ವಿಭಾಗಗಳು

ಸುದ್ದಿಪತ್ರ


 

ಜರಡಿ ಹಿಡಿದು ಸಂಗ್ರಹಿಸಿದ್ದು ತೇಜಸ್ಸಿನ ಶಕ್ತಿ, ಓಜಸ್ಸಿನ ಬೆಂಕಿ!

“ರ್ಯವನ್ನು ಮೇಲ್ಮುಖವಾಗಿ ಏರಿಸಿ ಹೃದಯ ಭಾಗದಲ್ಲಿ ಓಜಸ್ಸಾಗಿ ನಿಲ್ಲಿಸಿದರೆ ಬ್ರಹ್ಮ-ವಿಷ್ಣುವಿನ ಸಮಾಗಮ. ಇಲ್ಲಿಂದಲೂ ಇದನ್ನು ಮೇಲ್ಮುಖವಾಗಿ ಒಯ್ದು ಸಹಸ್ರಾರದಲ್ಲಿ ಒಂದು ಮಾಡಿದರೆ ತ್ರಿಮೂರ್ತಿಗಳ “ಲನ. ಸಹಜವಾಗಿಯೇ ಅಂತಹ ವ್ಯಕ್ತಿ ಸ್ಟೃಸಬಲ್ಲ ರಕ್ಷಿಸಬಲ್ಲ ಮತ್ತು ಲಯಕಾರಿಯೂ ಆಗಬಲ್ಲ!

‘ಅವನ ಮುಖದಲ್ಲಿ ಅದೆಂಥ ತೇಜಸ್ಸು ನೋಡು’. ಕೆಲವರನ್ನು ಕಂಡಾಗ ಹಾಗೊಮ್ಮೆ ಉದ್ಗರಿಸಬೇಕು ಎನಿಸಿಲ್ಲವೇ? ‘ ಓಜಸ್ವಿಯಾಗು, ವೀರ್ಯವಂತನಾಗು’ ಅಂತಲ್ಲ ಆಶೀರ್ವಾದ ಮಾಡೋದನ್ನು ಕೊನೇ ಪಕ್ಷ ರಾಮಾಯಣ, ಮಹಾಭಾರತ ಧಾರಾವಾಹಿಗಳಲ್ಲಾದರೂ ನೋಡಿರಬೇಕು. ಏನು ಹಾಗೆಂದರೆ ಅನ್ನೋ ಪ್ರಶ್ನೆ ಯಾವಾಗಲಾದರೂ ಕಾಡಿದೆಯಾ? ವೀರ್ಯಕ್ಕೂ-ಓಜಸ್ಸಿಗೂ-ತೇಜಸ್ಸಿಗೂ ಸಂಬಂಧ ಇದೆಯಾ ಅಥವಾ ‘ಹಾಗೆ ಸುಮ್ಮನೆ’ನಾ?
ಈ ಪ್ರಶ್ನೆಗಳು ಒಮ್ಮೆ ಹುಟ್ಟಿದರೆ ಆಮೇಲೆ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರ ಹುಡುಕಬಹುದು. ನಮ್ಮ ಶಿಕ್ಷಣ ವ್ಯವಸ್ಥೆ ಅದೆಷ್ಟು ಹಾಳಾಗಿದೆಯೆಂದರೆ ಉತ್ತರ ಹುಡುಕುವುದು ಬಿಡಿ, ಪ್ರಶ್ನೆಗಳೇ ಹುಟ್ಟದಂತೆ ಮಾಡಿಬಿಡುತ್ತವೆ. ಈ ಸಂಸ್ಕೃತಿಯ ಮೂಲ ಭಾಷೆಂದ ದೂರ ಹೋಗಿ ಇಂಗ್ಲೀಷನ್ನು ತಬ್ಬಿಕೊಂಡಿರುವುದರಿಂದ; ನಾವು ಅತ್ತ ಆಂಗ್ಲ ಸಂಸ್ಕೃತಿಯವರಾಗಲಿಲ್ಲ ಇತ್ತ ನಮ್ಮ ಸಂಸ್ಕೃತಿಯ ಸೊಗಡನ್ನೂ ಅರಿಯಲಾಗಲಿಲ್ಲ. ಅಲ್ಲದೇ ಮತ್ತೇನು ಹೇಳಿ. ಯಾವ ಭಾಷೆ ಮಂಗಳಾರತಿಯನ್ನು, ಪುಣ್ಯವನ್ನು ತನ್ನ ಭಾಷೆಗೆ ಅನುವಾದಿಸಲಾರದೋ ಅದು ಆ ಸಂಸ್ಕೃತಿಯ ಮೂಲ ಸತ್ತ್ವವನ್ನು ಹೇಗೆ ಜೀರ್ಣಿಸಿಕೊಂಡೀತು ಹೇಳಿ.
ಸದ್ಯಕ್ಕೆ ನಮ್ಮ ಚರ್ಚೆ ಓಜಸ್ಸಿನ ಕುರಿತಂತೆ. ಸ್ಥೂಲವಾಗಿಯೇ ಅರ್ಥೈಸುವುದಾದರೆ ಓಜಸ್ಸು ಶಕ್ತಿ. ದೇಹದೊಳಗಿನ ರೋಗ ನಿರೋಧಕತೆಗೆ, ಚೈತನ್ಯಶೀಲತೆಗೆ ಜೊತೆಗೆ ಉತ್ಸಾಹಕ್ಕೂ ಕಾರಣವಾದ ಶಕ್ತಿ. ಅಲಂಕಾರಿಕವಾಗಿ ಹೇಳಬೇಕೆಂದರೆ ಸುತ್ತಲ ಪ್ರಪಂಚ ಮತ್ತು ದೇಹದ ನಡುವಿನ ಹೆಬ್ಬಾಗಿಲು ಓಜಸ್ಸು. ‘ಪ್ರಾಣಶಕ್ತಿ ಎಲ್ಲೆಡೆ ಹರಡಿಕೊಂಡಿದೆ, ಅದು ದೇಹಕ್ಕೆ ನುಗ್ಗಲು ಕಾಯುತ್ತಿದೆ’ ಅಂತ ಕಳೆದ ವಾರವಷ್ಟೇ ಚರ್ಚಿಸಿದ್ದೆವಲ್ಲ; ಈ ಪ್ರಾಣಶಕ್ತಿ ದೇಹ ಪ್ರವೇಶಿಸುವುದು ಇದೇ ಓಜಸ್ಸಿನ ಮೂಲಕವೇ. ಓಜಸ್ಸು ವೃದ್ಧಿಯಾದಂತೆ ದೇಹದೊಳಗೆ ನುಗ್ಗುವ ವೈಶ್ವಿಕ ಪ್ರಾಣಶಕ್ತಿ ವೃದ್ಧಿಯಾಗುತ್ತದೆ. ಅಂತಹ ಓಜಸ್ವಿಯೇ ವಿಶ್ವಶಕ್ತಿಯ ಮೂರ್ತರೂಪವಾಗಿಬಿಡುತ್ತಾನೆ.

ayurveda_history_of_ayurveda
ಆಯುರ್ವೇದದ ದೃಷ್ಟಿಯಿಂದ ಓಜಸ್ಸು ದೀರ್ಘಕಾಲೀನ ಪ್ರಕ್ರಿಯೆಂದ ಸೃಷ್ಟಿಯಾಗುವ ಶಕ್ತಿ. ಅದೊಂದು ರೋಚಕ ಹಾದಿ ಕೂಡ. ನಾವು ತಿಂದ ಅನ್ನ ಜಠರಾಗ್ನಿಯಲ್ಲಿ ಬೆಂದು ರಸವಾಗುತ್ತದೆ. ಈ ರಸ ಪಡೆಯುವ ಪ್ರಕ್ರಿಯೆಯಲ್ಲಿ ಸ್ಟೃಯಾದ ಬೇಡದ ಪದಾರ್ಥ ಮಲವೆನ್ನಿಸಿಕೊಳ್ಳುತ್ತದೆ. ‘ರಸ’ದಿಂದ ಉತ್ಪಾದನೆಯಾಗೋದು ರಕ್ತ. ರಕ್ತದೊಳಗಿನ ಘನೀಭ”ಸಿದ ಶಕ್ತಿ ಮಾಂಸವಾಗಿ ಪರಿವರ್ತಿತವಾಗುತ್ತದೆ. ಈ ಮಾಂಸ ಕಾಲಕ್ರಮದಲ್ಲಿ ಕೊಬ್ಬಾಗಿ ಸಂಗ್ರಹಗೊಳ್ಳುತ್ತದೆ.
ಇಲ್ಲಿಯವರೆಗೂ ನಡೆದ ಪ್ರಕ್ರಿಯೆ ಮತ್ತೊಮ್ಮೆ ಓದಿ ನೋಡಿ. ಅನ್ನದ ಸಾರ ರಸ, ರಸದ ಸಾರ ರಕ್ತ ಆಮೇಲೆ ಮಾಂಸ ಮತ್ತು ಕೊಬ್ಬು. ಹಂತ ಮೇಲೇರಿದಂತಲ್ಲಾ ಅವುಗಳಲ್ಲಿ ಅಡಗಿರುವ ಶಕ್ತಿ ವೃದ್ಧಿಯಾಗುತ್ತ ಸಾಗುತ್ತದೆ. ನಾಲ್ಕಾರು ದಿನ ಊಟ ಮಾಡದಿದ್ದರೆ ನಾವು ಸತ್ತೇ ಹೋಗುವುದಿಲ್ಲ, ಏಕೆ ಗೊತ್ತೇ? ಕೊಬ್ಬು ಕರಗಿ ದೇಹಕ್ಕೆ ಬೇಕಾದ ಶಕ್ತಿ ಒದಗಿಸುತ್ತಿರುತ್ತದೆ. ಇನ್ನು ಮುಂದೆಯೂ ಹೀಗೆಯೇ. ಈ ಕೊಬ್ಬಿನೊಳಗಿನ ಶಕ್ತಿಯೇ ಮೂಳೆಗಳಾಗಿ ನಿರ್ಮಾಣಗೊಂಡರೆ ಇದೇ ಶಕ್ತಿ ಮುಂದಿನ ಹಂತದಲ್ಲಿ ಮಜ್ಜೆಯಾಗಿ ರೂಪಾಂತರ ಹೊಂದುತ್ತದೆ. ಮೂಳೆಯೊಳಗೆ ಬಂಧಿಯಾಗಿರುವ ಮಜ್ಜೆ ನಮ್ಮ ಪಾಲಿನ ಕ್ರಿಯಾಶಕ್ತಿ. ವಯಸ್ಸಾದಂತೆ ನಮ್ಮ ಮೂಳೆಗಳು ಸವೆಯೋದು, ಗಂಟುಗಳಲ್ಲಿ ನೋಯೋದು ಇವೆಲ್ಲಕ್ಕೂ ಮುಖ್ಯ ಕಾರಣವೇ ಮಜ್ಜೆಯ ಕೊರತೆ. ಹೀಗಾಗಿ ವ್ಯಾಯಾಮ ಮಾಡಿ ಕೊಬ್ಬನ್ನು ಕರಗಿಸಿ ಮಜ್ಜೆಯಾಗಿಸಿಕೊಂಡರೆ ದೀರ್ಘಕಾಲ ಕೈಕಾಲು ನೋವುಗಳಿಂದ ಬಳಲದೇ ಇರಬಹುದು!
ಇನ್ನು ಮುಂದಿನ ಹಂತ ಬಲು ಮುಖ್ಯ. ಮಜ್ಜೆಯೊಳಗಿನ ಶಕ್ತಿ ಏಕಾಗ್ರಗೊಂಡು ನಿರ್ಮಾಣಗೊಳ್ಳೋದು ವೀರ್ಯ! ಅಲ್ಲಿಗೆ ರಸದಿಂದ ವೀರ್ಯದವರೆಗೆ ಆಯುರ್ವೇದ ಹೇಳುವ ಏಳು ಧಾತುಗಳು ಮುಗಿದವು. ಈ ಧಾತುಗಳು ದೇಹದೊಳಗೆ ಬೇಕಾದಷ್ಟು ಪ್ರಮಾಣದಲ್ಲಿದ್ದರೆ ವ್ಯಕ್ತಿ ಆರೋಗ್ಯವಂತ. ಇಲ್ಲವಾದಲ್ಲಿ ಆತ ಸದಾ ರೋಗಿಯೇ ಸರಿ. ಒಂದು ಧಾತುವಿನಿಂದ ಮತ್ತೊಂದು ಧಾತು ನಿರ್ಮಾಣಗೊಳ್ಳಲು ಸಾಕಷ್ಟು ಕಾಲಾವಕಾಶವೇ ಬೇಕು. ಸ್ಪಷ್ಟವಾಗಿ ಹೇಳಬೇಕೆಂದರೆ ಒಂದು ಹನಿಯಷ್ಟು ವೀರ್ಯ ದೇಹದೊಳಗೆ ತಯಾರಾಗಲು ಸುಮಾರು ಎಂಭತ್ತು ಹನಿ ರಕ್ತ ತಮ್ಮೊಳಗಿನ ಶಕ್ತಿಯನ್ನು ಧಾರೆ ಎರೆಯಬೇಕು. ಹೀಗೆ ಈ ರಕ್ತ ವೀರ್ಯವಾಗಿ ರೂಪಾಂತರಗೊಳ್ಳಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು. ಅಂದರೆ ಇಂದು ಹೊರ ಹೋಗುವ ವೀರ್ಯ ದೇಹದೊಳಗೆ ನಿರ್ಮಾಣಗೊಳ್ಳುವ ಪ್ರಕ್ರಿಯೆ ಶುರುವಾಗಿದ್ದು ಒಂದು ತಿಂಗಳ ಹಿಂದೆ! ಇನ್ನೂ ಸ್ಪಷ್ಟಪಡಿಸಬೇಕೆಂದರೆ ನಾವು ತಿಂದ ಅನ್ನದೊಳಗಿನ ಶಕ್ತಿ ಜರಡಿ ಹಿಡಿ-ಹಿಡಿದು ದೀರ್ಘ ಪ್ರಕ್ರಿಯೆಯ ನಂತರ ವೀರ್ಯವಾಗುತ್ತದೆ. ಈ ದೇಶದ ಪರಂಪರೆಯಲ್ಲಿ ವೀರ್ಯವಂತನಾಗು ಅಂತ ಹಿರಿಯರು ಆಶೀರ್ವಾದ ಮಾಡುತ್ತಿದ್ದುದೇಕೆಂದು ಈಗ ಅರಿವಾಗಿರಬೇಕು!
ಈ ಘನೀಭೂತ ಶಕ್ತಿಯನ್ನು ದೇಹದಲ್ಲಿ ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕೆಂಬ ತುಡಿತದಿಂದಲೇ ಬ್ರಹ್ಮಚರ್ಯದ ಕಲ್ಪನೆ ಹುಟ್ಟಿಕೊಂಡಿತು. ಹೀಗಾಗಿಯೇ ಪತಂಜಲಿ ‘ಬ್ರಹ್ಮಚರ್ಯ ಪ್ರತಿಷ್ಠಾಯಾಂ ವೀರ್ಯಲಾಭಃ’ ಎಂದಿದ್ದು. ಅದರರ್ಥ ಸ್ಪಷ್ಟ. ವೀರ್ಯ ದೇಹದಿಂದ ಅನವಶ್ಯಕವಾಗಿ ಹೊರಹೋಗುವುದನ್ನು ತಡೆದು ನಿಲ್ಲಿಸಿದರೆ ಅದು ದೇಹದೊಳಗೆ ಪ್ರಬಲವಾದ, ಶಕ್ತಿಯುತ ಧಾತುವಾಗುತ್ತದೆ. ಅಷ್ಟೇ ಅಲ್ಲ, ಈ ವೀರ್ಯಕ್ಕೆ ಹೊರಹೋಗುವ ಮಾರ್ಗವಿಲ್ಲದಿರುವುದರಿಂದ ಅದೀಗ ಅನಿವಾರ್ಯವಾಗಿ ದೇಹದೊಳಗೇ ಮೇಲ್ಮುಖವಾಗಿ ಹರಿಲಾರಂಭಿಸುತ್ತದೆ. ಮಜ್ಜೆ,-ಮೂಳೆ-ಮಾಂಸ-ರಕ್ತಕ್ಕೂ ಶಕ್ತಿ ತುಂಬಿ ದೇಹವನ್ನು ಬಲಾಢ್ಯಗೊಳಿಸುತ್ತದೆ.
ಇದೇ ವೀರ್ಯಶಕ್ತಿ ಸೂಕ್ಷ್ಮರೂಪದಲ್ಲಿ ಕ್ರೋಡೀಕೃತ ಶಕ್ತಿಯಾಗಿ ಓಜಸ್ಸು ಎಂದು ರೂಪಾಂತರವಾಗುತ್ತದೆ. ಕೆಲವರಂತೂ ವೀರ್ಯವನ್ನೇ ಓಜಸ್ಸು ಎಂದುಬಿಡುತ್ತಾರೆ. ಅಲ್ಲಗಳೆಯಬೇಕ್ಕಾದ್ದೇನಿಲ್ಲ. ಯಾವುದು ದೇಹದಲ್ಲಿ ಎಲ್ಲಕ್ಕಿಂತಲೂ ಶಕ್ತಿಯುತವೋ ಅದೇ ಓಜಸ್ಸು ಎಂದು ಭಾವಿಸುವುದಾದರೆ ವೀರ್ಯ’ವನ್ನು ಆ ದೃಷ್ಟಿಯಲ್ಲಿ ನೋಡುವುದು ತಪ್ಪೇನಿಲ್ಲ. ಆದರೆ ವೀರ್ಯವನ್ನು ಜರಡಿ ಹಿಡಿದಾಗ ಸಿದ್ಧಿಸುವುದು ಓಜಸ್ಸು ಅಂತ ಅನೇಕರ ಅಭಿಪ್ರಾಯ. ಆಯುರ್ವೇದ ಗ್ರಂಥಗಳಲ್ಲಿ ಇದರ ಬಣ್ಣ, ರೂಪ, ರುಚಿಯನ್ನೂ ವಿವರಿಸಿದ್ದಾರೆ.
ಇರಲಿ. ಓಜಸ್ಸು ವೃದ್ಧಿಯಾದಷ್ಟೂ ಆರೋಗ್ಯ ವೃದ್ಧಿಯಾಗುತ್ತದೆ. ವ್ಯಕ್ತಿ ಚೈತನ್ಯ ಶೀಲನಾಗುತ್ತಾನೆ; ಉತ್ಸಾಹಿಯಾಗುತ್ತಾನೆ. ಆತ ಸದಾ ಚಟುವಟಿಕೆಂದ ಕೂಡಿದವನಾಗುವನಲ್ಲದೇ, ಸೃಜನಶೀಲನೂ-ಚತುರಮತಿಯೂ ಆಗಿಬಿಡುತ್ತಾನೆ. ಓಜಸ್ಸೇ ದೇಹಕ್ಕೂ, ವಿಶ್ವಕ್ಕೂ ನಡು”ನ ಕೊಂಡಿಯಾಗಿರುವುದರಿಂದ ದೇಹ ವಿಶ್ವದ ಸ್ಪಂದನಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸಲಾರಂಭಿಸುತ್ತದೆ. ಹೊಸ-ಹೊಸ “ಚಾರಗಳು ಉದ್ದೀಪನಗೊಳ್ಳಲಾರಂಭಿಸುತ್ತವೆ. “ಗಾಗಿಯೇ ಅಧ್ಯಯನ ಅವಧಿಯಲ್ಲಿ ವಿದ್ಯಾರ್ಧಿಗಳು ಕಟ್ಟುನಿಟ್ಟಾಗಿ ಬ್ರಹ್ಮಚರ್ಯದ ಆಚರಣೆ ಮಾಡಬೇಕೆಂದು ನಮ್ಮ ಶಾಸ್ತ್ರಗಳು “ಧಿಸಿರೋದು.
ಮೇಲ್ಮುಖವಾಗಿ ಹರಿದ “ರ್ಯ ಓಜಸ್ಸಾಗಿ ಹೃದಯ ಕ್ಷೇತ್ರದಲ್ಲಿ ನೆಲೆ ನಿಂತು ಪ್ರಾಣ ಶಕ್ತಿಯ ಹರಿವಿಗೆ ಬಲ ತುಂಬುತ್ತದೆ. ಅಷ್ಟೇ ಅಲ್ಲ ಇದರ ಪ್ರಭಾವದಿಂದ ಅಗ್ನಿ ರೂಪೀ ತೇಜಸ್ಸು ದೇಹದಿಂದ ಹೊರಹೊಮ್ಮಲಾರಂಭಿಸುತ್ತದೆ. ದೇಹದೊಳಗೆ ಸಂಗ್ರಹಗೊಂಡ ಓಜಸ್ಸು ವ್ಯಕ್ತಗೊಳ್ಳೋದು ತೇಜಸ್ಸಿನ ಮೂಲಕವೇ. ತಂದೆ- ತಾಯರ ಓಜಸ್ಸಿನಿಂದ ನಮ್ಮ ಚರ್ಮಕ್ಕೆ ಬಣ್ಣ ಬಂದಿರಬಹುದು ಆದರೆ ಅದಕ್ಕೆ ಕಾಂತಿಯ ಲೇಪ ದೊರೆತರೆ ನಮ್ಮಲ್ಲಿನ ಓಜಸ್ಸೇ ಕಾರಣ!
ಮುಂದಿನ ಹಂತ ಅದೇನು ಗೊತ್ತೇ? ಓಜಸ್ಸು ಹೆಚ್ಚಾಗುತ್ತಾ ಹೋದಂತೆ ಅದು ಮತ್ತೂ ಮೇಲ್ಮುಖವಾಗಿ ಹರಿದು ಮೆದುಳಿನ ಭಾಗ ತಲುಪಿಬಿಡುತ್ತದೆ. ಅದು ಅತ್ಯಂತ ಶ್ರೇಷ್ಠ ಅನುಭೂತಿಗಳ ಹೊತ್ತು ಹಾಗೆಂದು ರಾಜ ಯೋಗದ ವಿವರಣೆ. ಹೀಗೆ ಮೆದುಳಿನಲ್ಲಿ ಓಜಸ್ಸು ಸಂಗ್ರಹಿಸಿದವ ವಿಶ್ವದೊಂದಿಗೆ ಒಂದಾಗಿಬಿಡುತ್ತಾನೆ. ಅಥವಾ ತಾನೇ “ಶ್ವವಾಗಿಬಿಡುತ್ತಾನೆ. ಸ್ಟೃಯ ರಹಸ್ಯಗಳೆಲ್ಲ ಅವನೆದುರಿಗೆ ತಂತಾನೆ ಗರಿ ಬಿಚ್ಚಿಕೊಳ್ಳುತ್ತವೆ. ತುಂಬಾ ಸಲೀಸಾಗಿ ಹೇಳಬೇಕೆಂದರೆ ಹೊಸ ಸ್ಟೃಗೆ ಕಾರಣವಾಗುವ “ರ್ಯವನ್ನು ಬ್ರಹ್ಮನೆಂದು ಭಾ”ಸಿದರೆ, ಸದಾ ಗತಿಶೀಲವಾಗಿದ್ದು ರಕ್ಷಣೆಗೆ ನಿಲ್ಲುವ ಹೃದಯ “ಷ್ಣು! ಇನ್ನು ಸಹಸ್ರಾರದಲ್ಲಿ ಶಿವನ ವಾಸ. “ರ್ಯವನ್ನು ಮೇಲ್ಮುಖವಾಗಿ ಏರಿಸಿ ಹೃದಯ ಭಾಗದಲ್ಲಿ ಓಜಸ್ಸಾಗಿ ನಿಲ್ಲಿಸಿದರೆ ಬ್ರಹ್ಮ-“ಷ್ಣು”ನ ಸಮಾಗಮ. ಇಲ್ಲಿಂದಲೂ ಇದನ್ನು ಮೇಲ್ಮುಖವಾಗಿ ಒಯ್ದು ಸಹಸ್ರಾರದಲ್ಲಿ ಒಂದು ಮಾಡಿದರೆ ತ್ರಿಮೂರ್ತಿಗಳ “ಲನ. ಸಹಜವಾಗಿಯೇ ಅಂತಹ ವ್ಯಕ್ತಿ ಸ್ಟೃಸಬಲ್ಲ ರಕ್ಷಿಸಬಲ್ಲ ಮತ್ತು ಲಯಕಾರಿಯೂ ಆಗಬಲ್ಲ! ಒಂದು ಬಗೆಯಲ್ಲಿ ಆತ ಆಧ್ಯಾತ್ಮಿಕ ಡೈನಮೊ ಆಗಿಬಿಟ್ಟಿರುತ್ತಾನೆ. ಅವನ ಶಕ್ತಿ ಹಿರೋಶಿಮಾ, ನಾಗಾಸಾಕಿಗಳ ನಾಶ ಮಾಡಿದ ಅಣುಬಾಂಬುಗಳಿಗಿಂತಲೂ ಲಕ್ಷಾಂತರ ಪಟ್ಟು ಹೆಚ್ಚು. “ಗಾಗಿಯೇ ಅಂತಹವರು ಹೊಸ ಯುಗವನ್ನೇ ಸ್ಟೃಸಿಬಿಡುತ್ತಾರೆ. ಕುಳಿತಲ್ಲಿಂದಲೇ ಆಕಾಶಕಾಯಗಳ ಚಲನೆ- ತೂಕಗಳನ್ನು ನಮ್ಮ ಪೂರ್ವಜರು ಕರಾರುವಾಕ್ಕಾಗಿ ಅಳೆಯಲು ಸಾಧ್ಯವಾದದ್ದು ಇದರಿಂದಲೇ. ಕಾಡಿನಲ್ಲಿ ತಪಸ್ಸು ಮಾಡುತ್ತಾ ಕುಳಿತ ಋಗಳು ಅಣುವಿಜ್ಞಾನದಿಂದ ಹಿಡಿದು ವಿಮಾನ ಶಾಸ್ತ್ರದವರೆಗೆ ಉದ್ಗ್ರಂಥ ರಚಿಸಲು ಸಾಧ್ಯವಾಗಿದ್ದು ಇನ್ನು ಹೇಗಿರಬೇಕು ಹೇಳಿ. ಪೈಗಂಬರರ ಅನುಯಾಗಳು, ಕ್ರಿಸ್ತನ ಅನುಯಾಗಳು ಜಗತ್ತಿನ ಮೇಲೆ ಪ್ರಭುತ್ವ ಸ್ಥಾಪಿಸಲು ಕೊಲೆ-ಸುಲಿಗೆಗಳ ಆಶ್ರಯ ಪಡೆದರೆ ಬುದ್ಧ ಪ್ರೀತಿಂದಲೇ ವಿಶ್ವವನ್ನೇ ತಬ್ಬಿಕೊಂಡನಲ್ಲಾ ಹೇಗೆ? ಮೆದುಳಿನಲ್ಲಿ ಸಂಗ್ರಹವಾಗುವ ಈ ಓಜಸ್ಸು ವ್ಯಕ್ತಿಯನ್ನೇ ವಿಶ್ವವನ್ನಾಗಿ ಪರಿವರ್ತಿಸಿಬಿಡುತ್ತದೆಂದ ಮೇಲೆ ಇನ್ನು ಬೇರೆ ಮಾತೇನು ಉಳಿತು. ಈಗ ಚಿಕಾಗೋದಲ್ಲಿ “ವೇಕಾನಂದರ  ಎಂಬ ಮೊದಲೈದು ಪದಗಳಿಗೆ ವ್ಯಾಪಕವಾದ ಸ್ವಾಗತದೊರೆತದ್ದೇಕೆಂದು ಅರಿವಾತೇನು? ಸ್ವಾಮೀಜಿಯೂ ತಮ್ಮ ಮಿತ್ರರಿಗೆ ಬರೆದ ಪತ್ರವೊಂದರಲ್ಲಿ, ಬದುಕಿನಲ್ಲಿ ಈವರೆಗೂ ಯಾರನ್ನೂ ಕೆಟ್ಟ ದ್ಟೃಂದ ನೋಡದೇ ಇರುವುದರಿಂದ ನನ್ನೊಳಗೆ ಅಪಾರ ಸಾತ್ವಿಕ ಶಕ್ತಿ ಹರಿಯುತ್ತಿದೆ. ಇದರೆದುರಿಗೆ ಅಮೇರಿಕಾವೇನು ಜಗತ್ತೇ ತಲೆಬಾಗಬೇಕು ಎಂದಿದ್ದರು.
ಹೌದು, ಬ್ರಹ್ಮಚರ್ಯದ ಕಾರಣದಿಂದಾಗಿ ಮೇಲ್ಮುಖವಾಗಿ ಹರಿಯುವ ವೀರ್ಯ ಒಂದು ಪ್ರಬಲ ಸಾತ್ವಿಕ ಶಕ್ತಿ. ಒಂದು ಪರಿವಾರದಲ್ಲಿ ಈ ಬಗೆಯ ಸಾತ್ವಿಕ ಶಕ್ತಿಯ ಒಡೆಯರೆಷ್ಟು ಜನರಿದ್ದಾರೆಂಬ ಆಧಾರದ ಮೇಲೆ ಆ ಪರಿವಾರದ ಸಾಮರ್ಥ್ಯ ಅಳೆಯಲಾಗುತ್ತದೆ. ಅದಕ್ಕೆ ಒಂದು ಮನೆಂದ ಒಬ್ಬ ಸಂತ ಹೊರಟನೆಂದರೆ ಅವನ ಹಿಂದಿನ ಏಳು ಜನ್ಮ ಮತ್ತು ಮುಂದಿನ ಏಳು ಜನ್ಮ ಮುಕ್ತಿ ಪಡೆದವೆಂಬ ಮಾತು ಹೇಳುತ್ತಾರೆ.
ಹಾಗಂತ ಬ್ರಹ್ಮಚರ್ಯವೆಂದರೆ ಮದುವೆಯಾಗದೇ ಇದ್ದು ಬಿಡುವುದಲ್ಲ. ಅದು ನಮ್ಮೊಳಗೆ ಹರಡಿರುವ ತಪ್ಪು ಕಲ್ಪನೆ. ಹಾಗೆ ನೋಡಿದರೆ ನಮ್ಮ ವೇದ ಕಾಲದ ಋಗಳು ಮದುವೆಯಾದವರೇ. ಯಾಜ್ಞ್ಯವಲ್ಕ್ಯರಂಥವರಂತೂ ಎರಡೆರಡು. ‘ಬ್ರಹ್ಮಚರ್ಯವೆಂಬುದು ಮನಸ್ಸು, ಮಾತು, ಕರ್ಮಗಳಿಂದಲೂ ಮೈಥುನ ತ್ಯಾಗ’ ಎಂಬುದು ಕೂರ್ಮಪುರಾಣದ ವ್ಯಾಖ್ಯೆ. ಮಾತಿನಲ್ಲಿ ಬಿಡಿ, ಮನಸ್ಸಿನಲ್ಲಿ “ಚಾರಗಳು ಮೈಲಿಗೆಯಾದರೂ ಬ್ರಹ್ಮಚರ್ಯದಿಂದ ಪತನವೇ. ಹೀಗಾಗಿಯೇ ಅಂಥವನು ಸದಾ ತನ್ನ ಮನಸ್ಸನ್ನು ಬ್ರಹ್ಮಚಿಂತನೆಯಂತಹ ಉನ್ನತ ತತ್ತ್ವಗಳಲ್ಲಿಯೇ ಇಟ್ಟಿರಬೇಕು. ಬ್ರಹ್ಮಚರ್ಯದ ಪದಶಃ ಅರ್ಥ ಅದೇ. “ಗೆ ಸದಾ ಔನ್ನತ್ಯದ ಚಿಂತನೆ ಮಾಡಲು ಮನಸ್ಸನ್ನು ಕೆಳಗೆಳೆಯುವ ಎಲ್ಲ ಕಾಮನೆಗಳಿಂದಲೂ ದೂರ”ಬೇಕು. ಸರಳವಾಗಿ ಹೇಳಬೇಕೆಂದರೆ ಅಂತಹ ವ್ಯಕ್ತಿ ಬಯಸಿ ಬಡವನಾಗಿರಬೇಕು.
ಹೌದು. ಇಚ್ಛೆಪಟ್ಟು ಎಲ್ಲವನ್ನೂ ತ್ಯಾಗಮಾಡಿ ಬಡತನವನ್ನು ಆಯ್ದುಕೊಂಡವನೇ ಬ್ರಾಹ್ಮಣ. ಈ ರೀತಿಯ ಬದುಕು ಬಲು ಕಠಿಣವಾದ್ದರಿಂದ ಅವನಿಗೆ ಎಲ್ಲರ ಗೌರವ. ಸಮಾಜದ ಹಿತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಇಂತಹ ಸಾತ್ವಿಕ ಶಕ್ತಿಯ ಗಣಿಗಳ ರಕ್ಷಣೆಗೆ, ಸೇವೆಗೆ ಉಳಿದೆಲ್ಲಾ ಜನ ತಯಾರಾಗಿರುತ್ತಾರೆ. ವರ್ಣಪದ್ಧತಿಯ ಹಿಂದಿನ ದೃಷ್ಟಿ ಇದೇ ಆಗಿತ್ತು. ಎಂದಿನಿಂದ ಹುಟ್ಟಿನಿಂದ ವರ್ಣಗಳನ್ನು ನಿರ್ಧರಿಸಲಾರಂಭಿಸಿದೆವೋ, ವರ್ಣ ಜಾತಿಯಾಯ್ತೋ ಅಂದಿನಿಂದ ಈ ದೇಶದ ಸಾಮರಸ್ಯದ ಹಂದರ ಕುಸಿದು ಬಿತ್ತು. ಶ್ರೇಷ್ಠ ಚಿಂತನೆಗಳೆಲ್ಲ ಅಪಾತ್ರರ ಕೈವಶವಾದವು. ವೇದಕಾಲೀನ ಭಾರತ, ಪುರಾಣದ ಹಂತಕ್ಕಿಳಿತು. ಇಳಿಯುವ ಪ್ರಕ್ರಿಯೆ ಅದೆಷ್ಟು ವೇಗವಾಗಿ ನಡೆತೆಂದರೆ ಸಕಲ ಜೀ”ಗಳಲ್ಲಿಯೂ ಬ್ರಹ್ಮನನ್ನೇ ಕಂಡವರಿಗೆ ಸಹಮಾನವರೇ ತುಚ್ಛವಾಗಿ ಕಂಡರು! ಎಲ್ಲಕ್ಕೂ ಮೂಲ ಕಾರಣ ಓಜಸ್ಸಿನ ಕೊರತೆಯೇ.
ಮತ್ತೊಂದು ಹೊಸ ಪೀಳಿಗೆ ನಿರ್ಮಾಣವಾಗಬೇಕು. ವೀರ್ಯವತ್ತಾದ, ಓಜಸ್ಸಿನ ಆಗರವಾದ ಪೀಳಿಗೆ! ಅದು ತನ್ನ ಸಾತ್ವಿಕ ಶಕ್ತಿಂದ ಮತ್ತೊಮ್ಮೆ ಜಗತ್ತನ್ನು ಆಳಬೇಕು. ಅದಕ್ಕೆ ಪೂರಕವಾದ ಶಿಕ್ಷಣ ಶಾಲೆಗಳಲ್ಲಿ ಸಿಗುವಂತಾಗಬೇಕು. ನಿಜ ಹೇಳಬೇಕೆಂದರೆ ಲೈಂಗಿಕ ಶಿಕ್ಷಣ ಅಂದರೆ ಇದೇ. ನಾವು ಪಶ್ಚಿಮದವರಂತೆ ಆಲೋಚನೆ ಮಾಡಿ ಹೊಡೆತ ತಿಂದಿದ್ದು ಸಾಕು. ಈಗ ಭಾರತೀಯರಾಗಿ ಬದುಕೋಣ. ರಾಷ್ಟ್ರವನ್ನು ಬಲಾಢ್ಯಗೊಳಿಸಲೇಬೇಕು ಅನ್ನೋದು ಸರಿ, ನಾವೀಗ ವಿಶ್ವವನ್ನೂ ಕಟ್ಟೋಣ!!

Leave a Reply