ವಿಭಾಗಗಳು

ಸುದ್ದಿಪತ್ರ


 

ಮೋದಿಯ ಮಾಸ್ಟರ್ ಸ್ಟ್ರೋಕ್ಗೆ ಪತರಗುಟ್ಟಿತು ಜಗತ್ತು!!

ಏಷ್ಯಾದ ದೊರೆಯಾಗಿ ಮೆರೆಯುತ್ತಿದ್ದ ಚೀನಾ ಕಳೆದ ಒಂದು ವರ್ಷದಲ್ಲಿ ಅದೆಷ್ಟು ಸೊರಗಿ ಹೋಗಿದೆಯೆಂದರೆ ಅದು ತನ್ನ ನೀತಿಯನ್ನು ಬದಲಿಸಿ ಹೊಸ ಹಾದಿ ತುಳಿಯಲಿಲ್ಲವೆಂದರೆ ಕುಸಿಯುವುದು ಖಾತ್ರಿ. ಬರಿಯ ಚೀನಾ ಅಷ್ಟೇ ಅಲ್ಲ. ಪಾಕಿಸ್ತಾನದ ಹೆಸರು ಹೇಳಿ, ಅದನ್ನು ಮುಂದಿಟ್ಟುಕೊಂಡು ಭಾರತವನ್ನು ಆಟ ಆಡಿಸುತ್ತಿದ್ದ ರಷ್ಯಾ-ಅಮೇರಿಕಾಗಳೂ ಬೆಚ್ಚಿ ಬಿದ್ದಿವೆ. ಭಾರತ ಈಗ ಬೇರೆಯವರ ಸಲಹೆ ಕೇಳಲಿಕ್ಕೆಂದು ಇರುವ ಸಾಮಾನ್ಯ ರಾಷ್ಟ್ರವಾಗಿ ಉಳಿದಿಲ್ಲ. ಜಗತ್ತಿನ ಪ್ರಮುಖ ಸಂಗತಿಗಳಲ್ಲಿ ಭಾರತಕ್ಕೀಗ ಮಹತ್ವದ ಸ್ಥಾನ ಕೊಡಲೇಬೇಕು.

narendra-modi-nawaz-sharif-pti_650x400_81451055752

ಅವನೊಬ್ಬ ರಾಜ. ಆತನ ವಿರುದ್ಧ ದಂಗೆಯೇಳುವ ಪಿತೂರಿ ನಡೆಯುತ್ತಿದೆಯೆಂಬ ಸುದ್ದಿ ದಿನಾಲೂ ಗೂಢಚಾರರ ಮೂಲಕ ಬರುತ್ತಿತ್ತು. ರಾಜನೂ ರಕ್ಷಣೆಗೆ ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದ್ದ. ‘ಊರಿನ ಕ್ಷೌರಿಕನೊಬ್ಬನ ಅಂಗಡಿಯಲ್ಲಿ ವಿದ್ರೋಹದ ಸಭೆ ನಿತ್ಯ ಸೇರುತ್ತಿದೆ, ಅಲ್ಲಿಯೇ ರಾಜನ ಹತ್ಯೆಯ ಸಂಚು ರೂಪುಗೊಳ್ಳುತ್ತಿದೆ’ ಎಂಬ ಮಾಹಿತಿ ಹೊಸದಾಗಿ ಬಂತು. ಮರುದಿನವೇ ರಾಜ ತನ್ನ ಆಪ್ತರಾರಿಗೂ ಹೇಳದೇ ಬೆಳ್ಳಂಬೆಳಗ್ಗೆ ಕ್ಷೌರ ಮಾಡಿಸಿಕೊಳ್ಳಲು ಆತನ ಅಂಗಡಿಗೇ ಹೋಗಿ ಕುಳಿತು ಬಿಟ್ಟ. ತಡಬಡಾಯಿಸಿದ ಕ್ಷೌರಿಕ ರಾಜನನ್ನು ಕೂರಿಸಿದ, ಗೌರವಾದರ ತೋರಿದ. ಶ್ರದ್ಧೆಯಿಂದ ತನ್ನ ಕೆಲಸ ಮಾಡಲಾರಂಭಿಸಿದ. ಅವನ ಮನಸ್ಸು ಹೊಯ್ದಾಡುತ್ತಿತ್ತು. ಕೈಲಿರುವ ಕತ್ತಿಯನ್ನು ಹೇಗೆ ಬೇಕಿದ್ದರೂ ಅವನು ಬಳಸಬಹುದಿತ್ತು. ಯಾಕೋ ಆತ ಹಾಗೆ ಮಾಡಲಿಲ್ಲ. ಧೈರ್ಯ ಸಾಕಾಗಲಿಲ್ಲವೋ? ವ್ಯವಸ್ಥೆ ಪೂರ್ಣ ಗೊಂಡಿರಲಿಲ್ಲವೋ? ಅಥವಾ ಕ್ಷೌರಿಕನ ಕುರಿತ ಮಾಹಿತಿಯೇ ಸತ್ಯಕ್ಕೆ ದೂರವಾಗಿತ್ತೋ? ದೇವರೇ ಬಲ್ಲ. ಆದರೆ ರಾಜ ಮಾತ್ರ ನಗುನಗುತ್ತ ಅಲ್ಲಿಂದ ಎದ್ದು ಹೊರ ಬಂದು ಅರಮನೆ ಸೇರಿಕೊಂಡ.
ಸತ್ಯ ಅದೇನು ಗೊತ್ತೆ? ರಾಜನ ಆತ್ಮವಿಶ್ವಾಸದ ಪ್ರಭೆಗೆ ಕೊಚ್ಚಿ ಹೋದ ಕ್ಷೌರಿಕ ತಾನು ಮಾಡಬೇಕಾದುದನ್ನು ಮರೆತು ನಿಂತುಬಿಟ್ಟಿದ್ದ.
ಈ ಕಥೆ ಮೋದಿ ಪಾಕಿಸ್ತಾನಕ್ಕೆ ಹೋಗಿ ಬಂದಾಗಿನಿಂದ ನನ್ನ ಕಾಡುತ್ತಿದೆ. ರಷ್ಯಾದಿಂದ ರಾತ್ರಿ ಹೊರಟು ಅಫ್ಘಾನಿಸ್ತಾನದ ಕಾಬೂಲಿನಲ್ಲಿ ತಿಂಡಿ ತಿಂದು ಅಚಾನಕ್ಕು ಪಾಕಿಸ್ತಾನಕ್ಕೆ ಹೋಗಿ ಸಂಜೆ ಚಹಾ ಕುಡಿದು ರಾತ್ರಿ ಊಟಕ್ಕೆ ದೆಹಲಿಗೆ ಮರಳಿ ಬಂದು ಬಿಟ್ಟರು. 1965ರ ಯುದ್ಧದ ಸಂದರ್ಭದಲ್ಲಿ ಪಾಕೀ ನಾಯಕ ಅಯೂಬ್ ಖಾನರು ಮಧ್ಯಾಹ್ನದ ಊಟ ಅಮೃತಸರದಲ್ಲಿ ರಾತ್ರಿ ದೆಹಲಿಯಲ್ಲಿ ಎಂದು ಮಾತನಾಡಿಕೊಳ್ಳುತ್ತಿದ್ದರಂತೆ. ಅವರಂತೂ ಅದನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಮೋದಿ ಸ್ವಲ್ಪ ವಿಸ್ತಾರ ಮಾಡಿ ಲಾಹೋರ್ ಮತ್ತು ದೆಹಲಿ ಬೆಸೆದು ಬಿಟ್ಟರು. ಕಾಬೂಲ್ನನ್ನು ಸೇರಿಸಿಕೊಂಡರೆ ಅಖಂಡ ಭಾರತದ ಸಂಕಲ್ಪದ ಮೊದಲ ಹೆಜ್ಜೆ ಆಯಿತು!
ಕ್ಷೌರಿಕನ ನಿಯತ್ತಿನ ಪರೀಕ್ಷೆ ಮಾಡಿದ ರಾಜನಂತೆ ಮೋದಿ ಪಾಕಿಸ್ತಾನಕ್ಕೆ ಹೋಗಿ ಬಂದದ್ದಲ್ಲದೇ ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುಹೆಯಲ್ಲಿರೋದು ಸಿಂಹಗಳೇನಲ್ಲ ಎಂದು ಖಾತ್ರಿ ಪಡಿಸಿಬಿಟ್ಟರು. ಮೋದಿ ಇರುವಷ್ಟು ದಿನ ಭಾರತ-ಪಾಕ್ ಬಾಂಧವ್ಯ ಸುಧಾರಿಸಲಾರದೆಂದು ಮಣಿ ಶಂಕರ್ ಅಯ್ಯರ್, ಸುಧೀಂದ್ರ ಕುಲಕಣರ್ಿಯಂತಹ ತೃತೀಯ ದಜರ್ೆಯ ನಾಯಕರು, ಲೇಖಕರು ಬಿತ್ತಿದ್ದ ಭಯದ ಭಾವನೆಯನ್ನು ಒಂದೇ ಏಟಿಗೆ ಹೊಡೆದು ಕೆಡವಿಬಿಟ್ಟರು. ಕಾಂಗ್ರೆಸ್ಸು ಈ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಮಾಜಿ ಮಂತ್ರಿ ಆನಂದ್ ಶಮರ್ಾ ಪತ್ರಿಕಾಗೋಷ್ಠಿ ಕರೆದು ಉತ್ತರಿಸಲು ತಿಣಕಾಡುತ್ತಿದ್ದುದನ್ನು ನೋಡಿದರೆ ಎಂತಹವನಿಗೂ ಅರ್ಥವಾಗುವಂತಿತ್ತು. ಅಲ್ಲದೇ ಮತ್ತೇನು? ಪಾಕಿಸ್ತಾನದೊಂದಿಗೆ ಸಂಬಂಧ ಸುಧಾರಣೆಗೆ ಈ ಸಕರ್ಾರ ಪ್ರಯತ್ನವೇ ಮಾಡುತ್ತಿಲ್ಲವೆಂದು ಹೇಳುತ್ತ ಮುಸಲ್ಮಾನರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದ ಕಾಂಗ್ರೆಸ್ಸು ಈಗ ಅಕ್ಷರಶಃ ನಿರುತ್ತರ.

Anand-Sharma
ಮೋದಿಯವರ ಪಾಕ್ ಭೇಟಿ ರಾಜತಾಂತ್ರಿಕ ದೃಷ್ಟಿಯಿಂದ ನಿಜಕ್ಕೂ ಮಾಸ್ಟರ್ ಸ್ಟ್ರೋಕ್. ಭಾರತ ಬಿಡಿ. ಜಗತ್ತೇ ಅಚ್ಚರಿಗೆ ಒಳಗಾಗಿದೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ದ್ವೇಷಕ್ಕೆ ತುಪ್ಪ ಸುರಿದು ಮೈ ಚಳಿ ಕಾಯಿಸಿಕೊಳ್ಳುತ್ತಿದ್ದ ನೆರೆಯ ರಾಷ್ಟ್ರಗಳಂತೂ ಬೆಚ್ಚಿ ಬಿದ್ದಿವೆ. ಚೀನಾ ಅಂತೂ ಇನ್ನೂ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ.
ಬಹುಶಃ ಈವರೆಗೆ ಸೈನ್ಯ ಅಥವಾ ಗೂಢಚಾರರೂ ಮುಖ್ಯ ಭೂಮಿಕೆಯಲ್ಲಿಲ್ಲದೇ ನಡೆಸಿರುವ ಮೊದಲ ಭೇಟಿ ಇದಾಗಿರಬೇಕು. ನಿಜಕ್ಕೂ ವಿಶ್ವಾಸವನ್ನು ಗಟ್ಟಿಗೊಳಿಸಿದ ಭೇಟಿ ಇದು. ಇಲ್ಲಿ ರಕ್ಷಣೆಗಾಗಿ ಹೆಚ್ಚು ಪೊಲೀಸರಿರಲಿಲ್ಲ. ಗೂಢಚಾರರೂ ಬಲ ಹಬ್ಬಿಸಿ ಭಯೋತ್ಪಾದಕರ ಸಂಚು ವಿಫಲಗೊಳಿಸುವ ಕಸರತ್ತು ಇರಲಿಲ್ಲ. ಕೊನೆಗೆ ಇಬ್ಬರೂ ನಾಯಕರು ಕೈ ಕುಲುಕುವ ಮುನ್ನ ತಮ್ಮ ಸೇನಾ ಪ್ರಮುಖರ ಮೀಟಿಂಗೂ ನಡೆಸಿರಲಿಲ್ಲ! ಹಾಗಂತ ಪೂರ್ಣ ತಲೆ ಬಾಗಿಸಿ ಪಾಕಿಸ್ತಾನ ಹೇಳಿದಂತೆ ಕೇಳಿಕೊಂಡು ಬರುವ ಶೈಲಿಯ ಗೆಳೆತನ ಅಲ್ಲ ಇದು. ಅತ್ಯಂತ ಸಹಜವಾದ, ಸುಮಧುರವಾದ ಬಾಂಧವ್ಯ ಶೈಲಿ.
ಈ ಭೇಟಿಯಿಂದ ಪಾಕಿಸ್ತಾನದ ಜನತೆ ಆನಂದದಲ್ಲಿ ಮೈಮರೆತು ಬಿಟ್ಟಿದ್ದಾರೆ. ವಾಜಪೇಯಿಯವರು ಪಾಕಿಸ್ತಾನಕ್ಕೆ ಬಸ್ಸು-ರೈಲು ಬಿಟ್ಟಿದ್ದನ್ನು ನೆನಪಿಸಿಕೊಳ್ಳಿ. ಅವತ್ತು ಇಡಿಯ ಭಾರತದಲ್ಲಿ ದೀಪಾವಳಿಯ ಸಂಭ್ರಮ. ಪಾಕಿಸ್ತಾನ ಅದನ್ನು ಸಹಜವಾಗಿ ಸ್ವೀಕರಿಸಿತ್ತು ಅಷ್ಟೇ. ಇಂದು ಪೂರ್ಣ ವಿರುದ್ಧ. ಮೋದಿಯ ಲಾಹೋರ್ ಭೇಟಿಗೆ ಪಾಕಿಸ್ತಾನದಲ್ಲಿ ಸಿಕ್ಕ ಪ್ರತಿಕ್ರಿಯೆ ಊಹಿಸಲೂ ಸಾಧ್ಯವಿಲ್ಲದ್ದು. ಪ್ರತಿಯೊಂದು ಪಕ್ಷವೂ ಈ ಭೇಟಿಯನ್ನು ಹೊಗಳಿದೆ. ಮೋದಿಯ ದೂರದಶರ್ಿತ್ವದಿಂದ ಪಾಠ ಕಲಿಯಬೇಕು ಎಂದಿದೆ. ಅಷ್ಟೇ ಅಲ್ಲ. ಇನ್ನು ಮುಂದೆ ಭಾರತ-ಪಾಕ್ ಬಾಂಧವ್ಯ ವೃದ್ಧಿಯಾಗಲಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿದೆ. ಇತ್ತ ಭಾರತದಲ್ಲಿ ಮನ ಬಂದಂತೆ ಮಾತಾಡಿರುವ ಕಾಂಗ್ರೆಸ್- ಆಪ್ನ ಕಾರ್ಯಕರ್ತರು ಕಳೆದ 15 ದಿನಗಳಿಂದ ಪಾಲರ್ಿಮೆಂಟನ್ನು ಅಡ್ಡಗಟ್ಟಿ, ಅರುಣ್ ಜೇಟ್ಲಿಯನ್ನು ಆಪಾದಿಸಿ ಮೋದಿಗೆ ಮಾಡಿರುವ ಅವಮಾನವನ್ನು ಅವರು ಒಂದೇ ದಿನದಲ್ಲಿ ತೊಳೆದುಕೊಂಡುಬಿಟ್ಟಿರಲ್ಲ ಎಂಬ ಗಾಬರಿಗೊಳಗಾಗಿಬಿಟ್ಟಿದ್ದಾರೆ. ಅವರ ಸ್ಥಿತಿ ಥೇಟು ಅಂಡು ಸುಟ್ಟ ಬೆಕ್ಕಿನದೇ!
ಆಕಸ್ಮಿಕ ಭೇಟಿಯನ್ನು ಪಕ್ಕಕ್ಕಿಟ್ಟು ನೋಡಿದರೂ ಕೇಂದ್ರ ಸಕರ್ಾರದ್ದು ಮಹತ್ವದ ಹೆಜ್ಜೆಯೇ. ಕಳೆದ ಒಂದೂವರೆ ವರ್ಷದಲ್ಲಿ ಜಗತ್ತೆಲ್ಲ ತಿರುಗಾಡಿದ ಮೋದಿ ದೀರ್ಘಕಾಲದ ಮಿತ್ರ ರಷ್ಯಾವನ್ನು ಕಡೆಗಣಿಸಿದ್ದಾರೆಂದೇ ಎಲ್ಲರೂ ಭಾವಿಸಿದ್ದರು. ಸ್ವತಃ ರಷ್ಯಾ ಗೊಂದಲಕ್ಕೊಳಗಾಗಿ ಪಾಕಿಸ್ತಾನವನ್ನೂ ಬರಸೆಳೆದುಕೊಳ್ಳುತ್ತಿರುವ ಅನುಮಾನ ಮೂಡಿತ್ತು. ನಮ್ಮ ನಡೆ ಸ್ವಲ್ಪ ಎಡವಟ್ಟಾಗಿದ್ದರೂ ರಷ್ಯಾ-ಪಾಕ್-ಚೀನಾ ಒಂದಾಗಿಬಿಡುತ್ತಿತ್ತು. ಅಲ್ಲಿಗೆ ಮತ್ತೆ ರಾಜತಾಂತ್ರಿಕ ದೃಷ್ಟಿಯಿಂದ ಸೋಲು. ಹೀಗಾಗಿ ರಷ್ಯಾಕ್ಕೆ ಭೇಟಿಕೊಟ್ಟು ಹಳೆಯ ಬಾಂಧವ್ಯವನ್ನು ಮರುಸ್ಥಾಪಿಸಿದ ಮೋದಿ ಅಫ್ಘಾನಿಸ್ತಾನಕ್ಕೆ ಹೋಗಿ ಸಂಸತ್ ಭವನ ಉದ್ಘಾಟಿಸಿ ಬಂದರು. ನೆನಪಿರಲಿ. ಅಮೇರಿಕಾ ಅಫ್ಘಾನಿಸ್ತಾನದ ಮೇಲೆ ದಾಳಿಗೆ ನಿಂತಾಗ ಅಮೇರಿಕಾದ ಬೆಂಬಲಕ್ಕೆ ಭಾರತ-ಪಾಕಿಸ್ತಾನ ಎರಡೂ ಇತ್ತು. ಭಾರತ ದಾಳಿಯ ನಂತರ ಅಫ್ಘಾನಿಸ್ತಾನದಲ್ಲಿ ಶಾಲೆ, ಆಸ್ಪತ್ರೆ ಕಟ್ಟುವ ಕೆಲಸದಲ್ಲಿ ನಿಂತರೆ ಪಾಕಿಸ್ತಾನ ಭಯೋತ್ಪಾದಕತೆಯ ನೆಲೆಯನ್ನು ಭದ್ರಗೊಳಿಸುವ ಕಾರ್ಯದಲ್ಲಿ ತೊಡಗಿತ್ತು. ಬರಲಿರುವ ದಿನಗಳಲ್ಲಿ ತನಗೆ ಅನುಕೂಲಕರವಾದ ಸಕರ್ಾರ ಬರುವಂತೆ ಮಾಡಬೇಕೆಂಬ ಪ್ರಯತ್ನದಲ್ಲಿ ನಿರತವಾಗಿತ್ತು. ಮುಂದೆ ಅಮೇರಿಕಾ ಅಫ್ಘಾನಿಸ್ತಾನ ಬಿಟ್ಟು ಹೊರಡುವಾಗ ನಡೆದ ಸಭೆಗೆ ಅಮೇರಿಕಾ ಪಾಕಿಸ್ತಾನದ ಮಾತು ಕೇಳಿ ನಮ್ಮನ್ನು ಕರೆಯಲು ಹಿಂದೇಟು ಹಾಕಿತ್ತು. ಅಫ್ಘಾನಿಸ್ತಾನದ ಮರು ನಿಮರ್ಾಣದಲ್ಲಿ ಭಾರತಕ್ಕೆ ಪಾತ್ರವಿಲ್ಲ ಎಂದೇ ಹೇಳಿತ್ತು ಅಮೇರಿಕಾ. ಇವತ್ತು ಅದೇ ಭೂಮಿಯಲಿಕಿಂದು ನಿಂತ ಭಾರತದ ಪ್ರಧಾನಿ ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳು ಉರುಳಿಸಿದ ಸಂಸತ್ತನ್ನು ಕಟ್ಟಿಕೊಟ್ಟು ಉದ್ಘಾಟಿಸಿಯೂ ಬಂದಿದ್ದಾರೆಂದರೆ ಸಾಮಾನ್ಯ ಸಂಗತಿಯಂತೂ ಖಂಡಿತ ಅಲ್ಲ! ತನ್ಮೂಲಕ ಆ ರಾಷ್ಟ್ರದ ಮರು ನಿಮರ್ಾಣದಲ್ಲಿ ತಾನೇ ಮಹತ್ವದ್ದೆಂದು ಭಾರತ ಸಾಬೀತು ಮಾಡಿದೆ.

Afghanistan-Parliament-building
ಅಫ್ಘಾನಿಸ್ತಾನ ಭಾರತಕ್ಕೆ ಹತ್ತಿರವಾಯಿತೆಂದರೆ, ಪಾಕಿಸ್ತಾನದಿಂದ ದೂರವಾಗಲೇಬೇಕು. ಚೀನಾಕ್ಕೂ ಅಷ್ಟೇ! ಇವೆಲ್ಲಾ ಸಮೀಕರಣಗಳನ್ನು ಗಮನಿಸಿ ಪರಿಹರಿಸಿದ ಮೋದಿ ಅಲ್ಲಿಂದ ಮರಳುವಾಗ ಪಾಕಿಸ್ತಾನಕ್ಕೆ ಹೋಗಿ ರಾಜತಾಂತ್ರಿಕ ವಿಕ್ರಮ ಮೆರೆದು ಬಿಟ್ಟಿದ್ದಾರೆ! ಈಗ ಒಂಟಿಯಾದದ್ದು ಚೀನಾ ಮಾತ್ರ. ಏಷ್ಯಾದ ದೊರೆಯಾಗಿ ಮೆರೆಯುತ್ತಿದ್ದ ಚೀನಾ ಕಳೆದ ಒಂದು ವರ್ಷದಲ್ಲಿ ಅದೆಷ್ಟು ಸೊರಗಿ ಹೋಗಿದೆಯೆಂದರೆ ಅದು ತನ್ನ ನೀತಿಯನ್ನು ಬದಲಿಸಿ ಹೊಸ ಹಾದಿ ತುಳಿಯಲಿಲ್ಲವೆಂದರೆ ಕುಸಿಯುವುದು ಖಾತ್ರಿ. ಬರಿಯ ಚೀನಾ ಅಷ್ಟೇ ಅಲ್ಲ. ಪಾಕಿಸ್ತಾನದ ಹೆಸರು ಹೇಳಿ, ಅದನ್ನು ಮುಂದಿಟ್ಟುಕೊಂಡು ಭಾರತವನ್ನು ಆಟ ಆಡಿಸುತ್ತಿದ್ದ ರಷ್ಯಾ-ಅಮೇರಿಕಾಗಳೂ ಬೆಚ್ಚಿ ಬಿದ್ದಿವೆ. ಭಾರತ ಈಗ ಬೇರೆಯವರ ಸಲಹೆ ಕೇಳಲಿಕ್ಕೆಂದು ಇರುವ ಸಾಮಾನ್ಯ ರಾಷ್ಟ್ರವಾಗಿ ಉಳಿದಿಲ್ಲ. ಜಗತ್ತಿನ ಪ್ರಮುಖ ಸಂಗತಿಗಳಲ್ಲಿ ಭಾರತಕ್ಕೀಗ ಮಹತ್ವದ ಸ್ಥಾನ ಕೊಡಲೇಬೇಕು. ಇನ್ನು ಮುಂದೆ ಅಫ್ಘಾನಿಸ್ತಾನದ ನಿಮರ್ಾಣದ ವಿಚಾರ ಬಿಡಿ, ಜಗತ್ತಿನ ಯಾವ ರಾಷ್ಟ್ರದ ನಿಮರ್ಾಣದ ಸಂದರ್ಭದಲ್ಲೂ ಜಗತ್ತು ಒಮ್ಮೆ ಭಾರತದ ಅಭಿಪ್ರಾಯ ಪಡೆಯಲೇಬೇಕು.
ನೋಡುತ್ತಿರಿ. ಇನ್ನೊಂದೆರಡು ವರ್ಷಗಳಲ್ಲಿ ಜಗತ್ತಿನ ಶಾಂತಿಗೆ ಶ್ರಮಿಸಿದ ಕಾರಣಕ್ಕಾಗಿ ನರೇಂದ್ರ ಮೋದಿಯವರಿಗೆ ನೋಬೆಲ್ ಪ್ರಶಸ್ತಿ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.

Leave a Reply