ವಿಭಾಗಗಳು

ಸುದ್ದಿಪತ್ರ


 

ಯಾರು ಬುದ್ಧರಲ್ಲ..!?

ಇಂದು ಬುದ್ಧ ಪೂರ್ಣಿಮೆ, ಈ ಪರಂಪರೆಯಲ್ಲಿ ಆಗಿ ಹೋದ ಆ ಎಲ್ಲ ಬುದ್ಧರಿಗೆ ವಂದಿಸುತ್ತ..,

Buddha050

ತಾನೇ ಕೃಷ್ಣನಾಗಿ
ಮೈಮರೆತು ಕುಣಿದ ರಾಧೆ
ಬುದ್ಧನಲ್ಲವೇ?
ಮತ್ತೆ ಆ ಚೈತನ್ಯ
ಎರಡೂ ಕೈಗಳನೆತ್ತಿ
ದೇವರೆದುರು ನಿಂತನಲ್ಲ
ಅವನು
ಬುದ್ಧನಲ್ಲವೇ?

ಚನ್ನಮಲ್ಲಿಕಾರ್ಜುನನೇ
ನನ್ನ ಗಂಡ
ಎಂದವಳು ಅಕ್ಕ,
ನಿಮಗೇ ಗಂಡನೇ ದೇವರು,
ನನಗೆ ದೇವರೇ ಗಂಡ
ಎಂದವಳು ಮೀರಾ
ಅವರು
ಬುದ್ಧರಲ್ಲವೇ?

ಮಾನವ ಪ್ರೇಮದಿ
ತೋಯ್ದ ಹೃದಯಿ
ವಿವೇಕಾನಂದ,
ದ್ವೇಷವ ತೊರೆದು
ಪ್ರೇಮದಿ ಗೆದ್ದ
ಮಹಾತ್ಮಾ
ಇವರು
ಬುದ್ಧರಲ್ಲವೇ?

ಬುದ್ಧ
ಅಂದೂ ಇದ್ದ,
ಇಂದೂ ಇದ್ದಾನೆ.
ಬುದ್ಧನೆಂದರೆ
ಅಖಂಡ ಪ್ರೇಮ,
ಮೈಯ್ಯೆಲ್ಲ ಹೃದಯ
ಸಾವಿಲ್ಲದ ಉತ್ಸಾಹ
ನೋಯಿಸದ ವಿಜಯ!

Leave a Reply