ವಿಭಾಗಗಳು

ಸುದ್ದಿಪತ್ರ


 

ಚಂದ್ರಗುಪ್ತ-ಚಾಣಕ್ಯರ ಗರಡಿ ಮನೆ ‘ತಕ್ಷಶಿಲೆ’!

ಜಗತ್ತಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯ ತಕ್ಷಶಿಲಾದಲ್ಲಿ ಶಾಂತಿ-ನೆಮ್ಮದಿಗಾಗಿ ವೇದ ವಿದ್ಯೆ ಕಲಿಸುವಷ್ಟೇ ಸರಾಗವಾಗಿ ಯುದ್ಧಕ್ಕಾಗಿ ಶಸ್ತ್ರ ಪ್ರಯೋಗದ ಕಲೆಯನ್ನೂ ಹೇಳಿಕೊಡಲಾಗುತ್ತಿತ್ತು. ಎಲ್ಲಿಯೂ ಜಾತಿ-ಮತ-ಪಂಥಗಳ ಆಧಾರದ ಮೇಲೆ ಶಿಕ್ಷಣದ ಅರ್ಹತೆ ನಿಗದಿಯಾಗಿರಲಿಲ್ಲ. ಆಸಕ್ತಿ ಮತ್ತು ಸಾಮಥ್ರ್ಯಗಳಷ್ಟೇ ಮುಖ್ಯವಾಗಿದ್ದವು. ಶೂದ್ರರು ವೇದಗಳನ್ನು ಕಲಿತಷ್ಟೇ ಸರಾಗವಾಗಿ ಬ್ರಾಹ್ಮಣ ಬೇಟೆ ಕಲಿಯುತ್ತಿದ್ದ. ಕ್ಷತ್ರಿಯ ಸಂಗೀತ ಕಲಿತಷ್ಟೇ ಸುಲಭವಾಗಿ, ವೈಶ್ಯ ಯುದ್ಧವಿದ್ಯಾ ಪ್ರವೀಣನಾಗಲು ಯತ್ನಿಸುತ್ತಿದ್ದ. ವಿದ್ಯಾಥರ್ಿ ವೇತನ ಪಡೆದು ಅಧ್ಯಯನ ಮಾಡಬಹುದಿತ್ತು ಅಥವಾ ಗುರುಕುಲದ ಸೇವೆ ಮಾಡುತ್ತಲೂ ಅಧ್ಯಯನ ಮಾಡಬಹುದಿತ್ತು! ತಕ್ಷಶಿಲೆಯಿಂದ ಮರಳಿ ಬಂದ ವಿದ್ಯಾಥರ್ಿಗಳಿಗೆ ಸಹಜವಾಗಿಯೇ ಅಪಾರವಾದ ಬೇಡಿಕೆ ಇತ್ತು. ಚಾಣಕ್ಯನಂತಹ ಆಚಾರ್ಯರುಗಳಿಂದ ಪಾಠ ಹೇಳಿಸಿಕೊಳ್ಳುವುದೆಂದರೇನು ಸಾಮಾನ್ಯವೇ ಮತ್ತೆ?

1

ಭಾರತದ ಇತಿಹಾಸದ ದೃಷ್ಟಿಯಿಂದ ಮೌರ್ಯಯುಗ ಅತ್ಯಂತ ಪ್ರಭಾವಿಯಾದುದು ಮತ್ತು ಅಷ್ಟೇ ಪ್ರಾಚೀನವಾದುದು. ಈ ಹಿಂದೆಯೂ ಒಮ್ಮೆ ಇದೇ ಅಂಕಣದಲ್ಲಿ ಚಚರ್ೆ ನಡೆದಿತ್ತು. ಅಲೆಕ್ಸಾಂಡರ್ನ ಸಮಕಾಲೀನನೆಂದು ಗ್ರೀಕರು ದಾಖಲಿಸಿದ ಸಾಂಡ್ರೇಕೊಟ್ಟಸ್ನನ್ನೇ ಬ್ರಿಟೀಷ್ ಇತಿಹಾಸಕಾರರು ಚಂದ್ರಗುಪ್ತನೆಂದು ಭಾವಿಸಿ ಮೌರ್ಯ ಸಾಮ್ರಾಜ್ಯಕ್ಕೆ ತಳುಕು ಹಾಕಿಬಿಟ್ಟಿದ್ದರು. ಭಾರತೀಯ ಇತಿಹಾಸದಲ್ಲಿ ಇಬ್ಬರು ಚಂದ್ರಗುಪ್ತರು ಬಲು ಪ್ರಭಾವಿಯಾದವರು. ಒಬ್ಬ ಮೌರ್ಯ ಸಾಮ್ರಾಜ್ಯದವನಾದರೆ ಮತ್ತೊಬ್ಬ ಗುಪ್ತರ ದೊರೆ. ಇಬ್ಬರ ನಡುವೆ ಸಾವಿರಕ್ಕೂ ಹೆಚ್ಚು ವರ್ಷಗಳ ಅಂತರ. ಮೌರ್ಯವಂಶದ ಅವಧಿ ಸುಮಾರು ಕ್ರಿ.ಪೂ 1500 ರ ಆಸುಪಾಸಿನದು. ಅಲೆಕ್ಸಾಂಡರನ ಆಕ್ರಮಣ ಕ್ರಿ.ಪೂ 300 ರ ಹತ್ತಿರದ್ದು! ಹೀಗಾಗಿಯೇ ಗ್ರೀಕ್ ಇತಿಹಾಸಕಾರರ ಬರಹಗಳಲ್ಲಿ ಚಾಣಕ್ಯನ ಉಲ್ಲೇಖವಿಲ್ಲ. ಚಂದ್ರಗುಪ್ತನನ್ನು ನೆನಪಿಸಿಕೊಳ್ಳುವಾಗ ಚಾಣಕ್ಯನ ಬಿಡಲಾದೀತೇ? ಇವನನ್ನು ಅವನೆಂದು ಕರೆದು ಬ್ರಿಟೀಷರು ಮಾಡಿದ ಸಾಹಸವೆಂದರೆ ಭಾರತದ ಸಾವಿರಕ್ಕೂ ಮಿಕ್ಕಿ ವರ್ಷಗಳ ಇತಿಹಾಸವನ್ನು ನುಂಗಿ ಮಾಯ ಮಾಡಿದ್ದು.
ಅನೇಕ ಬಾರಿ ನಾವೂ ಮೋಸ ಹೋಗಿ ಬಿಡುತ್ತೇವೆ. ಸ್ವತಃ ಸಾವರ್ಕರರೂ ಬ್ರಿಟೀಷ್ ಇತಿಹಾಸಕಾರರ ಪ್ರಭಾವಕ್ಕೆ ಒಳಗಾಗಿ ತಮ್ಮ ಖಥ ಉಟಠಡಿಠಣ ಜಠಿಠಛಿ ಠಜಿ ಟಿಜಚಿಟಿ ಊಣಠಡಿಥಿ ಯಲ್ಲಿ ಅಲೆಕ್ಸಾಂಡರ್ ಮತ್ತು ಚಾಣಕ್ಯನ ಭೇಟಿಯ ಕುರಿತಂತೆ ಉಲ್ಲೇಖಿಸುತ್ತಾರೆ. ಆದರೆ ಕೋಟ ವೆಂಕಟಾಚಲಂ, ಶ್ರೀರಾಂ ಸಾಠೆ ಮೊದಲಾದವರು ಈ ಕುರಿತಂತೆ ಗಮನ ಸೆಳೆವ ಮಾಹಿತಿ ಸಂಗ್ರಹಿಸಿದ್ದಾರೆ. ಎಂ.ವಿ.ಆರ್ ಶಾಸ್ತ್ರಿಯವರ ತೆಲಗು ಮೂಲದ ಯಾವುದು ಚರಿತ್ರೆಯೂ ಬ್ರಿಟೀಷರ ದ್ರೋಹವನ್ನು ಬಯಲಿಗೆಳೆಯುವ ದಿಕ್ಕಿನಲ್ಲಿ ಸಮರ್ಥ ಸಂಕಲನವೇ.
ಇವೆಲ್ಲವುಗಳ ಬೆಳಕಿನಲ್ಲಿ ನಾವು ಚಚರ್ಿಸಬೇಕಾದ ಮುಖ್ಯ ಸಂಗತಿ ಇಂದಿಗೆ ಸುಮಾರು ಮೂರುವರೆ ಸಾವಿರ ವರ್ಷಗಳ ಹಿಂದಿನ ಜನಜೀವನ, ಧರ್ಮ ಚಿಂತನ, ಶಿಕ್ಷಣ ಇವೆಲ್ಲವುಗಳ ಒಟ್ಟಾರೆ ಪರಿಸ್ಥಿತಿ. ಚಾಣಕ್ಯನ ಅರ್ಥಶಾಸ್ತ್ರ ಇದಕ್ಕೊಂದು ಸ್ಪಷ್ಟ ಕೈಪಿಡಿ. ಆದರೆ ಒಂದಂತೂ ಮೂಲಭೂತ ಪ್ರಶ್ನೆ. ಚಾಣಕ್ಯನಂತಹ ಮಹಾಮಹಿಮ ಸೃಷ್ಟಿಯಾದ ಗರಡಿ ಮನೆ ಎಮಥದ್ದಿರಬೇಕು ಅಂತ! ಅಲ್ಲವೇ ಮತ್ತೆ? ವೇದ ವಿದ್ಯಾ ಪಾರಂಗತ ಆತ. ರಾಜ್ಯಶಾಸ್ತ್ರ ನಿಪುಣನೂ ಹೌದು. ದಂಡ ಶಾಸ್ತ್ರದಲ್ಲಿ ಅವನ ಅಧ್ಯಯನಕ್ಕೆ ಸರಿಸಾಟಿ ಯಾರೂ ಇಲ್ಲ. ನೀತಿ ಶಾಸ್ತ್ರದ ಕತರ್ೃ. ಕೆಲವರು ವಾದಿಸುವಂತೆ ವಾತ್ಸಾಯನನೂ ಅವನೇ ಎನ್ನುವುದನ್ನು ಒಪ್ಪಿಕೊಂಡುಬಿಟ್ಟರೆ ಅಲ್ಲಿಗೆ ಕಾಮಶಾಸ್ತ್ರದ ಪಂಡಿತ ಕೂಡ. ಇಷ್ಟೆಲ್ಲಾ ಶಿಕ್ಷಣ ಪಡೆದು, ಪಾಂಡಿತ್ಯ ಗಳಿಸಿ ಅಲ್ಲಿಯೇ ಅಧ್ಯಾಪಕ ವೃತ್ತಿ ನಿರ್ವಹಿಸಿದ್ದನೆಂದರೆ ಅವನನ್ನು ರೂಪಿಸಿದ ಆ ಶಿಕ್ಷಣಾಲಯ ಹೇಗಿದ್ದಿರಬೇಕು?
ಚಾಣಕ್ಯನ ಅಧ್ಯಯನ ನಡೆದದ್ದು ತಕ್ಷಶಿಲೆಯಲ್ಲಿ. ಜಗತ್ತಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದು ಅದು. ಸಾಮಾನ್ಯವಾಗಿ ಆರಂಭಿಕ ಶಿಕ್ಷಣ ಕೊಡುವ ಗುರುಕುಲಗಳಂತೆ ಅದು ಇರದೇ ಉನ್ನತ ವ್ಯಾಸಾಂಗಕ್ಕಾಗಿಯೇ ಹುಡುಗರು ಅರಸಿ ಬರುತ್ತಿದ್ದ ಶಿಕ್ಷಣ ಸಂಸ್ಥೆಯಾಗಿತ್ತು.
ಗಾಂಧಾರ(ಈಗಿನ ಅಫ್ಘಾನಿಸ್ತಾನ)ದ ರಾಜಧಾನಿಯಾಗಿದ್ದ ತಕ್ಷಶಿಲಾ ಒಂದು ಕಾಲದಲ್ಲಿ ಇಡಿಯ ದೇಶದ ಬೌದ್ಧಿಕ ರಾಜಧಾನಿಯಾಗಿತ್ತು. ಭರತನ ಮಗ ತಕ್ಷನ ಹೆಸರಲ್ಲಿ ನಿಮರ್ಾಣಗೊಂಡ ನಗರವಿದು. ಭೌಗೋಳಿಕವಾಗಿ ಯವನ, ಶಕ, ಹೂಣರೇ ಮೊದಲಾದ ಅನೇಕರ ಆಕ್ರಮಣಕ್ಕೆ ಒಳಗಾದರೂ ದೀರ್ಘಕಾಲ ಶ್ರೇಷ್ಠ ವಿಶ್ವವಿದ್ಯಾಲಯವಾಗಿ ಹೆಸರು ಮಾಡಿತ್ತು. ದೂರದ ಬನಾರಸ್, ರಾಜಗೃಹ, ಮಿಥಿಲಾ, ಉಜ್ಜೈನಿ, ಕುರು ಮೊದಲಾದ ಭಾಗಗಳಿಂದ ವಿದ್ಯಾಥರ್ಿಗಳು ಅಧ್ಯಯನಕ್ಕೆಂದು ಧಾವಿಸಿ ಬರುತ್ತಿದ್ದರು. ದೇಶವಷ್ಟೇ ಅಲ್ಲ, ಆನಂತರದ ದಿನಗಳಲ್ಲಿ ಗ್ರೀಕ್ ನ ಮಿಲಿಂದನಂಥವರೂ ಇಲ್ಲಿ ಶೃತಿ, ಸ್ಮೃತಿಗಳ ಅಧ್ಯಯನದಲ್ಲಿ ತೊಡಗಿದ್ದರು. ಇಲ್ಲಿನ ಶಿಕ್ಷಕರ ಕುರಿತಂತೆ ಜಾಗತಿಕ ಖ್ಯಾತಿಯಿತ್ತು. ಜಾತಕ ಕಥೆಗಳಲ್ಲಿ ಉಲ್ಲೇಖವಾದಂತೆ 16 ನೇ ವಯಸ್ಸಿನ ವೇಳೆಗೆ ಆರಂಭಿಕ ಶಿಕ್ಷಣ ಮುಗಿಸಿ ವಿದ್ಯಾಥರ್ಿಗಳು ಇಲ್ಲಿಗೆ ಬಂದು ಸೇರಿಕೊಳ್ಳುತ್ತಿದ್ದರು. ಚಾಂಡಾಲ ವೃತ್ತಿಯವರನ್ನೊಂದು ಬಿಟ್ಟರೆ ಮಿಕ್ಕವರಿಗೆಲ್ಲ ಇಲ್ಲಿ ಶಿಕ್ಷಣಕ್ಕೆ ಅವಕಾಶವಿತ್ತೆಂದು ಹೇಳಲಾಗುತ್ತದೆ. ಇಂಥ ವರ್ಣದವರು ಇಂಥಿಂಥದೇ ಶಿಕ್ಷಣ ಪಡೆಯಬೇಕೆಂಬ ನಿಯಮವೇನೂ ಇರಲಿಲ್ಲ. ಬ್ರಾಹ್ಮಣ ವಿದ್ಯಾಥರ್ಿಯೊಬ್ಬ ಭವಿಷ್ಯ ಹೇಳುವ ವಿದ್ಯೆ ಕಲಿತು ಬನಾರಸ್ಸಿನಲ್ಲಿ ಬೇಟೆಗಾರನಾಗಿ ದಿನ ದೂಡಿದ ಕಥೆಗಳಿವೆ. ಮತ್ತೊಬ್ಬ ಇಂದ್ರಜಾಲ ವಿದ್ಯಾ ಪ್ರವೀಣನಾದನಂತೆ. ಅದರರ್ಥ ಬ್ರಾಹ್ಮಣನಾದವನು ವೇದಾಧ್ಯಯನವನ್ನೇ ರೂಢಿಸಿಕೊಳ್ಳಬೇಕೆಂಬ ನಿಯಮವಿರಲಿಲ್ಲ. ಆಸಕ್ತಿಯ ಕ್ಷೇತ್ರದಲ್ಲಿ ವಿಶೇಷಾಧ್ಯಯನಕ್ಕೆ ಯಾವಾಗಲೂ ಮುಕ್ತ ಅವಕಾಶವಿತ್ತು.

2
ತಕ್ಷಶಿಲಾದ ವೈಶಿಷ್ಟ್ಯವೆಂದರೆ ಅಲ್ಲಿ ಜಾತಿ ಭೇದದಂತೆ, ಬಡವ-ಬಲ್ಲಿದನೆಂಬ ವ್ಯತ್ಯಾಸವೂ ಇರಲಿಲ್ಲ. ರಾಜನ ಮಕ್ಕಳು, ವ್ಯಾಪಾರಿಗಳ ಮಕ್ಕಳು ಮತ್ತು ಅತಿ ಬಡ ವಿದ್ಯಾಥರ್ಿಗಳೂ ಜೊತೆಗೂಡಿಯೇ ಕಲಿಯುತ್ತಿದ್ದರು. ಸಿರಿವಂತರೇ ಇರಲಿ, ಬಡವರೇ ಇರಲಿ ಸರಳವಾಗಿ, ಸಮಾನವಾಗಿ ಬದುಕಲೇಬೇಕಿತ್ತು. ಜಾತಕ ಕಥೆಯ ಪ್ರಕಾರ, ಬನಾರಸ್ಸಿನ ರಾಜ ತನ್ನ ಮಗನಿಗೆ ಎಲೆಯ ಕೊಡೆಯೊಂದನ್ನು, ಒಂದು ಜೊತೆ ಚಪ್ಪಲಿಯನ್ನೂ, ಒಂದು ಸಾವಿರ ವರಹಗಳನ್ನು ಕೊಟ್ಟು ಗುರುಗಳ ಬಳಿಗೆ ಕಳಿಸಿದನಂತೆ. ಆತ ಗುರುಗಳಿಗೆ ನಮಸ್ಕರಿಸಿ ಒಂದು ಸಾವಿರ ವರಹಗಳನ್ನು ಅಧ್ಯಯನ ಶುಲ್ಕವಾಗಿ ಕೊಟ್ಟು ವಿದ್ಯಾರ್ಜನೆಗೆ ನೆಲೆನಿಂತ. ಒಮ್ಮೆ ಆತ ರಸ್ತೆಯಲ್ಲಿ ಅಜ್ಜಿಯೊಬ್ಬಳು ಮಾರುವ ವಸ್ತುವನ್ನು ಕದ್ದು ಸಿಕ್ಕು ಬಿದ್ದಾಗ ಗುರುಗಳು ಮುಲಾಜು ನೋಡದೇ ಬೆನ್ನಿಗೆರಡು ಏಟು ಕೊಟ್ಟ ಉಲ್ಲೇಖವೂ ಕಥೆಯಲ್ಲಿದೆ.
ತಕ್ಷಶಿಲಾದಲ್ಲಿ ವಿದ್ಯಾಥರ್ಿಗಳ ಅನುಕೂಲಕ್ಕೆ ಅನುಸಾರವಾಗಿ ಹಗಲು ಮತ್ತು ರಾತ್ರಿ ಎರಡೂ ಅವಧಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಬಡ ವಿದ್ಯಾಥರ್ಿಗಳು ಬೆಳಗಿನ ಹೊತ್ತಲ್ಲಿ ಸೇವಾಕೈಂಕರ್ಯದಲ್ಲಿ ಮಗ್ನರಾಗಿರುತ್ತಿದ್ದರು. ಅಂಥವರಿಗಾಗಿ ಗುರುಗಳು ರಾತ್ರಿ ಪಾಠ ಮಾಡುತ್ತಿದ್ದರು. ತರಬೇತು ಗೊಳಿಸಿದ ಕೋಳಿಗಳು ಅವರನ್ನು ಮುಂಜಾನೆ ಕೂಗಿ ಎಬ್ಬಿಸಿ ಅಧ್ಯಯನಕ್ಕೆ ಅಣಿಗೊಳಿಸುತ್ತಿದ್ದವಂತೆ. ಸೂರ್ಯೋದಯಕ್ಕೆ ಮುನ್ನ ವಿದ್ಯಾಥರ್ಿಗಳು ಹಾಸಿಗೆ ಬಿಡಬೇಕೆಂಬುದು ಅಲ್ಲಿನ ನಿಯಮವೇ ಆಗಿತ್ತು.

3
ತಕ್ಷಶಿಲೆಯಲ್ಲಿ ವೇದಗಳೊಟ್ಟಿಗೆ ಇತರೆ 18 ಕಲಾ ವಿಜ್ಞಾನ ಪ್ರಕಾರಗಳ ಅಧ್ಯಯನಕ್ಕೆ ಅವಕಾಶವಿತ್ತಂತೆ. ಅವುಗಳ ಸಂಖ್ಯೆಯ ಉಲ್ಲೇಖ ಮತ್ತೆ ಮತ್ತೆ ನೋಡಸಿಗುವುದಾದರೂ ಅವುಗಳು ಯಾವುವೆಂಬುದು ಸ್ಪಷ್ಟವಿಲ್ಲವೆಂದು ರಾಧಾ ಕುಮುದ ಮುಖಜರ್ಿ ತಮ್ಮ ಪ್ರಾಚೀನ ಭಾರತೀಯ ಶಿಕ್ಷಣವೆಂಬ ಕೃತಿಯಲ್ಲಿ ಅಭಿಪ್ರಾಯ ಪಡುತ್ತಾರೆ. ಆದರೂ ಜಾತಕ ಕಥೆಗಳು ಮತ್ತು ಮಿಲಿಂದರ ಕೃತಿಗಳ ಆಧಾರದ ಮೇಲೆ ಧರ್ಮವಿದ್ಯೆ, ಬೇಟೆ, ಮೃತಸಂಜೀವಿನಿ, ಇಂದ್ರಿಯ ಪಳಗಿಸುವ ವಿದ್ಯೆ, ಇಂದ್ರಜಾಲ ಇವೇ ಮೊದಲಾದವುಗಳನ್ನು ಗುರುತಿಸಬಹುದು. ಇದರ ಜೊತೆಗೇ ಆರೋಗ್ಯ, ಕಾನೂನು, ಯುದ್ಧ ವಿದ್ಯೆಗಳಲ್ಲೂ ವಿಶೇಷ ಉನ್ನತ ಶಿಕ್ಷಣ ನೀಡಲಾಗುತ್ತಿತ್ತು. ಈ ಮೂರು ವಿಭಾಗದಲ್ಲಿಯಂತೂ ತಕ್ಷಶಿಲಾ ಬಲು ಹೆಸರು ಮಾಡಿತ್ತು. ಆರೋಗ್ಯ ಶಾಸ್ತ್ರವನ್ನು ಅಧ್ಯಯನ ಮಾಡಲು ಏಳು ವರ್ಷಗಳು ಬೇಕಾಗುತ್ತಿದ್ದವು. ಮೊದಲು ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವ ಪಾಠ ಹೇಳಿಕೊಡಲಾಗುತ್ತಿತ್ತು. ಔಷಧ ಸಸಿಗಳ ಮಹತ್ವವನ್ನು ಸ್ವತಃ ಅರಿಯುವಂತೆ ತರಬೇತು ಮಾಡಲಾಗುತ್ತಿತ್ತು. ಅಧ್ಯಯನದ ವೇಳೆ ಸಾಕಷ್ಟು ಪ್ರಯೋಗಾತ್ಮಕ ತರಗತಿಗಳಿರುತ್ತಿದ್ದವಷ್ಟೇ ಅಲ್ಲ ತಕ್ಷಶಿಲೆಯಿಂದ ಹೊರಬಂದ ನಂತರವೂ ವಿದ್ಯಾಥರ್ಿ ಪ್ರಯೋಗ ಶೀಲನಾಗಿಯೇ ಇರುವಂತೆ ತರಬೇತು ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ. ವಿದ್ಯಾಭ್ಯಾಸ ಪಡೆದ ಪ್ರತಿಯೊಬ್ಬ ವಿದ್ಯಾಥರ್ಿಯೂ ದೇಶ ಪರ್ಯಟನೆ ಮಾಡಿ ತಾನು ಕಲಿತ ವಿದ್ಯೆಯನ್ನು ಒರೆಗೆ ಹಚ್ಚಿ ನೋಡಬೇಕಿತ್ತು. ಕೊನೆಗೆ ತನ್ನ ಊರಿಗೆ ಮರಳಿದೊಡನೆ ತಕ್ಷಶಿಲೆಯಿಂದ ಕಲಿತು ಬಂದ ಅಷ್ಟೂ ವಿದ್ಯೆಯನ್ನು ತಂದೆ-ತಾಯಿಯರ ಮುಂದೆ ಪ್ರದಶರ್ಿಸಬೇಕಾಗಿತ್ತು. ಇದು ರಾಜರ ಮಕ್ಕಳಿಗೂ, ಬಡವನ ಮಕ್ಕಳಿಗೂ ಏಕಕಾಲಕ್ಕೆ ಅನ್ವಯಿಸುವ ನಿಯಮಗಳೇ. ಮಗಧದ ರಾಜಕುಮಾರ ತಕ್ಷಶಿಲೆಯಲ್ಲಿ ವಿದ್ಯೆ ಪಡೆದ ನಂತರ ಹಳ್ಳಿ, ಪಟ್ಟಣಗಳನ್ನು ತಿರುಗಾಡಿ ತಾನು ಕಲಿತ ವಿದ್ಯೆಯ ಪ್ರತ್ಯಕ್ಷ ಅನುಷ್ಠಾನದ ಮಾರ್ಗವನ್ನು ಅರಿತು ಮನೆಗೆ ಮರಳಿದನಂತೆ.
ಆರೋಗ್ಯ ಶಾಸ್ತ್ರವಷ್ಟೇ ಅಲ್ಲ, ಯುದ್ಧವಿದ್ಯಾಶಾಸ್ತ್ರದಲ್ಲೂ ತಕ್ಷಶಿಲೆ ದೇಶದಾದ್ಯಂತ ಖ್ಯಾತಿ ಪಡೆದಿತ್ತು. ವೇದ-ವಿದ್ಯೆಗಿದ್ದಷ್ಟೇ ಬೇಡಿಕೆ ಯುದ್ಧ ವಿದ್ಯೆಯ ಅಧ್ಯಯನಕ್ಕೂ ಇರುತ್ತಿತ್ತು. ರಾಜರ ಮಕ್ಕಳು, ಯುದ್ಧಾಕಾಂಕ್ಷಿಗಳೆಲ್ಲ ಇಲ್ಲಿ ನೆಲೆನಿಂತು ಅಭ್ಯಾಸ ಮಾಡುತ್ತಿದ್ದರು. ಇವರಲ್ಲಿ ಬ್ರಾಹ್ಮಣರ ಸಂಖ್ಯೆಯೇನೂ ಕಡಿಮೆಯಿರಲಿಲ್ಲ. ಬನಾರಸ್ಸಿನ ಬ್ರಾಹ್ಮಣ ಬಾಲಕ ಜ್ಯೋತಿಪಾಲನನ್ನು ಅಲ್ಲಿನ ರಾಜ ಅಧ್ಯಯನಕ್ಕೆಂದು ಇಲ್ಲಿಗೆ ಕಳಿಸಿದ್ದ. ಜ್ಯೋತಿಪಾಲನ ಶ್ರದ್ಧೆಯ ಮಟ್ಟ ಎಂತಹುದೆಂದರೆ ಆತ ಗುರುಗಳು ಹೇಳಿಕೊಟ್ಟದ್ದನ್ನೆಲ್ಲಾ ಕಲಿತು ಯುದ್ಧವಿದ್ಯಾ ಪ್ರವೀಣನಾಗಿಬಿಟ್ಟ. ಮನೆಗೆ ಮರಳುವಾಗ ವಯೋವೃದ್ಧರಾದ ಗುರುಗಳು ತಮ್ಮ ಕತ್ತಿ, ಬಿಲ್ಲು-ಬಾಣ ಜೊತೆಗೊಂದು ವಜ್ರವನ್ನೂ ಕೈಗಿಟ್ಟು ತನ್ನ ನಂತರ ಶಿಕ್ಷಕ ವೃತ್ತಿ ಸ್ವೀಕರಿಸಿ ವಿದ್ಯಾಥರ್ಿಗಳನ್ನು ತಯಾರು ಮಾಡುವಂತೆ ಕೇಳಿಕೊಂಡಿದ್ದರಂತೆ!
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಜಗತ್ತಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯ ತಕ್ಷಶಿಲಾದಲ್ಲಿ ಶಾಂತಿ-ನೆಮ್ಮದಿಗಾಗಿ ವೇದ ವಿದ್ಯೆ ಕಲಿಸುವಷ್ಟೇ ಸರಾಗವಾಗಿ ಯುದ್ಧಕ್ಕಾಗಿ ಶಸ್ತ್ರ ಪ್ರಯೋಗದ ಕಲೆಯನ್ನೂ ಹೇಳಿಕೊಡಲಾಗುತ್ತಿತ್ತು. ಎಲ್ಲಿಯೂ ಜಾತಿ-ಮತ-ಪಂಥಗಳ ಆಧಾರದ ಮೇಲೆ ಶಿಕ್ಷಣದ ಅರ್ಹತೆ ನಿಗದಿಯಾಗಿರಲಿಲ್ಲ. ಆಸಕ್ತಿ ಮತ್ತು ಸಾಮಥ್ರ್ಯಗಳಷ್ಟೇ ಮುಖ್ಯವಾಗಿದ್ದವು. ಶೂದ್ರರು ವೇದಗಳನ್ನು ಕಲಿತಷ್ಟೇ ಸರಾಗವಾಗಿ ಬ್ರಾಹ್ಮಣ ಬೇಟೆ ಕಲಿಯುತ್ತಿದ್ದ. ಕ್ಷತ್ರಿಯ ಸಂಗೀತ ಕಲಿತಷ್ಟೇ ಸುಲಭವಾಗಿ, ವೈಶ್ಯ ಯುದ್ಧವಿದ್ಯಾ ಪ್ರವೀಣನಾಗಲು ಯತ್ನಿಸುತ್ತಿದ್ದ. ವಿದ್ಯಾಥರ್ಿ ವೇತನ ಪಡೆದು ಅಧ್ಯಯನ ಮಾಡಬಹುದಿತ್ತು ಅಥವಾ ಗುರುಕುಲದ ಸೇವೆ ಮಾಡುತ್ತಲೂ ಅಧ್ಯಯನ ಮಾಡಬಹುದಿತ್ತು! ವಿಶ್ವವಿದ್ಯಾಲಯದ ಶಿಕ್ಷಣದ ಅವಧಿ ಮುಗಿದ ನಂತರವೂ ವಿದ್ಯಾಥರ್ಿಗಳ ಶಿಕ್ಷಣ ನಿರಂತರವಾಗಿರುವಂತೆ ಅವರನ್ನು ರೂಪಿಸಲಾಗುತ್ತಿತ್ತು. ಅನುಭವಿ ಆಚಾರ್ಯರುಗಳೊಂದಿಗೆ ಬದುಕಿ ಅಧ್ಯಯನ ಮಾಡುವ ಭಾಗ್ಯವಿದ್ದುದರಿಂದ ಅನುಸರಿಸಲು ಶ್ರೇಷ್ಠ ಮೂತರ್ಿ ಅವರೆದುರಿಗಿರುತ್ತಿತ್ತು. ಅದಕ್ಕೇ ತಕ್ಷಶಿಲೆಯಿಂದ ಮರಳಿ ಬಂದ ವಿದ್ಯಾಥರ್ಿಗಳಿಗೆ ಸಹಜವಾಗಿಯೇ ಅಪಾರವಾದ ಬೇಡಿಕೆ ಇತ್ತು. ಚಾಣಕ್ಯನಂತಹ ಆಚಾರ್ಯರುಗಳಿಂದ ಪಾಠ ಹೇಳಿಸಿಕೊಳ್ಳುವುದೆಂದರೇನು ಸಾಮಾನ್ಯವೇ ಮತ್ತೆ?
ಹ್ಞಾಂ! ಹೇಳುವುದು ಮರೆತೆ. ಮುಂದಿನ ದಿನಗಳಲ್ಲಿ ಬನಾರಸ್ಸಿನ ವಿಶ್ವವಿದ್ಯಾಲಯವೂ ಸಾಕಷ್ಟು ಹೆಸರು ಮಾಡುವಂತೆ ಬೆಳೆಯಿತಲ್ಲ ಅದರ ಹಿಂದೆ ಬಲವಾಗಿ ನಿಂತದ್ದೂ ತಕ್ಷಶಿಲಾದ ಹಳೆಯ ವಿದ್ಯಾಥರ್ಿಗಳೇ. ತಕ್ಷಶಿಲೆಗೆ ಸೀಮಿತವಾಗಿದ್ದ ಅನೇಕ ಶೈಕ್ಷಣಿಕ ವಿಭಾಗಗಳನ್ನು ಬನಾರಸ್ಸಿನಲ್ಲಿ ತೆರೆದು ಶಿಕ್ಷಣದ ಪ್ರಭೆಯ ವಿಸ್ತಾರಕ್ಕೆ ಕಾರಣವಾಗಿದ್ದರು ಅವರೆಲ್ಲ. ಇಷ್ಟೇ ಅಲ್ಲ. ತಕ್ಷಶಿಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಅನೇಕರು ಸನ್ಯಾಸತ್ವ ಸ್ವೀಕರಿಸಿ ಕಾಡುಗಳಲ್ಲೋ, ಹಿಮಾಲಯದಲ್ಲೋ ಆಶ್ರಮಗಳನ್ನು ಸ್ಥಾಪಿಸಿಕೊಂಡು ಹುಡುಕಿಕೊಂಡು ಬರುವ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ತಕ್ಷಶಿಲೆ ತಾನೊಂದೇ ವಿಶ್ವವಿದ್ಯಾಲಯವಾಗಿ ಉಳಿದು ಬಿಡಲಿಲ್ಲ. ತನ್ನ ಪ್ರಭೆ ಎಲ್ಲೆಡೆ ಹರಡಿಸಿ ಶಿಕ್ಷಣ ಎಲ್ಲರಿಗೂ ಸಿಗುವಂತೆ ನಿರಂತರ ಪ್ರಯತ್ನಶೀಲವಾಗಿತ್ತು.
ತಕ್ಷಶಿಲೆಯ ಆ ಭವ್ಯ ವಿಶ್ವವಿದ್ಯಾಲಯ ಪ್ರಾಚೀನ ಭಾರತವನ್ನು ಆಧುನಿಕತೆಯೊಂದಿಗೆ ಸರಿಸಮವಾಗಿ ನಿಲ್ಲಿಸುವ ಕೇಂದ್ರವಾಗಿ ಬೆಳೆದು ನಿಂತಿತ್ತು. ಅಲ್ಲಿನ ವಿದ್ವತ್ಗೋಷ್ಠಿಗಳು ಭಾರತದ ಭವಿಷ್ಯದ ದಿಕ್ಕನ್ನು ನಿರ್ಣಯಿಸುವ ಅನುಭವ ಮಂಟಪವೇ ಸರಿ. ಅದು ವೇದ ಮತ್ತು ಸ್ಮೃತಿ ಕಾಲದ ಜ್ಞಾನದಾನದ ಪದ್ಧತಿಗೂ, ಆಧುನಿಕ ಯುಗದ ಶಿಕ್ಷಣಕ್ಕೂ ಕೊಂಡಿಯಾಗಿತ್ತು. ಪೀಳಿಗೆಯಿಂದ ಪೀಳಿಗೆಗೆ, ನೂರಾರು ವರ್ಷಗಳ ಕಾಲ ಜ್ಞಾನ ದಾಸೋಹ ನಡೆಸಿದ ಭಾರತದ ಹೆಮ್ಮೆ ತಕ್ಷಶಿಲಾ! ಮುಂದೆ ಬ್ರಿಟೀಷರ ಆಳ್ವಿಕೆಯ ಹೊತ್ತಲ್ಲಿ ಸರ್ ಜಾನ್ ಮಾರ್ಶಲ್, ಸರ್ ವೇಟರ್ಿಮರ್ ವೀಲರ್, ಮೊದಲಾದವರು ತಕ್ಷಶಿಲೆಯಲ್ಲಿ ಅವಶೇಷಗಳನ್ನು ಕೆದಕುತ್ತ ಹೋದಂತೆ ಐದಾರು ಪದರಗಳು ಅವರಿಗೆ ಗೋಚರವಾದವು. ಅಲ್ಲಿನ ಭೀರ್ಮೋಂಡ್ ಪ್ರದೇಶದ ಅವಶೇಷಗಳು ಬುದ್ಧನ ಕಾಲದವೆಂದು ನಿರ್ಣಯಿಸಲಾಗಿತ್ತು. ತಕ್ಷಶಿಲೆಯ ನಗರದ ಗೋಡೆಯ ಅಗಲ 21 ಅಡಿಗೂ ಅಧಿಕವಿದ್ದು ಎತ್ತರ 12 ಅಡಿಯಷ್ಟಿತ್ತು. ನಿರಂತರ ಆಕ್ರಮಣಕಾರಿಗಳ ದಾಳಿಗೆ ಒಳಗಾಗುತ್ತಿದ್ದರೂ ತಕ್ಷಶಿಲೆ ಎಂದಿಗೂ ಕಳೆಗುಂದಿರಲಿಲ್ಲ. ಪ್ರತೀ ಬಾರಿ ಆಕ್ರಮಣಕಾರಿಗಳಿಂದ ಮುಕ್ತಗೊಳಿಸಿದ ನಂತರ ಭಾರತೀಯ ರಾಜರು ತಕ್ಷಶಿಲೆಗೆ ಇನ್ನೂ ಹೆಚ್ಚಿನ ಜಮೀನನ್ನು ದಾನವಾಗಿ ಕೊಟ್ಟು ಅದರ ವೈಭವವನ್ನು ವೃದ್ಧಿಸುತ್ತಿದ್ದರು.
ಬುದ್ಧನ ನಿವರ್ಾಣದ ನಂತರ ತಕ್ಷಶಿಲೆಗೆ ಬುದ್ಧನ ಅನುಯಾಯಿಗಳೇ ಕಂಟಕ ತಂದರು. ಅನಿಯಮಿತವಾಗಿ ಹರಡಲಾರಂಭಿಸಿದ ಬುದ್ಧಾನುಯಾಯಿಗಳು ಪ್ರಾಚೀನ ಭಾರತೀಯ ತತ್ತ್ವ ಚಿಂತನೆಗಳನ್ನು ತುಳಿದು ಮೇಲೇರಲು ಹವಣಿಸಲಾರಂಭಿಸಿದರು. ಇದಕ್ಕೆ ತಡೆಗೋಡೆಯಂತಿದ್ದ ಬ್ರಾಹ್ಮಣರೊಂದಿಗೆ ಬೌದ್ಧಿಕ ಕದನಗಳು ಶುರುವಾದವು. ರಾಜರೂ ಬುದ್ಧಾನುಯಾಯಿಗಳ ಬೆಂಬಲಕ್ಕೆ ನಿಂತರು. ಆಗಲೇ ಭಾರತದ ಇತಿಹಾಸಕ್ಕೆ ಮಹತ್ವದ್ದೊಂದು ತಿರುವು ಸಿಕ್ಕಿದ್ದು!!

Leave a Reply