ವಿಭಾಗಗಳು

ಸುದ್ದಿಪತ್ರ


 

ದೇಶದ್ರೋಹದ ತಳಿಗಳಿಗೆ ಜೆ.ಎನ್.ಯು ಸೂಕ್ತ ಪರಿಸರ

ನಿಮಗೆ ಅನುಮಾನವಿದ್ದರೆ ಬೆಂಗಳೂರಿನ ಟೌನ್ ಹಾಲ್ ಮುಂದೆ ಧರಣಿ ನಿರತರ ಮುಖಗಳನ್ನು ಒಮ್ಮೆ ನೋಡಿ. ರಾಷ್ಟ್ರವಿರೋಧಿಯಾದ ಯಾವ ಕೈಂಕರ್ಯವಿದ್ದರೂ ಅವರವರುಗಳೇ ರಾಜರು. ಹೇಗಿದು? ಇವರಿಗೆಲ್ಲ ಹಣ ಕೊಟ್ಟು ಪ್ರತಿಭಟನೆಗೆ ಕಳಿಸುತ್ತಿರೋದು ಯಾರು? ಕೂಡಂಕುಲಂನಲ್ಲಿ ಅಮೇರಿಕಾ ಚಚರ್್ನ ಮೂಲಕ ಹಣವನ್ನು ಈ ಎನ್.ಜಿ.ಓಗಳಿಗೆ ತಲುಪಿಸುತ್ತಿತ್ತೆಂಬುದು ಈಗ ದೃಢಪಟ್ಟ ಸಂಗತಿ ಹಾಗಿದ್ದರೆ. ಏಷ್ಯಾ ಖಂಡದಲ್ಲಿ ಸಿಂಹದಂತೆ ಮುನ್ನುಗ್ಗುತ್ತಿರುವ ಭಾರತದ ನಡಿಗೆಯನ್ನು ತಡೆಯುವ ದದರ್ು ಯಾರಿಗಿದೆ? ಇವರೆಲ್ಲ ಯಾವ ದೇಶದ ಏಜೆಂಟರು ಹಾಗಿದ್ದರೆ? ಯೋಚಿಸಿದರೆ ಉತ್ತರ ಹುಡುಕೋದು ಕಷ್ಟವಲ್ಲ!

4287.true-life-jnu

ಬಿಳಿಯರು ಭಾರತಕ್ಕೆ ಬಂದೊಡನೆ ಒಂದು ವಿಷಯವನ್ನು ಖಾತ್ರಿ ಮಾಡಿಕೊಂಡರು-‘ಈ ದೇಶವನ್ನು ಇಲ್ಲಿನವರ ಸಹಕಾರವಿಲ್ಲದೇ ಆಳಲು ಸಾಧ್ಯವೇ ಇಲ್ಲ’. ಅದಾದ ಮೇಲೆಯೇ ಅವರು ತಮಗೆ ಬೇಕಾದವರಿಗೆ ಬಿಸ್ಕೆಟ್ಟು ಹಾಕಿ ತಮಗೆ ಬೇಕಾದ ಕೆಲಸಗಳನ್ನೇ ಮಾಡಿಸಿಕೊಂಡರು. ಜಯಚಂದರಿಗೆ, ಮೀರ್ ಜಾಫರರಿಗೆ ಇಲ್ಲಿ ಕೊರತೆಯಂತೂ ಇರಲಿಲ್ಲ. ಬಿಳಿಯರು ಅವರ ಸಂತಾನಗಳನ್ನು ಬೆಳೆ ತೆಗೆಯಲು ಬೇಕಾದ ಪರಿಸರವನ್ನೂ ರೂಪಿಸಿದರು.
ಮೊದಲಿಗೆ ಅವರು ಆಯ್ದುಕೊಂಡಿದ್ದು ಇಲ್ಲಿನ ಇತಿಹಾಸವನ್ನು ತಿರುಚುವ ಪ್ರಕ್ರಿಯೆ. ಅದಕ್ಕೆ ಜರ್ಮನಿಯ ಮ್ಯಾಕ್ಸ್ ಮುಲ್ಲರ್ನನ್ನು ಹಿಡಿದು ತರಲಾಯ್ತು. ಋಗ್ವೇದಕ್ಕೆ ಅನುವಾದವನ್ನು ಮಿಷನರಿಗಳಿಗೆ ಹೊಂದುವಂತೆ ಮಾಡಿಸಲಾಯ್ತು. ಭಾರತದಲ್ಲಿ ಅದಕ್ಕೆ ನಯಾಪೈಸೆಯ ಕಿಮ್ಮತ್ತಿರಲಿಲ್ಲ. ಇಲ್ಲಿನ ಗುರುಕುಲಗಳು ಸಮರ್ಥ ಶಿಕ್ಷಣ ಕೊಟ್ಟು ಬೌದ್ಧಿಕ ಸಾಮಥ್ರ್ಯದ ಸಮರ್ಥ ಬಳಕೆಗೆ ಬೇಕಾದ ವಾತಾವರಣ ರೂಪಿಸಿಕೊಟ್ಟಿತ್ತು. ಇದನ್ನು ಗಮನಿಸಿದ ಬ್ರಿಟೀಷರು ಗುರುಕುಲಗಳನ್ನು ಬಲವಂತದಿಂದ ಮುಚ್ಚಿಸಿದರು. 18ನೇ ಶತಮಾನದ ಭಾರತೀಯ ಶಿಕ್ಷಣ ವ್ಯವಸ್ಥೆ ಅದೆಷ್ಟು ಸಾರ್ವತ್ರಿಕವೂ, ತಲಸ್ಪಶರ್ಿಯೂ ಆಗಿತ್ತೆಂದರೆ ಅದನ್ನು ಅನುಕರಿಸಿ ತಮ್ಮ ಶಿಕ್ಷಣಪದ್ಧತಿಯನ್ನು ಬಿಳಿಯರು ಬದಲಾಯಿಸಿಕೊಂಡರೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಅವರು ಉಲ್ಟಾ ನಮ್ಮ ವ್ಯವಸ್ಥೆಯನ್ನು ತಿದ್ದುವ ಪ್ರಯತ್ನವೆಂದು ಇಂಗ್ಲೀಷ್ ಶಿಕ್ಷಣ ತಂದರು. ಶಾಲೆಗಳನ್ನು ತೆರೆದರು.
ನಂತರದ ಪ್ರಕ್ರಿಯೆಯೇ ಮ್ಯಾಕ್ಸ್ ಮುಲ್ಲರನ ಸಮರ್ಥನೆಗೆ ನಿಲ್ಲಬಲ್ಲ ಬೌದ್ಧಿಕ ಶಕ್ತಿಯ ನಿಮರ್ಾಣ. ಅದಕ್ಕೆಂದೇ ವಿಶ್ವವಿದ್ಯಾಲಯಗಳ ನಿಮರ್ಾಣ ಮಾಡಿದರು. ಅಲ್ಲಿ ಬಿಳಿಯರ ಸಿದ್ಧಾಂತದ ಸಮರ್ಥಕರಿಗೆ ಮಾತ್ರ ಅವಕಾಶ ಕೊಡಲಾಯ್ತು. ಭಾರತದ ತಿರುಚಿದ ಇತಿಹಾಸ, ಪರಂಪರೆಗಳು ಅಲ್ಲಿ ಬೋಧನೆಯ ವಸ್ತುವಾಯಿತು. ಕಾಲಕ್ರಮದಲ್ಲಿ ಸ್ವಾತಂತ್ರ್ಯದ ಕಾಡ್ಗಿಚ್ಚು ಹೇಗೆ ವ್ಯಾಪಕವಾಗಿ ಹಬ್ಬಿತ್ತೆಂದರೆ ದೇಶೀ ಶಿಕ್ಷಣದ ಅವಶ್ಯಕತೆಯನ್ನು ಸಮಾಜ ಮನಗಂಡು ಹಿಂದೂ ವಿಶ್ವವಿದ್ಯಾಲಯಗಳು, ನ್ಯಾಶನಲ್ ಕಾಲೇಜುಗಳು ತಲೆಯೆತ್ತಿದ್ದವು. ಆಂಗ್ಲ ಭಾಷೆಯನ್ನು ಕಲಿತವರೇ ಬಿಳಿಯರ ಮನಸ್ಥಿತಿಯನ್ನು ತೆರೆದಿಟ್ಟು ತರುಣರನ್ನು ರೂಪಿಸುವ ಜವಾಬ್ದಾರಿ ಹೊತ್ತು ಹೊಸ ಪೀಳಿಗೆ ಸೃಷ್ಟಿಸಿದರು.
ಆದರೇನು? ಬಿಳಿಯರ ಎಂಜಲು ಕಾಸಿಗೆ ಬಲಿಬಿದ್ದ ಕೆಲವರು ಸಕರ್ಾರಿ ಶಿಕ್ಷಣ ಸಂಸ್ಥೆಗಳಲ್ಲಿ ದೇಶವಿರೋಧಿ ತಾಲೀಮನ್ನು ನೀಡುವುದು ಬಿಡಲೇ ಇಲ್ಲ. ಬಿಳಿಯರೇನು ಸ್ವಂತ ಹಣದಿಂದ ಈ ದ್ರೋಹಿಗಳನ್ನು ಸಾಕಲಿಲ್ಲ. ನಮ್ಮವರೇ ಬೆವರು ಸುರಿಸಿ ಕಟ್ಟಿದ ತೆರಿಗೆ ಹಣವನ್ನು ಇವರಿಗಾಗಿ ಖಚರ್ು ಮಾಡಿದರು. ದೇಶಕ್ಕಾಗಿ ದುಡಿದವರು ತೆರಿಗೆ ಕಟ್ಟಿ ಬಡಕಲಾದರು; ದೇಶವಿರೋಧಿಗಳಾಗಿ ನಿಂತವರು ಕೊಬ್ಬಿ ಬೆಳೆದರು.
ಬ್ರಿಟೀಷರು ಭಾರತ ಬಿಟ್ಟು ಹೋಗಿ ಸುಮಾರು 7 ದಶಕಗಳು ಕಳೆದೇ ಹೋದವು. ಇನ್ನೂ ಈ ಪರಿಸ್ಥಿತಿ ದೂರವಾಗಿಲ್ಲ. ವಿಶ್ವವಿದ್ಯಾಲಯಗಳನ್ನು ಮುಂದಿಟ್ಟುಕೊಂಡು ದೇಶದ್ರೋಹಿ ಚಟುವಟಿಕೆಗಳನ್ನು ಮಾಡಬೇಕೆಂಬ ಪ್ರಯತ್ನ ಅಂದು ಹೇಗೆ ನಡೆದಿತ್ತೋ ಇಂದೂ ಅದು ಮುಂದುವರೆದಿದೆ. ನಮ್ಮ ಬೆವರಿನ ಹಣದಲ್ಲಿ ಈ ದೇಶದ್ರೋಹಿ ಮೀರ್ ಜಾಫರ್ ಸಂತಾನಗಳನ್ನು ಸಲಹುವ ದೌಭರ್ಾಗ್ಯ ಮುಂದುವರಿದೇ ಇದೆ.
ಹೌದು. ನಾನು ಜವಹರಲಾಲ್ ನೆಹರೂ ಯುನಿವಸರ್ಿಟಿಯ ಬಗ್ಗೆಯೇ ಮಾತನಾಡುತ್ತಿರೋದು. ಕಳೆದ ಒಂದು ವಾರದ ಹಿಂದೆ ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಖಾನನನ್ನು ಸಮಥರ್ಿಸಿಕೊಂಡು ಅವನನ್ನು ನೇಣಿಗೇರಿಸಿದ್ದನ್ನು ವಿರೋಧಿಸಿ ಡೆಮೊಕ್ರಾಟಿಕ್ ಸ್ಟುಡೆಂಟ್ಸ್ ಯೂನಿಯನ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಬಣ್ಣವನ್ನೂ ಕೊಡಲಾಗಿತ್ತು. ಅದೂ ಸರಿಯೇ. ಎಡಪಂಥೀಯರು ಕವಿಗೋಷ್ಠಿ, ಕ್ರಾಂತಿಗೀತೆ, ನಾಟಕಗಳ ನೌಟಂಕಿ ಮಾಡುವುದರಲ್ಲಿ ನಿಸ್ಸೀಮರಲ್ಲವೇ? ಕಾರ್ಯಕ್ರಮಕ್ಕೆ ಂ ಅಠಣಟಿಣಡಿಥಿ ತಿಣಠಣಣ ಚಿ ಕಠಣ ಠಜಿಜಿಛಿಜ ಎಂಬ ಹೆಸರು ಕೊಡಲಾಯಿತು. ಅಫ್ಜಲ್ ಗುರು ಮತ್ತು ಮಕ್ಬೂಲ್ ಭಟ್ಟರ್ರ ಹತ್ಯೆಯನ್ನು ವಿರೋಧಿಸಿ ನಡೆಯುವ ಕಾರ್ಯಕ್ರಮ ಎಂಬ ಪ್ರಚಾರವನ್ನೂ ಕೊಡಲಾಯಿತು.
ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲಿಲ್ಲ. ಅದಕ್ಕೆ ಕಾರಣವೂ ಇತ್ತು. ಈ ವಿದ್ಯಾಥರ್ಿ ಸಮೂಹ ಈ ಹಿಂದೆ ಹಾಸ್ಟೇಲ್ಲಿನಲ್ಲಿ ದನದ ಮಾಂಸ ಪೂರೈಸುವ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿತ್ತು. ದೇಶವೆಲ್ಲಾ ದುಗರ್ಾ ಪೂಜೆ ನಡೆಸಿ ಆನಂದದಲ್ಲಿ ಮಗ್ನವಾಗಿದ್ದರೆ ಮಹಿಷಾಸುರನನ್ನು ಪೂಜೆ ಮಾಡಿ ಆನಂದ ಭಂಗಕ್ಕೆತ್ನಿಸಿದ ರಾಕ್ಷಸರ ಪೀಳಿಗೆಯವರು ಇವರು. ಇಂಥವರಿಗೆ ಅನುಮತಿ ಕೊಡೋದಾದರು ಹೇಗೆ?
ಹಾಗಂತ ವಿಶ್ವವಿದ್ಯಾಲಯದ ಅನುಮತಿಗೆ ಕಾಯುವ ಜಾಯಮಾನವೂ ಇವರದ್ದಲ್ಲ. ಬಿಟ್ಟಿ ಅನ್ನ ತಿಂದು ಕೊಬ್ಬಿದ ಜೀವಗಳು. ಖಂಡಿತ ಹೌದು. ಇಲ್ಲ ಓದುವ ವಿದ್ಯಾಥರ್ಿಗೆ ಟ್ಯೂಶನ್ ಫೀಸ್ 217 ರೂಪಾಯಿ, ಮೆಡಿಕಲ್ ಫೀಸ್ 9 ರೂಪಾಯಿ, ಸ್ಪೋಟ್ಸರ್್ ಫೀಸ್ 16 ರೂಪಾಯಿಯಾದರೆ, ಲೈಬ್ರರಿ ಫೀಸು 16 ರೂಪಾಯಿ! ವರ್ಷಕ್ಕೆ ಎಲ್ಲಾ ಕೂಡಿದರೂ 400 ರೂಪಾಯಿ ದಾಟಲಾರದು ಅವರ ಖಚರ್ು. ತಿಂಗಳ ವಿದ್ಯಾಥರ್ಿನಿಲಯದ ಫೀಸು ಅದೆಷ್ಟು ಗೊತ್ತಾ? ಬರಿಯ 20 ರೂಪಾಯಿ ಮಾತ್ರ. ಒಬ್ಬ ವಿದ್ಯಾಥರ್ಿಗೆಂದು ಸಕರ್ಾರ ಖಚರ್ು ಮಾಡುವ ಹಣ ಒಟ್ಟಾರೆ 3 ಲಕ್ಷ ರೂಪಾಯಿ! ಪ್ರತೀ ವರ್ಷ ಕನಿಷ್ಠ 250 ಕೋಟಿ ರೂಪಾಯಿ ಇಲ್ಲಿನ ಕಾರಣದಿಂದ ನಮ್ಮ ಬೊಕ್ಕಸಕ್ಕೆ ಹೊರೆ. ಇದನ್ನೇ ದಲಿತರ ಕೇರಿಗಳಿಗೆ ವಗರ್ಾಯಿಸಿದ್ದರೆ ಕಳೆದ 70 ವರ್ಷಗಳಲ್ಲಿ ಅದೆಷ್ಟು ಜನರನ್ನು ಮುಖ್ಯವಾಹಿನಿಗೆ ತರಬಹುದಿತ್ತೋ ದೇವರೇ ಬಲ್ಲ.

312E6B8E00000578-3445983-image-a-1_1455407359500

Students of the jawaharlal Nehru university Protesting demand release of JNUSU president in new delhi on saturday Photo by-K Asif 13/02/16

ಬಿಡಿ. ಅದು ಬೇರೆಯೇ ಚಚರ್ೆ. ಇಷ್ಟೆಲ್ಲಾ ದೇಶದ ತೆರಿಗೆ ಹಣದಿಂದ ಚರ್ಮ ದಪ್ಪ ಮಾಡಿಕೊಂಡಿರುವ ಈ ಅಯೋಗ್ಯರ ಗುಂಪಿಗೆ ಒಂದಷ್ಟು ಪತ್ರಕರ್ತರ, ಲೇಖಕರ, ವಕೀಲರ, ರಾಜಕಾರಣಿಗಳ ಸಂಪರ್ಕವಿದೆ. ಇಲ್ಲಿ ಕುಳಿತು ಇವರೆಲ್ಲ ಈ ದೇಶದ ನಾಶಕ್ಕೆ ಸೂಕ್ತ ಯೋಜನೆ ರೂಪಿಸುತ್ತಾರೆ. 2010ರಲ್ಲಿ ದಾಂತೇವಾಡಾದಲ್ಲಿ ನಕ್ಸಲ್ ಉಗ್ರಗಾಮಿಗಳು 76 ಜನ ಸಿ.ಆರ್.ಪಿ.ಎಫ್ ಸೈನಿಕರ ಹತ್ಯೆ ಮಾಡಿದಾಗ ಇವರುಗಳೆಲ್ಲ ಸೇರಿ ಸಂಭ್ರಮಿಸಿದ್ದರು. ನಕ್ಸಲರ ಕೃತ್ಯವನ್ನು ಸಮಥರ್ಿಸಿದ್ದರು. ಅವತ್ತು ಕೇಂದ್ರದಲ್ಲಿದ್ದುದು ಮನಮೋಹನ ಸಿಂಗರ ಸಕರ್ಾರ. ದೇಶಕ್ಕೆ ನಕ್ಸಲರೇ ಮೊದಲ ಶತ್ರುಗಳು ಎಂದು ಅವರು ದೆಹಲಿಯಲ್ಲಿ ಹೇಳುವಾಗಲೇ ಈ ಕೃತ್ಯ ನಡೆದಿತ್ತು. ಕಾಂಗ್ರೆಸ್ಸಿನ ವಿದ್ಯಾಥರ್ಿ ಗುಂಪು ಆಖಗ ವಿರುದ್ಧ ಪ್ರತಿಭಟನೆಯನ್ನೂ ಮಾಡಿತ್ತು. ಮುಂದೆ ಇದೇ ಕಾಂಗ್ರೆಸ್ ಸಕರ್ಾರ ಅಫ್ಜಲ್ ಖಾನನನ್ನು ನೇಣಿಗೇರಿಸಿದಾಗ ಮತ್ತೊಮ್ಮೆ ಆಖಗ ರೊಚ್ಚಿಗೆದ್ದಿತ್ತು. ಕಾಂಗ್ರೆಸ್ಸಿಗೆ ಚಿವುಟಿ ಅಳಿಸುವುದೂ ಗೊತ್ತು; ಸಮಾಧಾನ ಮಾಡುವುದೂ ಗೊತ್ತು.
ಇಂದು ರಾಹುಲ್ ಗಾಂಧಿ ಈ ವಿದ್ಯಾಥರ್ಿಗಳ ನಡುವೆ ನಿಂತು ‘ನಾನು ನಿಮ್ಮೊಂದಿಗೆ ಇದ್ದೇನೆ’ ಅಂತಾನಲ್ಲ ಇವರೆಲ್ಲರೂ ದೇಶ ಕಟ್ಟುವ ಬಯಕೆ ಇದೆಯಾ? ಅಥವಾ ತನ್ನ ಮುತ್ತಾತನಂತೆ ಇನ್ನೊಂದಷ್ಟು ಪಾಕಿಸ್ತಾನಗಳನ್ನು ನಿಮರ್ಿಸುವ ಹುನ್ನಾರ ಇದೆಯಾ? ಬಿಡಿ. ದಿನಗಳೆದಂತೆ ವಿಶ್ವವಿದ್ಯಾಲಯದ ದೇಶದ್ರೋಹಿಗಳ ಅಡ್ಡಾ ಆಗುತ್ತಿದೆ ಎಂಬುದು ವಿದ್ಯಾಥರ್ಿಗಳ ಕಣ್ಣಿಗೆ ರಾಚತ್ತಿತ್ತು. ಸಹಜವಾಗಿಯೇ ದೇಶದ ಪರವಾಗಿ ನಿಂತಿದ್ದ ವಿದ್ಯಾಥರ್ಿಗಳು ಗುಂಪುಗೂಡಿದರು. ಅವರ ಶಕ್ತಿ ಹೆಚ್ಚುತ್ತ ಬಂತು. ಸುಮಾರು 38 ವರ್ಷಗಳ ಎಡಪಂಥೀಯ ಏಕಸ್ವಾಮ್ಯ ಕುಸಿದು ಬೀಳುವುದು ಕಂಡಾಗ ಅನೇಕರು ಪತರಗುಟ್ಟಿದರು.
ಹೌದು. ಸ್ವಾತಂತ್ರ್ಯಾನಂತರ ಈ ದೇಶದ ವಿಶ್ವವಿದ್ಯಾಲಯಗಳ ಮೇಲೆ ಹಿಡಿತ ಎಡಪಂಥೀಯರದ್ದೇ. ಅದು ಜವಹರಲಾಲ್ ನೆಹರೂ ವಿವಿಯೇ ಇರಲಿ, ದೆಹಲಿ ವಿವಿಯೇ ಇರಲಿ, ಕೊನೆಗೆ ಕನರ್ಾಟಕದ ಮಂಗಳೂರು ವಿಶ್ವವದ್ಯಾಲಯವೇ ಇರಲಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯವೇ ಇರಲಿ ಇಲ್ಲೆಲ್ಲಾ ಎಡ ಪಂಥದ ಗಬ್ಬು ವಾಸನೆಯೇ. ಇವರು ಬರೆದಿದ್ದೇ ಇತಿಹಾಸ; ಇವರು ಹೇಳಿದ್ದೇ ಪರಂಪರೆ. ದೇಶವನ್ನು ಒಗ್ಗೂಡಿಸಿ ಏಕಭಾರತ ನಿಮರ್ಿಸುವ ದೂರದ ಕನಸೂ ಇವರಿಗಿಲ್ಲ. ಜಾತಿ-ಮತಗಳ ಹೆಸರಲ್ಲಿ, ಭಾಷೆ-ಸಂಸ್ಕೃತಿಗಳ ಹೆಸರಲ್ಲಿ ದೇಶವನ್ನೂ ತುಂಡು-ತುಂಡು ಮಾಡಿ ಬಿಸಾಡುವುದಷ್ಟೇ ಇವರ ಮುಖ್ಯ ಗುರಿ.
ನನಗೆ ಚೆನ್ನಾಗಿ ನೆನಪಿದೆ. ಮಂಗಳೂರಿನ ಯೂನಿವಸರ್ಿಟಿ ಕಾಲೇಜಿನಲ್ಲಿ ದೇಶಭಕ್ತರ ಕುರಿತಂತಹ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು ಸರಿಯಾದ ಹೊತ್ತಲ್ಲಿ ಸಭಾಂಗಣದ ಬೀಗ ತೆರೆಯಲು ಪ್ರಾಂಶುಪಾಲರು ನಿರಾಕರಿಸಿದಾಗ ರಸ್ತೆಯಲ್ಲಿ ನಿಂತು ಭಾರತದ ಗುಣಗಾನ ಮಾಡಬೇಕಾಗಿ ಬಂದಿತ್ತು. ನಮ್ಮ ವಿಶ್ವವಿದ್ಯಾಲಯಗಳ ಮುಖ್ಯಸ್ಥರ ಕೊಠಡಿಯ ತುಂಬಾ ಲೆನಿನ್, ಮಾಕ್ಸರ್್ರ ಪುಸ್ತಕಗಳು ರಾರಾಜಿಸುತ್ತವೆಯೇ ಹೊರತು ವಿವೇಕಾನಂದರ, ಅರವಿಂದರ ಸಾಹಿತ್ಯಗಳಿಲ್ಲ. ಹಾಗಂತ ಇವರಿಗೆ ಎಡಪಂಥೀಯ ಸಿದ್ಧಾಂತವೂ ಪೂರಾ ಅರ್ಥವಾಗಿದೆ ಎಂದೇನಿಲ್ಲ. ಇವರದ್ದು ಅವಕಾಶವಾದಿ ಸಿದ್ಧಾಂತ ಮಾತ್ರ! ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ದೇಶದ್ರೋಹಿ ಶಿಕ್ಷಕರ ವಿರುದ್ಧ ಕೇಂದ್ರ ಸಕರ್ಾರ ಸರಿಯಾದ ಕ್ರಮ ತೆಗೆದುಕೊಂಡರೆಂದರೆ ಇವರೆಲ್ಲ ಉಳಿದವರಿಗಿಂತ ಹೆಚ್ಚು ದೇಶಭಕ್ತಿಯ ಮಾತನಾಡಲಾರಂಭಿಸಿಬಿಡುತ್ತಾರೆ!

unnamed-600x370
ಜೆ.ಎನ.ಯೂನಲ್ಲಿ ಆರಂಭದಿಂದಲೂ ಎಡಚರದ್ದೇ ಮೇಲುಗೈ. ಬೇರೆ ಚಿಂತನೆಯವರನ್ನು ಒಂದೋ ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ ಇಲ್ಲವೇ ಕಿರಿಕಿರಿ ಮಾಡಿ ಓಡಿಸಲಾಯ್ತು. ಸಕರ್ಾರದ ಅಂಕೆಯಲ್ಲಿರದ ಮುಕ್ತ ಚಿಂತನೆಯ ತಾಣ ಎನ್ನುತ್ತಲೇ ಕಮ್ಯುನಿಸ್ಟ್ ಪಾಟರ್ಿಗಳು ತಮಗೆ ಬೇಕಾದ ಬೆಳೆ ತೆಗೆಯಲಾರಂಭಿಸಿದವು. ಜಾಗತಿಕವಾಗಿ ಎಡಪಂಥೀಯ ಶಕ್ತಿ ಕುಂದುತ್ತಿದ್ದಂತೆ ಮತ್ತು ಮಧ್ಯಮ ವರ್ಗದ ಜನ ಅಧ್ಯಯನದಲ್ಲಿ ಆಸಕ್ತಿ ತೋರಿ ಬದುಕು ರೂಪಿಸಿಕೊಳ್ಳುವ ಹಟಕ್ಕೆ ಬೀಳುತ್ತಿದ್ದಂತೆ ಭಾರತದ ಎಡಚರು ರಂಗು ಕಳೆದುಕೊಳ್ಳಲಾರಂಭಿಸಿದರು. ಆಮೇಲೆಯೇ ಅವರು ಭಾರತದಲ್ಲಿ ನಡೆಯುವ ಸಣ್ಣ-ಸಣ್ಣ ಸಂಗತಿಗಳನ್ನೂ ದೊಡ್ಡದೆಂದು ಬಿಂಬಿಸಿ ಬೊಬ್ಬೆ ಹಾಕುವ ಕಾರ್ಯ ಶುರುಮಾಡಿದ್ದರು.
ಇವುಗಳ ನಡುವೆ ಅರ್ಥವಾಗದ ಸಂಗತಿ ಒಂದೇ. ಇವರೆಲ್ಲ ಹೊಟ್ಟೆಗೆ ಅದೇನು ತಿಂತಾರೆ ಅಂತ. ಉಮರ್ ಖಾಲಿದ್ ಮತ್ತು ಕನ್ಹಯ್ಯಾ ಇಬ್ಬರೂ ‘ಅಫ್ಜಲ್ ಗುರುವಿನ ಕನಸನ್ನು ನನಸು ಮಾಡುತ್ತೇವೆ, ಭಾರತವನ್ನು ಚೂರು ಚೂರು ಮಾಡುತ್ತೇವೆ’ ಎಂಬುದನ್ನು ಯಾವ ದಿಕ್ಕಿನಿಂದ ಸಮಥರ್ಿಸಿಕೊಳ್ಳುತ್ತಾರೆ. ಈಗ ಮಾತ್ರ ಅಲ್ಲಿ ಇವರದ್ದು ಯಾವಾಗಲೂ ಒಂದೇ ರಾಗ. ಜೊತೆಗೆ ಒಂದೇ ಗುಂಪು ಕೂಡ. ಭಾರತವನ್ನು ದ್ವೇಷಿಸುವ ಯಾವ ಅವಕಾಶವನ್ನೂ ಅವರು ಬಿಟ್ಟವರೇ ಅಲ್ಲ. ನಕ್ಸಲರ ಪರವಾಗಿ ಇರಲಿ, ಭಯೋತ್ಪಾದಕರ ಪರವಾಗಿ ಇರಲಿ, ದನದ ಮಾಂಸ ತಿಂದು ಬಹುಸಂಖ್ಯಾತರನ್ನು ಕಾಡುವ ಸಂಗತಿ ಇರಲಿ ಕೊನೆಗೆ ದೀಪಿಕಾಳ ಮೈಚಾಯ್ಸ್ ವೀಡಿಯೋನೇ ಇರಲಿ ಒಂದೇ ಗುಂಪು ಎಲ್ಲೆಡೆ. ಮತ್ತೂ ಆಶ್ಚರ್ಯದ ಸಂಗತಿ ಏನು ಗೊತ್ತೇ? ಕೂಡಂಕುಲಂನಲ್ಲಿ ಅಣುಶಕ್ತಿ ಘಟಕ ಸ್ಥಾಪನೆ ವಿರೋಧಕ್ಕೂ ಇದೇ ಗುಂಪು!
ನಿಮಗೆ ಅನುಮಾನವಿದ್ದರೆ ಬೆಂಗಳೂರಿನ ಟೌನ್ ಹಾಲ್ ಮುಂದೆ ಧರಣಿ ನಿರತರ ಮುಖಗಳನ್ನು ಒಮ್ಮೆ ನೋಡಿ. ರಾಷ್ಟ್ರವಿರೋಧಿಯಾದ ಯಾವ ಕೈಂಕರ್ಯವಿದ್ದರೂ ಅವರವರುಗಳೇ ರಾಜರು. ಹೇಗಿದು? ಇವರಿಗೆಲ್ಲ ಹಣ ಕೊಟ್ಟು ಪ್ರತಿಭಟನೆಗೆ ಕಳಿಸುತ್ತಿರೋದು ಯಾರು? ಕೂಡಂಕುಲಂನಲ್ಲಿ ಅಮೇರಿಕಾ ಚಚರ್್ನ ಮೂಲಕ ಹಣವನ್ನು ಈ ಎನ್.ಜಿ.ಓಗಳಿಗೆ ತಲುಪಿಸುತ್ತಿತ್ತೆಂಬುದು ಈಗ ದೃಢಪಟ್ಟ ಸಂಗತಿ ಹಾಗಿದ್ದರೆ. ಏಷ್ಯಾ ಖಂಡದಲ್ಲಿ ಸಿಂಹದಂತೆ ಮುನ್ನುಗ್ಗುತ್ತಿರುವ ಭಾರತದ ನಡಿಗೆಯನ್ನು ತಡೆಯುವ ದದರ್ು ಯಾರಿಗಿದೆ? ಇವರೆಲ್ಲ ಯಾವ ದೇಶದ ಏಜೆಂಟರು ಹಾಗಿದ್ದರೆ? ಯೋಚಿಸಿದರೆ ಉತ್ತರ ಹುಡುಕೋದು ಕಷ್ಟವಲ್ಲ!
ಈ ಬಾರಿ ಕೇಂದ್ರದಲ್ಲಿರುವ ಸಕರ್ಾರ ಈ ವಿಚಾರದಲ್ಲಿ ಕಠೋರವಾಗಿದೆ. ರಾಷ್ಟ್ರದ ಅಸ್ಮಿತೆಯ ವಿಚಾರದಲ್ಲಿ ತಲೆ ಬಾಗಿಸುವ ಪ್ರಶ್ನೆಯೇ ಇಲ್ಲ. ಜೆ.ಎನ್.ಯು ಪ್ರಕರಣ ದೇಶದ್ರೋಹಿಗಳ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಗಳಾಗಲಿ. ದೇಶದಲ್ಲೀಗ ರಾಷ್ಟ್ರೀಯ ವಾದಿಗಳು ಮತ್ತು ರಾಷ್ಟ್ರದ್ರೋಹಿಗಳ ನಡುವಿನ ಅಂತರ ಸ್ಪಷ್ಟವಾಗಲಾರಂಭಿಸಿದೆ. ಒಮ್ಮೆ ಈ ದ್ರೋಹಿಗಳನ್ನು ಪ್ರತ್ಯೇಕವಾಗಿಸಿಕೊಂಡರೆ ಆಮೇಲೆ ನೆಟ್ಟಗಾಗಿಸೋದು ಸುಲಭ.
ಒಟ್ಟಾರೆ ಅಚ್ಛೇದಿನಗಳು ಖಂಡಿತ ಬರುತ್ತಿವೆ!!

Leave a Reply