ವಿಭಾಗಗಳು

ಸುದ್ದಿಪತ್ರ


 

ಲಾಠೀಚಾರ್ಜಿನ ನಡುವೆ ಕಳೆದು ಹೋದ ಶಶಿಧರ್!!

ಅಧಿಕಾರಿಗಳು, ರಾಜಕಾರಣಿಗಳು ಮನವೊಲಿಸಲು ಯತ್ನಿಸಿದರೂ ಪುಣ್ಯಾತ್ಮ ಜಗ್ಗಲಿಲ್ಲ. ಆಂದೋಲನವೊಂದು ರೂಪುಗೊಳ್ಳಲಾರಂಭಿಸಿತು. ಪೊಲೀಸ್ ಪೇದೆಗಳು ಸಾಮೂಹಿಕ ರಜೆಗೆ ಸಿದ್ಧರಾದರು. ಇಡಿಯ ರಾಜ್ಯ ಈ ಹೋರಾಟಕ್ಕೆ ಸಾಕ್ಷಿಯಾಗಲಿತ್ತು.
ಅಷ್ಟರೊಳಗೆ ಸಕರ್ಾರ ಶಶಿಧರ್ರನ್ನು ಬಂಧಿಸಿ ಜೈಲಿಗಟ್ಟಿತು. ಯಾವ ಪೇದೆಗಳಿಗಾಗಿ ಆತ ಇಷ್ಟೆಲ್ಲಾ ಕಷ್ಟಪಟ್ಟನೋ ಅದೇ ಪೇದೆಗಳು ಶಶಿಧರ್ ಬಂಧನಕ್ಕೆ ಅಣಿಯಾಗಿ ಬಂದಿದ್ದರು. ಅತ್ತ ಆತ ಜೈಲು ಸೇರುತ್ತಿದ್ದಂತೆ ಇತ್ತ ಹೋರಾಟ ಸ್ತಬ್ಧವಾಯಿತು. ಪೊಲೀಸರ ವೇತನದಲ್ಲಿ ಹೆಚ್ಚಳವಾಗುವ ಭರವಸೆ ದಕ್ಕಿತು. ಅವರಿಗೆ ರಜೆಗಳು ಸುಲಭವಾಗಿ ದಕ್ಕಲಾರಂಭಿಸಿತು. ಅನೇಕ ಬೇಡಿಕೆಗಳು ಈಡೇರಲಾರಂಭಿಸಿದವು. ಆದರೆ. .

2

ಅಮ್ನೆಸ್ಟಿ ಇಂಟರ್ನ್ಯಾಷನಲ್ ಬೆಂಗಳೂರಿನಲ್ಲಿ ದೇಶವಿರೋಧಿ ಘೋಷಣೆ ಕೂಗಾಡಲು ವೇದಿಕೆ ರೂಪಿಸಿಕೊಟ್ಟಿತು. ಅದರ ವಿರುದ್ಧ ಪ್ರತಿಭಟನೆಗೆ ನಿಂತ ವಿದ್ಯಾಥರ್ಿಗಳ ಮೇಲೆ ಪೊಲೀಸರ ಆಕ್ರೋಶ ತಿರುಗಿತು. ಲಾಠಿ ಬೀಸಲಾಯ್ತು. ಅನೇಕರು ರಕ್ತಸಿಕ್ತವಾಗಿ ಅಂಗಾತ ಬಿದ್ದುಕೊಂಡರು. ಇದಕ್ಕೂ ಕೆಲವೇ ದಿನಗಳ ಮುನ್ನ ನೀರು ಕೇಳಲು ಹೋದ ರೈತರ ಮೇಲೆ ಪೊಲೀಸರು ಲಾಠಿಯಿಂದ ಪ್ರಹಾರ ಮಾಡಿದರು. ಅನೇಕರನ್ನು ಜೈಲಿಗೆ ತಳ್ಳಲಾಯ್ತು. ಜನರ ಕೋಪಾವೇಶವೆಲ್ಲ ಪೊಲೀಸ್ ಪೇದೆಗಳತ್ತ. ಲಾಠಿ ಬೀಸೆಂದು ಹೇಳಿದ ಅಧಿಕಾರಿ, ಅದಕ್ಕೆ ವೇದಿಕೆ ರೂಪಿಸಿದ ಮಂತ್ರಿ ಇಂತಹುದೊಂದು ಆಡಳಿತಕ್ಕೆ ಕಾರಣವಾದ ಮುಖ್ಯಮಂತ್ರಿ ಯಾರನ್ನೂ ಯಾರೂ ಕೇಳುತ್ತಿಲ್ಲ. ರೈತರು-ವಿದ್ಯಾಥರ್ಿಗಳಲ್ಲಿ ಒಬ್ಬೊಬ್ಬರನ್ನು ಮುಟ್ಟಿ ಸಕರ್ಾರಗಳೇ ಉರುಳಿದ ನಿದರ್ಶನಗಳಿವೆ. ಇಬ್ಬರ ಮೇಲೆಯೂ ದಾಳಿ ಮಾಡಿ ಅಲುಗಾಡದೇ ಭಂಡತನದಿಂದ ಕುಳಿತಿರುವ ಸಕರ್ಾರ ಇದೇ.
ನಾನು ಹೇಳಬೇಕೆಂದಿದ್ದು ಅದಲ್ಲ. ಸಕರ್ಾರದ ಧೋರಣೆಗಳು ಮುಖ್ಯಮಂತ್ರಿಯವರಂತೆ ಧಿಮಾಕಿನಿಂದ ಕೂಡಿದೆ. ಇದರ ನಡುವೆ ಪೊಲೀಸರು ಬಲಿಪಶುಗಳಾಗಿಬಿಡುತ್ತಿದ್ದಾರೆ. ರೈತರ ಮೇಲಿನ, ವಿದ್ಯಾಥರ್ಿಗಳ ಮೇಲಿನ ಲಾಠಿಚಾರ್ಜನ್ನು ಯಾವ ಪೇದೆಯೂ ಸಮಥರ್ಿಸಿಕೊಳ್ಳಲಾರ. ಆದರೆ ಆತ ಅನಿವಾರ್ಯವಾಗಿ ಜನರ ಕಣ್ಣೆದುರು ತಪ್ಪಿತಸ್ಥನಾಗಿ ಬಿಂಬಿತವಾಗುತ್ತಿದ್ದಾನೆ. ಇವೆಲ್ಲ ಏಕಾಏಕಿ ಆದದ್ದಲ್ಲ. ವ್ಯವಸ್ಥಿತ ಪ್ರಕ್ರಿಯೆಗಳು. ಕೆಲವು ತಿಂಗಳ ಹಿಂದೆ ಕೆಳಹಂತದ ಪೊಲೀಸರೆಲ್ಲ ವೇತನ ಹೆಚ್ಚಳಕ್ಕೆ, ಸೂಕ್ತ ಗೌರವವನ್ನು ಬಯಸಿ ಪ್ರತಿಭಟನೆಗೆ ಇಳಿದದ್ದು ನೆನಪಿದೆಯಲ್ಲ. ರಾಜ್ಯವ್ಯಾಪಿ ಪಕ್ಷ ಭೇದ ಮರೆತು ಪೊಲೀಸರಿಗೆ ಬೆಂಬಲ ದೊರಕಿತು. ಇನ್ನೇನು ರಾಜ್ಯದ ರಕ್ಷಣಾ ವ್ಯವಸ್ಥೆಯೇ ಕುಸಿದು ಬೀಳುವುದೆಂಬ ಭಯ ರಾಜ್ಯದೆಲ್ಲೆಡೆ ಹಬ್ಬಿತ್ತು. ಮೊದಲ ಬಾರಿಗೆ ಹಿರಿಯ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಕೆಳಹಂತದ ಪೇದೆಗಳು ಚುರುಕು ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಂದೇ ಗೃಹಸಚಿವರು ಪತ್ರಿಕಾಗೋಷ್ಠಿ ಕರೆದು ಈ ಹೋರಾಟವನ್ನು ಸಿಪಾಯಿದಂಗೆಗೆ ಹೋಲಿಸಿ ಬ್ರಿಟಿಷರು ಮಟ್ಟ ಹಾಕಿದಂತೆ ಮಟ್ಟ ಹಾಕುವ ವೀರಾವೇಶದ ಮಾತುಗಳನ್ನಾಡಿಬಿಟ್ಟರು.
ಪ್ರತಿಭಟನೆಯ ದಿನ ಸಹಜವಾಗಿಯೇ ಪೊಲೀಸರು ತಣ್ಣಗಾದರು. ಶಾಂತವಾಗಿ ತಂತಮ್ಮ ಕಚೇರಿಗೆ ತೆರಳಿದರು. ಅವರ ಪತ್ನಿಯರು ಬೀದಿಗಿಳಿಯುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶವನ್ನು ತೆಪ್ಪಗೆ ಪಾಲಿಸಲೇಬೇಕಾಯ್ತು. ಏಕೆಂದರೆ ಎಲ್ಲಕ್ಕೂ ಶಕ್ತಿ ತುಂಬಿ ತೊಂದರೆಗಳನ್ನೆದುರಿಸಲು ಮುಂದೆ ನಿಂತಿದ್ದ ಶಶಿಧರ್ರನ್ನೇ ಮಧ್ಯರಾತ್ರಿ ಕಳ್ಳರಂತೆ ಮುವ್ವತ್ತು ನಲವತ್ತು ಪೊಲೀಸರ ತಂಡ ಕರೆದುಕೊಂಡು ಹೋಗಿ ಜೈಲಿಗೆ ದಬ್ಬಿತ್ತು.
ಹೌದು. ಪ್ರಶ್ನೆ ಇರೋದು ಅಲ್ಲಿಯೇ. ಶಶಿಧರ್ರ ಕಥೆ ಈಗ ಏನಾಯ್ತು? ಅವರೀಗ ಎಲ್ಲಿದ್ದಾರೆ? ಅವರ ಪರಿವಾರ ಹೇಗಿದೆ? ಮಾತೆತ್ತಿದರೆ ‘ಫಾಲೋ ಅಪ್’ ವರದಿಗಳನ್ನು ಪ್ರಕಟಿಸುವ ಪತ್ರಿಕೆಗಳು ಶಶಿಧರ್ ಬದುಕಿನ ಬೇಗುದಿಯನ್ನು ಕೆದಕಲು ಹೋಗಿಲ್ಲವಲ್ಲ. ಯಾವ ಪೊಲೀಸ್ ಪೇದೆಗಳಿಗಾಗಿ ಶಶಿಧರ್ ಇಷ್ಟೆಲ್ಲಾ ಬಡಿದಾಡಿದರೋ ಅವರೂ ಕೂಡ ಚಕಾರವೆತ್ತುತ್ತಿಲ್ಲವಲ್ಲ ಈಗ. ಹೀಗೇಕೆ?
ಇಷ್ಟಕ್ಕೂ ಅಂದು ಶಶಿಧರ್ ಕಟ್ಟಿದ ಸಂಘಟನೆಯ ಮೂಲಕ ಸಕರ್ಾರದೆದುರಿಗಿಟ್ಟ ಬೇಡಿಕೆಗಳು ಅತ್ಯಂತ ಸಮರ್ಪಕವಾಗಿವೆ ಎಂದು ನಾಡು ಒಪ್ಪಿತ್ತಷ್ಟೇ ಅಲ್ಲ ಆನಂತರ ಅದರಲ್ಲಿ ಬಹುಪಾಲನ್ನು ಈಡೇರಿಸಿಯೂ ಕೊಟ್ಟಿತ್ತು. ಹೀಗಿದ್ದ ಮೇಲೆ ಶಶಿಧರ್ ಹೋರಾಟದಲ್ಲಿ ಆಗಿದ್ದು ತಪ್ಪೇನು? ಇಡಿಯ ಪೊಲೀಸ್ ವ್ಯವಸ್ಥೆ ಶಶಿಧರ್ ವಿಚಾರದಲ್ಲಿ ಕೃತಘ್ನವಾಗಿಹೋಯ್ತು? ಕೇಳಬೇಕಾದ ಪ್ರಶ್ನೆಯೇ ಅಲ್ಲವೇ?

1
ನ್ಯಾಯಯುತವಾದ ಪ್ರಶ್ನೆ ಕೇಳುವ ಹಠ ಶಶಿಧರ್ಗೆ ಇದೇ ಮೊದಲಲ್ಲ. ಬಿಎಸ್ಸಿ ಮುಗಿಸಿ, ಪತ್ರಿಕೋದ್ಯಮದ ಡಿಪ್ಲೋಮಾ ಪಡೆದು 79ರಲ್ಲಿ ಪೊಲೀಸ್ ಹುದ್ದೆಯನ್ನು ಸ್ವೀಕರಿಸಿದವರು ಶಶಿಧರ್. ಜಾಲಪ್ಪ ಗೃಹಸಚಿವರಾಗಿದ್ದಾಗ ರಶೀದ್ ಹತ್ಯೆಯ ಕೇಸಲ್ಲಿ ಸಿಬಿಐಗೆ ಮಹತ್ವದ ಸುಳಿವು ನೀಡಿದವರೂ ಅವರೇ. ಅಲ್ಲಿಂದ ಶುರುವಾಯ್ತು ಆಳುವ ದಣಿಗಳ ಕಿರುಕುಳ. ಶಶಿಧರ್ರನ್ನು ಕಾಲಕ್ರಮದಲ್ಲಿ ಒಂದೊಂದೇ ಕೇಸಿನಲ್ಲಿ ಸಿಲುಕಿಸುವ ಯತ್ನ ಶುರುವಾಯ್ತು. ಅವರ ಮೇಲೊಂದು ಕೊಲೆ ಆಪಾದನೆಯಾಯ್ತು, ಗಂಧದ ಕಳ್ಳರೆಂಬ ಆರೋಪ ಹೊತ್ತಿಸಿ ಕೋಟರ್ಿನ ಮೆಟ್ಟಲು ಹತ್ತುವಂತೆ ಮಾಡುಲಾಯ್ತು. ಕೊನೆಗೆ ಕೆಲಸದಿಂದ ವಜಾ ಮಾಡಲಾಯ್ತು ಕೂಡ. ಸಕರ್ಾರದ ವಿರುದ್ಧ ನಿಂತರೆ ಯಾವ ಪರಿಣಾಮ ಎದುರಿಸಬೇಕಾದೀತೆಂಬುದನ್ನು ಅವರು ಸ್ಪಷ್ಟವಾಗಿ ಅನುಭವಿಸಿದರು. ತಂದೆಯೂ ಇದೇ ಡಿಪಾಟರ್್ಮೆಂಟಿನಲ್ಲಿ ಉದ್ಯೋಗಿಯಾಗಿದ್ದರು. ಮಗ ಉದ್ಯೋಗ ಕಳಕೊಂಡಿದ್ದ.
ಶಶಿಧರ್ ಈಗ ಪತ್ರಿಕೋದ್ಯಮದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಹೊರಟಿದ್ದರು. ಹಾಗಂತ ಪೊಲೀಸ್ ಪ್ರೇಮ ಆರಿರಲಿಲ್ಲ. ಹೀಗಾಗಿಯೇ ಆರಕ್ಷಕ ವಾಣಿ ಪತ್ರಿಕೆ ಶುರುವಾಯ್ತು. ಬಹಳ ದಿನ ನಡೆಯಲಿಲ್ಲ. ಮತ್ತಷ್ಟು ಸಾಲವಾಯ್ತು ಅಷ್ಟೇ. ಬಹುಶಃ ಈ ವೇಳೆಗೆ ಅವರ ಮದುವೆಯೂ ಆಗಿರಬೇಕು. ಸಂಸಾರ ಸಂಭಾಳಿಸುವ ದೃಷ್ಟಿಯಿಂದ ಒಂದಷ್ಟು ರಿಯಲ್ ಎಸ್ಟೇಟ್ ಧಂಧೆ ಮಾಡುತ್ತ ಉಸಿರಾಡತೊಡಗಿದರು. ಪೊಲೀಸ್ ಸಹವಾಸ ಮತ್ತೆ ಬಿಡಲಿಲ್ಲ. ಪೇದೆಯಿಂದ ಹಿಡಿದು ಅಧಿಕಾರಿಗಳವರೆಗೆ ಸಂಪರ್ಕವಿತ್ತು. ಅನೇಕರು ಸಮಸ್ಯೆಗಳನ್ನು ಹೊತ್ತು ತರುತ್ತಿದ್ದರು. ಅದರ ಪರಿಹಾರಕ್ಕೆ ಈತ ಬಡಿದಾಡುವುದು ನಡೆದೇ ಇತ್ತು. ಅವರಿಗಿದ್ದ ಏಕೈಕ ಅಸ್ತ್ರ ಆರಕ್ಷಕ ವಾಣಿ ನಿಂತು ಹೋಗಿತ್ತು. ಸುಮ್ಮನಿರಲಾಗದೇ ‘ಪೊಲೀಸ್ ವಲ್ಡರ್್’ ಪತ್ರಿಕೆ ಶುರುಮಾಡಿ ಆ ಕ್ಷೇತ್ರದ ಜನಕ್ಕೆ ದನಿ ತುಂಬಿದರು. ಕಾನೂನಿನ ಅಧ್ಯಯನ ಚೆನ್ನಾಗಿಯೇ ಮಾಡಿದ್ದರಿಂದ ಎಲ್ಲ ಸಮಸ್ಯೆಗಳಿಗೂ ನ್ಯಾಯಾಲಯದ ಮೆಟ್ಟಿಲನ್ನೇರಿಯಾದರೂ ಪರಿಹಾರ ಕೊಡಿಸುವ ತಾಕತ್ತು ಅವರಿಗಿತ್ತು.
ಸಹಜವಾಗಿಯೇ ಕೆಳಹಂತದ ಪೊಲೀಸರು ತಮ್ಮ ಸಮಸ್ಯೆಗಳಿಗೆ ಸಕರ್ಾರದೊಂದಿಗೆ ಗುದ್ದಾಡಲು ಶಶಿಧರ್ರನ್ನು ಆಯ್ದುಕೊಂಡರು. ಶಶಿಧರ್ ಕೂಡ ಮೈ ಚಳಿ ಬಿಟ್ಟು ನೀರಿಗಿಳಿದರು. ತಾನು ಮಾಡುವ ಕಾರ್ಯ ಎಂತಹ ಸಂಕಟಕ್ಕೆ ತನ್ನ ದೂಡಲಿದೆಯೆಂಬ ಅರಿವಿದ್ದೂ ಈ ಕ್ಷೇತ್ರಕ್ಕೆ ಧುಮುಕಿದರು. ಅವರೊಳಗಿದ್ದ ಸುಭಾಷ್ ಚಂದ್ರಬೋಸ್ ಮತ್ತು ಭಗತ್ಸಿಂಗ್ರ ಕಿಡಿ ಅವರನ್ನು ಹಿಂದೆ ಹೆಜ್ಜೆ ಇಡಲು ಬಿಡಲಿಲ್ಲ. ಅನೇಕ ಅಧಿಕಾರಿಗಳು, ರಾಜಕಾರಣಿಗಳು ಮನವೊಲಿಸಲು ಯತ್ನಿಸಿದರೂ ಪುಣ್ಯಾತ್ಮ ಜಗ್ಗಲಿಲ್ಲ. ಆಂದೋಲನವೊಂದು ರೂಪುಗೊಳ್ಳಲಾರಂಭಿಸಿತು. ಪೊಲೀಸ್ ಪೇದೆಗಳು ಸಾಮೂಹಿಕ ರಜೆಗೆ ಸಿದ್ಧರಾದರು. ಇಡಿಯ ರಾಜ್ಯ ಈ ಹೋರಾಟಕ್ಕೆ ಸಾಕ್ಷಿಯಾಗಲಿತ್ತು.
ಅಷ್ಟರೊಳಗೆ ಸಕರ್ಾರ ಶಶಿಧರ್ರನ್ನು ಬಂಧಿಸಿ ಜೈಲಿಗಟ್ಟಿತು. ಯಾವ ಪೇದೆಗಳಿಗಾಗಿ ಆತ ಇಷ್ಟೆಲ್ಲಾ ಕಷ್ಟಪಟ್ಟನೋ ಅದೇ ಪೇದೆಗಳು ಶಶಿಧರ್ ಬಂಧನಕ್ಕೆ ಅಣಿಯಾಗಿ ಬಂದಿದ್ದರು. ಅತ್ತ ಆತ ಜೈಲು ಸೇರುತ್ತಿದ್ದಂತೆ ಇತ್ತ ಹೋರಾಟ ಸ್ತಬ್ಧವಾಯಿತು. ಪೊಲೀಸರ ವೇತನದಲ್ಲಿ ಹೆಚ್ಚಳವಾಗುವ ಭರವಸೆ ದಕ್ಕಿತು. ಅವರಿಗೆ ರಜೆಗಳು ಸುಲಭವಾಗಿ ದಕ್ಕಲಾರಂಭಿಸಿತು. ಅನೇಕ ಬೇಡಿಕೆಗಳು ಈಡೇರಲಾರಂಭಿಸಿದವು. ಆದರೆ. .

3
ಆದರೆ ಇವೆಲ್ಲಕ್ಕೂ ಕಾರಣಕಾರ ಶಶಿಧರ್ ಜೈಲಿನಲ್ಲಿ ಇತರೆ ಕೈದಿಗಳೊಂದಿಗೆ ವಾಸ ಮಾಡಬೇಕಾಗಿ ಬಂದಿತ್ತು. ಕೊಲವೊಮ್ಮೆ ರೌಡಿಗಳನ್ನು ಅವರಿದ್ದ ಸೆಲ್ಗೆ ಕಳಿಸಲಾಗಿತ್ತು. ಮನೆಯಿಂದ ಊಟ ಕೊಡಬಹುದೆಂಬ ಮ್ಯಾಜಿಸ್ಟ್ರೇಟರ ಆದೇಶವನ್ನೂ ಮನೆಯಂತಹ ಊಟವೆಂದು ತಿರುಚಿದ ಅಧಿಕಾರಿಗಳು ಊಟದ ಡಬ್ಬಿ ನಿರಾಕರಿಸಿದರು. ಅವರ ಆರೋಗ್ಯವನ್ನು ಕಡೆಗಣಿಸಿ ಸಾಮಾನ್ಯ ಕೈದಿಗಿಂತಲೂ ಕೆಟ್ಟದಾಗಿ ನೋಡಿಕೊಳ್ಳಲಾಯಿತು. ನಿಮ್ಯಾನ್ಸ್ಗೆ ಅವರನ್ನು ಕರಕೊಂಡು ಹೋದರೆ ವೈದ್ಯರು ಅವರ ಸಮಸ್ಯೆಯನ್ನು ಗುರುತಿಸಿ ಆಸ್ಪತ್ರೆಯಲ್ಲಿರಿಸಿಕೊಂಡರು. ಅದೂ ಹೇಗೆ ಗೊತ್ತಾ? ಮಾನಸಿಕ ರೋಗಿಗಳ ನಡುವೆ ಅದೇ ಸಮವಸ್ತ್ರದಲ್ಲಿ. ಶಭಾಷ್. ನ್ಯಾಯದ ಪರ ಹೋರಾಡಿದ್ದಕ್ಕೆ ಸೂಕ್ತ ಪ್ರತಿಫಲವೇ ಸರಿ. ಅಲ್ಲಿಂದ ಮುಂದೆ ಹೃದಯ ಬೇನೆಯನ್ನು ಗುರುತಿಸಿದ ವೈದ್ಯರು ಜಯದೇವಕ್ಕೆ ಕಳಿಸಿ ಮರಳಿ ಜೈಲಿಗೆ ತಳ್ಳಿದರು. ಯಾವ ಕಾರಣಕ್ಕೂ ಅವರಿಗೆ ಜಾಮೀನು ಸಿಗದಂತೆ ಪ್ರಯತ್ನ ನಡೆಸಲಾಗುತ್ತಿದೆ. ಅವರ ಮನೆಯವರು ಮಕ್ಕಳು ತಪ್ಪಲ್ಲದ ಶಶಿಧರ್ ತಪ್ಪಿಗೆ ತಾವು ಕಣ್ಣೀರಿಡುತ್ತಿದ್ದಾರೆ. ಕುಟುಂಬದವರ, ಹಿತೈಷಿಗಳ ನೆರವಿನಿಂದ ಕೋಟರ್ಿನ ಪಡಶಾಲೆಗಳಲ್ಲಿ ನಿಂತು ಬಡಿದಾಡುತ್ತಿದ್ದಾರೆ. ಒಟ್ಟು ಘಟನೆಯಾಗಿ ಮೂರು ತಿಂಗಳು ಕಳೆದೇ ಹೋಯ್ತು, ಸಮಾಜವೂ ಅವರನ್ನು ಮರೆತೇಬಿಟ್ಟಿದೆ.
ಇವಿಷ್ಟನ್ನೂ ಈಗ ಹೇಳಿದ್ದೇಕೆ ಗೊತ್ತಾ? ಪೊಲೀಸರ ಕೈಲಿ ಲಾಠಿ ಕೊಟ್ಟದ್ದು ವ್ಯವಸ್ಥೆಯೇ. ಅದನ್ನು ಬಳಸುವ ಆದೇಶ ಮಾತ್ರ ಮೇಲಧಿಕಾರಿಗಳದ್ದು. ಪೊಲೀಸರ ಹೃದಯದಲ್ಲೂ ಜನರೆಡೆಗಿನ ಪ್ರೇಮ ಭರಪೂರ ಇದೆ. ಅವರೂ ನಮ್ಮ-ನಿಮ್ಮಷ್ಟೇ ಅಖಂಡ ದೇಶಭಕ್ತರೆ. ರೈತರ ಮೇಲೆ ಲಾಠಿಯಿಂದ ಹೊಡೆದದ್ದು ನೋಡಿದ ಆತನ ಕಣ್ಣಲ್ಲೂ ನೀರು ಬಂದಿದೆ. ಊಟದ ತಟ್ಟೆಯಲ್ಲಿ ಊಟ ಮಾಡದೇ ಅನೇಕರು ಕೈ ತೊಳೆದು ಎದ್ದಿರಲಿಕ್ಕೂ ಸಾಕು. ವಿದ್ಯಾಥರ್ಿಗಳ ಮೇಲೆ ರಕ್ತಕಾರುವಂತೆ ಬಡಿದ ಪೊಲೀಸು ಮನೆಗೆ ಬಂದು ಕಾಲೇಜಿಗೆ ಹೋಗುವ ತನ್ನ ಮಗನ ಹಣೆ ಸವರಿರಲಿಕ್ಕೆ ಸಾಕು.
ರಾಜಕಾಲುವೆಯುದ್ದಕ್ಕೂ ಮನೆಗಳನ್ನು ಕೆಡವಿದ ಸಕರ್ಾರ ದೊಡ್ಡವರ ಅನಧಿಕೃತ ಕಟ್ಟಡಗಳನ್ನು ಕೆಡವುವ ಪರಿಸ್ಥಿತಿ ಬಂದೊಡನೆ ವಿದ್ಯಾಥರ್ಿಗಳ ಮೇಲೆ ಲಾಠಿ ಚಾಜರ್್ ಆಗುತ್ತಲ್ಲ ನನ್ನ ಅನುಮಾನ ಅಡಗಿರೋದು ಅಲ್ಲಿ. ವಿದ್ಯಾಥರ್ಿಗಳ ಆಕ್ರೋಶದ ನಡುವೆ ಒಂದಿಡೀ ‘ರಾಜಕಾಲುವೆ ಒತ್ತುವರಿ ತೆರವು’ ವಿರುದ್ಧದ ಹೋರಾಟ ಸಮಾಧಿಯೇ ಆಗಿಹೋಯ್ತು. ಅತ್ತ ಪೊಲೀಸರ ಮೇಲೆ ಜನಸಾಮಾನ್ಯರ ಆಕ್ರೋಶವೂ ಮುಗಿಲಿನಷ್ಟಾಯ್ತು. ರಾಜಕಾರಣ ಅದೆಷ್ಟು ಹೊಲಸಲ್ಲವೇ?
ದುರಂತೆವೆಂದರೆ ಇಂಥದ್ದೇ ರಾಜಕಾರಣಕ್ಕೆ ನಾವು, ನೀವು, ಶಶಿಧರ್ ಕೂಡ ಬಲಿಯಾಗಿಬಿಡುತ್ತೇವೆ. ಛೆ!

Leave a Reply