936ರಲ್ಲಿ ಲಖ್ನೋದ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡುತ್ತ ತಮ್ಮ ಅಂತರಾಳವನ್ನು ತೋಡಿಕೊಂಡಿದ್ದರು ಕೂಡ. ‘ಭವಿಷ್ಯ ಬಲು ಆಶಾದಾಯಕವಾಗಿದೆಯೆಂದರೆ ರಷ್ಯಾ ಮಾಡಿರುವ ಕೆಲಸಗಳಿಂದಾಗಿ ಮಾತ್ರ. ಯಾವುದೇ ಜಾಗತಿಕ ಅನಾಹುತಗಳು ನಡೆಯಲಿಲ್ಲವೆಂದಾದಲ್ಲಿ ಈ ಹೊಸ ನಾಗರಿಕತೆ ಜಗತ್ತಿಗೆಲ್ಲಾ ಹಬ್ಬಿ ಯುದ್ಧಗಳಿಗೆ ಮತ್ತು ಬಂಡವಾಳಶಾಹಿಗಳಿಂದ ಉಂಟಾದ ಸಮಸ್ಯೆಗಳಿಗೆ ಮಂಗಳ ಹಾಡಲಿದೆ’ ಎಂದಿದ್ದರು. ಅವರು ಪ್ರಧಾನ ಮಂತ್ರಿಯಾದ ನಂತರ ಪಂಚವಾಷರ್ಿಕ ಯೋಜನೆಗಳನ್ನು ಆರಂಭಿಸಿದರಲ್ಲ ಅದು ರಷ್ಯಾದ ಸಾರಾಸಗಟು ನಕಲೇ. ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದೊಡನೆ ಅಧಿಕಾರಿಗಳಾದಿಯಾಗಿ ಕೆಲವರೇ ಕುಳಿತು ರೂಪಿಸುವ ಯೋಜನೆಗಳ ಆಯೋಗಕ್ಕಿಂತ ಭಿನ್ನವಾದ ಮುಖ್ಯಮಂತ್ರಿಗಳೂ ಸೇರುವ ನೀತಿ ಆಯೋಗದ ಕಲ್ಪನೆ ತಂದದ್ದು ಅದಕ್ಕೇ.
ಇರಲಿ. ಅದು ಬೇರೆಯದೇ ಚಚರ್ೆ. ನೆಹರೂ ಸ್ವಲ್ಪ ರಷ್ಯಾದೆಡೆಗೆ ಹೆಚ್ಚು ಬಾಗಿದ್ದರಿಂದ ಅವಕಾಶವಾದಿಗಳಾಗಿದ್ದ ಕಮ್ಯುನಿಸ್ಟರು ನೆಹರೂ ಸುತ್ತಲೂ ಜಮಾಯಿಸಿಬಿಟ್ಟರು. ಪರಿಣಾಮವೇನು ಗೊತ್ತೇ? ನೆಹರೂಗೆ ಆಪ್ತರಾಗಿದ್ದ, ಬಾಬು ರಾಜೇಂದ್ರ ಪ್ರಸಾದರೊಂದಿಗೂ ಮಿತೃತ್ವ ಹೊಂದಿದ್ದ, ಸ್ವತಃ ಕಾಂಗ್ರೆಸ್ಸಿಗರಾಗಿದ್ದ, ಗಾಂಧಿ ಚಿಂತನ ಶೈಲಿ ಹೊಂದಿದ್ದ ಆರ್.ಸಿ ಮಜುಂದಾರ್ರಂತಹ ಶ್ರೇಷ್ಠ ಇತಿಹಾಸಕಾರರೂ ಕೃತಿ ರಚನೆಯಿಂದ ದೂರವುಳಿಯಬೇಕಾಯಿತು. ಆಮೇಲೆ ಶುರುವಾಯಿತು ತಿರುಚಿದ ಇತಿಹಾಸ ಪರ್ವ!
ಇತಿಹಾಸದ ಕಾಲಗರ್ಭದಲ್ಲಿ ತಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಂಡರು. ಅವುಗಳಿಗೂ ತಮಗನ್ನಿಸಿದ ಬಣ್ಣ ಬಳಿದರು. ಸುಳ್ಳು ಹೇಳಿದರಷ್ಟೇ ಅಲ್ಲ; ಸಕರ್ಾರದ ಬೊಕ್ಕಸಕ್ಕೆ ಕನ್ನವನ್ನೂ ಹಾಕಿದರು. ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಅಂತೂ ಈ ಸುಳ್ಳುಗಾರರು ಲೂಟಿ ಮಾಡಲೆಂದೇ ಕಟ್ಟಿಕೊಂಡ ಸಂಸ್ಥೆ. ಯೋಜನೆಗಳ ಹೆಸರು ಹೇಳಿ ಹಣ ಪಡೆಯುವುದು. ಅದನ್ನು ಪೂರ್ಣ ಗೊಳಿಸದೇ ಹಾಗೇ ಬಿಟ್ಟುಬಿಡುವುದು. ಕೆಲವೊಮ್ಮೆ ಒಂದೇ ಯೋಜನೆಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದಲೂ ಹಣ ಪೀಕುವ ತಾಕತ್ತಿದ್ದವರು ಇವರೆಲ್ಲ. ಇಂತಹ ಬೇನಾಮಿ ಚಟುವಟಿಕೆಗಳಿಗೆ ಇವರಿಗೆಲ್ಲ ಅಡ್ಡಾ ಜೆಎನ್ಯು!

kannur-model
ಪಾಂಡಿತ್ಯದ ಹೆಸರಲ್ಲಿ ಇವರು ಮಾಡಿರುವ ಮೋಸಗಳು ಎಂಥೆಂಥವು ಗೊತ್ತೇನು? ಇತಿಹಾಸ ಅನುಸಂಧಾನ ಪರಿಷತ್ ಅಡಿಯಲ್ಲಿ ಭಾಷಾಂತರ ಯೋಜನೆಗೆ ಭಾರೀ ಪ್ರಚಾರ ಕೊಡಲಾಯಿತು. ಭಾರತೀಯ ಭಾಷೆಗಳಲ್ಲಿದ್ದ ಇತಿಹಾಸ ಗ್ರಂಥಗಳನ್ನು ಇತರೆ ಭಾಷೆಗಳಿಗೆ ತಜರ್ುಮೆ ಮಾಡಿಸುವ ಬಲು ಮಹತ್ವದ ಯೋಜನೆ ಅದು. ಅದಕ್ಕೊಂದು ಸಮಿತಿ ರಚಿಸಲಾಯಿತು. ಅದಕ್ಕೆ ಆಯ್ಕೆಯಾದವರು ಮತ್ತೆ ಅದೇ ಜನ. ಸತೀಶ್ ಚಂದ್ರ, ರೋಮಿಲ್ಲಾ ಥಾಪರ್, ಎಸ್ ಗೋಪಾಲ್ ಮುಂತಾದವರು. ಆಗ ಪರಿಷತ್ನ ಅಧ್ಯಕ್ಷರಾಗಿದ್ದವರು ಆರ್.ಎಸ್. ಶಮರ್ಾ. ಎಲ್ಲರೂ ಸೇರಿ ಅನುವಾದಕ್ಕೆ ಆಯ್ದುಕೊಂಡ ಪುಸ್ತಕಗಳಾವುವು ಗೊತ್ತೇ? ‘ಅವರವರದ್ದೇ’. ಹೌದು. ಒಬ್ಬರು ಮತ್ತೊಬ್ಬರ ಪುಸ್ತಕ ಹೆಸರಿಸೋದು, ಒಂದಷ್ಟು ಜನ ಅನುಮೋದಿಸೋದು. ಹೀಗೆ ಮಾಡಿ ಅಷ್ಟೂ ಯೋಜನೆಯ ಮೂಲಕ ತಮ್ಮವೇ ಕೃತಿಗಳು ಎಲ್ಲೆಡೆ ರಾರಾಜಿಸುವಂತೆ ಮಾಡಿಕೊಂಡದ್ದಲ್ಲದೇ ‘ಅನುವಾದ ಹಕ್ಕು’ ಎಂಬ ಖಾತೆಯಲ್ಲಿ ಸಾವಿರಾರು ರೂಪಾಯಿಗಳನ್ನು ಲೂಟಿಗೈದುಬಿಟ್ಟರು!
ಈ ನಿರ್ಲಜ್ಜ ಪರಂಪರೆಯನ್ನು ಅನೇಕ ವಿಶ್ವವಿದ್ಯಾಲಯಗಳಲ್ಲಿ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಒಬ್ಬನೇ ಪ್ರೊಫೆಸರ್ ಗೆ ತುಂಬಾ ಪ್ರಶಸ್ತಿಗಳು ಬರುತ್ತವೆಂದರೆ ಆತ ಶೈಕ್ಷಣಿಕವಾಗಿ ಬುದ್ಧಿವಂತನೇ ಆಗಿರಬೇಕಿಲ್ಲ. ಪ್ರಶಸ್ತಿ ಆಯ್ಕೆ ಸಮಿತಿಯ ಪ್ರಮುಖರನ್ನು ಕರೆಸಿ ವಿಶ್ವ ವಿದ್ಯಾಲಯದಲ್ಲಿ ಫೈವ್ ಸ್ಟಾರ್(!) ಗೌರವ ಕೊಟ್ಟು ಕಳಿಸಿದರಾಯ್ತು. ಪ್ರಶಸ್ತಿ ಖಾತ್ರಿ. ಖಚರ್ೂ ವಿಶ್ವವಿದ್ಯಾಲಯದ ತಲೆಯ ಮೇಲೆ! ಬೆಪ್ಪುತಕ್ಕಡಿಗಳು ತೆರಿಗೆ ಕಟ್ಟಿದ ನಾವು ಮಾತ್ರ.
ಕಳೆದ ಎನ್ಡಿಎ ಸಕರ್ಾರದ ಅವಧಿಯಲ್ಲಿ ಅರುಣ್ ಶೌರಿ ಸಕರ್ಾರಿ ಕಡತಗಳನ್ನು ತರಿಸಿಕೊಂಡು ಅಧ್ಯಯನ ಮಾಡಿ ಈ ಕಮ್ಯುನಿಸ್ಟ್ ಚಿಂತಕರ ಬಂಡವಾಳ ಬಯಲು ಮಾಡಿದರು. ಅವರ ಕೃತಿ ‘ಎಮಿನೆಂಟ್ ಹಿಸ್ಟಾರಿಯನ್ಸ್’ಗೆ ಉತ್ತರಿಸುವ ಬೆನ್ನು ಮೂಳೆಯೂ ಯಾರಿಗೂ ಇರಲಿಲ್ಲ. ಈಗ ಈ ಹಳೆಯ ಕಡತಗಳೆಲ್ಲ ಹೊದ್ದಿದ್ದ ಧೂಳನ್ನು ಕೊಡವಿಕೊಂಡು ಮತ್ತೆ ಸಿದ್ಧವಾಗಿವೆ. ಮಾತಾಡಿದರೆ ಇವರ ಮೋಸ ವಂಚನೆಗಳು ಅಧಿಕೃತವಾಗಿ ಬಯಲಿಗೆ ಬಂದುಬಿಡುತ್ತವೆ. ಅದಕ್ಕೆಂದೇ ಇಡಿಯ ಇತಿಹಾಸ ಅನುಸಂಧಾನ ಪರಿಷತ್ತಿನ ಸಲಹಾ ಮಂಡಳಿಯನ್ನು ಬಖರ್ಾಸ್ತುಗೊಳಿಸಿದ ಮೇಲೂ ಇವರುಗಳು ತುಟಿ ಬಿಚ್ಚದೇ ಕುಳಿತಿದ್ದಾರೆ. ಅವರು ಸೃಷ್ಟಿಸಿದ್ದ ಖೆಡ್ಡಾದಲ್ಲಿ ಅವರೇ ಬಿದ್ದು ಹೊರಳಾಡುತ್ತಿದ್ದಾರೆ!
ಇಷ್ಟಕ್ಕೂ ಇವರು ಕಟ್ಟಿಕೊಟ್ಟ ಸುಳ್ಳು ಇತಿಹಾಸದ ಪ್ರಭಾವ ಅದೇನು ಗೊತ್ತೇ? ರಾಮ ಮಂದಿರದ ಕುರಿತಂತೆ ಸುನ್ನಿ ವಕ್ಫ್ ಬೋಡರ್್ ಕೋಟರ್್ನಲ್ಲಿ ದಾವೆ ಹೂಡಿದಾಗ ಅದಕ್ಕೆ ಬೇಕಾದ ಎಲ್ಲ ಹೇಳಿಕೆಗಳನ್ನು ಸಿದ್ಧಪಡಿಸಿದ ಈ ಬುದ್ಧಿಜೀವಿಗಳು ತಾವೇ ಬರೆದ ಇತಿಹಾಸಗ್ರಂಥಗಳಿಂದ ಸಾಕ್ಷಿಗಳನ್ನೂ ಒದಗಿಸಿದರು. ಈ ಗ್ರಂಥಗಳಿಗೆ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ನ ಅನುಮೋದನೆ ಇದ್ದುದರಿಂದ ನ್ಯಾಯಾಲಯವೂ ಈ ಸಾಕ್ಷಿಗಳನ್ನು ಒಪ್ಪಿಕೊಳ್ಳಲೇಬೇಕು! ಇತ್ತೀಚೆಗೆ ಕನರ್ಾಟಕದಾದ್ಯಂತ ಟಿಪ್ಪೂ ಜಯಂತಿಗೆ ಬುದ್ಧಿಜೀವಿಗಳು ಸಾಕ್ಷಿಸಮೇತ ಆತುಕೊಂಡರಲ್ಲ ಎಲ್ಲವೂ ಹುಟ್ಟಿದ್ದು ಈ ಸಾಹಿತ್ಯ ‘ರತ್ನ’ಗಳಿಂದಲೇ!
ಇವರುಗಳೆಲ್ಲ ಮಾಡಿದ ಒಂದೇ ತಪ್ಪೇನು ಗೊತ್ತೇ? ಜೆಎನ್ಯುನಲ್ಲಿನ ದೇಶದ್ರೋಹಿಗಳ ಸಮರ್ಥನೆಗೆ ನಿಂತಿದ್ದು. ಇದು ಇಡಿಯ ದೇಶವನ್ನು ಕೆರಳಿಸಿ ಬೀದಿಗಿಳಿಯುವಂತೆ ಮಾಡಿತು. ಅದರಲ್ಲೂ ಸಿಯಾಚಿನ್ ಭೂಮಿಯಲ್ಲಿ ಹುತಾತ್ಮರಾದ ಸೈನಿಕರ ರಕ್ತ ಬೆಚ್ಚಗಾಗಿಸುವ ಕಥನಗಳು ಹರಿದಾಡುತ್ತಿದ್ದಾಗ ದೇಶ ತುಂಡರಿಸುವ ಮಾತಾಡಿದ್ದನ್ನು ದೇಶ ಸಹಿಸಲೇ ಇಲ್ಲ. ಮೊದಲ ಬಾರಿಗೆ ಕಮ್ಯುನಿಸ್ಟರ ಪದಪ್ರಯೋಗಗಳು ಕೆಲಸಕ್ಕೆ ಬರಲಿಲ್ಲ. ಆಕ್ರಮಣಕಾರಿ ನೀತಿಯಿಂದಾಗಿ ಎದುರಾಳಿಗಳನ್ನು ಬೆಚ್ಚಿ ಬೀಳಿಸುತ್ತಿದ್ದ ಈ ಬುದ್ಧಿವಂತರು ಈಗ ದೇಶದ್ರೋಹಿಗಳೆಂಬ ಹಣೆಪಟ್ಟಿ ಕಳಚಿಕೊಳ್ಳಲು ಹೆಣಗಾಡುವಂತಾಯ್ತು. ಅಲ್ಲಿಯವರೆಗೂ ಎದೆಯೊಳಗೆ ದೇಶಭಕ್ತಿಯ ಉರಿಯನ್ನು ಹೊತ್ತೂ ಬಾಯ್ಮುಚ್ಚಿಕೊಂಡಿದ್ದ ಕೆಲವು ಪತ್ರಕರ್ತರಿಗೆ ಈಗ ಜೀವ ಬಂತು. ದೇಶದ ಪರವಾಗಿ ಮಾಧ್ಯಮಗಳಲ್ಲಿ ಚಚರ್ೆ ಶುರುವಾಯ್ತು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿಯುವಲ್ಲಿ ಬಲು ನಿಸ್ಸೀಮರಾದ ಕಮ್ಯುನಿಸ್ಟರು ತೆಪ್ಪಗಾಗಿ ಪಕ್ಕ ಸರಿದರು.
ಅವರಿಗೆ ಈ ರೀತಿಯ ಹಿನ್ನೆಡೆ ಹೊಸತೇನಲ್ಲ ಮತ್ತು ಅದರಿಂದ ನಾಚಿಕೆಯೂ ಅವರಿಗೆ ಆಗುವುದಿಲ್ಲ. ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿ. ದ್ವಿತೀಯ ಮಹಾಯುದ್ಧದ ಸಂದರ್ಭಗಳನ್ನು ಒಮ್ಮೆ ನೆನಪಿಸಿಕೊಳ್ಳಿ.
ಜರ್ಮನಿಯಲ್ಲಿ ಅಧಿಕಾರಕ್ಕೇರಿದ ಹಿಟ್ಲರನ ನಾಝಿ ಪಕ್ಷ ಬಲಿಷ್ಠ ಸೈನಿಕ ಶಕ್ತಿಯಾಗಿ ಬೆಳೆದು ನಿಂತಿತು. ಈಗ ಆತ ಜರ್ಮನಿಯ ಜನ ಎಲ್ಲೆಲ್ಲಿ ನೆಲೆಸಿದ್ದಾರೋ ಆ ಭೂಮಿಯೆಲ್ಲಾ ತನಗೆ ಸೇರಿದ್ದು ಎನ್ನಲಾರಂಭಿಸಿದ್ದ. ತನ್ನ ದೇಶದೊಳಗಿದ್ದ ಯಹೂದ್ಯರನ್ನು ಹೊರಗಟ್ಟಿದ, ಬರ್ಬರವಾಗಿ ಕೊಂದ. ಅವನ ಅಷ್ಟೂ ಕೋಪ ಜಗತ್ತಿನಲ್ಲೆಲ್ಲಾ ತಮ್ಮ ವಸಾಹತುಗಳ ಮೂಲಕ ವಿಸ್ತಾರಗೊಂಡಿರುವ ಇಂಗ್ಲೆಂಡು ಮತ್ತು ಫ್ರಾನ್ಸಿನ ಮೇಲಿತ್ತು. ರಷ್ಯಾದ ಸವರ್ಾಧಿಕಾರಿ ಸ್ಟಾಲಿನ್ಗೂ ಈ ಎರಡೂ ದೇಶಗಳ ಮೇಲೆ ಬಂಡವಾಳಷಾಹಿ ರಾಷ್ಟ್ರವೆಂಬ ಕಾರಣಕ್ಕೆ ಒಳಗೊಳಗೇ ದ್ವೇಷವಿತ್ತು. ಸಹಜವಾಗಿಯೇ ಕ್ರೂರಿಗಳಿಬ್ಬರೂ ಜೊತೆಯಾದರು. ರಷ್ಯಾ ಜರ್ಮನಿಯ ವಿಸ್ತರಣಾವಾದವನ್ನು ವಿರೋಧಿಸದಿರುವ ನಿಧರ್ಾರ ಮಾಡಿಕೊಂಡಿತಲ್ಲದೇ ಯುದ್ಧಾನಂತರ ಇಂಗ್ಲೆಂಡು-ಫ್ರಾನ್ಸುಗಳನ್ನು ಹಂಚಿಕೊಳ್ಳುವ ಒಳ ಒಪ್ಪಂದವನ್ನೂ ಮಾಡಿಕೊಂಡಿತು! ಈ ಒಪ್ಪಂದದ ಪ್ರಕಾರವಾಗಿ ರಷ್ಯಾ ಬಾಲ್ಟಿಕ್ ಗಣರಾಜ್ಯಗಳ ಮೇಲೆ ಅಧಿಕಾರ ಸ್ಥಾಪಿಸಿ ಸ್ವಾತಂತ್ರ್ಯಪ್ರಿಯ ಜನಾಂಗವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಈ ಪರಿಯ ಕ್ರೂರ ಇತಿಹಾಸ ಹೊಂದಿರುವ ಈ ಮಾಕ್ಸರ್್ ಪಂಥೀಯರು ಕಾಶ್ಮೀರದ ಕುರಿತು ನಮಗೆ ಬುದ್ಧಿವಾದ ಹೇಳುತ್ತಾರೆನ್ನುವುದೇ ಹಾಸ್ಯಾಸ್ಪದ!

indian-communist
ಯೂರೋಪಿನಲ್ಲಿ ಎರಡನೇ ಮಹಾಯುದ್ಧ ಆರಂಭವಾದಂತೆ ಭಾರತದ ಬಿಳಿಯರ ಸಕರ್ಾರವೂ ಏಕಪಕ್ಷೀಯ ನಿಧರ್ಾರ ಕೈಗೊಂಡು ಭಾರತದ ಬೆಂಬಲ ಘೋಷಿಸಿಬಿಟ್ಟವು. ಅನೇಕರು ಇದನ್ನು ವಿರೋಧಿಸಿ ಇಂತಹ ಪ್ರತಿಕೂಲ ಸಂದರ್ಭದಲ್ಲಿಯೇ ಬಿಳಿಯರೆದುರಾಗಿ ಆಂದೋಲನ ನಡೆಸಿ ಸ್ವಾತಂತ್ರ್ಯ ಕಸಿದುಬಿಡಬೇಕೆಂದು ಆಗ್ರಹಿಸಿದರು. ಎಲ್ಲೆಡೆ ದಂಗೆ, ಅಸಹಕಾರದ ಮೂಲಕ ಬ್ರಿಟೀಷರಿಗೆ ತಲೆನೋವಾಗಬೇಕೆಂದು ಬಯಸಿದರು. ಗಾಂಧೀಜಿ ಇದನ್ನೂ ವಿರೋಧಿಸಿ ಕಠಿಣ ಕಾಲದಲ್ಲಿ ನಾವು ಜೊತೆಯಾಗಿ ನಿಲ್ಲೋಣವೆಂದರು.
ಮಾಕ್ಸರ್್ವಾದಿಗಳ ದೇಶಪ್ರೇಮ ಉಕ್ಕೇರಿಬಿಟ್ಟಿತ್ತಲ್ಲ. ಅವರು ಗಾಂಧೀಜಿಯನ್ನು ಧಿಕ್ಕರಿಸಿದರು. ವೀರಾವೇಶದ ಮಾತುಗಳನ್ನಾಡಿದರು. ಭಾರತದ ಸ್ವಾತಂತ್ರ್ಯ ಸಮರ ತೀವ್ರಗೊಳಿಸಬೇಕೆಂಬ ನಿರ್ಣಯವನ್ನೂ ಕೈಗೊಂಡರು. ಸತ್ಯ ಸಂಗತಿ ಏನು ಗೊತ್ತಾ? ರಷ್ಯಾ ಜರ್ಮನಿಯ ಪರವಾಗಿ ನಿಂತಿದ್ದರಿಂದ ಇಲ್ಲಿನ ಕಮ್ಯುನಿಸ್ಟರು ಇಂಗ್ಲೇಂಡ್ ವಿರೋಧಿಗಳಾಗಿದ್ದರಷ್ಟೇ.
ಕಾಲ ಬದಲಾಯ್ತು. ಹಿಟ್ಲರ್ ಮೊದಲೆರಡು ವರ್ಷ ಮಾರಣ ಹೋಮವನ್ನೇ ನಡೆಸಿ ಜಗತ್ತಿನ ಒಡೆಯನಾಗುವ ದುರಹಂಕಾರದಿಂದ ಮೆರೆಯುತ್ತಿದ್ದ. ಅದರಿಂದಾಗಿಯೇ ರಷ್ಯಾವನ್ನೂ ಎದುರುಹಾಕಿಕೊಂಡುಬಿಟ್ಟ. ಖಾಲಿಯಾಗುತ್ತಿರುವ ತನ್ನ ಪೆಟ್ರೋಲು ದಾಸ್ತಾನನ್ನು ತುಂಬಿಸಿಕೊಳ್ಳಲು ಇರಾನಿಗೆ ಮಾರ್ಗ ಹುಡುಕಿದ ಆತ ದಾರಿಯ ನಡುವೆ ಇರುವ ರಷ್ಯಾದ ಮೇಲೂ ದಾಳಿಗೈದ. ಈಗ ರಷ್ಯಾ ತಿರುಗಿ ಬಿತ್ತು.
ಸರಿಯಾಗಿ ಇಲ್ಲಿ ಆಗ ‘ದೇಶ ಬಿಟ್ಟು ತೊಲಗಿ’ ಎಂಬ ಚಳುವಳಿ ಕೈಗೆತ್ತಿಕೊಳ್ಳುವ ಚಚರ್ೆ ತೀವ್ರ ಹಂತಕ್ಕೆ ಮುಟ್ಟಿತ್ತು. ಅಲ್ಲಿಯವರೆಗೂ ಸ್ವಾತಂತ್ರ್ಯ ಸಮರವೆನ್ನುತ್ತಿದ್ದ ಮಾಕ್ಸರ್್ ಬಾಲಂಗೋಚಿಗಳು ಈಗ ತಿರುಗಿ ನಿಂತರು. ಸ್ವತಃ ರಷ್ಯಾ ಇಂಗ್ಲೆಂಡಿನ ಬೆಂಬಲಕ್ಕೆ ಬಂದುದರಿಂದ ಇಲ್ಲಿನ ಎಡಚರು ದೇಶದ ವಿರುದ್ಧವೇ ನಿಂತುಬಿಟ್ಟಿದ್ದರು. ಅವರಿಗೀಗ ಜಪಾನಿನ-ಸಿಂಗಾಪುರದ ನೆಲದಲ್ಲಿ ನಿಂತು ಕಾದಾಡುತ್ತಿದ್ದ ಸುಭಾಷ್ ಚಂದ್ರ ಬೋಸರು ಕೀಳಾಗಿ ಕಂಡರು. ತಮ್ಮ ಪತ್ರಿಕೆಯಲ್ಲಿ ಬೋಸರನ್ನು ಜಪಾನಿನ ಪ್ರಧಾನಿಯನ್ನು ಹೊತ್ತ ಕತ್ತೆಯಾಗಿ ಚಿತ್ರಿಸಿ, ನಾಯಿಯಾಗಿ ತೋರಿಸಿ ಆಕ್ರೋಶ ತೀರಿಸಿಕೊಂಡರು. ಬ್ರಿಟೀಷ್ ಕಮ್ಯುನಿಸ್ಟ್ ಪಕ್ಷದ ಫಿಲಿಪ್ ಸ್ಟ್ರ್ಯಾಟ್ ಜರ್ಮನಿ ವಿರುದ್ಧದ ಹೋರಾಟವನ್ನು ಬೆಂಬಲಿಸಬೇಕೆಂದು ಕಳಿಸಿದ ಸೂಚನಾಪತ್ರವನ್ನು ಬ್ರಿಟಿಷ್ ಅಧಿಕಾರಿ ಸರ್ ರೆಜಿನಾಲ್ಡ್ ಮ್ಯಾಕ್ಸ್ವೆಲ್ ರು ತಲುಪಿಸಿದ ನಂತರ ಈ ಬದಲಾವಣೆ ಬಂದಿತ್ತು!
ಹಾಗೆ ಏಕಾಏಕಿ ತಮ್ಮ ನಿಯಮ ಬದಲಾಯಿಸಿಕೊಂಡರಲ್ಲ ಈ ಮಾಕ್ಸರ್್ವಾದಿಗಳು ಅವರಿಗೆ ಅವತ್ತು ನಾಚಿಕೆಯಾಗಿತ್ತೆಂದು ಭಾವಿಸಿದಿರೇನು? ಖಂಡಿತ ಇಲ್ಲ. ಅವರಿಗೆ ಧೈರ್ಯವಿದ್ದೇ ಇತ್ತು. ಇತಿಹಾಸವನ್ನು ತಿರುಚುವ ಕಲೆ ಗೊತ್ತಿರುವುದರಿಂದ ಮುಂದೊಮ್ಮೆ ಈ ಪುಟಗಳನ್ನೂ ಮರೆಮಾಚಿದರಾಯ್ತು ಅಂತ!
ಬ್ರಿಟೀಷರ ಪರವಾಗಿ ಕೆಲಸ ಮಾಡಲು ದ್ವಿತೀಯ ಮಹಾಯುದ್ಧದ ಹೊತ್ತಲ್ಲಿ ದಿನವೊಂದಕ್ಕೆ ಒಂದುಲಕ್ಷ ರೂಪಾಯಿ ಹಣವನ್ನು ಪಡೆದ ಮಹಾಭೂಪರಿವರು.
ಮತ್ತೇನು ಹೇಳುವುದು ಬಾಕಿ ಇದೆ ಹೇಳಿ? ವಿದೇಶದ ದೊರೆಗಳಿಂದ ಆಜ್ಞೆಯನ್ನು ಪಡೆದು, ಅವರಿಂದಲೇ ದೇಶ ಚೂರಾಗಿಸಲು ಹಣವನ್ನೂ ಪಡೆಯುವ ಜನ ಇವರು. ಈಗಲೂ ಅದನ್ನೇ ಮುಂದುವರೆಸುತ್ತಿದ್ದಾರೆ ಅಷ್ಟೇ. ಅದಕ್ಕೇ ಎರಡನೇ ಹಂತದ ಕ್ವಿಟ್ ಇಂಡಿಯಾ ಚಳವಳಿ ಶುರುವಾಗಬೇಕಿರೋದು. ಭಾರತವನ್ನು ಗೌರವಿಸಲಾಗದ, ಒಟ್ಟೂ ಸ್ವರೂಪದಲ್ಲಿ ನೋಡಲಾಗದ ಜನ ಈ ದೇಶವನ್ನು ಬಿಟ್ಟು ಹೊರಡಬಹುದು ಎನ್ನಲು ಇದು ಸಕಾಲ. ಹೌದಲ್ಲವೇ?

Leave a Reply