ವಿಭಾಗಗಳು

ಸುದ್ದಿಪತ್ರ


 

ಗೋಹತ್ಯೆಯ ಹಿಂದಿನ ‘ಹಿಡನ್ ಅಜೆಂಡಾ’

ಹಿಂದೂಗಳ ನಂಬಿಕೆಯನ್ನು ಬದಿಗಿಟ್ಟು ನೋಡಿದಾಗಲೂ ದೇಸೀ ಗೋವುಗಳನ್ನು ಉಳಿಸಬೇಕೆಂಬ ಕೂಗು ವೈಜ್ಞಾನಿಕವಾದುದೇ. ಕಾಳಜಿ ಇರೋದು ಯಾವುದೋ ಸಂಸ್ಕೃತಿ, ಆಚರಣೆಗಳದ್ದಲ್ಲ ಬದಲಿಗೆ ಹಿಂದೂಗಳನ್ನು ವಿರೋಧಿಸೋದು ಮಾತ್ರ. ಇಲ್ಲವಾದಲ್ಲಿ ದೀಪಾವಳಿಗೆ ಪಟಾಕಿ ಸುಟ್ಟರೆ ಪರಿಸರ ನಾಶವಾಗುತ್ತದೆನ್ನುವ ಈ ಹೋರಾಟಗಾರರು ಗೋವು ಕಡಿದರೆ ಭೂ ತಾಪಮಾನ ಏರಿಕೆಯಾಗುವುದೆಂಬುದನ್ನು ಮಾತ್ರ ಅದೇಕೆ ಅಲಕ್ಷಿಸುತ್ತಾರೆ? ‘ಹಿಡನ್ ಅಜೆಂಡಾ’ ಅಂದರೆ ಇದೇ.

ಜಾತ್ಯತೀತತೆಯ ಮುಸುಕೆಳೆದು ಭಾರತವನ್ನು ಭಾರತೀಯರನ್ನು ಎಷ್ಟು ಸಾಧ್ಯವೋ ಅಷ್ಟು ಶೋಷಿಸಲಾಗುತ್ತಿದೆ. ಕಳೆದ ಎರಡು ಮೂರು ದಶಕಗಳಲ್ಲಂತೂ ಇದು ಪರಂಪರೆಯನ್ನು ನಂಬಿ ಪ್ರಗತಿಯೆಡೆಗೆ ದಾಪುಗಾಲಿಡುತ್ತಿರುವ ಪ್ರತಿಯೊಬ್ಬರ ಕಾಲಿಗೂ ತೊಡಕಾಗಿ ಪರಿಣಮಿಸುತ್ತಿದೆ. ಸುನೀತಾ ನಾರಾಯಣ್ ನೆನಪಿದ್ದಾರಾ ನಿಮಗೆ? ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಮುಖ್ಯಸ್ಥೆ. ಪೆಪ್ಸಿ-ಕೋಕ್ಗಳಲ್ಲಿ ಜೀವ ಹಾನಿ ಮಾಡಬಲ್ಲ ವಿಷಕಾರಕ ಅಂಶಗಳಿವೆ ಅನ್ನೋದನ್ನು ವೈಜ್ಞಾನಿಕವಾಗಿ ದೃಢಪಡಿಸಿದಾಕೆ. ಆಕೆಯದ್ದೊಂದು ಪತ್ರಿಕೆ ಇದೆ. ಡೌನ್ ಟು ಅಥರ್್ ಅಂತ. ಸಹಜ ಬದುಕಿನ ಬಗ್ಗೆ, ಪ್ರಕೃತಿ ಪೂರಕವಾದ ಸಂಗತಿಗಳ ಬಗ್ಗೆ ಅಧಿಕೃತ ಮಾಹಿತಿ ನೀಡಬಲ್ಲ ಮಾಸಿಕ ಅದು. ಆಕೆಯೂ ಕೂಡ ಕಳೆದ ಮಾಚರ್್ ತಿಂಗಳ ಲೇಖನದಲ್ಲಿ ಭಾರತೀಯ ಪರಿಸರವಾದಿಯಾಗಿ ಸಸ್ಯಾಹಾರದ ಪರ ನಿಲ್ಲಲಾರೆ ಎಂದುಬಿಟ್ಟಿದ್ದಾಳೆ. ಅದಕ್ಕೆ ಕೊಡುವ ಕಾರಣವೇನು ಗೊತ್ತೇ? ‘ಭಾರತ ಜಾತ್ಯತೀತ ರಾಷ್ಟ್ರವಾದುದರಿಂದ ಇಲ್ಲಿನ ಜನರ ಆಹಾರ, ಸಂಸ್ಕೃತಿ ಭಿನ್ನವಾಗಿದೆ. ಬೇರೆ ಬೇರೆ ಮತ-ಪಂಥಗಳ, ಆಹಾರ ಪದ್ಧತಿ ಬೇರೆ ಬೇರೆ. ಅಷ್ಟೇ ಅಲ್ಲ. ಬಹುತೇಕರಿಗೆ ಪ್ರೋಟೀನ್ ಪೂರೈಕೆಯಾಗೋದೇ ಮಾಂಸಾಹಾರದಿಂದ. ಹೀಗಾಗಿ ಅದನ್ನು ವಿರೋಧಿಸಬಾರದು’ ಅಂತ. ಇದೇ ಪತ್ರಿಕೆ ಕಳೆದ ಅನೇಕ ವರ್ಷಗಳಿಂದ ಅಮೇರಿಕಾ, ಚೀನಾ ಮತ್ತು ಭಾರತದಂತಹ ರಾಷ್ಟ್ರಗಳಲ್ಲಿ ತಾಪಮಾನ ಏರಿಕೆಗೆ ಮಾಂಸಾಹಾರವೇ ಕಾರಣ. ಅದರಲ್ಲೂ ಹೆಚ್ಚು ಹೆಚ್ಚು ಗೋಪರಿವಾರದ ಮಾಂಸ ಹೆಚ್ಚು ಹೆಚ್ಚು ಭೂಮಂಡಲದ ಬಿಸಿ ಏರಿಕೆಗೆ ಕಾರಣ ಎಂದು ಉದ್ದುದ್ದ ಲೇಖನಗಳನ್ನು ಪ್ರಕಟಿಸಿತ್ತು. ಭಾರತ ಮೀಥೇನ್ ಅನಿಲವನ್ನು ಹೆಚ್ಚು ಹೆಚ್ಚು ಹೊರ ಹಾಕುವುದಕ್ಕೆ ಪಶು ಸಂಗೋಪನೆಯೇ ಕಾರಣ ಎಂಬುದನ್ನು ಆಧಾರ ಸಹಿತ ವಿವರಿಸಿತ್ತು. ವಲ್ಡರ್್ ವಾಚ್ ಇನ್ಸ್ಟಿಟ್ಯೂಟ್ ತನ್ನ ವರದಿಯಲ್ಲಿ ಜಗತ್ತಿನ ಅರ್ಧ ಭಾಗದಷ್ಟು ಹಸಿರು ಮನೆ ಅನಿಲಗಳ ಬಿಡುಗಡೆಗೆ ಗೋವು, ಎಮ್ಮೆ, ಕುರಿ, ಮೇಕೆ, ಒಂಟೆ ಮತ್ತು ಹಂದಿಯಂತಹ ಪಶು ಕೃಷಿಯೇ ಕಾರಣ ಅಂತ ಬಲು ಸ್ಪಷ್ಟವಾಗಿ ಹೇಳಿದೆ.. ಆಕ್ಸ್ಫಡರ್್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ ದಿನಕ್ಕೆ ನೂರು ಗ್ರಾಂ, (ಹೌದು ನೂರೇ ಗ್ರಾಂ) ಮಾಂಸ ತಿನ್ನುವವನು ಸುಮಾರು ಏಳುವರೆ ಕೇಜಿಯಷ್ಟು ಇಂಗಾಲದ ಡೈ ಆಕ್ಸೈಡ್ ಹೊರ ಹಾಕುತ್ತಾನೆ. ಸಸ್ಯಾಹಾರಿಯೊಬ್ಬನಿಗಿಂತ ಎರಡೂವರೆ ಪಟ್ಟು ಹೆಚ್ಚಂತೆ ಇದು.

cattle-trafficking-3

ಪ್ರಾಣಿ ಲೋಕ ಬಲು ವಿಶಿಷ್ಟವಾದುದು. ಅಲ್ಲಿ ನಡೆದಿರುವ ಸಂಶೋಧನೆಗಳನ್ನು ನೀವು ಗಮನಿಸಿದರೆ ಅವಾಕ್ಕಾಗುವಿರಿ. ವಾತಾವರಣದಲ್ಲಿ ತಾಪಮಾನ ವೃದ್ಧಿಯಾಗಲು ಪ್ರಾಣಿಗಳು ಬಿಡುಗಡೆ ಮಾಡುವ ಮೀಥೇನ್ ಅನಿಲದ್ದೇ ಮಹತ್ವದ ಕೊಡುಗೆಯೆಂದು ವಿಜ್ಞಾನಿಗಳು ಸಂಶೋಧಿಸಿದಾಗಿನಿಂದ ಅದರ ಕುರಿತು ಬಗೆ ಬಗೆಯ ವರದಿಗಳು ಹೊರ ಬರಲಾರಂಭಿಸಿದವು. ನೆನಪಿರಲಿ. ಇಂಗಾಲದ ಡೈ ಆಕ್ಸೈಡ್ಗಿಂತಲೂ ಮೀಥೇನ್ ಭಯಾನಕ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಈ ಕುರಿತಂತೆ ವಿಶೇಷ ಅಧ್ಯಯನಗಳು ನಡೆದು ಪ್ರಾಣಿಗಳು ತಿಂದ ಆಹಾರದಲ್ಲಿ ಸುಮಾರು ಶೇಕಡಾ 10 ರಷ್ಟು ಭಾಗ ಮೀಥೇನ್ ಆಗಿ ಪರಿವತರ್ಿತಗೊಂಡು ಅವುಗಳ ಪೃಷ್ಠಭಾಗದಿಂದ ಅನಿಲ ರೂಪದಲ್ಲಿ ಹೊರಬರುತ್ತವೆಂಬುದನ್ನು ಗುರುತಿಸಿದರು. ಆಶ್ಚರ್ಯವೆಂದರೆ 2003 ರಲ್ಲಿ ನ್ಯೂಜಿಲೆಂಡಿನಲ್ಲಿ ಪ್ರಾಣಿಗಳನ್ನು ಸಾಕಿದವರು ಈ ಕಾರಣಕ್ಕಾಗಿ ‘ಹೂಸು ತೆರಿಗೆ’ ಕಟ್ಟಬೇಕಿತ್ತು. ರೈತರು ಪ್ರತಿಭಟಿಸಿದ್ದರಿಂದ ಈ ತೆರಿಗೆಯನ್ನು ಹಿಂದೆಗೆದುಕೊಳ್ಳಲಾಗಿತ್ತು. ಆಗಲೇ ಕಡಿಮೆ ಮೀಥೇನ್ ಉಗುಳುವ ಹಸು ತಳಿಗಳ ಸೃಷ್ಟಿಗೆ ಜಗತ್ತು ಮನಸ್ಸು ಮಾಡಿದ್ದು. ಮಾಂಸಕ್ಕಾಗಿ ಪಶುಗಳನ್ನು ಸಾಕುವುದು ಪರಿಸರದ ದೃಷ್ಟಿಯಿಂದ ಬಲು ಅಪಾಯಕಾರಿ ಎಂಬ ಅರಿವು ಮೂಡಿದ್ದೂ ಆಗಲೇ. ಅದರಲ್ಲೂ ಹಸುವಿನ ಮಾಂಸ ಉಳಿದೆಲ್ಲಕ್ಕಿಂತಲೂ ಭಯಾನಕವೆಂದು ಸ್ಕೆಪ್ಟಿಕಲ್ ಸೈನ್ಸ್ ವರದಿ ಮಾಡಿತು. ಅದಕ್ಕೆ ತರ್ಕವನ್ನೂ ಸಮರ್ಥವಾಗಿಯೇ ಮಂಡಿಸಿತ್ತು. ದನದ ಮಾಂಸ ಉತ್ಪಾದನೆಗೆ ಇತರ ಪ್ರಾಣಿಗಳ ಕೃಷಿಗಿಂತಲೂ 28 ಪಟ್ಟು ಅಧಿಕ ಭೂ ಪ್ರದೇಶ ಬೇಕು, 6 ಪಟ್ಟು ಅಧಿಕ ರಸಗೊಬ್ಬರ ಬೇಕು, ಹನ್ನೊಂದು ಪಟ್ಟು ಅಧಿಕ ನೀರು ಬೇಕು. ಅದಕ್ಕೆ ದನವನ್ನು ಮಾಂಸಕ್ಕಾಗಿ ಸಾಕುವುದರಿಂದ ಹಂದಿ ಸಾಕಣೆಗಿಂತ 4 ಪಟ್ಟು ಮತ್ತು ಕೋಳಿ ಸಾಕಣೆಗಿಂತ 5 ಪಟ್ಟು ಮೀಥೇನ್ ಅನಿಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಅಜರ್ೆಂಟೈನಾದಂತಹ ರಾಷ್ಟ್ರಗಳಲ್ಲಿ ಮಾಂಸದ ರಫ್ತಿಗಾಗಿಯೇ ದನ ಸಾಕುತ್ತಾರಲ್ಲ ಅಲ್ಲೆಲ್ಲಾ ಮನುಷ್ಯರಿಗಿಂತ ದನಗಳ ಸಂಖ್ಯೆಯೇ ಹೆಚ್ಚಿವೆ. ಅಲ್ಲಿ ಬಿಡುಗಡೆಯಾಗಬಹುದಾದ ಮೀಥೇನ್ ಪ್ರಮಾಣ ಅಂದಾಜು ಮಾಡಿ. ಇವುಗಳಿಗೆ ಬೆದರಿಯೇ ವಿಜ್ಞಾನಿಗಳು ಹಸುವಿನ ಗಂಟಲಿಗೆ ಪೈಪು ತುರುಕಿ ಮೀಥೇನ್ ಅನಿಲವನ್ನು ತಾವಾಗಿಯೇ ಹೊರ ತೆಗೆದು ಸಿಲಿಂಡರಿಗೆ ತುಂಬಿ ಬಳಸುವ ಯೋಜನೆಗೆ ಪ್ರಯತ್ನ ಮಾಡಿದರು. ಒಂದು ದಿನಕ್ಕೆ ಒಂದು ಗೋವು 300 ಲೀಟರ್ ಮೀಥೇನ್ ಉತ್ಪಾದಿಸುತ್ತದೆ ಮತ್ತು ಇದು ಒಂದು ದಿನ ಮನೆಯಲ್ಲಿನ ನೂರು ಲೀಟರಿನ ಫ್ರಿಜ್ಜು ಕೆಲಸ ಮಾಡಲು ಸಾಕಾಗುವಷ್ಟು ಶಕ್ತಿ ಉತ್ಪಾದಿಸುತ್ತದೆ. ಈ ಶಕ್ತಿಯನ್ನು ಸಂಗ್ರಹಿಸಿ ಬಳಸೋದು ಕಷ್ಟವೆಂದು ಅರಿವಾದಾಗ ಹುಟ್ಟಿದ ಕರುವಿಗೇ ಔಷಧಿ ಕೊಟ್ಟು ಮೀಥೇನ್ ಉತ್ಪಾದಿಸುವ ಬ್ಯಾಕ್ಟೀರಿಯಾಗಳನ್ನೇ ನಾಶಗೈಯ್ಯುವ ಪ್ರಯತ್ನವನ್ನು ಮಾಡಲಾಯ್ತು. ಯಾವುದರಲ್ಲಿಯೂ ಯಶ ಕಾಣದಾದಾಗ ಬಡ ರಾಷ್ಟ್ರಗಳನ್ನು ಪುಸಲಾಯಿಸಿ ಅಲ್ಲೆಲ್ಲಾ ಹೆಚ್ಚು ಹೆಚ್ಚು ಮಾಂಸ ಉತ್ಪಾದನೆಗಾಗಿ ಪ್ರಾಣಿಗಳನ್ನು ಸಾಕುವ ವೃತ್ತಿಗೆ ಪ್ರೇರೇಪಿಸಿ ಶ್ರೀಮಂತ ರಾಷ್ಟ್ರಗಳ ಬಾಯಿ ಚಪಲ ನೀಗಿಸುವ ಕಾಯಕ ಮುಂದುವರೆಸಲಾಯಿತು. ಹೀಗೆ ಯಾರದ್ದೋ ಬಾಯಿ ಚಪಲಕ್ಕೆ ನಮ್ಮ ಸಂಪತ್ತನ್ನು ನಾಶಗೈಯ್ಯುವ ರಾಷ್ಟ್ರಗಳಲ್ಲಿ ನಾವು ಅಗ್ರಣಿಯಾದೆವು ಅಷ್ಟೇ.

cow-shed-gaushala

ಹೌದು. ಭಾರತೀಯ ಗೋತಳಿ ಅಕ್ಷರಶಃ ಸಂಪತ್ತೇ. ಕಳೆದ ವರ್ಷ ಟೆಲಿಗ್ರಾಫ್ ಪತ್ರಿಕೆ ತಮಿಳುನಾಡಿನ ಕುಳ್ಳ ಗೋತಳಿಯ ಕುರಿತಂತೆ ಬರೆಯುತ್ತ ಇದು ಇತರೆ ಜಾಗತಿಕ ತಳಿಗಳಿಗಿಂತ ಅತಿ ಕಡಿಮೆ ಮೀಥೇನ್ ಉಗುಳುವ ತಳಿಯೆಂದು ಹೊಗಳಿತು. ವಿದೇಶೀ ದನಗಳನ್ನು ಕಟ್ಟಿದ ಕೊಟ್ಟಿಗೆಗೂ, ದೇಸೀ ದನಗಳನ್ನು ಕಟ್ಟಿದ ದನದ ಕೊಟ್ಟಿಗೆಗೂ ಇರುವ ಭಿನ್ನ ಬಗೆಯ ವಾಸನೆ ನೋಡಿಯೇ ಇದನ್ನು ಅವಲೋಕಿಸಬಹುದು. ಕೇರಳದ ಖ್ಯಾತ ಪಶು ವೈದ್ಯ ಡಾ|| ಎಲ್ಯಾದೆತ್ ಮುಹಮ್ಮದ್ ‘ಭಾರತೀಯ ತಳಿಯ ಗೋವುಗಳು ಉಗುಳುವ ಮೀಥೇನ್ ಪ್ರಮಾಣ ಬಲು ಕಡಿಮೆ’ ಎಂದು ಅಧಿಕೃತ ದಾಖಲೆಗಳ ಮೂಲಕ ಸಿದ್ಧಪಡಿಸಿದ್ದಾರೆ. ಅಷ್ಟೇ ಅಲ್ಲ. ಇಷ್ಟು ಗೋ ಸಂಪತ್ತನ್ನು ಹೊಂದಿದ್ದಾಗ್ಯೂ ಅವುಗಳಿಂದ ಹೊರಬರುವ ಮೀಥೇನ್ ಪ್ರಮಾಣ ಬಲು ಕಡಿಮೆಯದಾದ್ದರಿಂದ ಜಾಗತಿಕ ತಾಪಮಾನ ಏರಿಕೆಗೆ ಭಾರತವನ್ನು ದೂರುವಂತಿಲ್ಲ ಎಂದು ಮುಂದುವರಿದ ರಾಷ್ಟ್ರಗಳಿಗೆ ಸವಾಲೆಸೆದಿದ್ದಾರೆ. ಒಂದು ಹೆಜ್ಜೆ ಮುಂದುವರೆದು ಜಗತ್ತಿನ ಬಿಸಿ ಏರುವಿಕೆಯ ಸಮಸ್ಯೆಯ ಪರಿಹಾರಕ್ಕೆ ಭಾರತೀಯ ತಳಿಗಳನ್ನು ಅಭಿವೃದ್ಧಿ ಪಡಿಸಿ ಜಗತ್ತಿಗೆ ಪರಿಚಯಿಸುವುದೊಂದೇ ಮಾರ್ಗ ಎಂದಿದ್ದಾರೆ. ಹಿಂದೂಗಳ ನಂಬಿಕೆಯನ್ನು ಬದಿಗಿಟ್ಟು ನೋಡಿದಾಗಲೂ ದೇಸೀ ಗೋವುಗಳನ್ನು ಉಳಿಸಬೇಕೆಂಬ ಕೂಗು ವೈಜ್ಞಾನಿಕವಾದುದೇ. ಆದರೆ ಸ್ಥಾಪಿತ ಹಿತಾಸಕ್ತಿಯ ಒಂದಷ್ಟು ಜನ ಶತಾಯ ಗತಾಯ ಗೋಹತ್ಯೆ ನಡೆಯಲೇಬೇಕೆಂದು ನಿರ್ಧರಿಸಿಬಿಟ್ಟಿದ್ದಾರೆ. ಅವರಿಗೆಲ್ಲ ಕಾಳಜಿ ಇರೋದು ಯಾವುದೋ ಸಂಸ್ಕೃತಿ, ಆಚರಣೆಗಳದ್ದಲ್ಲ ಬದಲಿಗೆ ಹಿಂದೂಗಳನ್ನು ವಿರೋಧಿಸೋದು ಮಾತ್ರ. ಇಲ್ಲವಾದಲ್ಲಿ ದೀಪಾವಳಿಗೆ ಪಟಾಕಿ ಸುಟ್ಟರೆ ಪರಿಸರ ನಾಶವಾಗುತ್ತದೆನ್ನುವ ಈ ಹೋರಾಟಗಾರರು ಗೋವು ಕಡಿದರೆ ಭೂ ತಾಪಮಾನ ಏರಿಕೆಯಾಗುವುದೆಂಬುದನ್ನು ಮಾತ್ರ ಅದೇಕೆ ಅಲಕ್ಷಿಸುತ್ತಾರೆ? ‘ಹಿಡನ್ ಅಜೆಂಡಾ’ ಅಂದರೆ ಇದೇ.

ಇವರ ಈ ಬೌದ್ಧಿಕ ದಾರಿದ್ರ್ಯದಿಂದಾಗಿ ಭಾರತೀಯ ತಳಿಗಳು ಹಂತ ಹಂತವಾಗಿ ಕಾಣೆಯಾಗುತ್ತಿವೆ. 2012ರಲ್ಲಿ ಹೈದರಾಬಾದಿನ ಪಶು ವಿಜ್ಞಾನಿ ಸಾಗರಿ ರಾಮದಾಸ್ ಮಲೇಷಿಯಾದ ಪಶುಕೃಷಿಯ ಅಧ್ಯಯನಕ್ಕೆಂದು ಹೋಗಿದ್ದರು. ಅಲ್ಲಿ ಕಳೆದ 40 ವರ್ಷಗಳಿಂದ ಔದ್ಯಮಿಕ ಕ್ರಾಂತಿಯಿಂದಾಗಿ ಪಶು ಸಂಗೋಪನೆ ಮೂಲೆಗುಂಪಾಗಿಬಿಟ್ಟಿದೆ. ಅಲ್ಲೀಗ ಹಸುಗಳ ತಳಿ ಅಭಿವೃದ್ಧಿಗೆ ಬೇಕಾದ ವ್ಯವಸ್ಥೆಗೂ ಔದ್ಯಮಿಕ ವಲಯದತ್ತಲೇ ಮೊರೆ ಹೋಗಬೇಕಾದ ಸ್ಥಿತಿ ಇದೆ. ಹಾಗೆ ನೋಡಿದರೆ ಭಾರತದಲ್ಲೂ ಅದೇ ಸ್ಥಿತಿ ಇದೆ. ಹಸುವೊಂದಕ್ಕೆ ಗರ್ಭಧಾರಣೆಯೂ ಅಸಹಜವಾಗಿ ನಡೆಯುತ್ತಿದೆ ಮತ್ತು ದೇಸೀ ತಳಿಗಳೊಂದಿಗೆ ವಿದೇಶೀ ತಳಿಗಳ ಸಂಕರ ಎಗ್ಗಿಲ್ಲದೇ ನಡೆಯುತ್ತಿದೆ. ಆದರೆ ಇಡಿಯ ಲೇಖನದ ಪ್ರಮುಖ ಅಂಶವೆಂದರೆ ಅಲ್ಲಿನ ಜನ ಪದೇ ಪದೇ ಪರಿಚಯಿಸುತ್ತಿದ್ದ ‘ಬ್ರಾಹ್ಮಣ’ ಎಂಬ ಜಾತಿಯ ಹಸು. ಸಾಗರಿ ಅದರ ಹೆಸರಿನಿಂದಲೇ ಅವಾಕ್ಕಾಗಿ ಅದರ ಮೂಲ ಅರಸುತ್ತ ನಡೆದಾಗ ಅಲ್ಲಿನ ತಮಿಳು ಜನಾಂಗದವರ ಬಳಿ ಅದು ಕಂಡು ಬಂತು. ಹಾಗಂತ ಅದು ತಮಿಳು ಗೋ ತಳಿಯಾಗಿರಲಿಲ್ಲ. ಉತ್ತರ ಭಾರತದ ಗೀರ್, ಒಂಗೋಲ್ಗಳ ಮಿಶ್ರ ತಳಿಯಂತಿತ್ತು. ಇಡಿಯ ಮಲೇಷಿಯಾದಲ್ಲಿ ಈ ಕುರಿತಂತೆ ಯಾರಿಗೂ ಸಮಗ್ರ ಮಾಹಿತಿಯಿರಲಿಲ್ಲ. ಮರಳಿದ ಸಾಗರಿ ರಾಮದಾಸ್ ಇದರ ಕುರಿತು ಸಂಶೋಧನೆ ಆರಂಭಿಸಿದಾಗಲೇ ಅರಿವಾದದ್ದು 1854 ರಿಂದ 1926 ರ ನಡುವೆ 266 ನಂದಿಗಳು ಮತ್ತು 22 ಭಾರತೀಯ ತಳಿಯ ದನಗಳ ಜೀವಕೋಶಗಳನ್ನು ಸಂಗ್ರಹಿಸಿ ಆಳುತ್ತಿದ್ದ ಬ್ರಿಟೀಷರು ಅದನ್ನು ಯೂರೋಪಿಗೊಯ್ದಿದ್ದರು. ಅಲ್ಲಿ ಕಾಂಕ್ರೀಜ್, ಗೀರ್, ಒಂಗೋಲ್ ಮೊದಲಾದ ನಾಲ್ಕು ತಳಿಗಳ ಮಿಶ್ರಣದಿಂದ ತಯಾರಾದ ತಳಿಯಾಗಿತ್ತು ಅದು. ಕಾಲಕ್ರಮದಲ್ಲಿ ಈ ಬ್ರಾಹ್ಮಣ ತಳಿ ಪಶ್ಚಿಮದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು. ಅದರ ಸರ್ವ ಋತುವಿಗೂ ಒಗ್ಗುವ ಗುಣವೇ ಅದನ್ನು ಜಾಗತಿಕ ಖ್ಯಾತಿಯ ಉತ್ತುಂಗಕ್ಕೇರಿಸಿತು. ಮುಂದೆ ಆಸ್ಟ್ರೇಲಿಯಾಕ್ಕೆ ಬಂದ ಈ ತಳಿ ಆ ನಂತರ ಮಲೇಷಿಯಾಕ್ಕೂ ಬಂತು ಎನ್ನುತ್ತಾರೆ ಆಕೆ. ಆಕ್ರೋಶದಿಂದಲೇ ‘ನಮ್ಮಿಂದ ಕದ್ದು ತಳಿ ಅಭಿವೃದ್ಧಿ ಪಡಿಸಿ ಮಿಲಿಯಗಟ್ಟಲೆ ಡಾಲರು ಸಂಪಾದಿಸುತ್ತಿರುವ ರಾಷ್ಟ್ರಗಳೆದುರು ನಾವೀಗ ಗುಟುರು ಹಾಕಬೇಕಿದೆ. ಬಡ್ಡಿ ಸಮೇತ ದುಡ್ಡು ವಸೂಲಿ ಮಾಡಬೇಕಿದೆ. ಅದನ್ನು ಬಿಟ್ಟು ನಮ್ಮ ವಿಜ್ಞಾನಿಗಳು, ಯೋಜನೆಯ ರೂಪಿಸುವ ಪ್ರಮುಖರು ನಮ್ಮ ತಳಿಗಳಿಗೆ ಉತ್ಪಾದನಾ ಸಾಮಥ್ರ್ಯವಿಲ್ಲವೆಂದು ಕೊರಗುತ್ತಾರೆ. ಕ್ಷೀರಕ್ರಾಂತಿ ಎನ್ನುವ ಹೆಸರಲ್ಲಿ ಜಸರ್ಿ, ಹೊಲ್ಸ್ಪೀನ್ಗಳನ್ನು ತಂದು ಸುರಿಯುತ್ತಾರೆ. ರೈತ ಹೆಚ್ಚು ಸಾಲಗಾರನಾಗುವಂತೆ ಮಾಡುತ್ತಾರೆ’ ಎನ್ನುತ್ತಾರೆ.

ಇಷ್ಟೂ ಮಾತುಗಳು ಕಾವಿ ಧರಿಸಿದ ಸಂತರದ್ದೋ, ಟೌನ್ ಹಾಲ್ ಮುಂದೆ ಪ್ರತಿಭಟಿಸುವ ಪಾಟರ್್ ಟೈಂ ಹೋರಾಟಗಾರರದ್ದೋ ಅಲ್ಲ. ಪಶು ಕೃಷಿಯ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದ ತಜ್ಞರದ್ದು! ಅಂದಮೇಲೆ ಗೋಹತ್ಯಾ ನಿಷೇಧದ ಕಾನೂನು ಎಷ್ಟು ಅಗತ್ಯವಾಗಿತ್ತು ಅನ್ನೋದನ್ನು ಒಮ್ಮೆ ಯೋಚಿಸಿ.

 

ಭಾರತೀಯ ಗೋತಳಿಗಳನ್ನು ಮುಲಾಜಿಲ್ಲದೇ ಕಟುಕರ ಕೈಗೆ ಇಲ್ಲಿ ನಾವು ಒಪ್ಪಿಸುತ್ತಿದ್ದರೆ ಅತ್ತ ಜಗತ್ತಿನ ಅನೇಕ ರಾಷ್ಟ್ರಗಳು ನಮ್ಮ ತಳಿಯನ್ನು ಅಭಿವೃದ್ಧಿ ಪಡಿಸಿ ಜಗತ್ತಿಗೆ ರಫ್ತು ಮಾಡುತ್ತಿವೆ. ನೀವು ನಂಬಲಾಗದ ಸತ್ಯವೊಂದಿದೆ. ‘ಜಗತ್ತಿನಲ್ಲಿ ಅತ್ಯಂತ ಹೆಚ್ಚು ಭಾರತೀಯ ತಳಿಯ ಗೋವುಗಳನ್ನು ರಫ್ತು ಮಾಡುವ ರಾಷ್ಟ್ರ ಬ್ರೆಜಿಲ್’. ನಾಲ್ಕೈದು ವರ್ಷಗಳ ಹಿಂದೆ ಅಲ್ಲಿನ ಹಾಲು ಕರೆಯುವ ಹಸುಗಳ ಸ್ಪಧರ್ೆಯಲ್ಲಿ 62 ಲೀಟರ್ ಹಾಲು ಕೊಟ್ಟು ಪ್ರಥಮ ಬಹುಮಾನ ಪಡೆದ ಹಸು ಯಾವುದು ಗೊತ್ತಾ? ಶೇರಾ ಎಂದು ಮರು ನಾಮಕರಣಗೊಂಡ ಗುಜರಾತಿನ ಗೀರ್ ತಳಿಗೆ ಸೇರಿದ್ದು. ಆ ಸುದ್ದಿ ಜಗತ್ತಿನಲ್ಲೆಲ್ಲಾ ಗಾಬರಿ ಹುಟ್ಟಿಸಿರುವಾಗಲೇ ಅಮೇರಿಕಾದ ವಲ್ಡರ್್ ವೈಡ್ ಸೈನ್ಸ್ ಲಿಮಿಟೆಡ್ ಅನ್ನುವ ಕಂಪನಿ ಭಾರತಕ್ಕೆ ಉತ್ಕೃಷ್ಟ ಗುಣಮಟ್ಟದ ವೀರ್ಯವನ್ನು ಕೊಡುವ ಮಾತಾಡುತ್ತಿತ್ತು. ಕೇರಳದ ಪಶು ಸಂಗೋಪನಾ ಮಂತ್ರಿ ವಿದೇಶೀ ತಳಿಯ ಸಂಕರದಿಂದ ಹೊಸ ತಳಿಯನ್ನು ಭಾರತದಲ್ಲಿ ಸೃಷ್ಟಿಸುವ ಮಾತನಾಡುತ್ತಿದ್ದರು. ಈಗಲೂ ಅಷ್ಟೇ. ಬ್ರೆಜಿಲ್ನ ಫಾಮರ್್ ಹೌಸ್ಗಳಲ್ಲಿ ಭಾರತೀಯ ತಳಿಯ ಹಸುಗಳು ದಂಡು ದಂಡಾಗಿ ಪೊಗದಸ್ತಾಗಿ ಬೆಳೆಯುತ್ತಿದ್ದರೆ ಇಲ್ಲಿ ಅವುಗಳನ್ನು ಕೊಂದು ಮಾಂಸವನ್ನು ರಫ್ತು ಮಾಡಿ ಪಿಂಕ್ ರೆವಲ್ಯೂಷನ್ ಮಾಡುವ ಮಾತನಾಡುತ್ತಿದ್ದೇವೆ.

img-banner-bs-bs5-500x500

 

ಪ್ರತಿಯೊಂದು ಗೋವು ರೈತನ ಪಾಲಿನ ಬ್ಯಾಂಕ್ ಡೆಪಾಸಿಟ್ ಇದ್ದಂತೆ. ಮನೆಯಲ್ಲಿ ಹಾಲು ಕೊಡುವ ಹಸುವೊಂದಿದ್ದರೆ ಪರಿವಾರವೇ ನಡೆಸಬಹುದಾದಷ್ಟು ಧೈರ್ಯ ಇರುತ್ತದೆ. ಹಾಗಂತ ದೇಸೀ ಹಸುವಿನ ಜಾಗದಲ್ಲಿ ಜಸರ್ಿ ಹಸುವನ್ನು ತಂದು ಕಟ್ಟಿದರೆ ಅದನ್ನು ಸಂಭಾಳಿಸುವಲ್ಲಿಯೇ ರೈತ ಹೈರಾಣಾಗಿಬಿಡುತ್ತಾನೆ. ಕನಿಷ್ಠ 5 ರಿಂದ 6 ಸಾವಿರ ರೂಪಾಯಿಯಾದರೂ ಅದಕ್ಕೆಂದು ತಿಂಗಳಿಗೆ ಖಚರ್ು ಮಾಡಲೇಬೇಕು. ಆದರೆ ದೇಸೀ ದನಗಳು ಹಾಗಲ್ಲ. ಅವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿಯೂ ಬದುಕಬಲ್ಲವು. ಊರೆಲ್ಲಾ ಅಲೆದು, ಕಾಡಿಗೆ ಹೋಗಿ ಮೇಯ್ದು ಮರಳಿ ಮನೆಗೆ ಬರಬಲ್ಲವು. ರಸ್ತೆಯಲ್ಲಿಯೂ ಅಷ್ಟೇ. ಗಾಡಿ ಒಮ್ಮೆ ಸದ್ದು ಮಾಡಿದರೆ ದೇಸೀ ದನಗಳು ಪಕ್ಕಕ್ಕೆ ಸರಿದು ಬಿಡುತ್ತವೆ. ಜಸರ್ಿ ಹಸುಗಳು ಮೈ ಭಾರವಾಗಿ ಅಲುಗಾಡಲೂ ಸಾಧ್ಯವಾಗದಂತೆ ನಡೆಯುತ್ತಿರುತ್ತವೆ. ಭಾರತೀಯ ತಳಿಗಳು ವೇಗಕ್ಕೇ ಹೆಸರುವಾಸಿ. ಅವು ಆಯಾ ಹವಾಗುಣಕ್ಕೆ ಬಲುಬೇಗ ಒಗ್ಗಿಕೊಂಡು ಬಿಡುತ್ತವೆ. ಆದರೆ ಜಸರ್ಿ ಹಸುಗಳಿಗೆ ಹವಾಮಾನ ಬದಲಾವಣೆ ಸಹಿಸಲಸಾಧ್ಯ. ಹೀಗಾಗಿಯೇ ಆಂಗ್ಲರೊಂದಿಗೆ ಪ್ರತಿಭಟಿಸುತ್ತ ಕಾದಾಡುತ್ತ ಈ ಸಂಪತ್ತನ್ನು ರಕ್ಷಿಸಿಕೊಂಡೇ ಬಂದಿದ್ದೆವು. ಈಗ ಹೊಸಯುಗದ ಆಂಗ್ಲರು ನಮ್ಮಿಂದ ಈ ಸಂಪತ್ತನ್ನು ಕಸಿದು ಇಲ್ಲಿನ ರೈತರನ್ನು, ನಾಡನ್ನು ಭಿಕಾರಿಯಾಗಿಸಲು ಹೊರಟಿದ್ದಾರೆ. ಅದಕ್ಕೆ ಆಹಾರ-ಸಂಸ್ಕೃತಿ ಎಂಬ ಮನಮೋಹಕ ಹೆಸರು ಬೇರೆ!

Leave a Reply