ವಿಭಾಗಗಳು

ಸುದ್ದಿಪತ್ರ


 

ಪಕ್ಕಾ ಕಮ್ಯುನಿಸ್ಟ್ ನರೇಂದ್ರ ಮೋದಿ!

ಸಾಹಿತಿ-ಕಲಾವಿದರ ವೇಷದಲ್ಲಿರುವ ಅನೇಕರು ರಾಜಕಾರಣಿಗಳಿಂತ ಭ್ರಷ್ಟರು. ಬಡ ಸಾಹಿತಿಗಳ-ಕಲಾವಿದರ ಅವಕಾಶಗಳನ್ನು ಕಸಿದು ಮಜಾ ಉಡಾಯಿಸುವವರು. ದೆಹಲಿಯಲ್ಲಿ ಒಂದಷ್ಟು ಜನ ತಿಂಗಳಿಗೆ 20ಸಾವಿರಕ್ಕಿಂತ ಕಡಿಮೆ ದುಡಿಯುವ ಕಲಾವಿದರಿಗೆ ಮೂರು ವರ್ಷಕ್ಕೆಂದು ಕೊಡುವ ಮನೆಗಳಲ್ಲಿ ಮೂರ್ಮೂರು ದಶಕಗಳಿಂದ ವಾಸವಾಗಿದ್ದು ಮೋದಿ ಬಂದ ಮೇಲೇ ಹೊರ ಬಂದಿದ್ದು. ಕಾಂಗ್ರೆಸ್ಸು ಇವರ ವಿರುದ್ಧ ಚಕಾರ ಎತ್ತುವುದಿಲ್ಲ. ಹೀಗಾಗಿ ಆ ಸಕರ್ಾರ ಮಾಡುವ ಯಾವ ತಪ್ಪುಗಳೂ ಇವರಿಗೆ ತಪ್ಪೇ ಅಲ್ಲ! ಈ ಕೇಂದ್ರ ಸಕರ್ಾರ ಮುಲಾಜಿಲ್ಲದೇ ಅವರನ್ನೆಲ್ಲ ಹೊರದಬ್ಬಿದೆ. ಹೀಗೆ ಹೊರದಬ್ಬಿಸಿಕೊಂಡವರಲ್ಲಿ ಫೈರ್, ವಾಟರ್ ಖ್ಯಾತಿಯ ನಂದಿತಾ ದಾಸ್ರ ತಂದೆಯೂ ಇದ್ದಾರೆ ನೆನಪಿರಲಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ತೆಗೆಯಲು ಇವರಿಗೆ ಸಕರ್ಾರಿ ಸವಲತ್ತುಗಳು ಬೇರೆ ಕೇಡು. ಅದು ಕೈತಪ್ಪುವ ಭಯ ಉಂಟಾದಾಗಲೇ ಅವರು ಊಳಿಡುತ್ತರೋದು

narendramodi

ಎಂಟ್ಹತ್ತು ವರ್ಷಗಳ ಹಿಂದಿನ ಘಟನೆ. ಕಮ್ಯುನಿಸ್ಟರ ಕ್ಯಾಂಪೊಂದಕ್ಕೆ ಮಿತ್ರನೊಬ್ಬ ಎಳಕೊಂಡು ಹೋಗಿದ್ದ. ಭಾಷಣಕಾರ ತಮ್ಮ ಸಿದ್ಧಾಂತವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ. ಅವರದ್ದು ಬಲು ಸುಲಭ ಮಾರ್ಗ. ಭಾರತೀಯವಾದುದೆಲ್ಲವನ್ನೂ ಧಿಕ್ಕರಿಸಿದರಾಯ್ತು. ಅದಕ್ಕೆ ಬೇಕಾಗಿ ಜನರನ್ನು ಭಡಕಾಯಿಸಬಲ್ಲ ಸಂಗತಿಗಳನ್ನು ಎತ್ತಿ ತೋರಿಸಿದರಾಯ್ತು! ಬಡತನದ ಹೃದಯ ವಿದ್ರಾವಕ ಘಟನೆಗಳನ್ನು ವಿವರಿಸಿ ಶ್ರೀಮಂತರ ಐಶಾರಾಮಿ ಬದುಕಿನ ವಿವರಣೆ ಕೊಟ್ಟರೆ ಮುಗಿದೇ ಹೋಯ್ತು. ತಿಂದುಂಡು ಸುಖವಾಗಿರುವವನೂ ಒಮ್ಮೆ ಮೈಕೊಡವಿ ಎದ್ದು ನಿಂತು ಬಂದೂಕಿನ ಟ್ರಿಗರ್ಗೆ ಕೈ ಹಾಕುತ್ತಾನೆ. ಭಾಷಣ ಮಾಡಿದವನ ಮಕ್ಕಳೂ ವಿದೇಶದಲ್ಲಿ ಓದುತ್ತಿರೋದು ಅವನ ಕಣ್ಣಿಗೆ ಕಾಣೋದೇ ಇಲ್ಲ!

ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಕಮ್ಯುನಿಸ್ಟರ ಪರವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜನಸಾಮಾನ್ಯರ ಹಣದಲ್ಲಿ ಐಷಾರಾಮಿ ಬದುಕು ನಡೆಸುತ್ತಿದ್ದವರನ್ನು ಮೈ ಬಗ್ಗಿಸುವಂತೆ ಮಾಡಿದ್ದಾರೆ.

ನಿಮಗೆ ನೆನಪಿರಬೇಕು. ಅವರು ಅಧಿಕಾರಕ್ಕೆ ಬಂದೊಡನೆ ಮಾಡಿದ ಮೊದಲ ಕೆಲಸ, ಅನಧಿಕೃತವಾಗಿ ಸಕರ್ಾರಿ ಬಂಗಲೆಯಲ್ಲಿದ್ದ ಹಳೆಯ ಮಂತ್ರಿಗಳನ್ನು ಅಲ್ಲಿಂದ ಓಡಿಸಿದ್ದು. ಕಪಿಲ್ ಸಿಬಲ್, ಅಜಿತ್ ಸಿಂಗ್ರಂತಹ ಘಟಾನುಘಟಿಗಳೂ ಸೇರಿದಂತೆ 16 ಜನ ದೆಹಲಿಯ ಅತ್ಯಂತ ದುಬಾರಿ ಭಾಗದ ಬಂಗಲೆಗಳನ್ನು ಬಿಡಲಾಗದೆಂದು ರಚ್ಚೆ ಹಿಡಿದು ಕುಳಿತಿದ್ದರು. ಈ ಭಾಗದಲ್ಲಿ ಇಷ್ಟು ವಿಸ್ತಾರವಾದ ಬಂಗಲೆಗಳಿಗೆ ಕನಿಷ್ಟ 20 ಲಕ್ಷ ಬಾಡಿಗೆ ಪ್ರತಿ ತಿಂಗಳಿಗೂ. ನಾವು-ನೀವು ಕಟ್ಟುವ ತೆರಿಗೆಯನ್ನು ನುಂಗಿ ಅನುಭವಿಸುತ್ತಿದ್ದವರು ಇವರು. ಕಾಂಗ್ರೆಸ್ಸಿನ ಸಕರ್ಾರವಂತೂ ಇವುಗಳಲ್ಲಿ ಕೆಲವು ಬಂಗಲೆಗಳನ್ನು ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿಯರ ಹೆಸರಲ್ಲಿ ಬೇರೆ ಬೇರೆ ಕೇಂದ್ರಗಳಾಗಿ ರೂಪಿಸಿ ಶಾಶ್ವತವಾಗಿ ಕಾಂಗ್ರೆಸ್ಸಿಗರ ಕೈಲಿರುವಂತೆ ರೂಪಿಸಿಕೊಂಡುಬಿಟ್ಟಿದೆ. ತನಗೆ ಬೇಕಾದವರಿಗೆ ಸ್ಮಾರಕಗಳನ್ನು ರೂಪಿಸಿಕೊಳ್ಳಲು ಅನುಮತಿಕೊಟ್ಟು ಈ ವಿಸ್ತಾರದ ಬಂಗಲೆಗಳನ್ನು ಕಾರ್ಯಕರ್ತರ ಅಡ್ಡೆ ಮಾಡಿಬಿಟ್ಟಿದೆ. ಇವುಗಳಲ್ಲಿಯೇ ಸಾಹಿತ್ಯ- ಕಲೆಗಳಿಗೆ ಸಂಬಂಧ ಪಟ್ಟ ಚಟುವಟಿಕೆಗಳೂ ನಡೆಯುವಂತೆ ನೋಡಿಕೊಂಡು ಅನೇಕ ಬಕೆಟ್ ಸಾಹಿತಿಗಳಿಗೆ ಶಾಶ್ವತ ಆವಾಸವನ್ನೂ ಒದಗಿಸಿಕೊಟ್ಟಿದೆ.

ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿಯೇ ಇದಕ್ಕೊಂದು ಕಡಿವಾಣ ಹಾಕಲು ನಿರ್ಧರಿಸಿ ಒಂದು ತಿಂಗಳ ಗಡುವು ಕೊಟ್ಟು ಎಲ್ಲರನ್ನೂ ಹೊರದಬ್ಬಿದರು. ಅಜಿತ್ ಸಿಂಗ್ರಂತೂ ಬಂಗಲೆಯಿಂದ ಹೊರ ಹೋಗಲು ನಿರಾಕರಿಸಿ ತಗಾದೆ ತೆಗೆದರು; ತನ್ನ ತಂದೆಯ ಹೆಸರಲ್ಲಿ ಅಲ್ಲೊಂದು ಸ್ಮಾರಕ ಕಟ್ಟಲು ದುಂಬಾಲು ಬಿದ್ದರು. ಬಹುಶಃ ಮೋದಿಯವರು ಕಮ್ಯುನಿಸ್ಟರ ಭಾಷಣವನ್ನು ಕೇಳಿದಂತೆ ಕಾಣುತ್ತದೆ. ಊಹೂಂ. ಯಾರನ್ನೂ ಬಿಡಲಿಲ್ಲ. ಬಡವರ ಹಣವನ್ನು ಕೂತು ತಿನ್ನಲು ಬಿಡುವುದು ಹೇಗೆ? ಕಾಂಗ್ರೆಸ್ಸು ತೆಪ್ಪಗಾಯ್ತು. ಅವರಿಂದ ಕೃಪೆಗೆ ಪಾತ್ರರಾಗಿದ್ದ ಸಾಹಿತಿ- ಕವಿ- ಕಲೆಗಾರರದ್ದೆಲ್ಲಾ ಹೊಟ್ಟೆ ತೊಳಿಸಿದಂತಾಯ್ತು!

ಹಳೆದನ್ನು ಬಿಡಿ. ಇತ್ತೀಚೆಗೆ ಫಿಲ್ಮ್ ಅಂಡ್ ಟೆಲಿವಿಶನ್ ಇಂಡಿಯಾ ಎಂಬ ಸಕರ್ಾರಿ ಸಂಸ್ಥೆ ಮುಖ್ಯಸ್ಥರ ಆಯ್ಕೆಯ ವಿಚಾರದಲ್ಲಿ ರಂಪಾಟ ನಡೆದದ್ದು ನೆನಪಿದೆಯಾ? ಬಿ. ಆರ್. ಚೋಪ್ರಾರ ಮಹಾಭಾರತದ ಯುಧಿಷ್ಠಿರನ ಪಾತ್ರ ನಿರ್ವಹಿಸಿದ ಗಜೇಂದ್ರ ಚೌಹಾನರನ್ನು ಸಕರ್ಾರ ಆಯ್ಕೆ ಮಾಡಿತು. ತಿಂದು-ಕೊಬ್ಬಿದ ಸಾಹಿತಿಗಳು, ಕಲಾಕಾರರೆಲ್ಲಾ ತಿರುಗಿ ಬಿದ್ದರು. ಈ ಸಂಸ್ಥೆ ನಡೆಯೋದು ಅಕ್ಷರಶಃ ತೆರಿಗೆಯ ಹಣದಲ್ಲಿಯೇ. ಪ್ರತಿವರ್ಷ ವಿದ್ಯಾಥರ್ಿಗಳಿಗೆ ನಿದರ್ೇಶಕನಾಗುವ, ಕಥೆ- ಚಿತ್ರಕತೆ ಬರೆಯುವ, ತಂತ್ರಜ್ಞನಾಗುವ ತರಬೇತಿ ಕೊಡಲಾಗುತ್ತದೆ. ಇಲ್ಲಿಗೆ ಅತಿಥಿ ಉಪನ್ಯಾಸಕರಾಗಿ ಬರುವ ಭೂಪರಂತೂ, ದೇಶದ ಪರಂಪರೆಯನ್ನೂ, ಹಿಂದೂ ಚಿಂತನೆಗಳನ್ನೂ ಧಿಕ್ಕರಿಸುವವರೇ. ಇವರಿಂದ ಶಿಕ್ಷಿತರಾದ ಮುಂದಿನ ಪೀಳಿಗೆಯೂ ಇಂತಹುದೇ. ಹೀಗಾಗಿಯೇ ಈ ಸಕರ್ಾರ ಸ್ವಚ್ಛತೆಗೆ ಆದ್ಯತೆ ಕೊಟ್ಟಿತು. ತನ್ನೆದುರು ಇದ್ದ ಎಲ್ಲಾ ಖ್ಯಾತನಾಮರನ್ನೂ ಬದಿಗೆ ಸರಿಸಿ ಕೇಂದ್ರದ ಮುಖ್ಯಸ್ಥರಾಗಿ ಸಮಯಕೊಟ್ಟು ಹಳಿಗೆ ರೈಲು ತರಬಲ್ಲವರನ್ನು ಆಯ್ಕೆ ಮಾಡಿತು!

ಈ ವಾಸನೆ ಬಂದೊಡನೆ ಬಕೆಟ್ ಹಿಡಿದು ಪ್ರಶಸ್ತಿ ಗಿಟ್ಟಿಸಿಕೊಂಡ, ಅಧಿಕಾರ ಪಡಕೊಂಡ ಅನೇಕರ ಎದೆ ಢವಗುಟ್ಟಲಾರಂಭಿಸಿತು. ಮುಂದಿನ ದಿನಗಳು ಕರಾಳವಾಗಲಿರುವುದು ಅವರಿಗೆ ಬೆಳಕಿನಷ್ಟೇ ನಿಚ್ಚಳವಾಯ್ತು. ವಿದ್ಯಾಥರ್ಿಗಳ ಮೂಲಕ ಪ್ರತಿಭಟನೆ ಮಾಡಿಸಿದರು. ಮೊದಲೇ ನಾಟಕದ ಜನ; ಎಲ್ಲ ಬಗೆಯ ಮಾರ್ಗಗಳನ್ನೂ ಬಳಸಿ ಸೋತರು. ಪ್ರಧಾನ ಮಂತ್ರಿ ಕ್ಯಾರೆ ಎನ್ನಲಿಲ್ಲ. ಬಡವರ ಹಣವನ್ನು ಪೋಲು ಮಾಡಬಾರದೆಂಬ ಕಮ್ಯುನಿಸ್ಟ್ ಭಾಷಣಕಾರರ ಖ್ಯಾತ ಸಿದ್ಧಾಂತವನ್ನು ಎತ್ತಿ ಹಿಡಿದು ನಡೆದರು. ಪಾಪ! ಈ ಸಿದ್ಧಾಂತವನ್ನು ಹೇಳಿಕೊಂಡು ಬದುಕಿದ್ದ ಎಡಪಂಥೀಯ ಸಾಹಿತಿಗಳು ತೆಪ್ಪಗಾದರು.
ಅವರ ಎದೆಯೊಳಗಿನ ಉರಿ ಇನ್ನೂ ಆರಿರಲಿಲ್ಲ. ಸ್ವಾತಂತ್ರ್ಯಕ್ಕೂ ಮುಂಚೆ ಇಳಿಬಿಟ್ಟಿದ್ದ ಬೇರು ಅದು. ಅಷ್ಟು ಸುಲಭವಾಗಿ ನಾಶವಾಗಲಾರದು. ಅವಕಾಶಕ್ಕಾಗಿ ಕಾಯುತ್ತಿದ್ದರು. ಸರಿಯಾಗಿ ಕಲ್ಬುಗರ್ಿಯವರ ಹತ್ಯೆಯಾಯ್ತು. ಇಲ್ಲಿ ಸಕರ್ಾರ ಕಾಂಗ್ರೆಸ್ಸಿನದಿತ್ತು. ಹಾಗಾಗಿ ವಿರೋಧಿಸಲು ಸೂಕ್ತ ವೇದಿಕೆ ದಕ್ಕಲಿಲ್ಲ. ಅತ್ತ ದಾದ್ರಿಯಲ್ಲಿ ದನದ ಮಾಂಸದ ಹೆಸರಲ್ಲಿ ನಡೆದ ಹತ್ಯೆ ಇವರಿಗೆ ಜೀವ ತುಂಬಿಬಿಟ್ಟಿತು. ಮೋದಿಯವರು ಅಧಿಕಾರ ಸ್ವೀಕರಿಸಿದ ಮೇಲೆಯೇ ನಡೆದಿರುವ ಘಟನೆಗಳೆಂಬಂತೆ ಇವುಗಳನ್ನು ಬಿಂಬಿಸಲಾಯ್ತು. ಅವರು ಖುದ್ದು ಹೇಳಿಕೆ ಕೊಡಬೇಕೆಂಬ ಒತ್ತಾಯ ಮಾಧ್ಯಮದ ಆಸ್ಥಾನ ನರ್ತಕ, ನರ್ತಕಿಯರು ಮಾಡಲಾರಂಭಿಸಿದರು. ಒಮ್ಮೆ ಅವರು ಹೇಳಿಕೆಗೆ ಸಿಕ್ಕರೆ ಅದನ್ನು ತಿರುಚಿ-ಮುರುಚಿ ಬಿಹಾರ ಚುನಾವಣೆಗೆ ಭಂಗ ತರುವ ಪ್ರಯತ್ನವಿತ್ತು. ಇಂತಹ ಅನೇಕ ಬಂಡುಕೋರರನ್ನು ನುಂಗಿ ನೀರುಕುಡಿದಿರುವ ಪುಣ್ಯಾತ್ಮ ಆತ. ತಲೆ ಕೆಡಿಸಿಕೊಳ್ಳಲೇ ಇಲ್ಲ.
ಆಗ ಶುರುವಾಯ್ತು ಪ್ರಶಸ್ತಿ ಮರಳಿ ಕೊಡುವ ಮೆರವಣಿಗೆ. ಕಮ್ಯುನಿಸ್ಟ್ ಪಾಟರ್ಿಯೊಂದಿಗಿನ ನಂಟಿನಿಂದಾಗಿ ಜೈಲಿಗೆ ಹೋಗಿ ಬಂದ ಹಿಂದಿ ಸಾಹಿತಿ ಉದಯ್ ಪ್ರಕಾಶ್ ಇದರ ನೇತೃತ್ವ ವಹಿಸಿದರು. ಆಮೇಲೆ ಒಬ್ಬರಾದ ಮೇಲೊಬ್ಬರು ಪ್ರಶಸ್ತಿ ಹಿಂದಿರುಗಿಸುತ್ತೇವೆಂದರು. ಕೆಲವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರು. ಪ್ರಶಸ್ತಿಯನ್ನಾಗಲೀ, ಹಣವನ್ನಾಗಲೀ ಹಿಂದಿರುಗಿಸಲೇ ಇಲ್ಲ! ಒಟ್ಟಾರೆ ಇದುವರೆಗೂ 25 ಜನ ಪ್ರಶಸ್ತಿ ಹಿಂದಿರುಗಿಸಿರಬಹುದು. ಅವರಲ್ಲೂ ಬಹುತೇಕರು ಪ್ರಶಸ್ತಿಯ ನೆಪದಲ್ಲಿ ಸಾಕಷ್ಟು ಸವಲತ್ತುಗಳನ್ನು ಸಕರ್ಾರದಿಂದ ಅನುಭವಿಸಿದವರು. ಅನೇಕ ಲಾಬಿಗಳಲ್ಲಿ ತೊಡಗಿಕೊಂಡವರು. ಈ ನೆಪದಿಂದ ವಿಶ್ವವಿದ್ಯಾಲಯದ ಸೆಮಿನಾರುಗಳಲ್ಲಿ ಭಾಗವಹಿಸಿ ದುಡ್ಡು ಮಾಡಿಕೊಂಡವರು. ಈಗ ಇವಕ್ಕೆಲ್ಲ ಕಡಿವಾಣ ಬೀಳುತ್ತಿರುವ ಪ್ರಸಂಗ ಬಂದೊಡನೆ ಬೊಬ್ಬೆ ಶುರುವಾಗಿದೆ. ಕೇಂದ್ರ ಸಕರ್ಾರ ಎಲ್ಲಾ ಆಯಕಟ್ಟಿನ ಜಾಗಗಳಲ್ಲಿ ಕುಳಿತಿದ್ದ ಎಡಪಂಥೀಯರನ್ನು ತೆಗೆದು ಒಗೆಯುತ್ತಿದೆ. ಭವಿಷ್ಯದ ಪೀಳಿಗೆಯ ತಲೆಯಲ್ಲಿ ವಿಷ ತುಂಬುವ ಕಾಯಕದಲ್ಲಿದ್ದ ಈ ಬುದ್ಧಿ ಜೀವಿಗಳಿಗೆ ಇನ್ನು ಬೇಳೆ ಬೇಯಲಾರದೆಂದು ಗೊತ್ತಾದ ಮೇಲೆಯೇ ಈ ಹೊಸ ಪ್ರಯೋಗ ಶುರುವಾಗಿದ್ದು.
ಇಲ್ಲವಾದಲ್ಲಿ ಮನಮೋಹನ್ ಸಿಂಗ್ರ ಕಾಲದಲ್ಲಿ, ಆಂಧ್ರದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯಿತಲ್ಲ, ಆಗ ಇವರುಗಳ ಮನಸ್ಸೇಕೆ ಕರಗಲಿಲ್ಲ! ಮುಂಬೈನಲ್ಲಿ ಭಯೋತ್ಪಾದಕರು ದಾಳಿ ಮಾಡಿ ಅಮಾಯಕರ ಕಗ್ಗೊಲೆ ನಡೆಸಿದಾಗ ಆಂತರಿಕ ಭದ್ರತೆ ನೀಡುವಲ್ಲಿ ಸೋತ ಸಕರ್ಾರವೆಂದೇಕೆ ಇವರು ಪ್ರತಿಭಟಿಸಲಿಲ್ಲ? ಓವೈಸಿ ‘ಹದಿನೈದು ನಿಮಿಷ’ದ ಪ್ರಖ್ಯಾತ ಹೇಳಿಕೆ ನೀಡಿದಾಗ ಸದ್ದು ಹೊರಡಲಿಲ್ಲವೇಕೆ? ಬೆನ್ನಿಹಿನ್ ಲಕ್ಷಾಂತರ ಜನರಿಗೆ ಮೋಸಮಾಡಿ ಕೋಟ್ಯಂತರ ರೂಪಾಯಿಯೊಂದಿಗೆ ಪರಾರಿಯಾದಾಗಲೂ ಸಾಹಿತಿಗಳಿಗೆ ನ್ಯಾಯದ ಕುರಿತು ಪ್ರಶ್ನೆ ಎತ್ತಬೇಕೆನ್ನಿಸಲಿಲ್ಲ. ಅದೂ ಬಿಡಿ. ಇಂದಿರಾಗಾಂಧಿಯ ಹತ್ಯೆಯ ನೆಪದಲ್ಲಿ ಸಿಖ್ಖರ ಮಾರಣ ಹೋಮವಾದಾಗ ಪ್ರತಿಭಟನೆ ಮಾಡಬೇಕು ಅಂತ ಯಾರಿಗೂ ಅನ್ನಿಸಲೇ ಇಲ್ಲ. ಹೋಗಲಿ. ಕಾಶ್ಮೀರದಿಂದ ಪಂಡಿತರನ್ನು ಹೊಡೆದಟ್ಟಿದರಲ್ಲ ಅವತ್ತಾದರೂ..
ಸಾಹಿತಿ-ಕಲಾವಿದರ ವೇಷದಲ್ಲಿರುವ ಅನೇಕರು ರಾಜಕಾರಣಿಗಳಿಂತ ಭ್ರಷ್ಟರು. ಬಡ ಸಾಹಿತಿಗಳ-ಕಲಾವಿದರ ಅವಕಾಶಗಳನ್ನು ಕಸಿದು ಮಜಾ ಉಡಾಯಿಸುವವರು. ದೆಹಲಿಯಲ್ಲಿ ಒಂದಷ್ಟು ಜನ ತಿಂಗಳಿಗೆ 20ಸಾವಿರಕ್ಕಿಂತ ಕಡಿಮೆ ದುಡಿಯುವ ಕಲಾವಿದರಿಗೆ ಮೂರು ವರ್ಷಕ್ಕೆಂದು ಕೊಡುವ ಮನೆಗಳಲ್ಲಿ ಮೂರ್ಮೂರು ದಶಕಗಳಿಂದ ವಾಸವಾಗಿದ್ದು ಮೋದಿ ಬಂದ ಮೇಲೇ ಹೊರ ಬಂದಿದ್ದು. ಕಾಂಗ್ರೆಸ್ಸು ಇವರ ವಿರುದ್ಧ ಚಕಾರ ಎತ್ತುವುದಿಲ್ಲ. ಹೀಗಾಗಿ ಆ ಸಕರ್ಾರ ಮಾಡುವ ಯಾವ ತಪ್ಪುಗಳೂ ಇವರಿಗೆ ತಪ್ಪೇ ಅಲ್ಲ! ಈ ಕೇಂದ್ರ ಸಕರ್ಾರ ಮುಲಾಜಿಲ್ಲದೇ ಅವರನ್ನೆಲ್ಲ ಹೊರದಬ್ಬಿದೆ. ಹೀಗೆ ಹೊರದಬ್ಬಿಸಿಕೊಂಡವರಲ್ಲಿ ಫೈರ್, ವಾಟರ್ ಖ್ಯಾತಿಯ ನಂದಿತಾ ದಾಸ್ರ ತಂದೆಯೂ ಇದ್ದಾರೆ ನೆನಪಿರಲಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ತೆಗೆಯಲು ಇವರಿಗೆ ಸಕರ್ಾರಿ ಸವಲತ್ತುಗಳು ಬೇರೆ ಕೇಡು. ಅದು ಕೈತಪ್ಪುವ ಭಯ ಉಂಟಾದಾಗಲೇ ಅವರು ಊಳಿಡುತ್ತರೋದು
ಈ ಪ್ರಶಸ್ತಿ ಮರಳಿಸುವ ಮೆರವಣಿಗೆ ಇದೆಯಲ್ಲ, ಇದು ಮೋದಿಯವರನ್ನು ಅಧೀರರಾಗಿಸಬೇಕೆಂದೇ ನಡೆಯುತ್ತಿರೋದು. ಆ ಮೂಲಕ ಅನ್ನಕೊಟ್ಟ, ಪ್ರಶಸ್ತಿ ಕೊಟ್ಟ ಕಾಂಗ್ರೆಸ್ಸಿನ ನಾಶ ತಡೆಯಬೇಕು ಅಂತ. ಆದರೆ ಮೋದಿ ಯಾವುದಕ್ಕೂ ಸೊಪ್ಪು ಹಾಕುವವರಲ್ಲ. ಈ ನಡುವೆಯೇ ಅವರು ಸುಭಾಷ್ ಚಂದ್ರ ಬೋಸರ ಮನೆಯವರನ್ನು ಕರೆದು ಜನವರಿ 23ರಿಂದ ಮುಚ್ಚಿಟ್ಟ ಕಡತ ಹೊರಗಿಡುವ ಕೆಲಸ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ. ಅದಾದೊಡನೆ ಕಾಂಗ್ರೆಸ್ಸು ಅಂಡುಸುಟ್ಟ ಬೆಕ್ಕಿನಂತಾಗಿ ಸಾಹಿತಿಗಳಿಗೆ ಇನ್ನೂ ಕಿರಿಕಿರಿ ಮಾಡದಿರುವಂತೆ ತಾಕೀತು ಮಾಡಿದೆ. ಆರಂಭದಲ್ಲಿಯೇ ಮೋದಿ ಹೇಳಿದ್ದರಲ್ಲ, ‘ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ’
ಹಹ್ಹ! ಮೋದಿಯನ್ನು ಅಲುಗಾಡಿಸುವುದು ಅಷ್ಟು ಸುಲಭದ ಮಾತಲ್ಲ; ಏಕೆಂದರೆ ಆತ ಬಡವರ ಹಣ ತಿಂದು ಕೊಬ್ಬಿರುವವರನ್ನು ಕಕ್ಕಿಸಲೆಂದೇ ಬಂದವ! ಪಕ್ಕಾ ಕಮ್ಯೂನಿಸ್ಟು!!

1 Response to ಪಕ್ಕಾ ಕಮ್ಯುನಿಸ್ಟ್ ನರೇಂದ್ರ ಮೋದಿ!

  1. Sampath

    Wonderful writing sir really we don’t know some hidden truths

Leave a Reply