ವಿಭಾಗಗಳು

ಸುದ್ದಿಪತ್ರ


 

ಬೀದಿಗೆ ಬಂದದ್ದು ಭಾರತದ ಗಂಡಸರಲ್ಲ, ಕ್ರಿಶ್ಚಿಯನ್ನರ ಬುದ್ಧಿ

ಕಳೆದ ಕೆಲವು ದಿನಗಳಲ್ಲಿ ನಡೆದ ಘಟನೆಗಳನ್ನು ಗಮನಿಸಿ. ಬರಾಕ್ ಒಬಾಮಾ ಭಾರತಕ್ಕೆ ಬಂದು ಅನವಶ್ಯಕವಾಗಿ ಧರ್ಮ ಸಹಿಷ್ಣುತೆಯ ಮಾತುಗಳನ್ನಾಡಿ ಗದ್ದಲವೆಬ್ಬಿಸಿದರು. ಅದು ಭಾರತದಲ್ಲಿ ಅನ್ಯಮತೀಯರ ಮೇಲೆ ಹಿಂಸಾ ಪ್ರಹಾರ ಆಗುತ್ತಿದೆಯೆಂಬ ಹುಯಿಲೆಬ್ಬಿಸುವ ಮೊದಲ ಹೆಜ್ಜೆ. ಅದರ ಆಜೂಬಾಜೂ ಭಾರತದ ಸಾಧುಗಳು ನಾಲ್ಕು ಮಕ್ಕಳನ್ನು , ಎಂಟು ಮಕ್ಕಳನ್ನು ಹೆರಬೇಕೆಂದು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು! ಸತ್ಯ ಹೇಳಿ. ಯಾವ್ಯಾವುದೋ ಸಾಧುಗಳು ಬಿಡಿ, ಪ್ರಮುಖ ಮಠದ ಪೀಠಾಧೀಶರೂ ಈ ಹಿಂದೆ ಇಂತಹ ಮಾತುಗಳನ್ನಾಡಿಲ್ಲವಾ? (ಹಾಗೇ, ಅನ್ಯ ಮತದವರು ಕೂಡಾ). ಆಗೆಲ್ಲ ಇದು ಸುದ್ದಿಯಾಗಿರಲಿಲ್ಲ. ಈಗೇಕೆ ಆಗುತ್ತಿದೆ? ಅತ್ತ ಒಬಾಮಾ ಹಚ್ಚಿದ ಕಿಡಿದ ಉರಿದ ಮತ್ತೊಂದು ಪಟಾಕಿ ಸಂಘದ ಸರ್ವಪ್ರಮುಖರಾದ ಮೋಹನ್ ಭಾಗವತರ ಹೇಳಿಕೆ. ಮದರ್ ತೆರೆಸಾ ಮಾಡಿದ್ದು ಸೇವೆಯಲ್ಲ, ಮತಾಂತರ ಎಂಬುದನ್ನು ಸಂಘ ಹೇಳುತ್ತಿರುವುದು ಇದೇ ಮೊದಲ ಸಲವೇನಲ್ಲ. ಇದರ ಬಗೆಗಿನ ಚರ್ಚೆಯೂ ಇಂದು ನೆನ್ನೆಯದಲ್ಲ. ನಾವೆಲ್ಲ ಆಕೆಯ ಆಂತರ್ಯವನ್ನು ಅರ್ಥ ಮಾಡಿಕೊಂಡು ದಶಕಗಳೇ ಉರುಳಿವೆ. ಮಾಧ್ಯಮಗಳು ಈಗೇಕೆ ಜಾಗೃತಗೊಂಡವು?

ಕ್ಯಾಥರೀನ್ ಮೇಯೋ ಹೆಸರು ಕೇಳಿದ್ದು ನೆನಪಿದೆಯಾ? ಆಕೆ ಇಂಗ್ಲೆಂಡ್ ಮೂಲದ ಅಮೆರಿಕನ್ ಪ್ರಜೆ. ೧೯೨೭ರಲ್ಲಿ ಭಾರತವೆಂದರೇನು ಎಂದು ಜಗತ್ತಿಗೆ ಪರಿಚಯಿಸಲು ಆಕೆ ಪುಸ್ತಕವೊಂದನ್ನು ಬರೆದಿದ್ದಳು, ’ಮದರ್ ಇಂಡಿಯಾ’! ಹೆಸರು ಅದೆಷ್ಟು ಮುದ್ದಾಗಿದೆಯೋ ಕೃತಿ ಅಷ್ಟೇ ಕೆಟ್ಟದಾಗಿತ್ತು. ಭಾರತದ ಮಹಿಳೆ, ಅಸ್ಪೃಶ್ಯತೆ, ಕೊಳಕು, ರಾಷ್ಟ್ರೀಯ ನಾಯಕರ ವ್ಯಕ್ತಿತ್ವ ಎಲ್ಲವನ್ನೂ ಅತ್ಯಂತ ಕೆಟ್ಟದಾಗಿ ಚಿತ್ರಿಸಿದ್ದಳು ಆಕೆ. ಅಷ್ಟೇ ಅಲ್ಲ, ಇಲ್ಲಿನ ಗಂಡಸರ ಲೈಂಗಿಕ ತೆವಲುಗಳ ಬಗ್ಗೆ ಬರೆಯುತ್ತ ಅತ್ಯಾಚಾರ, ಸಲಿಂಗ ಕಾಮ, ವೇಶ್ಯಾವಾಟಿಕೆಗಳನ್ನು ವೈಭವೀಕರಿಸಿ ಭಾರತೀಯರಿಗೆಲ್ಲ ಗುಪ್ತ ರೋಗಗಳಿವೆ ಎಂಬಂತೆ ಚಿತ್ರಿಸಿಬಿಟ್ಟಿದ್ದಳು. ಇಡಿಯ ಜಗತ್ತು, ವಿಶೇಷವಾಗಿ ಪಶ್ಚಿಮ ಅದನ್ನು ಸಹರ್ಷದಿಂದ ಸ್ವೀಕರಿಸಿತಲ್ಲದೇ ಭಾರತವನ್ನು ಅನಾಗರಿಕವೆಂದು ಬಿಂಬಿಸಿತು. ಭಾರತದಲ್ಲಿ ಹತ್ತಾರು ಕೃತಿಗಳು ಇದರ ವಿರುದ್ಧ ಬರೆಯಲ್ಪಟ್ಟವು. ಮಹಾತ್ಮಾಗಾಂಧಿಯಂತೂ ಕೋಪದಿಂದ ಕೆಂಡಕೆಂಡವಾಗಿ “ಇದು ಚರಂಡಿಗಳ ಸರ್ವೇ ಮಾಡುವ ಚರಂಡಿ ಇನ್ಸ್‌ಪೆಕ್ಟರ್‌ನ ವರದಿಯಂತಿದೆ” ಎಂದು ಲೇವಡಿ ಮಾಡಿದ್ದರು. ಇಂಗ್ಲಿಷರ ಆಳ್ವಿಕೆಯಲ್ಲಿ ನೆಮ್ಮದಿ ಕಂಡಿದ್ದ ಅನೇಕ ಭಾರತೀಯರು ಈ ಕೃತಿಯನ್ನೇ ಹಿಡಿದು ಭಾರತೀಯತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನೆತ್ತಿದ್ದರು. Friedrich_Max-Müller_by_George_Frederic_Watts

ವಿಲಿಯಂ ಡಿಗ್ಬಿ, ಜೋಸ್ಪ್, ವಿಲ್ಬರ್ ಫೋರ್ಸರನ್ನು ನೆನಪಿಸಿಕೊಳ್ಳಿ. ಭಾರತ ಅನಾಗರಿಕ ರಾಷ್ಟ್ರ ಎಂಬುದನ್ನು ಸಾರಿ ಹೇಳಲು ಅವರುಗಳು ಪಟ್ಟ ಪಡಿಪಾಟಲುಗಳೆಷ್ಟು ಗೊತ್ತೆ? ವಿಲ್ಬರ್ ಫೋರ್ಸ್ ಅಂತೂ ಲಂಡನ್ನಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ೧೮೧೩ರಲ್ಲಿ ಉದ್ಭೋದಕ ಭಾಷಣವನ್ನೇ ಮಾಡಿದ. ತನ್ನ ಮಿತ್ರನ ಮಗ ಮೆಕಾಲೆಗೆ ಮಹತ್ವದ ಹುದ್ದೆ ಕೊಡಿಸಿ ಭಾರತಕ್ಕೆ ಕಳಿಸಿ ಇಲ್ಲಿನ ಜನರನ್ನು ಪರಂಪರೆಯಿಂದ ವಿಮುಖಗೊಳಿಸಲು ಪ್ರಯತ್ನಿಸುವಂತೆ ತಾಕೀತು ಮಾಡಿದ. ಮೆಕಾಲೆ ಹೇಳುತ್ತಿದ್ದನಲ್ಲ, “ಇಡಿಯ ಭಾರತೀಯ ಸಾಹಿತ್ಯ ಯುರೋಪ್ ಸಾಹಿತ್ಯದ ಒಂದು ಶೆಲ್ಫ್‌ಗೂ ಸಮನಾಗದು” ಅಂತ? ಅವೆಲ್ಲ ಇದೇ ಮಾನಸಿಕತೆಯಿಂದ ಉದ್ಭವಿಸಿದವು. ತಮ್ಮ ಈ ಹುಚ್ಚು ಕಲ್ಪನೆಯನ್ನು ಸತ್ಯವೆಂದು ಸಾಬೀತು ಪಡಿಸಲೆಂದೇ ಅವರೆಲ್ಲ ಮ್ಯಾಕ್ಸ್ ಮುಲ್ಲರ್‌ನ ಮೊರೆ ಹೊಕ್ಕಿದ್ದು. ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದ, ಸರಿಯಾಗಿ ಅತ್ತ ಸಂಸ್ಕೃತವೂ ಇತ್ತ ಇಂಗ್ಲೀಶಷೂ ಬಾರದ ಮ್ಯಾಕ್ಸ್ ಮುಲ್ಲರ್‌ಗೆ ಋಗ್ವೇದವನ್ನು ಇಂಗ್ಲೀಷಿಗೆ ಭಾಷಾಂತರಿಸುವ ಜವಾಬ್ದಾರಿ ಕೊಟ್ಟು ಕರೆಸಿಕೊಂಡಿದ್ದು ಇದಕ್ಕೇ!

ಆರ್ಮನಿಯ ಈ ವಿದ್ವಾಂಸ ಪುಟಕ್ಕೆ ನಾಲ್ಕು ಪೌಂಡು ಸಿಗುವುದೆಂಬ ಆಸೆಗೆ ಬಂದು ಅನುವಾದ ಮಾಡಿ ಹೇಳಿದ ಮಾತೇನು ಗೊತ್ತೇ? “ನಾನು ಭಾರತೀಯತೆಯ ವೃಕ್ಷವನ್ನು ಉರುಳಿಸಿ ಅವರಿಗೆ ಆ ವೃಕ್ಷದ ಬೇರನ್ನು ತೋರಿಸಿದ್ದೇನೆ’ ಅಂತ! ಅದರರ್ಥ ಬೇರು ಸಮೇತ ಉಧ್ವಸ್ತಗೊಳಿಸಲಾಗಿದೆ ಅಂತಾಯ್ತು. ಕ್ರಿಶ್ಚಿಯನ್ ಮತ ಹರಡುವ ತುರ್ತು ಅವರಿಗೆ ಹೇಗಿತ್ತೆಂದರೆ, ಅಮೆರಿಕಾ, ಐರ್ಲೆಂಡು, ನ್ಯೂಜಿಲೆಂಡು, ಆಸ್ಟ್ರೇಲಿಯಾಗಳಲ್ಲಿ ಮಾಡಿದಂತೆ ಇಡಿಯ ಭಾರತವನ್ನು ಕ್ರಿಸ್ತನ ಪಾದಗಳಿಗೆ ಅರ್ಪಿಸಿಬಿಡಬೇಕು ಅಂದುಕೊಂಡಿದ್ದರು ಅವರು.
ಸೋತು ಹೋಯಿತು ಇಂಗ್ಲೆಂಡು. ಸೋತು ಹೋದರು ಕ್ರಿಸ್ತಾನುಯಾಯಿಗಳು. ಅವರ ವಿಜಯದ ಹಡಗು ಅರಬ್ಬೀ ಸಮುದ್ರದಲ್ಲಿ ಮುಳುಗಿ ಹೋಗಿತ್ತು. ಆದರೂ ಅವರು ಪ್ರಯತ್ನ ಬಿಡಲಿಲ್ಲ. ಸ್ವಾತಂತ್ರ್ಯದ ನಂತರವೂ ದಶಕಗಳ ಕಾಲ ಸರ್ಕಾರಗಳನ್ನು ಬಳಸಿ, ಮಾಧ್ಯಮಗಳನ್ನು ಬಳಸಿ ತಮ್ಮ ಪ್ರಯೋಗಗಳನ್ನು ಮುಂದುವರೆಸುತ್ತಲೇ ಇದ್ದರು. ಸೋನಿಯಾ ಗಾಂಧಿ ಆಯಕಟ್ಟಿನ ಜಾಗಕ್ಕೆ ಬಂದಮೇಲಂತೂ ಅವರ ಕೆಲಸಗಳಿಗೆ ಮತ್ತಷ್ಟು ಬಲ ಬಂದಿತ್ತು.

SwamiVಇದ್ದಕ್ಕಿದ್ದಂತೆ ಶಿವ ಜಾಗೃತನಾದ. ಮೂರನೇ ಕಣ್ಣು ತೆರೆಯಿತು. ಎದುರಾಳಿಗಳಲ್ಲಿ ತಳಮಳ ಶುರುವಾಯ್ತು. ನರೇಂದ್ರ ಮೋದಿ ಜಾಗತಿಕವಾಗಿ ಬೆಳೆಯುತ್ತಿರುವ ಬಗೆ, ಅವರು ಮತ್ತೆ ಯೋಗ – ಅಧ್ಯಾತ್ಮಗಳ ಮೂಲಕ ವ್ಯಾಪಿಸಿಕೊಳ್ಳುತ್ತಿರುವ ರೀತಿ ಜಗತ್ತನ್ನೇ ’ಹಿಂದೂ’ ಮಾಡುವಂತೆ ಕಾಣುತ್ತಿದೆ. ಇದನ್ನು ಸಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ಅಮೆರಿಕಾ ದಾಳವೊಂದನ್ನು ಎಸೆಯಿತು. ಸುಮ್ಮನೆ ಕಳೆದ ಕೆಲವು ದಿನಗಳಲ್ಲಿ ನಡೆದ ಘಟನೆಗಳನ್ನು ಗಮನಿಸಿ. ಬರಾಕ್ ಒಬಾಮಾ ಭಾರತಕ್ಕೆ ಬಂದು ಅನವಶ್ಯಕವಾಗಿ ಧರ್ಮ ಸಹಿಷ್ಣುತೆಯ ಮಾತುಗಳನ್ನಾಡಿ ಗದ್ದಲವೆಬ್ಬಿಸಿದರು. ಅದು ಭಾರತದಲ್ಲಿ ಅನ್ಯಮತೀಯರ ಮೇಲೆ ಹಿಂಸಾ ಪ್ರಹಾರ ಆಗುತ್ತಿದೆಯೆಂಬ ಹುಯಿಲೆಬ್ಬಿಸುವ ಮೊದಲ ಹೆಜ್ಜೆ. ಅದರ ಆಜೂಬಾಜೂ ಭಾರತದ ಸಾಧುಗಳು ನಾಲ್ಕು ಮಕ್ಕಳನ್ನು , ಎಂಟು ಮಕ್ಕಳನ್ನು ಹೆರಬೇಕೆಂದು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು! ಸತ್ಯ ಹೇಳಿ. ಯಾವ್ಯಾವುದೋ ಸಾಧುಗಳು ಬಿಡಿ, ಪ್ರಮುಖ ಮಠದ ಪೀಠಾಧೀಶರೂ ಈ ಹಿಂದೆ ಇಂತಹ ಮಾತುಗಳನ್ನಾಡಿಲ್ಲವಾ? (ಹಾಗೇ, ಅನ್ಯ ಮತದವರು ಕೂಡಾ). ಆಗೆಲ್ಲ ಇದು ಸುದ್ದಿಯಾಗಿರಲಿಲ್ಲ. ಈಗೇಕೆ ಆಗುತ್ತಿದೆ? ಅತ್ತ ಒಬಾಮಾ ಹಚ್ಚಿದ ಕಿಡಿದ ಉರಿದ ಮತ್ತೊಂದು ಪಟಾಕಿ ಸಂಘದ ಸರ್ವಪ್ರಮುಖರಾದ ಮೋಹನ್ ಭಾಗವತರ ಹೇಳಿಕೆ. ಮದರ್ ತೆರೆಸಾ ಮಾಡಿದ್ದು ಸೇವೆಯಲ್ಲ, ಮತಾಂತರ ಎಂಬುದನ್ನು ಸಂಘ ಹೇಳುತ್ತಿರುವುದು ಇದೇ ಮೊದಲ ಸಲವೇನಲ್ಲ. ಇದರ ಬಗೆಗಿನ ಚರ್ಚೆಯೂ ಇಂದು ನೆನ್ನೆಯದಲ್ಲ. ನಾವೆಲ್ಲ ಆಕೆಯ ಆಂತರ್ಯವನ್ನು ಅರ್ಥ ಮಾಡಿಕೊಂಡು ದಶಕಗಳೇ ಉರುಳಿವೆ. ಮಾಧ್ಯಮಗಳು ಈಗೇಕೆ ಜಾಗೃತಗೊಂಡವು? ಅಂತಾರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯನ್ನು ತುಳಿಯುವ ಪ್ರಯತ್ನವಿದಷ್ಟೇ. ನರೇಂದ್ರ ಮೋದಿ ಬಂದೊಡನೆ ಭಾರತದಲ್ಲಿ ಹಿಂದುತ್ವವಾದಿಗಳ ಅಟ್ಟಹಾಸ ತೀವ್ರವಾಗಿದೆ ಎನ್ನುತ್ತ ಕ್ರಿಶ್ಚಿಯನ್ ಮಿಶನರಿಗಳ ಕೆಲಸಕ್ಕೆ ಮುಕ್ತ ಹಾದಿ ರೂಪಿಸಿಕೊಡುವ ಮಾರ್ಗವಿದು. ಹಾಗೆಯೇ ಆಯಿತು ಕೂಡಾ. ಸಂಘ ತಾನು ಹುಟ್ಟಿದಾಗಿಂದಲೂ ಮಾಡಿಕೊಂಡು ಬಂದಿದ್ದ ಘರ್ ವಾಪಸಿಗೆ ಇದ್ದಕ್ಕಿದ್ದಂತೆ ಪ್ರಚಾರ ನೀಡಿ ಅನ್ಯಮತೀಯರಿಗೆ ಬದುಕಲೂ ಕಷ್ಟವಾಗುತ್ತಿದೆ ಎಂದು ಬಿಂಬಿಸಿದ್ದು ಇದೇ ಉದ್ದೇಶದಿಂದ. ಮೋದಿ ಆಗಿಂದಾಗ್ಯೆ ಇದು ಸುದ್ದಿಯಾಗುತ್ತಿರುವುದಕ್ಕೆ ಬೇಸತ್ತು, ಸಂಘದ ಹಿರಿಯರ ಬಳಿ “ಇನ್ನು ಮುಂದೆ ಹೀಗೆ ನಡೆದರೆ ನಾನು ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ” ಎಂದು ಬೆದರಿಸಿಯೂಬಿಟ್ಟರು. ಅಲ್ಲಿಗೆ, ಕ್ರಿಶ್ಚಿಯನ್ನರ ಮನೋಗತ ಪೂರ್ಣಗೊಂಡಿತ್ತು. ಭಾರತದಲ್ಲಿ ಅವರ ಕಾರ್ಯಕ್ಕೆ ಇನ್ನು ತಡೆ ಒಡ್ಡುವವರು ಯಾರೂ ಇರಲಿಲ್ಲ.
ಈಗ ಜಾಗತಿಕವಾಗಿ ಭಾರತದ ಹೆಸರಿಗೆ ಸ್ವಲ್ಪ ಹೆಚ್ಚು ಮಸಿ ಬಳಿಯುವ ಪ್ರಯತ್ನ ಬಾಕಿ ಇತ್ತು. ಆಗಲೇ ಸ್ಪಷ್ಟ ರೂಪ ಪಡೆದಿದ್ದು ‘ಡಾಟರ್ ಆಫ್ ಇಂಡಿಯಾ’.
ಹೌದು. ಈ ಕಿರು ಚಿತ್ರದ ಕುರಿತಂತೆ ಹೇಳಲೆಂದೇ ಇಷ್ಟೆಲ್ಲ ಪೀಠೀಕೆ. ಕ್ರಿಶ್ಚಿಯನ್ನರ ಬುದ್ಧಿ ಕೆಲಸ ಮಾಡುವ ರೀತಿ ಅರಿಯದೆ ಇದ್ದರೆ ಈ ಕಿರುಚಿತ್ರದ ಆಳ ಅಗಲ ತಿಳಿಯುವುದೂ ಕಷ್ಟ. ನೂರಾರು ವರ್ಷಗಳ ನಂತರ ಮತಾಂತರದ ಕೆಲಸ ಸುಲಭವಾಗಲೆಂದು ಇಂದು ಮ್ಯಾಕ್ಸ್ ಮುಲ್ಲರ್‌ನನ್ನು ಬಾಡಿಗೆಗೆ ಪಡೆದು ಪ್ರಚಾರ ನೀಡುವ ದೂರದೃಷ್ಟಿಯ ಮಂದಿ ಅವರು, ನೆನಪಿರಲಿ.

bbcಒಟ್ಟಾರೆ ನಡೆದದ್ದು ಇಷ್ಟು. ಬಿಬಿಸಿಯ ಪತ್ರಕರ್ತೆ ಹಳೆಯ ಸರ್ಕಾರದ ಗೃಹ ಮಂತ್ರಾಲಯದ ಅನುಮತಿ ಪಡೆದು ನಿರ್ಭಯಾಳ ಅತ್ಯಾಚಾರಿಯೊಬ್ಬನ ಸಂದರ್ಶನಕ್ಕೆ ಅನುಮತಿ ಪಡೆದುಕೊಂಡಿದ್ದಳು. ಅದು ಸಂಶೋಧನೆಯ ದೃಷ್ಟಿಯಿಂದ ನಡೆಸುವ ಸಂದರ್ಶನವೆಂದು ಸರ್ಕಾರವೂ ಒಪ್ಪಿಗೆ ನೀಡಿತ್ತು. ಜಗತ್ತಿನಾದ್ಯಂತ ಅತ್ಯಾಚಾರಿಗಳ ಮನಸ್ಥಿತಿಯ ಅಧ್ಯಯನಕ್ಕಾಗಿ ಈ ಬಗೆಯ ಪ್ರಯತ್ನಗಳು ನಡೆಯುತ್ತವೆ. ಇದೇನೂ ಹೊಸತಲ್ಲ. ಹೀಗಾಗಿ ಅನುಮತಿ ನೀಡಲಾಗಿತ್ತಿರಬೇಕು. ಆದರೆ ಆಕೆ ಆರಿಸಿಕೊಂಡ ವ್ಯಕ್ತಿ ಸಂದರ್ಶನ ನೀಡಲು ಕೆಳಿದ್ದು ೧೨ ಲಕ್ಷ ರೂಪಾಯಿಗಳು! ಕೊನೆಗೂ ಅವನನ್ನು ಒಪ್ಪಿಸಿದ್ದು ೪೦,೦೦೦ ರೂಪಾಯಿಗಳಿಗೆ. ಹಣ ಕೊಟ್ಟವರು ಕೇಳುವ ಪ್ರಶ್ನೆಗೆ ಉತ್ತರಿಸುವ ಖೈದಿ ಅದೇನು ಉತ್ತರಿಸಿಯಾನು ಹೇಳಿ. ಕೇಳುಗರಿಗೆ ಬೇಕಾದ ಉತ್ತರ ಮಾತ್ರ! ಇಷ್ಟಕ್ಕೂ ಆಕೆ ನಿಜವಾದ ಅಧ್ಯಯನ ನಡೆಸಬೇಕೆಂದಿದ್ದಲ್ಲಿ, ನಿರ್ಭಯಾಳ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಆಕೆಯ ಅಸಹನೀಯ ಸಾವಿಗೆ ಕಾರಣನಾದ ಅಪ್ರಾಪ್ತ ಬಾಲಕನ ಸಂದರ್ಶನ ಮಾಡಬೇಕಿತ್ತು. ಹದಿನಾರನೇ ವಯಸ್ಸಿಗೇ ಇಂಥಾ ಕ್ರೌರ್ಯ ಎಲ್ಲಿಂದ ಬಂತು? ಅಪ್ಪ ಅಮ್ಮನೋ, ಪೂಜೆ ಮಾಡುವ ದೇವರ ವರವೋ? ಅಥವಾ ಓದಿದ ಗ್ರಂಥಗಳೋ? ಕೇಳಬೇಕಿತ್ತು. ಆಕೆ ಅಂಥಾ ಸಾಹಸ ಮಾಡಲಿಲ್ಲ. ಏಕೆ ಗೊತ್ತಾ? ಅವನು ಮುಸಲ್ಮಾನ ಹುಡುಗ! ತನ್ನಿಡೀ ಸಾಕ್ಷ್ಯ ಚಿತ್ರದಲ್ಲಿ ಅವನ ಹೆಸರನ್ನೂ ಉಲ್ಲೇಖಿಸದ ಈ ಮಹಾತಾಯಿ ನಿರ್ಭಯಾಳ ನೈಜ ಹೆಸರನ್ನು ಮುಲಾಜಿಲ್ಲದೆ ಬಳಸುತ್ತಾಳೆ. ಈ ನೆಲದ ಕಾನೂನು ಅದಕ್ಕೆ ಅನುಮತಿ ನೀಡದೆ ಇದ್ದರೂ ಕೂಡಾ.
ಅತ್ಯಾಚಾರಿ ಕೊಟ್ಟ ಹೇಳಿಕೆಗಳಿಂದ ಭಾರತೀಯ ಗಂಡಸರೆಲ್ಲರೂ ಕೆಟ್ಟ ಮನಸ್ಥಿತಿಯವರೆಂದು ಷರಾ ಬರೆದುಬಿಟ್ಟಿತಲ್ಲಾ ಬಿಬಿಸಿ? ಇದೇ ದೇಶದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ತೀವ್ರವಾಗಿ ನಡೆಯುತ್ತಿರುವುದನ್ನು ಅದೇಕೆ ಬಿಂಬಿಸಿಲ್ಲ? ಪ್ರತಿನಿತ್ಯ ಮುಂಬೈ – ಚೆನ್ನೈ – ಬಂಗಳೂರುಗಳಂಥಾ ನಗರಗಳಲ್ಲಿ ಲಕ್ಷಾಂತರ ಹೆಣ್ಣು ಮಕ್ಕಳು ನಿರ್ಭಯವಾಗಿ ತಿರುಗಾಡುತ್ತಾರಲ್ಲ, ಅವರ ಕಣ್ಣೆದುರಿಗೆ ಕಾಣುವ ಪ್ರತಿಯೊಬ್ಬನೂ ಕಾಮುಕನೇನು? ಇಷ್ಟಕ್ಕೂ ನಮಗೆ ಬುದ್ಧಿ ಹೇಳುವ ಇಂಗ್ಲೆಂಡಿನ ಸ್ಥಿತಿ ಹೇಗಿದೆ ಗೊತ್ತೆ? ಕಳೆದ ಆಗಸ್ಟ್‌ನಲ್ಲಿ ನಿವೃತ್ತಳಾದ ನ್ಯಾಯಾಧೀಶೆ ಮೇರಿ ಜೇನ್ ಮೋವತ್, ಹೆಣ್ಣು ಮಕ್ಕಳು ಕುಡಿಯೋದನ್ನ ನಿಲ್ಲಿಸುವವರೆಗೂ ಅತ್ಯಾಚಾರ ಕಡಿಮೆಯಾಗೋದು ಕಷ್ಟ ಎಂಬರ್ಥದ ಹೇಳಿಕೆ ನೀಡಿದ್ದರು. ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಸಾಕ್ಷಿಗಳನ್ನೂ ಕೊಟ್ಟಿದ್ದರು. ಒಬ್ಬ ಬ್ರಿಟಿಷ್ ನ್ಯಾಯಾಧೀಶೆಯ ಮನಸ್ಥಿತಿಯೇ ಹೀಗಾದರೆ, ಇನ್ನು ಅಲ್ಲಿನ ಸಾಮಾನ್ಯ ನಾಗರಿಕರು ಅದೆಷ್ಟು ಅನಾಗರಿಕರಾಗಿರಬೇಕು!? ಹೆಣ್ಣುಮಕ್ಕಳ ಮನಶ್ಶಾಸ್ತ್ರವನ್ನು ಅಧ್ಯಯನ ಮಾಡಿ, ಅತ್ಯಾಚಾರದ ನಂತರವೂ ಪೀಡಿಸುತ್ತಿದ್ದ ಸೈಮನ್ ಇರ‍್ವಿನ್ ಅವರ ದೇಶದವನೇ. ರೊಥೆರಾಮ್‌ನಲ್ಲಿ ೧೬ ವರ್ಷಗಳ ಕಾಲ ೧೪೦೦ ಮಕ್ಕಳನ್ನು ಅತ್ಯಾಚಾರ ಮಾಡಿದ ರಾಷ್ಟ್ರ ಇಂಗ್ಲೆಂಡೇ ಅಲ್ಲವೆ? ಈ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯದಂತೆ ಬಿಬಿಸಿ ನೋಡಿಕೊಂಡಿತು. ಏಕೆಂದರೆ ಅವರಿಗದು ತಮ್ಮ ರಾಷ್ಟ್ರಗೌರವದ ಪ್ರಶ್ನೆ. ಆ ಮಕ್ಕಳ ಮೇಲೆ ಒಂದು ಸಾಕ್ಷ್ಯ ಚಿತ್ರ ಮಾಡಿ ಇಡಿಯ ಇಂಗ್ಲೆಂಡು ಹೀಗೆ ಎಂದು ಜಗತ್ತಿಗೆ ತೋರಿಸುವ ಯತ್ನ ಮಾಡಬಹುದಿತ್ತಲ್ಲ?
ಇವೆಲ್ಲ ಬರೀ ನಾಟಕ. ಮಾಧ್ಯಮಗಳಿಗೆ ಹಣ ಕೊಟ್ಟು, ಬೇಕಾದ್ದನ್ನು ಮಾಡಿಕೊಳ್ಳುವ ಛಾತಿ ಅವರಿಗಿದೆ. ನಾವೂ ಅವರೆತ್ತ ಎಳೆಯುತ್ತಾರೋ ಅತ್ತ ಓಡುತ್ತೇವೆ. ಎರಡು ನಿಮಿಷ ಯೋಚಿಸಿದರೆ ಅವರ ಷಡ್ಯಂತ್ರಗಳ ಅರಿವಾಗುತ್ತದೆ. ಇಂಥಾ ಕಳಪೆ ಅಭಿರುಚಿಯ ಕಿರುಚಿತ್ರ ತಯಾರಿಸಿದ್ದಲ್ಲದೆ, ಇದನ್ನು ನಿಷೇಧಿಸಲು ಭಾರತಕ್ಕೆ ಅದೆಷ್ಟು ದಾರ್ಷ್ಟ್ಯ ಅನ್ನುತ್ತಾಳಲ್ಲ ಆಕೆ! ಅದನ್ನು ಯಾವೊಬ್ಬ ದೇಶಭಕ್ತನೂ ಸಹಿಸಲಾರ.

ಒಂದಂತೂ ಸತ್ಯ. ನಿರ್ಭಯಾಳ ಮೇಲೆ ಆದ ಅತ್ಯಾಚಾರ ಅದೆಷ್ಟು ಭಯಾನಕವೋ ಈಗ ಬಿಬಿಸಿ ಮತ್ತು ನಮ್ಮದೇ ಮೆಕಾಲೆ ಪೀಡಿತ ಬುದ್ಧಿವಂತರು ರಾಷ್ಟ್ರದ ಮೇಲೆ ನಡೆಸುತ್ತಿರುವ ಅತ್ಯಾಚಾರ ಅದಕ್ಕಿಂತಲೂ ಭೀಕರ, ಅನುಮಾನವೇ ಇಲ್ಲ!

Leave a Reply