ವಿಭಾಗಗಳು

ಸುದ್ದಿಪತ್ರ


 

ಗುಜರಾತೇನು? ಮೋದಿ ಜಾಗತಿಕ ಚುನಾವಣೆಗಳನ್ನೂ ಗೆಲ್ಲಬಲ್ಲರು.

ಮೋದಿಯವರ ವಿದೇಶ ಪ್ರವಾಸದ ಕುರಿತಂತೆ ಮನಬಂದಂತೆ ಮಾತನಾಡುತ್ತಿದ್ದವರಿಗೆಲ್ಲ ಈಗ ಸಮರ್ಥವಾದ ಉತ್ತರ ದಕ್ಕಿದೆ. 1946ರ ನಂತರ ಮೊದಲ ಬಾರಿಗೆ ಯುನೈಟೆಡ್ ಕಿಂಗ್ಡಂನ ವ್ಯಕ್ತಿಯೊಬ್ಬರು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರತಿನಿಧಿತ್ವವನ್ನು ಕಳೆದು ಕೊಂಡಿದ್ದಾರೆ! ಅದೂ ಅವರೇ ಆಳಿದ ಭಾರತೀಯರೆದುರು ಅನುಭವಿಸಿದ ಹೀನಾಯ ಸೋಲು.

1

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸು ಗುಜರಾತಿನಲ್ಲಿ ಆಲೂಗಡ್ಡೆಯನ್ನು ಚಿನ್ನವಾಗಿ ಪರಿವತರ್ಿಸುವ ಗಿಮಿಕ್ಕಿನಲ್ಲಿ ಕಾಲ ಕಳೆಯುತ್ತಿರುವಾಗ, ಆಮ್ ಆದ್ಮಿಯ ನೇತಾರ ಅರವಿಂದ್ ಕೇಜ್ರಿವಾಲ್ ದೆಹಲಿಯ ವಾಯುಮಾಲಿನ್ಯ ತಡೆಗಟ್ಟಲು ಸಮ-ಬೆಸಗಳ ಸಂಶೋಧನೆ ನಡೆಸುತ್ತಿರುವಾಗ, ಸಿದ್ದರಾಮಯ್ಯನವರು ಪಾನ ನಿಷೇಧದ ವದಂತಿ ಹರಡಿಸಿ ಅಲ್ಲಗಳೆಯುತ್ತಿರುವಾಗ ನರೇಂದ್ರ ಮೋದಿ ಮತ್ತು ಅವರ ಬಳಗ ಜಾಗತಿಕ ಮಟ್ಟದಲ್ಲಿ ಲಂಡನ್ನನ್ನು ಮಟ್ಟಹಾಕಿ ಭಾರತದ ಘನತೆಯನ್ನು ಎತ್ತಿ ಹಿಡಿಯುವ ಸಾಹಸಕ್ಕೆ ಹಗಲು ರಾತ್ರಿ ಒಂದು ಮಾಡುತ್ತಿದ್ದರು. ಯಾವ ಬಿಳಿಯರು ನೂರಾ ತೊಂಭತ್ತು ವರ್ಷಗಳ ಕಾಲ ನಮ್ಮನ್ನು ಆಳಿ ಸ್ವಾತಂತ್ರ್ಯದ ಹೊತ್ತಲ್ಲಿ ನಮ್ಮ ಕುರಿತಂತೆ ತುಚ್ಛ ಪದಗಳಲ್ಲಿ ಮಾತನಾಡಿದ್ದರೋ; ಇಂದು ಅದೇ ಜನ ಭಾರತದೆದುರು ಹಣೆ ಹಚ್ಚಿ ನಿಲ್ಲುವಾಗ ನಾಚಿ ನೀರಾಗಿದ್ದರು! ಹೌದು ಇದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರವಾದ ದಲ್ವೀರ್ ಭಂಡಾರಿಯವರ ಗೆಲುವಿನ ಕಥೆ!

ಮೋದಿಯವರ ವಿದೇಶ ಪ್ರವಾಸದ ಕುರಿತಂತೆ ಮನಬಂದಂತೆ ಮಾತನಾಡುತ್ತಿದ್ದವರಿಗೆಲ್ಲ ಈಗ ಸಮರ್ಥವಾದ ಉತ್ತರ ದಕ್ಕಿದೆ. 1946ರ ನಂತರ ಮೊದಲ ಬಾರಿಗೆ ಯುನೈಟೆಡ್ ಕಿಂಗ್ಡಂನ ವ್ಯಕ್ತಿಯೊಬ್ಬರು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರತಿನಿಧಿತ್ವವನ್ನು ಕಳೆದು ಕೊಂಡಿದ್ದಾರೆ! ಅದೂ ಅವರೇ ಆಳಿದ ಭಾರತೀಯರೆದುರು ಅನುಭವಿಸಿದ ಹೀನಾಯ ಸೋಲು. ಅಲ್ಲಿನ ಪತ್ರಿಕೆಗಳೆಲ್ಲ ಕಾಡಿನೆಡೆ ಮುಖ ಮಾಡಿಕೊಂಡು ಒಂದೇ ಸಮನೆ ಊಳಿಟ್ಟಿವೆ. ಗಾಡರ್ಿಯನ್ ಪ್ರಕಾರ, ‘ಇಂಗ್ಲೆಂಡು ಅಂತರಾಷ್ಟ್ರೀಯ ಸಮುದಾಯದೆದುರು ಬಾಗಿದ್ದು, ಅಂತರಾಷ್ಟ್ರೀಯ ಬ್ರೀಟೀಷ್ ಗೌರವಕ್ಕೆ ಅವಮಾನಕರ ಪೆಟ್ಟು. ಅಷ್ಟೇ ಅಲ್ಲ, ಜಾಗತಿಕ ವ್ಯವಹಾರಗಳಲ್ಲಿ ಬ್ರಿಟನ್ನಿನ ಕುಗ್ಗುತ್ತಿರುವ ಪ್ರಾಬಲ್ಯದ ಮುನ್ಸೂಚನೆ’ ಇದು. ಟೈಮ್ಸ್ ಆಫ್ ಲಂಡನ್ ಹೇಳುವಂತೆ ‘ಹೊಸ ಜಗತ್ತಿನೆದುರು ಬ್ರಿಟನ್ ಸೋತಿದೆ. ಮುಂದುವರೆಯುತ್ತಿರುವ ರಾಷ್ಟ್ರಗಳ ಒಕ್ಕೂಟ ನಡೆಸಿದ ಕ್ರಾಂತಿ ಇದು.’  ಬಿಬಿಸಿಯ ವರದಿಗಾರನಂತೂ ‘ತಿಪ್ಪರಲಾಗ ಹೊಡೆದರೂ ಜಾಗತಿಕ ರಾಷ್ಟ್ರಗಳು ಬ್ರಿಟನ್ಗೆ ಹೆದರದೇ ಎದುರು ರಾಷ್ಟ್ರವನ್ನು ಬೆಂಬಲಿಸಿದರು. ಅವರ್ಯಾರೂ ಸಾಂಪ್ರದಾಯಿಕ ಶಕ್ತಿಗಳಿಗೆ ಹೆದರುತ್ತಿಲ್ಲವೆಂಬುದು ಆತಂಕಕಾರಿ ಸಂಗತಿ’ ಎಂದು ಅಲವತ್ತುಕೊಳ್ಳುತ್ತಿದ್ದ.

2

ಅಂತರಾಷ್ಟ್ರೀಯ ನ್ಯಾಯಾಲಯ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸಂಸ್ಥೆ. ರಾಷ್ಟ್ರ-ರಾಷ್ಟ್ರಗಳ ನಡುವಣ ಕದನಗಳನ್ನು ಮೆತ್ತಗೆ ಮಾಡುವ, ಅಲ್ಲಿನ ಗೊಂದಲಗಳಿಗೆ ನಿರ್ಣಯ ನೀಡುವ ಸಂಸ್ಥೆಯೂ ಹೌದು. ಎರಡು ರಾಷ್ಟ್ರಗಳ ನಡುವೆ ಒಪ್ಪಂದಗಳಿಗೆ ಭಂಗ ಬಂದಾಗ, ಗಡಿ ಉಲ್ಲಂಘನೆಯಾದಾಗಲೆಲ್ಲ ಮಧ್ಯೆ ಪ್ರವೇಶಿಸುತ್ತದೆ ಈ ನ್ಯಾಯಾಲಯ. 1945ರಲ್ಲಿ ಆರಂಭವಾದ ಈ ನ್ಯಾಯಾಲಯದಲ್ಲಿ 15 ನ್ಯಾಯಾಧೀಶರ ಪೀಠ ಕಾರ್ಯನಿರ್ವಹಿಸುತ್ತದೆ. ಇವರನ್ನು ಜಾಗತಿಕ ರಾಷ್ಟ್ರಗಳ ಒಕ್ಕೂಟ (ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ) ಮತ್ತು ಭದ್ರತಾ ಸಮಿತಿಯ ಖಾಯಂ ಸದಸ್ಯರು ಸೇರಿ ಆಯ್ಕೆ ಮಾಡುತ್ತಾರೆ. ನೆನಪಿಡಿ. ಜನರಲ್ ಅಸೆಂಬ್ಲಿ ಮುಂದುವರಿಯುತ್ತಿರುವ ರಾಷ್ಟ್ರಗಳ ಗುಂಪಾದರೆ, ಭದ್ರತಾ ಸಮಿತಿ ಮುಂದುವರಿದ-ಸಿರಿವಂತ ರಾಷ್ಟ್ರಗಳ ಸಮಾಗಮ. ಈ ಹದಿನೈದು ಜನರ ಅಧಿಕಾರಾವಧಿ ಒಂಭತ್ತು ವರ್ಷಗಳು. ಪ್ರತೀ ಮೂರು ವರ್ಷಗಳಿಗೊಮ್ಮೆ ಈ ಸ್ಥಾನಗಳಿಗಾಗಿ ಮರು ಆಯ್ಕೆ ನಡೆಯುತ್ತದೆ. ಈ ಬಾರಿ ಐದು ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು. ಸುಮ್ಮನೆ ಆಯ್ಕೆ ನಡೆದಿದ್ದರೆ ಸಮಸ್ಯೆ ಇರಲಿಲ್ಲ, ಲೆಬನಾನಿನ ಯುಎನ್ ರಾಯಭಾರಿ ತಾನೂ ಈ ಸ್ಥಾನಕ್ಕೆ ಆಕಾಂಕ್ಷಿಯೆಂದು ನಾಮಪತ್ರ ಸಲ್ಲಿಸಿದರು. ಅವರಿಗೆ ಅದಾಗಲೇ ಯುಎನ್ನಲ್ಲಿ ಗೆಳೆಯರ ಬಳಗ ಸಾಕಷ್ಟಿದ್ದುದರಿಂದ ಏಷಿಯಾದ ಪ್ರತಿನಿಧಿಯಾಗಿ ಆಯ್ಕೆಗೊಂಡುಬಿಟ್ಟರು. ಈಗ ಇನ್ನೊಂದು ಸ್ಥಾನಕ್ಕೆ ಬಾಕಿ ಉಳಿದಿದ್ದು ಭಾರತ ಮತ್ತು ಬ್ರಿಟನ್. ಭಾರತ ಮುಲಾಜಿಲ್ಲದೇ ಸ್ಪಧರ್ಿಸಲು ನಿಶ್ಚಯಿಸಿತು. ದಲ್ವೀರ್ ಭಂಡಾರಿಯವರನ್ನು ಬ್ರಿಟನ್ನಿನ ಕ್ರಿಸ್ಟೋಫರ್ ಗ್ರೀನ್ವುಡ್ಗೆದುರಾಗಿ ಕಣಕ್ಕಿಳಿಸಿತು. ಮೇಲ್ನೋಟಕ್ಕೆ ಸೆಕ್ಯುರಿಟಿ ಕೌನ್ಸಿಲ್ನ ಮುಂದುವರಿದವರ ಬೆಂಬಲ ಇಂಗ್ಲೆಂಡಿಗಿರುವುದು ಕಣ್ಣಿಗೆ ರಾಚುತ್ತಿತ್ತು. ಆದರೆ ಭಾರತ ಜನರಲ್ ಅಸೆಂಬ್ಲಿಯ ರಾಷ್ಟ್ರಗಳ ಪ್ರತಿನಿಧಿಗಳ ಒಲವು ಗಳಿಸಿತ್ತು. ಎರಡರಲ್ಲು ಬಹುಮತ ಗಳಿಸಿದವರಿಗೆ ಮಾತ್ರ ಸ್ಥಾನ ದೊರೆಯುವುದೆಂಬುದು ನಿಯಮ. ಹೀಗಾಗಿ ಮುಂದುವರಿಯಲಾಗದ ಗೊಂದಲದ ಸ್ಥಿತಿ ನಿಮರ್ಾಣವಾಗಿಬಿಟ್ಟಿತ್ತು.

ಭಾರತಕ್ಕೆ ಈ ಗೆಲುವು ಅತ್ಯಗತ್ಯವಾಗಿತ್ತು. ಬರಲಿರುವ ದಿನಗಳಲ್ಲಿ ಪಾಕೀಸ್ತಾನದೊಂದಿಗಿನ ಕುಲಭೂಷಣ್ ಜಾಧವ್ರ ಕೇಸ್ ಕುರಿತಂತೆ ನಮ್ಮ ವಾದ ಬಲವಾಗಲು ಪರೋಕ್ಷವಾದ ಶಕ್ತಿಗೆ ನಮ್ಮ ಈ ಗೆಲುವು ಅನಿವಾರ್ಯವೇ ಆಗಿತ್ತು. ಹಾಗೆಯೇ ಜಾಗತಿಕ ಮಟ್ಟದಲ್ಲಿ ನಮ್ಮ ಬಲ ಪ್ರದರ್ಶನಕ್ಕೆ ಈಗೊಂದು ವೇದಿಕೆ ಅನಾಯಾಸವಾಗಿ ನಿಮರ್ಾಣಗೊಂಡಿತ್ತು. ಹಾಗೆ ನೋಡಿದರೆ ಅಂತರಾಷ್ಟ್ರೀಯ ನ್ಯಾಯಾಲಯಗಳಲ್ಲಿ ನಮಗೆ ಅನ್ಯಾಯವಾದ ಉದಾಹರಣೆಯಿಲ್ಲ. 1955ರಲ್ಲಿ ದಾದರ್ ನಗರ್ ಹವೇಲಿಗಳಲ್ಲಿ ತನ್ನ ಏಕಸ್ವಾಮ್ಯಕ್ಕೆ ಭಾರತ ಭಂಗ ತರುತ್ತಿದೆಯೆಂದು ಪೋಚರ್ುಗೀಸರು ನ್ಯಾಯಾಲಯಕ್ಕೆ ಮೊರೆ ಹೋದಾಗ ತೀಪರ್ು ನಮ್ಮ ಪರವಾಗಿಯೇ ಬಂದಿತ್ತು. 1971, 73 ಮತ್ತು 99 ರಲ್ಲಿ ಪಾಕೀಸ್ತಾನ ನಮ್ಮ ವಿರುದ್ಧ ಮೊರೆಹೋದಾಗಲೂ ಅಂತರಾಷ್ಟ್ರೀಯ ನ್ಯಾಯಾಲಯದ ಮನಸ್ಥಿತಿ ನಮ್ಮ ಪರವಾಗಿಯೇ ಇತ್ತು. ಮಾರ್ಷಲ್ ಐಲ್ಯಾಂಡಿನ ಕಿರಿಕಿರಿಯಾದಾಗಲೂ ತೀಪರ್ು ನಮ್ಮ ವಿರುದ್ಧವಾಗೇನೂ ಇರಲಿಲ್ಲ. ತೀರಾ ಇತ್ತೀಚೆಗೆ ಪಾಕೀಸ್ತಾನ ಕುಲಭೂಷಣ್ ಜಾಧವ್ರಿಗೆ ನೇಣು ಶಿಕ್ಷೆ ಗೋಷಿಸಿದಾಗ ಇದೇ ನ್ಯಾಯಾಲಯ ಅದನ್ನು ತಡೆ ಹಿಡಿದು ಪಾಕಿಗೆ ಛೀಮಾರಿ ಹಾಕಿತ್ತು. ಇಷ್ಟೆಲ್ಲ ಆದಮೇಲೂ ನಮ್ಮೊಬ್ಬ ನ್ಯಾಯಾಧೀಶರನ್ನು ಅಲ್ಲಿ ಉಳಿಸಿಕೊಳ್ಳುವುದು ನಮ್ಮ ಘನತೆ-ಗೌರವಗಳ ಸವಾಲೇ ಆಗಿತ್ತು. ಮೋದಿ ಮತ್ತವರ ತಂಡ ಪರೋಕ್ಷ ಯುದ್ಧಕ್ಕೆ ಸನ್ನದ್ಧವಾಗಿಯೇ ಬಿಟ್ಟಿತು. ಈ ಬಾರಿ ನಮ್ಮನ್ನು ಆಳಿದೆವೆಂಬ ಹಮ್ಮಿನಿಂದ ಮೆರೆಯುತ್ತಿದ್ದವರ ವಿರುದ್ಧದ ಯುದ್ಧ. ಇಲ್ಲಿ ಸೈನಿಕರ ಗುಂಡಿನ ಮೊರೆತವಿಲ್ಲ, ರಕ್ತದ ಕಲೆಗಳಿಲ್ಲ. ಬರಿಯ ರಾಜತಾಂತ್ರಿಕರ ದಿನ ರಾತ್ರಿಯ ಕಸರತ್ತು. ಕೇರಳದಲ್ಲಿ ಕೈಗೆ ರಕ್ತದ ಕಲೆ ಮೆತ್ತಿಕೊಂಡೇ ಅಧಿಕಾರ ನಡೆಸುವ ಎಡಪಂಥೀಯರು ರಕ್ತ ಹರಿಸುವ ಯುದ್ಧದ ವಿರೋಧಿಗಳಲ್ಲವೇ? ಮೋದಿ ಅವರಿಗೊಂದು ಉಡುಗೊರೆ ಕೊಡಲೆಂದೇ ಹೊಸಬಗೆಯ ರಣತಂತ್ರ ರೂಪಿಸಿದ್ದರು.

3

ಸುಮಾರು ಹತ್ತು ದಿನಗಳ ಜಂಗಿ ಕುಸ್ತಿ ಇದು. ಜನರಲ್ ಅಸೆಂಬ್ಲಿಯಲ್ಲಿ ನಮ್ಮ ಗೆಲುವು ನಿಶ್ಚಿತವಾಯ್ತು. ಅಲ್ಲಿ 115 ವೋಟುಗಳು ನಮ್ಮ ಪರವಾಗಿ ಬಂದರೆ, ಗ್ರೀನ್ವುಡ್ ಪರವಾಗಿದ್ದುದು 76 ಮಾತ್ರ. ಆತ ಅರ್ಧದ ಸಂಖ್ಯೆಗೂ ಹತ್ತಿರ ಬಂದಿರಲಿಲ್ಲ. ಸೆಕ್ಯುರಿಟಯ ಕೌನ್ಸಿಲ್ನ ಸದಸ್ಯರು ನಮ್ಮ ವಿರುದ್ಧ ಮತ ಚಲಾಯಿಸಿದರು. ನಮ್ಮೊಂದಿಗೆ ಆರು ಜನ ಸದಸ್ಯರಿದ್ದರೆ ಬ್ರಿಟನ್ನಿನ ಪರವಾಗಿ ಒಂಭತ್ತು ಜನರಿದ್ದರು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಂಗೋದ ಉಪಾಧ್ಯಕ್ಷರೊಂದಿಗೆ ಮಾತುಕತೆಯಲ್ಲಿ ತಲ್ಲೀನವಾಗಿರುವಾಗಲೇ ಆಕೆಗೆ ಈ ಕುರಿತಂತೆ ಅಧಿಕಾರಿ ಸೈಯದ್ ಅಕ್ಬರುದ್ದೀನ್ ಕರೆ ಮಾಡಿದರು. ಜಾಗತಿಕ ರಾಷ್ಟ್ರಗಳ ಭಾವನೆ ಭಾರತದೊಂದಿಗಿರುವುದನ್ನು ಎಲ್ಲರ ಮುಂದಿರಿಸಬೇಕೆಂಬ ರಾಜತಾಂತ್ರಿಕ ಪಡೆಯ ಚಟುವಟಿಕೆ ತೀವ್ರಗೊಂಡಿತು. ದೆಹಲಿಯ ಸೌಥ್ ಬ್ಲಾಕ್ ತತ್ಕ್ಷಣ ವಾಟ್ಸ್ಅಪ್ ಅಲ್ಲದ ಸಂದೇಶ ರವಾನೆಯ ಅಪ್ಲಿಕೇಶನ್ ಒಂದನ್ನು ರೂಪಿಸಿಕೊಂಡು ಪ್ರಮುಖರದ್ದೊಂದು ಜಾಲ ನಿಮರ್ಿಸಿತು. ಸುಷ್ಮಾ ಸ್ವರಾಜ್ ಸ್ವತಃ ತಾನೇ ಅರವತ್ತು ಕರೆಗಳನ್ನು ಜಗತ್ತಿನ ಬೇರೆ ಬೇರೆ ರಾಷ್ಟ್ರದ ಪ್ರಮುಖರಿಗೆ ಮಾಡಿ ಬೆಂಬಲ ಅಚಲವಾಗಿರುವಂತೆ ನೋಡಿಕೊಂಡರು. ಸ್ವತಃ ಪ್ರಧಾನಿ ಮೋದಿಯವರು ಕೆಲವು ಪ್ರಮುಖರಿಗೆ ಕರೆ ಮಾಡಿ ಒತ್ತಡ ಹೇರುವ ತಂತ್ರ ರೂಪಿಸಿದರು. ಕೆಲವರೊಡನೆ ಪ್ರೀತಿಯ ಮಾತುಗಳು ಸಾಕಾಗುತ್ತಿದ್ದವು. ಒಂದಷ್ಟು ಯೂರೋಪಿಯನ್ ರಾಷ್ಟ್ರಗಳಿಗೆ ಭಿನ್ನಭಿನ್ನ ಮಾರ್ಗಗಳನ್ನೂ ಬಳಸಬೇಕಾಯ್ತು. ಮೋದಿ ಈ ಚಟುವಟಿಕೆಗೆ ಆಸಿಯಾನ್ ಮತ್ತು ಪೂರ್ವ ಏಷಿಯಾದ ಸಭೆಗಳನ್ನೂ ಬಿಡಲಿಲ್ಲ.  ಎಲ್ಲೆಲ್ಲೂ ದಲ್ವೀರ್ ಭಂಡಾರಿಯವರನ್ನು ಗೆಲ್ಲಿಸುವ ಸವಾಲೇ ಮುಖ್ಯವಾಗಿತ್ತು. ನ್ಯೂಯಾಕರ್್ನಲ್ಲಿ ಬೀಡುಬಿಟ್ಟಿರುವ ಭಾರತದ ರಾಜತಾಂತ್ರಿಕರು ರಾತ್ರಿ ಮಲಗಿರುವಾಗ ಇಲ್ಲಿ ಬೆಳಗಾಗಿರುತ್ತಿತ್ತು. ಆ ವೇಳೆಗೆ ಇಲ್ಲಿನ ವಿದೇಶಾಂಗ ಕಾಯರ್ಾಲಯದಿಂದ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ರಾಯಭಾರಿಗಳನ್ನು ಸಂಪಕರ್ಿಸಿ ಮಾತುಕತೆ ನಡೆಸಲಾಗುತ್ತಿತ್ತು. ಇಲ್ಲಿನವರು ಮಲಗುವ ವೇಳೆಗೆ ಅಲ್ಲಿ ಬೆಳಕಾಗಿರುತ್ತಿತ್ತಲ್ಲ ಆಗ ಅಲ್ಲಿ ಚಟುವಟಿಕೆ ಗರಿಗೆದರುತ್ತಿತ್ತು. ಒಟ್ಟಾರೆ ದಿನದ ಇಪ್ಪತ್ನಾಲ್ಕೂ ಗಂಟೆಗಳ ಕಾಲ ಬಿಡುವಿಲ್ಲದ ಚಟುವಟಿಕೆ ನಡೆದು ಹತ್ತು ದಿನಗಳು ಸರಿದವು. ನ್ಯೂಯಾಕರ್ಿನಲ್ಲಿದ್ದ ಒಬ್ಬೊಬ್ಬ ರಾಜತಾಂತ್ರಿಕ ಅಧಿಕಾರಿಗೂ ಇಪ್ಪತ್ತಿಪ್ಪತ್ತು ರಾಷ್ಟ್ರಗಳನ್ನು ನೀಡಲಾಗಿತ್ತು. ಅವರನ್ನು ಸಂಭಾಳೀಸಿಕೊಂಡು ಮರು ಚುನಾವಣೆ ನಡೆಯುವಾಗ ಅವರು ನಮ್ಮ ಪಾಳಯ ಬಿಟ್ಟು ಹೋಗದಂತೆ ನೋಡಿಕೊಂಡರಾಗಿತ್ತು ಅಷ್ಟೇ. ಭಾರತ ಯಾವ ಅವಕಾಶವನ್ನೂ ಬಿಟ್ಟುಕೊಡದೇ ನಿರುತ ಪ್ರಯತ್ನದಲ್ಲಿದ್ದರೆ ಬ್ರಿಟನ್ ತನ್ನ ಎಂದಿನ ಧಿಮಾಕಿನೊಂದಿಗೆ ಗೆದ್ದೇ ಗೆಲ್ಲುವ ಹಮ್ಮಿನೊಂದಿಗೆ ಮೆರೆದಿತ್ತು. ಮುಂದಿನ ಸುತ್ತಿನ ಚುನಾವಣೆ ನಡೆದಾಗ ಭಾರತದ ಪರವಾಗಿ ಜನರಲ್ ಕೌನ್ಸಿಲ್ನಲ್ಲಿ 193ರಲ್ಲಿ 183 ವೋಟುಗಳು ಬಿದ್ದಿದ್ದವು.

ಭಾರತ ನಿಸ್ಸಂಶಯವಾಗಿ ಗೆಲುವನ್ನು ದಾಖಲಿಸಿತ್ತು. ಸೋಲುವುದು ಖಾತ್ರಿಯಾಗುವ ಲಕ್ಷಣ ಗೊತ್ತಾದೊಡನೆ ಜಂಟಿ ಸಭೆ ಕರೆದು ತನ್ನ ಗೆಲುವನ್ನು ನಿಶ್ಚಿತ ಪಡಿಸಿಕೊಳ್ಳುವ ಹಿಂಬಾಗಿಲಿನ ಕದನದ ಮುನ್ಸೂಚನೆ ಕೊಟ್ಟಿತು ಬ್ರಿಟನ್. ತಕ್ಷಣವೇ ಭಾರತ ಜಾಗತಿಕ ಪತ್ರಿಕೆಗಳನ್ನು ಬಳಸಿ, ಭಾರತೀಯ ಮಾಧ್ಯಮಗಳನ್ನು ತನ್ನ ದಾಳವಾಗಿಸಿಕೊಂಡು ಬ್ರಿಟನ್ನಿನ ಈ ಹಿಂದಿನ ಬಂಡವಾಳಷಾಹೀ ಚರಿತ್ರೆಯನ್ನು ಬಯಲಿಗೆಳೆಯಿತು. ಅಧಿಕಾರಕ್ಕಾಗಿ ಎಂತಹ ಪಥವನ್ನು ತುಳಿಯಲೂ ಹೇಸದ ಅದರ ‘ಡಟರ್ಿ ಟ್ರಿಕ್ಸ್’ಗಳನ್ನು ಸೂಕ್ತವಾಗಿ ಬೆಳಕಿಗೆ ತಂತು. ಜಾಗತಿಕ ಮಟ್ಟದಲ್ಲಿ ಅದಕ್ಕೆ ಬಲು ಮುಖಭಂಗ. ಸ್ವತಃ ಸೆಕ್ಯುರಿಟಿ ಕೌನ್ಸಿಲ್ಗೂ ಬ್ರಿಟನ್ನಿನೊಂದಿಗೆ ನಿಲ್ಲುವುದಕ್ಕೆ ಧೈರ್ಯವಿರದಂತಾಯ್ತು. ಇಷ್ಟಾದರೂ ಮೆತ್ತಗಾಗುವ ಲಕ್ಷಣ ಕಾಣದಾದಾಗ ಭಾರತ ತನ್ನ ಸಂಬಂಧವನ್ನು ಮುಂದಿರಿಸಿ ಕಾಮನ್ವೆಲ್ಥ್ನ ಸದಸ್ಯರಾಷ್ಟ್ರಗಳು ಸಿಡಿದೇಳುವ ದುಃಸ್ವಪ್ನ ತೋರಿಸಿ, ವ್ಯಾಪಾರದ ಒಪ್ಪಂದಗಳ ಕುರಿತಂತೆ ಎಚ್ಚರಿಕೆ ಮೂಡಿಸಿ ಬ್ರಿಟನ್ನ ಎದೆ ನಡುಗುವಂತೆ ಮಾಡಿತು. ಅಲ್ಲಿಗೆ ಬಾಗಿದ ಬ್ರಿಟನ್ ತನಗಾಗುವ ಮುಖಭಂಗವನ್ನು ತಡೆದುಕೊಳ್ಳಲು ತನ್ನ ಅಭ್ಯಥರ್ಿಯನ್ನು ಹಿಂಪಡೆಯಿತು. ದಲ್ವೀರ್ ಸಿಂಗ್ ಅಧಿಕೃತವಾಗಿ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಪೀಠದ ಸದಸ್ಯರಾಗಿ ಮುಂದುವರಿದರು. ಭಾರತ ಜಯದ ನಗೆ ಬೀರಿತು.

ಮೋದಿ ಸಾಮಾನ್ಯರಲ್ಲ. ಜಗತ್ತನ್ನು ಬೆರಳ ತುದಿಯಲ್ಲಿ ಆಡಿಸಬ್ಲಲರು. ಜಾಗತಿಕ ಚುನಾವಣೆಗಳನ್ನು ತಂತ್ರಗಾರಿಕೆಯಿಂದ ಗೆಲ್ಲಬಲ್ಲರು! ಎಲ್ಲಕ್ಕೂ ಮಿಗಿಲಾಗಿ ಕಳೆದುಹೋದ ಭಾರತದ ಆತ್ಮವಿಶ್ವಾಸವನ್ನು ಮತ್ತೆ ಗರಿಗೆದರುವಂತೆ ಮಾಡಬಲ್ಲರು. ವಾವ್! ಭಾರತ ಬಲಿಷ್ಠ ಕೈಗಳ್ಳಲಿದೆ.

Leave a Reply