ವಿಭಾಗಗಳು

ಸುದ್ದಿಪತ್ರ


 

ಚುನಾವಣೆಯ ಹೊಸ್ತಿಲಲ್ಲಿ ವೈದ್ಯರ ಬಲಿ!

ಸಕರ್ಾರಿ ಆಸ್ಪತ್ರೆಗಳಲ್ಲಿ ಇಂದು ಮೂಲಸೌಕರ್ಯಗಳ ಕೊರತೆಯಿದೆ. ಅನೇಕ ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾದ ಶುದ್ಧ ಕುಡಿಯುವ ನೀರೇ ದಕ್ಕುವುದಿಲ್ಲ; ಇಪ್ಪತ್ನಾಲ್ಕು ಗಂಟೆ ವಿದ್ಯುತ್ತನ್ನಂತೂ ಯೋಚಿಸುವಂತೆಯೂ ಇಲ್ಲ. ಸಾಮಥ್ರ್ಯಕ್ಕೂ ಮೀರಿದ ರೋಗಿಗಳ ಸಂಖ್ಯೆ. ಸಿಬ್ಬಂದಿಗಳ ಕೊರತೆಯಂತೂ ಎಂತಹ ದೊಡ್ಡ ಸಮಸ್ಯೆಯೆಂದರೆ ಸಂಜೆಯ ವೇಳೆಗೆ ಆಸ್ಪತ್ರೆಗಳಲ್ಲಿ ವೈದ್ಯರಿರುವುದಿಲ್ಲ. ಕೆಲವು ಕಡೆ ನಸರ್್ಗಳಾದರೂ ಇರುತ್ತಾರೆ ಇನ್ನೂ ಕೆಲವು ಕಡೆಗಳಲ್ಲಿ ಅವರೂ ಇಲ್ಲದೇ ಸಹಾಯಕರದ್ದೇ ಸರ್ವಸ್ವ.

ತಮ್ಮ ಮಕ್ಕಳನ್ನು ಆರೋಗ್ಯ ತಪ್ಪಿದರೆ ವಿದೇಶಕ್ಕೊಯ್ಯುವ, ಸಾರ್ವಜನಿಕರ ತೆರಿಗೆ ಹಣದಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವ ರಾಜಕಾರಣಿಗಳೆಲ್ಲ ಇತ್ತೀಚೆಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಬಲುವಾದ ಕಾಳಜಿ ತೋರುತ್ತಿರುವುದು ಬಲು ಆಶ್ಚರ್ಯಕರ ಸಂಗತಿ. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಲೂಟಿ ಮಾಡುವ ಧಂಧೆ ನಡೆಯುತ್ತದೆ ಎನ್ನುವ ಸತ್ಯವನ್ನು ಚುನಾವಣೆಗೆ ಪೂರ್ವ ದರ್ಶನ ಮಾಡಿಕೊಂಡ ಸಿದ್ದರಾಮಯ್ಯನವರ ಬಳಗಕ್ಕೆ ಅದೆಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ. ಯಾರಾದರೂ ಮುಷ್ಕರಕ್ಕಿಳಿದಾಗ ಎರಡೂ ಕಡೆಯವರು ತಂತಮ್ಮ ಅಹಂಕಾರಗಳನ್ನು ಮರೆತು ಮಧ್ಯಮ ಮಾರ್ಗಕ್ಕೆ ಬದ್ಧವಾಗೋದು ವಾಡಿಕೆ. ಆದರೆ ಮುಖ್ಯಮಂತ್ರಿಗಳ ಮಾತಿನ ಧಾಟಿ, ಹಾವಭಾವ ಅದೆಂಥದ್ದೆಂದರೆ ಮಧ್ಯಮ ಮಾರ್ಗ ದೂರ; ಮಾತುಕತೆಗೂ ಬರಲಾರರು ಅವರು. ಉಪಚಾರ ಸಿಗದೇ ತೀರಿಕೊಂಡವರ ಕುರಿತಂತೆ ಸಾಕ್ಷ್ಯಾಧಾರಗಳನ್ನು ಕೇಳಿ ನಾಡು ಬೆಚ್ಚಿಬೀಳುವಂತೆ ಮಾಡಿಬಿಟ್ಟರು. ಬಿಸಿಲಲ್ಲಿ ಏಟಿಎಮ್ನ ಹೊರಗೆ ನಿಂತು ನೂರೈವತ್ತು ಜನ ತೀರಿಕೊಂಡರೆಂದು ಇವರುಗಳೇ ಸುಳ್ಳು ಸುದ್ದಿ ಹಬ್ಬಿಸಿದ್ದು ನೆನಪಾಗಿಬಿಟ್ಟಿರಬೇಕು!

1

ಜಗತ್ತಿನ ಬಹುತೇಕ ಮುಂದುವರಿದ ರಾಷ್ಟ್ರಗಳಲ್ಲಿ ಸಾರ್ವಜನಿಕ ಆರೋಗ್ಯ ಸಕರ್ಾರದ ಜವಾಬ್ದಾರಿ. ಸಾರಿಗೆ, ಶಿಕ್ಷಣ ಮತ್ತು ಆರೋಗ್ಯಗಳನ್ನು ಸಕರ್ಾರ ಮುತುವಜರ್ಿ ವಹಿಸಿ ನೋಡಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ದಕ್ಕುವಂತೆ ವ್ಯವಸ್ಥೆ ರೂಪಿಸಬೇಕು. ಆದರೆ ನಮ್ಮ ದೇಶದಲ್ಲಿ ಆರೋಗ್ಯದ ವಿಚಾರದಲ್ಲಿ ನಾವು ಜನಸಾಮಾನ್ಯರನ್ನು ಅದೆಷ್ಟು ಕಡೆಗಣಿಸಿದ್ದೇವೆಂದರೆ 128 ಕೋಟಿ ಜನರ ಪ್ರಯೋಗ ಶಾಲೆಯನ್ನು ಜಗತ್ತಿಗೆ ತೆರೆದಿಟ್ಟಿದ್ದೇವೆ. ದೇಶದ ಕಥೆ ಒತ್ತಟ್ಟಿಗಿರಲಿ. ಕನರ್ಾಟಕದ ವಿಚಾರಕ್ಕೆ ಬರೋಣ. ಸರಿ ಸುಮಾರು ಕನರ್ಾಟಕದಷ್ಟೇ ವಿಸ್ತಾರವಾಗಿರುವ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳು ಬಲು ಕಡಿಮೆ. ರಾಜಸ್ಥಾನದಲ್ಲಿ ಎರಡೂವರೆ ಸಾವಿರದಷ್ಟು ಆಸ್ಪತ್ರೆಗಳಾದರೆ, ತಮಿಳುನಾಡಿನಲ್ಲಿ ಸುಮಾರು ಎರಡು ಸಾವಿರ. ಗುಜರಾತ್, ಮಧ್ಯ ಪ್ರದೇಶಗಳಲ್ಲಿ ಒಂದೂವರೆ ಸಾವಿರದಷ್ಟಿದ್ದರೆ ಕನರ್ಾಟಕದಲ್ಲಿ ಎಂಟುನೂರನ್ನೂ ದಾಟಿಲ್ಲ. ನಮಗಿಂತಲೂ ಪುಟ್ಟದಾದ ಛತ್ತೀಸಗಢ, ಜಮ್ಮು ಕಾಶ್ಮೀರಗಳಲ್ಲೂ ಎರಡು ಸಾವಿರದಷ್ಟು ಸಕರ್ಾರಿ ಆಸ್ಪತ್ರೆಗಳಿವೆ. ಕೇರಳದಲ್ಲಿ ಸರಾಸರಿ 26 ಸಾವಿರ ಜನರಿಗೆ, ತಮಿಳುನಾಡಿನಲ್ಲಿ 36 ಸಾವಿರ ಜನರಿಗೆ ಒಂದು ಆಸ್ಪತ್ರೆಯಾದರೆ; ಕನರ್ಾಟಕದಲ್ಲಿ ಎಂಭತ್ತು ಸಾವಿರ ಜನರಿಗೆ ಒಂದು! ಹಾಗಂತ ಕೊರತೆ ಹಣಕಾಸಿನದ್ದಲ್ಲ. 2011ರಲ್ಲಿ ಕೇಂದ್ರ ಸಕರ್ಾರದಿಂದ ಬಿಡುಗಡೆಯಾದ ಎಂಭತ್ತು ಸಾವಿರ ಕೋಟಿಯಲ್ಲಿ ನಾವು ಬಳಕೆ ಮಾಡಿದ್ದು ಅರವತ್ತು ಸಾವಿರ ಕೋಟಿ ಮಾತ್ರ. ಇದನ್ನು ಆಧರಿಸಿ ಕಳೆದ ವರ್ಷ ಅರವತ್ತು ಸಾವಿರ ಕೋಟಿ ಕೊಟ್ಟರೆ ನಾವು ಬಳಸಿಕೊಂಡದ್ದು ಮುವ್ವತ್ತೈದು ಸಾವಿರ ಕೋಟಿಯ ಆಸು ಪಾಸು! ಕೇಂದ್ರ ಸಕರ್ಾರ ಕೊಟ್ಟ ಹಣವನ್ನು ಬಳಸಿಕೊಳ್ಳದೇ ಪ್ರಾಮಾಣಿಕವಾಗಿ ಮರಳಿಸುತ್ತೇವೆ ನಾವು. 2016 ರಿಂದ 2017ಕ್ಕೆ ಆರೋಗ್ಯದ ಬಜೆಟ್ಟಿನಲ್ಲಿ ನಾವು ಮಾಡಿದ ಹೆಚ್ಚಳ ಶೇಕಡಾ ಇಪ್ಪತ್ತರಷ್ಟು ಮಾತ್ರ. ಬಿಹಾರವೂ ಈ ವೇಳೆಗೆ ಶೇಕಡಾ ಅರವತ್ತೈದರಷ್ಟು ಹೆಚ್ಚುವರಿ ಹಣವನ್ನು ವಿನಿಯೋಗಿಸಿತ್ತು. 2001ರಲ್ಲಿ ಒಟ್ಟು ಬಜೆಟ್ನ ಶೇಕಡಾ ಐದರಷ್ಟನ್ನು ಆರೋಗ್ಯಕ್ಕೆಂದು ವಿನಿಯೋಗಿಸುತ್ತಿದ್ದ ನಾವು, ಹತ್ತೇ ವರ್ಷಗಳಲ್ಲಿ ಈ ಪ್ರಮಾಣವನ್ನು ಶೇಕಡಾ ನಾಲ್ಕಕ್ಕಿಂತ ಕಡಿಮೆ ಮಾಡಿದೆವು. ಮೀಸಲಿಡುವ ಹಣದ ಪ್ರಮಾಣ ಹೆಚ್ಚಾಗಿರಬಹುದು ಆದರೆ ಒಟ್ಟಾರೆ ಬಜೆಟ್ಗೆ ಹೋಲಿಸಿದರೆ ಅದು ಕಡಿಮೆಯಾಗುತ್ತಲಿದೆ ಎಂಬುದು ಆತಂಕದ ಸಂಗತಿ. ನಾವು ನಮ್ಮೆಲ್ಲ ಹಣವನ್ನು ಭಾಗ್ಯಗಳಿಗಾಗಿ ವ್ಯಯಿಸುವ ಬದಲು ಜನರಿಗೆ ಆರೋಗ್ಯ ನೀಡುವಲ್ಲಿ ಆಸ್ಥೆ ವಹಿಸಿದ್ದರೆ ಇಂದು ಖಾಸಗಿ ಆರೋಗ್ಯ ಸಂಸ್ಥೆಗಳೊಂದಿಗೆ ಕಾದಾಡುವ ಪ್ರಮೇಯವೇ ಇರಲಿಲ್ಲ. ಉತ್ತಮ ಚಿಕಿತ್ಸೆ ಸಕರ್ಾರೀ ಆಸ್ಪತ್ರೆಗಳಲ್ಲಿಯೇ ದೊರೆಯುವಂತಾದರೆ ಖಾಸಗಿ ಆಸ್ಪತ್ರೆಗಳಿಗೆ ಯಾರಾದರೂ ಯಾಕೆ ಹೋಗಬೇಕು ಹೇಳಿ?

2

ಉತ್ತಮ ಆರೋಗ್ಯ ಉತ್ತಮ ರಾಷ್ಟ್ರಕ್ಕೆ ಮೂಲಧನ. ವೈದ್ಯವೃತ್ತಿಯವರೆಲ್ಲ ವೇದದಷ್ಟೇ ಗೌರವಿಸುವ ಲ್ಯಾನ್ಸೆಟ್ ಪತ್ರಿಕೆ ಒಮ್ಮೆ ಬರೆದಿತ್ತು, ‘ಆರೋಗ್ಯಕ್ಕಾಗಿ ಹೂಡಿದ ಧನ, ವ್ಯಕ್ತಿಯ ಮತ್ತು ರಾಷ್ಟ್ರದ ಸಂಪತ್ತನ್ನು ವೃದ್ಧಿಸುವುದು’ ಅಂತ. ಅದೂ ಸರಿಯೇ. ಶಾಲೆಯ ಮಕ್ಕಳಿಂದ ಹಿಡಿದು, ಕಚೇರಿಗಳಲ್ಲಿ ಕೆಲಸ ಮಾಡುವ ವಯಸ್ಸಾದವರವರೆಗೆ ಪ್ರತಿಯೊಬ್ಬರೂ ಬಯಸುವುದು ಒಳ್ಳೆಯ ಆರೋಗ್ಯ ಮಾತ್ರ. ಕಡಿಮೆ ಬೆಲೆಯಲ್ಲಿ ಅದು ಸಿಗುವಂತಾದರೆ ಪ್ರಜೆಗಳಿಗೆ ನೆಮ್ಮದಿ. ನೆಮ್ಮದಿಯಿಂದಿರುವ ಪ್ರಜೆಗಳು ರಾಷ್ಟ್ರದ ಸಂಪತ್ತು. ಆದರೆ ಸಕರ್ಾರಗಳು ಆರೋಗ್ಯದ ಕಡೆಗೆ ಅತೀ ಕಡಿಮೆ ಗಮನ ಹರಿಸಿ ಪ್ರತಿಯೊಬ್ಬರಿಗೂ ಅನಿವಾರ್ಯವಾದ ಈ ಕ್ಷೇತ್ರಕ್ಕೆ ಖಾಸಗಿಯವರು ಒಳನುಸುಳಲು ಪ್ರೇರೇಪಣೆ ಕೊಡುತ್ತವೆ. ಸಕರ್ಾರಿ ಆಸ್ಪತ್ರೆಗಳು ಚೆನ್ನಾಗಿ ಕೆಲಸ ಮಾಡಲಾರಂಭಿಸಿದರೆ ಖಾಸಗಿಯವರು ತೊಂದರೆಗೆ ಸಿಲುಕಿಕೊಳ್ಳುತ್ತಾರೆಂದು ಅನುಕಂಪ ತೋರಿ ಸಾರ್ವಜನಿಕ ಆರೋಗ್ಯದಲ್ಲಿ ಹಣಹೂಡುವುದನ್ನೇ ನಿಲ್ಲಿಸುತ್ತಾರೆ. ಅಲ್ಲಿಗೆ ಖಾಸಗಿ ಆಸ್ಪತ್ರೆಗಳು ಅನಿವಾರ್ಯವಾಗುತ್ತವೆ.

 

ಭಾರತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹೂಡಿಕೆಗೆಂದು ದೊಡ್ಡ ದೊಡ್ಡ ಕಾಪರ್ೋರೇಟ್ ಸಂಸ್ಥೆಗಳು ಅಖಾಡಾಕ್ಕಿಳಿದದ್ದು ವೈಶ್ವೀಕರಣದ ನಂತರ. ಅಲ್ಲಿಯವರೆಗೂ ಸೇವೆಯ ಅಡಿಯಲ್ಲಿ ಗುರುತಿಸಲ್ಪಡುತ್ತಿದ್ದ ವೈದ್ಯಕೀಯ ವೃತ್ತಿ ಆನಂತರ ಉದ್ದಿಮೆಯಾಗಿ ಬೆಳೆಯಿತು. ವೈದ್ಯ-ರೋಗಿಗಳ ಮಾತುಕತೆ ಕಡಿಮೆಯಾಗಿ ಎಲ್ಲವನ್ನೂ ಬೃಹತ್ತು ಯಂತ್ರಗಳೇ ನಿರ್ವಹಿಸುವ ಚಟುವಟಿಕೆ ಶುರುವಾಯ್ತು. ಹೆಚ್ಚು ಹೆಚ್ಚು ಆಧುನಿಕ ಯಂತ್ರಗಳಿದ್ದಷ್ಟೂ ಅತ್ಯಾಧುನಿಕ ಆಸ್ಪತ್ರೆ ಎಂಬ ಭಾವನೆ ಜನ ಸಾಮಾನ್ಯರಲ್ಲೂ ಮೊಳೆಯಲಾರಂಭಿಸಿತು. ಈ ಕ್ಷೇತ್ರದಲ್ಲಿರುವ ಲಾಭವನ್ನು ಮನಗಂಡು ರಾಜಕಾರಣಿಗಳು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆದರು. ಇವರುಗಳೇ ಸಕರ್ಾರದ ನೀತಿಗಳನ್ನು ಖಾಸಗಿಯವರಿಗೆ ಉಪಯೋಗವಾಗುವಂತೆ ಮಾರ್ಪಡಿಸಿದರು. ಆಗಲೇ ಸಾರ್ವಜನಿಕ ಆರೋಗ್ಯದಲ್ಲಿ ನಿರಂತರವಾಗಿ ಹೂಡಿಕೆ ಕಡಿಮೆಯಾಗಲಾರಂಭಿಸಿದ್ದು. ಅದರ ಪರಿಣಾಮದಿಂದ ಸಕರ್ಾರಿ ಆಸ್ಪತ್ರೆಗಳಲ್ಲಿ ಇಂದು ಮೂಲಸೌಕರ್ಯಗಳ ಕೊರತೆಯಿದೆ. ಅನೇಕ ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾದ ಶುದ್ಧ ಕುಡಿಯುವ ನೀರೇ ದಕ್ಕುವುದಿಲ್ಲ; ಇಪ್ಪತ್ನಾಲ್ಕು ಗಂಟೆ ವಿದ್ಯುತ್ತನ್ನಂತೂ ಯೋಚಿಸುವಂತೆಯೂ ಇಲ್ಲ. ಸಾಮಥ್ರ್ಯಕ್ಕೂ ಮೀರಿದ ರೋಗಿಗಳ ಸಂಖ್ಯೆ. ಸಿಬ್ಬಂದಿಗಳ ಕೊರತೆಯಂತೂ ಎಂತಹ ದೊಡ್ಡ ಸಮಸ್ಯೆಯೆಂದರೆ ಸಂಜೆಯ ವೇಳೆಗೆ ಆಸ್ಪತ್ರೆಗಳಲ್ಲಿ ವೈದ್ಯರಿರುವುದಿಲ್ಲ. ಕೆಲವು ಕಡೆ ನಸರ್್ಗಳಾದರೂ ಇರುತ್ತಾರೆ ಇನ್ನೂ ಕೆಲವು ಕಡೆಗಳಲ್ಲಿ ಅವರೂ ಇಲ್ಲದೇ ಸಹಾಯಕರದ್ದೇ ಸರ್ವಸ್ವ.

3

ಖಾಸಗಿ ಆಸ್ಪತ್ರೆಗಳಲ್ಲಾದರೆ ಮಾತನಾಡಲೂ ಸಿಗದ ವೈದ್ಯರೆದುರು ತಗ್ಗಿ ಬಗ್ಗಿ ನಡೆಯುವ ಜನ, ಸಕರ್ಾರಿ ಆಸ್ಪತ್ರೆಗಳಲ್ಲಿ ವೈದ್ಯರನ್ನು ಅಸಡ್ಡೆಯಿಂದ-ಅಗೌರವದಿಂದ ಮಾತನಾಡಿಸುವುದು ಸಹಜವಾಗಿಯೇ ನಡೆಯುತ್ತದೆ. ಸ್ಥಳೀಯ ಪುಢಾರಿಗಳ ಪ್ರಭಾವ ಬಳಸಿ ಬರುವ ರೋಗಿಗಳದ್ದಂತೂ ಎಲ್ಲೆ ಮೀರಿದ ದರ್ಪ. ಕೆಲವರಂತೂ ತಾವೇ ವೈದ್ಯರಂತೆ ತಾವಾಗಿಯೇ ಇಂತಿಂತಹ ಚಿಕಿತ್ಸೆ ಕೊಡಿರೆಂದು ಕೇಳುವುದೂ ನಡೆಯುತ್ತದೆ! ಓಹ್ ಆತ್ಮಗೌರವವಿಲ್ಲದ ಇಂತಹ ವಾತಾವರಣದಲ್ಲಿ ಒಬ್ಬ ವೈದ್ಯನಿಗೆ ಕೆಲಸ ಮಾಡುವುದು ಅದೆಷ್ಟು ಕಷ್ಟದ ಕೆಲಸವೆಂದು ನೀವೇ ಊಹಿಸಬೇಕು. ಹೀಗಾಗಿ ಹಳ್ಳಿಗಳಲ್ಲಿ ಕೆಲಸ ಮಾಡಲು ತಿಪ್ಪರಲಾಗ ಹೊಡೆದರೂ ವೈದ್ಯರು ಸಿಗುತ್ತಿಲ್ಲ. ಇವೆಲ್ಲವನ್ನೂ ಎದುರಿಸಿನಿಲ್ಲುವ ಛಾತಿಯಿಂದ ವೈದ್ಯನೊಬ್ಬ ನಿಂತರೂ ಅಲ್ಲಿ ಬೇಕಾದಷ್ಟೂ ಔಷಧಿ ಪೂರೈಕೆಯಾಗದ ಭ್ರಷ್ಟಾಚಾರ ಮನೆ ಮಾಡಿದ್ದರೆ ಮಾಡುವುದಾದರೂ ಏನು? ಪರಿಹಾರ ಖಾಸಗಿ ಆಸ್ಪತ್ರೆಗಳೇ!

ಆರೋಗ್ಯದ ಕುರಿತಂತೆ ಜನರ ದೃಷ್ಟಿಕೋನವನ್ನೇ ಬದಲಾಯಿಸಬೇಕಾದ ಅಗತ್ಯವಿದೆ. ಸಣ್ಣಪುಟ್ಟದ್ದಕ್ಕೂ ಆಸ್ಪತ್ರೆಗೆ ಓಡಬೇಕಾದ ಅಗತ್ಯವಿಲ್ಲ, ಬದುಕಿನ ಶೈಲಿಯಲ್ಲಿ ಬದಲಾವಣೆ ತಂದುಕೊಂಡರೆ ಅದೇ ಉತ್ತಮ ಆರೋಗ್ಯಕ್ಕೆ ಸೋಪಾನ ಎಂಬ ಭಾರತೀಯ ಚಿಂತನೆಯನ್ನು ಶಾಲೆಯಿಂದಲೇ ತಿಳಿಹೇಳುವ ಕಾಲ ಬಂದಿದೆ. ಇದರೊಟ್ಟಿಗೆ ಅತ್ಯಂತ ಸುಲಭವಾಗಿ ಪರಿಹಾರ ಹುಡುಕಬಲ್ಲ ಆಲೋಪತಿಯನ್ನುಳಿದ ಇತರೆ ಮಾರ್ಗಗಳ ಕುರಿತಂತೆ ಜನಜಾಗೃತಿಯನ್ನು ಮೂಡಿಸಿದರೆ ಒಳಿತು. ಆಗ ಹಳ್ಳಿಗಳಲ್ಲಿ ಕೆಲಸ ನಿರ್ವಹಿಸಬಲ್ಲ ಸಾಕಷ್ಟು ವೈದ್ಯರೂ ದಕ್ಕುತ್ತಾರೆ. ಸಕರ್ಾರ ಸ್ವಲ್ಪ ಆಸ್ಥೆ ತೋರಿದರೆ ಚಿಕ್ಕಮಗಳೂರು, ಶಿವಮೊಗ್ಗ ಭಾಗಗಳಲ್ಲಿ ಹತ್ತಾರು ಆಯುವರ್ೇದಿಕ್ ಚಿಕಿತ್ಸಾಲಯಗಳಿಗೆ ಬೇಕಾದ ಪರಿಸರ ರೂಪಿಸಿಕೊಡಬಹುದು. ಮಲೆನಾಡಿನ ಪ್ರಕೃತಿಗೆ ಧಕ್ಕೆ ಬರದ ರೀತಿಯಲ್ಲಿ ಜಗತ್ತನ್ನು ಆಕಷರ್ಿಸಬಲ್ಲ ಹೆಲ್ಥ್ ಡೆಸ್ಟಿನೇಷನ್ ಆಗಿ ಕನರ್ಾಟಕವನ್ನು ರೂಪಿಸಬಹುದು. ಇದರ ಪ್ರಭಾವದಿಂದ ಈ ವೈದ್ಯ ಪದ್ಧತಿಗೆ ಬೆಲೆ ಬಂದಿತಾದರೆ ಪಶ್ಚಿಮದ ಅವಲಂಬನೆಯಿಲ್ಲದೇ ಕಡಿಮೆ ಖಚರ್ಿಗೆ ವೈದ್ಯಕೀಯ ಪದವಿ ಪಡೆಯುವುದು ಸಾಧ್ಯವಾಗುತ್ತದೆ. ನಿಜಕ್ಕೂ ಭಾರತದಲ್ಲಿರುವ ವೈದ್ಯರ ದೊಡ್ಡ ಸಮಸ್ಯೆಯೇ ಅದು. ದ್ವಿತೀಯ ವರ್ಷದ ಪದವಿ ಶಿಕ್ಷಣ ಮುಗಿಸಿ ವೈದ್ಯ ಪದವಿಗೆ ಸೇರಿಕೊಂಡರೆ, ಅದು ಮುಗಿದು ಹೊರಬರುವ ವೇಳೆಗೆ ಕನಿಷ್ಠ ಅರ್ಧ ಕೋಟಿಯಷ್ಟು ಖಚರ್ು ಮಾಡಿರುತ್ತಾನೆ. ಒಂದು ಕ್ಷೇತ್ರದಲ್ಲಿ ನೈಪುಣ್ಯವನ್ನು ಪಡೆದು ಆತ ಸಾರ್ವಜನಿಕ ಜೀವನಕ್ಕೆ ಬರುವ ವೇಳೆಗೆ ಅರ್ಧ ಆಯಸ್ಸೇ ಕಳೆದು ಹೋಗಿರುತ್ತದೆ. ಆಮೇಲೆ ಸೇವೆ-ಸದಾಚಾರ ಎಂಬೆಲ್ಲ ಪದಗಳು ಆತನ ಶಬ್ದಕೋಶದಿಂದ ಹೊರ ದಬ್ಬಲ್ಪಟ್ಟಿಬಿಟ್ಟಿರುತ್ತವೆ. ಆತನಿಗೀಗ ಒಂದೇ ಹಠ. ಖಚರ್ು ಮಾಡಿದ್ದನ್ನು ಮರಳಿ ಗಳಿಸಬೇಕಷ್ಟೇ. ಸಾಲ ಮಾಡಿದರೆ ಅದನ್ನು ತೀರಿಸಬೇಕು. ಆಗಲೇ ಆತ ಖಾಸಗಿ ಕಂಪನಿಗಳ ಕಪಿಮುಷ್ಟಿಗೆ ಸಿಲುಕಿ ದಾಸನಾಗೋದು. ಸಕರ್ಾರಗಳು ಸವಾಲನ್ನು ಸ್ವೀಕರಿಸಿ ಖಾಸಗಿ ಕಂಪನಿಗಳ ಮೇಲೆ ಹೇರುವ ನಿಯಂತ್ರಣವನ್ನು ಖಾಸಗಿ ವೈದ್ಯಕೀಯ ಕಾಲೇಜುಗಳ ಮೇಲೆ ಹೇರಬಹುದಿತ್ತಾ? ಮನಸೋ ಇಚ್ಛೆ ಅವರು ಮಾಡುವ ಲೂಟಿಯನ್ನು ತಡೆಯಬಹುದಿತ್ತಾ?

ಎಲ್ಲಕ್ಕೂ ಮಿಗಿಲಾಗಿ, ವೈದ್ಯಕೀಯ ಶಿಕ್ಷಣ ನೀಡುವುದೇ ರಾಷ್ಟ್ರದ ಜನರ ಆರೋಗ್ಯವನ್ನು ಕಾಪಾಡಬಲ್ಲ ಸಮರ್ಥ ವೈದ್ಯರನ್ನು ನಿಮರ್ಿಸೋದಕ್ಕೆ. ಆದರೆ ದುದರ್ೈವವೇನು ಗೊತ್ತೆ? ನಾವು ನಮ್ಮ ಶಿಕ್ಷಣ ಪದ್ಧತಿಯನ್ನು ಜಾಗತಿಕ ಅನುಕೂಲಗಳಿಗೆ ತಕ್ಕಂತೆ ರೂಪಿಸಿರುವುದರಿಂದ ಶಿಕ್ಷಣ ಪಡೆದ ಬಹುತೇಕ ಪ್ರತಿಭಾವಂತರು ಪಶ್ಚಿಮದ ರಾಷ್ಟ್ರಗಳತ್ತ ಧಾವಿಸಿಬಿಡುತ್ತಾರೆ. 1989ರಿಂದ 2000 ದವರೆಗಿನ ಅಂಕಿ ಅಂಶಗಳ ಪ್ರಕಾರ ಅರ್ಧಕ್ಕೂ ಹೆಚ್ಚು ಭಾಗದಷ್ಟು ಪದವಿ ಪಡೆದ ವೈದ್ಯರು ವಿದೇಶಕ್ಕೆ ಹೊರಟುಬಿಟ್ಟರು. ಉಳಿದವರಲ್ಲಿ ಮುಕ್ಕಾಲುಭಾಗದಷ್ಟು ವೈದ್ಯರು ಶೇಕಡಾ ಮುವ್ವತ್ತರಷ್ಟಿರುವ ಪಟ್ಟಣಿಗರನ್ನು ನೋಡಿಕೊಳ್ಳಲೆಂದು ಉಳಿದುಕೊಂಡುಬಿಟ್ಟರು. ಹಳ್ಳಿಗಳಿಗೆಂದು ಉಳಿದವರು ಕೆಲವರು ಮಾತ್ರ.  2011ರಲ್ಲಿ ಎಂಭತ್ತು ಕೋಟಿಯಷ್ಟಿದ್ದ ಹಳ್ಳಿಗರ ಆರೈಕೆಗೆಂದು ಉಳಿದಿದ್ದ ಒಟ್ಟಾರೆ ವೈದ್ಯರ ಸಂಖ್ಯೆ ನಲವತ್ತೈದು ಸಾವಿರವಷ್ಟೇ. ಆ ಹೊತ್ತಿಗೆ ಮುವ್ವತ್ತು ಕೋಟಿಯಷ್ಟಿದ್ದ ಅಮೇರಿಕನ್ನರನ್ನು ನೋಡಿಕೊಳ್ಳಲು ಭಾರತದ್ದೇ ಐವತ್ತು ಸಾವಿರ ವೈದ್ಯರು ಅಲ್ಲಿಗೆ ಹೋಗಿ ನೆಲೆಸಿದ್ದರೆಂದು ಅಂಕಿ ಅಂಶವೊಂದು ಹೇಳುತ್ತದೆ.

5

ಇವೆಲ್ಲಕ್ಕೂ ಪರಿಹಾರ ಖಾಸಗಿ ವೈದ್ಯರಿಗೆ ಕಡಿವಾಣ ಹಾಕಿ ಖಾಸಗಿ ಆಸ್ಪತ್ರೆಗಳನ್ನು ಮುಚ್ಚುವಂತೆ ಮಾಡಿಬಿಡುವುದಾ? ಸಕರ್ಾರಕ್ಕೆ ತೋಚುವ ಇಂತಹ ಕ್ರಮಗಳನ್ನು ಕ್ರಾಂತಿಕಾರಿ ಎನ್ನುವವರು ನೂರು ಬಾರಿ ಯೋಚಿಸಿ. ಆ ವೈದ್ಯರೆಲ್ಲ ಬೀದಿಗೆ ಬಂದುಬಿಡಲೆನ್ನುವುದಕ್ಕೆ ಅವರ್ಯಾರೂ ಪಾಕೀಸ್ತಾನದವರಲ್ಲ, ನಮ್ಮವರೇ. ಅವರಿಗೆ ಸುಲಿಗೆಯ ಪೂರಕ ಹಾದಿಯನ್ನು ಮಾಡಿಕೊಟ್ಟವರಿಗೆ ಶಿಕ್ಷೆಯಾಗಬೇಕಲ್ಲವೇ? ರಾಜಕಾಲುವೆಗಳ ಮೇಲಿನ ಮನೆಗಳನ್ನು ಧ್ವಂಸಗೊಳಿಸಿದ ಸಕರ್ಾರ, ಅದಕ್ಕೆ ಅನುಮತಿ ಕೊಟ್ಟವರನ್ನು ಸುಮ್ಮನೆ ಬಿಟ್ಟುಬಿಟ್ಟಿತಲ್ಲ, ಹಾಗೆಯೇ ಇದು. ಸಕರ್ಾರಿ ಶಾಲೆಗಳಿಗೆ ಮಕ್ಕಳು ಬರಲಿಲ್ಲವೆಂದರೆ ಖಾಸಗಿ ಶಾಲೆಗಳನ್ನು ಮುಚ್ಚಿಸಿಬಿಡಿ ಎನ್ನುವಷ್ಟೇ ಬಾಲಿಶತನದ್ದು. ನಮ್ಮ ಮುಂದಿರಬೇಕಾದ ಸವಾಲು ಸಕರ್ಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಸವಾಲಾಗುವಂತೆ ರೂಪಿಸುವುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಕನಸುಗಳನ್ನು ಹಂಚಿಕೊಳ್ಳುವುದಾದರೆ ವೈದ್ಯಕೀಯ ಶಿಕ್ಷಣವನ್ನು ಸರಳಗೊಳಿಸಿ ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗುವಂತೆ ಮಾಡುವುದು ಕ್ರಾಂತಿಕಾರೀ ಹೆಜ್ಜೆ. ವೈದ್ಯಕೀಯ ಶಿಕ್ಷಣವೆಂದರೆ ಅದು ಬುದ್ಧಿವಂತರಿಗೆ ಮಾತ್ರವೆಂಬ ಹಣೆಪಟ್ಟಿ ಮೊದಲು ತೊಲಗಿಸಬೇಕಿದೆ. ನಮ್ಮ ಜನರನ್ನು ಸಾಮಾನ್ಯವಾಗಿ ಕಾಡುವ ರೋಗಗಳ ಅಧ್ಯಯನ ನಡೆಸಿ ಅದಕ್ಕೆ ಸೂಕ್ತವಾದ ಶಿಕ್ಷಣ ಕ್ರಮವನ್ನು ರೂಪಿಸಿ ಹೆಚ್ಚು ಸೇವಾ ಮನೋಭಾವದ ಕಲ್ಪನೆಯನ್ನು ಜೋಡಿಸಿಕೊಟ್ಟರೆ ಸಾಕು. ಆಗಾಗ ಆಗುವ ಹೊಸ ಬದಲಾವಣೆಗಳ ಕುರಿತಂತೆ ತರಬೇತಿ ನೀಡುವ ವ್ಯವಸ್ಥೆ ಮಾಡಿಕೊಂಡರಂತೂ ಬೆಟ್ಟದಷ್ಟಾಯ್ತು. ಶಿಕ್ಷಕರುಗಳಿಗೆ ಹೊಸ ಸಿಲೇಬಸ್ಸಿನ ತರಬೇತಿ ನೀಡಿದಂತೆ ಇದು. ಇಷ್ಟಾಗಿಬಿಟ್ಟರೆ ಹಳ್ಳಿಗಳಿಗೆ ಧಾವಿಸಬಲ್ಲ ವೈದ್ಯರು ತಂತಾನೆ ಸಿಗುತ್ತಾರೆ. ಅಷ್ಟೇ ಅಲ್ಲ ಅವರೊಂದಿಗೆ ಅವರ ಭಾಷೆಯಲ್ಲಿಯೇ ಮಾತನಾಡಬಲ್ಲ ಈ ವೈದ್ಯರು ಸಹಜವಾಗಿಯೇ ಆಪ್ತರಾಗಿಬಿಡುತ್ತಾರೆ. ದಶಕದ ಹಿಂದೆ ಅಝೀಮ್ ಪ್ರೇಮ್ಜಿ ಫೌಂಡೇಶನ್ ನಡೆಸಿದ ಸವರ್ೇಯ ಪ್ರಕಾರ ಕನರ್ಾಟಕದಲ್ಲಿ ಹೆಚ್ಚು ಜನ ಸಾಯುವುದಕ್ಕೆ ಐದು ಪ್ರಮುಖ ಕಾರಣಗಳು. ಹೃದ್ರೋಗ, ಪಾಶ್ರ್ವವಾಯು, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಮತ್ತು ಕ್ಷಯರೋಗ. ಇವಿಷ್ಟನ್ನು ಬಿಟ್ಟರೆ ಉಳಿದವೆಲ್ಲ ಸಾಮಾನ್ಯವಾಗಿ ಸಂಭಾಳಿಸಬಹುದಾಂಥವೇ. ಇದಕ್ಕೆ ವೈದ್ಯರನ್ನು ತಯಾರು ಮಾಡುವುದಷ್ಟೇ ನಮ್ಮ ಕೆಲಸ.

ಮಾಡಲಿಕ್ಕೆ ಸಾಕಷ್ಟು ಕೆಲಸವಿದೆ. ಬದಲಾವಣೆ ಆಮೂಲಾಗ್ರವಾಗಬೇಕು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯುವ ಗುಣ ಬಿಡಬೇಕು. ಜಡ್ಡುಗಟ್ಟಿದ ವ್ಯವಸ್ಥೆಯ ಬುಡವನ್ನು ಅಲುಗಾಡಿಸಬೇಕೇ ಹೊರತು ತಾತ್ಕಾಲಿಕ ಲಾಭಗಳಿಗಾಗಿ ಯಾರನ್ನೋ ಬಲಿಕೊಡುವುದಲ್ಲ!

Leave a Reply