ವಿಭಾಗಗಳು

ಸುದ್ದಿಪತ್ರ


 

ಮರೆತೇನೆಂದರೆ ಮರೆಯಲಿ ಹ್ಯಾಂಗ..

ಕ್ರಾಂತಿಯೆಂದರೆ ರಕ್ತವೆನ್ನುವ, ಬೌದ್ಧಿಕ ಸ್ವಾತಂತ್ರ್ಯವನ್ನು ಕಸಿದು ಸಾಮ್ರಾಜ್ಯ ನಡೆಸುವ ಮಾವೋನ ಬೆನ್ನ ಹಿಂದೆ ತಲೆತಗ್ಗಿಸಿ ನಡೆಯುವ ಭಾರತೀಯ ಕಮ್ಯುನಿಸ್ಟರಿಗೆ ಏನೆನ್ನಬೇಕು. ಸಾವರ್ಕರರ ಹೇಳಿಕೆಯನ್ನು ಹಿಡಕೊಂಡು ಸಾವರ್ಕರವಾದಿಗಳನ್ನೂ ಧಿಕ್ಕರಿಸುವ, ಮನುವಿನ ಸ್ಮೃತಿಯ ಒಂದೇ ಸಾಲನ್ನು ಹಿಡಿದು ಇಡಿಯ ಹಿಂದೂಗಳನ್ನು ಮನುವಾದಿಗಳೆಂದು ಜರಿಯುವ ಈ ಮಾವೋವಾದಿಗಳ ನಿಯತ್ತಿನ ಪ್ರಶ್ನೆ ಏಳದಿರುವುದೇನು?

1c2513ba-8b7f-4077-b99c-f28ee277ac74-2060x1236

‘ಮಾವೋತ್ಸೆ ತುಂಗ’
ವಿವೇಕಾನಂದರು ಚಿಕಾಗೋದಲ್ಲಿ ಎಲ್ಲಾ ಮತಗಳೂ ಏಕ ಭಗವಂತನನ್ನೇ ಸೇರುವಂಥವೆಂದು ಧರ್ಮ ಸಂದೇಶ ಕೊಡುವಾಗ ಆತ ಇನ್ನೂ ಹುಟ್ಟಿಯೇ ಇರಲಿಲ್ಲ. ಆತ್ಮ ಮೋಕ್ಷಕ್ಕೆ ಜಗತ್ತಿನ ಹಿತ ಸಾಧಿಸುವುದೇ ಶ್ರೇಷ್ಠ ಮಾರ್ಗವೆಂದು ಅವರು ಸಾರುವಾಗ ಮಾವೋ ಶಾಲೆಗೂ ಹೋಗುತ್ತಿರಲಿಲ್ಲ. ತ್ಯಾಗಿಗಳಾಗಿ ಸೇವಾ ಮಾರ್ಗದಲ್ಲಿ ನಡೆಯಿರೆಂದು ಸ್ವಾಮೀಜಿ ಈ ನಾಡಿನ ಸಿರಿವಂತರಿಗೆ, ಮೇಲ್ವರ್ಗದವರಿಗೆ ಕೊನೆಗೆ ಪ್ರತಿಯೊಬ್ಬರಿಗೂ ಕರೆಕೊಡುವಾಗ ಮಾವೋ ಅಪ್ಪನೊಂದಿಗೆ ಕಾದಾಡುತ್ತಿದ್ದ ಅಷ್ಟೇ. ಸಮೀಕರಣವೇಕೆಂದು ಯೋಚಿಸುತ್ತಿದ್ದೀರೇನು? ಮಾವೋನ ಬಾಲ ಹಿಡಿದು ಗಿರಗಿಟ್ಟಲೆ ತಿರುಗುತ್ತಿರುವವರಿಗೆ ಅವನಿಗಿಂತಲೂ ಶುದ್ಧವಾದ, ಭಾರತದ ನೆಲಕ್ಕೆ ಹತ್ತಿರವಾದ ವಿವೇಕಾನಂದ ಸಿದ್ಧಾಂತಗಳು ಅರ್ಥವಾಗುತ್ತಿಲ್ಲವಲ್ಲ ಎಂಬುದನ್ನು ನೆನಪಿಸಲಿಕ್ಕೆ ಅಷ್ಟೇ. ಮಾವೋನ ಕಾಲಕ್ಕೇ ಸೋತ ಅವನ ನಂಬಿಕೆಗಳು ಅವನು ಸತ್ತ ನಂತರ ಭಾರತದಲ್ಲಿ ಉಚ್ಛ್ರಾಯ ಸ್ಥಿತಿಗೇರುವುದೆಂದು ನಂಬುತ್ತ ಕುಳಿತಿದ್ದಾರಲ್ಲ; ಅಯ್ಯೋ ಪಾಪ!
ಬಾಲ್ಯದಿಂದಲೂ ಮಾವೋನ ಬದುಕು ವಿಕ್ಷಿಪ್ತವೇ. ತಂದೆಯನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. ‘ಮನೆಯಲ್ಲಿ ಅಪ್ಪನದು ಆಳುವವರ್ಗ, ತನ್ನದು ತಮ್ಮಂದಿರೊಡಗೂಡಿ ವಿರೋಧ ಪಕ್ಷ. ಅಮ್ಮ ಇಬ್ಬರ ನಡುವಿನ ಶಾಂತಿದೂತೆ’ ಎಂದು ತನ್ನ ಕುರಿತಂತೆ ಬರೆದ ಲೇಖಕರಲ್ಲಿ ಹೇಳಿಕೊಂಡಿದ್ದಾನೆ. ಅಪ್ಪನೊಂದಿಗೆ ಕಿತ್ತಾಡಿಕೊಂಡು ಮನೆ ಬಿಟ್ಟವ ಅಮ್ಮನ ಶಾಂತಿಯ ಪ್ರಯತ್ನಕ್ಕೆ ಸಿಕ್ಕು ಮರಳಿ ಬಂದಾಗ ಅಪ್ಪನೆದುರು ನಿಯಮ ಹಾಕಿದ್ದನಂತೆ ‘ಮತ್ತೆ ಹೊಡೆಯುವಂತಿಲ್ಲ’. ಆನಂತರ ಅಪ್ಪನ ಏಟು ಕಡಿಮೆಯಾಯ್ತು, ‘ಪ್ರತಿಭಟಿಸಿ ನಿಂತರೆ ಗೆಲುವು ಖಾತ್ರಿ’ ಎಂಬುದು ಅವನಿಗೆ ಅರಿವಾಯ್ತು.
ರೂಸೋ, ಹರ್ಬಟರ್್ ಸ್ವೆನ್ಸರ್, ಥಾಮಸ್ ಹಕ್ಸಲಿ, ಆಡಂಸ್ಮಿತ್, ಡಾವರ್ಿನ್ ರ ಸಾಹಿತ್ಯಗಳು ಆಗೆಲ್ಲ ಚೀನಾದ ಮಾರುಕಟ್ಟೆಯನ್ನು ಕೊಳ್ಳೆ ಹೊಡೆದಿತ್ತು. ತರುಣರು ದೊರೆಯ ಪ್ರಭುತ್ವದಿಂದ ಕಳಚಿಕೊಳ್ಳಲು ಈ ಕೃತಿಗಳಿಂದ ಪ್ರೇರಣೆ ಪಡೆಯುತ್ತಿದ್ದರು. ಬಲಶಾಲಿಯಾದವನೇ ಭೋಗಿಸುವವನೆಂಬ ಸಿದ್ಧಾಂತ ಮಾವೋನ ಮನಸ್ಸನ್ನು ಹಿಡಿದುಬಿಟ್ಟಿತ್ತು. ಅವನ ಸಿದ್ಧಾಂತ ಸ್ಪಷ್ಟತೆ ಪಡೆದುಕೊಂಡಿತು. ‘ಬಲಶಾಲಿಯಾಗಬೇಕು ಮತ್ತು ಇತರರು ತನಗಿಂತ ಬಲಶಾಲಿಯಾದರೆ ಅವರನ್ನು ಕೊಲ್ಲಬೇಕು’.

Mao-Zedong-young
ಈ ಮಧ್ಯೆಯೇ ಅಪ್ಪ ಮಾಡಿದ ಬಲವಂತದ ಮದುವೆಯ ಕೋಪಕ್ಕೆ ಹೆಂಡತಿಯಿಂದ ದೂರವಿದ್ದ. ಆಕೆ ತೀರಿಕೊಂಡ ಮೇಲೆ ತನ್ನದೇ ಮಾರ್ಗದಲ್ಲಿ ನಡೆಯುವ ಹೆಣ್ಣನ್ನು ಮದುವೆಯಾದ. ಜೀವನದುದ್ದಕ್ಕೂ ಮನೆಯವರು ಒಪ್ಪಿ ಮಾಡುವ ಮದುವೆಯನ್ನು ಧಿಕ್ಕರಿಸಿದ. ಮುಕ್ತತೆಯನ್ನು ಬೋಧಿಸಿದ! ‘ಮೈ ಚಾಯ್ಸ್’ ರೀತಿಯ ದೀಪಿಕಾ ಪಡುಕೋಣೆಯ ವಿಡಿಯೋಗಳ ಕಲ್ಪನೆಯ ಮೂಲ ಇವೇ ಚಿಂತನೆಗಳು.
ಮಂಚು ಸಾಮ್ರಾಜ್ಯವನ್ನು ರಾಷ್ಟ್ರೀಯವಾದಿಗಳು ಬುಡಮೇಲುಗೊಳಿಸಿ ಅಧಿಕಾರ ಕೈಗೆತ್ತಿಕೊಂಡಾಗ ಮಾವೋ ಕುಡಿ ಮೀಸೆಯ ತರುಣ. ಕಾಮರ್ಿಕರ ಹೋರಾಟದ ಮಾಕ್ಸರ್್ ರೂಪುರೇಷೆಗಳನ್ನು ಹತ್ತಿರದಿಂದಲೇ ಗಮನಿಸುತ್ತಿದ್ದವ. ಸಕ್ರಿಯ ಕಾರ್ಯಕರ್ತ ಕೂಡ. ಸರಿಸುಮಾರು ಈ ವೇಳೆಗೇ ಆತ ಸಕರ್ಾರದ ಬೆಂಬಲದಿಂದ ಶಾಲೆಯೊಂದನ್ನು ತೆರೆದ. ವಿದ್ಯಾಥರ್ಿ ತನಗಿಷ್ಟವಾದುದನ್ನು ತಾನೇ ಓದಿಕೊಳ್ಳುವ ಮತ್ತು ಕಾಮರ್ಿಕರೊಂದಿಗೆ ಸೇರಿ ಒಂದಷ್ಟು ಚಟುವಟಿಕೆ ಮಾಡುವ ರೂಪುರೇಷೆ ಹಾಕಿಕೊಟ್ಟ. ಚೀನಿಯರು ತಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಮರೆಯಬಾರದೆಂದು ಅವನು ತಾಕೀತು ಮಾಡುತ್ತಿದ್ದ. (ಮಾವೋ, ಡೆಲಿಯಾ ಡೇವಿನ್, ಆಕ್ಸ್ಫಡರ್್ ಪಬ್ಲಿಕೇಶನ್ಸ್) ಭಾರತೀಯ ಮಾವೋವಾದಿಗಳು ಸಾರಾಸಗಟು ಮಾವೋ ನಕಲು ಮಾಡಿದ್ದಾರಾದರೂ ಈ ವಿಚಾರವನ್ನು ಮಾತ್ರ ಮರೆಮಾಚುತ್ತಾರೆ. ಅಷ್ಟೇ ಅಲ್ಲ. ಇಲ್ಲಿನ ಇತಿಹಾಸವನ್ನು ತಿರುಚಿ, ಸಂಸ್ಕೃತಿಯನ್ನು ಅವಹೇಳನಕಾರಿಯಾಗಿ ಪ್ರಸ್ತುತಪಡಿಸುತ್ತಾರೆ.
ಚೀನಾದ ಪರಿಸ್ಥಿತಿ ರಷ್ಯಾಕ್ಕಿಂತ ಭಿನ್ನವಾಗಿತ್ತು. ಇಲ್ಲಿ ಕಾಮರ್ಿಕರಿಗಿಂತ ಹೆಚ್ಚು ರೈತರ ಸಂಘಟನೆಗೆ ಒತ್ತು ಕೊಡಬೇಕಿತ್ತು. ಮಾವೋ ರಷ್ಯನ್ನರ ಆಜ್ಞೆ ಕೇಳುವುದನ್ನು ಬಿಟ್ಟ. ತನ್ನ ಅನುಭವದ ಆಧಾರದ ಮೇಲೆ ರೈತರನ್ನು ಒಟ್ಟುಗೂಡಿಸಿದ. ಕಮ್ಯುನಿಸ್ಟ್ ಪಾಟರ್ಿಯೂ ಅವನನ್ನು ವಿರೋಧಿಸಿತು, ತಲೆಕೆಡಿಸಿಕೊಳ್ಳಲಿಲ್ಲ. ‘ಚೀನಾದ ಎಲ್ಲ ದಿಕ್ಕುಗಳಿಂದಲೂ ಲಕ್ಷಾಂತರ ರೈತರು ಕೆಲವೇ ಸಮಯದಲ್ಲಿ ಪ್ರಚಂಡ ಬಿರುಗಾಳಿಯಂತೆ ಮೇಲೇಳಲಿದ್ದಾರೆ. ಈ ಶಕ್ತಿ ಅದೆಷ್ಟು ಹಿಂಸಾತ್ಮಕವಾಗಿರಲಿದೆಯೆಂದರೆ ಬಲಾಢ್ಯರೂ ಅದನ್ನು ತಡೆಯಲಾರರು’ ಎಂದು ಭವಿಷ್ಯ ನುಡಿದ. ಈತನ ಕಲ್ಪನೆಯ ಕ್ರಾಂತಿಯ ಕುರಿತಂತೆ, ಕೆಲವರು ಪ್ರಶ್ನೆಗಳನ್ನೆತ್ತಿದ್ದಾಗ ‘ಕ್ರಾಂತಿಯೆನ್ನುವುದು ರಾತ್ರಿಯೂಟದ ಪಾಟರ್ಿ ಮಾಡಿದಂತೆಯೋ, ಲೇಖನ ಬರೆದಂತೆಯೋ, ಚಿತ್ರ ಬಿಡಿಸಿದಂತೆಯೋ ಅಲ್ಲ’ ಎಂದ. ‘ಕ್ರಾಂತಿ ಮತ್ತೊಬ್ಬನ ಅಧಿಕಾರವನ್ನು ಕಿತ್ತೆಸೆಯುವ ಹಿಂಸಾತ್ಮಕ ಚಟುವಟಿಕೆ’ ಎಂದ.
ಮಾವೋಗೆ ಅನುಮಾನವೇ ಇರಲಿಲ್ಲ. ಆತ ಕೊಲೆಗಡುಕನಾಗಲು ಸಿದ್ಧನಾಗಿಬಿಟ್ಟಿದ್ದ. ಕೆಂಪುಸೇನೆಯನ್ನು ಕಟ್ಟಿದ. ಸುದೀರ್ಘ ನಡಿಗೆಗೆ ಸಾಮಾನ್ಯರನ್ನೂ ತಯಾರು ಮಾಡಿದ. ಸುಮಾರು ಒಂದು ಲಕ್ಷ ಜನ ಅವನ ಹಿಂದೆ ನಡೆದರು. ಸುಮಾರು 8 ಸಾವಿರ ಮೈಲುಗಳಷ್ಟು ಚೀನಿ ಭೂ ಪ್ರದೇಶವನ್ನು ಆಕ್ರಮಿಸಿಕೊಂಡರು. ಆ ವೇಳೆಗೆ ಅನೇಕ ಸಾವು ನೋವುಗಳೂ ಆಗಿದ್ದವು. ಹತ್ತರಲ್ಲಿ ಒಬ್ಬರು ಮಾತ್ರ ಗುರಿಮುಟ್ಟಿದರೆಂದು ಇತಿಹಾಸ ಹೇಳುತ್ತದೆ. ಉಳಿದವರಲ್ಲಿ ಬಹುತೇಕರು ಅನಾರೋಗ್ಯಕ್ಕೆ, ಹಸಿವಿಗೆ ತುತ್ತಾಗಿ ತೀರಿಕೊಂಡರು! ಮಾವೋ ತಲೆ ಕೆಡಿಸಿಕೊಳ್ಳಲಿಲ್ಲ. ಅವನ ದೃಷ್ಟಿ ಅಖಂಡ ಚೀನಾದ ಮೇಲಿತ್ತು.

maoamo
ಮಾವೋ ಹಂತಹಂತವಾಗಿ ರಾಷ್ಟ್ರದ ಮೇಲೆ ಮತ್ತು ಕಮ್ಯುನಿಸ್ಟ್ ಪಾಟರ್ಿಯ ಮೇಲೆ ತನ್ನ ಹಿಡಿತವನ್ನು ಸಾಧಿಸುತ್ತ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಅಧ್ಯಕ್ಷನಾಗಿಬಿಟ್ಟ! ರಷ್ಯಾದ ಸಾಕಷ್ಟು ಪ್ರಭಾವ ಹೊಂದಿದ್ದ ಮಾವೋ ಅಲ್ಲಿನಂತೆ ಪಂಚವಾಷರ್ಿಕ ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಧಿಗೆ ನಿಂತ. ಊಹೂಂ. ಚೀನಾದ ಬೆಳವಣಿಗೆಯಾಗಲಿಲ್ಲ. ಅತ್ತ ತನ್ನ ರಾಷ್ಟ್ರವನ್ನು ಸೈನಿಕ ಶಕ್ತಿಯಾಗಿ ಪರಿವತರ್ಿಸುವ ಅವನ ಯೋಜನೆಯನ್ನೂ ರಷ್ಯಾ ಬೆಂಬಲಿಸಲಿಲ್ಲ. ಮಾವೋ ಕಿಡಿಕಿಡಿಯಾದ. ತನ್ನ ರಾಷ್ಟ್ರವನ್ನು ಯಾರ ಸಹಕಾರವೂ ಇಲ್ಲದೇ ಕಟ್ಟಲು ಮನಸ್ಸು ಮಾಡಿದ. ಆಗಲೇ ಹುಟ್ಟಿದ್ದು ಅವನ ಕನಸಿನ ಸಾಕಾರದ ಬರ್ಬರತೆಯ ಪರ್ವ.
ಅದಕ್ಕೂ ಮುನ್ನ ಆತ ತನ್ನ ದೇಶದ ಬುದ್ಧಿಜೀವಿಗಳಿಗೆ, ಉಪನ್ಯಾಸಕರಿಗೆ, ಚಿಂತಕರಿಗೆ ಕರೆಕೊಟ್ಟು ಮುಕ್ತವಾದ ಟೀಕೆಗಳನ್ನೂ ಮಾಡುವಂತೆ ಆಹ್ವಾನಿಸಿದ. ತಪ್ಪುಗಳನ್ನು ಎತ್ತಿ ತೋರಿದರೆ ರಾಷ್ಟ್ರ ನಿಮರ್ಾಣಕ್ಕೆ ಶಕ್ತಿ ತುಂಬಿದಂತಾಗುವುದೆಂದು ಡಂಗುರ ಸಾರಿಸಿದ! ಜೊತೆಗಿರುವವರ ವಿರೋಧದ ನಡುವೆಯೂ ಅವನ ನಿರ್ಣಯ ಅಚಲವಾಗಿತ್ತು. ಮೊದಮೊದಲು ಮಾತನಾಡಲು ಹಿಂದೇಟು ಹಾಕಿದ ಬುದ್ಧಿವಂತ ವರ್ಗ ಆಮೇಲೆ ಒಳಗಿದ್ದ ಅಸಹನೆಯನ್ನೆಲ್ಲ ಕಾರಿಕೊಂಡಿತು. ಪತ್ರಿಕೆಗಳು ಮಾವೋನ ಗುಣ-ನಡತೆಗಳನ್ನು, ಚಿಂತನೆ-ಸಿದ್ಧಾಂತಗಳನ್ನೂ ಬಲವಾಗಿ ವಿರೋಧಿಸಿದವು. ಇದು ಜನಮಾನಸದ ಮೇಲೆ ಪ್ರಭಾವ ಉಂಟು ಮಾಡುತ್ತಿದೆಯೆಂದು ಮಾವೋಗೆ ಅನಿಸಲಾರಂಭಿಸಿದಂತೆ ನಿಲುವು ಬದಲಾಯ್ತು. ತನ್ನ ವಿರೋಧಿ ಚಿಂತಕರನ್ನು ಅವನೀಗ ಗುರುತಿಸಿಯಾಗಿತ್ತು. ಅವರನ್ನು ಬಂಧಿಸಿ ಬಗೆ ಬಗೆಯ ಶಿಕ್ಷೆ ನೀಡಿದ. ಅವರ ಪರಿವಾರದವರಿಗೆ ಶಿಕ್ಷಣ, ಉದ್ಯೋಗ, ಭಡ್ತಿ ನೀಡುವಿಕೆಯಲ್ಲೆಲ್ಲಾ ಎಷ್ಟು ಸಾಧ್ಯವೋ ಅಷ್ಟು ತಾರತಮ್ಯ ಮಾಡಲಾಯ್ತು. ಅವತ್ತೇ ಕೊನೆ. ಅಲ್ಲಿಂದಾಚೆಗೆ ಚೀನಾದಲ್ಲಿ ನಿರ್ಭಯವಾಗಿ ಸತ್ಯವನ್ನು ಹೇಳುವವರೇ ಇಲ್ಲವಾದರು. ಇಂದಿಗೂ ಅಲ್ಲಿ ಪತ್ರಿಕಾ ಸ್ವಾತಂತ್ರ್ಯವಿಲ್ಲ.
ಈಗ ಹೇಳಿ. ಕ್ರಾಂತಿಯೆಂದರೆ ರಕ್ತವೆನ್ನುವ, ಬೌದ್ಧಿಕ ಸ್ವಾತಂತ್ರ್ಯವನ್ನು ಕಸಿದು ಸಾಮ್ರಾಜ್ಯ ನಡೆಸುವ ಮಾವೋನ ಬೆನ್ನ ಹಿಂದೆ ತಲೆತಗ್ಗಿಸಿ ನಡೆಯುವ ಭಾರತೀಯ ಕಮ್ಯುನಿಸ್ಟರಿಗೆ ಏನೆನ್ನಬೇಕು. ಸಾವರ್ಕರರ ಹೇಳಿಕೆಯನ್ನು ಹಿಡಕೊಂಡು ಸಾವರ್ಕರವಾದಿಗಳನ್ನೂ ಧಿಕ್ಕರಿಸುವ, ಮನುವಿನ ಸ್ಮೃತಿಯ ಒಂದೇ ಸಾಲನ್ನು ಹಿಡಿದು ಇಡಿಯ ಹಿಂದೂಗಳನ್ನು ಮನುವಾದಿಗಳೆಂದು ಜರಿಯುವ ಈ ಮಾವೋವಾದಿಗಳ ನಿಯತ್ತಿನ ಪ್ರಶ್ನೆ ಏಳದಿರುವುದೇನು?
ಮಾವೋ ಈಗ ಬಲಾಢ್ಯನಾಗಿದ್ದ. ಎದುರಾಳಿಗಳನ್ನು ಅಕ್ಷರಶಃ ಇಲ್ಲವಾಗಿಸಿದ್ದ. ಈಗವನ ಕಣ್ಣೆದುರಿಗಿದ್ದುದು ಒಂದೇ ಗುರಿ. ಮುಂದಿನ ಹದಿನೈದು ವರ್ಷಗಳಲ್ಲಿ ಯೂರೋಪಿಗೆ ಸರಿಸಮವಾದ ಚೀನಾ ನಿಮರ್ಾಣ ಮಾಡಬೇಕು! ಅದಕ್ಕೆ ಅವನಿಗೆ ಕಂಡಿದ್ದು ಜಮೀನುಗಳಲ್ಲಿ ವ್ಯರ್ಥವಾಗುತ್ತಿರುವ ರೈತಸಮೂಹ. ಎಲ್ಲರ ಜಮೀನುಗಳನ್ನು ಒಂದುಗೂಡಿಸಿ ಹೆಚ್ಚಿನ ಉತ್ಪನ್ನವನ್ನು ಸಕರ್ಾರಕ್ಕೆ ಪಡೆದ. ಚಳಿಗಾಲದಲ್ಲಿ ಕೃಷಿ ಭೂಮಿಯಲ್ಲಿ ಕೆಲಸವಿಲ್ಲದಾದಾಗ ಅವರನ್ನು ಕಟ್ಟಡ-ಡ್ಯಾಂಗಳನ್ನು ಕಟ್ಟುವ ಕೆಲಸಕ್ಕೆ ಬಳಸಿಕೊಂಡ. ಎಲ್ಲರೂ ಒಂದೆಡೆ ಮಲಗುವ, ಊಟ ಮಾಡುವ ಕಮ್ಯೂನ್ಗಳನ್ನು ಸೃಷ್ಟಿಮಾಡಿದ. ಅಡುಗೆ ಮಾಡಿ ಬಡಿಸುವ ಕೆಲಸಕ್ಕೆ ರೈತರ ಹೆಂಡತಿಯರು ನಿಯೋಜಿತರಾದರು. ಹೆಚ್ಚು ಹೆಚ್ಚು ಕಬ್ಬಿಣ ಉತ್ಪಾದನೆಯಾದರೆ ಹೆಚ್ಚು ಬೆಳವಣಿಗೆ ಎಂಬ ನಂಬಿಕೆ ಅವನಿಗಿದ್ದುದರಿಂದ ಪ್ರತಿಯೊಬ್ಬರ ಮನೆಯ ಕಬ್ಬಿಣದ ಸಾಮಾನುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸುವಂತೆ ಮಾಡಿದ. ಒಟ್ಟಾರೆ ಚೀನಿಯರಿಗೆ ನರಕದ ಅನುಭವವನ್ನು ಭೂಮಿಯ ಮೇಲೇ ಮಾಡಿಸಿಬಿಟ್ಟ ಪುಣ್ಯಾತ್ಮ. ಮಾವೋನ ಹತ್ತಿರವಿದ್ದ ಅಧಿಕಾರಿಗಳು ಬಣ್ಣ ಬಣ್ಣದ ವರದಿ ಕೊಡುತ್ತಿದ್ದರು. ಕೃಷಿ ಉತ್ಪನ್ನ ಹೆಚ್ಚುತ್ತಲೇ ಇದೆ ಎಂದರು. ಚೀನಾ ಮಾವೋನ ಕೋಣೆಯೊಳಗೇ ಸಮೃದ್ಧವಾಗಿ ಬೆಳೆಯಿತು. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ ಇತ್ತು. ಸತ್ಯ ಹೇಳುವ ಧೈರ್ಯವಿದ್ದವರು ಮಾತ್ರ ಯಾರೂ ಇರಲಿಲ್ಲ.
ಮಾವೋ ರೈತರು, ಕಾಮರ್ಿಕರು, ಬಡವರ ಪಾಲಿಗೆ ರಾಕ್ಷಸನಾಗಿಬಿಟ್ಟ. ಅವನ ಸಿದ್ಧಾಂತಗಳು ಮಣ್ಣು ಮುಕ್ಕಿದವು. ಆದರೂ ವಿಸ್ತಾರದ ಹಪಾಪಿತನ ಮಾತ್ರ ಅವನಿಂದ ದೂರವಾಗಲಿಲ್ಲ. ಅವನೆದುರಿಗೆ ಈಗ ಭಾರತವಿತ್ತು. ಅದನ್ನು ಇಂಚಿಂಚು ಕಬಳಿಸಲು ಹೊಂಚುಹಾಕುತ್ತಿದ್ದ. ಆಗಲೇ ಬಂಗಾಳದ ಕಮ್ಯುನಿಸ್ಟ್ ಗ್ಯಾಂಗು ಭಾರತದ ವಿರುದ್ಧ ಕತ್ತಿ ಮಸೆಯಲು ಶುರು ಮಾಡಿದ್ದು. ನಕ್ಸಲ್ ಆಂದೋಲನ ಜನ್ಮ ತಾಳಿದ್ದು.
ನಕ್ಸಲ್ ಬಾರಿ, ಖಾರಿಬಾರಿ ಸಿಲಿಗುರಿಯ ಡಾಜರ್ಿಲಿಂಗ್ನ ಸಣ್ಣ ಸಣ್ಣ ಪ್ರದೇಶಗಳು. ಕಾಡಿನಿಂದಲೇ ಆವೃತವಾದ ಈ ಹಳ್ಳಿಗಳ ಜನಸಂಖ್ಯೆ ತೀರಾ ಕಮ್ಮಿ. ನಕ್ಸಲ್ಬಾರಿಯ ವಿಶೇಷವೆಂದರೆ ಇಲ್ಲಿಂದ ನೇಪಾಳಕ್ಕೆ ನಾಲ್ಕೇ ಮೈಲು. ಬಾಂಗ್ಲಾಕ್ಕೆ ಹದಿನಾಲ್ಕು ಮತ್ತು ಟಿಬೇಟ್ಗೆ ಎಂಭತ್ತು ಮೈಲು. ಇಡಿಯ ಈಶಾನ್ಯ ಭಾರತಕ್ಕೆ ಇತರೆ ಭಾರತವನ್ನು ಸಂಪಕರ್ಿಸುವ ಜೀವಂತ ಪ್ರದೇಶ ಅದು. ಚೈನಾಕ್ಕೆ ಇಂತಹುದೇ ಜಾಗದ ಮೇಲೆ ಕೆಂಪು ಬಾವುಟ ಹಾರಿಸಿ ಭಾರತವನ್ನು ತೊಂದರೆಗೆ ಸಿಲುಕಿಸುವ ಇರಾದೆ. ಅದಕ್ಕೆ ಬೆಂಬಲವಾಗಿ ನಿಂತಿದ್ದು ಬಂಗಾಳಿ ಕಮ್ಯುನಿಸ್ಟರು. ಅವರಲ್ಲಿ ಕೆಲವರು ಮಾಕ್ಸರ್್ನ ಜಪ ಮಾಡುತ್ತಾ ಸಕರ್ಾರದಲ್ಲಿ ಮಂತ್ರಿಗಳೂ ಆಗಿಬಿಟ್ಟಿದ್ದರು. ಚೀನಾ ಆಗಲೇ ಉರಿದು ಬಿದ್ದಿತ್ತು. ಇಡಿಯ ಭಾರತವನ್ನು ತೆಕ್ಕೆಗೆ ಹಾಕಿಕೊಳ್ಳಬೇಕೆಂದು ಆತ ಕನಸು ಕಾಣುತ್ತಿದ್ದರೆ ಮಾಕ್ಸರ್್ವಾದಿಗಳು ಬಂಗಾಳದ ಗದ್ದುಗೆಗೆ ತೃಪ್ತಿ ಪಟ್ಟಿದ್ದರು.
ಚೀನೀ ಕ್ರಾಂತಿಯ ಅಫೀಮು ತಿಂದು ಬೆಳೆದಿದ್ದ ಕೆಲವು ಕಾಮ್ರೇಡುಗಳು ಸುಮ್ಮನಿರಲಿಲ್ಲ. ಚಾರು ಮಜುಂದಾರ್, ಕನು ಸನ್ಯಾಲ್ರಂಥವರು ಎರಡನೇ ಹಂತದ ನಾಯಕರುಗಳನ್ನು ಸೇರಿಸಿಕೊಂಡು ಕಿಸಾನ್ ಸಭಾದ ಮೂಲಕ ಚಟುವಟಿಕೆ ತೀವ್ರಗೊಳಿಸಿದ್ದರು. ಭಿನ್ನ ಭಿನ್ನ ಆದಿವಾಸಿಗಳನ್ನು ಒಂದೆಡೆ ಕಲೆಹಾಕಿ ಅವರನ್ನು ಕ್ರಾಂತಿಗೆ ಪ್ರಚೋದಿಸಿದ್ದರು. ಸಕರ್ಾರ ಅವರೆಡೆಗೆ ಎಂದೆಂದಿಗೂ ಕಣ್ಣು ಹಾಯಿಸಲಾರದೆಂದು ನಂಬಿಸಿದರು. 1953ರಲ್ಲಿಯೇ ರಷ್ಯಾದಿಂದ ಹೊರಟ ಗುಪ್ತ ಕಡತವೊಂದು ಭಾರತದಲ್ಲಿ ರೈತರ ವಿಷಮ ಪರಿಸ್ಥಿತಿಯೆಡೆ ಗಮನ ಸೆಳೆದು ಅವರದ್ದೇ ಒಕ್ಕೂಟ ಮಾಡಲು ಕಾಮ್ರೇಡುಗಳಿಗೆ ತಾಕೀತು ಮಾಡಿತ್ತು.(Bengal, the Communist challenge – C R Irani) ಅಷ್ಟೇ ಅಲ್ಲ. ಹಿಂಸಾತ್ಮಕ ಹೋರಾಟಕ್ಕಿಳಿಯಬಲ್ಲ ರೈತರನ್ನು ಒಂದು ಮಾಡುವಂತೆಯೂ ಮುನ್ಸೂಚನೆ ನೀಡಲಾಗಿತ್ತು. 1966 ರ ಅಕ್ಟೋಬರ್ನ ಮೀಟಿಂಗಿನ ನಂತರ ಚಟುವಟಿಕೆ ತೀವ್ರವಾಯ್ತು. ಕಿಸಾನ್ ಸಭಾದ ಸದಸ್ಯರು ಕೈಯ್ಯಲ್ಲಿ ಲಾಠಿ, ಬಿಲ್ಲು-ಬಾಣಗಳನ್ನು, ಕೆಂಪು ಬಾವುಟವನ್ನು ಹಿಡಿದು ಬೀದಿಗಿಳಿದರು. ಮಾವೋತ್ಸೆತುಂಗನಿಗೆ ಜಯಕಾರ ಹಾಕಿದರು. ನೆನಪಿಡಿ ಅದಾಗಲೇ ಚೀನಾ ಭಾರತದ ಮೇಲೆ ಏಕಪಕ್ಷೀಯ ದಾಳಿ ನಡೆಸಿ ಭಾರತದ ಸಾವಿರಾರು ಸೈನಿಕರ ಮಾರಣ ಹೋಮ ನಡೆಸಿತ್ತು. ನಮ್ಮದೇ ಜನ ಈಗ ಅದರ ಸೂತ್ರಧಾರನಿಗೆ ಜೈಕಾರ ಹಾಕುತ್ತಿದ್ದರು.
ಕಿಸಾನ್ ಸಭಾದ ರೈತರು ಒತ್ತಾಯ ಪೂರ್ವಕವಾಗಿ ರೈತರ ಜಮೀನುಗಳನ್ನು ಕಸಿದರು. ಒಂದಷ್ಟು ಕಮ್ಯುನಿಸ್ಟ್ ಗೂಂಡಾಗಳು ಯಾರದ್ದೋ ಜಮೀನಿನ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೆಂಪುಬಾವುಟ ನೆಡುತ್ತಿದ್ದರು. ಅಷ್ಟೇ! ಆ ಜಮೀನು ಅವರ ಪಾಲಾದಂತೆ. ಹೀಗೆ ವಶಪಡಿಸಿಕೊಂಡ ಜಮೀನು ಸಿರಿವಂತರದ್ದೇ ಆಗಿತ್ತೆಂದು ಭಾವಿಸಿಬಿಡಬೇಡಿ. ಅನೇಕ ಕಡೆ ಕಡು ಬಡವರ ಜಮೀನನ್ನೂ ಕಸಿಯಲಾಯ್ತು. ರಾಮ್ ಮನೋಹರ್ ಲೋಹಿಯಾ ಮುಂದೊಮ್ಮೆ ಹೇಳಿದರಲ್ಲ, ‘ನಕ್ಸಲ್ ಬಾರಿಯ ಎಡ ಪಂಥೀಯ ಕಮ್ಯುನಿಸ್ಟ್ ಚಳುವಳಿ ದೊಡ್ಡ ಜಮೀನ್ದಾರರ ವಿರುದ್ಧವಾಗಿರಲಿಲ್ಲ; ಬದಲಿಗೆ ಸಾಮಾನ್ಯ ಕೂಲಿಗಾರರ ಮತ್ತು ಬಡ ರೈತರ ವಿರುದ್ಧವಾಗಿತ್ತು’ ಅಂತ ಈ ಕಾರಣಕ್ಕೇ! ರೈತರು ಮನೆಯಲ್ಲಿ ಕೂಡಿಟ್ಟಿದ್ದ ಧಾನ್ಯದ ದಾಸ್ತಾನನ್ನು ಸಾರಾಸಗಟಾಗಿ ಹೊತ್ತೊಯ್ದರು ಕಮ್ಯುನಿಸ್ಟ್ ಗೂಂಡಾಗಳು. ಬಹುಪಾಲು ಅವರ ಮನೆಗಳಲ್ಲಿ ದಾಸ್ತಾನಾಯಿತು ಅಷ್ಟೇ. ಲೇಖಕ ಸಿ ಆರ್ ಇರಾನಿ ಈ ಕುರಿತಂತೆ ಸಂಶೋಧನೆ ನಡೆಸಿ ಚಾರು ಮಜುಂದಾರರು ಹೊಂದಿದ್ದ ಜಮೀನಿನ ಲೆಕ್ಕಾಚಾರವನ್ನು ಮುಚ್ಚಿಡಲಾಗಿತ್ತು ಎನ್ನುತ್ತಾರೆ. ಅಷ್ಟೇ ಅಲ್ಲ. ಜಮೀನು ಕಸಿಯಲು ಹೋಗುತ್ತಿದ್ದ ಅನೇಕ ನಾಯಕರು ತಾವು ಮಾತ್ರ ಸಾಕಷ್ಟು ಭೂಮಿಯ ಒಡೆಯರೇ ಆಗಿದ್ದನ್ನು ಗುರುತಿಸಿದ್ದಾರೆ.
ನಕ್ಸಲ್ ಬಾರಿಯಲ್ಲಿ ತಮ್ಮ ನೆಲೆ ಗಟ್ಟಿ ಮಾಡಿಕೊಳ್ಳಲು ಈ ಬಗೆಯ ಆಂದೋಲನಗಳಷ್ಟೇ ಸಾಕಾಗಿರಲಿಲ್ಲ. ಮಾವೋನ ಕನಸಿನ ಕ್ರಾಂತಿಯಾಗಬೇಕಿತ್ತು. ಅದಕ್ಕೆ ಕೆಂಪು ರಕ್ತ ಭೂಮಿಯನ್ನು ತೋಯಿಸಲೇಬೇಕಿತ್ತು. ಕಾಮ್ರೇಡುಗಳು ಮುಚ್ಚುಮರೆ ಮಾಡಲಿಲ್ಲ; ಮೇ 23ಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ವಾಂಗಡಿಯನ್ನು ಬಡಿದು ಕೊಂದೇ ಬಿಟ್ಟರು! ನಕ್ಸಲ್ರಿಗೆ ಬಲಿಯಾದ ಮೊದಲ ಅಧಿಕಾರಿ ಆತ!
ಆಮೇಲಿನದ್ದು ಮೆರವಣಿಗೆಯೇ ಸರಿ. ಮಾವೋ ಸಿದ್ಧಾಂತಗಳನ್ನೇ ಅರೆದು ಕುಡಿದಿರುವ ಒಂದಷ್ಟು ಬುದ್ಧಿಜೀವಿಗಳು, ವಿಶ್ವವಿದ್ಯಾಲಯದಲ್ಲಿ ಕುಳಿತು ಸೈನಿಕರು-ಪೊಲೀಸರು ನಕ್ಸಲ್ ದಾಳಿಗೆ ಸಿಲುಕಿ ತೀರಿಕೊಂಡಾಗಲೆಲ್ಲ ಕುಣಿದಾಡೋದು ಈ ಅಫೀಮಿನ ಪ್ರಭಾವದಿಂದಲೇ! ಜೆಎನ್ಯುನಲ್ಲಿಯೂ ಕನ್ಹಯ್ಯನ ಗ್ಯಾಂಗು ಹಾಗೆ ಸಂಭ್ರಮಿಸಿದ್ದು ನೆನಪಿರಬೇಕಲ್ಲ!

Leave a Reply