ವಿಭಾಗಗಳು

ಸುದ್ದಿಪತ್ರ


 

ತಾನೇ ತೊಡಿದ ಹಳ್ಳದಲ್ಲಿ ಬೀಳೋದು ಅಂದರೆ ಇದೇ

ಮೋದಿ ಹತ್ತು ವರ್ಷಗಳಿಂದ ಕಾಂಗ್ರೆಸ್ಸಿನ ಕುತಂತ್ರಗಳೊಂದಿಗೆ ಜೂಜಾಡಿ ಒಂಥರಾ ಪರಿಪಕ್ವವಾಗಿಬಿಟ್ಟಿದ್ದಾರೆ. ಮಾಧ್ಯಮಗಳನ್ನು ಬಳಸಿ ಮೋದಿಯನ್ನು ತುಳಿಯುವ ಕಾಂಗ್ರೆಸ್ಸಿನ ಪ್ರಯತ್ನ ದಶಕಗಳಷ್ಟು ಹಳೆಯದು. ಅವರು ಆಗಲೇ ಅದಕ್ಕೆ ಸರಿಯಾದ ಪ್ರತಿತಂತ್ರ ಹೆಣೆದು ಪ್ರತಿಮಾಧ್ಯಮ ಸೃಷ್ಟಿಮಾಡಿಕೊಂಡುಬಿಟ್ಟಿದ್ದಾರೆ.

ಮೊದಲಬಾರಿಗೆ ಕಾಂಗ್ರೆಸ್ಸಿಗೆ ಈ ಥರದ ನಡುಕ ಉಂಟಾಗಿದೆ. ತಮಗೆ ಸವಾಲಾಗಬಹುದಾಗಿದ್ದ ಲಾಲ್‌ಬಹಾದೂರ್ ಶಾಸ್ತ್ರಿಯವರ ನಿಗೂಢ ಸಾವಿನ ನಂತರ ಕಾಂಗ್ರೆಸ್ಸು ಹಿಂತಿರುಗಿ ನೋಡಿದ್ದೇ ಇಲ್ಲ. ಬೇಕಾದಾಗ ಬೇಕಾದ ದಾಳ ಉದುರಿಸಿ ಸದಾ ತಾನೇ ಗೆಲ್ಲುವಂತೆ ನೋಡಿಕೊಂಡಿತ್ತು. ಅಟಲ್‌ಜೀಯನ್ನೂ ಅದು ಗಂಭೀರವಾಗೇನೂ ಪರಿಗಣಿಸಿರಲಿಲ್ಲ. ಈಗ ಅದಕ್ಕೊಂದು ಸಮರ್ಥ ಸವಾಲು ಎದುರಾಗಿದೆ. ತಮ್ಮ ಪ್ರತಿಯೊಂದು ದಾಳಿಯನ್ನೂ ಮೊದಲೇ ಊಹಿಸಿ ಅದಕ್ಕೆ ಪೂರ್ವ ನೀಯೋಜಿತ ಪ್ರತಿದಾಳಿ ರೂಪಿಸುವ ನರೇಂದ್ರ ಮೋದಿಯನ್ನು ಹೇಗೆ ಎದುರಿಸುವುದೆಂಬ ತಿಣುಕಾಟ ಪ್ರತಿ ಕಾಂಗ್ರೆಸ್ಸಿಗರ ಮುಖದಲ್ಲೂ ಎದ್ದು ಕಾಣುತ್ತಿದೆ. ಬೇರೆಲ್ಲ ಬಿಡಿ. ಚಿನಾವಣೆ ಬೇಗ ನಡೆಸಿದರೊಳಿತೋ? ನಿಧಾನವಾಗಿ ಹೆಜ್ಜೆ ಇಟ್ಟರೆ ಸರಿಯೋ? ಎಂಬುದಕ್ಕೇ ಅವರಿಗೆ ಉತ್ತರ ಸಿಗುತ್ತಿಲ್ಲ.

mo2ಅಧಿಕಾರದಲ್ಲಿ ಕಳೆಯುಇತ್ತಿರುವ ಒಂದೊಂದು ದಿನವೂ ಹೊಸದೊಂದು ರಾದ್ದಾಂತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಬೇಗ ಚುನಾವಣೆ ನಡೆಸಿದರೆ ಸರಿ ಎಂಬ ವಾದ ಒಂದೆಡೆ. ಇರುವ ಆರೇಳು ತಿಂಗಳಲ್ಲಿ ಸರಿಯಾದ ಆಡಳಿತಕೊಟ್ಟು ಗೌರವ ಮರಳಿ ಪಡೆದು ಚುನಾವಣೆಗೆ ಹೋಗುವ ಪ್ರಯತ್ನ ಮತ್ತೊಂದೆಡೆ. ಈಗಿರುವಂತೆಯೇ ಚುನಾವಣೆಗೆ ಹೊರಟರೆ ಆಡಳಿತ ವಿರೋಧಿ ಅಲೆಯ ಲಾಭ ಬಿಜೆಪಿಗೆ: ಆರು ತಿಂಗಳು ಸುಮ್ಮನಿದ್ದರೆ ನರೇಂದ್ರ ಮೋದಿ ದೇಶಾದ್ಯಂತ ಪ್ರವಾಸ ಮಾಡಿ ತರುಣರ ಮನಸ್ಸನ್ನು ಗೆದ್ದು ಬಿಡುತ್ತಾರೆಂಬ ಭಯ. ಕಾಂಗ್ರೆಸ್ಸಿನ ವಾಕ್‌ರೂಮ್‌ನ ಧುರೀಣರು ಇಟ್ಟ ಹೆಜ್ಜೆಯೆಲ್ಲ ಎಡವುತ್ತಿವೆ! ನರೇಂದ್ರ ಮೋದಿ, ಅಣ್ಣಾ ಹಜಾರೆಯಂತೆ, ರಾಮ್ ದೇವ್ ಬಾಬಾರಂತೆ ಸುಲಭದ ತುತ್ತಾಗಲಾರರರೆಂಬ ಸತ್ಯವಂತೂ ಕಪಿಲ್ ಸಿಬಲ್, ದಿಗ್ವಿಜಯ ಸಿಂಗ್‌ರಿಗೆ ಅರಿವಾಗಿಬಿಟ್ಟುದೆ.
ಕೆಲವರು ಪೂರ್ವಪುಣ್ಯದಿಂದ ನಾಯಕರಾಗಿಬಿಡುತ್ತಾರೆ. ಕಲೆವರು ನಾಯಕರಾಗಿ ಆಳಲೆಂಬ ಹಂಬಲ ಸಮಾಜದಿಂದ ಕೇಳಿಬರುತ್ತದೆ. ಇನ್ನೂ ಕೆಲವರು ಮಾತ್ರ ಭಗವಂತನ ಇಚ್ಛೆಯಿಂದ ನಾಯಕರಾಗಿ ದೀರ್ಘಕಾಲ ಧರೆಗೆ ಒಡೆಯರಾಗುತ್ತಾರೆ. ನೆಹರೂರಿಂದ ಶುರುಮಾಡಿ ಈಗಿನ ಗಾಂಧಿ ಕುಟುಂಬದವರೆಗೆ ಸ್ವಯಾರ್ಜಿತವೇನೂ ಇಲ್ಲ. ಪೂರ್ವಸುಕೃತವಷ್ಟೇ. ನಾಯಕರಾಗಿಬಿಟ್ಟರು. ಚಂದ್ರಗುಪ್ತನಂಥವರ ಬಳಿ ಯಾವ ಹಿನ್ನೆಲೆಯೂ ಇರಲಿಲ್ಲ. ಭಗವಂತನ ಇಚ್ಛೆಯಿಂದಲೇ ಆತ ಚಕ್ರವರ್ತಿಯಾದ. ಶಿವಾಜಿ ಮಹಾರಾಜರು ಛತ್ರಪತಿಯಾಗಲೆಂಬ ಕನಸನ್ನು ಕಾಡಿನ ಮಾವಳಿ ಪೋರರೂ ಕಾಣುತ್ತಿದ್ದರು. ಹಾಗೆ ನೋಡಿದರೆ ಮೋದಿಯವರಿಗೆ ಈ ಮೂರೂ ಇದೆ. ಟೀ ಮಾರುತ್ತಿದ್ದ ಹುಡುಗ ಗದ್ದುಗೆಯೇರಿ ಕುಳಿತ ಅದು ಪೂರ್ವಸುಕೃತ. ಆದರೆ, ಅಲ್ಲಿ ತನ್ನ ಸಾಮರ್ಥ್ಯದಿಂದ ರಾಜ್ಯವನ್ನು ಶ್ರೇಷ್ಠ ಪದವಿಗೇರಿಸಿದ. ಜಾತಿ-ಮತ-ಪಂಥಗಳನ್ನು ಮರೆತು ಜನ ಒಕ್ಕೊರಲಿನಿಂದ ನರೇಂದ್ರ ಮೋದಿಯನ್ನು ಪ್ರಧಾನಿ ಪಟ್ಟದಲ್ಲಿ ಕಾಣ ಬಯಸಿದ್ದಾರೆ. ಅಷ್ಟೇ ಅಲ್ಲ, ಆತ ದೇಶವಾಳಬೇಕೆಂಬುದು ದೈವನಿಯಾಮಕವೂ ಆಗಿದೆ ಅಂತ ನಡೆಯುತ್ತರುವ ವಿದ್ಯಮಾನಗಳನ್ನು ನೋಡಿದರೆ ಅರಿವಿಗೆ ಬರುತ್ತೆ.
ಅಲ್ಲದೇ ಮತ್ತೇನು? ನಿತಿನ್ ಗಡ್ಕರಿ ಪಾರ್ಟಿಯ ಅಧ್ಯಕ್ಷರಾಗಿದ್ದರು. ಎಲ್ಲರಿಗೂ ಬಾಗುತ್ತ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಲಾಗದೇ ತೊಳಲಾಡುತ್ತಿದ್ದರು. ಯಡಿಯೂರಪ್ಪನ ವಿಚಾರದಲ್ಲಂತೂ ಅವರ ನಿಲುವುಗಳ ಪ್ರಶ್ನಾರ್ಹವಾಗಿಬಿಟ್ಟಿತ್ತು. ಇಷ್ಟಾದರೂ ಎರಡನೇ ಅವಽಗೆ ಅವರನ್ನು ಮುಂದುವರೆಸುವ ನಿರ್ಧಾರ ಮಾಡಲಾಗಿತ್ತು. ಪಾರ್ಟಿಯನ್ನು ಒಳಗಿಂದೊಳಗೆ ಹಳಿಯಬೇಕೆಂಬ ಹಿನ್ನೆಲೆಯಲ್ಲಿ ಅತಿ ಸಹಜವಾದ ಹಗರಣವೊಂದರೊಳಗೆ ಅವರನ್ನು ಸಿಕ್ಕಿಸಿ ಕಾಂಗ್ರೆಸ್ಸು ಬಿಡದೇ ಬಡಿಯಿತು. ಅವರನ್ನು ಅಧ್ಯಕ್ಷ ಪದವಿಯಿಂದ ಇಳಿಯುವವರೆಗೆ ಬಿಡಲಿಲ್ಲ. ಅಂತೂ ರಾಜ್‌ನಾಥ್‌ಸಿಂಗ್ ಪಟ್ಟಕ್ಕೆ ಬಂದರು. ಕಾಂಗ್ರೆಸ್ಸು ಮೋದಿಗಿನ್ನು ಪಡವಿಯಿಲ್ಲವೆಂದು ನಿರಾಳವಾದರೆ, ಇದೇ ರಾಜನಾಥ್‌ಸಿಂಗ್ ಹಿಂದೆ ಬಿದ್ದು ಮೋದಿಗೆ ಅಧಿಕಾರ ಕೊಡಿಸುವಲ್ಲಿ ಮುಂದಾದರು ! ಗಡ್ಕರಿಗೆ ಅಡ್ವಾಣಿಯವರನ್ನು ಎದುರು ಹಾಕಿಕೊಂಡು ಮೋದಿಯನ್ನು ಪ್ರಧಾನಿಯೆಂದು ಘೋಷಿಸುವ ಸಾಮರ್ಥ್ಯವೂ ಇರುತ್ತಿರಲಿಲ್ಲ; ಎಲ್ಲರನ್ನೂ ಒಟ್ಟಿಗೆ ಒಯ್ದು ದಡ ಮುಟ್ಟಿಸುವ ನೈತಿಕತೆಯೂ ಇರುತ್ತಿರಲಿಲ್ಲ ! ಕಾಂಗ್ರೆಸ್ಸಿಗೆ ತಾನೆಡವಿದ್ದು ಗೊತ್ತಾಗುವ ವೇಳೆಗೆ ಕಾಲ ಮಿಂಚಿಹೋಗಿತ್ತು.
ಗೋವಾ ಸಭೆಯಲ್ಲಿ ನರೇಂದ್ರ ಮೋದಿಗೆ ಚುನಾವಣಾ ಸಮಿತಿಯ ಅಧ್ಯಕ್ಷಗಿರಿ ಸಿಕ್ಕ ಮೇಲೂ ಕಾಂಗ್ರೆಸ್ಸಿಗೆ ಬಿಜೆಪಿಯ ಆಂತರಿಕ ಭಿನ್ನಮತದ ಮೇಲೆ ಅಪಾರ ಭರವಸೆ ಇತ್ತು. ಅಡ್ವಾಣಿಯವರ ಮೂಲಕ ಅನಂತಕುಮಾರ್ ನಡೆಸಬಹುದಾದ ಕುತಂತ್ರಗಳ ಕುರಿತಂತೆ ಅಪಾರ ವಿಶ್ವಾಸವಿತ್ತು. ಹೀಗಾಗಿ ಕಾಂಗ್ರೆಸ್ಸಿನ ದೃಷ್ಟಿಯಲ್ಲಿ ಒಂದು ಕಾಲದ ಕೋಮುವಾದಿ, ಬಾಬ್ರಿ ಮಸೀದಿ ಉರುಳಲು ಕಾರಣರಾದ ಅಡ್ವಾಣಿಜಿ ಕಾಂಗ್ರೆಸ್ಸಿಗೇಕೆ ಮಾಧ್ಯಮಗಳಿಗೂ ಬಲು ಹತ್ತಿರದವರಾಗಿಬಿಟ್ಟರು. ಅವರ ರಥಯಾತ್ರೆಗಳ ಕುರಿತಂತೆ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರದ ಕುರಿತಂತೆ ಭಾವನೆಗಳನ್ನು ಕೆಣಕಬಲ್ಲ ವರದಿಗಳು ಪ್ರಕಟಗೊಂಡವು.ಕೆಳಹಂತದ ಕಾರ್ಯಕರ್ತನೂ ಮೇಲ್ನೋಟಕ್ಕೆ ಆಡ್ವಾಣಿ ವಿರೋಧಿಯಾಗಿ ಬಡಬಡಿಸಿದರೂ ಒಳಗೊಳಗೇ ಭಾವುಕನಾಗಿ ನೊಂದ. ಕಾಂಗ್ರೆಸ್ಸಿಗೆ ಇದು ಬೇಕಿತ್ತು. ಆದರೆ ಮತ್ತೆ ನಿರ್ಧಾರ ಕೈಕೊಟ್ಟಿತು. ಮೋದಿ ಘೋಷಣೆಯಾಯ್ತು. ಆಡ್ವಾಣಿಯೂ ಅನು‘ಮೋದಿ’ಸಿಬಿಟ್ಟರು. ಅಲ್ಲಿಗೆ ನೇರಯುದ್ಧ ಮಾತ್ರ ಬಾಕಿಯಾಯ್ತು.

ಮೋದಿ ಹತ್ತು ವರ್ಷಗಳಿಂದ ಕಾಂಗ್ರೆಸ್ಸಿನ ಕುತಂತ್ರಗಳೊಂದಿಗೆ ಜೂಜಾಡಿ ಒಂಥರಾ ಪರಿಪಕ್ವವಾಗಿಬಿಟ್ಟಿದ್ದಾರೆ. ಮಾಧ್ಯಮಗಳನ್ನು ಬಳಸಿ ಮೋದಿಯನ್ನು ತುಳಿಯುವ ಕಾಂಗ್ರೆಸ್ಸಿನ ಪ್ರಯತ್ನ ದಶಕಗಳಷ್ಟು ಹಳೆಯದು. ಅವರು ಆಗಲೇ ಅದಕ್ಕೆ ಸರಿಯಾದ ಪ್ರತಿತಂತ್ರ ಹೆಣೆದು ಪ್ರತಿಮಾಧ್ಯಮ ಸೃಷ್ಟಿಮಾಡಿಕೊಂಡುಬಿಟ್ಟಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅಂತರ್ಜಾಲ ಮಾಧ್ಯಮದಿಂದ ಮೋದಿ ಜಗತ್ತಿಗೆ ಹತ್ತಿರವಾಗಿಬಿಟ್ಟಿದ್ದಾರೆ. ಮೋದಿಯ ಅಭಿಮಾನಿ ಬಳಗ ಕಾಂಗ್ರೆಸ್ಸಿನ ಭೂತ ಬಿಡಿಸುವುದಿರಲಿ ಮಾಧ್ಯಮದ ಹುಳುಕನ್ನೂ ಎತ್ತಿ ಹರಡುವ ಮೂಲಕ ಅವರ ಬಾಯಿಯನ್ನೂ ಮುಚ್ಚಿಸಿಬಿಟ್ಟಿದ್ದಾರೆ. ಅನಿವಾರ್ಯವಾಗಿ ಕಾಂಗ್ರೆಸ್ಸು ತಾನೂ ಟೀವಿ. ಪತ್ರಿಕಾ ಮಾಧ್ಯಮ ಬಿಟ್ಟು ಟ್ವಿಟರ್, ಫೇಸ್‌ಬುಕ್‌ಗಳಿಗೆ ಲಗ್ಗೆಯಿಡಬಢಕಾಗಿ ಬಂದುದು ಅದಕ್ಕೇ! ಮಾಧ್ಯಮಗಳನ್ನು ಸಂಭಾಳಿಸುವ ಕುರಿತಂತೆ ಕಾಂಗ್ರೆಸೂ ವರ್ಕಶಾಪ್ ಮಾಡಬೇಕಾಗಿ ಬಂತಲ್ಲ ಅದರ ಹಿಂದಿದ್ದ ದೊಡ್ಡ ಶಕ್ತಿ ಮೋದಿ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಅಂದರೆ… ಮೊದಲ ಬಾರಿಗೆ ಕಾಂಗ್ರೆಸ್ಸನ್ನು ತನ್ನ ಇಚ್ಛೆಗೆ ತಕ್ಕಂತೆ ಕುಣಿಸಬಲ್ಲ ಶಕ್ತಿಯೊಂದು ಉದಿಸಿದೆ ಅದು ನರೇಂದ್ರ ಮೋದಿ ರೂಪದಲ್ಲಿ! ಇದನ್ನೇ ದೈವಬಲ ಅನ್ನೋದು.
ಬಹುಶಃ ಪಟೇಲರ ಕಟುತ್ವ, ಲಾಲ್‌ಬಹಾದೂರರ ಸರಳತೆ ಮತ್ತು ಅಟಲ್‌ಜೀಯವರ ಜನಪ್ರಿಯತೆಗಳ ಸೂಕ್ತ ಮಿಶ್ರಣದಿಂದ ಒಡಂಡಿದ ಪರಿಪೂರ್ಣ ಮೂರ್ತಿ ನರೇಂದ್ರ ಮೋದಿ ಅನಿಸೋದು ಅದಕ್ಕೇ. ಭಾರತದ ಕೊನೆಯ ವೈಸರಾಯ್ ಮೌಂಟ್‌ಬ್ಯಾಟನ್ ‘ಯಾರೊಂದಿಗೆ ಬೇಕಾಕಿದ್ದರೂ ವ್ಯವಹರಿಸಬಲ್ಲೆ, ಪಟೇಲರೊಂದಿಗೆ ಕಷ್ಟ’ ಅಂತಿದ್ದನಂತೆ. ಕಾಂಗ್ರೆಸ್ಸಿನ ಘಟಾನುಘಟಿಗಳೂ ಹಾಗೆಯೇ. ಅಟಲ್‌ಜಿ, ಆಡ್ವಾಣಿ ಎಲ್ಲರನ್ನೂ ಇಶಾರೆಗೆ ತಕ್ಕಂತೆ ಕುಣಿಸಿಬಿಟ್ಟರು. ಆದರೆ ಮೋದಿಯ ಹತ್ತಿರಕ್ಕೂ ಸುಳಿಯಲು ಅವರಿಂದಾಗುತ್ತಿಲ್ಲ. ಭಾರತದ ಏಕೈಕ ಭ್ರಷ್ಟವಲ್ಲದ ರಾಜಕಾರಣಿ ಎಂಬ ಬಿರುದನ್ನು ವಿಕಿಲೀಕ್ಸ್‌ನಿಂದ ಪಡಕೊಂಡಿರುವ ನಾಯಕನ ಹತ್ತಿರಕ್ಕೆ ಸುಳಿಯಲಿಕ್ಕೆ ಎದೆಗಾರಿಕೆ ಬೇಕೆ ಬೇಕಲ್ಲವೇ? ಇತ್ತೀಚೆಗೆ ಮೋದಿಯೇ ಹೇಳಿದರಲ್ಲ, ‘ಕಾಂಗ್ರೆಸ್ಸಿನ ಬಳಿ ನಾಯಕನಿಲ್ಲ, ನೈತಿಕತೆ ಇಲ್ಲ, ನೀತಿಯಿಲ್ಲ, ನೀಯತ್ತೂ ಇಲ್ಲ.’
ಮೋದಿಯ ಮೋಡಿ ನಿಜಕ್ಕೂ ಅಪರೂಪದ್ದು. ಅವರ ಬಳಿ ಹತ್ತು ನಿಮಿಷಮಾತನಾಡಿದರೂ ಪರಿವರ್ತನೆಗೆ ಒಳಗಾಗಿಬಿಡುತ್ತಾರೆ. ಅದು ಅಮಿತಾಭ್ ಬಚ್ಚನ್‌ನಿಂದ ಮಿನಾಜ್ ಮರ್ಚಂಟ್‌ನವರೆಗೆ, ಪರ್ವಿನ್ ಸಿಂಗಳಿಂದ ಮಧುಕಿಶ್ವರ ವರೆಗೆ ಅನೇಕರ ಮೇಲೆ ಛಾಯೆ ಬೀರಿದೆ. ಕಾಂಗ್ರೆಸ್ಸಿಗಿರುವ ಇನ್ನೊಂದು ಹೆದರಿಕೆ ಅದು ಮೋದಿಯೇಕೆ ಮೋದಿಯ ಭಂಟರೂ ಹಾಗೆಯೇ. ಅಮಿತ್ ಶಹಾ ಅದಾಗಲೇ ಉತ್ತರಪ್ರದೇಶದ ಹಳ್ಳಿಯಿಂದ ಹಳ್ಳಿಗೆ ಅಲೆದಾಡುತ್ತಿದ್ದಾರೆ. ಹಳೆಯ, ನೊಂದ ಕಾರ್ಯಕರ್ತರನ್ನೆಲ್ಲ ಭೆಟಿಮಾಡಿ ಹೊಸ ಉತ್ಸಾಹ ತುಂಬುತ್ತಿದ್ದಾರೆ. ಮುಂದಿನ ತಯಾರಿಗಾಗಿ ಬಿಹಾರ್‌ಗೆ ಹೊರಟಿದ್ದಾರೆ. ಅಲ್ಲಿಗೆ ಹೊಸ ಸುದ್ದಿ, ಹೊಸ ಅಲೆ, ಹೊಸ ಪರ್ವ!
ನನಗಂತೂ ಸದಾ ಅಚ್ಛರಿಯೆನಿಸುವ ವಿಚಾರ ಒಮದೇ. ಅದು ನರೇಂದ್ರ ಮೋದಿಯ ತಣ್ಣಗಾಗಿರುವ ತಲೆ! ಅನುಮಾನವೇ ಇಲ್ಲ. ಈಗ ಅವರು ಉರಿವ ಕೆಂಡದ ಮೇಲೆ ಕುಳಿತಿದ್ದಾರೆ. ಒಂದೆಡೆ ೬೫ ವರ್ಷಗಳಿಂದ ಕುತಂತ್ರಕ್ಕೆ ಹೆಸರಾಗಿರುವ ಕಾಂಗ್ರೆಸ್ಸು, ಮತ್ತೊಂದೆಡೆ ಒಳಗಿನ ಕೆಲವರ ವಿರೋಧ. ಇವುಗಳ ನಡುವೆ ಆತ ಆ ಪರಿ ಮನೋಹರ ಬಾಷಣ ಮಾಡುತ್ತಾರಲ್ಲ. ಇದು ಹೇಗೆ ಸಾಧ್ಯ? ರಾಜಸ್ಥಾನದಲ್ಲಿ ಮೋದಿಯ ಭಾಷಣಕ್ಕೆ ಸೇರಿಸವರೆಲ್ಲ ‘ಮೋದಿಮೋದಿ’ ಎಂಬ ಘೋಷಣೆ ಕೂಗಿದ್ದು ಸರಿ. ಅಲ್ಲಿನ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಗೆಹ್ಲೋಟರು ತಮ್ಮದೊಂದು ರ‍್ಯಾಲಿಯಲ್ಲಿ ಭಾಷಣ ಮಾಡುವಾಗಲೂ ಎದೇ ರೀತಿಯ ಘೋಷಣೆಗಳು ಕೇಳಿಬಂದವಲ್ಲ, ಇದಕ್ಕ ಏನಂತೀರಿ?
ಒಂದೆಡೆ ಪೊಲೀಸ್ ಅಧಿಕಾರಿ ವಂಜಾರಾ ಮೋದಿಯನ್ನು ಕಟು ಶಬ್ಧಗಳಲ್ಲಿ ನಿಂದಿಸುತ್ತಿದ್ದರೆ, ಮೋದಿ ಅತ್ತ ತಲೆಹಾಕದೇ ಪೊಲೀಸ್ ವ್ಯವಸ್ಥೆಯನ್ನು ಡಿಜಿಟಲೀಕರಿಸಿ ಬೆಸೆಯುವ ಮಹಾ ಪ್ರಯತ್ನಕ್ಕೆ ಕೈ ಹಾಕಿದರಲ್ಲ ! ಈ ಯೋಜನೆಯ ಮೂಲಕ ಕೋಟ್ಯಂತರ ಮಾಹಿತಿಗಳನ್ನು ದಾಖಲಿಸಿ ಪೊಲೀಸ್ ಠಾಣೆಗಳನ್ನಷ್ಟೇ ಅಲ್ಲ, ಐಬಿ,ಸಿಬಿಐಗಳನ್ನೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವಂತೆ ಮಾಡಿದ್ದಾರಲ್ಲ ಇದು ಸಾಧನೆಯಲ್ಲವೇನು? ಕೇಂದ್ರ ಸರ್ಕಾರಕ್ಕೇ ಮಾರ್ಗದರ್ಶನ ಮಾಡಬಲ್ಲ ಸಮರ್ಥ ಯೋಜನೆ ಇದು.
ಹೀಗಾಗಿಯೇ ಮೊನ್ನೆ ಇತ್ತಿಚೆಗೆ ಬ್ರಿಟನ್ನಿನ ಪ್ರಧಾನಿ ಕ್ಯಾಮರೂನ್ ಮನಮೋಹನ್‌ಸಿಂಗರನ್ನು ಭೇಟಿ ಮಾಡಿದಾಗ ನಾವಂತೂ ಮೋದಿಗೆ ವೀಸಾ ಕೊಡಲಿದ್ದೇವೆ ಎಂದಿದ್ದು ! ಅಮೇರಿಕಾಕ್ಕೆ ತಪ್ಪು ಮಾಹಿತಿ ಕೊಟ್ಟು, ಅಲ್ಲಿನ ಸಂಸದರಿಗೆ ಲಂಚ ತಿನ್ನಿಸಿ ಮೋದಿಗೆ ವೀಸಾ ತಪ್ಪುವಂತೆ ಮಾಡಿದ್ದ ಕಾಶ್ಮೀರದ ಗುಲಾಂ ನಬಿ – ಉಗ್ರರೊಂದಿಗೆ ಸಂಪರ್ಕ ಹೊಂದಿ ಹಣಕಾಸಿನ ಸಹಾಯ ಪಡೆದಿದ್ದಾನೆಂಬ ಕಾರಣಕ್ಕೆ ಜೈಲಿಗೆ ಹೋಗಿ ಕುಂತಿದ್ದಾನೆ. ಅಮೇರಿಕ ಈಗ ಮುಖ ಉಳಿಸಿಕೊಳ್ಳಲೆಂದು ಹೆಣಗಾಡುತ್ತಿದೆ. ಎದೆ ಢವಗುಟ್ಟುತ್ತಿರೋದು ಇಲ್ಲಿನ ನಾಯಕರದ್ದು, ಮಾತ್ರವಲ್ಲ, ಜಗತ್ತಿನೆಲ್ಲರದೂ. ಹೀಗಿರುವಾಗ ಅನಂತಮೂರ್ತಿಯವರು ಎಡವಟ್ಟು ಮಾಡಿಕೊಂಡರೆ, ಸಿದ್ಧರಾಮಯ್ಯನವರು ‘ನರಹಂತಕ’ರೆಂದು ಮೋದಿಯನ್ನು ಜರಿದರೆ ತಪ್ಪೇನಿದೆ ಬಿಡಿ. ನರಿಗಳು ಅಪಾಯ ಕಂಡಾಗ ಊಳಿಡುತ್ತಂತಲ್ಲ ಹಾಗೆ!

Leave a Reply