ವಿಭಾಗಗಳು

ಸುದ್ದಿಪತ್ರ


 

ಎರಡು ವರ್ಷ! ಎಷ್ಟೊಂದು ದಂಗೆಗಳು!!

ನಾವು ಶತ್ರುವೆಂದು ಯಾರ ವಿರುದ್ಧವೋ ಕಾದಾಡುತ್ತಲೇ ಇರುತ್ತೇವೆ. ಆದರೆ ಹಿಂದೆ ಕುಳಿತ ಒಂದಷ್ಟು ಬುದ್ಧಿವಂತರು ದೇಶ ಒಡೆಯುವಲ್ಲಿ ಯಶಸ್ಸು ಪಡೆಯುತ್ತಲೇ ಇರುತ್ತಾರೆ. ಅಲ್ಲವೇನು ಮತ್ತೆ? ದಲಿತರು-ಮೇಲ್ವರ್ಗದವರು ಗುದ್ದಾಡುತ್ತಿರುತ್ತಾರೆ; ದನದ ಹೆಸರಲ್ಲಿ ಹಿಂದೂ-ಮುಸಲ್ಮಾನರ ಕಾಳಗ. ದ್ರಾವಿಡ-ಆರ್ಯವೆಂಬ ಕದನದಲ್ಲಿ ಮಗ್ನರಾದ ಉತ್ತರ ಮತ್ತು ದಕ್ಷಿಣ ಭಾರತ; ಸ್ತ್ರೀವಾದ, ಮನುವಾದಗಳ ಹೆಸರಲ್ಲಿ ಶರಂಪರ ಕಿತ್ತಾಡುವ ಪ್ರಗತಿಪರ-ಸಂಪ್ರದಾಯವಾದಿಗಳು. ಛೇ! ಪಶ್ಚಿಮದಲ್ಲಿ ಕುಳಿತು ಸೂತ್ರದ ಗೊಂಬೆಯಂತೆ ನಮ್ಮನ್ನಾಡಿಸುತ್ತಿರುವ ಕೆಲವೇ ಮಂದಿ ಅದೆಷ್ಟು ವಿಷ ಬೀಜಗಳನ್ನು ಬಿತ್ತಿ ಬೆಳೆ ತೆಗೆಯುತ್ತಿದ್ದಾರೆ.

 

‘ಭಾರತೀಯ ಎಂಬ ಅಭಿಮಾನವೇ ಇಡಿಯ ದೇಶವನ್ನು ಏಕರಸವಾಗಿ ಬಂಧಿಸಿಬಿಟ್ಟಿದೆ. ‘ವಿವಿಧತೆಯಲ್ಲಿ ಏಕತೆ’ಯನ್ನು ಪ್ರದಶರ್ಿಸುತ್ತ ಭಾರತ ಇಂದು ಒಂದು ಶಕ್ತಿಯಾಗಿ ತನ್ನನ್ನು ಬಿಂಬಿಸಿಕೊಳ್ಳುತ್ತದೆ. ಭಾರತದ ಏಕತೆಗೆ ಅನುಕೂಲವಾಗಿರುವ ಈ ಅಂಶಗಳೇ ಕ್ರಿಶ್ಚಿಯನ್ ಮತಪ್ರಚಾರಕ್ಕೆ ಬಾಧಕವಾಗಿವೆ’ ಇದು 2000ನೇ ಇಸವಿಯಲ್ಲಿ ‘ಲೌಸೆನ್ ಕಮಿಟೀ ಫಾರ್ ವಲ್ಡರ್್ ಇವ್ಯಾಂಜಲಿಸಂ’ ಎಂಬ ಸಂಸ್ಥೆಯ ಸೆಮಿನಾರಿನಲ್ಲಿ ಮಂಡಿಸಲಾಗಿರುವ ಪ್ರಬಂಧದ ಸಾಲುಗಳು. ‘ಧಾಮರ್ಿಕ ಘರ್ಷಣೆಗಳು ಮತ್ತು ಧಾಮರ್ಿಕ ಯುದ್ಧ’ ಎಂಬ ಈ ಸೆಮಿನಾರಿಗೆ ಮತಾಂತರದ ಯೋಜನೆಗಳನ್ನು ರೂಪಿಸುವ 60 ಮುಖ್ಯ ವ್ಯಕ್ತಿಗಳನ್ನೂ ಅಹ್ವಾನಿಸಲಾಗಿತ್ತು. ಏನು ವಿಚಿತ್ರ? ಆಧ್ಯಾತ್ಮಿಕತೆ ಭೇದಗಳನ್ನು, ಭಿನ್ನಾಭಿಪ್ರಾಯಗಳನ್ನು ಮೀರಿ ನಿಂತು ಆತ್ಮ ಶಾಂತಿಗೆ ಕಾರಣವಾಗಬೇಕೆಂದು ಭಾರತ ಪ್ರತಿಪಾದಿಸಿದರೆ ಅದನ್ನೇ ಮುಂದಿಟ್ಟುಕೊಂಡು ಯುದ್ಧ ಸಾರುವ ತಯಾರಿ ಕ್ರಿಶ್ಚಿಯನ್ ಮಿಶನರಿಗಳದ್ದು. ಆಚರಣೆಗಳಲ್ಲಿನ ಭಿನ್ನತೆಗಳನ್ನು ಮುಂದಿಟ್ಟುಕೊಂಡೇ ಹಿಂದೂ ಧರ್ಮದೊಂದಿಗೆ ಯುದ್ಧಸಾರುವ ಪ್ರಯತ್ನ ಅವರದ್ದು. ಈ ಹಿನ್ನೆಲೆಯಲ್ಲಿಯೇ ಅವರು ಹಿಂದೂ ದೇವತೆಗಳ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಶುರುಮಾಡಿದ್ದು.

cbn_700club_bobjones_150604a-Edit-800x430

ಪ್ಯಾಟ್ ರಾಬಟರ್್ಸನ್ ಅನ್ನೋ ಹೆಸರು ಕೇಳಿದ್ದೀರಾ? ಅಮೇರಿಕನ್ ಟೀವಿ ಜಗತ್ತಿನ ಬಲು ದೊಡ್ಡ ಹೆಸರು. ಕ್ರಿಶ್ಚಿಯನ್ ಬ್ರಾಡ್ಕಾಸ್ಟಿಂಗ್ ನೆಟ್ವಕರ್್ನ ಮಾಲಿಕ. ತನ್ನ ಕ್ರಿಶ್ಚಿಯನ್ ಮೂಲಭೂತವಾದವನ್ನು ಜನರ ನಡುವೆ ಬಿತ್ತಲು ಶುರುಮಾಡಿದವ ಈತ. ಇವನಿಗಾಗಿಯೇ ‘ಟೆಲಿವಾಂಜಲಿಸ್ಟ್’ ಎಂಬ ಹೊಸ ಪದಪ್ರಯೋಗವೂ ಶುರುವಾಯಿತು. ಚಚರ್ುಗಳ ಉದ್ದೇಶವನ್ನು ಜನರಿಗೆ ನಯವಾಗಿ ಮುಟ್ಟಿಸುವಲ್ಲಿ ಎತ್ತಿದ ಕೈ ಇವನದ್ದು. ದೇವರು ತನ್ನೊಂದಿಗೆ ಮಾತನಾಡುತ್ತಾನೆಂದು ಹೇಳಿ ಅನೇಕ ಬಾರಿ ನಗೆಪಾಟಲಿಗೀಡಾದವನೂ ಇವನೇ. ತನ್ನ ಕಾರ್ಯಕ್ರಮಗಳಲ್ಲಿ ಈತ ಹಿಂದೂದೇವತೆಗಳನ್ನು ರಾಕ್ಷಸರೆಂಬಂತೆ ಚಿತ್ರಿಸುತ್ತಾನೆ. ಗಂಗೆ ಶಿವನ ವೀರ್ಯವೆಂಬಂತೆಯೂ ಅದರಲ್ಲಿ ಸ್ನಾನ ಮಾಡಿ ಪಾಪ ತೊಳೆದುಕೊಳ್ಳುವ ಹಿಂದೂಗಳ ಕುರಿತಂತೆ ಅಪಹಾಸ್ಯ ಮಿಶ್ರಿತ ವಿಡಿಯೋ ಮಾಡಿ ಪ್ಯಾಟ್ ಸಾಕಷ್ಟು ಸುದ್ದಿಯಾಗಿದ್ದ. ಅಲ್ಲಿಗೇ ನಿಲ್ಲಿಸದೇ ಆತ ಭಾರತದ ಎಲ್ಲಾ ಸಮಸ್ಯೆಗಳಿಗೂ ಮೂತರ್ಿಪೂಜೆಯೇ ಕಾರಣ ಎನ್ನುತ್ತಾನೆ. ಇಲ್ಲಿನ ಜನರು ಭಗವಂತನ ವಾಣಿಯ ಪ್ರಕಾರ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು. ಅದಕ್ಕೇ ಭಾರತದಲ್ಲಿ ಇಷ್ಟು ಪ್ರಮಾಣದ ಶೋಷಣೆ ಸಂಭವಿಸುತ್ತಿದೆ ಎಂಬುದು ಅವನ ವಾದ. (ಕ್ರಿಶ್ಚಿಯನ್ನರಿಗೆ ಎರಡು ಬಲು ಇಷ್ಟವಾದ ಪದ. ಒಂದು ಪಾಪ ಮತ್ತೊಂದು ಶಾಪ! ಪಾಪ ಮಾಡಲು ಅವರ ಭಗವಂತನೇ ಪ್ರಚೋದನೆ ಕೊಡುತ್ತಾನೆ ಆಮೇಲೆ ಅವನೇ ಶಾಪವನ್ನೂ ಕೊಡುತ್ತಾನೆ. ಬಲು ವಿಸ್ಮಯ!)
ಪ್ಯಾಟ್ ರಾಬಟರ್್ಸನ್ ಥರದವರು ಚಚರ್ಿನ ವಾದಗಳನ್ನು ಅಮೇರಿಕನ್ನರ ಮುಂದಿರಿಸುತ್ತಾರೆ. ಬಹುದೇವತಾವಾದದಿಂದ ನರಳುತ್ತಿರುವ ಭಾರತದ ಕೋಟ್ಯಂತರ ಜನರ ಕುರಿತಂತೆ ಅಮೇರಿಕನ್ನರಿಗೆ ಅನುಕಂಪ ಉದಿಸುತ್ತದೆ. ಈ ಜನರನ್ನು ಈ ಸಂಕೋಲೆಯಿಂದ ಪಾರುಮಾಡಿ ಕ್ರಿಸ್ತನನ್ನು ಅಪ್ಪಿಕೊಳ್ಳುವಂತೆ ಮಾಡಲು ನಿಧಿ ಸಂಗ್ರಹವಾಗುತ್ತದೆ. ಅವೆಲ್ಲ ಭಾರತಕ್ಕೆ ಭಿನ್ನ ಭಿನ್ನ ಎನ್.ಜಿ.ಓಗಳ ಮೂಲಕ ಹರಿಯುತ್ತದೆ. ಈ ರೀತಿ ಕ್ರಿಶ್ಚಿಯನ್ ಹಣದಿಂದ ಉಪಕೃತರಾದವರು ಇಲ್ಲಿಯೂ ಹಿಂದೂ ದೇವ-ದೇವಿಯರ ಅವಹೇಳನಕ್ಕೆ ನಿಲ್ಲುತ್ತಾರೆ. ರಾಮ-ಕೃಷ್ಣರ ಕುರಿತಂತೆ ಪ್ರಶ್ನೆಗಳನ್ನೆತ್ತುತ್ತಾರೆ.
ಜೆಎನ್ಯುನಲ್ಲಿ ಕಳೆದ ದುಗರ್ಾಷ್ಟಮಿಯಲ್ಲಿ ಮಹಿಷಾಸುರನ ಪೂಜೆ ನಡೆದಾಗಲೂ ಅದರ ಹಿಂದಿದ್ದ ಕೈವಾಡ ಇದೇ. ದುಗರ್ೆಯನ್ನು ಅತ್ಯಂತ ಕೀಳು ಹೆಣ್ಣುಮಗಳಂತೆ ಚಿತ್ರಿಸಿ ಮಹಿಷಾಸುರನೊಂದಿಗೆ ಅನೇಕ ತಿಂಗಳ ರತಿಸುಖ ಅನುಭವಿಸಿ ಅವನನ್ನೇ ಕೊಂದವಳೆಂದು ಹೇಳಲಾಯಿತು. ಶ್ರೇಷ್ಠ ರಾಜ ಮಹಿಷಾಸುರನನ್ನು ಕೊಂದ ಆರ್ಯರ ಯೋಜನೆ ಇದೆಂದು ಜನಮಾನಸದಲ್ಲಿ ವಿಷ ಬಿತ್ತುವ ಯತ್ನ ಮಾಡಲಾಯಿತು. ಬೌದ್ಧಿಕ ವಲಯದೊಳಗೆ ಇದು ವಿವಾದವಿಲ್ಲದೇ ಒಪ್ಪಿಗೆ ಪಡೆದರೆ, ಮುಂದಿನ ದಿನಗಳಲ್ಲಿ ಅವರೇ ಭಿನ್ನ ಭಿನ್ನ ಮಾಧ್ಯಮಗಳ ಮೂಲಕ ಜನರನ್ನು ಒಪ್ಪಿಸುತ್ತಾರೆ. (ಈ ರಾಕ್ಷಸ ಸಂತಾನಗಳು ಜೆಎನ್ಯುನಲ್ಲಿ ಮಾತ್ರವಲ್ಲ ಕನರ್ಾಟಕದಲ್ಲೂ ಇದ್ದಾವೆ. ಚಾಮುಂಡಿ ಉತ್ಸವದಂದು ಮಹಿಷಾಸುರನ ಗುಣಗಾನ ಮಾಡಿ ಜನರಲ್ಲಿ ಗೊಂದಲವೆಬ್ಬಿಸಲು ಯತ್ನಿಸುತ್ತವೆ) ಈ ದೇವತಾ ಪೂಜೆಗಳೆಲ್ಲ ಕಾಲಕ್ರಮದಲ್ಲಿ ನಿಂತುಹೋದರೆ ಭಾರತದ ಏಕತೆಯ ಹಂದರ ಕುಸಿದು ಬೀಳುತ್ತದೆ, ಆನಂತರ ಮತಾಂತರ ತನ್ಮೂಲಕ ರಾಷ್ಟ್ರಾಂತರ ಬಲು ಸುಲಭ!
ಈ ಎಲ್ಲಾ ಕಾರ್ಯಕ್ಕೆ ಮಿಶನರಿಗಳಿಗೆ ಮುಖವಾಡ ಯಾರು ಗೊತ್ತೇ? ‘ದಲಿತರು’.

dp1
2014ರಲ್ಲಿ ಜೆಎನ್ಯುನಲ್ಲಿ ಮಹಿಷಾಸುರ ಬಲಿದಾನ ದಿವಸದ ಆಚರಣೆ ಮಾಡಿದ್ದು ಆಲ್ ಇಂಡಿಯಾ ಬ್ಯಾಕ್ವಡರ್್ ಸ್ಟೂಡೆಂಟ್ಸ್ ಫೋರಂ. ತಮ್ಮ ತಲೆಯಲ್ಲಿ ಹುಟ್ಟಿಕೊಂಡ ಚಿಂತನೆಯನ್ನು ದಲಿತರಲ್ಲಿ ವಿಷಬೀಜವಾಗಿ ಬಿತ್ತಿ ಅವನ್ನು ವಿಸ್ತಾರವಾಗಿ ಅರಳಿಸುವ ಪ್ರಯತ್ನ ಪಶ್ಚಿಮದ ಮತಪ್ರಚಾರಕರದ್ದು. ದಲಿತರನ್ನು ಮುಂದಿಟ್ಟುಕೊಂಡು ನಡೆಯುವ ಹೋರಾಟಕ್ಕೆ ಭಾರತದಲ್ಲಿ ಪ್ರತಿರೋಧ ಬಲುಕಡಿಮೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಈ ಕಾರಣಕ್ಕಾಗಿಯೇ ಜೆಎನ್ಯುನಲ್ಲಿ ಕೇಳಿ ಬಂದ ರಾಷ್ಟ್ರವಿರೋಧಿ ಘೋಷಣೆಗಳ ವಿರುದ್ಧ ಭಾರತೀಯರೆಲ್ಲ ಒಟ್ಟಾಗಿ ಏಕತೆಯ ಮಂತ್ರ ಜಪಿಸುತ್ತಿದ್ದಾರೆಂದು ಗೊತ್ತಾದೊಡನೆ ಎಡ ಪಕ್ಷಗಳು, ಕಾಂಗ್ರೆಸ್ಸು, ಆಮ್ಆದ್ಮಿಗಳೆಲ್ಲ ರೋಹಿತ್ ವೇಮುಲನಿಗೆ ಶರಣಾಗಿದ್ದು. ರಾಷ್ಟ್ರದ ಮೂಲೆಮೂಲೆಗಳಲ್ಲಿ ಭಾರತದ ಅಖಂಡತೆಯ ಅಂತಧ್ರ್ವನಿ ಮಹಾಪ್ರವಾಹವಾಗುವುದನ್ನು ತಡೆಯಲು ಅವರಿಗಿದ್ದ ಏಕೈಕ ಅಸ್ತ್ರ ರೋಹಿತ್ ವೇಮುಲ ಮಾತ್ರ. ವಿದ್ಯಾಥರ್ಿಯೊಬ್ಬನ ಸಾವನ್ನು ದಲಿತನ ಸಾವು ಎಂದದ್ದಲ್ಲದೇ ಅದನ್ನಿಟ್ಟುಕೊಂಡು ಈ ದೇಶವನ್ನು ಮೇಲ್ವರ್ಗ, ಕೆಳವರ್ಗವೆಂದು ನಿಚ್ಚಳವಾಗಿ ವಿಭಜಿಸುವ ಈ ಯೋಜನೆ ಇದೆಯಲ್ಲ ಇದೂ ಬಹುಮುಖ್ಯ ಷಡ್ಯಂತ್ರವೇ!

feb06-lead1
2005ರಲ್ಲಿ ಅಮೇರಿಕಾದ ಕ್ಯಾಲಿಫೋನರ್ಿಯಾದಲ್ಲಿ 6ನೇ ತರಗತಿಯ ಪಠ್ಯಕ್ಕೆ ಸಂಬಂಧಿಸಿದಂತೆ ಬಲುದೊಡ್ಡ ವಿವಾದ ಭುಗಿಲೆದ್ದಿತು. ಇತಿಹಾಸದ ಪಠ್ಯದಲ್ಲಿ ಹಿಂದೂ ಧರ್ಮದ ಕುರಿತಂತೆ ಅವಹೇಳನಕಾರಿಯಾಗಿ ಮಂಡಿಸಲಾಗಿದೆಯೆಂದು ವೇದಿಕ್ ಫೌಂಡೇಶನ್ ಮತ್ತು ಹಿಂದೂ ಎಜುಕೇಶನ್ ಫೌಂಡೇಶನ್ಗಳು ದನಿಯೆತ್ತಿದವು. ಯಹೂದ್ಯರು ಮತ್ತು ಮುಸಲ್ಮಾನರೂ ಕೂಡ ಇದೇ ಸಂದರ್ಭದಲ್ಲಿ ತಮ್ಮ ಮತಕ್ಕೆ ಸಂಬಂಧಿಸಿದಂತೆ ಕೂಗಾಡಿದ್ದರು. ಅವರುಗಳು ಬಲು ಜೋರಾದ ದನಿಯಲ್ಲಿ ತಮ್ಮ ಕುರಿತಂತೆ ಮಾಡಿದ ಅವಹೇಳನಕಾರಿ ಅಂಶಗಳನ್ನು ಮಂಡಿಸಿ ಪುಸ್ತಕದಿಂದ ಹೊರತೆಗೆಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಹಿಂದೂಗಳು ಪಟ್ಟಿ ಮಾಡಿ ಕೊಟ್ಟ ಅಂಶಗಳನ್ನು ಪಠ್ಯಪುಸ್ತಕ ಸಮಿತಿ ಒಪ್ಪಿಕೊಳ್ಳಬೇಕೆಂದಿರುವಾಗಲೇ ಹಾರ್ವಡರ್್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರೊಫೆಸರ್ ಮೈಕಲ್ ವಿಟ್ಜೆಲ್ ಅಡ್ಡಬಾಯಿ ಹಾಕಿದ. ಹಿಂದುತ್ವದ ಬಗ್ಗೆ ಅಧಿಕೃತವಾಗಿ ಮಾತನಾಡುವ ಅಧಿಕಾರ ತನಗಿದೆಯೆಂಬಂತೆ ವಿಚಾರ ಮಂಡಿಸಿದ. ಜಗತ್ತಿನ 47 ರಾಷ್ಟ್ರಗಳ ಶಿಕ್ಷಣತಜ್ಞರು ಅವನ ಪ್ರತಿಭಟನೆಯ ಪತ್ರಕ್ಕೆ ಸಹಿ ಹಾಕಿದರು. (ಜೆಎನ್ಯುನಲ್ಲಿ ವಿದ್ಯಾಥರ್ಿಗಳನ್ನು ಬೆಂಬಲಿಸಿ ಜಾಗತಿಕ ಶಿಕ್ಷಣತಜ್ಞರು ಸಹಿ ಹಾಕಿದ್ದು ನೆನಪಿಸಿಕೊಳ್ಳಿ) ಇವುಗಳ ನಡುವೆ ಅವನ ಸಹಾಯಕ್ಕೆ ಬಲವಾಗಿ ನಿಂತಿದ್ದು ದಲಿತ್ ಫ್ರೀಡಂ ನೆಟ್ವಕರ್್ (ಡಿಎಫ್ಎನ್) ಎಂಬ ಅಂತರರಾಷ್ಟ್ರೀಯ ಸಂಸ್ಥೆ.

DFN
ಟ್ವಿಸ್ಟ್ ಇರೋದು ಇಲ್ಲೇ. ಆಗ ಡಿಎಫ್ಎನ್ನ ಅಧ್ಯಕ್ಷನಾಗಿದ್ದವ ಭಾರತದ ದಲಿತ ಮುಖಂಡನಲ್ಲ. ಬದಲಿಗೆ ಆಲ್ ಇಂಡಿಯಾ ಕ್ರಿಶ್ಚಿಯನ್ ಕೌನ್ಸಿಲ್ನ(ಎಐಸಿಸಿ) ಅಧ್ಯಕ್ಷನೂ ಆಗಿದ್ದ ಡಾ|| ಜೋಸೆಫ್ ಡಿಸೋಜಾ! ಆಲ್ ಇಂಡಿಯಾ ಕ್ರಿಶ್ಚಿಯನ್ ಕೌನ್ಸಿಲ್ ಅಂದರೆ ಕ್ರಿಶ್ಚಿಯನ್ನರ ಉದ್ದಾರಕ್ಕಾಗಿ ಇರುವ ಸಂಸ್ಥೆ ಎಂದು ನೀವು ಭಾವಿಸಿದರೆ ಅಕ್ಷರಶಃ ತಪ್ಪು. ಅದು ಕ್ರಿಶ್ಚಿಯನ್ನರು, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಾಗುವ ದೌರ್ಜನ್ಯ ನಿವಾರಣೆಗೆ ಕಟಿಬದ್ಧವಾಗಿರುವ ಸಂಸ್ಥೆಯಂತೆ. ಸಕರ್ಾರದ ಮೇಲೆ ನೇರವಾಗಿ ಹಿಡಿತ ಹೊಂದಿರುವ ಅಮೇರಿಕದಿಂದ ಚಾಲಿತ 1998ರಲ್ಲಿ ಸ್ಥಾಪಿತ ಸಂಘಟನೆ ಇದು. ಆನಂತರದ ದಿನಗಳಲ್ಲಿ ರೂಪುಗೊಂಡ ಕಾರ್ಯ ಯೋಜನೆಯಂತೆ ಭಾರತದಲ್ಲಿನ ಚಚರ್ಿನ ಚಟುವಟಿಕೆಗಳಿಗೆ ‘ದಲಿತ’ ಎಂಬ ಸಂಕೇತವನ್ನು ಗುರಾಣಿಯಾಗಿ ಬಳಸಲು ನಿಶ್ಚಯಿಸಿ ಡಿಎಫ್ಎನ್ನ್ನು ಹುಟ್ಟುಹಾಕಲಾಯಿತು. ಜೋಸೆಫ್ ಡಿಸೋಜಾ ಸ್ವತಃ ತಾನೇ ಇದರ ಚುಕ್ಕಾಣಿ ಹಿಡಿದರೆ, ಮಿಶನರಿಯಾಗಿ ಸಾಕಷ್ಟು ಕೆಲಸ ಮಾಡಿದ್ದ ನ್ಯಾನ್ಸಿ ರಿಕ್ಸ್ ಜೊತೆಗಿದ್ದರು. ನಿದರ್ೇಶಕರಾಗಿದ್ದವರ್ಯಾರೂ ಕಡಿಮೆಯವರಲ್ಲ. ಒಬ್ಬರಿಗಿಂತ ಒಬ್ಬರು ಕ್ರಿಸ್ತ ಚಿಂತನೆಗಳನ್ನು ಪ್ರಭಾವಿಯಾಗಿ ಮುಟ್ಟಿಸಲೆಂದೇ ಹುಟ್ಟಿದವರು. ಜೋಸೇಫರೇ ಹೇಳಿಕೊಂಡಿರುವಂತೆ ಈ ಸಂಘಟನೆ ಎಐಸಿಸಿಯನ್ನೂ ಮೀರಿ ಜಾಗತಿಕವಾಗಿ ಬೆಳೆದುಬಿಟ್ಟಿತು. ಅಮೇರಿಕದಲ್ಲಿ ಇದರ ಪ್ರಭಾವ ಎಷ್ಟು ತೀವ್ರವಾಯಿತೆಂದರೆ ಕ್ಯಾಲಿಫೋನರ್ಿಯಾದ ಪುಸ್ತಕ ಗಲಾಟೆಯ ವೇಳೆಗೆ ಡಿಎಫೆನ್ನ ಈ ಕ್ರಿಶ್ಚಿಯನ್ನರು ಭಾರತದ ದಲಿತರ ಪ್ರತಿನಿಧಿ ಎಂದೇ ವ್ಯವಹರಿಸಿ ಹಿಂದೂಗಳ ಸದ್ದಡಗಿಸುವ ಪ್ರಯತ್ನ ಮಾಡಿದರು. ಡಿಎಫ್ಎನ್ಗೆ ವಿಶೇಷ ಬೆಲೆ ತಂದುಕೊಡಲೆಂದೇ ಅದರ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಭಾರತದಿಂದ ಉಪನ್ಯಾಸಕಾರರನ್ನು, ಚಳವಳಿಕಾರರನ್ನು ಕರೆಸಿ ಸನ್ಮಾನ ಮಾಡಿಸಲಾಯ್ತು; ಭಾರತದ ದಲಿತರ ಸ್ಥಿತಿಗತಿಗಳ ಕುರಿತಂತೆ ಮನಕಲುಕುವ ಮಾತನಾಡಿಸಿ ಡಿಎಫ್ಎನ್ನ ಚಟುವಟಿಕೆಗಳನ್ನು ಸಮಥರ್ಿಸಲಾಯಿತು. ಇವುಗಳಿಂದ ಡಿಎಫ್ಎನ್ ಭಾರತದಲ್ಲಿ ದಲಿತರ ವಿಮೋಚನೆಗೆಂದು ಇರುವ ಬಲವಾದ ಸಂಘಟನೆಯೆಂದು ಚಚರ್ುಗಳು ಮತ್ತು ಅಮೇರಿಕಾ ಸಕರ್ಾರ ದೃಢವಾಗಿ ನಂಬಿತು. ಅವರ ಮೂಲಕ ಅಪಾರ ಪ್ರಮಾಣದ ಹಣ ಭಾರತದೆಡೆಗೆ ಹರಿಯತೊಡಗಿತು. ಭಾರತೀಯ ಕ್ರಿಶ್ಚಿಯನ್ನರಾದ ಸೇನಲ್ ಎಡಮಾರುಕನಂಥವರು ಇದನ್ನು ಪ್ರತಿಭಟಿಸಿ ‘ಆಲ್ ಇಂಡಿಯಾ ಕಾನ್ಫರೆನ್ಸ್ ಆಫ್ ಷೆಡ್ಯೂಲ್ಡ್ ಕಾಸ್ಟ್ ಅಂಡ್ ಟ್ರೈಬ್ಸ್ ಮುವ್ವತ್ತು ಲಕ್ಷಕ್ಕೂ ಹೆಚ್ಚು ಸದಸ್ಯರ ಸಂಸ್ಥೆ. ಆದರೆ ಇದನ್ನು ಹಿಂದಿನಿಂದ ಆಡಿಸುವುದು ಹಣಕಾಸು ಒದಗಿಸುವುದು ಮಾತ್ರ ಎಐಸಿಸಿಯೇ’ ಎಂದು ನೋವು ತೋಡಿಕೊಂಡಿದ್ದರು. ನಾಯಕರುಗಳಿಗೆ ಹಣ, ಪ್ರಶಸ್ತಿ, ವಿದೇಶ ಪ್ರವಾಸಗಳ ಭಾಗ್ಯ ದೊರೆಯಿತು.
ಹ್ಞಾ ಅಂದಹಾಗೆ! ದಲಿತ ಚಳವಳಿಗಾರ ಎಂದು ಕರೆಸಿಕೊಳ್ಳಲ್ಪಡುವ ಕಂಚ ಈಳಯ್ಯನವರಿಗೆ ಡಿಎಫ್ಎನ್ ಪೋಸ್ಟ್ ಡಾಕ್ಟರೇಟ್ ಫೆಲೋಶಿಪ್ ಕೊಟ್ಟು ಗೌರವಿಸಿತು! ಈಗ ಒಂದೊಂದನ್ನೂ ತಳುಕು ಹಾಕಿ ನೋಡಿ. ಮೂತರ್ಿ ಪೂಜೆ ವಿರೋಧಿಸಿ ಬೌದ್ಧಿಕ ವಲಯದಲ್ಲಿ ಉತ್ಪಾತ ಉಂಟುಮಾಡಿದ ರಾಮ್ ಮೋಹನ್ ರಾಯರಿಗೆ ಬ್ರಿಟೀಷರು ‘ರಾಜಾ’ ಎಂಬ ಬಿರುದಿನಿಂದ ಸನ್ಮಾನಿಸುತ್ತಾರೆ. ಅರುಂಧತಿ ರಾಯ್ ದೇಶ ವಿರೋಧಿ ಸಂಗತಿಗಳಲ್ಲಿ ನಾಯಕಿಯಾಗಿ ಬಿಂಬಿತಗೊಳ್ಳಲು ಬೂಕರ್ ಪ್ರಶಸ್ತಿಯ ಒಡತಿಯಾಗುತ್ತಾಳೆ. ಭಾರತವನ್ನು ಸ್ಲಂಗಳ ಆಗರವೆಂದು ತೋರಿಸಿ ತಮ್ಮ ಕೆಲಸ ಸಲೀಸುಮಾಡುವ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರಕ್ಕೆ ಆಸ್ಕರ್ ಸಿಗುತ್ತೆ. ಕೆಲವರಿಗೆ ಅರ್ಥಶಾಸ್ತ್ರಕ್ಕೆ, ಕೆಲವರಿಗೆ ಸಮಾಜ ಸೇವೆಗೆ ನೋಬೆಲ್ ಸಿಕ್ಕಿಬಿಡುತ್ತದೆ. ಇವೆಲ್ಲದರ ಸಂದೇಶ ಸ್ಪಷ್ಟ. ಭಾರತವನ್ನು ತುಂಡುಗೈಯ್ಯಲು ಸಹಕರಿಸಿದವರಿಗೆ ಅಂತರರಾಷ್ಟ್ರೀಯ ಮನ್ನಣೆ ಖಾತ್ರಿ! ಜಾಗತಿಕ ಮಟ್ಟದಲ್ಲಿ ಸಾಧ್ಯವಾಗದಿದ್ದರೆ ಭಾರತದಲ್ಲಾದರೂ ಉನ್ನತ ಪ್ರಶಸ್ತಿ, ಗೌರವ ಕೊಡಿಸುವಲ್ಲಿ ಅವರು ತಮ್ಮ ಸಂಪರ್ಕಗಳನ್ನು ಗಟ್ಟಿ ಮಾಡಿಕೊಂಡಿದ್ದಾರೆ! ಸಾರ್ವಜನಿಕವಾಗಿ ದನದ ಮಾಂಸ ತಿನ್ನುವುದರ ಲಾಭವೇನೆಂದು ಈಗ ಸ್ಪಷ್ಟವಾಗಿರಬೇಕು. ಮೂತರ್ಿಗಳ ಮೇಲೆ ಉಚ್ಚೆ ಹೊಯ್ದುದನ್ನು ಧೈರ್ಯವಾಗಿ ಹೇಳಿಕೊಂಡದ್ದೇಕೆ ಗೊತ್ತಾಯ್ತಲ್ಲ!
ನಾವು ಶತ್ರುವೆಂದು ಯಾರ ವಿರುದ್ಧವೋ ಕಾದಾಡುತ್ತಲೇ ಇರುತ್ತೇವೆ. ಆದರೆ ಹಿಂದೆ ಕುಳಿತ ಒಂದಷ್ಟು ಬುದ್ಧಿವಂತರು ದೇಶ ಒಡೆಯುವಲ್ಲಿ ಯಶಸ್ಸು ಪಡೆಯುತ್ತಲೇ ಇರುತ್ತಾರೆ. ಅಲ್ಲವೇನು ಮತ್ತೆ? ದಲಿತರು-ಮೇಲ್ವರ್ಗದವರು ಗುದ್ದಾಡುತ್ತಿರುತ್ತಾರೆ; ದನದ ಹೆಸರಲ್ಲಿ ಹಿಂದೂ-ಮುಸಲ್ಮಾನರ ಕಾಳಗ. ದ್ರಾವಿಡ-ಆರ್ಯವೆಂಬ ಕದನದಲ್ಲಿ ಮಗ್ನರಾದ ಉತ್ತರ ಮತ್ತು ದಕ್ಷಿಣ ಭಾರತ; ಸ್ತ್ರೀವಾದ, ಮನುವಾದಗಳ ಹೆಸರಲ್ಲಿ ಶರಂಪರ ಕಿತ್ತಾಡುವ ಪ್ರಗತಿಪರ-ಸಂಪ್ರದಾಯವಾದಿಗಳು. ಛೇ! ಪಶ್ಚಿಮದಲ್ಲಿ ಕುಳಿತು ಸೂತ್ರದ ಗೊಂಬೆಯಂತೆ ನಮ್ಮನ್ನಾಡಿಸುತ್ತಿರುವ ಕೆಲವೇ ಮಂದಿ ಅದೆಷ್ಟು ವಿಷ ಬೀಜಗಳನ್ನು ಬಿತ್ತಿ ಬೆಳೆ ತೆಗೆಯುತ್ತಿದ್ದಾರೆ.
ಈಗ ಮುಖ್ಯ ಪ್ರಶ್ನೆ. ಕಳೆದ ಹತ್ತು ವರ್ಷಗಳ ಯುಪಿಎ ಸಕರ್ಾರದ ಅವಧಿಯಲ್ಲಿ ನಡೆಯದ ಪ್ರತಿಭಟನೆಗಳೆಲ್ಲ ಎರಡೇ ವರ್ಷಗಳಲ್ಲಿ ಉಕ್ಕುಕ್ಕಿ ಆವರಿಸುತ್ತಿವೆಯಲ್ಲ! ಗುಜರಾತಿನಲ್ಲಿ ಮೀಸಲಾತಿಗಾಗಿ ಪಟೇಲರು ಬೀದಿಗಿಳಿದರೆ, ಹರ್ಯಾಣದಲ್ಲಿ ಜಾಟರು ಬಲು ದೊಡ್ಡ ಸಂಖ್ಯೆಯಲ್ಲಿ ಅಚಾನಕ್ಕಾಗಿ ರೋಡಿಗೆ ಬಂದರು! ಮುಸಲ್ಮಾನರು ಅಸ್ಸಾಂ, ಬಂಗಾಳಗಳಲ್ಲಿ ಆಕ್ರೋಶದ ಬೆಂಕಿಗೆ ತುಪ್ಪ ಸುರಿದರೆ, ಶನಿ ಶಿಂಗ್ಣಾಪುರ-ಶಬರಿಮಲೈ ಹಾಜಿ ಅಲಿಗಳಿಗೆ ಪ್ರವೇಶ ಕೋರಿ ಮಹಿಳೆಯರು ಪ್ರತಿಭಟನೆ ಮಾಡಿದರು. ರೋಹಿತ್ ವೇಮುಲನ ಸಾವಿನ ಕಾವು ಎಲ್ಲೆಡೆ ಹಬ್ಬಿದರೆ, ಜೆಎನ್ಯು ಪ್ರತಿಭಟನೆ ದೇಶವನ್ನು ಬೌದ್ಧಿಕ ವಲಯದಲ್ಲಿ ತುಂಡರಿಸಿಬಿಟ್ಟಿತು. ಅರೆರೆ. ಒಂದರ ಹಿಂದೆ ಒಂದು! ಪ್ರತೀ ಪ್ರತಿಭಟನೆಯಲ್ಲೂ ಸಮಾನ ಅಂಶಗಳನ್ನು ಹುಡುಕುವುದು ಬಲು ಕಷ್ಟವೇನಲ್ಲ. ಒಂದಷ್ಟು ಪತ್ರಕರ್ತರು, ವಕೀಲರು, ರಾಜಕಾರಣಿಗಳು, ಸಿನಿಮಾ ನಟರು, ಬುದ್ಧಿಜೀವಿಗಳು ಭಿನ್ನ ಭಿನ್ನ ಸ್ವರೂಪದ ಈ ಎಲ್ಲಾ ಹೋರಾಟಗಳಲ್ಲೂ ದನಿ ಎತ್ತಿದ್ದಾರೆ. ಸಕರ್ಾರದ ವಿರುದ್ಧ ಕೂಗಾಡಿದ್ದಾರೆ. ಪ್ರಶಸ್ತಿಗಳನ್ನು ಮರಳಿಸಿದ್ದಾರೆ. ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಯಾವುದೂ ಕೆಲಸಕ್ಕೆ ಬರಲಿಲ್ಲವೆಂದಾಗ ಅಪ್ರತಿಭರಾಗಿ ದೇಶ ವಿರೋಧದ ಮಾತುಗಳಾನ್ನಾಡಿದ್ದಾರೆ. ಯಾರಿದ್ದಾರೆ ಇವರ ಹಿಂದೆ? ಹತ್ತು ವರ್ಷಗಳಲ್ಲಿ ಮಿಸುಕಾಡದ ಇವರು ಈಗ ಏಕಾಕಿ ಕುಣಿದಾಡುತ್ತಿರುವುದೇಕೆ?
ಸತ್ಯ ಗೊತ್ತೇನು? ಹೊಸ ಸಕರ್ಾರ ಬಂದೊಡನೆ ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆಯಾಗಿರುವ, ಸಮಾಂತರ ಸಕರ್ಾರವಾಗಿ ಬೆಳೆದು ನಿಂತಿರುವ ಸಕರ್ಾರೇತರ ಸಂಸ್ಥೆ (ಎನ್.ಜಿ.ಓ)ಗಳತ್ತ ಕಡಕ್ಕು ದೃಷ್ಟಿ ಬೀರಿತು. ಅವುಗಳಿಗೆ ಬರುತ್ತಿರುವ ವಿದೇಶೀ ಹಣವನ್ನು ನಿಯಂತ್ರಿಸಲಾರಂಭಿಸಿತು. ಅನೇಕ ಸಂಸ್ಥೆಗಳನ್ನು ಕಪ್ಪುಪಟ್ಟಿಗೂ ಸೇರಿಸಿತು. ಆಂಧ್ರಪ್ರದೇಶವೊಂದರಲ್ಲಿಯೇ ಕಪ್ಪುಪಟ್ಟಿಗೆ ತಳ್ಳಲ್ಪಟ್ಟ, ಅಲ್ಪಸಂಖ್ಯಾತ ಅಭಿವೃದ್ಧಿಗೆ ಸಂಬಂಧಿಸಿದ 8 ಸಂಸ್ಥೆಗಳಲ್ಲಿ 7 ಕ್ರಿಶ್ಚಿಯನ್ ಅಭಿವೃದ್ಧಿಗೆ ಸೇರಿದ್ದಾಗಿತ್ತು.
ಈಗ ಅರ್ಥವಾಗುತ್ತಿರಬಹುದಲ್ಲವೇ? ಜೆಎನ್ಯು ಪ್ರತಿಭಟನೆ ಈ ಎಲ್ಲ ಅಸಹಿಷ್ಣುತೆಯ ತುದಿಯಷ್ಟೇ. ಆಳದಲ್ಲಿ ತಿಮಿಂಗಿಲಗಳೇ ಈಜುತ್ತಿವೆ. ಅವುಗಳನ್ನು ಮಟ್ಟಹಾಕುವುದು ಬಲುದೊಡ್ಡ ಸಾಹಸವೇ ಸರಿ!

For more Reading:  Breaking India by Rajiv Malhotra

Leave a Reply