ವಿಭಾಗಗಳು

ಸುದ್ದಿಪತ್ರ


 

ನಾನೆಷ್ಟು ಬೆಳೆದುಬಿಟ್ಟೆ!!

ಕಣ್ಣು ಅರಳಿಸಿದ್ದು ನೀನು,
ಮಮ್ಮು ಉಣಿಸಿದ್ದು ನೀನು
ಕಂಕುಳಲ್ಲಿಟ್ಟು ನಕ್ಷತ್ರಗಳ
ತೋರಿದವಳು ನೀನು,
ಕೈ ಹಿಡಿದು ಹೆಜ್ಜೆ ಇಡಿಸಿದ್ದು
ನೀನು, ಮಾತ್ರ ನೀನು!

ನಿನ್ನ ಸೆರಗ ತುದಿಯಲ್ಲೇ
ಜಗವ ಕಂಡ ನಾನು
ಯಾವಾಗಲೋ ಬೆಳೆದುಬಿಟ್ಟೆ

ನೀ ಅರಳಿಸಿದ ಕಣ್ಣು ಹೊಲಸ ಕಂಡಿತು
ತಿನ್ನಬಾರದ ತಿಂದೆ,
ನಕ್ಷತ್ರಗಳ ಹಿಂದೆ ಬಿದ್ದೆ
ನೀ ಹಿಡಿದ ಕೈ ಒದರಿ
ಓಡಿದೆ, ನಾನೇ ಓಡಿದೆ..

ಓಡುತ್ತಲೇ ಇದ್ದೇನೆ, ಇನ್ನೂ..
ನಿಂತು ಹಿಂದಿರುಗಿದರೆ
ಬೆಳೆದಿದ್ದಾದರೂ ಏಕೆ? ಎನಿಸುತ್ತಿದೆ..

Leave a Reply