ವಿಭಾಗಗಳು

ಸುದ್ದಿಪತ್ರ


 

ಮುಸಲ್ಮಾನರೇ ವಿರೋಧಿಸುವ ಮುಸ್ಲೀಂ ಪಂಗಡವೊಂದಿದೆ, ಗೊತ್ತಾ?

ಜಾತಿ, ಮತಗಳ ಗೊಡವೆ ಇಲ್ಲವೆಂದು ಹೇಳಿಕೊಳ್ಳುವ ಇಸ್ಲಾಂ, ಅಹ್ಮದಿಯಾಗಳೆಂಬ ತಮ್ಮೊಳಗಿನ ಪಂಗಡವೊಂದಕ್ಕೆ ಬದುಕುವ ಯೋಗ್ಯತೆ ಇಲ್ಲವೆಂದು ಹೇಳುತ್ತ ಅವರ ಮಸೀದಿಗಳನ್ನು ಕೆಡವುವ, ಅನುಯಾಯಿಗಳನ್ನು ಬರ್ಬರವಾಗಿ ಕೊಲ್ಲುವ ಕಾರ್ಯ ಜಗತ್ತಿನೆಲ್ಲೆಡೆ ಮಾಡುತ್ತಿದೆ. ತಮ್ಮನ್ನು ತಾವು ಅಹ್ಮದಿಯಾಗಳೆಂದು ಧೈರ್ಯವಾಗಿ ಹೇಳಿಕೊಳ್ಳಲಾಗದ ಲಕ್ಷಾಂತರ ಜನ ಜಗತ್ತಿನೆಲ್ಲೆಡೆ ಹರಡಿಕೊಂಡಿದ್ದಾರೆ. ಪಾಕೀಸ್ತಾನದ ಪರಿಸ್ಥಿತಿಯಂತೂ ಬಲು ಕೆಟ್ಟದ್ದು.

ಜೀಸಸ್ ಕ್ರಿಸ್ತ್ ಎನ್ನು ಐತಿಹಾಸಿಕ ವ್ಯಕ್ತಿಯೊಬ್ಬರು ಬದುಕಿದ್ದುದೇ ಸುಳ್ಳು ಅಂತ ಒಂದು ವಾದವಿದೆ. ಅಕಸ್ಮಾತ್ ಬದುಕಿದ್ದರೂ ಆತ ತನ್ನ ಜೀವನದ ಕೊನೆಯ ಅವಧಿಯನ್ನು ಕಳೆದಿದ್ದು ಕಾಶ್ಮೀರದಲ್ಲಿ ಅಂತ ಹೇಳುವಂತಹ ಅನೇಕ ಸಾಹಿತ್ಯಗಳನ್ನು ನಾನು ಓದಿದ್ದೇನೆ. ಒಮ್ಮೆ ಜೀಸಸ್ ಗೋರಿಯೊಂದು ಕಾಶ್ಮೀರದಲ್ಲಿದೆ ಎಂಬುದನ್ನು ಕೇಳಿ ಅದನ್ನು ಹುಡುಕಿಕೊಂಡು ಹೋಗಿದ್ದೆ. ರೋಝಾ ಬಾಲ್ನ ಆ ಗೋರಿಯೆದುರು ನಿಂತಾಗ ಅಕ್ಕಪಕ್ಕದ ಜನ ಕೆಕ್ಕರಿಸಿಕೊಂಡು ನೋಡುತ್ತಿದ್ದರು. ನಮ್ಮನ್ನು ಕರೆದೊಯ್ದಿದ್ದ ಕಾರು ಚಾಲಕ ಯಾರೊಡನೆಯೋ ಕಿತ್ತಾಡುತ್ತಿದ್ದ. ನಮ್ಮ ಬಳಿಗೆ ಬಂದು ಬೇಗ ಹೊರಡುವಂತೆ ಪೀಡಿಸುತ್ತಿದ್ದ. ಇಸ್ಲಾಮಿಗೆ ನೀವೇ ಕಳಂಕ ತರುತ್ತೀರಿ ಅಂತ ಅವನ ಮೇಲೆ ರೇಗಾಡುತ್ತಿದ್ದರು ಅಲ್ಲಿನ ಜನ. ನಮಗೂ ಅದ್ಯಾವ ಭಂಡ ಧೈರ್ಯವಿತ್ತೋ ಮುಲಾಜಿಲ್ಲದೇ ಆ ಗೋರಿಯ ಸುತ್ತ-ಮುತ್ತ ತಿರುಗಾಡುತ್ತಲೇ ಇದ್ದೆವು. ಅದಕ್ಕೆ ಬೀಗ ಜಡಿಯಲಾಗಿತ್ತು. ಹೊರಗೆ ದೊಡ್ಡದೊಂದು ಫಲಕ. ‘ಇಲ್ಲಿ ಈಸಾ ಮಸೀಹಾನ ದೇಹವಿದೆ ಎಂಬುದು ಸುಳ್ಳು. ಅವರು ಕುರಾನಿನಲ್ಲಿ ಹೇಳಿರುವಂತೆ ಜೀವಂತ ಸ್ವರ್ಗ ಸೇರಿದ್ದಾರೆ. ಮತ್ತು ಜಗತ್ತಿನ ಕೊನೆಯಾಗುವ ಮುನ್ನ ಮರಳಿಬಂದು ಜನಕ್ಕೆ ಮತ್ತೊಮ್ಮೆ ಭಗವಂತನ ದಾರಿ ತೋರುತ್ತಾರೆ’ ಅಂತ ಬರೆದಿತ್ತು. ಅದನ್ನು ಓದುವಾಗಲೇ ಏಸುವಿನ ದೇಹ ಅರಸಿ ಇಲ್ಲಿಗೆ ಬಹಳ ಜನ ಬರುತ್ತಾರೆ ಅಂತ ಗೊತ್ತಾಗಿದ್ದು. ಅಲ್ಲಿಯೇ ಕೈಯ್ಯಲ್ಲೊಂದು ಪುಸ್ತಕ ಹಿಡಿದ ಮುಸ್ಲಿಂ ತರುಣನನ್ನು ಮಾತಿಗೆಳೆದೆ. ಬಂದಿದ್ದೇಕೆಂದು ಕೇಳಿದೆ. ಅವನ ಮಾತಿಗೆ ಪೂರಕವಾಗಿ ಮಾತನಾಡಲಾರಂಭಿಸಿದ್ದರಿಂದ ಆತನೂ ಕಿರಿಕಿರಿ ಮಾಡಲಿಲ್ಲ. ಅಕ್ಕಪಕ್ಕದ ಜನರೂ ನಮ್ಮನ್ನು ಶತ್ರುಗಳಂತೆ ಕಾಣುವುದನ್ನು ಬಿಟ್ಟು ಬಿಟ್ಟರು. ಆ ತರುಣ ಮುಸಲ್ಮಾನ ಮೌಲ್ವಿ ಹೊಸದೊಂದು ಲೋಕವನ್ನೇ ನಮ್ಮದುರಿಗೆ ತೆರೆದಿಟ್ಟ. ಇಸ್ಲಾಂ ಜಗತ್ತು ಇಂದು ಕಾಫಿರರೆಂದು ಗುರುತಿಸಿ ಅತ್ಯಂತ ಕೆಟ್ಟದಾಗಿ ಕಾಣುವ ಪಂಜಾಬ್ನ ಕಾದಿಯಾನ್ನ ಅಹ್ಮದಿಯಾಗಳ ಪರಿಚಯ ಮಾಡಿಸಿದ.

2

ನಮಗೀಗ ಈ ಕುರಿತಂತೆ ಕೆದಕುವ ಬಯಕೆಯಾಯ್ತು. ಅಲ್ಲಿರಬಹುದಾದ ಅಹ್ಮದಿಯಾಗಳ ಪಟ್ಟಿ ತೆಗೆಸಿ ಹುಡುಕಿಕೊಂಡು ಹೊರೆಟೆವು. ಅದೊಂದು ವಿಶಾಲವಾದ ಮನೆ. ಪೋಟೋಗಳಿಗೆ ಫ್ರೇಮ್ ಹಾಕಿಸುವ ಕುಟುಂಬ. ಅಲ್ಲಿನ ಕೆಲಸಗಾರರು ನಮ್ಮನ್ನು ಕೆಕ್ಕರಿಸಿ ನೋಡಿದರು. ಹಿರಿಯರು ಬಂದೊಡನೆ ಮಾತು ಶುರುವಾಯ್ತು. ನೇರವಾಗಿ ವಿಷಯಕ್ಕೆ ಬರಲು ಹೆದರಿಕೆ. ಕಾಶ್ಮೀರದ ಸ್ಥಿತಿ-ಗತಿ ಗೊತ್ತಿರುವವರಾರೂ ಇಂತಹುದೊಂದು ಸಾಹಸಕ್ಕೆ ಕೈಹಾಕಲಾರರು. ಸುತ್ತಿ ಬಳಸಿ ಮಾತಿಗೆ ಬಂದೆವು. ಆತ ಹೆದರಿಕೊಂಡೇ ಪಿಸುಗುಟ್ಟಿದ. ತಮ್ಮ ಪಂಥದಲ್ಲಿ ಸ್ವಲ್ಪ ತಿಳಿದುಕೊಂಡಿರುವವರ ಮನೆಗೆ ನಮ್ಮನ್ನೊಯ್ದ. ಗಂಟೆಗಟ್ಟಲೆ ಮಾತಾಡಿದೆವು. ಇಸ್ಲಾಂ ಜಗತ್ತಿನಲ್ಲಿ ಕಾಫೀರರೆನಿಸಿಕೊಂಡು ಬದುಕುತ್ತಿರುವ ಜನಾಂಗವೊಂದರ ಪರಿಚಯವಾಯ್ತು.

ಹೌದು. ಜಾತಿ, ಮತಗಳ ಗೊಡವೆ ಇಲ್ಲವೆಂದು ಹೇಳಿಕೊಳ್ಳುವ ಇಸ್ಲಾಂ, ಅಹ್ಮದಿಯಾಗಳೆಂಬ ತಮ್ಮೊಳಗಿನ ಪಂಗಡವೊಂದಕ್ಕೆ ಬದುಕುವ ಯೋಗ್ಯತೆ ಇಲ್ಲವೆಂದು ಹೇಳುತ್ತ ಅವರ ಮಸೀದಿಗಳನ್ನು ಕೆಡವುವ, ಅನುಯಾಯಿಗಳನ್ನು ಬರ್ಬರವಾಗಿ ಕೊಲ್ಲುವ ಕಾರ್ಯ ಜಗತ್ತಿನೆಲ್ಲೆಡೆ ಮಾಡುತ್ತಿದೆ. ತಮ್ಮನ್ನು ತಾವು ಅಹ್ಮದಿಯಾಗಳೆಂದು ಧೈರ್ಯವಾಗಿ ಹೇಳಿಕೊಳ್ಳಲಾಗದ ಲಕ್ಷಾಂತರ ಜನ ಜಗತ್ತಿನೆಲ್ಲೆಡೆ ಹರಡಿಕೊಂಡಿದ್ದಾರೆ. ಪಾಕೀಸ್ತಾನದ ಪರಿಸ್ಥಿತಿಯಂತೂ ಬಲು ಕೆಟ್ಟದ್ದು. 1974 ರಲ್ಲಿ ಅಲ್ಲಿ ಅಹ್ಮದಿಯಾಗಳನ್ನು ಮುಸಲ್ಮಾನರಲ್ಲವೆಂಬ ಠರಾವು ಮಂಡಿಸಿ ಸಂವಿಧಾನಕ್ಕೆ ತಿದ್ದುಪಡಿಯೂ ಮಾಡಲಾಯ್ತು. 2012 ರಲ್ಲಿ ಎರಡು ಮಸೀದಿಗಳನ್ನು ಅಹ್ಮದಿಯಾಗಳಿಗೆ ಸೇರಿತ್ತೆಂಬ ಒಂದೇ ಕಾರಣಕ್ಕೆ ಅಲ್ಲಿನ ಸಕರ್ಾರವೇ ಉರುಳಿಸಿ ಬಿಸಾಡಿತ್ತು. ಬಾಬ್ರೀ ಮಸೀದಿ ಉರುಳಿಸಿದ್ದಕ್ಕೆ ಬೊಬ್ಬೆ ಹಾಕಿದ್ದ ಜಗತ್ತಿನ ಯಾವ ಮುಸ್ಲೀಂರೂ ಅದರ ವಿರುದ್ಧ ಚಕಾರವೆತ್ತಲಿಲ್ಲ.

Mirza_Ghulam_Ahmad_(c._1897)
1835 ರಲ್ಲಿ ಪಂಜಾಬಿನ ಕಾದಿಯಾನಿಯಲ್ಲಿ ಹುಟ್ಟಿದ ಗುಲಾಮ್ ಅಹ್ಮದ್ರು ಇಸ್ಲಾಂನ ಸಂದೇಶಗಳು ಮತ್ತು ಆಚರಣೆಗಳಲ್ಲಿ ಅಜಗಜಾಂತರವನ್ನು ಗುರುತಿಸಿ ಅದನ್ನು ಸರಿ ಪಡಿಸುವ ಹೊಣೆ ಹೊತ್ತರು. ಅವರು ಪ್ರವಾದಿಯವರನ್ನು ಕಾನೂನು ನೀಡಲು ಬಂದವರೆಂದೂ ತಮ್ಮನ್ನು ಆ ಕಾನೂನನ್ನು ಸೂಕ್ತವಾಗಿ ವ್ಯಾಖ್ಯಾನಿಸುವ ಗುರು ಎಂದುಕೊಂಡರು. ಪ್ರವಾದಿ ಮಹಮ್ಮದರು ಹೇಳಿರುವಂತಹ ಭವಿಷ್ಯದ ಮಸೀಹಾ ತಾನೇ ಎಂದು ಘೋಷಿಸಿಕೊಂಡ ಗುಲಾಮ್ ಅಹ್ಮದ್ರು ಏಸುವಿನ ಇಂದಿನ ರೂಪ ತಾನೇ ಎನ್ನಲೂ ಹಿಂಜರಿಯಲಿಲ್ಲ. ಜಾಗತಿಕವಾದ ಮತೀಯ ಯುದ್ಧಗಳನ್ನು ತಡೆಯಲೆಂದೇ ತನ್ನ ಅವತಾರ ಎಂದು ಮುಕ್ತವಾಗಿ ಹೇಳಿಕೊಳ್ಳಲಾರಂಭಿಸಿದರು. ತಮ್ಮ ವಾದಕ್ಕೆ ಪುಷ್ಟಿ ದೊರೆಯಲೆಂದೇ ಏಸುವಿನ ಗೋರಿ ಕಾಶ್ಮೀರದಲ್ಲಿದೆ ಎಂಬ ಭವಿಷ್ಯವಾಣಿಯನ್ನು ನುಡಿದರು. ಅಲ್ಲಿಯವರೆಗೂ ಯಾರಿಗೂ ಅದರ ಬಗ್ಗೆ ಅರಿವಿರಲಿಲ್ಲ. ಅವರ ಹೇಳಿಕೆಯ ನಂತರ ರೋಝಾಬಾಲ್ನಲ್ಲಿನ ಗೋರಿಯನ್ನು ಹುಡುಕಿ ತೆಗೆಯಲಾಯ್ತು. ಅದು ಇತರೆಲ್ಲ ಮುಸ್ಲೀಂ ಗೋರಿಗಳಿಗಿಂತ ಭಿನ್ನವಾಗಿ ಯಹೂದಿಗಳ ರೀತಿಯಲ್ಲಿ ಹೂಳಲ್ಪಟ್ಟಿತ್ತು. ಅದನ್ನು ನೋಡಿಕೊಳ್ಳಲೂ ಯಹೂದಿ ಮೂಲದವರೇ ಇದ್ದಿದ್ದು ಅಹ್ಮದಿಯಾ ಮಾತಿಗೆ ಇಂಬು ಕೊಟ್ಟಿತ್ತು. ಬರು ಬರುತ್ತ ಗುಲಾಮ್ ಅಹ್ಮದ್ರು ಇಸ್ಲಾಂನ ಹೆಸರಲ್ಲಿ ನಡೆಸುವ ಎಲ್ಲ ಕ್ರೌರ್ಯವನ್ನು ಖಂಡಿಸಿದರು. ಜೀಹಾದನ್ನು ವಿರೋಧಿಸಿದರು. ಶಾಂತಿಯ ಸಂದೇಶವಾಹಕರಾದರು. ಕತ್ತಿಯ ಜಿಹಾದ್ ಅಲ್ಲ, ಲೇಖನಿ ಬಳಸಿ ಸಮಾಜಕ್ಕೆ ಸಂದೇಶ ಪ್ರಚಾರ ಮಾಡುವ ಸಾತ್ವಿಕ ಜಿಹಾದ್ ನಡೆಯಬೇಕಿದೆಯೆಂಬ ಅವರ ಮಾತಿಗೆ ಅನೇಕರು ತಲೆದೂಗಿದರು. ಸಹಜವಾಗಿಯೇ ಕ್ರೌರ್ಯದ ಸೆರಗಿನಲ್ಲಿ ಮತ ಪ್ರಚಾರಕ್ಕೆ ನಿಂತಿದ್ದವರಿಗೆ ಕಿರಿಕಿರಿಯಾಗಲಾರಂಭಿಸಿತು. ಇದರಿಂದ ದೂರವುಳಿಯಲು ಬಯಸಿದ್ದ ಸಾಮಾನ್ಯ ಜನತೆ ಮಾತ್ರ ಅಹ್ಮದಿಯಾ ಪಂಥದೆಡೆಗೆ ಆಕಷರ್ಿತರಾದರು.
ಸಹಜವಾಗಿಯೇ ಇದನ್ನು ಸಹಿಸಲಾಗದ ಕಟ್ಟರ್ ಪಂಥಿಗಳು ಕಾದಿಯಾನಿಯ ಈ ಪಂಗಡದ ಮೇಲೆ ಮುಗಿಬಿದ್ದರು. ಅಪವಾದಗಳ ಸರಮಾಲೆಯೇ ಆಯ್ತು. ಇವರದ್ದು ಇಸ್ಲಾಂ ಅಲ್ಲವೇ ಅಲ್ಲ. ಇದೊಂದು ಹೊಸ ಪಂಥವೆಂದರು. ಆದರೆ ಇಸ್ಲಾಂನ ಐದೂ ಸ್ತಂಭಗಳನ್ನು ಒಪ್ಪುವ ಈ ಪಂಥವನ್ನು ಹೊಸದೆಂದು ಕರೆಯುವುದು ಹೇಗೆಂಬುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ. ಮಿಜರ್ಾ ಗುಲಾಮ್ ಅಹ್ಮದ್ರ ಕುರಿತಂತೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರು. ಆತ ಪ್ರವಾದಿ ಮಹಮ್ಮದರ ವಿರೋಧಿ ಅಂದರು. ಆದರೆ ಸ್ವತಃ ಗುಲಾಮ್ ಅಹ್ಮದ್ರು ಪ್ರವಾದಿಯ ಕುರಿತಂತೆ ಅಪಾರ ಗೌರವವನ್ನು ಹೊಂದಿದವರಾಗಿದ್ದರು. ಗುಲಾಮ್ ಅಹ್ಮದ್ರನ್ನು ಬ್ರಿಟೀಷರ, ಇಸ್ರೇಲಿಗಳ ದಾಳವೆಂದರು. ಪಾಪ. ತಮ್ಮದೇ ಪಂಥದವರಿಂದ ಬಿಟ್ಟು ಇತರರಿಂದ ಒಂದು ಪೈಸೆಯೂ ಸ್ವೀಕರಿಸಬಾರದೆಂದು ಸಂಕಲ್ಪ ಹೊಂದಿರುವ ಪಂಥ ಅದು. ಹಾಗೆ ನೋಡಿದರೆ, ಅಮೇರಿಕಾದಿಂದ ಭಿಕ್ಷೆ ಪಡೆದು ಭಯೋತ್ಪಾದನಾ ಸಂಘಟನೆ ಕಟ್ಟಿದ ಒಸಾಮಾ ಬಿನ್ ಲಾಡೆನ್ನ ಮೇಲೆ ಈ ಅಪವಾದ ಇರಬೇಕಿತ್ತು. ಆದರೆ ಇಸ್ಲಾಂ ಸಮಾಜಕ್ಕೆ ಆತ ಮಹಾ ನಾಯಕ. ಇಸ್ಲಾಂ ಜಗತ್ತು ಅಹ್ಮದಿಯಾ ಪಂಗಡವನ್ನು ವಿರೋಧಿಸಲು ಸ್ಪಷ್ಟ ಕಾರಣವಿದೆ. ಜಗತ್ತಿನ ಎಷ್ಟೇ ರಾಷ್ಟ್ರಗಳಿಗೆ ಇಸ್ಲಾಂ ಹಬ್ಬಿದರೂ ಅದರ ಲಗಾಮು ತಮ್ಮ ಬಳಿಯೇ ಇರಬೇಕೆಂದು ಬಯಸುತ್ತಾರೆ ಸೌದಿಗಳು. ಹೀಗಾಗಿಯೇ ಇಸ್ಲಾಂನ್ನು ಅರಬ್ ವಸಾಹತುಷಾಹೀ ಆಡಳಿತವೆಂದು ಅನೇಕಬಾರಿ ಹೇಳೋದು ಕೂಡ. ಈಗ ಪ್ರವಾದಿ ಮೊಹಮ್ಮದರು ಭವಿಷ್ಯ ನುಡಿದ ಮಸೀಹಾ ಒಬ್ಬ ಭಾರತದಿಂದ ಉದಯಿಸಿ ಬರುವುದನ್ನು ಅವರು ಸಹಿಸುವುದಾದರೂ ಹೇಗೆ? ಹಾಗೆಂದೇ ಅವರ ಮೇಲೆ ಬಗೆಬಗೆಯ ಆರೋಪಗಳು. ಇಷ್ಟರ ನಡುವೆಯೂ ಅಹ್ಮದಿಯಾ ಪಂಥ ವೇಗವಾಗಿ ಬೆಳೆಯುತ್ತಿದೆ. 1908ರಲ್ಲಿ ಅಹ್ಮದರು ತೀರಿಕೊಂಡ ನಂತರವೂ ಅಷ್ಟೇ ಪ್ರಭಾವಿಯಾಗಿ ಮತ ವಿಸ್ತಾರಕ್ಕೆಂದು ಅನೇಕ ನಾಯಕರು ಸಮಪರ್ಿಸಿಕೊಂಡರು. ಇಂದು ಐದನೇ ಖಲೀಫಾ ಮಿಝರ್ಾ ಮಸೂರ್ ಅಹ್ಮದ್ ತಮ್ಮ ಮೂಲ ಸತ್ವವನ್ನು ಬಿಡದಂತೆ ಅದಾಗಲೇ 206 ರಾಷ್ಟ್ರಗಳಿಗೆ ಪಂಥವನ್ನು ವಿಸ್ತರಿಸಿದ್ದಾರೆ. 16 ಸಾವಿರಕ್ಕೂ ಹೆಚ್ಚು ಮಸೀದಿಗಳು, 500ಕ್ಕೂ ಹೆಚ್ಚು ಶಾಲೆಗಳು, 30ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ನಿಮರ್ಿಸಿದ್ದಾರೆ. ಇದುವರೆಗೂ ಎಲ್ಲಿಯೂ ಈ ಪಂಥದ ವಿರುದ್ಧ ಒಂದೇ ಒಂದು ಕ್ರೌರ್ಯದ ಪ್ರಕರಣ ದಾಖಲಾಗಿಲ್ಲ. ಹಾಗೆ ನೋಡಿದರೆ ಜಿಹಾದಿಗಳ ವಿರುದ್ಧ ಜಾಗತಿಕವಾದ ದನಿ ಎತ್ತುವ ಮುಸಲ್ಮಾನರ ಬಲವಾದ ಪಂಗಡ ಇದೇ. ಜಾಗತಿಕ ಮಟ್ಟದ 30 ಸಾವಿರಕ್ಕೂ ಹೆಚ್ಚು ಜನ ಇಂಗ್ಲೆಂಡಿನಲ್ಲಿ 2016 ರಲ್ಲಿ ಸಭೆ ಸೇರಿ, ಭಯೋತ್ಪಾದಕ ಸಂಘಟನೆಗಳ ವಿರುದ್ಧವಾಗಿ ಠರಾವು ಸ್ವೀಕರಿಸಿದ್ದರು. ಈ ಕಾರಣಕ್ಕಾಗಿಯೇ ಅನೇಕ ಬಾರಿ ಮುಸಲ್ಮಾನ ಭಯೋತ್ಪಾದಕರ ಕೋಪಕ್ಕೆ ತುತ್ತಾದವರೂ ಇವರೇ. ಲಂಡನ್ನಿನಲ್ಲಿ ಭಯೋತ್ಪಾದಕ ದಾಳಿಯಾದಾಗ ಅದನ್ನು ಖಂಡಿಸಿ ವೆಸ್ಟ್ಮಿನಿಸ್ಟರ್ ಸೇತುವೆಯ ಮೇಲೆ ತಮ್ಮ ಯುವ ಸಂಘಟನೆಯ ಮುಖಾಂತರ ಬಲುದೊಡ್ಡ ಪ್ರದರ್ಶನ ಏರ್ಪಡಿಸಿದ್ದವರೂ ಇವರೇ. ಹಾಗಂತ ಅಲ್ಲಿಯೂ ಎಲ್ಲರೂ ಇವರನ್ನು ನಂಬಿಬಿಟ್ಟರೆಂದು ಹೇಳಲಾಗದು. ಅನೇಕ ಕಟ್ಟರ್ ಕ್ರಿಸ್ತಾನುಯಾಯಿಗಳು ಇದನ್ನು ನಾಟಕವೆಂದು ಜರಿದು ಇಸ್ಲಾಂನ್ನು ಹಬ್ಬಿಸುವ ಮುಖವಾಡವಿದು ಎಂದರು. ಅತ್ತ ಭಯೋತ್ಪಾದಕ ದಾಳಿಯನ್ನು ಖಂಡಿಸುವ ಮೂಲಕ ಅಹ್ಮದಿಯಾಗಳು ಅವರ ಗಮನವನ್ನು ತಮ್ಮತ್ತ ಸೆಳೆದುಕೊಂಡು ದಾಳಿಗೆ ತುತ್ತಾಗಿ ಜನರ ಕರುಣೆಗೆ ಪಾತ್ರವಾಗುವ ನಾಟಕ ಮಾಡುತ್ತಾರೆಂದೂ ಮುಸಲ್ಮಾನರೂ ತೆಗಳುತ್ತಾರೆ.

3

ಒಂದಂತೂ ಸತ್ಯ. ಮುಸಲ್ಮಾನರೊಳಗಿನ ಈ ಜಾತಿಯ ಜನ ಎಲ್ಲೆಲ್ಲಿದ್ದಾರೋ ಅವರೆಲ್ಲ ಸಮಾಜದೊಂದಿಗೆ ಸೌಹಾರ್ದಯುತವಾಗಿಯೇ ಬದುಕಿದ್ದಾರೆ. ಗುಲಾಂ ಅಹ್ಮದ್ರ ಪ್ರಮುಖ ಸಂದೇಶವೇ ರಾಜಕಾರಣದಿಂದ ದೂರವಿರುವ ಮಸೀದಿಯ ಕುರಿತಂಥದ್ದು. ನೂರು ವರ್ಷಗಳಷ್ಟು ಹಿಂದೆಯೇ ತಮ್ಮ ಅನುಯಾಯಿಗಳಿಗೆ, ಧರ್ಮ ಮತ್ತು ರಾಷ್ಟ್ರವೆರಡರ ಗೌರವವನ್ನೂ ಉಳಿಸುವಂತೆ ಆದೇಶಿಸಿದ್ದರು ಅವರು. ಭಗವಂತನ ಸೃಷ್ಟಿಯನ್ನು ಕಾಪಾಡುವ ಹೊಣೆ ಪ್ರತಿಯೊಬ್ಬರ ಮೇಲೆಯೂ ಇದೆ ಎಂಬುದು ಅವರ ವಾದವಾಗಿತ್ತು. ಈ ಜನ ಭಾರತದಲ್ಲೂ ಅಲ್ಪ ಪ್ರಮಾಣದಲ್ಲಿದ್ದಾರೆ. ಕಟ್ಟರತೆಯನ್ನು ದ್ವೇಷಿಸಿ ಮಾನವತೆಯನ್ನು ಪ್ರೀತಿಸುವ, ಅರಬ್ ರಾಷ್ಟ್ರದ ಜೀತವನ್ನು ಧಿಕ್ಕರಿಸಿ ಭಾರತವನ್ನು ಪ್ರೀತಿಸುವ ಇಲ್ಲಿನ ಮುಸಲ್ಮಾನರು ಅಹ್ಮದಿಯಾದತ್ತ ಒಲವು ತೋರಿಸುವುದು ಒಳಿತೇ. ಸಲಫೀ, ವಹಾಬಿಗಳ ತೀವ್ರತೆ ಇಲ್ಲವಾಗಿ ಕಾದಿಯಾನದ ಅಹ್ಮದಿಯಾಗಳ ಪ್ರೇಮ ಹಬ್ಬುವುದು ಮಾನವತೆಗೆ ಸಂತಸದಾಯಕವೇ.

ಅಂದಹಾಗೆ ಈ ಪಂಥದ ಪ್ರಮುಖರೊಬ್ಬರು ಇಸ್ರೇಲಿನಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಹೂ ಗುಚ್ಛ ಕೈಗಿತ್ತು, ಭಾರತದಲ್ಲಿ ಅಹ್ಮದಿಯಾಗಳಿಗೆ ಬೆಂಬಲ ಕೊಡುತ್ತಿರುವುದಕ್ಕೆ ಪ್ರೀತಿಯಿಂದ ಅಭಿನಂದಿಸಿದರು. ಅದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು.

Leave a Reply