ವಿಭಾಗಗಳು

ಸುದ್ದಿಪತ್ರ


 

ಒಂದು ಕಣ್ಣಿಗೆ ಸುಣ್ಣ, ಇದ್ಯಾವ ನ್ಯಾಯ!?

ಯಡ್ಯೂರಪ್ಪನವರಿಗೆ ಅಧಿಕಾರ ಸಿಗದಾದಾಗ ಬೀದಿಗಿಳಿದ ಮಠಾಧೀಶರೊಬ್ಬರ ಬಗ್ಗೆ ವ್ಯಂಗ್ಯವಾಗಿ, ಅಸಹ್ಯಕರವಾಗಿ ಮಾತನಾಡಿದ ದೆಹಲಿಯ ಮಾಧ್ಯಮಗಳು ಈಗೇಕೋ ಇದನ್ನು ಮಾತ್ರ ಬೇರೆಯೇ ದೃಷ್ಟಿಯಿಂದ ನೋಡತೊಡಗಿದವು. ಹೌದು. ಮಠಾಧೀಶರು ವ್ಯಕ್ತಿಯೊಬ್ಬನನ್ನು ಬೆಂಬಲಿಸಿ ಬೀದಿಗಿಳಿಯುವುದು ಸಮ್ಮತವಲ್ಲ ನಿಜ, ಹಾಗಂತ ಬುಖಾರಿ ಬೀದಿಗಿಳಿದಿದ್ದು ಕೂಡ ಅಸಂಬದ್ಧವೇ. ಅದ್ಯಾಕೆ ಆ ಕಣ್ಣಿಗೆ ಮಾತ್ರ ಸುಣ್ಣ?

ಗಮನಿಸಬೇಕಾದ ಸುದ್ದಿಯನ್ನ ನಾವು ನೋಡೋದೇ ಇಲ್ಲ. ಅರ್ಥೈಸಿಕೊಳ್ಳಬೇಕಾದ ರೀತಿಯಲ್ಲಿ ಸ್ವೀಕರಿಸೋದಿಲ್ಲ. ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಯಾದವ್‌ಗೆ ಗಂಭೀರ ಸಮಸ್ಯೆಯೊಂದು ತಗುಲಿಕೊಂಡಿದೆ. ಎಂದಿನಂತೆ ಮುಸಲ್ಮಾನರದ್ದೇ. ಹೌದು, ಉತ್ತರ ಪ್ರದೇಶ ಗಣಸಂಸ್ಥಾನದ ಉಪಾಧ್ಯಕ್ಷ, ರಾಜ್ಯ ದರ್ಜೆಯ ಸಚಿವ ಸ್ಥಾನ ಅಲಂಕರಿಸಿರುವ ರಾಮ್ ಸೇವಕ್ ಯಾದವ್ ಕಿಡಿಕಾರಿದ್ದಾರೆ. ದೆಹಲಿಯ ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಬುಖಾರಿಯನ್ನು ಬ್ಲ್ಯಾಕ್‌ಮೇಲರ್ ಎಂದು ದೇಶಕ್ಕೆ ಸಮರ್ಥವಾಗಿ ಪರಿಚಯಿಸಿದ್ದಾರೆ. ಆಗಿದ್ದಿಷ್ಟೇ…. ಬುಖಾರಿಯ ಅಳಿಯ ಉಮರ್‌ಗೆ ವಿಧಾನಸಭಾ ಚುನಾವಣೆಯಲ್ಲಿ ಸೀಟು ಕೊಟ್ಟ ಮುಲಾಯಮ್, ಬುಖಾರಿಯನ್ನು ಸಮಾಜ ವಾದಿ ಪಕ್ಷದ ಪರವಾಗಿ ಮಾತನಾಡುವಂತೆ ಮಾಡಿದ್ದ. ಮಾಯಾವತಿ ವಿರುದ್ಧದ ಅಲೆಯಲ್ಲಿ ಮುಲಾಯಮ್ ಗೆದ್ದುಬಂದರು. ಅದಕ್ಕೆ ತಾನೇ ಕಾರಣ ಎಂದುಕೊಂಡು ತಿರುಗುತ್ತಿದ್ದ ಬುಖಾರಿಗೆ ಅಳಿಯನ ಸೋಲು ತೀವ್ರ ಆಘಾತ ತಂದಿತ್ತು. ಅಷ್ಟೇ ಅಲ್ಲ, ಬದ್ಧ ವೈರಿ ಆಜಮ್ ಖಾನ್‌ರನ್ನು ಮಂತ್ರಿ ಮಾಡಿದ್ದಂತೂ ನುಂಗಲಾರದ ತುತ್ತಾಗಿಬಿಟ್ಟಿತ್ತು. ಶುರುವಾಯ್ತು ನೋಡಿ ಕದನ, ಆಜಮ್ ಖಾನ್ ಬುಖಾರಿಯನ್ನು ಕೂಲಿಯವ, ಹುಚ್ಚ ಎಂದೆಲ್ಲ ಜರೆದಿದ್ದಲ್ಲದೆ, ತಾಕತ್ತಿದ್ದರೆ ತನ್ನ ಬಂಧುಗಳೇ ಹೆಚ್ಚಿರುವ ಮೊರಾದಾಬಾದ್‌ನಲ್ಲಿ ಸಣ್ಣ ಮಟ್ಟದ ಚುನಾವಣೆಯನ್ನಾದರೂ ಗೆದ್ದು ತೋರಿಸಿದರೆ ತಾನು ರಾಜಕೀಯ ಸಂನ್ಯಾಸ ಸ್ವೀಕರಿಸುವ ಸವಾಲೊಡ್ಡಿಬಿಟ್ಟರು. ಮುಲಾಯಮ್‌ಗೆ ಇಬ್ಬಂದಿ. ಒಂದೆಡೆ ಮುಸ್ಲಿಮ್ ಸಮುದಾಯದಲ್ಲಿ ಚೆನ್ನಾಗಿ ಬೆಳೆದಿದ್ದ ಹಳೆ ನಂಟಿನ ನಾಯಕ ಅಜಮ್ ಖಾನ್, ಮತ್ತೊಂದೆಡೆ ಮುಸ್ಲಿಮ್ ಪಂಗಡವೊಂದಕ್ಕೆ ಗುರುವಿನಂತಿರುವ ಬುಖಾರಿ.

B and Aದಶಕ ದಶಕಗಳಷ್ಟು ಕಾಲ ರಾಜಕೀಯವನ್ನೇ ಉಸಿರಾಡಿರುವ ಮುಲಾಯಮ್ ಬುಖಾರಿಯತ್ತ ದೌಡಾಯಿಸಿ ಅಳಿಯ ಓಮರ್‌ನನ್ನು ಎಮ್‌ಎಲ್‌ಸಿ ಮಾಡುವ, ಮಂತ್ರಿಗಿರಿ ನೀಡುವ ಭರವಸೆ ನೀಡಿದ್ದಲ್ಲದೆ, ಆತನ ತಮ್ಮ ಯಾಹ್ಯಾ ಖಾನನಿಗೂ ಸೂಕ್ತ ಸ್ಥಾನ ನೀಡುವ ವಾಗ್ದಾನ ಮಾಡಿದರು. ಬುಖಾರಿ ಜಗ್ಗಲಿಲ್ಲ. ಯಾಹ್ಯಾ ಖಾನನನ್ನು ರಾಜ್ಯಸಭೆಗೇ ಕಳಿಸಬೇಕೆನ್ನುವ ಹಟ ಅವನದ್ದು. ಅಲ್ಲಿಗೆ ಅದಾಗಲೇ ಅಜಮ್ ಖಾನ್ ಕಣ್ಣು ನೆಟ್ಟಿಯಾಗಿತ್ತು. ಮುಂದೇನು? ಮುಸ್ಲಿಮ್ ಸಮಾಜಕ್ಕೆ ಮತದ ಮದಿರೆ ಕುಡಿಸುವ ಕೆಲಸ ಶುರುವಾಯ್ತು. ಬುಖಾರಿ, ಮುಲಾಯಮ್‌ರ ಹುಟ್ಟೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ‘ಈ ದೇಶದಲ್ಲಿ ಆಳುವುದನ್ನು ಬಲ್ಲವರು ಮಾಯಾವತಿ ಮಾತ್ರ’ ಎಂದು ಫರ್ಮಾನು ಹೊರಡಿಸಿಬಿಟ್ಟರು; ‘ದಲಿತರ ಉದ್ಧಾರದಲ್ಲಿ, ಮುಸಲ್ಮಾನರ ಅಭಿವೃದ್ಧಿ ವಿಷಯದಲ್ಲಿ ಆಕೆ ಅಗ್ರಣಿ, ಅಖಿಲೇಶ್‌ಗಿಂತ ಸಮರ್ಥಳು’ ಎಂದೆಲ್ಲ ಭಾಷಣ ಬಿಗಿದೇಬಿಟ್ಟ! ಒಂದು ರಾಜ್ಯ ಸಭೆಯ ಸೀಟಿಗಾಗಿ ಈ ಪರಿ ವ್ಯಕ್ತಿ ನಿಷ್ಠೆ ಬದಲಾಗಿಬಿಟ್ಟಿತು. ಆದರೆ ಬಳಸಿದ ಅಸ್ತ್ರ ಮಾತ್ರ ಮುಸಲ್ಮಾನರ ಉದ್ಧಾರದ್ದು! ಹೀಗಾಗಿಯೇ ರಾಮ್‌ಸೇವಕ್ ಅವನನ್ನು ಬ್ಲ್ಯಾಕ್ ಮೇಲರ್ ಎಂದು ಕರೆದಿದ್ದು.
ಮಾಧ್ಯಮಗಳೆಲ್ಲ ಇದನ್ನು ಅಜಮ್ ಖಾನ್ ಮತ್ತು ಬುಖಾರಿಯ ನಡುವಿನ ವೈಯಕ್ತಿಕ ತಿಕ್ಕಾಟವೆಂದು ಕರೆದವೇ ಹೊರತು, ಮುಸಲ್ಮಾನ ಜಾತಿ ರಾಜಕೀಯವಾಗಿ ಹೇರುತ್ತಿರುವ ಪ್ರಭಾವ ಎಂದು ವಿಶ್ಲೇಷಿಸುವ ಗೋಜಿಗೆ ಹೋಗಲಿಲ್ಲ. ಯಡ್ಯೂರಪ್ಪನವರಿಗೆ ಅಧಿಕಾರ ಸಿಗದಾದಾಗ ಬೀದಿಗಿಳಿದ ಮಠಾಧೀಶರೊಬ್ಬರ ಬಗ್ಗೆ ವ್ಯಂಗ್ಯವಾಗಿ, ಅಸಹ್ಯಕರವಾಗಿ ಮಾತನಾಡಿದ ದೆಹಲಿಯ ಮಾಧ್ಯಮಗಳು ಈಗೇಕೋ ಇದನ್ನು ಮಾತ್ರ ಬೇರೆಯೇ ದೃಷ್ಟಿಯಿಂದ ನೋಡತೊಡಗಿದವು. ಹೌದು. ಮಠಾಧೀಶರು ವ್ಯಕ್ತಿಯೊಬ್ಬನನ್ನು ಬೆಂಬಲಿಸಿ ಬೀದಿಗಿಳಿಯುವುದು ಸಮ್ಮತವಲ್ಲ ನಿಜ, ಹಾಗಂತ ಬುಖಾರಿ ಬೀದಿಗಿಳಿದಿದ್ದು ಕೂಡ ಅಸಂಬದ್ಧವೇ. ಅದ್ಯಾಕೆ ಆ ಕಣ್ಣಿಗೆ ಮಾತ್ರ ಸುಣ್ಣ?

imam mulayamಇಮಾಮ್ ಬುಖಾರಿಯದ್ದು ಇದು ಮೊದಲ ಸಲವೇನಲ್ಲ. ಆತ ಸಹಜವಾಗಿ ದೇಶದ್ರೋಹಿಯೇ. ಹನ್ನೆರಡು ವರ್ಷಗಳ ಹಿಂದೆ ಅಮೆರಿಕಾ ಅಪ್ಘಾನಿಸ್ತಾನದ ಮೇಲೆ ನಡೆಸಿದ ದಾಳಿಯನ್ನು ಇಸ್ಲಾಮ್‌ನ ಮೇಲಿನ ದಾಳಿಯೆಂದು ಭಾವಿಸುತ್ತೇನೆ ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದ. ನಾನು ಸೆಪ್ಟೆಂಬರ ಹನ್ನೊಂದರ ದಾಳಿಯನ್ನು ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ. ಅಷ್ಟೇ ಅಲ್ಲ, ನಾನು ಒಸಾಮಾನ ಅಭಿಮಾನಿ ಎಂದ ಮಹಾಮಹಿಮ, ಇಷ್ಟು ಸಾಹಸದ ನಂತರವೂ ಅಮೆರಿಕಾ ಅವನನ್ನು ಹಿಡಿಯಲಾಗಲಿಲ್ಲ ಎಂದರೆ ಅದು ಅಲ್ಲಾಹನ ಇಚ್ಛೆಯೇ ಎಂದೆಲ್ಲ ಮಾತನಾಡಿದ್ದ. ಅಮೆರಿಕಾ ೨೦೦೮ರಲ್ಲಿ ಉಗ್ರ ಅಬ್ದುಲ್ ಬಶೀರ್‌ನನ್ನು ಬಂಧಿಸಿದ್ದಾಗ ಜಾಮಾ ಮಸ್ಜಿದ್ ಯುನೈಟೆಡ್ ಫ್ರಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಮಿಯನ್ನು ಕೊಂಡಾಡಿದ ಬುಖಾರಿ, ಬಶೀರ್‌ನನ್ನು ಬಿಡದಿದ್ದರೆ ೧೯೪೭ರ ಮಾದರಿಯ ದಂಗೆಗಳು ಮರುಕಳಿಸಿಬಿಟ್ಟಾವು ಅಂತ ಧಮಕಿ ಹಾಕಿದ್ದ.
ಈ ಯಾವುದನ್ನೂ ಆಂಗ್ಲ ಮಾಧ್ಯಮಗಳು ಸುದ್ದಿ ಎಂದು ಪರಿಗಣಿಸಲೇ ಇಲ್ಲ. ಹೋಗಲಿ, ಅಯೋಧ್ಯೆಯ ಹಿನ್ನೆಲೆಯಲ್ಲಿ ಕೋರ್ಟಿನ ತೀರ್ಪು ಬಂದಾಗ ನಡೆದ ಘಟನೆಗೂ ಮಹತ್ವ ದೊರೆಯಲಿಲ್ಲ. ಅವತ್ತು ಈತನ ಪತ್ರಿಕಾಗೀಷ್ಟಿಯಲ್ಲಿ ದಾಸ್ತಾನ್ ಎ ಅವಧ್ ಎಂಬ ಉರ್ದು ಪತ್ರಿಕೆಯ ವರದಿಗಾರ ಮಹಮ್ಮದ್ ಅಬ್ದುಲ್ ವಾಹಿದ್ ಚಿಸ್ತಿ ಒಂದು ಪ್ರಶ್ನೆ ಕೇಳಿದರು. ‘ಕ್ರಿ.ಶ.೧೫೨೮ಕ್ಕೆ ಮುನ್ನ ಬಾಬ್ರಿ ಕಟ್ಟಡ ಇರುವ ಸ್ಥಳ ದಶರಥನಿಗೆ ಸೇರಿದ್ದು ಎಂಬ ದಾಖಲೆಯಿದ್ದರೂ ನೀವೇಕೆ ಮುಸಲ್ಮಾನರ ದಿಕ್ಕು ತಪ್ಪಿಸುತ್ತೀರಿ?’ ಎಂಬ ಪ್ರಶ್ನೆ ಅದು. ಅದನ್ನು ಕೇಳಿದ ಬುಖಾರಿ ಹಲ್ಲು ಹಲ್ಲು ಕಡಿದ. ಅಷ್ಟು ಹೊತ್ತಿಗೆ ಚಿಸ್ತಿಯ ಮತ್ತೊಂದು ಪ್ರಶ್ನೆ ತೂರಿ ಬಂತು. ’ಷರಿಯತ್ ಕಾನೂನಿನ ಅನ್ವಯ ಅಲ್ಲಿ ಮಸೀದಿ ನಿರ್ಮಿಸುವಂತಿಲ್ಲ. ಹಾಗಿದ್ದ ಮೇಲೂ ನೀವೇಕೆ ಅದರ ಹಿಂದೆ ಬಿದ್ದಿದ್ದೀರಿ?’ ಈಗಂತೂ ಬುಖಾರಿಗೆ ತಡೆದುಕೊಳ್ಳಲಿಕ್ಕೇ ಆಗಲಿಲ್ಲ. ಕೂತಲ್ಲಿಂದ ಧಿಗ್ಗನೆ ಎದ್ದು, ’ನಿನ್ನಂಥವನಿಂದಲೇ ಬಾಬ್ರಿ ಮಸೀದಿ ಉರುಳಿದ್ದು. ಧರ್ಮ ದ್ರೋಹಿ ನೀನು’ ಎನ್ನುತ್ತ ಮೇಲೇರಿಯೇ ಹೋಗಿಬಿಟ್ಟ. ಗೂಂಡಾಗಳು ಚಿಸ್ತಿಗೆ ಹೊಡೆದೇ ಬಿಟ್ಟರು. ಇಷ್ಟರದ್ದೂ ವಿಡಿಯೋ ಕೂಡ ಸಿಕ್ಕುಬಿಟ್ಟಿತು. ಊಹೂಂ.. ಪತ್ರಕರ್ತರೇ ಚಿಸ್ತಿಯ ಸಹಾಯಕ್ಕೆ ಬರಲಿಲ್ಲ. ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡರೆ ದೇಶದೆಲ್ಲೆಡೆ ಮುಸಲ್ಮಾನರು ತಿರುಗಿಬಿದ್ದಾರೆಂದು ಹೆದರಿ ಸುದ್ದಿ ಮಾಡದೆ ಮುಚ್ಚಿಹಾಕಿಬಿಟ್ಟರಷ್ಟೆ.
ಅಷ್ಟು ಮಾತ್ರ ಬುಖಾರಿಯ ಸ್ಥಾನದಲ್ಲಿ ಹಿಂದೂ ಸಂತರಿದ್ದಿದ್ದರೆ ನಮ್ಮದೇ ಟೀವಿ ವಾಹಿನಿಗಳು ಇಪ್ಪತ್ನಾಲ್ಕು ತಾಸು ವಿಡಿಯೋ ತೋರಿಸುತ್ತಿದ್ದವು. ಪತ್ರಿಕೆಗಳು ಪುಟಗಟ್ಟಲೆ ಸಂದರ್ಶನ ಪ್ರಕಟಿಸಿಬಿಡುತ್ತಿದ್ದವು.
ಬುಖಾರಿ ಅಸಹ್ಯ ಎನ್ನಿಸಲಾರಂಭಿಸಿದ್ದು ಯಾವಾಗ ಗೊತ್ತಾ? ಅಣ್ಣಾ ಹಜಾರೆಯವರ ಹೋರಾಟದಲ್ಲಿ ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಹೇಳ್ತಾರೆ. ಹೀಗಾಗಿ ಅದು ಇಸ್ಲಾಂ ವಿರೋಧಿ ಎಂದನಲ್ಲ ಆಗ. ಅನೇಕ ಮುಸಲ್ಮಾನರೇ ನಾಚಿಕೊಂಡು ಅಣ್ಣಾ ಅದನ್ನು ಹೇಳುವಂತೆ ಒತ್ತಾಯ ಹೇರುವುದಿಲ್ಲವಾದ್ದರಿಂದ ಅದು ಇಸ್ಲಾಂ ವಿರೋಧಿಯಲ್ಲ ಎಂದರು. ಅರೆರೆ! ಬುಖಾರಿಗೆ ಇಷ್ಟೊಂದು ಶಕ್ತಿ ಬಂದಿದ್ದಾದರೂ ಎಲ್ಲಿಂದ? ಆತನ ಈ ಪರಿಯ ದಾರ್ಷ್ಟ್ಯದ ಹಿಂದಿರುವ ತಾಕತ್ತು ಯಾರು?

MulayamSingh_AzamKhanಮತ್ತದೇ ೨೫ ಕೋಟಿ ಮುಸಲ್ಮಾನರು. ತಾವು ಮತ ಬ್ಯಾಂಕ್ ಆಗಿ ಪರಿವರ್ತಿತರಾಗಿರುವುದರಿಂದ ಯಾರನ್ನು ಬೇಕಿದ್ದರೂ ಅವರು ಹೆದರಿಸಬಲ್ಲರು, ಬಗ್ಗಿಸಬಲ್ಲರು. ಅವರ ಈ ರಾಜಕಾರಣದ ರೀತಿ ರಿವಾಜು ಇವತ್ತಿನದಲ್ಲ. ಸ್ವಾತಂತ್ರ್ಯ ಪೂರ್ವದ್ದೇ. ಗಾಂಧೀಜಿಯನ್ನು ಬಗ್ಗಿಸಿದ್ದು, ನೆಹರೂರನ್ನು ಒಲಿಸಿಕೊಂಡಿದ್ದು ಇದೇ ರೀತಿಯಲ್ಲಿ. ಅತ್ತ ಬ್ರಿಟಿಷರು ಕೊಡುವುದಕ್ಕಿಂತ ಒಂದು ಕೈ ಮುಂದೆ ತಾವೆಂದು ಕಾಂಗ್ರೆಸ್ಸೇ ದಾನ ಮಾಡುತ್ತಿತ್ತು. ಮುಸ್ಲಿಂ ಲೀಗಿನಿಂದ ಶುರುವಾದ ಈ ಪರಿಪಾಠ ದೇಶ ವಿಭಜನೆಯವರೆಗೆ ಬಂದು ನಿಂತಿತು. ೧೯೪೭ರ ನಂತರ ಇಲ್ಲಿಯೇ ಉಳಿದುಕೊಂಡವರು ಕಾಂಗ್ರೆಸ್ಸಿಗೆ ಆಸ್ತಿಯಾದರು. ಸಾರಾಸಗಟಾಗಿ ಮುಸಲ್ಮಾನರ ಓಟು ನೆಹರೂ ತೆಕ್ಕೆಗೆ ಬೀಳಲಾರಂಭಿಸಿತು. ಬಿಹಾರ, ಉತ್ತರ ಪ್ರದೇಶ, ಬಂಗಾಳಗಳ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಗೆಲುವಿಗೆ ಮುಸಲ್ಮಾನರೇ ಕಾರಣವೆಂಬುದು ಜಾಹೀರಾಗಿತ್ತು. ೧೯೬೩ರ ದಂಗೆಗಳ ಅನಂತರ ಮುಸಲ್ಮಾನರಿಗೆ ಸ್ವಲ್ಪ ಭ್ರಮನಿರಸನವಾಯ್ತು. ಅವರ ಎಲ್ಲ ಬೇಡಿಕೆಗಳನ್ನು ಒಪ್ಪುವುದು ಕಾಂಗ್ರೆಸ್ಸಿಗೇ ಕಷ್ಟಕ್ಕೆ ತಂತು. ಅತ್ತ ತೊಂದರೆ ಕೊಡದ ಮುಸಲ್ಮಾನರನ್ನೇ ಹುಡುಕಿ ಆಯ್ಕೆ ಮಾಡುವ ಕಾಂಗ್ರೆಸ್ಸಿನ ರೀತಿಯನ್ನು ಮೂದಲಿಸಿ ರಾಜ್ಯಸಭಾ ಸದಸ್ಯ ಮಹಮ್ಮದ್ ಅನ್ಸರ್ ಅಂತಹ ಮುಸ್ಲಿಮ್ ನಾಯಕರನ್ನು ’ಕಾಂಗ್ರೆಸ್ಸಿನ ಶೋ ಬಾಯ್ಸ್’ ಎಂದು ಕರೆದರು.
ಈಗ ಮುಸಲ್ಮಾನರ ಪಾಲಿಗೆ ಉಳಿದದ್ದು ಮೂರೇ ದಾರಿ. ಮೊದಲನೆಯದು – ತಮ್ಮ ಪಾಲಿಗೆ ಸಹಕಾರಿಯಾಗುವ ಪಕ್ಷದೊಂದಿಗೆ ವಿಲೀನಗೊಳ್ಳೋದು, ಮತ್ತೊಂದು ಸ್ವಂತದ ಪಕ್ಷವನ್ನೇ ಕಟ್ಟೋದು, ಕೊನೆಯದು -ತಾವು ಒತ್ತಡ ಹೇರುವ ಗುಂಪಾಗಿ ಉಳಿದು ತಮ್ಮ ಇಚ್ಛೆ ಈಡೇರಿಸುವವರನ್ನು ಸಮರ್ಥಿಸೋದು. ಅವರಿಗೆ ಈ ಮೂರನೆಯದೇ ಮೆಚ್ಚುಗೆಯಾಯ್ತು.
ಇಂದು ಹೆಚ್ಚೂಕಡಿಮೆ ನೂರು ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ಮುಸಲ್ಮಾನರು ನಿರ್ವಹಿಸುತ್ತಿದ್ದಾರೆ. ಅದಕ್ಕೆ ಮುಸಲ್ಮಾನರ ನಾಯಕನಿಗೆ ಬೇಡಿಕೆ ಹೆಚ್ಚು. ಪ್ರತಿಯೊಂದು ಪಕ್ಷಗಳೂ ಆತನಿಗಾಗಿ ದೇಶವನ್ನು ಬಲಿಕೊಡಲು ಸಿದ್ಧವಾಗಿ ನಿಂತಿವೆ. ರಾಜ್ಯದ ಎಲೆಕ್ಷನ್ ಅನ್ನೇ ನೋಡಿ. ಉಡುಪಿಯಲ್ಲಿ ಉಮೇದುವಾರನೊಬ್ಬ ನಾಣು ಗೆದ್ದು ಬಂದರೆ ಹದಿನಾಲ್ಕು ಮಸೀದಿಗಳನ್ನು ಕಟ್ಟಿಸಿಕೊಡುವೆ; ಒಂದೆರಡು ಕಸಾಯಿ ಖಾನೆಗಳಿಗೆ ಅನುಮತಿ ಕೊಡುವೆ ಎಂದು ವಾಗ್ದಾನ ಮಾಡಿದ್ದಾನಂತೆ! ಇದು ನ್ಯಾಯವಾ ಹೇಳಿ.
ಇದು ತಪ್ಪಲ್ಲ ಎನ್ನುವುದಾದರೆ, ಹಿಂದೂ ಜಾತಿಗಳು ಪಕ್ಷಗಳ ಮೇಲೆ ತಮ್ಮ ತಮ್ಮ ಒತ್ತಡವನ್ನು ಹಾಕೋದು ತಪ್ಪೆಂದು ಯಾವ ಬಾಯಿಂದ ಹೇಳುತ್ತೀರಿ!?

 

Leave a Reply