ವಿಭಾಗಗಳು

ಸುದ್ದಿಪತ್ರ


 

‘ಪ್ರಜಾಕೀಯ’ ಉಪ್ಪಿ-3 ಆಗದಿದ್ದರೆ ಸಾಕು!

ಕನರ್ಾಟಕಕ್ಕೆ ವಿಪುಲವಾದ ಅವಕಾಶವಿದೆ. ಆರುಕೋಟಿ ಜನಸಂಖ್ಯೆ ದಾಟಿದೆ. ಇದರಲ್ಲಿ ಅರ್ಧದಷ್ಟು ತರುಣರೆಂದು ಭಾವಿಸಿದರೂ 18 ರಿಂದ 40 ರ ನಡುವಿನ ಮೂರು ಕೋಟಿಗೂ ಮಿಕ್ಕಿ ಜನರಿದ್ದಾರೆ. ಸೇವಾ ಕಾರ್ಯದಲ್ಲಿ ನಿರತರಾದ ಸಾಧು-ಸಂತರು ಬೇಕಾದಷ್ಟಿದ್ದಾರೆ. ಮೋದಿಯವರ ಪ್ರೇರಣೆಯಿಂದ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಪರಿವರ್ತನೆಗೆ ಸಿದ್ಧವಾಗಿರುವ ತಾಯಂದಿರಿದ್ದಾರೆ. ಬೇಕಿರೋದು ಸಮರ್ಥ ನಾಯಕತ್ವ ಅಷ್ಟೇ.

ಉಪ್ಪಿ ರಾಜಕೀಯಕ್ಕೆ ಎಂಬ ಸುದ್ದಿ ವ್ಯಾಪಕವಾಗುತ್ತಿದ್ದಂತೆ ಅನೇಕರಲ್ಲಿ ಸಂಚಲನವುಂಟಾಗಿದೆ. ಸಮಾಜದ ಎಲ್ಲಾ ದಿಕ್ಕಿನಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಉಪ್ಪಿಯ ರಾಜಕೀಯ ಪ್ರವೇಶದ ನಿಧರ್ಾರವೇ ತಪ್ಪು ಎಂದರೆ ಮತ್ತೆ ಕೆಲವರು ಬದಲಾವಣೆಯ ಪರ್ವವೆಂದು ಅಭಿನಂದಿಸಿದ್ದಾರೆ. ಕಾಂಗ್ರೆಸ್ಗೆ ಹಬ್ಬ, ಬಿಜೆಪಿಗೆ ತಳಮಳ. ಬಿಡಿ. ಇವೆಲ್ಲ ರಾಜಕೀಯ ವಲಯದಲ್ಲಿ ಇದ್ದದ್ದೇ. ಹದಿನೈದಿಪ್ಪತ್ತು ವರ್ಷಗಳಿಂದ ತಮಗಿಂತ ಮುಂದಿರುವವರ ಜೀತ ಮಾಡುತ್ತಾ, ಒಂದು ಸೀಟಿಗಾಗಿ ಜೊಲ್ಲು ಸುರಿಸುತ್ತ ನಿಂತ ಮಂದಿ ಅದೆಷ್ಟಿಲ್ಲ. ಸ್ಥಾಪಿತ ನಾಯಕರಿಗೂ ಇಂಥವರೇ ಅಸ್ತ್ರಗಳು. ತುಂಬಿದ ಸಭೆಯೊಂದರಲ್ಲಿ ನಿಮಗೇಕೆ ಈ ಬಾರಿ ಸೀಟು ಕೊಡಬಾರದು? ಅಂತ ಕೇಳಿಬಿಟ್ಟರೆ ಸಾಕು. ಸಫಾರಿ ಹೊಲೆಸಿ ಆತ ಸಿದ್ಧ. ನಾಯಕರ ಮುಂದಿನ ಎಲ್ಲ ಚಟುವಟಿಕೆಗಳನ್ನು ಅವನೇ ನಿಭಾಯಿಸೋದು! ಇಂಥವನು ಸೀಟು ಪಡೆದು, ಗೆದ್ದು ಬಂದುಬಿಟ್ಟರೆ ಇಂಥದ್ದೇ ಮತ್ತೊಂದಷ್ಟು ಸಂತಾನಗಳು ವೃದ್ಧಿಯಾದಾವಷ್ಟೇ. ಕಳೆದ ಆರೇಳು ದಶಕಗಳಲ್ಲಿ ಕನರ್ಾಟಕದಲ್ಲಿ ಇಂಥವರದ್ದೇ ಪಾರುಪತ್ಯ. ಇಲ್ಲಿ ಅಪ್ಪ-ಮಕ್ಕಳೇ ಸೇರಿ ಕಟ್ಟಿದ ಅಪ್ಪಾಜಿ ಪಕ್ಷದಿಂದ ಹಿಡಿದು ಅಪ್ಪ-ಮಕ್ಕಳಿಬ್ಬರೂ ರಾಜ್ಯ-ಕೇಂದ್ರಗಳಲ್ಲಿ ಅಧಿಕಾರದಲ್ಲಿರಬೇಕೆಂದು ಬಯಸುವ ಪಕ್ಷಗಳೂ ಇವೆ. ಅಧಿಕಾರ ಎನ್ನುವುದು ವಂಶದ ಪಾರುಪತ್ಯವಾಗಿರುವುದರಿಂದಲೇ ಪ್ರಜಾರಾಜ್ಯದ ಕಲ್ಪನೆ ದೂರವಾಗಿಬಿಟ್ಟಿರುವುದು. ಕೇಂದ್ರದಲ್ಲಿ ಈ ಬಗೆಯ ರಾಜಕಾರಣವನ್ನು ನೋಡಿ, ನೋಡಿ ಬೇಸತ್ತೇ ಜನ ಚಾಯ್ವಾಲಾ ಮೋದಿಯತ್ತ ಹೊರಳಿದ್ದು. ಬರಿ ಹೊರಳಿದ್ದಷ್ಟೇ ಅಲ್ಲ; ರಾಷ್ಟ್ರದಲ್ಲೆಲ್ಲಾ ಅಪ್ಪ-ಮಕ್ಕಳು ಯಾರ್ಯಾರು ಅಧಿಕಾರದ ಹತ್ತಿರದಲ್ಲಿದ್ದಾರೋ ಅವರೆಲ್ಲರ ಕಾಲು ಮುರಿದು ಮನೆಯಲ್ಲಿ ಕೂರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅದನ್ನು ನೋಡಿಯಾಯ್ತು. ಬಿಹಾರದಲ್ಲಿ ಗೆದ್ದಂತೆ ಕಂಡರೂ ಅಪ್ಪ-ಮಕ್ಕಳು ಈಗ ಬೀದಿ ಪಾಲೇ.

1

ಹೌದು. ಜನ ಬೇಸತ್ತಿದ್ದಾರೆ. ಅವರಿಗೀಗ ನೆಹರು ರಾಜಕಾರಣ ಬೇಕಿಲ್ಲ. ಕ್ರಿಯಾಶೀಲವಾಗಿರುವ, ಸರ್ವಸ್ವವನ್ನೂ ತ್ಯಾಗ ಮಾಡಬಲ್ಲ, ರಾಷ್ಟ್ರೀಯತೆಯ ಪ್ರಜ್ಞೆಯೊಂದಿಗೆ ದುಡಿಯಬಲ್ಲ ಸಮರ್ಥ ವ್ಯಕ್ತಿ ಆಳಲು ಬರಬೇಕೆಂಬ ತುಡಿತ ಶುರುವಾಗಿದೆ. ಕನರ್ಾಟಕದಲ್ಲಿ ಕಾಣುತ್ತಿರುವುದು ಅದರ ಪ್ರತಿಬಿಂಬ ಅಷ್ಟೇ. ಇಲ್ಲಿ ಅದಾಗಲೇ ಅನೇಕರು ಶುದ್ಧ ರಾಜಕಾರಣದ, ಪ್ರಗತಿಯ ಕನಸು ಕಾಣುತ್ತಿದ್ದರೆ ಅದಕ್ಕೆ ಕಾರಣವೇ ಇಷ್ಟೂ ದಿನ ಆಳಿದ ಪುಣ್ಯಾತ್ಮರು! ಹೌದಲ್ಲವೇ ಮತ್ತೆ? ಇಪ್ಪತ್ತು-ಇಪ್ಪತ್ತರ ಆಡಳಿತದಿಂದ ಕನರ್ಾಟಕದ ಕೆಟ್ಟಕಾಲ ಅಧಿಕೃತವಾಗಿ ಶುರುವಾಯಿತು. ಕುಮಾರಸ್ವಾಮಿ ಅಚಾನಕ್ಕಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿ ಸಕರ್ಾರ ರಚನೆ ಮಾಡಿದಾಗ ಜನ ಒಮ್ಮೆ ಗಾಬರಿಗೊಂಡಿದ್ದರು. ಸದಾ ಸೈದ್ಧಾಂತಿಕ ಭಿನ್ನತೆಗಳನ್ನೇ ಇಟ್ಟುಕೊಂಡು ಲೇವಡಿ ಮಾಡಿಕೊಳ್ಳುತ್ತಿದ್ದ ಎರಡು ಪಕ್ಷಗಳು ಒಟ್ಟಾಗಿದ್ದನ್ನು ಜನ ಮತ್ತೆ ಹೇಗೆ ಸ್ವೀಕರಿಸಬೇಕಿತ್ತು ಹೇಳಿ. ಕುಮಾರಸ್ವಾಮಿಯ ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ಎಂದೂ ಮೂಗು ತೂರಿಸದ ದೇವೇಗೌಡರು ಅಧಿಕಾರ ವಗರ್ಾವಣೆಯ ಹೊತ್ತಲ್ಲಿ ಹೃದಯ ಬೇನೆಯನ್ನು ತೋಡಿಕೊಂಡಿದ್ದರು. ಕುಮಾರಸ್ವಾಮಿಯವರೂ ತಮಗಾದ ಪಶ್ಚಾತ್ತಾಪವನ್ನು ಹೇಳಿಕೊಂಡು ಸಕರ್ಾರಕ್ಕೆ ಕೊಡಬೇಕಿದ್ದ ಬೆಂಬಲವನ್ನು ಹಿಂಪಡೆದರು. ಅಧಿಕಾರವಂಚಿತ ಯಡಿಯೂರಪ್ಪ ಆಗ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿದ್ದರು. ಅವರ ಆಕ್ರೋಶ ಅವರನ್ನು ಬೀದಿಗೆ ತಂದು ನಿಲ್ಲಿಸಿತ್ತು. ಅನುಕಂಪದ ಅಲೆಯಲ್ಲಿ ಬಿಜೆಪಿ ಅಧಿಕಾರವನ್ನು ಗಿಟ್ಟಿಸಿತು. ಆದರೆ ಹೀಗೆ ಅಧಿಕಾರ ಪಡೆಯುವ ನೆಪದಲ್ಲಿ ಪಕ್ಷ ಕಳಕೊಂಡಿದ್ದು ಮಾತ್ರ ಅಪಾರವಾದುದು. ಹಣದ ತಾಂಡವ ನೃತ್ಯವಾಯಿತು; ಸಿದ್ಧಾಂತಗಳೆಲ್ಲ ಮೂಲೆಯಲ್ಲಿ ಕುಳಿತು ಒಂಟಿಯಾಗಿ ರೋದಿಸತೊಡಗಿದವು. ಅರಿವೇ ಇಲ್ಲದೇ ಬಿಜೆಪಿ ಬೆಂಬಲಿಗರೂ ಇದನ್ನು ಅನುಮೋದಿಸಿ ಚಪ್ಪರಿಸಿದರು. ಈ ಧಾವಂತದಲ್ಲಿ 60 ವರ್ಷಗಳ ಕಾಂಗ್ರೆಸ್ಸು-ದಳದ ರಾಜಕಾರಣದ ಪಥವನ್ನೇ ಬಜೆಪಿಯು ಆರಿಸಿಕೊಂಡಿದೆ ಎಂಬುದನ್ನು ಮರೆತುಬಿಟ್ಟಿದ್ದರು. 5 ವರ್ಷಗಳ ಅವಧಿಯಲ್ಲಿ ಮೂರು-ಮೂರು ಮುಖ್ಯಮಂತ್ರಿಗಳ ಮೆರವಣಿಗೆಯಾಯ್ತು. ಮುಂದಿನ ಬಾರಿ ಅಧಿಕಾರ ಖಾತ್ರಿಯಿಲ್ಲ ಎಂದರಿತವರೆಲ್ಲ ಕಣ್ಣಿಗೆ ಕಾಣುವಂತೆ ತಿಂದು ತೇಗಿದ್ದರು.

ಅಲ್ಲಿಗೆ ಒಂದು ಪಕ್ಷ ಕೊಟ್ಟ ಮಾತು ತಪ್ಪಿತು ಮತ್ತೊಂದು ಮಾತುಗಳೆಲ್ಲ ಬೂಟಾಟಿಕೆ ಎಂದು ಸಾಬೀತು ಪಡಿಸಿತು. ಉಳಿದವರು ಮಾತೇ ಆಡದ ಮನಮೋಹನ ಸಿಂಗರ ಅನುಯಾಯಿಗಳು. ಅನಿವಾರ್ಯಕ್ಕೆ ಅವರನ್ನೇ ಆರಿಸಿತು ರಾಜ್ಯ. ಅಲ್ಲಿಂದಾಚೆಗೆ ನಮ್ಮ ಪರಿಸ್ಥಿತಿ ನಾಯಿ ಪಾಡು! ಕನರ್ಾಟಕ ಕಳೆದ 5 ವರ್ಷಗಳಲ್ಲಿ ಕನಿಷ್ಠ 25 ವರ್ಷಗಳಷ್ಟು ಹಿಂದೆ ಹೋಗಿ ನಿಂತಿದೆ. ನರೇಂದ್ರ ಮೋದಿಯೊಬ್ಬರು ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯದೇ ಹೋಗಿದ್ದರೆ ಕನರ್ಾಟಕದ ಪಾಲಿಗೆ ಬೆಳ್ಳಿಯ ರೇಖೆಯೇ ಇರುತ್ತಿರಲಿಲ್ಲವೇನೋ? ಈಗ ನೋಡಿ. ಗ್ರಾಮ ಪಂಚಾಯತಿ ಚುನಾವಣೆಯಿಂದ ಮುಖ್ಯಮಂತ್ರಿಯ ಆಯ್ಕೆಯವರೆಗೂ ಚುನಾವಣೆ ಗೆಲ್ಲಲು ಎಲ್ಲರಿಗೂ ನರೇಂದ್ರ ಮೋದಿಯದ್ದೇ ಫೋಟೋ ಬೇಕು. ಡಿಕೆ ಶಿವಕುಮಾರರ ಮೇಲೆ ಐಟಿ ದಾಳಿಯಾಗಿ ಕೋಟಿ-ಕೋಟಿ ಹಣ ಸಿಕ್ಕಾಗಲೂ ಮಾತನಾಡುವ ‘ಧಮ್’ ಇರದವರಿಗೆ ಮೋದಿ ಮುಖವಾಡವಲ್ಲದೇ ಮತ್ಯಾವುದು ಉಳಿಸೀತು ಹೇಳಿ!!

3

ಇಂತಹ ಹೊತ್ತಲ್ಲಿಯೇ ತರುಣರ ಸಹನೆಯ ಕಟ್ಟೆಯೊಡೆಯೋದು. ಆಗಲೇ ಉಪೇಂದ್ರರಂತವರು ತಮ್ಮ ಕಾರ್ಯಕ್ಷೇತ್ರವನ್ನೇ ತ್ಯಾಗ ಮಾಡಿ ಇಂತಹದೊಂದು ಸಾಹಸಕ್ಕೆ ಕೈ ಹಾಕೋದು. ಜನರೂ ಅದೆಷ್ಟು ಬೇಸತ್ತಿದ್ದಾರೆಂದರೆ ಆಪ್ನ ಪ್ರಯೋಗ ವ್ಯರ್ಥವಾದ ನಂತರವೂ ಇನ್ನೊಂದು ಆಸೆ ಅವರಲ್ಲಿ ಈಗಲೂ ಇದೆ. ಮೋದಿಗೆ ಸಮನಾದ ವ್ಯಕ್ತಿಗಳ ಹುಡುಕಾಟ ಎಲ್ಲೆಡೆ ತೀವ್ರವಾಗಿದೆ. ಗೋವಾಕ್ಕೆ ಪರಿಕ್ಕರ್, ಮಹಾರಾಷ್ಟ್ರಕ್ಕೆ ಫಡ್ನವೀಸ್, ಹರ್ಯಾಣಕ್ಕೆ ಖಟ್ಟರ್ರನ್ನು ಕೊಟ್ಟ ಮೋದಿ ಕನರ್ಾಟಕಕ್ಕೆ ಸಮರ್ಥರನ್ನೇಕೆ ಕೊಡುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ದೊರಕದಿದ್ದಾಗಲೇ ಮಡುಗಟ್ಟಿರುವ ಆಕ್ರೋಶ ರಾಜಕಾರಣದ ಹೊಸ ಹಾದಿ ನಿಮರ್ಾಣಕ್ಕೆ ತೊಡಗೋದು. ಹಾಗಂತ ಉಪೇಂದ್ರರ ರಾಜಕೀಯ ಆಕಾಂಕ್ಷೆ ಇಂದು ನಿನ್ನೆಯದಲ್ಲ. ಅವರು ಸಿನಿಮಾ ಕ್ಷೇತ್ರ ಆರಿಸಿಕೊಂಡದ್ದೇ ನಾಡಿನ ಚುಕ್ಕಾಣಿ ಕೈಗೆತ್ತಿಕೊಳ್ಳುವುದಕ್ಕೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪ್ರತಿ ಸಿನಿಮಾದಲ್ಲೂ ಅವರು ತೋರುವ ಆಸ್ಥೆ ಅದರಲ್ಲಿ ಮನಸ್ಸಿನ ತೊಳಲಾಟಗಳನ್ನು ತೋರುವ ಅವರ ಪ್ರಯತ್ನ ಎಲ್ಲಕ್ಕೂ ಮಿಗಿಲಾಗಿ ಆಗಾಗ ದೇಶದ ಕುರಿತಂತಹ ಕಾಳಜಿ ವ್ಯಕ್ತವಾಗುವ ರೀತಿ ಇವೆಲ್ಲವೂ ಅವರನ್ನು ರಾಜಕಾರಣದ ಪಡಸಾಲೆಗೆ ಹತ್ತಿರ ತಂದು ನಿಲ್ಲಿಸಿತ್ತು. ಈಗ ಅದು ರೂಪ ಪಡೆದುಕೊಂಡಿದೆ ಅಷ್ಟೇ.

ಉಪ್ಪಿ ಬಲು ಸರಳವಾಗಿ ಆಲೋಚಿಸಿದ್ದಾರೆ. ರಾಜ್ಯದ ಒಟ್ಟಾರೆ ಬಜೆಟ್ ಹತ್ತಿರ ಹತ್ತಿರ 2 ಲಕ್ಷ ಕೋಟಿ. ಇದರಲ್ಲಿ ಬಹುತೇಕ ಹಣವನ್ನು ವ್ಯವಸ್ಥೆಯೇ ನುಂಗಿ ನೀರು ಕುಡಿದುಬಿಡುತ್ತದೆ. ನೆನಪಿರಲಿ. ಈ ನಾಡಿನ ಯಾವ ಕಾಪರ್ೋರೇಟರನೂ ಬಿಟ್ಟಿಯಾಗಿ ದುಡಿಯುವುದಿಲ್ಲ. ಎಂ.ಎಲ್.ಎ ಆಗಲಿ ಎಂಪಿ ಆಗಲಿ ಸಂಬಳಕ್ಕೇ ದುಡಿಯೋದು. ಆದರೆ ಅವರಿಗೇ ಗೊತ್ತಿಲ್ಲದೇ ಸೇವೆ ಮಾಡುತ್ತೇವೆಂದು ಭಾವಿಸಿಕೊಂಡುಬಿಟ್ಟಿರುತ್ತಾರೆ. ಅದಕ್ಕೆ ಪೂರಕವಾದ ದರ್ಪ, ದುರಂಹಕಾರಗಳನ್ನು ಮೈಗೂಡಿಸಿಕೊಂಡುಬಿಟ್ಟಿರುತ್ತಾರೆ. ಉಪೇಂದ್ರ ರಾಜಕಾರಣಿಗಳು ಜನರ ತೆರಿಗೆ ಹಣದಲ್ಲಿ ಕೂಲಿಗಿರುವ ಕಾಮರ್ಿಕರು ಎಂಬುದನ್ನು ನೆನಪಿಸಿಕೊಡಲೆಂದು ಬಂದಿರುವಂತಿದೆ. ಹೇಗೆ ಸಾಫ್ಟ್ವೇರ್ ಕಂಪೆನಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಮೈಬಗ್ಗಿಸಿ ದುಡಿಯುತ್ತಾರೋ ಹಾಗೆಯೇ ಆಯ್ಕೆಯಾದ ಪ್ರತಿನಿಧಿಯೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಮವಸ್ತ್ರ ಧರಿಸಿಯೇ ಇತರರಂತೆ ದುಡಿಯಬೇಕೆಂಬುದು ಅವರ ಆಶಯ. ಓಹ್! ಆಚರಣೆಯಲ್ಲಿ ಕಷ್ಟವಿದೆ ಎನಿಸಿದರೂ, ಕೇಳಿದಾಗ ರೋಮಾಂಚನವಾಗುವುದು ಸಹಜ. ಕನರ್ಾಟಕಕ್ಕೆ ಈಗ ಬೇಕಿರುವುದು ಕನಸುಗಳನ್ನು ಬಿತ್ತಿ ಅದನ್ನು ಬೆಳೆಸುವಲ್ಲಿ ಪ್ರೇರೇಪಣೆ ಕೊಡಬಲ್ಲ ನಾಯಕತ್ವ. ಇತ್ತೀಚೆಗೆ ಮೋದಿ ಕನರ್ಾಟಕದ ಎಂ.ಪಿಗಳನ್ನು ಸೇರಿಸಿಕೊಂಡು ಹಳೆಯ ರಾಜಕಾರಣವನ್ನು ಬಿಡಿ, ಹೊಸದಾದ ಹಾದಿಯನ್ನು ಹುಡುಕಿಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅದು ಅಕ್ಷರಶಃ ಉಪೇಂದ್ರ ಹೇಳುವಂತಹ ಆಲೋಚನೆ ಎನಿಸಿದರೆ ಅತಿಶಯೋಕ್ತಿಯಲ್ಲ.

2

ಕನರ್ಾಟಕಕ್ಕೆ ವಿಪುಲವಾದ ಅವಕಾಶವಿದೆ. ಆರುಕೋಟಿ ಜನಸಂಖ್ಯೆ ದಾಟಿದೆ. ಇದರಲ್ಲಿ ಅರ್ಧದಷ್ಟು ತರುಣರೆಂದು ಭಾವಿಸಿದರೂ 18 ರಿಂದ 40 ರ ನಡುವಿನ ಮೂರು ಕೋಟಿಗೂ ಮಿಕ್ಕಿ ಜನರಿದ್ದಾರೆ. ಸೇವಾ ಕಾರ್ಯದಲ್ಲಿ ನಿರತರಾದ ಸಾಧು-ಸಂತರು ಬೇಕಾದಷ್ಟಿದ್ದಾರೆ. ಮೋದಿಯವರ ಪ್ರೇರಣೆಯಿಂದ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಪರಿವರ್ತನೆಗೆ ಸಿದ್ಧವಾಗಿರುವ ತಾಯಂದಿರಿದ್ದಾರೆ. ಬೇಕಿರೋದು ಸಮರ್ಥ ನಾಯಕತ್ವ ಅಷ್ಟೇ. ಈ ನಾಡಿಗೆ ಸೂಕ್ತವಾದ ಯೋಜನೆಗಳನ್ನೇ ರೂಪಿಸಿ, ಭ್ರಷ್ಟಾಚಾರದಿಂದ ತಾನು ದೂರವಿದ್ದು ಇತರರನ್ನು ಪ್ರಾಮಾಣಿಕತೆಯೆಡೆ ಪ್ರೇರೇಪಿಸಬಲ್ಲ ನಾಯಕ ಬೇಕಿದ್ದಾನೆ. ಉತ್ತರ ಮತ್ತು ದಕ್ಷಿಣ ಕನರ್ಾಟಕಗಳನ್ನು ಸಮಾನವಾಗಿ ಅಭಿವೃದ್ಧಿಗೆ ಪಕ್ವವಾಗಿಸಬೇಕಾದ ಅವಶ್ಯಕತೆ ಇದೆ. ಉದ್ಯೋಗ ಸೃಷ್ಟಿಗೆ ಜಗತ್ತನ್ನು ಸೆಳೆದು ಮೇಕ್ ಇನ್ ಇಂಡಿಯಾ ಎಂಬ ಪ್ರಧಾನಿಯ ಯೋಜನೆಗೆ ಸೂಕ್ತವಾಗಿ ಪ್ರತಿಸ್ಪಂದಿಸಿದರೆ ಸಾಕು ಕನರ್ಾಟಕ ಓಡಲಾರಂಭಿಸುತ್ತದೆ. ನೆನಪಿಡಿ. ಇಲ್ಲಿ ಕೌಶಲ್ಯಕ್ಕೆ ಕೊರತೆಯೇ ಇಲ್ಲ. ಪ್ರಗತಿಪರ ಕೃಷಿಕನಿದ್ದಾನೆ, ಬುದ್ಧಿವಂತ ಕಾಮರ್ಿಕನೂ ಇದ್ದಾನೆ. ಇವರೆಲ್ಲರನ್ನೂ ನಾಡಿನ ಪ್ರಗತಿಯ ಓಟದೊಂದಿಗೆ ಬೆಸೆಯಬೇಕಿದೆ ಅಷ್ಟೇ.

ಆದರೆ ಉಪ್ಪಿ ಸ್ವಲ್ಪ ಆತುರ ತೋರಿದರೆನಿಸುತ್ತಿದೆ. ಮೊದಲ ಪತ್ರಿಕಾ ಗೋಷ್ಠಿಯಲ್ಲಿಯೇ ಅವರು ಇಂತಹುದೊಂದು ಸಾಹಸಕ್ಕೆ ಪೂರ್ಣ ಸಿದ್ಧರಾಗಿರಲಿಲ್ಲವೆಂಬುದು ಗೋಚರವಾಗುತ್ತಿತ್ತು. ಅವರು ಪಾಟರ್ಿಗೂ ಮುನ್ನ ಒಂದು ಸಾಮಾಜಿಕ ಸಂಘಟನೆ ಕಟ್ಟಿ ಸ್ವಲ್ಪ ನಾಡು ತಿರುಗಾಡಿದ್ದರೆ ಸರಿ ಹೋಗುತ್ತಿತ್ತೇನೋ? ಸಿನಿಮಾಕ್ಕೂ ಜೀವನಕ್ಕೂ ಅಜಗಜಾಂತರ. ಆದರೆ ಉಪ್ಪಿಯೊಂದಿಗೆ ಅನೇಕ ಪ್ರಜ್ಞಾವಂತರೂ ಇದ್ದಾರೆಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಪ್ರಜಾಕೀಯದ ಭವಿಷ್ಯವೇನೋ ತಿಳಿದಿಲ್ಲ ಆದರೆ ಸ್ಥಾಪಿತ ಪಕ್ಷಗಳಿಗೆ ಈ ಬಾರಿಯ ಚುನಾವಣೆ ಸಲೀಸಾಗಿರಲಾರದೆಂಬುದಂತೂ ಸತ್ಯ. ಅಮಿತ್ ಶಾಹ್ ಹೇಳಿ ಹೋದ ಪಾಠವೂ ಅದೇ ತಾನೇ?

Leave a Reply