ವಿಭಾಗಗಳು

ಸುದ್ದಿಪತ್ರ


 

ಮಾತಿನಲಿ ಅನುಭವದ ಅಮೃತವಿರಲಿ. . .

ವಿಚಾರಗಳು ಬರಿ ಹೇಳಲಿಕ್ಕಲ್ಲ ಆಚರಣೆಗೆ. ಅನೇಕ ಬಾರಿ ಆಚರಣೆಗಳೇ ಮಾತಾಡುತ್ತವೆ. ಪ್ರತಿ ಮಾತಿನ ಹಿಂದೆಯೂ ಆಚರಣೆಯ ಸಾಧನೆ ಇರಲೇಬೇಕು. ಕ್ರಿಯೆಯಲ್ಲಿನ ಶುದ್ಧತೆ ಮಾತಿಗೊಂದು ಶಕ್ತಿ ಇರುತ್ತದೆ. ಇಲ್ಲವಾದಲ್ಲಿ ವಿವೇಕಾನಂದರ ಕಾಲದಲ್ಲಿ ಬಂಗಾಳದಲ್ಲಿ ಮಾತುಗಾರರಿಗೇನೂ ಕೊರತೆ ಇರಲಿಲ್ಲ. ಆದರೆ, ವಿವೇಕಾನಂದರ ವಾಣಿ ಮಾತ್ರ ಇಂದಿಗೂ ಅನುಕರಣೀಯವಾಗುತ್ತಿದೆಯಲ್ಲ ಅದೇಕೆ? ಯೋಚಿಸಿ.

‘ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೇ ಬೇರೇನೂ ಹೇಳುವುದಿಲ್ಲ’ ಹಾಗಂತ ಕೋಟರ್ಿನಲ್ಲಿ ಹೇಳುವ ಮಾತು ಕ್ಲೀಷೆಯಾಗಿ ಬಿಟ್ಟಿದೆಯಲ್ಲವೇ? ಕೋಟರ್ಿನಲ್ಲಿ ಹಾಗೆ ಹೇಳುವುದು ನಿಜವೋ, ಸುಳ್ಳೋ ಟೀವಿಯಲ್ಲಿ, ಸಿನಿಮಾಗಳಲ್ಲಿ ನೋಡಿ-ನೋಡಿ ಸತ್ಯವೇ ಸವೆದು ಹೋದಂತಾಗಿಬಿಟ್ಟಿದೆ. ಈ ಮಾತು ಈಗೇಕೆಂದರೆ, ನಮ್ಮಲ್ಲಿ ಅನೇಕ ಬೋಧೆಗಳು ಆಚರಣೆಗಿಂತ ಮಾತಿನಲ್ಲಿ, ಶಬ್ದಗಳಲ್ಲೇ ಹೆಚ್ಚು ಕಾಣಸಿಗೋದು.
ಧರ್ಮರಾಯನ ಕುರಿತಂತೆ ಒಂದು ಕಥೆ ಹೇಳುತ್ತಾರೆ. ಗುರುಗಳು ಹೇಳಿ ಕೊಟ್ಟ ‘ಸತ್ಯವನ್ನು ಹೇಳಬೇಕು, ಕೋಪ ಮಾಡಿಕೊಳ್ಳಬಾರದು’ ಎಂಬ ಪಾಠವನ್ನು ಅದೆಷ್ಟು ದಿನ ಕಳೆದರೂ ಆತ ಪೂತರ್ಿಯಾಗಿ ಕಲಿಯಲಾಗಲಿಲ್ಲವಂತೆ. ಮೊದಲರ್ಧ ಹೇಳಿ, ಉತ್ತರಾರ್ಧ ನನಗೆ ಖಾತ್ರಿಯಾಗಲಿಲ್ಲ ಎನ್ನುತ್ತಿದ್ದನಂತೆ. ಕೊನೆಗೊಮ್ಮೆ ಗುರುಗಳು ಕೋಪದಿಂದ, ‘ಎಲ್ಲರಿಗೂ ಅರ್ಥವಾಗಿದೆ, ಇಷ್ಟು ದಿನ ಕಳೆದರೂ ನಿನಗೆ ಮಾತ್ರ ಗೊತ್ತಾಗಲಿಲ್ಲವಲ್ಲ’ ಎಂದು ಉರಿದು ಬಿದ್ದಾಗ ‘ಈಗ ಅರ್ಥವಾಯಿತು’ ಎಂದ ಯುಧಿಷ್ಠಿರ. ಗುರುಗಳು ಗಾಬರಿಗೊಂಡು ಹುಬ್ಬು ಮೇಲೆತ್ತಿದರು. ‘ಸತ್ಯವನ್ನು ಹೇಳುತ್ತೇನೆ ಸರಿ, ಆದರೆ ಕಠಿಣ ಪರಿಸ್ಥಿತಿಯಲ್ಲೂ ಕೋಪ ಬರದಂತೆ ನಡೆಯಬಲ್ಲೆನೆ ಎಂಬ ಪ್ರಶ್ನೆಯಿತ್ತು. ಉತ್ತರ ಸಿಕ್ಕಿತು’ ಎಂದ ಧರ್ಮರಾಯ.
ಕತೆ ಬಲು ಮಾಮರ್ಿಕವಾಗಿದೆ. ವಿಚಾರಗಳು ಬರಿ ಹೇಳಲಿಕ್ಕಲ್ಲ ಆಚರಣೆಗೆ. ಅನೇಕ ಬಾರಿ ಆಚರಣೆಗಳೇ ಮಾತಾಡುತ್ತವೆ. ಪ್ರತಿ ಮಾತಿನ ಹಿಂದೆಯೂ ಆಚರಣೆಯ ಸಾಧನೆ ಇರಲೇಬೇಕು. ಕ್ರಿಯೆಯಲ್ಲಿನ ಶುದ್ಧತೆ ಮಾತಿಗೊಂದು ಶಕ್ತಿ ಇರುತ್ತದೆ. ಇಲ್ಲವಾದಲ್ಲಿ ವಿವೇಕಾನಂದರ ಕಾಲದಲ್ಲಿ ಬಂಗಾಳದಲ್ಲಿ ಮಾತುಗಾರರಿಗೇನೂ ಕೊರತೆ ಇರಲಿಲ್ಲ. ಆದರೆ, ವಿವೇಕಾನಂದರ ವಾಣಿ ಮಾತ್ರ ಇಂದಿಗೂ ಅನುಕರಣೀಯವಾಗುತ್ತಿದೆಯಲ್ಲ ಅದೇಕೆ? ಯೋಚಿಸಿ. ನಿನ್ನೆ ಕೇಳಿದ ಮಾತು ಇಂದು ಮರೆತು ಹೋಗಿದೆ ಎನ್ನುವ ಪರಿಸ್ಥಿತಿ ಇರುವಾಗ, ಸಾವಿರ ವರ್ಷಗಳ ಹಿಂದೆ ಕೃಷ್ಣ ಆಡಿದ ಗೀತೆಯ ಪ್ರತಿ ಮಾತು ಇಂದಿಗೂ ಹಾಗೆ ಉಳಿದಿದೆಯಲ್ಲ. . ಅದು ಹೇಗೆ?
ಸತ್ವದಿಂದ ಕೂಡಿದ ಮಾತು ಉಳಿಯಲೇಬೇಕು. ಅದು ತನ್ನದೇ ಆದ ತರಂಗಗಳನ್ನು ನಿಮರ್ಾಣ ಮಾಡುವುದಲ್ಲದೇ, ಆ ತರಂಗಗಳನ್ನು ನಿರಂತರ ವಾತಾವರಣದಲ್ಲಿರುವಂತೆ ನೋಡಿಕೊಳ್ಳುತ್ತದೆ. ಮಾತು ತೂಕಭರಿತವಾಗಿರಬೇಕು. ಮಾತು ಕ್ಲೀಷೆಯಾಗಲಾರದು, ಸವೆದು ಹೋಗಲಾರದು.

Leave a Reply