ವಿಭಾಗಗಳು

ಸುದ್ದಿಪತ್ರ


 

ಪಶ್ಚಿಮದ ಧೀ ಪ್ರಚೋದನೆಗೆ ನೂರಿಪ್ಪತ್ತೈದು ವರ್ಷ!

ವಿವೇಕಾನಂದರ ನೂರೈವತ್ತನೇ ಜಯಂತಿಯ ವೇಳೆಗೆ ಈ ಎಲ್ಲವನ್ನೂ ಜಗತ್ತಿಗೆ ಮುಟ್ಟಿಸುವಲ್ಲಿ ನಮಗೊಂದು ಅವಕಾಶವಿತ್ತು. ನಾವು ಕಳಕೊಂಡೆವು. ಭಾರತದ ಪ್ರಭಾವ ಪಶ್ಚಿಮವನ್ನೇ ಬದಲಾಯಿಸಿದೆ ಎಂದು ಸಾಬೀತು ಪಡಿಸುವ ಅವಕಾಶವಾಗಿತ್ತು ಅದು. ಕೈಚೆಲ್ಲಿಬಿಟ್ಟೆವು. ಹಾಗಂತ ಅನ್ಯಾಯವಾಗಿಲ್ಲ. ಅವರ ಚಿಕಾಗೋ ಭಾಷಣಕ್ಕೆ ನೂರಿಪ್ಪತ್ತೈದು ತುಂಬಿದೆ. ಹಾಗೆ ನೋಡಿದರೆ 1893 ಭಾರತದ ಪಾಲಿಗೆ ಬಲು ಮಹತ್ವದ ವರ್ಷ. ತಿಲಕರು ಗಣೇಶೋತ್ಸವಕ್ಕೆ ಸಾರ್ವಜನಿಕ ರೂಪ ಕೊಟ್ಟಿದ್ದು, ಅರವಿಂದರು ಬ್ರಿಟೀಷರ ಚಾಕರಿಯನ್ನು ಧಿಕ್ಕರಿಸಿ ಭಾರತಕ್ಕೆ ಮರಳಿದ್ದೂ ಅದೇ ವರ್ಷವೇ. ಚಿಕಾಗೋದಲ್ಲಿ ವಿವೇಕಾನಂದರ ಪ್ರಖ್ಯಾತ ಭಾಷಣ ನಡೆದದ್ದೂ ಅದೇ ವರ್ಷದ ಸೆಪ್ಟೆಂಬರ್ ಹನ್ನೊಂದಕ್ಕೆ.

ನೂರಿಪ್ಪತ್ತೈದು ವರ್ಷಗಳ ಹಿಂದೆ ಒಮ್ಮೆ ಟೈಮ್ ಮೆಶಿನ್ನ ಮೂಲಕ ಯಾತ್ರೆ ಹೋಗಿ ಬನ್ನಿ. ಭಾರತದಲ್ಲಿ ಕಿತ್ತು ತಿನ್ನುವ ಬಡತನ, ಪ್ರಾಚೀನವಾದುದನ್ನೆಲ್ಲ ಧಿಕ್ಕರಿಸುವ ಅಜ್ಞಾನ, ಸ್ವಂತಿಕೆಯನ್ನೆಲ್ಲ ಅಡವಿಟ್ಟು ಬ್ರಿಟೀಷರ ಬೂಟು ನೆಕ್ಕುವ ಇಲ್ಲಿನ ತಾರುಣ್ಯ. ಸಕರ್ಾರಿ ನೌಕರಿ ಸಿಕ್ಕರೆ ಜೀವನ ಪಾವನವೆಂದು ಭಾವಿಸುವ ಭವಿಷ್ಯದ ಪೀಳಿಗೆ ಸೃಷ್ಟಿಸುವ ಶಿಕ್ಷಣ, ಜಾತಿ-ಮತಗಳನ್ನೇ ವೈಭವೀಕರಿಸಿ ತನ್ನವರನ್ನೂ ದೂರ ತಳ್ಳುವ ಧರ್ಮ, ಎಲ್ಲಕ್ಕೂ ಮಿಗಿಲಾಗಿ ಭಾರತೀಯತೆಯ ನಾಮ ಮಾತ್ರದಿಂದಲೂ ಹೇಸಿಗೆ ಪಡುವ ಜಗತ್ತಿನ ರಾಷ್ಟ್ರಗಳು. ಇವೆಲ್ಲವೂ ಹಾಸುಹೊಕ್ಕಾಗಿದ್ದ ಕಾಲ ಅದು. ಎಡವಿದರೆ ಕಾಲಿಗೆ ಸುತ್ತಿಕೊಳ್ಳುತ್ತಿದ್ದುದು ಭಾರತದ ಅವಗುಣಗಳೇ. ಆಳುವ ವರ್ಗ ನಮ್ಮನ್ನು ಕೆಲಸಕ್ಕೆ ಬಾರದ ಸಂಸ್ಕೃತಿಗೆ ಸೇರಿದವರೆಂದು ನಂಬಿಸಿಬಿಟ್ಟಿತ್ತು. ನಾವೂ ಒಪ್ಪಿಕೊಂಡು ಜೀವನವನ್ನು ಹಾಗೆಯೇ ಕಳೆದುಬಿಡುವ ಧಾವಂತದಲ್ಲಿದ್ದೆವು. ಹೇಗೆ ಅಮೇರಿಕಾ, ಆಸ್ಟ್ರೇಲಿಯಾಗಳು ಸ್ವತಂತ್ರವೆನಿಸಿದರೂ ಬಿಳಿಯರ ಸ್ವತ್ತಾಗಿಯೇ ಉಳಿದುಬಿಟ್ಟವೋ ಹಾಗೆಯೇ ಭಾರತವೂ ಅಧೀನ ರಾಷ್ಟ್ರವಾಗಿಯೇ ಉಳಿದುಬಿಡುತ್ತಿತ್ತು. ಎಲ್ಲೆಲ್ಲೂ ಬಿಳಿಯರದ್ದೇ ಸಮ್ರಾಜ್ಯ. ನಮ್ಮ ನಾಡಿನಲ್ಲಿ ನಮಗೇ ಭಿಕ್ಷೆ ಕೊಡುವ ಔದಾರ್ಯವುಳ್ಳ ಬಿಳಿಯರಿಂದ ತುಂಬಿದ ಇಂಡಿಯಾ!

ಒಬ್ಬ ವಿವೇಕಾನಂದ ಎಲ್ಲದರ ಗತಿ, ದಿಕ್ಕು ಬದಲಾಯಿಸಿಬಿಟ್ಟ. 1893 ರಲ್ಲಿ ಚಿಕಾಗೋ ಸರ್ವಧರ್ಮ ಸಮ್ಮೇಳನಕ್ಕೆ ಅವರೊಬ್ಬರು ಹೋಗಿರಲಿಲ್ಲವೆಂದರೆ ಕಥೆಯೇ ಬೇರೆಯಾಗಿರುತ್ತಿತ್ತು. ಅವರಿಗಿಂತ ಸುಂದರವಾಗಿ, ಸುದೀರ್ಘವಾಗಿ ವಿಷಯ ಮಂಡಿಸಿದವರಿದ್ದರು. ಕೆಲವರಿಗೆ ಜನಸ್ತೋಮದ ಪ್ರತಿಕ್ರಿಯೆಯೂ ಜೋರಾಗಿತ್ತು. ಆದರೆ ನೆನಪಿನಲ್ಲುಳಿದಿದ್ದು ವಿವೇಕಾನಂದರು ಮಾತ್ರ. ಇತ್ತೀಚೆಗೆ ಬಳ್ಳಾರಿಯ ಭೂಪನೊಬ್ಬ ಸಾಕಷ್ಟು ಸಂಶೋಧನೆ ನಡೆಸಿ ರಾಮಕೃಷ್ಣ ಆಶ್ರಮದವರು ಪ್ರಚಾರ ಮಾಡದಿದ್ದರೆ ವಿವೇಕಾನಂದರು ಇಷ್ಟು ಪ್ರಸಿದ್ಧಿಗೇ ಬರುತ್ತಿರಲಿಲ್ಲ ಎಂದು ಹೇಳುವ ಪ್ರಯತ್ನ ನಡೆಸಿದ್ದಾನೆ. ಆದರೆ ವಿವೇಕಾನಂದರು ಭಾಷಣ ಮಾಡಿದ ವೇದಿಕೆಯಲ್ಲಿಯೇ ಬ್ರಹ್ಮಸಮಾಜದ ಧುರೀಣರಿದ್ದರು, ಅನಿಬೆಸೆಂಟರಿದ್ದರು. ಕ್ರಿಶ್ಚಿಯನ್ ಮತ ಪ್ರಚಾರಕರಿದ್ದರು. ಅಂದಿನ ದಿನಗಳಲ್ಲಿ ಇವರೆಲ್ಲ ಬಲವಾದ ಸಂಘಟನೆಗೆ ಸೇರಿದವರು. ರಾಮಕೃಷ್ಣ ಆಶ್ರಮ ಶುರುವೂ ಆಗಿರಲಿಲ್ಲ. ಹಾಗೆ ಸುಮ್ಮನೆ ಒಮ್ಮೆ ಯೋಚನೆ ಮಾಡಿ. ಅಕಸ್ಮಾತ್ ವಿವೇಕಾನಂದರು ಅಂದಿನ ಕಾರ್ಯಕ್ರಮದಲ್ಲಿ ಸುದ್ದಿಯಾಗಿರದೇ ಹೋಗಿದ್ದರೆ ಇಂದು ಅವರ ಚಚರ್ೆಯೂ ಆಗುತ್ತಿರಲಿಲ್ಲ. ಹಾಗೆಂದೇ ಅವರು ಸ್ಪಷ್ಟವಾಗಿ ಸಮ್ಮೇಳನಕ್ಕೂ ಬಲು ಮುನ್ನವೇ ‘ಅಲ್ಲಿ ನಡೆಯುತ್ತಿರುವುದೆಲ್ಲ ನನಗಾಗಿ’ ಎಂದೇ ಹೇಳಿದ್ದರು. ರಾಮಕೃಷ್ಣರೂ ತಮ್ಮ ದೇಹತ್ಯಾಗಕ್ಕೂ ಮುನ್ನ, ‘ನರೇನ್ ಜಗತ್ತಿಗೆ ಶಿಕ್ಷಣ ಕೊಡುತ್ತಾನೆ’ ಎಂದಿದ್ದರು. ಹಾಗೆಯೇ ಆಯಿತು. ಇಂದಿಗೂ ಅಮೇರಿಕಾ ತನ್ನ ವೈಭವವನ್ನು ಜಗತ್ತಿನೆದುರು ಅನಾವರಣಗೊಳಿಸಲು ಏರ್ಪಡಿಸಿದ್ದ ಒಟ್ಟಾರೆ ಪ್ರದಶರ್ಿನಿಯಲ್ಲಿ ನೆನಪಿರೋದು ಸರ್ವಧರ್ಮ ಸಮ್ಮೇಳನದ ವಿವೇಕಾನಂದರ ಭಾಷಣ ಮಾತ್ರ. ಇವೆಲ್ಲವೂ ದೈವೀ ರೂಪಕವೆನ್ನುವುದಕ್ಕೆ ಮತ್ತೇನು ನಿದರ್ಶನಗಳು ಬೇಕು ಹೇಳೀ?

8

ಹಾಗಂತ ಸ್ವಾಮೀ ವಿವೇಕಾನಂದರನ್ನು ಬರಿಯ ಆಧ್ಯಾತ್ಮ ದೃಷ್ಟಿಯಿಂದಷ್ಟೇ ನೋಡಬೇಕಂತಿಲ್ಲ. ಅವರು ಹಾಗೊಬ್ಬ ಕಣ್ಣಿಗೆ ಕಾಣದ್ದನ್ನು ಹೇಳುವ ಸಾಧು ಬಾಬಾ ಆಗಿದ್ದರೆ ಅವರನ್ನು ಪಶ್ಚಿಮ ಸುಲಭಕ್ಕೆ ಒಪ್ಪಿಕೊಳ್ಳುತ್ತಿರಲೂ ಇಲ್ಲ. ಆಗಿನ ದಿನಗಳಲ್ಲಿ ಅಮೇರಿಕಾದಲ್ಲಿ ಭೌತಿಕ ವಿಜ್ಞಾನದ ಕುರಿತಂತೆ ಬಲುವಾದ ಆಸಕ್ತಿ ಹೊಂದಿದ್ದರೆ ಇಂಗ್ಲೆಂಡು ಮಾನಸಿಕ ಸ್ತರಗಳ ಅಧ್ಯಯನದ ಹಿಂದೆ ಬಿದ್ದಿತ್ತು. ವಿವೇಕಾನಂದರು ಎಲ್ಲರಿಗೂ ಬೇಕಾದ ಸರಕನ್ನು ತಮ್ಮೊಳಗೆ ಅಡಗಿಸಿಟ್ಟುಕೊಂಡಿದ್ದರು. ಅಮೇರಿಕಾದಲ್ಲಿ ಅವರು ನಿಕೋಲಾ ಟೆಸ್ಲಾರಂತಹ ಭೌತ ವಿಜ್ಞಾನಿಗಳಿಗೆ ವೇದಾಂತದ ಸಾರವನ್ನು ತಿಳಿಹೇಳಿ ಅದನ್ನು ವಿಶ್ವಪ್ರಜ್ಞೆಯ ಸ್ತರಕ್ಕೇರಿಸುವ ಪ್ರೇರಣೆ ಕೊಟ್ಟರು. ಟೆಸ್ಲಾನ ಆಲೋಚನಾ ವಿಧಾನವೇ ಬದಲಾಯ್ತು. ಆತ ಸಾಂಖ್ಯಯೋಗದಲ್ಲಿನ ಪದಪ್ರಯೋಗಗಳನ್ನೇ ಬಳಸುವಷ್ಟರ ಮಟ್ಟಿಗೆ ಪ್ರಭಾವಿತನಾಗಿದ್ದ. 1895 ರಲ್ಲಿ ತಮ್ಮ ಇಂಗ್ಲೀಷ್ ಮಿತ್ರರೊಬ್ಬರಿಗೆ ಬರೆದ ಪತ್ರದಲ್ಲಿ ವಿವೇಕಾನಂದರು, ‘ಟೆಸ್ಲಾ ಶಕ್ತಿಯನ್ನು, ದ್ರವ್ಯರಾಶಿಯನ್ನು ಪೂರಕವೆಂದು ಗಣಿತೀಯವಾಗಿ ತೋರಿಸಬಲ್ಲೆನೆಂದಿದ್ದಾನೆ. ಹಾಗಾದರೆ ವೇದಾಂತದ ವೈಶ್ವಿಕತೆಗೆ ಬಲವಾದ ಅಡಿಪಾಯವೇ ದೊರೆತಂತಾಗುತ್ತದೆ.’ ಎಂದಿದ್ದರು. ಟೆಸ್ಲಾ ಅದನ್ನು ಸಾಬೀತುಪಡಿಸುವಲ್ಲಿ ಸೋತ ಆದರೆ ಮುಂದೆ ಐನ್ಸ್ಟೀನ್ ಯಶಸ್ವಿಯಾದ. ಟೆಸ್ಲಾ ಮೂಲಕ ಮುಂದಿನ ದಿನಗಳಲ್ಲಿ ಈ ಪ್ರಭಾವ ರಸಾಯನ ಶಾಸ್ತ್ರದಲ್ಲಿ ನೋಬೆಲ್ ಪಡೆದ ಇಲ್ಯಾ ಪ್ರಿಗಾಗಿನ್, ಇವರ್ಿನ್ ಲಾಜ್ಲೋ, ರುಡಾಲ್ಫ್ ಸ್ಟೀನರ್ ಮತ್ತು ಡೇವಿಡ್ ಬೋಹೆಮ್ ಮೇಲಾಯಿತೆನ್ನುತ್ತಾರೆ ರಾಜೀವ್ ಮಲ್ಹೋತ್ರಾ. ಅದೇ ವರ್ಷ ಸ್ವಾಮೀಜಿ ನ್ಯೂಯಾಕರ್್ ಮೆಡಿಕಲ್ ಟೈಮ್ಸ್ಗೆ ಬರೆದ ಈಥರ್ನ ಸಿದ್ಧಾಂತವನ್ನು ಧಿಕ್ಕರಿಸಿ ಬರೆದ ಲೇಖನ ಬೆಳಕು ಕಂಡಿತ್ತು. ಈ ಲೇಖನಕ್ಕೆ ಬೆಲೆ ಬಂದದ್ದು ಐನ್ಸ್ಟೀನ್ ಅದನ್ನು ಪ್ರತಿಪಾದಿಸಿದ ನಂತರವೇ. ಸ್ವಾಮೀ ವಿವೇಕಾನಂದರ ಈ ಅಂತದರ್ೃಷ್ಟಿಯ ಕುರಿತಂತೆ ಸದ್ಯ ಕೇಂದ್ರ ಸಕರ್ಾರದ ವೈಜ್ಞಾನಿಕ ಸಲಹೆಗಾರರಾಗಿರುವ ಟಿ.ಜಿ.ಕೆ ಮೂತರ್ಿಯವರು ವಿಸ್ತಾರವಾದ ಕೃತಿ ಬರೆದಿದ್ದಾರೆ.

ವಿವೇಕಾನಂದರು ರಾಜಯೋಗವನ್ನು ವೈಜ್ಞಾನಿಕವಾಗಿ ಮುಂದಿರಿಸಿದ ನಂತರ ಅಮೇರಿಕಾದ ತತ್ವಶಾಸ್ತ್ರದ ಚಿಂತನಾಶೈಲಿಯಲ್ಲಿಯೂ ಅನೂಹ್ಯವಾದ ಬದಲಾವಣೆ ಬಂದಿತ್ತು. ಪಶ್ಚಿಮದ್ದಲ್ಲದ ಮತ-ಪಂಥಗಳನ್ನು ಬಾಲಿಶವೆಂದೂ, ಅಜ್ಞಾನವೆಂದೂ, ಪ್ರಯೋಜನಕ್ಕೆ ಬಾರದ್ದೆಂದೂ ಬದಿಗೆ ಸರಿಸುವ ಪ್ರವೃತ್ತಿಯಂತೂ ದೂರವಾಯಿತು. ನೂರಾರು ಚಿಂತಕರು ಭಾರತೀಯ ತತ್ವಜ್ಞಾನದ ಆಳಕ್ಕಿಳಿಯಲು ಶುರುಮಾಡಿದರು. ಹಾರ್ವಡರ್್ನ ಖ್ಯಾತ ತತ್ವ ಶಾಸ್ತ್ರಜ್ಞ ವಿಲಿಯಮ್ ಜೇಮ್ಸ್ ತನ್ನ ತತ್ವಶಾಸ್ತ್ರದ ಚಿಂತನೆಗಳ ಮೇಲೆ ವಿವೇಕಾನಂದರ ಪ್ರಭಾವ ಬಲು ಜೋರಾಗಿರುವುದನ್ನು ಒಪ್ಪಿಕೊಂಡಿದ್ದ. ಅವರನ್ನು ವಿಶ್ವವಿದ್ಯಾಲಯಕ್ಕೆ ಕರೆಸಿ ಉಪನ್ಯಾಸಗಳನ್ನೂ ಕೊಡಿಸಿದ್ದ. ದುರಂತವೇನು ಗೊತ್ತೆ? ಹದಿನೈದು ವರ್ಷಗಳ ಹಿಂದೆ ವಿಲಿಯಂ ಜೇಮ್ಸ್ರ ಕೃತಿ ದಿ ವೆರೈಟೀಸ್ ಆಫ್ ರಿಲಿಜಿಯಸ್ ಎಕ್ಸ್ಪೀರಿಯೆನ್ಸ್ನ ಶತಮಾನೋತ್ಸವವಾದಾಗ ವಿವೇಕಾನಂದರನ್ನು ಬೇಕಂತಲೇ ಅವಗಣನೆ ಮಾಡಿದ್ದರು. ಕೃತಿಕಾರನ ಬೌದ್ಧಿಕ ಹರವನ್ನು ವಿಸ್ತಾರಗೊಳಿಸಿದವನನ್ನೇ ಪಕ್ಕಕ್ಕೆ ತಳ್ಳುವುದು ಯಾವ ನ್ಯಾಯ? ಹೀಗೆ ಮಾಡಿದ್ದೇಕೆ ಗೊತ್ತೇನು? ವಿವೇಕಾನಂದರ ವಿಚಾರಧಾರೆ ಅಂದು ಮಾತ್ರವಲ್ಲ, ಇಂದಿಗೂ ಉತ್ಪಾತಗಳನ್ನೆಬ್ಬಿಸಬಲ್ಲದು. ಹಿಂದುತ್ವದ ಅಲೆಯ ತರಂಗಗಳನ್ನು ಅವರ ಚಿಂತನೆಗಳು ದೂರದೂರಕ್ಕೊಯ್ಯಬಲ್ಲದು. ಆ ಹೆದರಿಕೆ ಪಶ್ಚಿಮಕ್ಕೆ ಖಂಡಿತ ಇದೆ. ವಿವೇಕಾನಂದರ ಆಗಮನಕ್ಕೂ ಮುನ್ನ ಭಾರತೀಯ ಚಿಂತನೆಗಳು ಥಿಯಾಸಾಫಿಸ್ಟ್ಗಳಂತಹ ಕೆಲವು ಸಣ್ಣ ಸಣ್ಣ ಗುಂಪುಗಳ ಮೂಲಕವಷ್ಟೇ ಪರಿಚಯವಾಗುತ್ತಿದ್ದವು. ಈಗ ಹಾಗಲ್ಲ. ವಿವೇಕಾನಂದರೇ ಸ್ಥಾಪಿಸಿದ್ದ ವೇದಾಂತ ಸೊಸೈಟಿಗಳ ಮೂಲಕ ಅನೇಕರು ಪೂರ್ವದ ಚಿಂತನೆಗಳತ್ತ ಧಾವಿಸಿ ಬಂದರು. ಕೆಲವರು ಒಪ್ಪಿಕೊಂಡರು, ಕೆಲವರು ಧಿಕ್ಕರಿಸಿದರು. ಉಳಿದವರು ಪೂರ್ವ-ಪಶ್ಚಿಮಗಳ ನಡುವಣ ಮಾರ್ಗವನ್ನು ಅರಸಿಕೊಂಡು ಸುಖಿಸಿದರು. ಒಟ್ಟಿನಲ್ಲಿ ಸನಾತನ ಹಿಂದೂ ಧರ್ಮ ಚಚರ್ೆಗಂತೂ ಬಂತು. ಈ ಪ್ರಭಾವ ಇಳಿದು ಹೋಗುವ ಮುನ್ನ 1915ರಲ್ಲಿ ಫ್ರಾನ್ಸ್ನ ನೋಬೆಲ್ ಪ್ರಶಸ್ತಿವಿಜೇತ ರೋಮಾ ರೋಲಾ ವಿವೇಕಾನಂದರ ಕುರಿತಂತೆ ಅದ್ಭುತವಾದ ಜೀವನ ಚರಿತ್ರೆ ಬರೆದು ಮತ್ತೊಮ್ಮೆ ಅವರನ್ನು ಆಕರ್ಷಣೆಯ ಕೇಂದ್ರ ಬಿಂದು ಮಾಡಿಬಿಟ್ಟ. 1940ರ ವೇಳೆಗೆ ಅಮೇರಿಕಾದ ಬುದ್ಧಿಜೀವಿಗಳೆನಿಸಿಕೊಂಡಿದ್ದ ಗೆರಾಲ್ಡ್ ಹಡರ್್, ಕ್ರಿಸ್ಟೋಫರ್ ಐಶರ್ವುಡ್, ಆಲ್ಡಸ್ ಹಕ್ಸ್ಲಿಯಂಥವರು ಸ್ವಾಮೀ ಪ್ರಭವಾನಂದರಿಂದ ದೀಕ್ಷೆಯನ್ನೂ ಪಡೆದು ವಿವೇಕಾನಂದರ ಪ್ರಭಾವವನ್ನು ಜಗತ್ತಿಗೇ ಸಾರಿ ಹೇಳುವಂಥವರಾದರು. ಇವರುಗಳು ಅನೇಕ ಶಾಸ್ತ್ರ ಗ್ರಂಥಗಳನ್ನು ತಾವೇ ಅನುವಾದ ಮಾಡಿದರು ಅಥವಾ ತಮ್ಮ ಮಿತ್ರರನ್ನು ರಾಮಕೃಷ್ಣ ಮಿಶನ್ಗೆ ಪರಿಚಯಿಸಿ ಅವರ ಮೂಲಕವಾದರೂ ಮಾಡಿಸಿದರು. ಹೆನ್ರಿಚ್ ಝಿಮ್ಮರ್ ವೇದಾಂತದೆಡೆಗೆ ಅಮೇರಿಕನ್ನರ ದೃಷ್ಟಿಯನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ. ಆನರ್ಾಲ್ಡ್ ಟಾಯ್ನ್ಬೀ, ವಿಲ್ ಡ್ಯುರಂಟ್ರಂತಹ ಇತಿಹಾಸಕಾರರೂ ವಿವೇಕಾನಂದರ ಕೃತಿಗಳಿಂದ ಬಲುವಾದ ಪ್ರಭಾವಕ್ಕೊಳಗಾದವರು.

swami-and-sis-niveditasm

ವಿವೇಕಾನಂದರ ಬಳಿ ಎಲ್ಲರಿಗೂ ಕೊಡಬಲ್ಲ ಸರಕಿತ್ತು. ಅಮೇರಿಕಾದಲ್ಲಿ ಭೌತ ವಿಜ್ಞಾನವನ್ನು, ತತ್ವಶಾಸ್ತ್ರವನ್ನೂ ಆಧಾರವಾಗಿರಿಸಿಕೊಂಡು ಮಾತನಾಡುತ್ತಿದ್ದ ಸ್ವಾಮೀಜಿ ಇಂಗ್ಲೆಂಡಿನಲ್ಲಿ ಮನಃಶಾಸ್ತ್ರದ ಆಧಾರದ ಮೇಲೆ ಪ್ರತಿಪಾದನೆ ಮಾಡುತ್ತಿದ್ದರು. ಅಲ್ಲಿನವರಿಗೆ ಅದರ ಮೇಲೆ ವಿಶೇಷ ಮಮಕಾರ. ಮಾರ್ಗರೇಟ್ ನೋಬೆಲ್ಳಂತಹ ಶ್ರೇಷ್ಠ ಶಿಷ್ಯೆ ಅವರಿಗೆ ದೊರೆತದ್ದೇ ಮನಃಶಾಸ್ತ್ರದ ಚಚರ್ೆಯಿಂದ. ಆಕೆ ನಡೆಸುತ್ತಿದ್ದ ಶಾಲೆಯಲ್ಲಿ ಆಕೆ ಮಕ್ಕಳ ಮನಸ್ಸಿನ ಕುರಿತಂತೆ ಅಧ್ಯಯನ ನಡೆಸುತ್ತಿದ್ದಳು, ಸ್ವಾಮೀಜಿ ವಿಶ್ವವನ್ನೇ ಮಗುವಂತೆ ಕಂಡು ಅದರ ಮಾನಸಿಕ ಸ್ಥಿತಿಗತಿಯನ್ನು ಅನಾವರಣ ಮಾಡುತ್ತಿದ್ದರು.
ಸ್ವಾಮೀಜಿ ಮುಂದಿರಿಸಿದ ಆಂತರಿಕ ಪ್ರಜ್ಞೆಯ ಚಚರ್ೆಯಂತೂ ಡಾವರ್ಿನ್ನ ವಿಕಾಸವಾದವನ್ನೇ ಧಿಕ್ಕರಿಸಿತ್ತು. ವೈಶ್ವಿಕ ಪ್ರಜ್ಞೆಯ ಕಲ್ಪನೆಯನ್ನು ಅರ್ಥ ಮಾಡಿಸಿದ ಸ್ವಾಮೀಜಿ ಸೃಷ್ಟಿ ಯಾರೂ ಮಾಡಿದ್ದಲ್ಲ ತಂತಾನೆ ಆಗಿದ್ದು ಎಂಬುದನ್ನು ವೇದಾಂತ ಮತ್ತು ವಿಜ್ಞಾನದ ಆಧಾರದ ಮೇಲೆ ಪ್ರತಿಪಾದಿಸುತ್ತಿದ್ದಂತೆ ಅನೇಕರು ಮೂಛರ್ೆ ಹೋಗಿದ್ದರು! ನಾಶವೆಂದರೆ ಎಲ್ಲವೂ ಮೂಲಕ್ಕೆ ಮರಳೋದು, ಸೃಷ್ಟಿಯೆಂದರೆ ಅದು ಅನಾವರಣಗೊಳ್ಳೋದು ಅಷ್ಟೇ ಎನ್ನುವ ಮೂಲಕ ಪಶ್ಚಿಮ ನಂಬಿಕೊಂಡಿದ್ದನ್ನೆಲ್ಲ ಮುಲಾಜಿಲ್ಲದೇ ಝಾಡಿಸಿ ಒಗೆದಿದ್ದರು. ಒಟ್ಟಾರೆ ಪಶ್ಚಿಮದ ಆಲೋಚನಾ ಪಥವನ್ನು ಬದಲಾಯಿಸುವಲ್ಲಿ ಸ್ವಾಮೀಜಿಯ ಪಾತ್ರ ಬಲು ದೊಡ್ಡದ್ದು. ಅದು ಅವರ ದೇಹತ್ಯಾಗದೊಂದಿಗೆ ನಿಲ್ಲಲಿಲ್ಲ. ಬದಲಿಗೆ ಅರವಿಂದರ ಮೂಲಕ ವಿಸ್ತಾರಗೊಂಡಿತು.

ಅಂತನರ್ಿಹಿತವಾದ ಪ್ರಜ್ಞೆಯ ಕಾರಣದಿಂದಲೇ ವಿಕಾಸವಾಗೋದು ಎನ್ನುವುದನ್ನು ಸ್ವಾಮೀಜಿಯ ಚಿಂತನಾಧಾರೆಗಳಿಂದ ಅಥರ್ೈಸಿಕೊಂಡಿದ್ದ ಅರವಿಂದರು ಈಗ ಅದನ್ನು ಮೊದಲಿಗಿಂತ ಜೋರಾಗಿ ಪ್ರತಿಪಾದಿಸಿದ್ದರು. ಅವರಿಗೆ ಪಶ್ಚಿಮದ್ದೇ ಶಿಕ್ಷಣ ದೊರೆತದ್ದರಿಂದ ಅಲ್ಲಿನ ಬೌದ್ಧಿಕ ವರ್ಗವನ್ನು ಪ್ರಭಾವಿಸಬಲ್ಲ ಸಾಮಥ್ರ್ಯ ಅವರಲ್ಲಿತ್ತು. ಹೀಗಾಗಿ ವಿವೇಕಾನಂದರ ವಿಚಾರಧಾರೆ ಅರವಿಂದರ ಮೂಸೆಯಿಂದ ಹೊರಬಂತು. ನಿವೇದಿತಾ ಕೂಡ ಪಶ್ಚಿಮಕ್ಕೆ ಮತ್ತೊಮ್ಮೆ ವಿವೇಕಾನಂದರ ಚಿಂತನೆಗಳತ್ತ ಆಕರ್ಷಣೆಯುಂಟಾಗಲು ಶ್ರಮಿಸಿದಳು.

ವಿವೇಕಾನಂದರ ನೂರೈವತ್ತನೇ ಜಯಂತಿಯ ವೇಳೆಗೆ ಈ ಎಲ್ಲವನ್ನೂ ಜಗತ್ತಿಗೆ ಮುಟ್ಟಿಸುವಲ್ಲಿ ನಮಗೊಂದು ಅವಕಾಶವಿತ್ತು. ನಾವು ಕಳಕೊಂಡೆವು. ಭಾರತದ ಪ್ರಭಾವ ಪಶ್ಚಿಮವನ್ನೇ ಬದಲಾಯಿಸಿದೆ ಎಂದು ಸಾಬೀತು ಪಡಿಸುವ ಅವಕಾಶವಾಗಿತ್ತು ಅದು. ಕೈಚೆಲ್ಲಿಬಿಟ್ಟೆವು. ಹಾಗಂತ ಅನ್ಯಾಯವಾಗಿಲ್ಲ. ಅವರ ಚಿಕಾಗೋ ಭಾಷಣಕ್ಕೆ ನೂರಿಪ್ಪತ್ತೈದು ತುಂಬಿದೆ. ಹಾಗೆ ನೋಡಿದರೆ 1893 ಭಾರತದ ಪಾಲಿಗೆ ಬಲು ಮಹತ್ವದ ವರ್ಷ. ತಿಲಕರು ಗಣೇಶೋತ್ಸವಕ್ಕೆ ಸಾರ್ವಜನಿಕ ರೂಪ ಕೊಟ್ಟಿದ್ದು, ಅರವಿಂದರು ಬ್ರಿಟೀಷರ ಚಾಕರಿಯನ್ನು ಧಿಕ್ಕರಿಸಿ ಭಾರತಕ್ಕೆ ಮರಳಿದ್ದೂ ಅದೇ ವರ್ಷವೇ. ಚಿಕಾಗೋದಲ್ಲಿ ವಿವೇಕಾನಂದರ ಪ್ರಖ್ಯಾತ ಭಾಷಣ ನಡೆದದ್ದೂ ಅದೇ ವರ್ಷದ ಸೆಪ್ಟೆಂಬರ್ ಹನ್ನೊಂದಕ್ಕೆ.

ಅರವಿಂದ-ನಿವೇದಿತೆಯರ ಪ್ರಭಾವದಿಂದ ಜಗತ್ತಿಗೆ ಹಬ್ಬಿದ ವಿವೇಕ ಚಿಂತನೆ ಹೊಸ ರೂಪ ತಾಳಿ ಮತ್ತೆ ವಿಶ್ವ ಪರ್ಯಟನೆ ಆರಂಭಿಸಲು ಇದು ಸಕಾಲ. ಹಾಗೆಂದೇ ಪ್ರಧಾನಿ ನರೇಂದ್ರ ಮೋದಿ ಅಂದಿನ ದಿನ ವಿಶೇಷ ಭಾಷಣ ಮಾಡಿ ದೇಶದ ತರುಣರನ್ನು ತಲುಪುವ ಯೋಚನೆ ಮಾಡಿದ್ದರು. ದೀನ್ದಯಾಳ್ ಸಂಶೋಧನಾ ಸಂಸ್ಥೆಯವರು ಭಿನ್ನ ಭಿನ್ನ ಕಾಲೇಜುಗಳಿಂದ ಆಯ್ದ ಸಾವಿರದೈನೂರು ತರುಣರನ್ನು ಸೇರಿಸಿ, ‘ತರುಣ ಭಾರತ, ನವ ಭಾರತ- ಪ್ರಬುದ್ಧ ಭಾರತ: ಸಂಕಲ್ಪದಿಂದ ಸಿದ್ಧಿ’ ಎಂಬ ವಿಚಾರದ ಕುರಿತಂತೆ ಪ್ರಧಾನಿಯವರ ಕಾರ್ಯಕ್ರಮ ಆಯೋಜಿಸಿದ್ದರು. ಯುಜಿಸಿ ಈ ಕಾರ್ಯಕ್ರಮವನ್ನು ತನ್ನ ಅಧೀನ ಸಂಸ್ಥೆಗಳ ವಿದ್ಯಾಥರ್ಿಗಳಿಗೆ ತಲುಪಿಸಲೆಂದು ನಿಶ್ಚಯಿಸಿತು. ಮುಖ್ಯಸ್ಥ ವಿ.ಎಸ್ ಚೌಹಾನ್ ಬದುಕು ಬದಲಾಯಿಸಬಲ್ಲ ಈ ಕಾರ್ಯಕ್ರಮವನ್ನು ಕಾಲೇಜುಗಳಲ್ಲಿ ಪ್ರದಶರ್ಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿರೆಂದು ಪತ್ರ ಬರೆದರು. ತಪ್ಪೇನಿದೆ? ಪಶ್ಚಿಮದ ಜನರ ಆಲೋಚನಾ ಪಥವನ್ನು ಬದಲಿಸಿದ ವಿವೇಕಾನಂದರ ಕುರಿತಂತೆ ಪ್ರಧಾನಿಗಳು ಮಾತನಾಡಿದರೆ ಅದು ವಿದ್ಯಾಥರ್ಿಗಳ ಬದುಕು ಬದಲಿಸದಿರುತ್ತದೇನು? ಶುರುವಾಯ್ತು ನೋಡಿ ಅಸಹಿಷ್ಣು ಗ್ಯಾಂಗಿನ ಆರ್ಭಟ. ಯುಜಿಸಿಯಿಂದ ಬೇಕಾದ್ದನ್ನೆಲ್ಲ ಪಡೆದು ಮೆರೆದಾಡುವ ಬಂಗಾಳದ ದೀದಿ ಈ ಸುತ್ತೋಲೆಯನ್ನು ಧಿಕ್ಕರಿಸುವಂತೆ ಬಂಗಾಳದ ವಿಶ್ವವಿದ್ಯಾಲಯಗಳಿಗೆ ಆದೇಶಿಸಿದರೆ, ಕನರ್ಾಟಕದ ಮುಖ್ಯಮಂತ್ರಿಗಳೂ ಅಕ್ಕನನ್ನು ಅನುಸರಿಸಿದ ನಿಯತ್ತಿನ ತಮ್ಮನಾದರು! ಅಧಿಕಾರದಲ್ಲಿ ಇದ್ದಷ್ಟೂ ಕಾಲ ವಿವೇಕಾನಂದರ ವಿಚಾರಧಾರೆಯನ್ನು ಬಲವಾಗಿ ಸಮಥರ್ಿಸಿಕೊಳ್ಳುವ ಛಾತಿ ತೋರದ ಕಾಂಗ್ರೆಸ್ಸು ಮತ್ತು ಅದರಿಂದ ಸಿಡಿದ ತೃಣಮೂಲಗಳು ಅಧಿಕಾರ ಕಳಕೊಂಡ ಮೇಲೂ ಅದನ್ನು ವಿರೋಧಿಸುತ್ತವೆಂದರೆ ಏನೆನ್ನಬೇಕು ಹೇಳಿ? ಯಾವುದೋ ಭಾಷಣವೊಂದನ್ನು ಒತ್ತಾಯಪೂರ್ವಕವಾಗಿ ಕೇಳಿಸುವುದು ತಪ್ಪೆನ್ನುವುದಾದರೆ, ಅದನ್ನು ಒತ್ತಾಯಪೂರ್ವಕವಾಗಿ ಕೇಳಿಸದಿರುವುದೂ ಅಷ್ಟೇ ತಪ್ಪು. ಸತ್ಯ ಹೇಳಿ. ವಿವೇಕಾನಂದರ ವಿಚಾರಗಳು ಚಚರ್ೆಗೆ ಬಂದರೆ ತಮ್ಮ ಅಸ್ತಿತ್ವಕ್ಕೆ ಸಂಚಕಾರ ಬರುವುದೆಂದು ಪಶ್ಚಿಮದ ಜನ ಹೆದರಿದಂತೆಯೇ ಕಾಂಗ್ರೆಸ್ಸೂ ಹೆದರಿದೆಯಾ? ಅಥವಾ ಪ್ರಧಾನಿಗೆ ತನ್ನೊಂದು ಭಾಷಣವನ್ನು ಯುಜಿಸಿಯ ಮೂಲಕ ತರುಣರಿಗೆಲ್ಲ ಕೇಳಿಸುವಂತೆ ಮಾಡುವ ಅಧಿಕಾರವಿಲ್ಲವಾ? ಯುಜಿಸಿಯಿಂದ ದೊರೆಯುವ ಸೌಕರ್ಯಕ್ಕೆ ಕೈಚಾಚಿ ನಿಲ್ಲುವ ವಿಶ್ವವಿದ್ಯಾಲಯಗಳಿಗೆ ಅದರ ಆದೇಶವೊಂದನ್ನು ಪಾಲಿಸಬೇಕೆನ್ನುವ ದದರ್ು ಇಲ್ಲವಾ?

Independence Day at Red Fort

ನನ್ನದೊಂದು ಕಾಳಜಿ. ವಿವೇಕಾನಂದರ ವಿಚಾರ ಪ್ರಚಾರದ ಪರಂಪರೆ ನಿವೇದಿತಾ, ರೋಮಾರೋಲಾ, ಹಕ್ಸಿ, ಟಾಯ್ನ್ಬೀ, ವಿಲ್ ಡುರೆಂಟ್, ಅರವಿಂದರ ಮೂಲಕ ಆದಂತೆ ಈಗ ಮತ್ತೊಮ್ಮೆ ಆಗಲೇಬೇಕಿದೆ. ಅದಕ್ಕೆ ನರೇಂದ್ರ ಮೋದಿಯವರೇ ಅಧ್ವಯರ್ುವಾದರೆ ತಪ್ಪೇನಿದೆ?

Leave a Reply