ವಿಭಾಗಗಳು

ಸುದ್ದಿಪತ್ರ


 

ನಮ್ಮ ಹುಟ್ಟು-ಸಾವುಗಳನ್ನು ನಿರ್ಧರಿಸಿದವರೂ ಬಿಳಿಯರೇ..

ಈ ಮೇಲೆ ಹೇಳಿದ ವಂಶಾವಳಿಗಳ ವಿವರಣೆಗಳಲ್ಲಿ ನಿಮಗೆ ಯಾವ ವಿರೋಧವೂ ಇಲ್ಲ. ಖಂಡಿತ ನನಗೂ ಇಲ್ಲ. ಆದರೆ ಒಮ್ಮೆ ನಾವು ಓದಿಕೊಂಡ ಇತಿಹಾಸದ ಪುಸ್ತಕವನ್ನು ನೆನಪಿಸಿಕೊಂಡು ನೋಡಿ. ನಂದರ ಮಗಧ ಸಾಮ್ರಾಜ್ಯದ ಆಳ್ವಿಕೆ ಇದ್ದಾಗಲೇ ಭಾರತಕ್ಕೆ ಅಲೆಗ್ಸಾಂಡರ್ ಆಕ್ರಮಣವಾಗಿದ್ದು! ಅಂದಮೇಲೆ ಅಲೆಗ್ಸಾಂಡರ್ ಭಾರತಕ್ಕೆ ಆಗಮಿಸಿದ್ದು ಕ್ರಿ.ಪೂ 1400 ನೇ ಇಸವಿಯ ಆಸುಪಾಸಿಗೆ ಅಂತಾಯ್ತು! ಆದರೆ ಗ್ರೀಕ್ ಸಾಹಿತ್ಯಗಳ ಪ್ರಕಾರ ಅಲೆಗ್ಸಾಂಡರ್ ಹುಟ್ಟಿದ್ದೇ ಸುಮಾರು ಕ್ರಿ.ಪೂ 336 ರಲ್ಲಿ. ಮತ್ತೆ ಅವನು ಭಾರತಕ್ಕೆ ಬಂದದ್ದು ಯಾವಾಗ?

sirwilliamjonesbwUSE

‘ನಾನೇ ದಿಗ್ವಿಜಯಿ. ಎಲ್ಲರಿಗಿಂತಲೂ ಶ್ರೇಷ್ಠ ನಾನೇ’
ಅಲೆಗ್ಸಾಂಡರನ ನಂತರ ಇಡಿಯ ಪಶ್ಚಿಮವನ್ನು ಆಳುತ್ತಿರುವ ಚಿಂತನೆಗಳು ಇವೇ. ಹೌದಲ್ಲವೇ ಮತ್ತೆ! ಬಿಳಿಯರು ಕರಿಯರಿಗಿಂತ; ಗಂಡಸರು ಹೆಂಗಸರಿಗಿಂತ ಮತ್ತು ಶ್ರೀಮಂತರು ಬಡವರಿಗಿಂತ ಶ್ರೇಷ್ಠ ಎಂಬುದು ಅವರ ಸಿದ್ಧಾಂತದ ಅಡಿಪಾಯ. ಜಗತ್ತಿನ ಯಾವುದಾದದರೂ ರಾಷ್ಟ್ರಗಳು ತಮಗಿಂತ ಮುಂದುವರಿದಿವೆ ಎಂಬುದನ್ನು ಅವರಿಂದ ಜೀಣರ್ಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿಯೇ ಭಾರತದ ಪ್ರಾಚೀನತೆಯನ್ನು ಲೆಕ್ಕ ಹಾಕುವಾಗಲೆಲ್ಲ ಅವರು ಬೈಬಲ್ಲಿಗೆ ಹೊಂದಿಸಿಯೇ ಲೆಕ್ಕಾಚಾರ ಮಾಡೋದು. ಈ ತಪ್ಪು ಲೆಕ್ಕದಿಂದಾಗಿಯೇ ನಮ್ಮ ದೇಶದ ಇತಿಹಾಸ ನಮಗೆ ಗೋಜಲು-ಗೋಜಲಾಗಿಬಿಟ್ಟಿರೋದು. ನಮ್ಮ ಪುರಾಣಗಳು ನಮಗೇ ವಜ್ರ್ಯವಾಗಿರೋದು.
ನಮ್ಮ ಧರ್ಮದ ವಿಚಾರದಲ್ಲಿ ವೈಜ್ಞಾನಿಕ ಪ್ರಶ್ನೆಗಳನ್ನೆತ್ತುವ ನಾವು ಯಾವ ವೈಜ್ಞಾನಿಕ ತಳಹದಿಯೂ ಇಲ್ಲದೇ ಜಗತ್ತಿನ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮತವೊಂದು ಭೂಮಿಯ ಹುಟ್ಟಿಗೆ ದಿನಾಂಕ ನಿಗದಿ ಪಡಿಸುವುದನ್ನು ಪ್ರಶ್ನೆಯಿಲ್ಲದೇ ನಂಬಿಬಿಡುತ್ತೇವೆ. ಇಂದು ಈ ಪ್ರಶ್ನೆ ಕೇಳುವುದು ಅತ್ಯಗತ್ಯವೇಕೆಂದರೆ ಭಾರತೀಯ ಇತಿಹಾಸದ ಕಾಲಗಣನೆಯೆಲ್ಲ ಈ ಆಧಾರದ ಮೇಲೆಯೇ ಆಗಿರುವಂಥದ್ದು. ಇದು ತಪ್ಪೆಂದು ಸಾಬೀತು ಮಾಡಿದರೆ ನಮ್ಮ ಇತಿಹಾಸದ ಪಠ್ಯಪುಸ್ತಕಗಳೆಲ್ಲ ಹೊಸದಾಗಿ ರಚನೆಯಾಗಬೇಕಾಗುತ್ತದೆ.
ಕ್ರಿ.ಶ. 17ನೇ ಶತಮಾನದಲ್ಲಿ ಭೂಮಿಯ ಹುಟ್ಟಿನ ಕುರಿತಂತೆ ಬಲು ದೊಡ್ಡ ವಿವಾದವೆದ್ದಾಗ ಐರ್ಲೆಂಡಿನ ಆಚರ್್ ಬಿಷಪ್ ವಂದನೀಯ ಉಷರ್ರವರು ಮೂಗು ತೂರಿಸಿದರು. ಹೀಬ್ರೂ ಬೈಬಲ್ ಬಳಸಿ ಆಡಮ್ನಿಂದ ಸೊಲೊಮನ್ವರೆಗಿನ ಪೀಳಿಗೆಯ ವಿವರಗಳನ್ನು ಕ್ರೋಢೀಕರಿಸಿದರು. ಅನೇಕ ರಾಜರುಗಳ ಕಾಲಘಟ್ಟವನ್ನು ಗಣನೆಗೆ ತಂದುಕೊಂಡರು. ಕ್ರಿಸ್ತ ಹುಟ್ಟುವುದಕ್ಕೆ 4000 ವರ್ಷಗಳ ಮುನ್ನ ಭೂಮಿ ಹುಟ್ಟಿತೆಂದು ನಿಶ್ಚಯಿಸಿದರು. ಕ್ರಿಸ್ತ 5ನೇ ಶತಮಾನದಲ್ಲಿ ಹುಟ್ಟಿದ್ದಿರಬೇಕೆಂಬ ಅನುಮಾನದ ಆಧಾರದ ಮೇಲೆ ಸೃಷ್ಟಿ ಕ್ರಿ.ಶ. 4004ರಲ್ಲಿ ಆಯಿತೆಂದೂ ಹೇಳಿದರು. ಅಷ್ಟೇ ಅಲ್ಲ. ಅಕ್ಟೋಬರ್ 22ರ ಶನಿವಾರ ರಾತ್ರಿ ಸೃಷ್ಟಿಕಾರ್ಯ ಶುರುವಾಗಿ 23ರ ಬೆಳಗಿನ ವೇಳೆಗೆ ಮುಗಿದಿರಬೇಕೆಂದು ಅಂದಾಜಿಸಲಾಯಿತು. ಇದನ್ನೂ ಒಪ್ಪದಿದ್ದವ ದೇವ ದೂಷಕನಾಗುತ್ತಾನೆ, ಪಾಖಂಡಿ ಎನಿಸಿಕೊಳ್ಳುತ್ತಾನೆ ಎಂದೂ ಆದೇಶ ಹೊರಡಿಸಲಾಯಿತು. ಅಂದ ಮೇಲೆ ಇದರ ವಿರುದ್ಧ ಹೋದವರಿಗೆ ಶಿಕ್ಷೆಯೇನಿರಬಹುದು ಗೊತ್ತಾಯಿತಲ್ಲ.

Untold-History-of-the-Earth-Planet-Revealed-Explained-Bible-Genesis-Origins-Secret-Universe-Eden-Evolution-Creation-Science-Evidence-Aliens
ಉಷರ್ನ ಕಾಲಕ್ಕೇ ಅನೇಕರು ಈ ವಾದವನ್ನು ಧಿಕ್ಕರಿಸಿದರು. ಆದರೂ ತನ್ನ ವಿರುದ್ಧ ದನಿ ಎತ್ತಿದವರ ಸದ್ದನ್ನು ಅಡಗಿಸುವ ರೂಢಿ ಇದ್ದ ಚಚರ್ು ಯಾರ ದನಿಯೂ ಕೇಳದಂತೆ ಮಾಡಿತು. 17 ನೇ ಶತಮಾನದಲ್ಲಿ ಉಷರ್ ಸಮಾಜದ ಮುಂದಿರಿಸಿದ ಈ ವಾದ ವೈಜ್ಞಾನಿಕ ಲೋಕ ಬೆಳೆದಂತೆಲ್ಲ ಅಪಹಾಸ್ಯಕ್ಕೆ ಈಡಾಯಿತು. ಜನ ಪ್ರಶ್ನಿಸತೊಡಗಿದರು. ಆಡಿಕೊಳ್ಳತೊಡಗಿದರು. ಮುಂದೆ 19ನೇ ಶತಮಾನದ ಅಂತ್ಯ ಭಾಗದಲ್ಲಿ ಪ್ರಿನ್ಸ್ಟನ್ನ ಪ್ರೊಫೆಸರ್ ವಿಲಿಯಂ ಹೆನ್ರಿಗ್ರೀನ್, ಉಷರ್ನನ್ನು ಖಂಡಿಸಿ ಲೇಖನವೊಂದನ್ನು ಬರೆದು ‘ಅಬ್ರಹಾಂಗಿಂತಲೂ ಮುಂಚಿನ ಕಾಲಗಣನೆಯ ಕುರಿತಾಗಿ ಶಾಸ್ತ್ರಗಳು ಯಾವ ಮಾಹಿತಿಯನ್ನೂ ಕೊಡುವುದಿಲ್ಲ; ಬೈಬಲ್ಲಿನ ದಾಖಲೆಗಳು ಪ್ರಳಯದ್ದಾಗಲಿ ಅಥವಾ ಸೃಷ್ಟಿಯದ್ದಾಗಲಿ ದಿನಾಂಕವನ್ನು ಸಮರ್ಥವಾಗಿ ಹೇಳುವುದಿಲ್ಲ’ ಎಂದುಬಿಟ್ಟ. ಕ್ರಿಶ್ಚಿಯನ್ನರೇ ನಡೆಸುವ ಪತ್ರಿಕೆಯೊಂದು ಈ ಲೇಖನ ಪ್ರಕಟಿಸಿ ತಮ್ಮ ಮಾನ ಉಳಿಸಿಕೊಂಡಿತು.
ಈ ಘಟನೆಗೂ ಬಲು ಮುನ್ನವೇ ಬಂಗಾಳದಲ್ಲಿ ಬೀಡುಬಿಟ್ಟು ಇಲ್ಲಿನ ಶಾಸ್ತ್ರಗ್ರಂಥಗಳ ಕುರಿತು ತಾನೇ ಅಧಿಕೃತವಕ್ತಾರ ಎಂಬಂತೆ ಮಾತನಾಡುತ್ತಿದ್ದ ವಿಲಿಯಂ ಜೋನ್ಸ್, ಉಷರ್ನ ದಾಖಲೆಗಳಿಗೆ ಸೂಕ್ತವಾಗುವಂತೆ ಭಾರತದ ಇತಿಹಾಸವನ್ನು ಹೊಂದಿಸುವ ಪ್ರಯತ್ನ ಮಾಡಿದ. ಆನಂತರ ಬಂದ ಮ್ಯಾಕ್ಸ್ ಮುಲ್ಲರ್ನದೂ ಅದೇ ಕತೆ. ಆತನಂತೂ ಸೃಷ್ಟಿಯ ಹುಟ್ಟಿನ ಕುರಿತಂತೆ ಬೈಬಲ್ ಹೇಳಿರುವುದೇ ಸರಿಯಾದ ಚರಿತ್ರೆ ಎಂಬುದನ್ನು ಚಚರ್್ಗೆ ಪತ್ರ ಬರೆದು ತನ್ನ ವಿಶ್ವಾಸವನ್ನು ದೃಢಪಡಿಸಿದ. ಅನ್ನ ಕೊಟ್ಟ ಧಣಿಗಳಿಗೆ ಆತ ಸಲ್ಲಿಸಿದ ಗೌರವ ಅದು.
ಕಾಲಗಣನೆಯ ವಿಚಾರವನ್ನು ಈ ಲೇಖನ ಮಾಲೆಯ ಆರಂಭದಲ್ಲಿಯೇ ಸಾಧ್ಯವಾದಷ್ಟೂ ವಿಸ್ತಾರವಾಗಿ ಚಚರ್ಿಸುವ ಪ್ರಯತ್ನ ಮಾಡಿದ್ದೆ. ಆದರೂ ಮತ್ತೊಮ್ಮೆ ಹರವಿಕೊಂಡು ಕುಳಿತುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಸಾಮಾನ್ಯವಾಗಿ ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇರಲಿಲ್ಲವೆಂಬುದು ನಮ್ಮ ಕುರಿತಂತೆ ಅನೇಕರ ಆಕ್ಷೇಪ. ಹಾಗೆ ನೋಡಿದರೆ ಯಾವ ಕಾಲಘಟ್ಟದಲ್ಲಿ ನಿಂತು ನೋಡಿದರೂ ಹಿಂದಿನ ಕಾಲಗಣನೆಯ ಲೆಕ್ಕಾಚಾರ ಇಂದಿಗೂ ಹೊಂದಿಕೊಳ್ಳುವಂತೆ ಅನುಕೂಲಕರವಾಗಿ ಲೆಕ್ಕಾಚಾರ ಹಾಕಿರುವುದು ನಾವೇ. ಉದಾಹರಣೆಗೆ ರಾಮ ಹುಟ್ಟಿದ್ದು ಯಾವಾಗ ಅಂತ ಕೇಳಿ ನೋಡಿ. ಹಳ್ಳಿಗರೂ ಹೆಮ್ಮೆಯಿಂದ ಚೈತ್ರಮಾಸದ ಶುಕ್ಲ ಪಕ್ಷದ ನವಮಿ ಎಂದು ಬಿಡುತ್ತಾರೆ. ಅದಕ್ಕೆ ತಕ್ಕಂತೆ ಪ್ರತೀ ವರ್ಷವೂ ಉತ್ಸವ ನಡೆಯುತ್ತದೆ. ಹೌದು ತಾನೇ? ವಾಲ್ಮೀಕಿಗಳು ತಮ್ಮ ರಾಮಾಯಣದ ಬಾಲಕಾಂಡದ 18ನೇ ಸರ್ಗದ ಶ್ಲೋಕಗಳಲ್ಲಿ ರಾಮನ ಜಾತಕವನ್ನು ತೆರೆದಿಡುತ್ತಾರೆ. ಸೂರ್ಯ ಮೇಷ ರಾಶಿಯಲ್ಲಿ, ಶನಿ ತುಲಾದಲ್ಲಿ, ಗುರು ಕಕರ್ಾಟಕದಲ್ಲಿ, ಶುಕ್ರ ಮೀನದಲ್ಲಿ ಮತ್ತು ಕುಜ ಮಕರದಲ್ಲಿ ಇದ್ದನೆನ್ನುತ್ತಾರೆ. ಇಂದು ಇಂಗ್ಲೀಷ್ ಕ್ಯಾಲೆಂಡರ್ಗಳನ್ನು ಮನೆಯಲ್ಲಿ ತೂಗು ಹಾಕಿದ್ದೇವೆ. ಚೈತ್ರ, ವೈಶಾಖಗಳು ಕಳೆದು ಜನವರಿ, ಫೆಬ್ರವರಿಗಳು ಬಂದಿವೆ. ಹಾಗಂತ ರಾಮನ ಹುಟ್ಟಿದ ದಿನವನ್ನು ಕ್ಯಾಲೆಂಡರಿಗೆ ಹೊಂದಿಸಲಾಗದೆಂದು ಭಾವಿಸಿದ್ದೀರೇನು? ಅಯೋಧ್ಯೆಯಿಂದ ಕಂಡ ಈ ಗ್ರಹಗಳ ಆಧಾರದ ಮೇಲೆ ವಿಜ್ಞಾನಿಗಳು ಕರಾರುವಾಕ್ಕಾಗಿ ಲೆಕ್ಕ ಹಾಕಿ ರಾಮನ ಜನ್ಮ ತಿಥಿಯನ್ನು ಕ್ರಿ.ಪೂ 5114 ಜನವರಿ 10 ಅಂತ ಸ್ಪಷ್ಟವಾಗಿ ಹೇಳಿದ್ದಾರೆ! ಈ ಆಧಾರದಲ್ಲಿಯೇ ರಾಮನ ಬದುಕಿನ ಎಲ್ಲಾ ಘಟನೆಗಳನ್ನೂ ಲೆಕ್ಕ ಹಾಕಿ ಅದನ್ನೊಂದು ಐತಿಹಾಸಿಕ ಸತ್ಯವಾಗಿ ದಾಖಲಿಸುವಲ್ಲಿ ಯಶಸ್ಸು ಪಡೆದಿದ್ದಾರೆ. ಅಂದರೆ ರಾಮನ ಕಾಲಘಟ್ಟ ಇಂದಿಗೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ! (History Of Vedic and Ramayana Eras by Saroj Bala, Kulabhushan Mishra)

lord-srirama2028129
ಈಗ ಒಮ್ಮೆ ಯೋಚಿಸಿ. ಗ್ರಹ-ನಕ್ಷತ್ರಗಳ ಗುಚ್ಛಗಳನ್ನು ಮುಂದಿಟ್ಟುಕೊಂಡು ಲೆಕ್ಕಹಾಕಿದ, ಸೂರ್ಯ ಚಂದ್ರರಿರುವ ವರೆಗೆ ಎಂದಿಗೂ ತಾಳೆ ತಪ್ಪದ ಕಾಲಗಣನೆ ಮಾಡಿದ ನಮಗೆ ಇತಿಹಾಸದ ಪ್ರಜ್ಞೆ ಇರಲಿಲ್ಲವೋ? ವಾಸ್ತವವಾಗಿ ಇದು ಬಿಳಿಯರು ನಮ್ಮ ತಲೆಯೊಳಗೆ ತುರುಕಿದ ಬೂಸಾ! ತಮ್ಮ ಮತವನ್ನು ಇತರೆಲ್ಲಕ್ಕಿಂತ ಶ್ರೇಷ್ಠವೆಂದು ಸಾಧಿಸುವ ಭರದಲ್ಲಿಯೇ ಕ್ರಿ.ಪೂ 4004ಕ್ಕೂ ಮುನ್ನ ಇರಬಹುದಾಗಿದ್ದ ಎಲ್ಲ ಸಂಗತಿಗಳನ್ನು ಇತಿಹಾಸವೆಂದು ಕರೆಯದೇ ದಂತಕಥೆಗಳು ಎಂದು ಬಿಟ್ಟರು.
ಆಮೇಲೇನು? ರಾಮ-ಕೃಷ್ಣರು ನಮ್ಮ ಪಾಲಿಗೆ ಕಾವ್ಯದಲ್ಲಿ ಕಂಡುಬರುವ ಹೀರೋಗಳಾಗಿಯಷ್ಟೇ ಉಳಿದರು. ಪುರಾಣಗಳಂತೂ ಬೊಗಳೆ ಸಾಹಿತ್ಯಗಳೆಂದು ನಾವೇ ಒಪ್ಪುವ ಹಂತಕ್ಕೆ ಬಂದೆವು. ಕಾರಣವೇನು ಗೊತ್ತೇ? ಭಾರತದ ಇತಿಹಾಸವನ್ನು ಅಧಿಕೃತವಾಗಿ ಹತ್ತಾರು ಸಾವಿರ ವರ್ಷಗಳ ಹಿಂದಕ್ಕೊಯ್ಯುವ ಸಾಮಥ್ರ್ಯ ಇದ್ದುದು ಪುರಾಣಗಳಿಗೆ ಮಾತ್ರ. ಇದನ್ನು ಜೀಣರ್ಿಸಿಕೊಳ್ಳಲಾಗದ ವಿಲಿಯಂ ಜೋನ್ಸ್ನಂತಹ ಪಂಡಿತರು ಪುರಾಣಗಳಲ್ಲಿ ಉಲ್ಲೇಖವಾಗಿರುವ ಲೆಕ್ಕಾಚಾರಗಳು ಪ್ರಕೃತಿ ಕ್ರಮಕ್ಕೆ ವಿರುದ್ಧವಾಗಿ ಇವೆ ಎಂದರು! ಅದನ್ನು ಪ್ರಚಾರ ಮಾಡುತ್ತ ನಾವೂ ನಂಬುವಂತೆ ಮಾಡಿದರು. ವಿಜ್ಞಾನದ ಕತ್ತಿಯ ಪ್ರಹಾರ ಶುರುವಾಗುತ್ತಿದ್ದಂತೆ ಬದಲಾವಣೆಯ ಗಾಳಿ ಬೀಸಲಾಂಭಿಸಿತು. ಪುರಾಣಗಳಿಗೆ, ಅಲ್ಲಿ ಉಲ್ಲೇಖಗೊಂಡಿರುವ ವಂಶಾವಳಿಗಳಿಗೆ ಜೀವ ಬಂತು. ಇದ್ದೂ ಇಲ್ಲದಂತಾಗಿದ್ದ ರಾಜ, ಮಹಾರಾಜರು ಮತ್ತೆ ಜೀವಂತವಾಗಿ ಓಡಲಾರಂಭಿಸಿದರು.
(ಶ್ರೀ ಜಯಚಾಮರಾಜೇಂದ್ರ ಗ್ರಂಥರತ್ನ ಮಾಲಾ ಮುದ್ರಿಸಿರುವ ಮತ್ಸ್ಯಪುರಾಣ (ಸಂ-7, ಪು-190)ವಿರಬಹುದು, ವಿಷ್ಣುಪುರಾಣವೇ (ಸಂ-2, ಪು-437) ಇರಬಹುದು ಭಾರತೀಯ ರಾಜರುಗಳ ವಂಶಾವಳಿಯನ್ನು ಕೊಟ್ಟಿದೆಯಲ್ಲ ಇದಕ್ಕೆ ಕಲ್ಹಣನ ರಾಜತರಂಗಿಣಿಯನ್ನು ತಾಳೆ ಹಾಕಿ ನೋಡಿದರೆ ಹತ್ತಿರವಾದ ಅನೇಕ ದಿನಾಂಕಗಳನ್ನು ಪತ್ತೆ ಮಾಡಬಹುದು)
ಋಷಿಗಳು ಸೂತಪುರಾಣಿಕರನ್ನು ರಾಜವಂಶದ ಕುರಿತಂತೆ ಪ್ರಶ್ನಿಸಿದಾಗ ಹೊರಡುವ ಉತ್ತರವನ್ನು ಸಂಕಲಿಸಿ ಕೋಟ ವೆಂಕಟಾಚಲಂರವರು ತಮ್ಮ The Plot of Indian Chronologyಯಲ್ಲಿ ಕಲಿಯುಗದ ಆರಂಭದ ನಂತರದ ರಾಜವಂಶಿಗಳ ಪಟ್ಟಿ ಮಾಡಿದ್ದಾರೆ. ಶಾಸ್ತ್ರಗ್ರಂಥಗಳು ಕಲಿಯ ಆಗಮನದ ವಿವರಣೆ ಕೊಡುವಾಗ ದಾಖಲಿಸಿರುವ ಗ್ರಹಗತಿಗಳ ಪ್ರಕಾರ ಕಲಿ ಶಕೆ ಸುಮಾರು ಕ್ರಿ.ಪೂ 3100ರಲ್ಲಿ ಆರಂಭವಾಯಿತೆಂದು ಶ್ರೀ ಎಂ.ವಿ.ಆರ್ ಶಾಸ್ರ್ತೀ ತಮ್ಮ ‘ಯಾವುದು ಚರಿತ್ರೆ’ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೆಕ್ಕ ಹಾಕುವುದಾದರೆ ಪುರಾಣಗಳ ಪ್ರಕಾರ ಬೃಹದ್ರಥನ ವಂಶಜರು ಆನಂತರ ಕ್ರಮವಾಗಿ ಪ್ರದ್ಯೋತ, ಶಿಶುನಾಗ ಮತ್ತು ನಂದರ ವಂಶಜರು ಆಳಿದರು. ಒಟ್ಟಾರೆ ಸುಮಾರು 1600 ವರ್ಷಗಳ ಕಾಲದ ಆಳ್ವಿಕೆ ಈ ನಾಲ್ಕು ವಂಶಗಳದ್ದು. ಅಂದರೆ ಕ್ರಿ.ಪೂ. 3100 ರ ಆಸುಪಾಸಿನಲ್ಲಿ ಶುರುವಾದ ಕಲಿಯುಗ ಒಂದೂವರೆಸಾವಿರ ವರ್ಷಗಳನ್ನು ಇವರು ಕಳೆದು ಕ್ರಿ.ಪೂ 1500 ರ ವೇಳೆಗೆ ಚಂದ್ರಗುಪ್ತ ಮೌರ್ಯನ ಆಳ್ವಿಕೆ ಶುರುವಾಯಿತು! ವಿಲಿಯಂ ಜೋನ್ಸ್ ಕೂಡ ಪುರಾಣಗಳ ಆಧಾರದ ಮೇಲೆ ಇದೇ ಬಗೆಯ ಪಟ್ಟಿಯೊಂದನ್ನು ಪ್ರಕಟಿಸುತ್ತಾನಾದರೂ ಇದು ನಂಬಲು ಯೋಗ್ಯವಲ್ಲದ್ದು ಎಂದು ಬಿಡುತ್ತಾನೆ!
ವಿಷ್ಣು ಪುರಾಣದ ಪ್ರಕಾರ ಶಿಶುನಾಗ ವಂಶದ ಹತ್ತು ಜನ ರಾಜರು 360 ವರ್ಷಗಳ ಕಾಳ ಆಳ್ವಿಕೆ ನಡೆಸಿ, ಕೊನೆಯ ರಾಜ ಮಹಾನಂದಿಗೆ ಶೂದ್ರಸ್ತ್ರೀಯಲ್ಲಿ ಹುಟ್ಟಿದ ಮಹಾಪದ್ಮನಂದ ಅಧಿಕಾರಕ್ಕೇರುತ್ತಾನೆ. ಮಹಾಪದ್ಮನಂದ ಲೋಭಿಯಾದರೂ ಮಹಾಬಲಶಾಲಿ.
ಬಲೋ ಮಹಾಪದ್ಮನಾಮಾನಂದಃ ಪರಶುರಾಮ
ಇವಾಪರೋ ಅಖಿಲಕ್ಷತ್ರಾಂತಕಾರೀ ಭವಿಷ್ಯತಿ|
ಎಂಬ ಪುರಾಣದ ಮಾತು ಆತನನ್ನು ಪರಶುರಾಮನಿಗೆ ಹೋಲಿಸುತ್ತದೆ. ಆತ ಕ್ಷತ್ರಿಯ ರಾಜರುಗಳೇ ಇಲ್ಲದಂತೆ ಅವರೆಲ್ಲರನ್ನೂ ನಾಮಾವಶೇಷಗೊಳಿಸಿ ಏಕಚ್ಛತ್ರಾಧಿಪತಿಯಾದನೆಂದೂ ಹೇಳುತ್ತದೆ. ಒಂದು ನೂರು ವರ್ಷಗಳ ಕಾಲ ಅವನು ಮತ್ತು ಎಂಟು ಮಕ್ಕಳು ನವನಂದರೆಂದೇ ಖ್ಯಾತಿಯಾಗಿ ರಾಜ್ಯಭಾರ ನಡೆಸಿದರು. ಅವರ ದರ್ಪ ಮಿತಿಮೀರಿತ್ತು. ಧರೆಯ ಒಡೆತನದ ಅಹಂಕಾರ ಅವರನ್ನು ನುಂಗಿಬಿಟ್ಟಿತ್ತು. ಆಗ ಆಚಾರ್ಯ ಚಾಣಕ್ಯ ನಂದರಿಗೆ ಮುರಾ ಎಂಬ ಸ್ತ್ರೀಯಲ್ಲಿ ಹುಟ್ಟಿದ ಚಂದ್ರಗುಪ್ತನನ್ನು ಕರೆತಂದು ಈ ಒಂಭತ್ತು ನಂದರ ಸಂಹಾರ ಮಾಡಿಸಿ ಪಟ್ಟಾಭಿಷಿಕ್ತನಾಗಿಸುತ್ತಾನೆ. ಹಾಗೆಂದು ಪುರಾಣಗಳೇ ಹೇಳುತ್ತವೆ. ಚಂದ್ರಗುಪ್ತನಿಂದ ಶುರುಮಾಡಿ ಬೃಹದೃಥನವರೆಗೆ ಹತ್ತು ಜನ ಮೌರ್ಯವಂಶದ ರಾಜರು ನೂರಮೂವತ್ತೇಳು ವರ್ಷಗಳ ಕಾಲ ಆಳುವರು. ಮತ್ತೆ ಮಂತ್ರಿ ಪುಷ್ಯಮಿತ್ರ ಬ್ರಹದೃಥನನ್ನು ಕೊಂದು ಶುಂಗವಂಶವನ್ನು ಸ್ಥಾಪಿಸಿ ಆಳ್ವಿಕೆ ನಡೆಸುವನು. ಇವೆಲ್ಲವೂ ವಿಷ್ಣು ಪುರಾಣದ ಉಲ್ಲೇಖಗಳೇ.
ನನಗೆ ಗೊತ್ತು. ಈ ಮೇಲೆ ಹೇಳಿದ ವಂಶಾವಳಿಗಳ ವಿವರಣೆಗಳಲ್ಲಿ ನಿಮಗೆ ಯಾವ ವಿರೋಧವೂ ಇಲ್ಲ. ಖಂಡಿತ ನನಗೂ ಇಲ್ಲ. ಆದರೆ ಒಮ್ಮೆ ನಾವು ಓದಿಕೊಂಡ ಇತಿಹಾಸದ ಪುಸ್ತಕವನ್ನು ನೆನಪಿಸಿಕೊಂಡು ನೋಡಿ. ನಂದರ ಮಗಧ ಸಾಮ್ರಾಜ್ಯದ ಆಳ್ವಿಕೆ ಇದ್ದಾಗಲೇ ಭಾರತಕ್ಕೆ ಅಲೆಗ್ಸಾಂಡರ್ ಆಕ್ರಮಣವಾಗಿದ್ದು! ಅಂದಮೇಲೆ ಅಲೆಗ್ಸಾಂಡರ್ ಭಾರತಕ್ಕೆ ಆಗಮಿಸಿದ್ದು ಕ್ರಿ.ಪೂ 1400 ನೇ ಇಸವಿಯ ಆಸುಪಾಸಿಗೆ ಅಂತಾಯ್ತು! ಆದರೆ ಗ್ರೀಕ್ ಸಾಹಿತ್ಯಗಳ ಪ್ರಕಾರ ಅಲೆಗ್ಸಾಂಡರ್ ಹುಟ್ಟಿದ್ದೇ ಸುಮಾರು ಕ್ರಿ.ಪೂ 336 ರಲ್ಲಿ. ಮತ್ತೆ ಅವನು ಭಾರತಕ್ಕೆ ಬಂದದ್ದು ಯಾವಾಗ?
ಅಲೆಗ್ಸಾಂಡರ್ ಭಾರತಕ್ಕೆ ಬಂದಾಗ ತಕ್ಷಶಿಲಾದಲ್ಲಿ ಚಾಣಕ್ಯ-ಚಂದ್ರಗುಪ್ತರು ಇದ್ದರು ಎಂಬುದು ಭಾರತ ನಂಬಿಕೊಂಡು ಬಂದಿರುವ ಸಂಗತಿಯಾಗಿಬಿಟ್ಟಿದೆ. ಕೆಲವರಂತೂ ದಂಡಮೀಶನೇ ಚಾಣಕ್ಯನಿರಬೇಕು ಎನ್ನುತ್ತಾರೆ. ಸ್ವತಃ ಸಾವರ್ಕರರೂ ತಮ್ಮ ಸಿಕ್ಸ್ ಗ್ಲೋರಿಯಸ್ ಎಪೋಕ್ಸ್ ಆಫ್ ಇಂಡಿಯಾದಲ್ಲಿ ಅದನ್ನೇ ಉಲ್ಲೇಖಿಸುತ್ತಾರೆ. ಈ ಹಿಂದಿನ ಲೇಖನಗಳಲ್ಲಿ ಕಥೆಯ ಜೋಡಣೆಗಾಗಿ ಹಾಗೆ ಬರೆದಿದ್ದನ್ನು ನೀವೂ ಗಮನಿಸಿರಬಹುದು. ಕಥಾಕಾಲಕ್ಕಾದರೆ ಅದು ಸರಿ. ಆದರೆ ಚರಿತ್ರೆಯ ಪುಟಗಳಲ್ಲಿ ಅಲೆಗ್ಸಾಂಡರನ ಆಕ್ರಮಣದ ಕಾಲವೇ ಮೌರ್ಯ ವಂಶದ ಉಗಮದ ಕಾಲ ಎನ್ನುವ ಮೂಲಕ ನಾವು ಕನಿಷ್ಠ ಪಕ್ಷ ಒಂದು ಸಾವಿರ ವರ್ಷದ ಭಾರತದ ಇತಿಹಾಸಕ್ಕೆ ಮೋಸವೆಸಗುತ್ತೇವೆಂದು ಅನೇಕ ಪಂಡಿತರು ಅಭಿಪ್ರಾಯ ಪಡುತ್ತಾರೆ!
ಅಷ್ಟೇ ಅಲ್ಲ. ಚಂದ್ರಗುಪ್ತಮೌರ್ಯನನ್ನು ಅಲೆಗ್ಸಾಂಡರನಿಗೆ ಸಮಕಾಲೀನನಾಗಿಸುವ ಮೂಲಕ ಬುದ್ಧನ ಇತಿಹಾಸಕ್ಕೂ ಅಪಚಾರವೆಸಗುತ್ತೇವೆ. ಅಕಸ್ಮಾತ್ ಮೌರ್ಯ ಚಂದ್ರಗುಪ್ತ ಅಲೆಗ್ಸಾಂಡರ್ ಭಾರತಕ್ಕೆ ಕಾಲಿಡುವ ಸಾವಿರ ವರ್ಷಕ್ಕೂ ಮುನ್ನ ಇದ್ದದ್ದು ನಿಜವಾದರೆ ಬುದ್ಧ ಕ್ರಿ.ಪೂ 400ರ ಆಸುಪಾಸಿನಲ್ಲಿ ಹುಟ್ಟಿರುವುದು ಸಾಧ್ಯವೇ ಇಲ್ಲ! ಆತನೂ ಕನಿಷ್ಠ ಅದಕ್ಕಿಂತ ಒಂದು-ಒಂದೂವರೆ ಸಾವಿರ ವರ್ಷ ಮುಂಚಿತವಾಗಿಯಾದರೂ ಹುಟ್ಟಿರಬೇಕು. ಇಲ್ಲವಾದಲ್ಲಿ ಮೌರ್ಯ ವಂಶದ ಅಶೋಕನಿಗೆ ಬುದ್ಧನ ಪ್ರಭಾವ ಆಗುವುದು ಹೇಗೆ ಸಾಧ್ಯವಿತ್ತು ಹೇಳಿ.
ಬುದ್ಧ ಇತಿಹಾಸದಲ್ಲಿ ಅಷ್ಟು ಹಿಂದೆ ತಳ್ಳಲ್ಪಟ್ಟರೆಂದರೆ ಇನ್ನು ಶಂಕರರ ಕತೆ ಏನಾಗಬೇಕು? ಅವರ ಕಾಲಘಟ್ಟ ಯಾವುದಿರಬೇಕು? ಪ್ರಶ್ನೆ ಹುಟ್ಟಿತು ತಾನೇ! ಪ್ರಶ್ನೆ ಇಲ್ಲಿಗೆ ನಿಲ್ಲುವ ಅಗತ್ಯವಿಲ್ಲ. ಒಂದು ಹೆಜ್ಜೆ ಮುಂದೆ ಬಂದು ಹಿಂದಿರುಗಿ ನೋಡಿ. ಇತಿಹಾಸದಲ್ಲಿ ಕಾಲಕ್ಕೆ ಅಪಚಾರ ಮಾಡಿದ ಈ ಜನ ಅಲ್ಲಿಗೇ ನಿಂತರೋ ಅಥವಾ ಮಹಾಪುರುಷರ ಬದುಕಿಗೆ ಕೈ ಹಾಕಿ ಅದನ್ನು, ಅವರ ಸಿದ್ಧಾಂತವನ್ನೂ ತಿರುಚಿಬಿಟ್ಟರೋ ಅಂತ ಒಮ್ಮೆ ಯೋಚಿಸಿ.
ಹೌದು. ಬಿಳಿಯರು ಮಾಡಿದ ಅಪಚಾರಗಳು ಸಾಕಷ್ಟಿವೆ!

Leave a Reply