ವಿಭಾಗಗಳು

ಸುದ್ದಿಪತ್ರ


 

ಢೋಂಗೀ ಇತಿಹಾಸಕಾರರಿಂದ ಕೊನೆಗೂ ಸ್ವಾತಂತ್ರ್ಯ

ಅದು ಹಾಗೆಯೇ! ಮೊದಲು ಸುಳ್ಳು ಹೇಳಿ. ಅದನ್ನು ವಿಸ್ತಾರವಾಗಿ ಬರೆಯಿರಿ. ಅದಕ್ಕೆ ಪ್ರಭಾವ ಬೀರಿ ಪ್ರಶಸ್ತಿ ಪಡೆಯಿರಿ. ಆಮೇಲೆ ಪ್ರಶಸ್ತಿ ಪುರಸ್ಕೃತ ಲೇಖಕರ ಕೃತಿಯೆಂದು ಇತರರು ಅದನ್ನು ಉಲ್ಲೇಖಿಸಲಿ. ನೋಡ ನೋಡುತ್ತಲೇ ಮತ್ತೆ ಮತ್ತೆ ಹೇಳಿದ ಸುಳ್ಳು ಸತ್ಯವೆಂದು ಸಾಬೀತಾಗಿಬಿಡುತ್ತದೆ! ಕಮ್ಯುನಿಸ್ಟರು ಇಂತಹ ಸುಳ್ಳುಗಳ ಸರದಾರರು. ಭಾರತೀಯತೆಯನ್ನು ಪ್ರತಿಪಾದಿಸಬಲ್ಲ ಯಾವ ಅಂಶಗಳೂ ಅವರಿಗೆ ಬೇಡವೇ ಬೇಡ. ಜಗತ್ತಿಗೆ ಭಾರತದ ಕೊಡುಗೆಯೇನೆಂದು ಅವರನ್ನು ಕೇಳಿದರೆ ಜಾತಿಪದ್ಧತಿ, ವರ್ಣಸಂಘರ್ಷ, ಸ್ತ್ರೀ ಶೋಷಣೆ, ಬಡತನ ಎಂದೆಲ್ಲ ಪುಂಖಾನುಪುಂಖವಾಗಿ ಬೊಗಳೆ ಬಿಡುತ್ತಾರೆ. ವಿಜ್ಞಾನ, ತಂತ್ರಜ್ಞಾನ, ಗಣಿತ, ಭಾಷೆ, ತತ್ತ್ವಶಾಸ್ತ್ರಗಳಲ್ಲಿ ನಮ್ಮ ಕೊಡುಗೆಯನ್ನು ಉಪೇಕ್ಷಿಸಿಬಿಡುತ್ತಾರೆ. ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದೊಡನೆ ಇವರ ಎದೆ ಢವಗುಟ್ಟುತ್ತದೆ. ಇಲ್ಲಿನ ಮುಸಲ್ಮಾನರನ್ನು ಭಡಕಾಯಿಸಿ ಸೂರ್ಯನಮಸ್ಕಾರ ಮಾಡುವುದಿಲ್ಲವೆಂದು ಅರಚಾಡುವಂತೆ ಮಾಡುತ್ತಾರೆ, ನಲವತ್ತ್ನಾಲ್ಕು ಮುಸಲ್ಮಾನ ರಾಷ್ಟ್ರಗಳೇ ಯೋಗ ದಿನಾಚರಣೆಗೆ ಬೆಂಬಲ ಸೂಚಿಸಿದಾಗ ಬೆಪ್ಪುತಕ್ಕಡಿಗಳಾಗುತ್ತಾರೆ.

history

ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡಬೇಕಾದರೂ ಶತ್ರು ರಾಷ್ಟ್ರಗಳು ಸಾಕಷ್ಟು ಅಧ್ಯಯನ ನಡೆಸಿರಬೇಕು. ಎದುರಾಳಿ ರಾಷ್ಟ್ರದ ಬಲಾಢ್ಯ ಮತ್ತು ಬಲಹೀನ ಗಡಿಗಳ ಕುರಿತಂತೆ ಮಾಹಿತಿ ಪಡೆದು ಬಲಾಢ್ಯ ಗಡಿಯನ್ನು ಕಾಲಕ್ರಮದಲ್ಲಿ ಬಲಹೀನಗೊಳಿಸುವ ಪ್ರಯತ್ನ ಮಾಡುತ್ತಲಿರಬೇಕು ಮತ್ತು ಬಲಹೀನ ಸೀಮೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತ ಸಾಗಬೇಕು. ಭಾರತವನ್ನೇ ಒಮ್ಮೆ ನೋಡಿ. ಹಿಮಾಲಯದ ಎಲ್ಲೆ ಸಹಜವಾಗಿಯೇ ಬಲಿಷ್ಠ. ಅತ್ತಲಿಂದ ಆಕ್ರಮಣ ತಡೆಯಲು ನಮ್ಮ ಕಾವಲಿಗಿಂತ ಪ್ರಕೃತಿಯೇ ಹೆಚ್ಚು ಸಹಕಾರಿ. ಅದಕ್ಕೆ ಚೀನಾ ನಿರಂತರವಾಗಿ ಅದೇ ಗಡಿಯುದ್ದಕ್ಕೂ ರಸ್ತೆ-ರೇಲ್ವೆ ಹಳಿಗಳ ನಿಮರ್ಾಣ ಮಾಡುತ್ತ ನಮ್ಮ ಕಾವಲಿನ ಕ್ಷಮತೆ ಕಡಿಮೆಯಾಗುವಂತೆ ನೋಡಿಕೊಂಡಿದೆ. ಆಂಧ್ರ ಮತ್ತು ತಮಿಳುನಾಡುಗಳನ್ನು ಭೇದಿಸಲು ಶ್ರೀಲಂಕಾದ ಬಂದರುಗಳ ಅಭಿವೃದ್ಧಿಗೆ ಕೈಹಾಕಿದೆ. ಕೇರಳದಿಂದ ಗುಜರಾತಿನವರೆಗಿನ ಗಡಿ ಭೇದಿಸಲು ನೆಲೆಯಿಲ್ಲದಾಗ ಒಳಗೆ ಆಂತರಿಕ ಸಂಘರ್ಷ ಹೆಚ್ಚುವುದಕ್ಕೆ ಪುಷ್ಟಿಕೊಟ್ಟಿದೆ ಮತ್ತು ಪಾಕೀಸ್ತಾನಕ್ಕೆ ಹೊಂದಿಕೊಂಡ ನಮ್ಮ ಗಡಿ ಅತಿ ಬಲಹೀನವಾದ್ದರಿಂದ ನಿಧಾನವಾಗಿ ಭೂಮಿಯನ್ನು ಕಸಿಯುತ್ತಿದೆ!
ಹೌದು. ನಾನು ರಾಷ್ಟ್ರದ ರಕ್ಷಣೆಯ ಕುರಿತಂತೆಯೇ ಮಾತನಾಡುತ್ತಿದ್ದೇನೆ. ಆದರಿದು ಗಡಿರೇಖೆಯಗುಂಟ ರಕ್ಷಣೆಯ ಮಾತಲ್ಲ; ಒಳಗಿನಿಂದಲೇ ಭಾರತವನ್ನು ನಾಶಗೊಳಿಸುತ್ತಿರುವ ಕಮ್ಯುನಿಸ್ಟರ ತಂತ್ರಗಾರಿಕೆಯ ಕುರಿತಂತೆ ಅಷ್ಟೇ. ಒಮ್ಮೆ ತಳಕು ಹಾಕಿ ನೋಡಿ. ಭಾರತವನ್ನು ನಾಶ ಮಾಡಬೇಕೆಂದರೆ ಸನಾತನ ಹಿಂದೂಧರ್ಮ ನಾಶಗೊಳ್ಳಬೇಕು. ಆಗ ಜಗತ್ತಿನ ಅತಿ ಪ್ರಾಚೀನ ಸಂಸ್ಕೃತಿಯೇ ಕಳೆದು ಹೋಗುತ್ತದೆ. ಸತ್ಯದ ಬುಡವೇ ಇಲ್ಲವಾದಮೇಲೆ ಮರಳಿನ ಮನೆ ಕಟ್ಟಿದರಾಯ್ತು!
ಹಿಂದೂ ಧರ್ಮದ ಬಲವಾದ ತಡೆಗೋಡೆ ಇಲ್ಲಿನ ವರ್ಣಪದ್ಧತಿ. ಸದಾ ಸಾಮಾಜಿಕ ಚಿಂತನೆಯಲ್ಲಿ ಮಗ್ನವಾಗಿ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ಮಾಡುತ್ತ ಧರ್ಮದ ಹಳಿಯ ಮೇಲೆ ಮತ್ತೆ ಜನರನ್ನು ಕೂರಿಸುವ ಸಾಮಥ್ರ್ಯವಿರೋದು ಬ್ರಾಹ್ಮಣ ವರ್ಣಕ್ಕೇ. ನೆನಪಿಡಿ. ಇದು ವರ್ಣವೇ ಹೊರತು ರೂಢಿಯಲ್ಲಿರುವ ಜಾತಿಯಲ್ಲ. ಈ ವರ್ಣದಲ್ಲಿ ಹಿಂದೂ ಸಮಾಜದ ಬೌದ್ಧಿಕವರ್ಗ, ಸಂತ ಸಮಾಜ, ನಿಸ್ವಾರ್ಥವಾಗಿ ಸೇವಾ ಚಟುವಟಿಕೆ ಮಾಡುತ್ತಿರುವ ಸನ್ಮಾಗರ್ಿಗಳು ಎಲ್ಲರೂ ಸೇರುತ್ತಾರೆ. ಇವರನ್ನು ಎದುರಿಸುವಲ್ಲಿಯೇ ಅಲೆಗ್ಸಾಂಡರ್ ಸೋತಿದ್ದು. ಇವರೆದುರು ನಿಲ್ಲಲಾಗದೇ ಮೊಘಲರು ಪರಾಭವಗೊಂಡಿದ್ದು. ತನ್ನ ಪ್ರಭುತ್ವ ಸಾಬೀತು ಪಡಿಸಲು ಕ್ರಿಶ್ಚಿಯನ್ನರು ಇಂದಿಗೂ ಹೆಣಗಾಡುತ್ತಿದ್ದಾರಲ್ಲಾ ಅದಕ್ಕೂ ಇವರೇ ಕಾರಣ.
ಈ ಬಲಾಢ್ಯ ಹಿಮಾಲಯದ ಶಕ್ತಿ ನಾಶಕ್ಕೆಂದೇ ಕಮ್ಯುನಿಸ್ಟರು ರಾಜಮಾರ್ಗದ ರಚನೆಗೆ ನಿಂತರು. ಬ್ರಾಹ್ಮಣರನ್ನು ಹಂತ ಹಂತವಾಗಿ ಜರಿದರು. ಬುದ್ಧಿಸಂ, ಜೈನಿಸಂ, ಸಿಖ್ಖಿಸಂನಂತೆ ಬ್ರಾಹ್ಮಿನಿಸಂ ಎಂಬೊಂದು ಪಂಥವನ್ನೇ ಹುಟ್ಟುಹಾಕಿ ‘ಬ್ರಾಹ್ಮಿನಿಸಂ ಗೆ ಹೋಲಿಸಿದರೆ ಬುದ್ಧಿಸಂ ಉದಾರವಾದಿಯೂ, ಪ್ರಜಾಪ್ರಭುತ್ವವಾದಿಯೂ ಆಗಿತ್ತು’ (R S Sharma, Ancient India) ಎಂದೂ ತೀಪರ್ು ಕೊಟ್ಟುಬಿಟ್ಟರು. ಅಷ್ಟೇ ಅಲ್ಲ. ‘ಬಲಿಯ ವಿಧಾನಗಳನ್ನು ಪುರೋಹಿತರೆಂದು ಕರೆಯಲ್ಪಡುವ ಬ್ರಾಹ್ಮಣರು ಸಂಶೋಧಿಸಿ, ಅನುಸರಿಸಿ, ವಿಸ್ತರಿಸಿದರು. ಬ್ರಾಹ್ಮಣರು ಪೌರೋಹಿತ್ಯದ ಜ್ಞಾನದ ಮೇಲೆ ಏಕಸ್ವಾಮ್ಯವನ್ನು ಘೋಷಿಸಿದರು. ಹೊಸ ಹೊಸ ಆಚರಣೆಗಳ ಸಂಶೋಧನೆ ಮಾಡಿದರು. ಹೀಗೆ ಆಚರಣೆಗಳನ್ನೂ ರೂಪಿಸಿ ಅನುಸರಿಸುವುದರಲ್ಲಿ ಹಿಂದಿದ್ದ ಕಾರಣ ಸ್ಪಷ್ಟವಾಗಿ ತಿಳಿದಿಲ್ಲದಿದ್ದರೂ ಸ್ವಾರ್ಥವಿದ್ದುದನಂತೂ ಅಲ್ಲಗಳೆಯಲಾಗದು. ರಾಜಸೂಯ ಯಾಗದ ಕಾಲದಲ್ಲಿ 2,40,000 ಹಸುಗಳನ್ನು ದಕ್ಷಿಣೆಯಾಗಿ ಇವರು ಪಡೆಯುತ್ತಿದ್ದರೆಂದೂ ಹೇಳಲಾಗುತ್ತದೆ’ ಎನ್ನುತ್ತಾರೆ ‘ಮಹಾನ್’ ಇತಿಹಾಸಕಾರ ಆರ್.ಎಸ್, ಶಮರ್ಾ. ಹನ್ನೊಂದನೆ ತರಗತಿಯ ಇತಿಹಾಸದ ಪುಸ್ತಕದಲ್ಲಿ ಇದನ್ನೋದುವ ವಿದ್ಯಾಥರ್ಿಗೆ ಅಂದಿನ ಬ್ರಾಹ್ಮಣರ ಬಗ್ಗೆ ಅಸಹ್ಯ ಬರುವುದಂತೂ ಖಾತ್ರಿಯೇ. ತನ್ನ ಅನುಷ್ಠಾನ- ಆಚರಣೆಗಳ ಮೇಲೆಯೂ ನಂಬಿಕೆ ಕಳೆದುಹೋಗಿಬಿಡುತ್ತದೆ. ಬಲಾಢ್ಯ ಗಡಿಯನ್ನು ಮೆದುಗೊಳಿಸುವುದು ಹೀಗೆಯೇ.

HALT STATION INDIA 1
ಈ ಪಾಪಿಗಳು ಇಲ್ಲಿಗೇ ನಿಲ್ಲಲಿಲ್ಲ. ‘ಬರವಣಿಗೆಯನ್ನು ಕಲಿಯುವವರೆಗೆ ಜನ ನಾಗರಿಕರಾಗಿರಲಿಲ್ಲ’ ಎಂಬುದನ್ನೂ ಮತ್ತೆ- ಮತ್ತೆ ಹೇಳಿ ವೇದಗಳು ಬರೆಯಲ್ಪಟ್ಟಿಲ್ಲ ಅವು ಕೇಳಿ ಕಲಿತವೆಂಬ ಮಾತನ್ನು ಮುಂದಿಟ್ಟುಕೊಂಡು ಅವುಗಳನ್ನು ಅನಾಗರಿಕರ ಕಾವ್ಯಗಳೆಂದು ನಂಬಿಸುವಲ್ಲಿ ಯಶಸ್ವಿಯಾಗಿಬಿಡುತ್ತಾರೆ! ವೇದಕಾಲದಲ್ಲಿಯೇ ಗೋಮಾಂಸ ಸೇವಿಸುತ್ತಿದ್ದರೆಂಬುದಂತೂ ಈ ಎಲ್ಲಾ ಇತಿಹಾಸಕಾರರ ಬಲು ಮೆಚ್ಚಿನ ವಿಷಯ. ಒಂದೇ ಒಂದು ಸಾಕ್ಷ್ಯವನ್ನು ಒದಗಿಸುವಲ್ಲಿ ಸೋತಾಗಲೂ ‘ವೇದಕಾಲದಲ್ಲಿ ಮನೆಗೆ ಬಂದ ವಿಶೇಷ ಅತಿಥಿಗಳಿಗೆ ಗೌರವವೆಂಬಂತೆ ದನದ ಮಾಂಸವನ್ನು ವಿಶೇಷವಾಗಿ ಉಣಬಡಿಸಲಾಗುತ್ತಿತ್ತು’ ಎನ್ನುತ್ತಾಳೆ ರೋಮಿಲಾ ಥಾಪರ್. ಈ ಸಾಲುಗಳನ್ನು ಸೆಂಟ್ರಲ್ ಬೋಡರ್ಿನ ಆರನೇ ತರಗತಿಯ ಮಕ್ಕಳು ತಮ್ಮ ಪಠ್ಯದಲ್ಲಿ ಕಲಿಯಬೇಕು. ಎಂತಹ ದುದರ್ೈವ.
ಈ ರೀತಿಯ ಹಸಿಸುಳ್ಳುಗಳಿಂದ ಸಮಾಜಕ್ಕೆ ಮಾರ್ಗದರ್ಶನ ಮಾಡಬಹುದಾಗಿದ್ದ ಎಲ್ಲಾ ಸಾಮಥ್ರ್ಯವನ್ನು ಬ್ರಾಹ್ಮಣ ವರ್ಣ ಹಂತ-ಹಂತವಾಗಿ ಕಳೆದುಕೊಂಡು ತಾನೂ ಇತರರಂತಾಯ್ತು. ಆದರೆ ಕಾವಿಧಾರಿಯಾಗಿದ್ದ ಸಂತರು ಧರ್ಮದ ಅಧಿಷ್ಠಾನದ ಮೂಲಕ ಮತ್ತೆ ಭಾರತವನ್ನು ಕಟ್ಟಿ ನಿಲ್ಲಿಸುತ್ತಿದ್ದಾರೆಂದು ಅರಿವಾದೊಡನೆ ಅವರ ಮೇಲೆ ದಾಳಿಗಳು ಶುರುವಾದವು. ಕ್ರಿಶ್ಚಿಯನ್ನರು ಸಂತರನ್ನು ಭಿಕಾರಿಗಳೆಂದರು, ಭಯೋತ್ಪಾದಕರೆಂದರು, ಕೊನೆಗೆ ಬ್ರಿಟೀಷ್ ವಿರೋಧಿ ಏಜೆಂಟರೆಂದು ಜೈಲಿಗೆ ತಳ್ಳಿದರು. ಕಮ್ಯುನಿಸ್ಟರು ತಮಗಿರುವ ಪತ್ರಕರ್ತರ ನೆಟ್ವಕರ್್ ಬಳಸಿಕೊಂಡು, ಚಚರ್ಿನ ಹಣವುಂಡು ಸಂತರ ಮೇಲೆ ಬಗೆ-ಬಗೆಯ ಆರೋಪಗಳನ್ನು ಹೊರಿಸಿದರು. ಜೈಲಿಗೆ ತಳ್ಳಿಸಿದರು. ಸ್ವಾಮಿ ಅಸೀಮಾನಂದರು, ಸಾಧ್ವಿ ಪ್ರಜ್ಞಾಸಿಂಗರೆಲ್ಲ ಇಂತಹುದಕ್ಕೆ ಬಲಿಯಾದವರೇ. ರವಿಶಂಕರ್ ಗುರೂಜಿ ಹಿಂದೂ ಧರ್ಮದ ಪ್ರಚಾರಕ್ಕೆ ನಿಂತಿರದಿದ್ದರೆ ಅವರ ವಿಶ್ವ ಸಾಂಸ್ಕೃತಿಕ ಹಬ್ಬವನ್ನು ಇದೇ ಮಾಧ್ಯಮಗಳು ರಂಗು-ರಂಗಾಗಿ ಪ್ರಸ್ತುತ ಪಡಿಸುತ್ತಿದ್ದವು.
ಬಿಡಿ. ಹಿಂದೂ ಧರ್ಮದ ಶಕ್ತಿಯುತ ಗಡಿ ಸ್ವಲ್ಪ ಬಲಹೀನವಾಗಿರಬಹುದು ಆದರೆ ನಾಶವಾಗಿಲ್ಲ. ಈ ಅವಧಿಯಲ್ಲಿಯೇ ಈ ಧರ್ಮದ ಬಲಹೀನ ಗಡಿಯಂತಿದ್ದ ಬುದ್ಧ ಮತವನ್ನು ವೈಭವೀಕರಿಸಿ ಅದರೆದುರಿಗೆ ಇತರೆಲ್ಲ ಮತ-ಪಂಥಗಳನ್ನು ತುಚ್ಛೀಕರಿಸಿ ಎಡಪಂಥೀಯ ಇತಿಹಾಸಕಾರರು ವಿಕ್ರಮ ಮೆರೆದರು. ಜೈನ ಮತೀಯರ ಶ್ರೇಷ್ಠ ಆಧ್ಯಾತ್ಮಿಕ ಗುರು ಮಹಾವೀರನ ಕುರಿತಂತೆ ‘ಆತ ಹನ್ನೆರಡು ವರ್ಷಗಳಿಂದ ಒಂದೆಡೆಯಿಂದ ಮತ್ತೊಂದೆಡೆಗೆ ಅಲೆಮಾರಿಯಂತೆ ತಿರುಗಾಡುತ್ತಲಿದ್ದ. ಈ ದೀರ್ಘಯಾತ್ರೆಯ ಅವಧಿಯಲ್ಲಿ ಆತ ತನ್ನ ಬಟ್ಟೆಗಳನ್ನು ಬದಲಾಯಿಸಿರಲಿಲ್ಲವಂತೆ ಮತ್ತು ತನ್ನ 42ನೇ ವಯಸ್ಸಿನಲ್ಲಿ ಬಟ್ಟೆಯನ್ನೂ ತ್ಯಜಿಸಿಯೇ ಬಿಟ್ಟ’ ಎಂಬ ಅತಿ ಕನಿಷ್ಠ ಮಟ್ಟದ ಪದಬಳಕೆ ಮಾಡುತ್ತಾರೆ. ಮುಮುಕ್ಷುವಾಗಿ ಮಹಾರಾಜನೊಬ್ಬ ಹಪಹಪಿಸಿದ್ದು ಅವರಿಗೆ ಅಲೆಮಾರಿಯ ಬದುಕೆನಿಸುತ್ತದಲ್ಲ, ಅದೇ ದುರಂತ. ರೋಮಿಲಾ ಥಾಪರಳಂತೂ ’12 ವರ್ಷಗಳ ನಂತರ ತನಗೆ ಉತ್ತರ ಸಿಕ್ಕಿತೆಂದು ಆತ ನಂಬಿದ’ ಎನ್ನುವ ಮೂಲಕ ಒಬ್ಬ ಶ್ರೇಷ್ಠ ಆಚಾರ್ಯನ ದರ್ಶನವನ್ನು ಅವಹೇಳನ ಮಾಡಿಬಿಡುತ್ತಾಳೆ!
ಸತೀಶ್ ಚಂದ್ರ ಎನ್ನುವ ಮತ್ತೊಬ್ಬ ಪ್ರೊಫೆಸರರು, ‘ಬುದ್ಧ ಮತ್ತು ಜಿನಾನುಯಾಯಿಗಳು ಬೌದ್ಧಿಕವಾಗಿ ಸವಾಲಿಗೊಳಪಟ್ಟರಲ್ಲದೇ ಅನೇಕ ಬಾರಿ ಆ ಪಂಥಗಳ ಮುನಿಗಳು ಹಿಂಸೆಗೂ ಒಳಗಾದರು. ಅವರ ಮಂದಿರಗಳನ್ನು ಕಸಿಯಲಾಯ್ತು. ಪುರಿಯ ಮಂದಿರವೂ ಹಿಂದೆ ಬುದ್ಧ ಮಂದಿರವಾಗಿತ್ತು’ ಎಂಬ ತೀಪರ್ುಕೊಟ್ಟುಬಿಡುತ್ತಾರೆ. ಅರುಣ್ ಶೌರಿ, ಸೀತಾರಾಂ ಗೋಯೆಲ್ರು ಬಿಡಿ ಸ್ವತಃ ಅಂಬೇಡ್ಕರರು ಇಂತಹ ಆಕ್ರಮಣ ವಾದವನ್ನು ಧಿಕ್ಕರಿಸಿ ಬುದ್ಧಾನುಯಾಯಿಗಳ ನಾಶಕ್ಕೆ ಇಸ್ಲಾಂನ ಆಗಮನವೇ ಕಾರಣ ಎಂದಿದ್ದಾರೆ. ಅರುಣ್ ಶೌರಿ ಈ ದೇಶದಲ್ಲಿ ಬಲವಂತಕ್ಕೊಳಗಾಗಿ ಒಂದೇ ಒಂದು ಜೈನ ಬಸದಿಯೋ ಬುದ್ಧ ವಿಹಾರವೋ ಹಿಂದೂ ಮಂದಿರವಾಗಿರುವುದನ್ನು ತೋರಿಸಿಬಿಡಿರೆಂದು ಸವಾಲೆಸೆದಿದ್ದಾರೆ. ಒಬ್ಬನೇ ಒಬ್ಬ ಕಮ್ಯುನಿಸ್ಟ್ ಇತಿಹಾಸಕಾರ ಸವಾಲು ಸ್ವೀಕರಿಸಿಲ್ಲ. ಸೀತಾರಾಂ ಗೋಯೆಲ್ರಂತೂ ತಮ್ಮ ಕೃತಿಯಲ್ಲಿ ಮಸೀದಿಗಳಾದ ಜೈನ-ಬೌದ್ಧ ಕೇಂದ್ರಗಳ ಕುರಿತಂತೆ ಸಾಕಷ್ಟು ಉಲ್ಲೇಖ ಮಾಡಿದ್ದಾರೆ!

21b
ಅಹಿಂಸೆಯ ತತ್ತ್ವವನ್ನು ಅಸಮರ್ಪಕವಾಗಿ ಅನುಸರಿಸಿದ ಬೌದ್ಧ ಮತಾವಲಂಬಿಗಳು ಇಸ್ಲಾಂ ಖಡ್ಗಕ್ಕೆ ಸುಲಭದ ತುತ್ತಾದರು. ಬುದ್ಧನ ಪ್ರಭಾವ ಹೆಚ್ಚು-ಹೆಚ್ಚು ವಿಸ್ತರಿಸಿದಷ್ಟೂ ಬಲಿಷ್ಠವಾಗಿದ್ದ ಹಿಂದೂ ಧರ್ಮ ಶಿಥಿಲಗೊಳ್ಳುವುದೆಂಬ ಭರವಸೆ ಇದ್ದುದರಿಂದಲೇ ಇವರೆಲ್ಲ ಸೇರಿ ಬುದ್ಧನನ್ನು ಭಾರತದ ಐತಿಹಾಸಿಕ ಶಕ್ತಿಯೆಂದು ಬಿಂಬಿಸಿದರು. ರಾಮ-ಕೃಷ್ಣರನ್ನು ಪುರಾಣದ ಪಾತ್ರಗಳೆಂದು ನಂಬಿಸಿದರು! ಒಂದೊಂದೇ ಜನಾಂಗವನ್ನು ಬುದ್ಧನೆಡೆಗೆ ಸೆಳೆಯುತ್ತ ಆಕ್ರಮಿಸಲಾರಂಭಿಸಿದರು. ಬಲವಿಲ್ಲದ ಗಡಿಯ ಮೂಲಕ ತೆವಳುವುದು, ಅತಿಕ್ರಮಿಸುವುದು ಹೀಗೇ!
ಇನ್ನು ಮೂರನೆಯದಾಗಿ ಅವರು ಕಂಡುಕೊಂಡ ಉಪಾಯವೆಂದರೆ ಹಿಂದೂ ಧರ್ಮವನ್ನು ಶಕ್ತಿಯಿಂದ ಎದುರಿಸಬಲ್ಲ ಮುಸ್ಲೀಂ ಸಮಾಜಕ್ಕೆ ಶಕ್ತಿ ತುಂಬುವುದು. ಈ ಕೆಲಸದಲ್ಲಿ ಕ್ರಿಶ್ಚಿಯನ್ನರು ನಿಸ್ಸೀಮರಾಗಿದ್ದರು. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಹಂತಹಂತವಾಗಿ ಮುಸಲ್ಮಾನರನ್ನು ಬಳಸಿಕೊಂಡು ದೇಶಭಕ್ತರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಅವರು ಮಾಡಿಯೇ ಇದ್ದರು. ಸ್ವತಃ ಗಾಂಧೀಜಿಯೂ ಈ ಛದ್ಮಯುದ್ಧವನ್ನು ಅರಿಯಲಾಗದೇ ತುಷ್ಟೀಕರಣದ ನೀತಿಗೆ ಸಲಾಮು ಹೊಡೆಯಬೇಕಾಯಿತು. ಅಲ್ಪಸಂಖ್ಯೆಯಲ್ಲಿದ್ದ ದೇಶವಿರೋಧಿ ಮುಸಲ್ಮಾನರೆದುರಿಗೆ ದೇಶಭಕ್ತ ಮುಸಲ್ಮಾನರ ದೊಡ್ಡ ಪಡೆಯನ್ನೇ ನಿಲ್ಲಿಸುವ ಸಾಹಸಕ್ಕೆ ಗಾಂಧೀಜಿ ಕೈ ಹಾಕಲೇ ಇಲ್ಲ. ದೇಶ ತುಂಡಾಯಿತು. ಇಲ್ಲಿಯೇ ಉಳಿದ ಮುಸಲ್ಮಾನರಲ್ಲಿ ಬಹುಪಾಲು ದೇಶಭಕ್ತರೇ ಆಗಿದ್ದರು. ಆದರೇನು? ವಿಷ ತುಂಬುವ ಕೆಲಸಕ್ಕೆ ಕಮ್ಯುನಿಸ್ಟ್ ಇತಿಹಾಸಕಾರರು ನಿಂತರು. ‘ಪ್ರಾಚೀನ ಭಾರತದಲ್ಲಿ ದನಗಳನ್ನು ಸೇವಿಸುತ್ತಿದ್ದರಾದರೂ, ಹಂದಿಗಳನ್ನು ತಿನ್ನುತ್ತಿದ್ದ ಉಲ್ಲೇಖ ದೊರೆಯಲಾರದು’ ಎಂದರು. ಸತೀಶ್ ಚಂದ್ರರ ಮಧ್ಯಯುಗೀನ ಭಾರತದ 260 ಪುಟದಲ್ಲಿ ಐವತ್ತಕ್ಕೂ ಕಡಿಮೆ ಪುಟಗಳು 400 ವರ್ಷಗಳ ಹಿಂದೂ ಸಾಮ್ರಾಜ್ಯದ ಕಥನ ಹೇಳಿದರೆ, ಮುಂದಿನ ಇನ್ನೂರಿಪ್ಪತ್ತು ಪುಟಗಳು 500 ವರ್ಷಗಳ ದೆಹಲಿ ಸುಲ್ತಾನರ, ಮೊಘಲರ ಕಥನಗಳ ಅನಾವರಣಕ್ಕೆ ಮೀಸಲು. ರೋಮಿಲಾ ಥಾಪರಳ ಪ್ರಕಾರ ಘಜ್ನಿ ಮುಹಮ್ಮದ್ ದೇವಸ್ಥಾನಗಳ ಮೇಲೆ ದಾಳಿ ಮಾಡಿದ್ದು ಅಲ್ಲಿಟ್ಟಿರುವ ಅಪಾರ ಸಂಪತ್ತನ್ನು ಲೂಟಿಗೈಯ್ಯಲೆಂದು ಮಾತ್ರ. ಇದರಿಂದ ಅವನಿಗೆ ಮೂತರ್ಿ ಭಂಜಕನೆಂಬ ಧಾಮರ್ಿಕ ಗೌರವವೂ ಸಿಗುತ್ತಿತ್ತಂತೆ. ಇದರರ್ಥ, ಆತನ ಲೂಟಿಗೆ ಪ್ರೇರೇಪಣೆಯಾಗುವಷ್ಟು ಹಣವನ್ನು ದೇವಸ್ಥಾನಗಳಲ್ಲಿ ಶೇಖರಿಸಿಟ್ಟಿದ್ದೇ ಹಿಂದೂಗಳ ತಪ್ಪು. ನೆನಪಿರಬೇಕು. ಬಖರ್ಾದತ್ ಪಂಡಿತರ ಮೇಲಿನ ಕಾಶ್ಮೀರಿ ಮುಸಲ್ಮಾನರ ಆಕ್ರಮಣವನ್ನು ಸಮಥರ್ಿಸಿಕೊಳ್ಳುತ್ತಾ ‘ಪಂಡಿತರು ಹೆಚ್ಚು ಶಿಕ್ಷಣ ಪಡೆದಿದ್ದರು, ಸಕರ್ಾರಿ ನೌಕರಿಯನ್ನು ಪಡಕೊಂಡಿದ್ದರು. ಇದರಿಂದಾಗಿ ಉಂಟಾದ ಅಸಮತೋಲನ ಸಹಿಸದೇ ಅಲ್ಲಿಂದ ಪಂಡಿತರನ್ನು ಓಡಿಸಲಾಯ್ತು’ ಎಂದಿದ್ದಳು. ಅಂದರೆ ಪಂಡಿತರು ಶಾಲೆಗೆ ಹೋಗಿದ್ದೇ ತಪ್ಪಾ?
ಈ ಎಲ್ಲಾ ಇತಿಹಾಸಕಾರರು ಅಕ್ಬರ್, ಔರಂಗಜೇಬ್, ಟೀಪು ಇವರನ್ನೆಲ್ಲಾ ಇತಿಹಾಸದ ಹೀರೋಗಳಾಗಿಸಿಬಿಟ್ಟಿದ್ದಾರೆ. ದುದರ್ೈವ ಇವರ ಬರಹಗಳು ಶಾಲೆಯ ಮಕ್ಕಳಿಗೆ ಪಠ್ಯಗಳೂ ಆಗಿಬಿಟ್ಟಿವೆ. ಜೆಎನ್ಯು ಪ್ರೊಫೆಸರ್ ರೋಮಿಲಾ ಥಾಪರ್ ಬರೆದಿರುವ ಅನೇಕ ಕೃತಿಗಳು ಹಿಂದೂಗಳ ವಿರುದ್ಧ ಮುಸಲ್ಮಾನರ ಆಕ್ರಮಣಕ್ಕೆ ಬಲು ದೊಡ್ಡ ಬಲವನ್ನೂ ತುಂಬಿವೆ. ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ನ ಮಾರ್ಗದರ್ಶಕ ಮಂಡಳಿಯಲ್ಲೆಲ್ಲಾ ಇಂತಹ ‘ಮಹಾನ್’ ಇತಿಹಾಸಕಾರರೇ ತುಂಬಿದ್ದರು. ಅವರು ತಮ್ಮ ಕೃತಿಗಳನ್ನು ಉಲ್ಲೇಖಿಸಿ ಬರೆಯುವವರನ್ನೇ ಅಧಿಕೃತ ಕೆಲಸಗಳಿಗೆ ಆಯ್ದುಕೊಳ್ಳುತ್ತಿದ್ದರು. ಹೀಗಾಗಿ ಅವವೇ ವಿಷಯಗಳು ಮತ್ತೆ ಮತ್ತೆ ಚಚರ್ೆಗೆ ಬರುತ್ತಿದ್ದವು.
ಅದು ಹಾಗೆಯೇ! ಮೊದಲು ಸುಳ್ಳು ಹೇಳಿ. ಅದನ್ನು ವಿಸ್ತಾರವಾಗಿ ಬರೆಯಿರಿ. ಅದಕ್ಕೆ ಪ್ರಭಾವ ಬೀರಿ ಪ್ರಶಸ್ತಿ ಪಡೆಯಿರಿ. ಆಮೇಲೆ ಪ್ರಶಸ್ತಿ ಪುರಸ್ಕೃತ ಲೇಖಕರ ಕೃತಿಯೆಂದು ಇತರರು ಅದನ್ನು ಉಲ್ಲೇಖಿಸಲಿ. ನೋಡ ನೋಡುತ್ತಲೇ ಮತ್ತೆ ಮತ್ತೆ ಹೇಳಿದ ಸುಳ್ಳು ಸತ್ಯವೆಂದು ಸಾಬೀತಾಗಿಬಿಡುತ್ತದೆ! ಕಮ್ಯುನಿಸ್ಟರು ಇಂತಹ ಸುಳ್ಳುಗಳ ಸರದಾರರು. ಭಾರತೀಯತೆಯನ್ನು ಪ್ರತಿಪಾದಿಸಬಲ್ಲ ಯಾವ ಅಂಶಗಳೂ ಅವರಿಗೆ ಬೇಡವೇ ಬೇಡ. ಜಗತ್ತಿಗೆ ಭಾರತದ ಕೊಡುಗೆಯೇನೆಂದು ಅವರನ್ನು ಕೇಳಿದರೆ ಜಾತಿಪದ್ಧತಿ, ವರ್ಣಸಂಘರ್ಷ, ಸ್ತ್ರೀ ಶೋಷಣೆ, ಬಡತನ ಎಂದೆಲ್ಲ ಪುಂಖಾನುಪುಂಖವಾಗಿ ಬೊಗಳೆ ಬಿಡುತ್ತಾರೆ. ವಿಜ್ಞಾನ, ತಂತ್ರಜ್ಞಾನ, ಗಣಿತ, ಭಾಷೆ, ತತ್ತ್ವಶಾಸ್ತ್ರಗಳಲ್ಲಿ ನಮ್ಮ ಕೊಡುಗೆಯನ್ನು ಉಪೇಕ್ಷಿಸಿಬಿಡುತ್ತಾರೆ. ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದೊಡನೆ ಇವರ ಎದೆ ಢವಗುಟ್ಟುತ್ತದೆ. ಇಲ್ಲಿನ ಮುಸಲ್ಮಾನರನ್ನು ಭಡಕಾಯಿಸಿ ಸೂರ್ಯನಮಸ್ಕಾರ ಮಾಡುವುದಿಲ್ಲವೆಂದು ಅರಚಾಡುವಂತೆ ಮಾಡುತ್ತಾರೆ, ನಲವತ್ತ್ನಾಲ್ಕು ಮುಸಲ್ಮಾನ ರಾಷ್ಟ್ರಗಳೇ ಯೋಗ ದಿನಾಚರಣೆಗೆ ಬೆಂಬಲ ಸೂಚಿಸಿದಾಗ ಬೆಪ್ಪುತಕ್ಕಡಿಗಳಾಗುತ್ತಾರೆ.
ಸ್ವಾತಂತ್ರ್ಯ ಬಂದೊಡನೆ ಇವರನ್ನೂ ಮೂಲೆಗುಂಪು ಮಾಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಜವಹರ್ಲಾಲ್ ನೆಹರೂ ಸ್ವಲ್ಪ ಎಡವಿದರು. ‘ಎಡ’ವಟ್ಟಾಗಿ ಹೋಯ್ತು. ಈಗ ಸರಿಯಾಗಿದೆ. ಇತಿಹಾಸ ಅನುಸಂಧಾನ ಪರಿಷತ್ನ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದ ಈ ಢೋಂಗೀ ಇತಿಹಾಸಕಾರರನ್ನೆಲ್ಲಾ ಮನೆಗೆ ಕಳಿಸಿ ಕೇಂದ್ರ ಸಕರ್ಾರ ಮಹತ್ತ್ವದ ಹೆಜ್ಜೆ ಇಟ್ಟಿದೆ.
ನಿಜವಾದ ಸ್ವಾತಂತ್ರ್ಯ ಈಗ ದಕ್ಕಿದೆ!

Leave a Reply