ವಿಭಾಗಗಳು

ಸುದ್ದಿಪತ್ರ


 

ವಿವೇಕಾನಂದರೇಕೆ ನಮ್ಮ ಮನೆಯಲ್ಲಿ ಹುಟ್ಟೋದಿಲ್ಲ?

ನಮ್ಮ ಪರಮ ವೈಭವವನ್ನು ಮರೆತಿರುವ ನಾವೂ ಓಜಸ್ಸನ್ನೂ, ತೇಜಸ್ಸನ್ನೂ ಕಳೆದುಕೊಂಡು ಪ್ರಾಣವಿಹೀನರಾಗಿಬಿಟ್ಟಿದ್ದೇವೆ. ಹೀಗಾಗಿಯೇ ಹೊಸ ಆಲೋಚನೆಗಳು, ಹೊಸ ಭರವಸೆಗಳು ಇಲ್ಲಿಂದ ಹೊರಡುತ್ತಲೇ ಇಲ್ಲ.


MotherGoddessEarthಹೀಗೊಂದು ಲೆಕ್ಕಾಚಾರನಿಮಗಾಗಿ.
ಆನೆಗಳು ನಿಮಿಷಕ್ಕೆ ನಾಲ್ಕು ಬಾರಿ ಉಸಿರಾಟ ನಡೆಸುತ್ತವೆ. ಅವುಗಳ ಆಯಸ್ಸು ಸುಮಾರು 150 ವರ್ಷ. ಕುದುರೆಗಳ ಉಸಿರಾಟದ ದರ ನಿಮಿಷಕ್ಕೆ ಎಂಟರಿಂದ ಹದಿನೈದು. ಅವುಗಳ ಸರಾಸರಿ ಆಯಸ್ಸು 50 ವರ್ಷ. ಮಂಗಗಳು ನಿಮಿಷಕ್ಕೆ ಸುಮಾರು ಮೂವತ್ತು ಬಾರಿ ಉಸಿರಾಡುತ್ತವೆ; 20 ವರ್ಷ ಬದುಕುತ್ತವೆ. ನಿಮಿಷಕ್ಕೆ 20 ರಿಂದ 30 ಬಾರಿ ಉಸಿರಾಡುವ ನಾಯಿಗಳ ಆಯಸ್ಸು 15 ವರ್ಷ. ಹೆಚ್ಚೆಂದರೆ ಒಂದು ವರ್ಷ ಬದುಕುವ ಇಲಿ ನಿಮಿಷಕ್ಕೆ ಕನಿಷ್ಠ 150 ಬಾರಿ ಉಸಿರಾಡುತ್ತದೆ.
ಸೂಕ್ಷ್ಮವಾಗಿ ಗಮನಿಸಿ ನೋಡಿ. ಯಾರು ಉಬ್ಬಸ ಬಂದವರಂತೆ ವೇಗ-ವೇಗವಾಗಿ ಉಸಿರಾಡುವರೋ ಅವರ ಆಯು ಪ್ರಮಾಣ ಬಲು ಕಡಿಮೆ. ಹಾಗೆಯೇ ಯಾರ ಉಸಿರಾಟದ ದರ ಅತಿ ಕಡಿಮೆಯೋ ಅವರ ಆಯಸ್ಸು ಬಲು ದೀರ್ಘ. ಭಗವಂತ ನಮಗೆ ಆಯಸ್ಸನ್ನು ಇಂತಿಷ್ಟು ವರ್ಷ ಅಂತ ನಿಗದಿ ಪಡಿಸಿರುತ್ತಾನೆ ಅಂತ ನಾವು ಭಾವಿಸುತ್ತೇವೆ. ಆದರೆ ವಾಸ್ತವವಾಗಿ ಆತ ನಮ್ಮ ಜೀವನವನ್ನು ಪ್ರಾಣಶಕ್ತಿಯ ಲೆಕ್ಕದಲ್ಲಿ ನಿರ್ಧರಿಸುತ್ತಾನೆ. ಈ ಪ್ರಾಣಶಕ್ತಿ ಉಸಿರಾಟದ ಮೂಲಕ ವ್ಯಕ್ತಗೊಳ್ಳುವುದರಿಂದ ವೇಗವಾಗಿ ಉಸಿರಾಡಿ ಪ್ರಾಣಶಕ್ತಿ ಕಳಕೊಳ್ಳುವವರು ಭುವಿಯಿಂದ ಬಲು ಬೇಗ ಜಾಗ ಖಾಲಿ ಮಾಡುತ್ತಾರೆ. ಹಾಗಂತ ಮೇಲಿನ ದಾಖಲೆ ನೋಡುವಾಗ ಅನಿಸುತ್ತೆ.
ಇದೊಂಥರಾ ಹಳೆಯ ಕಾಲದ ಗೊಂಬೆಗಳಿದ್ದಂತೆ. ಕೀಲಿ ಕೊಟ್ಟರೆ ಒಳಗಿನ ತಂತಿ ಬಿಗಿಯಾಗಿ ಸುರುಳಿ ಸುತ್ತಿಕೊಂಡು ಕುಳಿತುಕೊಳ್ಳುತ್ತದೆ. ಆಮೇಲೆ ನಿಧಾನವಾಗಿ ಸುರುಳಿ ತೆರೆದುಕೊಳ್ಳುತ್ತಿದ್ದಂತೆ ಗೊಂಬೆ ಹಿಂದೆ-ಮುಂದೆ, ಮೇಲು-ಕೆಳಕ್ಕೆ ಚಲಿಸುತ್ತದೆ. ಗೊಂಬೆಯ ಅಷ್ಟೂ ಆಟ ಸುರುಳಿ ಸುತ್ತಿದ ತಂತಿ ಬಿಚ್ಚಿಕೊಳ್ಳುವವರೆಗೆ ಮಾತ್ರ. ಸುರುಳಿ ಬೇಗ ಬಿಚ್ಚಿಕೊಂಡರೆ ಆಟ ಬೇಗ ಮುಗಿಯಿತು; ನಿಧಾನವಾಗಿ ತೆರೆದುಕೊಂಡರೆ ಆಟ ಸುದೀರ್ಘ. ಹಾಗೆಯೇ ನಮ್ಮ ಬದುಕೂ ಕೂಡ. ಭಗವಂತ ನಮ್ಮ ಜನನದ ಹೊತ್ತಲ್ಲಿ ಕೀಲಿ ಸುತ್ತಿ ಪ್ರಾಣ ತುಂಬಿ ಕಳಿಸುತ್ತಾನೆ. ಈ ಪ್ರಾಣದ ಸುರುಳಿ ಹೇಗೆ ಬಿಚ್ಚಿಕೊಳ್ಳಬೇಕೆಂಬ ವಿವೇಚನೆ ನಮಗೆ ಬಿಡುತ್ತಾನೆ. ಈ ಶಕ್ತಿಯನ್ನು ನಿಧಾನವಾಗಿ ವ್ಯಯಿಸಿದಷ್ಟೂ ದೀಘರ್ಾಯಸ್ಸು, ಸುಭದ್ರ ಆರೋಗ್ಯ!
ಕಡಪ ಶ್ರೀ ಪರಮಹಂಸ ಸಚ್ಚಿದಾನಂದ ಯೋಗೀಶ್ವರರು ಜೀವ ಬ್ರಹ್ಮೈಕ್ಯ ರಾಜಯೋಗ ಸಾರಾಮೃತದಲ್ಲಿ ಉಸಿರಿನ ಖಚರ್ು-ವೆಚ್ಚಗಳ ಲೆಕ್ಕಾಚಾರ ಸಮರ್ಥವಾಗಿ ಕೊಟ್ಟಿದ್ದಾರೆ. ಸಹಜವಾಗಿರುವಾಗ ನಡೆಯುವ ಉಸಿರಾಟಕ್ಕಿಂತ ಮಾತನಾಡುತ್ತಿರುವಾಗ ಉಸಿರಾಟ ಕ್ರಿಯೆ ವೇಗವಾಗಿರುತ್ತದೆ. ಅನವಶ್ಯಕವಾಗಿ ಮಾತನಾಡುತ್ತಿರುವಾಗ, ಭಾವೋದ್ವೇಗಕ್ಕೆ ಒಳಗಾಗುತ್ತಿರುವಾಗಲೆಲ್ಲ ಪ್ರಾಣಶಕ್ತಿ ಅಪಾರವಾಗಿ ಕಳೆದು ಹೋಗುತ್ತಿರುತ್ತದೆ. ಹೀಗಾಗಿಯೇ ಆನಂತರ ಪ್ರಾಣಾಯಾಮದ ಸಾಧನೆಯನ್ನು ಅನುಸರಿಸದ ಅನೇಕ ಭಾಷಣಕಾರರು ಕಡಿಮೆ ವಯಸ್ಸಿನಲ್ಲಿಯೇ ಇಹಲೋಕದ ವ್ಯಾಪಾರ ಮುಗಿಸಿಬಿಡುತ್ತಾರೆ! ಹೀಗಾಗಿಯೇ ಆಧ್ಯಾತ್ಮ ಶಕ್ತಿಯ ತುಡಿತವುಳ್ಳವರು ಮಾತನಾಡುವುದನ್ನು ಕಡಿಮೆ ಮಾಡಬೇಕು ಅನ್ನೋದು.
ಮಾತನಾಡುವಾಗಿಗಿಂತಲೂ ಹೆಚ್ಚಿನ ಪ್ರಾಣಶಕ್ತಿ ನಷ್ಟವಾಗೋದು ನಿದ್ದೆಯ ಸಮಯದಲ್ಲಿ ಅಂತಾರೆ. ಇದಕ್ಕಿಂತಲೂ ಹೆಚ್ಚು ನಷ್ಟ ಕೋಪಿಸಿಕೊಂಡಾಗ. ಕೋಪದ ಆವೇಶ ತಲೆಗೇರಿದಾಗ ಉಸಿರಾಟದ ದರ ತೀವ್ರವಾಗುತ್ತದೆ. ಪ್ರಾಣಶಕ್ತಿ ಸೋರಿ ಹೋಗುತ್ತಲೇ ಇರುತ್ತದೆ. ಹಾಗಾಗಿಯೇ ಸಾಧಕನಿಗೆ ಹೆಚ್ಚು ನಿದ್ದೆ ಮಾಡುವುದು, ಕೋಪಿಸಿಕೊಳ್ಳುವುದೆಲ್ಲಾ ವಜ್ರ್ಯ. ಹೀಗಿರುವಾಗ ಕೋಪಿಸಿಕೊಂಡು ಕಿತ್ತಾಡುವುದಂತೂ ಆಯಸ್ಸಿನ ನಾಶಕ್ಕೆ ಬಲವಾದ ಕೊಡುಗೆ.
ಈಗ ಮುಖ್ಯ ವಿಚಾರಕ್ಕೆ ಬನ್ನಿ. ಉಸಿರಾಟದ ದರ ತೀವ್ರವಾಗಿ ಏರುವುದು ಕಾಮನೆಗಳಲ್ಲಿ ಮಗ್ನರಾದ ಸ್ತ್ರೀ ಪುರುಷರು ಭೋಗಿಸುವ ನೆಪದಲ್ಲಿ ಶಕ್ತಿ ಕಳೆದುಕೊಳ್ಳುತ್ತಾರಲ್ಲ ಆಗ! ಪಶ್ಚಿಮದ ದೃಷ್ಟಿಯಲ್ಲಿ ವೀರ್ಯ ನಷ್ಟ ಅತ್ಯಂತ ಸಹಜ. ಆದರೆ ಭಾರತ ಅದನ್ನು ಸಾವಿಗೆ ಹತ್ತಿರ ತರುವ ಪ್ರಕ್ರಿಯೆ ಅಂತ ಭಾವಿಸುವುದು ಇದೇ ಕಾರಣದಿಂದ. ವೀರ್ಯವನ್ನು ನಷ್ಟಮಾಡಿಕೊಳ್ಳುವ ಈ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದ ಪ್ರಾಣ ಶಕ್ತಿ, ಅತ್ಯಲ್ಪ ಸಮಯದಲ್ಲಿ ನಾಶವಾಗಿಬಿಡುತ್ತದೆ. ವ್ಯಕ್ತಿ ನಿಸ್ತೇಜನಾಗಿಬಿಡುತ್ತಾನೆ. ಮತ್ತೆ ಮತ್ತೆ ನಡೆಯುವ ಈ ಕ್ರಿಯೆಯಿಂದ ಓಜಸ್ಸು-ತೇಜಸ್ಸುಗಳು ಹ್ರಾಸಗೊಂಡು ಜೀವನದ ಕೊನೆಯ ಕಾಲ ಪ್ರಾಣಶಕ್ತಿಯ ಕೊರತೆಯಿಂದ ಬಳಲುವಂತಾಗುತ್ತದೆ. ಹೀಗಾಗಿಯೇ ಭಾರತದಲ್ಲಿ ಮದುವೆಯಾದವರಿಗೂ ಬ್ರಹ್ಮಚರ್ಯದ ಚೌಕಟ್ಟನ್ನು ಬೋಧಿಸಿರುವುದು.
ಹೌದು! ಪ್ರತಿಯೊಂದು ಕಣ ವೀರ್ಯವೂ, ಪ್ರತಿಯೊಂದು ಅಂಡಾಣುವೂ ಅಪಾರ ಪ್ರಮಾಣದ ಪ್ರಾಣಶಕ್ತಿ ಮತ್ತು ಓಜಸ್ಸನ್ನು ಹೊಂದಿದೆ. ಈ ಪ್ರಮಾಣ ವ್ಯಕ್ತಿಯಲ್ಲಿ ಅಡಕವಾಗಿರುವ ಒಟ್ಟೂ ಪ್ರಾಣ-ಓಜಸ್ಸಿಗೆ ಅನುಗುಣವಾಗಿ ಇರುತ್ತದೆ. ಹೆಚ್ಚು ಪ್ರಾಣ ಮತ್ತು ಓಜಸ್ಸನ್ನು ಪ್ರಯತ್ನಪೂರ್ವಕವಾಗಿ ಸಂಗ್ರಹಿಸಿದರೆ ಅಂಡ-ವೀರ್ಯಗಳು ಬಲಾಢ್ಯಗೊಳ್ಳುತ್ತವೆ. ಇಂತಹವು ಬೆಸೆದುಕೊಂಡಾಗ ಹುಟ್ಟುವ ಶಿಶು ಸಹಜವಾಗಿಯೇ ಅಪಾರ ಶಕ್ತಿಯ ಗಣಿಯಾಗಿರುತ್ತದೆ. ತಂದೆ-ತಾಯಿಯರ ಶಕ್ತಿಯನ್ನೂ ಪಡಕೊಂಡು ಕಾಲಕ್ರಮದಲ್ಲಿ ತನ್ನ ಸಾಮಥ್ರ್ಯವನ್ನು ಬೆಸೆದು ಮಹಾಶಕ್ತಿಯಾಗಿಬಿಡುತ್ತದೆ. ಅದಕ್ಕೆ ಮದುವೆಯಾದ ನಂತರವೂ ದಂಪತಿಗಳು ಬ್ರಹ್ಮಚರ್ಯವನ್ನು ಪಾಲಿಸಬೇಕು; ಸಂತಾನ ಪಡೆಯಲೆಂದು ಮಾತ್ರ ಒಂದಾಗಬೇಕೆಂಬ ನಿಯಮವನ್ನು ದಾರ್ಶನಿಕರು ಹೇರಿದ್ದು. ಬೇರೊಂದು ರೀತಿಯಲ್ಲಿ ಹೇಳಬೇಕೆಂದರೆ ಸೃಷ್ಟಿ ಕಾರ್ಯಕ್ಕೆ ಜೊತೆಯಾಗುವಲ್ಲಿ ಮಾತ್ರ ತಮ್ಮ ಸತ್ತ್ವವನ್ನು ಧಾರೆಯೆರೆಯುವ ಅಂತಹ ದಂಪತಿಗಳು ಮದುವೆಯಾಗಿದ್ದೂ ಬ್ರಹ್ಮಚಾರಿಗಳೇ! ಹೀಗಾಗಿಯೇ ಈ ದೇಶದ ಋಷಿ-ಮುನಿಗಳು ಮದುವೆಯಾಗಿದ್ದರೂ ಬ್ರಹ್ಮಮಾರ್ಗದಿಂದ ವಿಚಲಿತರಾಗುತ್ತಿರಲಿಲ್ಲ. ಮೇನಕೆಯಿಂದ ತಪೋಭಂಗ ಮಾಡಿಸಿಕೊಂಡು ಸಂತಾನ ಪಡೆದ ನಂತರವೂ ಮತ್ತೆ ತಪಸ್ಸಿನ ಸಾಧನೆಗೆ ಅಣಿಯಾದವರು ವಿಶ್ವಾಮಿತ್ರರು.
ಈಗ ಬಹುಶಃ ಎಲ್ಲವೂ ನಿಚ್ಚಳವಾಗಿರಬೇಕು. ಒಳ್ಳೆಯ ಸಂತಾನ ಪಡೆಯಬೇಕೆಂದರೆ ಅರಳಿ ಕಟ್ಟೆಗೆ ಸುತ್ತು ಬರಬೇಕು; ವ್ರತಾಚರಣೆ ಮಾಡಬೇಕು, ಸತ್ಸಂಗದಲ್ಲಿರಬೇಕು ಅಂತೆಲ್ಲಾ ಹೇಳೋದು ದೇವರನ್ನು ಒಲಿಸಿಕೊಳ್ಳಿ ಅಂತಲ್ಲ. ಬದಲಿಗೆ ಈ ವೇಳೆಯಲ್ಲಿ ಮನಸ್ಸು ಕೆಳಗಿಳಿಯದಂತೆ ನೋಡಿಕೊಳ್ಳಿ; ಶುದ್ಧ ವಾಯು ಸೇವಿಸಿ ಪ್ರಾಣಶಕ್ತಿ ವೃ??್ಧಸಿಕೊಳ್ಳಿ ಮತ್ತು ಕಾಮನೆಗಳೇಳದಂತೆ ನಿಯಂತ್ರಿಸಿಕೊಳ್ಳಿ ಅಂತ! ಹೀಗೆ ಸಂತಾನ ಪಡೆಯುವುದಕ್ಕೆ ಮುನ್ನ ಗಂಡು-ಹೆಣ್ಣು ತಯಾರಾಗಬೇಕು. ಹುಟ್ಟುವ ಸಂತಾನದ ಕಲ್ಪನೆಯಿಂದ ಇಬ್ಬರೂ ಭಾವುಕರಾಗಬೇಕು. ಆಗಲೇ ಮುಂದಿನ ಯಜ್ಞಕ್ರಿಯೆಗೆ ಅವರು ತಯಾರು. ಷೋಡಶ ಸಂಸ್ಕಾರಗಳಲ್ಲಿ ಮೊದಲನೆಯದು ಇದೇ, ಗಭರ್ಾದಾನ.

vishva
ಆಹ್! ಪ್ರಜನನ ಕ್ರಿಯೆಯನ್ನು ‘ದಾನ’ವೆಂದು ಕರೆಯುವ ಯಜ್ಞರೂಪೀ ಪ್ರಕ್ರಿಯೆಯ ಕಲ್ಪನೆಯೇ ಸುಂದರ. ಪಶ್ಚಿಮದ ಭೋಗದ ಪ್ರಪಂಚಕ್ಕೆ ದಾಸರಾದ ಮೇಲೆ ಹೆಣ್ಣು ವಾಂಛೆಯನ್ನು ಈಡೇರಿಸುವ ಯಂತ್ರವಾಗಿ ಬಳಕೆಯಾಗುತ್ತಿದ್ದಾಳೆ. ಆದರೆ ಭಾರತೀಯ ಪರಂಪರೆ ಪರಸ್ತ್ರೀ ಬಿಡಿ ಸ್ವಂತ ಪತ್ನಿಯೊಂದಿಗಿನ ನಡತೆಯನ್ನೂ ಆಧ್ಯಾತ್ಮಿಕ ಭಾವದಿಂದ ತುಂಬಿಬಿಟ್ಟಿದೆ. ಸ್ತ್ರೀಯ ಅಗ್ನಿ??ಂಡದಲ್ಲಿ ಉರಿಯುತ್ತಿರುವ ಅಂಡವೆಂಬ ಜ್ಯೋತಿಗೆ ವೀರ್ಯವೆಂಬ ಹವಿಸ್ಸನ್ನು ಸಮಪರ್ಿಸುವ ಯಜ್ಞಕಾರ್ಯದ ಫಲಕ್ಕೆ ಸಂತಾನವೆಂಬ ಹೆಸರು ಕೊಟ್ಟಿದೆ. ಇಷ್ಟೊಂದು ತಪಸ್ಸಿನಿಂದ, ಈ ಬಗೆಯ ಭಾವನೆಯಿಂದ ಪಡಕೊಂಡ ಸಂತಾನ ಶ್ರೇಷ್ಠವಾಗಿರಲೇಬೇಕು. ಹೀಗಾಗಿ ರಾಮನ ಜನನಕ್ಕೆ ಮುನ್ನ ದಶರಥ ಪುತ್ರಕಾಮೇಷ್ಠಿ ಮಾಡಬೇಕಾಯ್ತು. ಕೃಷ್ಣನ ಜನನಕ್ಕೆ ಮುನ್ನ ವಸುದೇವ-ದೇವಕಿಯರು ಅನೇಕ ವರ್ಷ ಭಗವಂತನ ಜಪದಲ್ಲಿ ಕಳೆಯಬೇಕಾಯ್ತು. ಯಾವುದೇ ಮಹಾಪುರುಷರ ಬದುಕೂ ಹಾಗೆಯೇ ತಂದೆ-ತಾಯಿಯರ ಕಠಿಣ ತಪಸ್ಸಿನ ಫಲ. ಅದಕ್ಕೇ ವಿವೇಕಾನಂದರು ಮತ್ತೆ ಯಾಕೆ ಹುಟ್ಟುತ್ತಿಲ್ಲವೆಂದರೆ ವಿಶ್ವನಾಥ ದತ್ತ-ಭುವನೇಶ್ವರಿ ದೇವಿಯಂತಹವರೂ ಇಲ್ಲವೆಂದೇ ಉತ್ತರಿಸಬೇಕು ಅಲ್ಲವೇ?
ಅಲ್ಲದೇ ಮತ್ತೇನು. ನಮ್ಮ ಸುತ್ತಲೂ ಅತಂತ್ರವಾಗಿ ಸುತ್ತಾಡುತ್ತಿರುವ ಆತ್ಮಗಳು ಸೂಕ್ತ ದೇಹಕ್ಕಾಗಿ ಅರಸುತ್ತಿರುತ್ತವೆ. ತಂದೆ-ತಾಯಿಯರು ಒಂದಾಗುವ ಭಾವನೆಗೆ ತಕ್ಕಂತಹ ಆತ್ಮ ಅಂಡಾಣುವಿನಲ್ಲಿ ವೀರ್ಯದ ಮೂಲಕ ಹೊಕ್ಕಿಬಿಡುತ್ತದೆ. ಕೆಲವೆಡೆ ಜೀವಾತ್ಮ ಹೊಕ್ಕುವುದು ಏಳನೇ ತಿಂಗಳಲ್ಲಿ ಅಂತಾರಾದರೂ ಮೊದಲನೇ ದಿನವೂ ಅಷ್ಟೇ ಪ್ರಭಾವಿ ಎಂಬುದನ್ನು ತಳ್ಳಿಹಾಕಲಾಗದು. ತಾಯಿ ಕೇಳುವ ಹಾಡು, ನೋಡುವ ದೃಶ್ಯ ಪ್ರತಿಯೊಂದೂ ಒಳಗಿರುವ ಭ್ರೂಣದ ಮೇಲೆ ಪ್ರಭಾವ ಮಾಡುವುದು ತಾಯಿಯ ಪ್ರಾಣಶಕ್ತಿ ಮತ್ತು ಓಜಸ್ಸಿನ ಪ್ರಭಾವದಿಂದಲೇ.
ಅಂಡಾಣುವಿನ ಉತ್ಪಾದನೆ ನಿಂತೊಡನೆ ತಾಯಿಯ ದೇಹದಲ್ಲಿನ ಶಕ್ತಿಯೆಲ್ಲವೂ ಓಜಸ್ಸಾಗಿ ಪರಿವರ್ತನೆಗೊಳ್ಳಲಾರಂಭಿಸುತ್ತದೆ. ಆಕೆ ಸಹಜವಾಗಿಯೇ ತೇಜಸ್ವಿಯಾಗುತ್ತಾಳೆ. ಅದಕ್ಕೇ ಮಗುವನ್ನು ಹೊತ್ತ ತಾಯಿಯ ಮುಖದ ಲಕ್ಷಣ ಬದಲಾಗಿಬಿಡೋದು. ಆಕೆ ಈಗ ಪೂರ್ಣ ಚಂದ್ರನಂತೆ ಕಂಗೊಳಿಸುತ್ತಾಳೆ. ಆಕೆಯ ಹೃದಯ ಪ್ರೇಮದ ಕೊಳಗವೇ ಆಗಿಬಿಡುತ್ತದೆ. ಆಕೆಯ ಭೋಗಲಾಲಸೆ ಗಣನೀಯ ಪ್ರಮಾಣದಲ್ಲಿ ತಗ್ಗುವುದು ಕಣ್ಣಿಗೆ ರಾಚುತ್ತದೆ. ಹೀಗಾಗಿ ಋಷಿಗಳು ಅಂದೆಲ್ಲ, ‘ದಶ ಪುತ್ರಾನ್ ಆಧೇಹಿ, ಪತಿಂ ಏಕಾದಶಂ ಕೃ?? ‘ ಎಂದು ಆಶೀರ್ವದಿಸುತ್ತಿದ್ದುದು. ಅದರರ್ಥ ಬಲು ಸ್ಪಷ್ಟ. ಹತ್ತು ಪುತ್ರರನ್ನು ಹೆತ್ತ ನಿನ್ನ ಹೃದಯ ಅದೆಷ್ಟು ವಾತ್ಸಲ್ಯ ಭಾವದಿಂದ ತುಂಬುವುದೆಂದರೆ ಆನಂತರ ಪತಿಯೇ ಹನ್ನೊಂದನೇ ಮಗುವಾಗುವನು ಅಂತ!
ನಮ್ಮಲ್ಲಿ ಹನ್ನೆರಡು ವರ್ಷಗಳ ಬ್ರಹ್ಮಚರ್ಯ ಸಾಧನೆಯನ್ನು ಆಚರಿಸಬೇಕೆಂಬ ಕಟ್ಟಾಜ್ಞೆ ಇದೆ. ಮಹಾವೀರ 12 ವರ್ಷಗಳ ಸಾಧನೆಯ ನಂತರ ಬ್ರಹ್ಮಜ್ಞಾನಿಯಾದ. 12 ವರ್ಷಗಳ ಕಾಲ ಸುಳ್ಳನ್ನು ಹೇಳದಿದ್ದರೆ ಆನಂತರ ಆತ ಹೇಳಿದ್ದೆಲ್ಲವೂ ಸತ್ಯವಾಗಿಬಿಡುತ್ತದೆ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಇದಕ್ಕೆ ಅನೇಕರು ನೀಡುವ ಕಾರಣವೆಂದರೆ ಅಷ್ಟು ದೀರ್ಘಕಾಲ ಬ್ರಹ್ಮಚಿಂತನೆ ಮಾಡುತ್ತ ಮನಸ್ಸನ್ನು ಆಕಾಶದೆತ್ತರಕ್ಕೆ ನಿಲ್ಲಿಸಿದವನಲ್ಲಿ ವೀರ್ಯದ ಉತ್ಪಾದನೆಯೇ ನಿಂತು ಹೋಗಿಬಿಡುವುದಂತೆ. ಯೋಗಿಗಳು, ಋಷಿಗಳು ಮಾತ್ರ ಇದರಲ್ಲಿ ಸಿದ್ಧ ಹಸ್ತರಾಗಿದ್ದರು. ಹಾಗಂತ ಇದು ಅಥರ್ೈಸಿಕೊಳ್ಳಲಾಗದ್ದೇನಲ್ಲ. ಓಜಸ್ಸು ವೃದ್ಧಿಯಾದರೆ, ತೇಜಸ್ಸು ಹೆಚ್ಚಾಗುತ್ತದೆ. ತೇಜಸ್ಸೆಂದರೆ ಅಗ್ನಿ. ಈ ತೇಜಸ್ಸಿನ ಧಗೆಗೆ ವೀರ್ಯದ ಶಕ್ತಿ ಆಗಿಂದಾಗ್ಯೆ ಆವಿಯಾಗಿ ಶಕ್ತಿ ದೇಹಕ್ಕೆ ಹರಡಿಕೊಂಡು ಬಿಡುವುದು.
ಈ ಎಲ್ಲ ವಿಚಾರಗಳನ್ನು ನಮ್ಮಲ್ಲಿ ತುಂಬುವಲ್ಲಿ ಗುರುಕುಲದ ಪಾತ್ರ ಬಲು ಮಹತ್ವದ್ದು. ಉಪನಯನ ಮಾಡಿಸಿ ಅವನನ್ನು ಸ್ವೀಕರಿಸುವ ಗುರು ಹದಿನಾಲ್ಕು ವರ್ಷಗಳ ದೀರ್ಘಕಾಲ ಅವನನ್ನು ಜೊತೆಯಲ್ಲಿಟ್ಟುಕೊಂಡು ಜತನದಿಂದ ಕಾಪಾಡುತ್ತಾರೆ. ಈ ಅವಧಿಯೊಳಗೆ ಆತ ಕಠಿಣ ಬ್ರಹ್ಮಚಾರಿಯಾಗಿ ರೂಪುಗೊಂಡಿರುತ್ತಾನೆ. ಅಧ್ಯಯನ ಮುಗಿದು ಮನೆಗೆ ಬಂದ ಈ ವಿದ್ಯಾಥರ್ಿಗೆ ಮದುವೆಗೆ ಅಣಿಮಾಡುವ ಮುನ್ನ ಕಾವ್ಯ ರಸಾಸ್ವಾದನೆಯನ್ನು ಕಲಿಸಲಾಗುತ್ತದೆ. ಪ್ರೇಮದ ಭಾವನೆಯನ್ನು ಹಂತಹಂತವಾಗಿ ತುಂಬಿ, ಅವನೊಳಗೆ ಹೊಸದಾಗಿ ವಾಂಛೆಗಳು ಟಿಸಿಲೊಡೆಯುವಂತೆ ಮಾಡಲಾಗುತ್ತದೆ. ಆನಂತರವೇ ಅವನಿಗೊಂದು ಅನುರೂಪಳಾದ ಹುಡುಗಿಯನ್ನು ನೋಡಿ ಮದುವೆ ಮಾಡಿಸೋದು. ಹೇಗಿದೆ? ಈಗಿನ ಸ್ಥಿತಿ-ಗತಿಗಳು ಪೂರ್ಣ ಭಿನ್ನ. ಹೈಸ್ಕೂಲು ಕಳೆಯುವುದರೊಳಗೆ ಗಂಡು-ಹೆಣ್ಣು ಕಾಮನೆಗಳ ಮುದ್ದೆಯಾಗಿರುವಂತಹ ಪರಿಸ್ಥಿತಿ ನಿಮರ್ಿಸಿ ಬಿಟ್ಟಿದ್ದೇವೆ.
ಒಟ್ಟಿನಲ್ಲಿ ಒಂದಂತೂ ಸತ್ಯ. ಪ್ರಾಣಶಕ್ತಿ, ಮನಸ್ಸು ಮತ್ತು ವೀರ್ಯ ಒಂದಕ್ಕೊಂದು ಸಂಬಂಧ ಹೊಂದಿರುವಂತಹವು. ಒಂದರಲ್ಲಿ ಆದ ಬದಲಾವಣೆ ಮತ್ತೊಂದನ್ನು ಪ್ರಭಾವಿಸದೇ ಬಿಡಲಾರದು. ಮನಸ್ಸು ಸ್ವಲ್ಪ ಕೆಳಗಿಳಿದರೆ, ಸುಖ-ಭೋಗಗಳೆಡೆಗೆ ತಿರುಗಿದರೆ ವೀರ್ಯದ ನಷ್ಟ ಖಾತ್ರಿ. ಅದರೊಟ್ಟಿಗೇ ಪ್ರಾಣಶಕ್ತಿಯ ನಷ್ಟವೂ ಕೂಡ. ಅದಕ್ಕೆ ವಿಪರೀತವಾಗಿ ವೀರ್ಯ ಊಧ್ರ್ವಮುಖಿಯಾದರೆ ಪ್ರಾಣಶಕ್ತಿ ಪ್ರಭಾವಿಯಾಗುತ್ತದೆ. ಸಹಜವಾಗಿಯೇ ಮನಸ್ಸು ಧ್ಯಾನಸ್ಥಗೊಳ್ಳುತ್ತದೆ.
ಹಾಗಂತ ಹರಿದು ಚೆಲ್ಲಿ ಹೋಗುವ ವೀರ್ಯ ಮತ್ತು ಅಂಡಾಣುಗಳೇ ಶಕ್ತಿಯಾ? ಖಂಡಿತ ಇಲ್ಲ. ನಾವು ತಿಂದ ಆಹಾರ ಜರಡಿ ಹಿಡಿದ ಮೇಲೆ ನಿಮರ್ಿತಗೊಂಡಿರುವ ಈ ವೀರ್ಯ ಮತ್ತು ಅಂಡಾಣುಗಳು ಹೊರ ಹೋಗುವ ಮುನ್ನ ಪೂರಕ ದ್ರವಗಳೊಂದಿಗೆ ಸೇರಿಕೊಳ್ಳುತ್ತವೆ. ಶಕ್ತಿ ಅರಿವಿಗೆ ಬಾರದಂತೆ ಹರಿದು ಹೋಗುತ್ತದೆ. ಇದೊಂದು ರೀತಿಯಲ್ಲಿ ತಂತಿಯಲ್ಲಿ ಹರಿಯುವ ವಿದ್ಯುತ್ತಿನಂತೆ. ಉರಿಯುವ ಬಲ್ಬು ವಿದ್ಯುತ್ತಿನ ಬಳಕೆ ಮಾಡುತ್ತದೆ. ಇಲ್ಲಿ ತಂತಿ ವಾಹಕ ಮಾತ್ರ. ವಿದ್ಯುತ್ ಇಲ್ಲವಾದಲ್ಲಿ ಅದಕ್ಕೆ ಬೆಲೆಯೇ ಇಲ್ಲ. ಹಾಗೆಯೇ ವೀರ್ಯವೂ ಕೂಡ. ಅದರಲ್ಲಿ ಅದೆಷ್ಟು ಪ್ರಾಣಶಕ್ತಿ ತುಂಬಬಲ್ಲೆವೋ ಅಷ್ಟು ಶಕ್ತಿಶಾಲಿ ಅದು. ಇಲ್ಲವಾದಲ್ಲಿ ಬರಿಯ ದ್ರವ ಮಾತ್ರ.
ಗಭರ್ಾದಾನ ಧಿ ಈ ಎಲ್ಲ ವಿಚಾರಗಳನ್ನು ನಮ್ಮಲ್ಲಿ ತುಂಬುವಲ್ಲಿ
ಹೌದು, ಹಿಂದುವಿನಷ್ಟುವೈಜ್ಞಾನಿಕವಾಗಿ ಅಧಿಕಾರಯುತವಾಗಿ ಈ ಕುರಿತಂತೆ ???? ಮಾತನಾಡಲಿಲ್ಲ. ಆಚರಿಸ?? ಸಾಧ್ಯವಾಗಲಿಲ್ಲ.
ಆದರೇನು? ನಮ್ಮ ಪರಮ ವೈಭವವನ್ನು ಮರೆತಿರುವ ನಾವೂ ಓಜಸ್ಸನ್ನೂ, ತೇಜಸ್ಸನ್ನೂ ಕಳೆದುಕೊಂಡು ಪ್ರಾಣವಿಹೀನರಾಗಿಬಿಟ್ಟಿದ್ದೇವೆ. ಹೀಗಾಗಿಯೇ ಹೊಸ ಆಲೋಚನೆಗಳು, ಹೊಸ ಭರವಸೆಗಳು ಇಲ್ಲಿಂದ ಹೊರಡುತ್ತಲೇ ಇಲ್ಲ. ತರುಣ ಪೀಳಿಗೆ ‘ಪಶ್ಚಿಮದವರಂತೆ ಇಚ್ಛಾನುಸಾರ ಬದುಕುವುದು ಸಾಹಸವಲ್ಲ. ಭಾರತೀಯತೆಗೆ ಮರಳಿ ಪರಂಪರೆಗೆ ತಕ್ಕಂತೆ ಬಾಳುವುದೇ ತಾಕತ್ತು’ ಎಂಬುದನ್ನು ಅರಿಯಬೇಕಿದೆ. ಸಾಹಸದ ಬದುಕಿನ ಸವಾಲು ಸ್ವೀಕರಿಸಲು ಮುಂದಡಿಯಿಡಬೇಕಿದೆ.

Leave a Reply