ವಿಭಾಗಗಳು

ಸುದ್ದಿಪತ್ರ


 

‘ಮತ’ಮತ್ತರ ಆಟಾಟೋಪ ಮತ್ತು ಕೆಲವು ಮಾಧ್ಯಮಗಳ ಜಾಣಕುರುಡು

ಯಾವುದೋ ಅಗೋಚರ ಶಕ್ತಿ ಕೆಲಸ ಮಾಡುತ್ತಿದೆ. ಎರಡಕ್ಕೆ ಎರಡು ಸೇರಿದರೆ ನಾಲ್ಕಾಗುತ್ತದೆ ಎನ್ನುತ್ತದೆ ಗಣಿತ ಲೋಕದ ಲೆಕ್ಕಾಚಾರ. ಭಗವಂತನ ಲೋಕ ಹಾಗೆನ್ನಲು ಮನಸೊಪ್ಪದಿದ್ದರೆ ಪ್ರಕೃತಿಯ ಲೆಕ್ಕಾಚಾರದಲ್ಲಿ ಅಂತಲೇ ಇಟ್ಟುಕೊಳ್ಳಿ. ಅದು ನಾಲ್ಕು ನೂರು, ನಾಲ್ಕು ಲಕ್ಷವೂ ಆಗಿಬಿಡಬಹುದು. ಜಗತ್ತನ್ನು ಇಸ್ಲಾಮ್ ಮತ್ತು ಕ್ರಿಶ್ಚಿಯನ್ನರ ಬರ್ಬರತೆ ಆಕ್ರಮಿಸಿಕೊಳ್ಳುವ ವೇಗ ನೋಡಿದರೆ ವಿಶ್ವವೇ ಏಕದೇವ ಆರಾಧನೆಯತ್ತ ಹೊರಳಿಬಿಡುವುದೇನೋ ಎನ್ನಿಸಿತ್ತು. ಜಾಗತಿಕ ಬದಲಾವಣೆಗಳು ಸ್ವಲ್ಪ ಉಸಿರಾಡಲು ಜಾಗ ತೋರಿಸಿವೆ. ಯಾರನ್ನು ಬೇಕಾದರೂ ಬಡಿದು ಕೊಲ್ಲಬಲ್ಲೆ, ಹೆದರಿಸಿಯೇ ಜಗತ್ತನ್ನು ಆಳಬಲ್ಲೆನೆಂದು ಹೊರಟಿದ್ದ ಇಸ್ಲಾಮಿನ ಒಳಗೇ ಆಕ್ರೋಶದ ಕೂಗು ಭುಗಿಲೇಳುತ್ತಿದೆ. ಅತ್ತ ಕ್ರೈಸ್ತ ಮತಾನುಯಾಯಿಗಳಿಗೆ ಅದಾಗಲೇ ಭಾನುವಾರದ ಪ್ರಾರ್ಥನೆ ಬೇಸರ ತರಿಸಿದೆ. ಹೀಗಾಗಿ ಚರ್ಚು ಭಾರತವನ್ನು ಭದ್ರ ಬುನಾದಿಯಾಗಿಸಿಕೊಳ್ಳುವ ಹತಾಶ ಪ್ರಯತ್ನಕ್ಕೆ ಕೈಹಾಕಿರೋದು. ಅದಕ್ಕೇ ಮೋದಿ ಸರ್ಕಾರ ಅವರಿಗೆ ಬಿಸಿ ತುಪ್ಪ!
ಜಾಗತಿಕವಾದ ನಾಲ್ಕಾರು ಘಟನೆಗಳನ್ನು ನಿಮ್ಮ ಮುಂದಿರಿಸುವೆ. ಬದಲಾವಣೆಗಳ ಸೂಕ್ಷ್ಮವನ್ನು ನೀವೆ ನಿರ್ಧರಿಸಿ. ಮೊದಲಿಗೆ ಬಂಗಾಳ. ಇತ್ತೀಚೆಗೆ ಬಂಗಾಳದ ನನ್ ಮೇಲಿನ ಅತ್ಯಾಚಾರದ ಆರೋಪ ಸುದೀರ್ಘ ಚರ್ಚೆಯಾಯ್ತು. ಕ್ರಿಶ್ಚಿಯನ್ನರನ್ನು ಭಾರತದಲ್ಲಿ ತುಚ್ಛವಾಗಿ ಕಾಣುತ್ತಿದೆಯೆಂದು ಬಿಂಬಿಸಲಾಯ್ತು. ಮಾಧ್ಯಮಗಳಿಗಂತೂ ಹಬ್ಬ. ಮೋದಿ ಬಂದಮೇಲೆಯೇ ಹೀಗಾಯ್ತೆಂದು ಷರಾ ಬರೆಯಲಾಯ್ತು. ಸಂಸತ್ತಿನಲ್ಲೂ ಗದ್ದಲವೆದ್ದಿತು. ಕೊನೆಗೆ ಸಿಸಿಟಿವಿಯ ಆಧಾರದ ಮೇಲೆ ಬಂಧಿತರಾದವರು ಬಾಂಗ್ಲಾದೇಶೀ ಮುಸಲ್ಮಾನರು ಎಂದು ಗೊತ್ತಾಗುತ್ತಲೇ ಎಲ್ಲ ಗಪ್‌ಚುಪ್! ಭಾರತದಲ್ಲಿ ಮುಸಲ್ಮಾನರ ವಿರೋಧ ಕಟ್ಟಿಕೊಳ್ಳಲು ಚರ್ಚ್ ತಯಾರಿಲ್ಲ. ಇಲ್ಲಿ ಮುಸಲ್ಮಾನರನ್ನು ಹಿಂದೂಗಳೊಂದಿಗೆ ಕಾದಾಡಲು ಎತ್ತಿಕಟ್ಟುವುದಷ್ಟೆ ಅವರ ಕೆಲಸ. ಬಂಧನಕ್ಕೊಳಗಾದವರು ಬಾಂಗ್ಲಾದೇಶೀ ರಾಷ್ಟ್ರೀಯತೆಯವರೆಂಬುದನ್ನು ಮಾಧ್ಯಮಗಳು ಬಿಂಬಿಸಲೂ ಹೆದರಿದವು. ಆದರೆ ಜನರಿಗೆ ಸೇರಬೇಕಾದ ಸಂದೇಶ ಸೇರಿತ್ತು. ಈ ದೇಶದವರೇ ಅಲ್ಲದ ಕೆಲವು ಜನ ಬದುಕುವುದು ಬಿಡಿ, ರೇಪ್ ಮಾಡಬಲ್ಲಷ್ಟು ಕೊಬ್ಬಿ ಬೆಳೆದುಬಿಟ್ಟಿದ್ದಾರೆಂದರೆ, ಸೋನಿಯಾಗಾಂಧಿಯವರ ಕೃಪಾ ಕಟಾಕ್ಷ ಅದೆಷ್ಟಿರಬೇಕು!
ಮಾಧ್ಯಮಗಳದ್ದೂ ಅಷ್ಟೇ ಕ್ರೂರ ನಿಲುವು. ಈ ಘಟನೆಗೆ ಒಂದು ದಿನ ಮುಂಚೆ ಬಂಗಾಳದ ಹಿಂದೂ ಸಾಧ್ವಿಯೊಬ್ಬರನ್ನು ದಾಸ್ ಕಾಲೊನಿಯ ಬಳಿ ಅತ್ಯಂತ ಬರ್ಬರವಾಗಿ ನಾಲ್ಕು ಜನ ಬಲಾತ್ಕಾರಗೈದಿದ್ದರು. ಆ ಸಾಧ್ವಿ ಮತ್ತೆ ಮತ್ತೆ ಪೊಲೀಸ್ ಠಾಣೆಗೆ ಅಲೆದರೂ ಸಹಾಯ ದೊರಕಲಿಲ್ಲ. ಕಂಪ್ಲೇಂಟ್ ದಾಖಲಾಗಲಿಲ್ಲ. ಕೊನೆಗೆ ರಾಮಕೃಷ್ಣ ಮಿಷನ್ನಿನ ಒತ್ತಡದಿಂದ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ದುಷ್ಟರನ್ನು ಬಂಧಿಸಿದರು. ಮಾಧ್ಯಮಗಳು ಸದ್ದೇ ಮಾಡಲಿಲ್ಲ. ಹಿಂದೂ ಸಾಧ್ವಿಯ ಮೇಲೆ ನಡೆದ ಅತ್ಯಾಚಾರಕ್ಕೆ ಬೇರೇನಾದರೂ ಹೆಸರಿದೆಯೇ? ಗೊತ್ತಿಲ್ಲ.
ಆಫ್ಘಾನಿಸ್ತಾನದ ಘಟನೆಯೊಂದರತ್ತ ಕಣ್ಣು ಹಾಯಿಸಿ. ಇನ್ನೂ ಒಂದು ವಾರವೂ ಕಳೆದಿಲ್ಲ. ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು – ಪುರುಷರು – ಮಕ್ಕಳು ಇಸ್ಲಾಮ್ ಬರ್ಬರತೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದರು. ೨೭ರ ಫರ್ಕುಂದಾ ಎಂಬ ಹೆಣ್ಣು ಮಗಳನ್ನು ಮತದ ಅಫೀಮು ಕುಡಿದ ಒಂದಷ್ಟು ಜನ ದೈವದೂಷಣೆಯ ಹೆಸರಲ್ಲಿ ಬರ್ಬರವಾಗಿ ಹೊಡೆದು ಆಕೆಯ ಮೇಲೆ ಕಾರು ಚಲಾಯಿಸಿ, ಸುಟ್ಟು, ಅಷ್ಟಕ್ಕೂ ತೃಪ್ತಿಯಾಗದೆ ಕಾಬೂಲ್ ನದಿಗೆ ಎಸೆದು ಹೋಗಿದ್ದರು. ಆಫ್ಘಾನಿಸ್ತಾನದ ಮಹಿಳಾ ಕೌನ್ಸಿಲ್ ಅಧ್ಯಕ್ಷೆ ಫತಾನಾ ಗೈಲಾನಿ ಈ ಘಟನೆಯಿಂದ ಆಕ್ರೋಶಿತರಾಗಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದ್ದರು. ‘ನಮಗೆ ಸಾಕಾಗಿಹೋಗಿದೆ. ಹೊಸ ಪೀಳಿಗೆಗೆ ಯುದ್ಧ ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಈಗ ಅವರಿಗೆ ಕೆಲಸವಿಲ್ಲ’ ಎಂದು ಆಕ್ರೋಶಭರಿತರಾಗಿ ನುಡಿದ ಗೈಲಾನಿ, ಈ ಘಟನೆಯಿಂದ ಮಹತ್ವದ ಬದಲಾವಣೆ ಬರಲಿದೆ ಎಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ಅವರೆಲ್ಲ ಬಯಸುತ್ತಿರುವ ಆ ಮಹತ್ವದ ಬದಲಾವಣೆ ಏನು? ಈ ಪ್ರಸ್ನೆಗೆ ಎಲ್ಲರೂ ಸೇರಿ ಉತ್ತರ ಹುಡುಕಬೇಕಿದೆ ಅಷ್ಟೇ. ಅದಕ್ಕೆ ಸರಿಯಾಗಿ ಸುಬ್ರಮಣಿಯನ್ ಸ್ವಾಮಿ ‘ಭಾರತದೊಳಗೆ ಶಿಕ್ಷಿತ ಮುಸಲ್ಮಾನರನೇಕರು ಮತ್ತು ಪಾಕಿಸ್ತಾನದ ಸುಶಿಕ್ಷಿತ ನಾಗರಿಕರು ತಮ್ಮ ಹಿಂದೂ ಪರಂಪರೆಯನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು.
ಭಾರತ ಗೊತ್ತಿಲ್ಲ; ಪಾಕಿಸ್ತಾನವಂತೂ ಸುಸ್ತಾಗಿಬಿಟ್ಟಿದೆ. ತನ್ನವರನ್ನೆ ತಾನು ಸಂಭಾಳಿಸಿಕೊಳ್ಳಲಾಗದ ಸ್ಥಿತಿಗೆ ಬಂದುಬಿಟ್ಟಿದೆ. ಕಳೆದ ವಾರ ಲಾಹೋರ್‌ನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ಕ್ರಿಶ್ಚಿಯನ್ನರು ಹಿಂಸಾತ್ಮಕ ಪ್ರತಿಭಟನೆಗಿಳಿದುಬಿಟ್ಟರು. ಭಾನುವಾರ ಸಾಮೂಹಿಕ ಪ್ರಾರ್ಥನೆಯಲ್ಲಿ ನಿರತರಾದವರ ಮೇಲೆ ಮುಸಲ್ಮಾನ ಗೂಂಡಾಗಳು ಹಿಂಸಾತ್ಮಕ ದಾಳಿ ನಡೆಸಿದ ಮೇಲೆ ಹುಟ್ಟಿಕೊಂಡ ಆಕ್ರೋಶ ಇದು. ಅಲ್ಲಿನ ಕ್ರಿಶ್ಚಿಯನ್ನರ ಸ್ಥಿತಿ ಏಸುವಿಗೇ ಪ್ರೀತಿ. ಜೋಸೆಫ್ ಕಾಲೊನಿಯಲ್ಲಿ ನೂರಾರು ಮನೆಗಳನ್ನು ಸುಡಲಾಯ್ತು. ಚರ್ಚಿನ ಮೇಲೆ ದಾಳಿ ಮಾಡಲಾಯ್ತು. ಕೊನೆಗೆ ಕ್ರಿಶ್ಚಿಯನ್ ದಂಪತಿಯನ್ನು ಜೀವಂತ ದಹಿಸಲಾಯ್ತು. ಅದರಲ್ಲಿ ಸುಡಲ್ಪಟ್ಟ ಹೆಣ್ಣು ಮಗಳು ಗರ್ಭಿಣಿ ಬೇರೆ! ಸಹನೆಯ ಕಟ್ಟೆ ಒಡೆದಿತ್ತು. ಕ್ರಿಶ್ಚಿಯನ್ನರು ಬೀದಿಗಿಳಿದು ಸಾರ್ವಜನಿಕ ಆಸ್ತಿಯನ್ನು ಧ್ವಂಸಗೈದರು. ತಾವೂ ಮನೆಗಳನ್ನು ಸುಟ್ಟರು. ದಿನಾಲೂ ಹೆದರಿ ಸಾಯುವುದಕ್ಕಿಂತ ಒಮ್ಮೆ ಬಡಿದು ಸತ್ತರಾಯ್ತು ಎಂಬ ನಿಶ್ಚಯಕ್ಕೆ ಅವರು ಬಂದಮೇಲೆ ಪರಿಸ್ಥಿತಿ ಬದಲಾಗಿದೆ. ಅಲ್ಲಿನ ಅಲ್ಪಸಂಖ್ಯಾತ ಅಹಮದಿಯಾಗಳು, ಹಿಂದೂಗಳು ಒಟ್ಟುಗೂಡಲುಪಕ್ರಮಿಸುತ್ತಿದ್ದಾರೆ. ಸರ್ಕಾರ ಒಂದಷ್ಟು ಜನರನ್ನು ಬಂಧಿಸುತಇದೆ. ನ್ಯಾಯಾಲಯ ಒಂದಷ್ಟು ಜನರಿಗೆ ಮರಣ ದಂಡನೆ ವಿಧಿಸಿದೆ. ಎಲ್ಲವೂ ವೇಗವಾಗಿ ನಡೆಯುತ್ತಿದೆ.
ಅತ್ತ ಬಲೂಚಿಸ್ತಾನದಲ್ಲಿ ಗೋ ಬ್ಯಾಕ್ ಪಾಕಿಸ್ತಾನದ ಘೋಷಣೆ ಮೊಳಗುತ್ತಿರುವುದು ಪ್ರತ್ಯೇಕತೆಯ ಭೀತಿ ಪಾಕಿಸ್ತಾನವನ್ನು ಸುಡುತ್ತಿದೆ. ತಾಲಿಬಾನ್ ವಿರೋಧಿ ಘೋಷಣೆಗಳು, ಕ್ಯಾಂಡಲ್ ಮಾರ್ಚ್‌ಗಳು ನಡೆಯುತ್ತಲೇ ಇವೆ.
ಹೈರಾಣಾಗಿದೆ ಪಾಕಿಸ್ತಾನ. ಪಕ್ಕದ ಮನೆ ಸುಡುವಾಗ ಚಪ್ಪಾಳೆ ತಟ್ಟಬೇಕೆನ್ನಿಸುತ್ತದೆ. ಆದರೆ ಆ ಕಿಚ್ಚು ಒಡಲನ್ನೆ ಸುಡುವಾಗ ರಕ್ಷಣೆಗೆ ಯಾರೂ ಇಲ್ಲ. ಪಕ್ಕದ ಮನೆಯವನೇ ಬರಬೇಕು!
ಇವೆಲ್ಲಕ್ಕೂ ಭಿನ್ನವಾದ, ಆಶಾದಾಯಕ ಘಟನೆಯೊಂದು ಮಿಜೋರಾಮ್‌ನಲ್ಲಿ ನಡೆದಿದೆ. ಅಲ್ಲಿನ ಕಾಂಗ್ರೆಸ್ ಸರ್ಕಾರ ದಶಕಗಳಿಂದ ಇದ್ದ ಹೆಂಡದ ಮೇಲಿನ ನಿಷೇಧವನ್ನು ತೆಗೆದೆಸೆದಿದೆ! ಅದರಲ್ಲೇನು ವಿಶೇಷ ಅಂದಿರಾ? ಮಿಜೋರಾಮ್‌ನ ಶೇಕಡಾ ೯೮ರಷ್ಟು ಜನ ಮತಾಂತರಿತ ಕ್ರಿಶ್ಚಿಯನ್ನರೇ. ಅಲ್ಲಿ ಆಡಳಿತ ಪಕ್ಷ ಯಾವುದೇ ಇರಲಿ, ಆಡಳಿತ ನಡೆಸೋದು ಮಾತ್ರ ಚರ್ಚಿನದೇ. ಕ್ಯಾಬಿನೆಟ್ ಮೀಟಿಂಗುಗಳಿಗೆ ಅನೇಕ ಬಾರಿ ಚರ್ಚಿನ ಪ್ರತಿನಿಧಿ ಹೋಗುತ್ತಾರೆ. ಅವರು ಹೇಳಿದಂತೆ ಜನರೂ ಕೇಳಲೇಬೇಕಾಗಿರುವುದರಿಂದ ತಗ್ಗಿಬಗ್ಗಿ ನಡೆದರೆ ಮತ್ತೆ ಅಧಿಕಾರ. ಇಲ್ಲವೇ, ಮನೆ! ಅಕ್ಷರಶಃ ಹಿಟ್ಲರ್‌ಷಾಹಿ!!
ಈ ಕಳೆದ ಒಂದು ದಶಕದಿಂದ ಅಲ್ಲಿ ಮಧ್ಯ ನಿಷೇಧ ಮಾಡಿಸಿದ್ದು ಚರ್ಚು. ಅದಾದನಂತರ ಜನ ಕಳ್ಳಭಟ್ಟಿಯನ್ನು , ಕದ್ದು ತಂದ ಹೆಂಡವನ್ನು ಕುಡಿಯಲು ಶುರು ಮಾಡಿದ್ದರು. ಸರ್ಕಾರಕ್ಕೆ ಆದಾಯವೂ ಕಡಿಮೆಯಾಯ್ತು. ಕೇಂದ್ರದಲ್ಲಿ ಸೋನಿಯಾರ ತೂಗುಗತ್ತಿ ಇದ್ದುದರಿಂದ ಚರ್ಚುಗಳ ವಿರುದ್ಧ ಹೋಗುವ ಧೈರ್ಯ ಸರ್ಕಾರಕ್ಕೆ ಇರಲಿಲ್ಲ. ಈಗ ಚರ್ಚಿನ ಆದೇಶ ಧಿಕ್ಕರಿಸಿ ಹೆಂಡ ಮಾರಾಟ ಶುರು ಮಾಡಲಾಗಿದೆ. ನಾಳೆ ಸೋಮವಾರದಿಂದ ಎಲ್ಲಡೆ ಹೆಂಡದಂಗಡಿಗಳು ಮತ್ತೆ ತೆರೆದುಕೊಳ್ಳಲಿವೆ. ಜನರೂ ಅದಾಗಲೇ ಹೆಂಡದಂಗಡಿಗಳ ಮುಂದೆ ಸಾಳುಗಟ್ಟಿ ಚರ್ಚಿಗೆ ಸೆಡ್ಡು ಹೊಡೆದಿದ್ದಾರೆ.
ಹೌದು. ಹೆಂಡ ಕುಡಿಯುವುದನ್ನು ಪ್ರೇರೇಪಿಸುವುದು ತಪ್ಪೇ. ಆದರೆ ಚರ್ಚಿನ ನಶೆ ಅದಕ್ಕಿಂತಲೂ ಕೆಟ್ಟದ್ದು. ಅದು ರಾಜ್ಯ ರಾಜ್ಯಗಳನ್ನೆ ಭಾರತದಿಂದ ದೂರ ಮಾಡಿಬಿಡುತ್ತದೆ. ಈಗ ಈ ನೆಪದಲ್ಲಿ ಇದು ಅಲ್ಲಿನ ಜನ ಚರ್ಚಿಗೆ ಕೊಟ್ಟ ಬಲವಾದ ತಪರಾಕಿ. ನಿಮ್ಮ ಆಡಳಿತ ನಡೆಸಲು ನಿಮ್ಮ ದೇಶಕ್ಕೆ, ನಿಮ್ಮ ಜನರ ನಡುವೆ ಹೋಗಿರೆಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಗಿದೆ.
ದ್ವೇಷವನ್ನು ಬಿತ್ತಿದ ರಾಷ್ಟ್ರಗಳು ಟೊಳ್ಳಾಗುತ್ತ ಸಾಗುತ್ತಿವೆ. ಇರಾನ್ ಮತ್ತು ಸೌದಿಗಳ ಜಗಳ ಶಿಯಾ – ಸುನ್ನಿಗಳ ಹೆಸರಲ್ಲಿ ಅಸಂಖ್ಯ ಜೀವಗಳನ್ನು ಆಪೋಶನ ತೆಗೆದುಕೊಳ್ಳಲಿವೆ. ಕ್ರಿಶ್ಚಿಯನ್ ಜಗತ್ತು ತನ್ನ ಕುತಂತ್ರದಿಂದ ತಾನೇ ನಾಶವಾಗುವ ಹಂತದಲ್ಲಿದೆ. ಶಾಂತವಾಗಿದ್ದ ಹಿಂದೂ ಮತ್ತೆ ತನ್ನ ಪರಂಪರೆಯತ್ತ ಹೊರಳಲು ಸಿದ್ಧತೆ ನಡೆಸಿದ್ದಾನೆ. ಹೀಗಾಗಿಯೇ ಭಗವದ್ಗೀತೆ ಸುಡುವ ಮಾತನ್ನು ಕೆಲವರು ಆಡಿದಾಗ ಆತ ಸುಡುವವರ ಬಗ್ಗೆ ಕೋಪಿಸಿಕೊಳ್ಳಲಿಲ್ಲ; ಗೀತೆಯ ಬಗ್ಗೆ ತಲೆಕೆಡಿಸಿಕೊಂಡ. ಆಗ್ರಾದಲ್ಲಿ ಅದಾಗಲೇ ಆರು ವಕೀಲರು ತಾಜ್‌ಮಹಲ್ ಅನ್ನು ದೇವಾಲಯವೆಂದು ಘೋಷಿಸಬೇಕೆಂದು ಸಾಕ್ಷಿ ಸಮೇತ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮತಾಂತರಿತ ಹಿಂದೂಗಳನ್ನು ಮರಳಿ ತರುವುದಿರಲಿ, ಮತಾಂತರಿತ ಮಂದಿರಗಳನ್ನೂ ಮರಳಿ ಪಡೆಯಬೇಕೆಂಬ ಆಂದೋಲನ ತೀವ್ರಗೊಳ್ಳುತ್ತಿದೆ.
ಆದಕ್ಕೇ ಹೇಳಿದ್ದು…. ಪ್ರಕೃತಿಯ ಲೋಕದಲ್ಲಿ ಏನು ಬೇಕಾದರೂ ಆಗಬಹುದೂಂತ. ಇನ್ನೂ ವಿಶ್ವಾಸ ಬರಲಿಲ್ಲವಾ?

Leave a Reply