ವಿಭಾಗಗಳು

ಸುದ್ದಿಪತ್ರ


 

ವಿಶ್ವಶಕ್ತಿಯನ್ನು ನಿಯಂತ್ರಿಸಬಲ್ಲ ನಮ್ಮೊಳಗಿನ ಮಂತ್ರಶಕ್ತಿ

ಕಳೆದ ಎಂಟು ಹತ್ತು ದಿನಗಳ ಹಿಂದೆ ಶೆಫೀಲ್ಡ್ ವಿಶ್ವವಿದ್ಯಾಲಯದ ಸೌರವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಪ್ರೊಫೆಸರ್ ರಾಬಟರ್್ಸನ್ ತಮ್ಮ ವಿದ್ಯಾಥಿ೵ಗಳ
ಜೊತೆಗೂಡಿ ಒಂದು ಅಚ್ಚರಿಯ ವಿಚಾರ ಸಂಶೋಧಿಸಿದ್ದಾರೆ. ಸೂರ್ಯನ ಸುತ್ತಲೂ ಉಂಟಾಗಿರುವ ಅಯಸ್ಕಾಂತೀಯ ಸುರುಳಿಗಳಿಂದ ಹೊರಟ ಸದ್ದನ್ನು ಗುರುತಿಸಿದ್ದಾರೆ. ಈ ಸದ್ದಿನ ಕಂಪನಾಂಕವನ್ನು ಹೆಚ್ಚಿಸಿ ಅದನ್ನು ಕೇಳುವ ಮಟ್ಟಕ್ಕೇರಿಸಿ ಧ್ವನಿಮುದ್ರಿಕೆ ಮಾಡಿಕೊಂಡಿದ್ದಾರೆ. ಈ ದನಿಯನ್ನು ಕೇಳಿದವರೆಲ್ಲ ಅಚ್ಚರಿಗೊಳಗಾಗುತ್ತಿದ್ದಾರೆ. ಏಕೆ ಗೊತ್ತೇ? ವೀಣೆ ಮೀಟುವ ನಾದದಂತೆ ಕೇಳುತ್ತಿರುವ ಈ ದನಿ ‘ಓಂ’ಕಾರಕ್ಕೆ ಬಲು ಸಮೀಪದಲ್ಲಿದೆ.

omjapa

ಗಾಳಿ ಬೀಸುವಾಗ ಸದ್ದು ಹೇಗೆ ಮಾಡುತ್ತೆ ಅಂತ ಕೇಳಿದೊಡನೆ,
ಮಕ್ಕಳು ಕೂಡ ‘ವ್ರೂಂ’ ಅಂತಾರೆ. ನೀರು? ‘ಸ್ರೂ’ ಅಂತ ಸರಾಗವಾಗಿ ಹರಿಯುತ್ತೆ. ಬೆಂಕಿ ಉರಿಯುವಾಗ ಧಗ-ಧಗನೆ ಸದ್ದು ಮಾಡುತ್ತೆಂದು ಎಲ್ಲಾ ಲೇಖಕರು ಹೇಳುತ್ತಾರೆ. ಪ್ರಕೃತಿಯ ಒಂದೊಂದು ತತ್ತ್ವಗಳು ಒಂ
ದೊಂದು ಬಗೆಯ ಕೇಳುವ ಸದ್ದು ಹೊರಡಿಸುತ್ತಲ್ಲ, ಮತ್ತೆ ದೇಹದೊಳಗಿನ ಈ ತತ್ತ್ವಗಳು ಸುಮ್ಮನಿರುತ್ತವೇನು? ಹರಿಯುವ ರಕ್ತಕ್ಕೊಂದು ಶಬ್ದ ಇರಲಾರದೇ? ಒಳಗೆ ತುಂಬಿರುವ ಗಾಳಿ ಶಾಂತವಾಗಿರುತ್ತದೇನು? ಜಠರದಲ್ಲಿ ಅಡಗಿರುವ ಅಗ್ನಿ ಅದರ ‘ವ್ರೂಂ’ಕಾರ ಹೇಗಿರಬಹುದು!
ಇದೇ ತಥ್ಯ. ಆರೋಗ್ಯವಂತನ ದೇಹದೊಳಗೆ ಹರಿಯುತ್ತಿರುವ ರಕ್ತ, ಹೊತ್ತಿರುವ ಅಗ್ನಿ, ಅಡಗಿರುವ ಗಾಳಿ, ಇವುಗಳು ಹೊರಗಣ ನೀರು, ಬೆಂಕಿ, ಗಾಳಿಯ ತತ್ತ್ವಗಳೊಂದಿಗೆ ಶಬ್ದದ ಮೂಲಕ ಸೂಕ್ತವಾಗಿ ಬೆರೆತಿರುತ್ತವೆ. ಹಾಗೆ ಶೃತಿ ತಪ್ಪಿದರೆ ಸೂಕ್ತ ಹೊಂದಾಣಿಕೆ ಮಾಡಿದರಾಯ್ತುಅಷ್ಟೇ; ಆರೋಗ್ಯ ಸಿದ್ಧಿಸುತ್ತದೆ! ಇದು ಅತ್ಯಂತ ಸಹಜವಾದ ದೇಹ ವಿಜ್ಞಾನ. ನಮಗೆ ಕೇಳುತ್ತಿಲ್ಲವೆಂದ ಮಾತ್ರಕ್ಕೆ ದೇಹದೊಳಗೆ ಸದ್ದೇ ಇಲ್ಲ ಎನ್ನುವುದು ಹೃದಯದ ಲಬ್ಡಬ್ನ್ನು ಅವಮಾನಿಸಿದಂತೆ! ನಿಮಗೆ ಗೊತ್ತಿರಲಿ. ಹೃದ್ರೋಗದ ವ್ಯಾಪ್ತಿಯನ್ನು ಅರಿಯಲು ಇಸಿಜಿ ಮಾಡಿಸುತ್ತಾರಲ್ಲ ಅದು ಹೃದಯದ ಸದ್ದನ್ನು ಅಳೆಯುವ ಮಾರ್ಗವೇ ಸರಿ. ಇಲ್ಲಿನ ಏರುಪೇರುಗಳ ಆಧಾರದ ಮೇಲೆ ರೋಗ ಯಾವ ಸ್ಥಿತಿಯಲ್ಲಿದೆ ಎಂದು ಅಂದಾಜಿಸಲಾಗುತ್ತದೆ! ಒಂದೊಮ್ಮೆ ದೇಹದೊಳಗಣ ಸದ್ದು ನೀವು ಕೇಳುವಂತಹ ಸಿದ್ಧಿ ಪಡೆದುಬಿಟ್ಟರೆ ಗೌಜು ಗದ್ದಲಗಳ ರಾಶಿ ನಿಮ್ಮನ್ನು ಆವರಿಸಿಬಿಡುತ್ತದೆ. ಉಫ್ ಅಂತಹುದೊಂದು ಬದುಕನ್ನು ಊಹಿಸುವುದೂ ಅಸಾಧ್ಯ.
ಕೆಲವು ಪ್ರಾಣಿಗಳಿಗೆ ಈ ಗುಣ ವಿಶೇಷವಾಗಿದೆ. ಶಾರ್ಕ್ ತೊಂದರೆಗೆ ಸಿಲುಕಿದರೆ ಅದರ ಮಾಂಸಖಂಡಗಳ ಚಲನೆಯ ಭಿನ್ನತೆಯ ಸದ್ದು ಮತ್ತೊಂದು ಶಾಕರ್್ಗೆ ಮುಟ್ಟಿ ಅದು ರಕ್ಷಣೆಗೆ ಧಾವಿಸುವುದಂತೆ. ಜಪಾನಿನ ಒಂದು ಬಗೆಯ ಹಕ್ಕಿಗಳಿಗೆ ಮೊಟ್ಟೆ ಮರಿಯಾಗುವ ಸುದ್ದಿ ಮೊಟ್ಟೆಯಿಂದ ಹೊರಟ ಶಬ್ದತರಂಗಗಳಿಂದ ಅನುಭವಕ್ಕೆ ಬರುವುದಂತೆ!
ಅನುಮಾನವೇ ಬೇಡ. ದೇಹದೊಳಗಿನ ಪಂಚಭೂತ ಹೊರಗಣ ಪಂಚಭೂತಗಳೊಂದಿಗೆ ಅನುರಣಗೊಳ್ಳಲು ಕಾಯುತ್ತಿರುತ್ತದೆ. ಹಾಗೆ ಅವೆರಡೂ ಒಂದೇ ರೀತಿಯಲ್ಲಿ ಕಂಪಿಸಲಾರಂಭಿಸಿದರೆ ದೇಹ ಅಪಾರ ಶಕ್ತಿಯ ಪ್ರಾದುಭರ್ಾವವನ್ನು ಅನುಭವಿಸುತ್ತದೆ. ಈ ಕಾರಣದಿಂದಾಗಿಯೇ ಈ ದೇಶದ ಋಷಿಗಳು ಒಳಗಣ ಅಣುವನ್ನು ಅರಿತು ಹೊರಗಿನ ಮಹತ್ತನ್ನು ಸಾಕ್ಷಾತ್ಕರಿಸಿಕೊಂಡರು. ಹೀಗೆ ನಡೆದ ಈ ಮಾರ್ಗದಲ್ಲಿ ಗೋಚರಿಸಿದ್ದು ಅನೇಕ ಸತ್ಯಗಳು. ಅವುಗಳನ್ನೇ ದರ್ಶನಗಳೆಂದು ಕರೆಯಲಾಯಿತು ಅಷ್ಟೇ.
ಈ ಹಂತದಲ್ಲಿಯೇ ಹುಟ್ಟಿದ್ದು ‘ಓಂ’ಕಾರ ನಾದ. ಅ, ಉ ಮತ್ತು ಮ್ ಗಳ ಸಂಗಮ ಅದು. ಮತ್ತದೇ ಬ್ರಹ್ಮ ವಿಷ್ಣು ಮಹೇಶ್ವರರ ಸಂಗಮದ ಪರಿಕಲ್ಪನೆ. ಹಾಗೆ ಸುಮ್ಮನೆ ಕಣ್ಮುಚ್ಚಿ ‘ಅ’ಕಾರದ ಉಚ್ಚಾರ ಮಾಡಿ. ಅದೆಲ್ಲೋ ಹೊಕ್ಕುಳ ಸುತ್ತಮುತ್ತ ಕಂಪನದ ಅನುಭವವಾಗುತ್ತದೆ. ‘ಉ’ಕಾರದ ಉಚ್ಚಾರ ಅನುಭವಿಸಿ; ಎದೆ-ಕಂಠಗಳು ಕಂಪಿಸುತ್ತವೆ. ‘ಮ್’ ಎನ್ನಿ, ತಲೆ ‘ಧಿಂ’ ಎನ್ನುತ್ತದೆ. ಹೊಟ್ಟೆ ಸೃಷ್ಟಿಗೆ ಸಂಬಂಧಿಸಿದ್ದಾದರೆ, ಹೃದಯ ಸ್ಥಿತಿಗೆ ಕಾರಣ. ಇನ್ನು ಸಹಸ್ರಾರ, ಶಿವನ ಆವಾಸ. ಅಲ್ಲಿಗೆ ಮೂರಕ್ಷರಗಳು ತ್ರಿಮೂತರ್ಿಗಳ ತತ್ತ್ವದ ಸಂಗಮ ಅಂತಾಯ್ತು. ಹಾಗೆ ಸಮರ್ಥವಾಗಿ ಬ್ರಹ್ಮ-ವಿಷ್ಣು-ಮಹೇಶ್ವರರು ಸಮಾಗಮಗೊಳ್ಳುವುದೆಂದರೆ ಲಯ ಬದ್ಧವಾಗಿ ಓಂಕಾರ ನುಡಿಯುವುದೆಂದರ್ಥ!
‘ಓಂ’ ಎಂಬ ಈ ಏಕಾಕ್ಷರಿ ಮಂತ್ರಕ್ಕೆ ನಮ್ಮಲ್ಲಿ ಅಪಾರ ಶ್ರದ್ಧೆ-ಗೌರವಗಳಿವೆ. ‘ಓಮಿತ್ಯೇಕಾಕ್ಷರಂ ಬ್ರಹ್ಮ’ ಎಂದೇ ಹೇಳಲಾಗುತ್ತದೆ. ಇದು ಕಪ್ಪು ಕುಹರದಲ್ಲಿನ ಸದ್ದು ಎನ್ನಲಾಗುತ್ತದೆ; ವಿಶ್ವದ ಚಲನೆ ನಡೆಯುತ್ತಿದೆಯಲ್ಲ ಅದರ ನಾದ ಓಂಕಾರ ಎಂದೂ ಹೇಳತ್ತಾರೆ. ಸೃಷ್ಟಿಗೆ ಆರಂಭದಲ್ಲಿ ಒಂದು ಅಲುಗಾಟ ನಡೆಯಿತಲ್ಲ ಆ ಅಲುಗಾಟದ ಸದ್ದೂ ಓಂಕಾರವಾಗಿತ್ತಂತೆ ಹೀಗೆಲ್ಲ ಹೇಳುತ್ತಲೇ ಇರುತ್ತಾರೆ. ಆದರೆ ಕೇಳಿದವರಾರು?
ಅಚ್ಚರಿಯೇನು ಗೊತ್ತೇ? ಕಳೆದ ಎಂಟು ಹತ್ತು ದಿನಗಳ ಹಿಂದೆ ಶೆಫೀಲ್ಡ್ ವಿಶ್ವವಿದ್ಯಾಲಯದ ಸೌರವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಪ್ರೊಫೆಸರ್ ರಾಬಟರ್್ಸನ್ ತಮ್ಮ ವಿದ್ಯಾಥರ್ಿಗಳ ಜೊತೆಗೂಡಿ ಒಂದು ಅಚ್ಚರಿಯ ವಿಚಾರ ಸಂಶೋಧಿಸಿದ್ದಾರೆ. ಸೂರ್ಯನ ಸುತ್ತಲೂ ಉಂಟಾಗಿರುವ ಅಯಸ್ಕಾಂತೀಯ ಸುರುಳಿಗಳಿಂದ ಹೊರಟ ಸದ್ದನ್ನು ಗುರುತಿಸಿದ್ದಾರೆ. ಈ ಸದ್ದಿನ ಕಂಪನಾಂಕವನ್ನು ಹೆಚ್ಚಿಸಿ ಅದನ್ನು ಕೇಳುವ ಮಟ್ಟಕ್ಕೇರಿಸಿ ಧ್ವನಿಮುದ್ರಿಕೆ ಮಾಡಿಕೊಂಡಿದ್ದಾರೆ. ಈ ದನಿಯನ್ನು ಕೇಳಿದವರೆಲ್ಲ ಅಚ್ಚರಿಗೊಳಗಾಗುತ್ತಿದ್ದಾರೆ. ಏಕೆ ಗೊತ್ತೇ? ವೀಣೆ ಮೀಟುವ ನಾದದಂತೆ ಕೇಳುತ್ತಿರುವ ಈ ದನಿ ‘ಓಂ’ಕಾರಕ್ಕೆ ಬಲು ಸಮೀಪದಲ್ಲಿದೆ. ಕಳೆದ ವಾರದ ಟೆಲಿಗ್ರಾಫ್ ಇದನ್ನು ವರದಿ ಮಾಡಿದೆ!
ಓಂ ಕಾರದ ನಾದ ಮಾಡುತ್ತ ಮಾಡುತ್ತ ವಿಶ್ವದ ಚಾಲಕ ಶಕ್ತಿಯೊಂದಿಗೆ ಒಂದಾಗುವ ಅಥವಾ ಅಲ್ಲಿಂದ ನೇರ ಶಕ್ತಿಯನ್ನು ಪಡೆಯುವ ಪ್ರಯತ್ನ ನಾವು ಖಂಡಿತ ಮಾಡಬಹುದು. ಇದನ್ನು ಭೌತಶಾಸ್ತ್ರ ‘ರೆಸೊನೆನ್ಸ್’ ಎನ್ನತ್ತದೆ. ಜೋಕಾಲಿಯಲ್ಲಿ ಕುಳಿತವರನ್ನು ದೂಡುವಾಗ ಮೊದಲು ಕೂತವರು ಭಾರವೆನಿಸುತ್ತಾರೆ. ಆಮೇಲಾಮೇಲೆ ಜೋಕಾಲಿಯ ಕಂಪನಕ್ಕೆ ಹೊಂದಿಕೊಂಡು ದೂಡುತ್ತಿದ್ದಂತೆ ಜೋಕಾಲಿ ಆಗಸ ಮುಟ್ಟಿದಂತೆನಿಸುತ್ತದೆ. ಇದೇ ಅನುರಣನ ಪ್ರಕ್ರಿಯೆ. ಎರಡು ಗತಿಶೀಲ ವಸ್ತು ಒಂದೇ ಕಂಪನಾಂಕ (ಫ್ರೀಕ್ವೆನ್ಸಿ) ಹೊಂದಿದ್ದರೆ ಅವುಗಳ ಶಕ್ತಿ ದ್ವಿಗುಣಗೊಳ್ಳುತ್ತದೆ. ಆಗ ಅದು ಸೃಷ್ಟಿಗೂ ಕಾರಣವಾಗಬಹುದು ನಾಶಕ್ಕೂ ಕಾರಣವಾಗಬಹುದು.
ಬಲು ಹತ್ತಿರದ ಸಂಗತಿ ಹೇಳುತ್ತೇನೆ. ನೀವಿರುವ ಕೋಣೆಗೆ ಜೀರುಂಡೆಯೊಂದು ‘ಗುಂಯ್’ ಎನ್ನುತ್ತ ನುಗ್ಗಿದರೆ ಅದೆಷ್ಟು ಕಿರಿ-ಕಿರಿ ಎನಿಸುತ್ತಲ್ವೇ? ಹಾಗೆ ಜೀರುಂಡೆ ಬಂದೊಡನೆ ‘ರಾಮ್, ರಾಮ್’ ಎಂಬ ನಾಮ ಜಪ ಮಾಡಬೇಕು. ಹಾಗೆ ಮಾಡಿದರೆ ಅದು ಪಲಾಯನಗೈಯ್ಯುತ್ತದೆಯೆಂದು ನಮ್ಮ ಅಕ್ಕ ಹೇಳಿದಳು. ಒಂದೆರಡು ಬಾರಿ ಪ್ರಯೋಗ ಮಾಡಿ ಯಶಸ್ವಿಯೂ ಆಗಿದ್ದೆ. ಜೀರುಂಡೆಗೇಕೆ ರಾಮದ್ವೇಷ ಎಂಬ ತಲೆನೋವು ಯಾವಾಗಲೂ ಇತ್ತು; ಬಹುಶಃ ಜೀರುಂಡೆಯ ‘ಗುಂಯ್’ ಮತ್ತು ‘ರಾಮ್’ ಎರಡರ ಕಂಪನಾಂಕಗಳೂ ಹೊಂದಾಣಿಕೆಯಾಗಿ ಅದರ ತಲೆಕೆಡುವುದೇನೋ ಯಾರಿಗೆ ಗೊತ್ತು?
ಈ ಪ್ರಯೋಗವನ್ನು ಶೀತಲ ಯುದ್ಧದ ಕಾಲಕ್ಕೆ ರಷ್ಯಾ ಮಾಡಿತ್ತು. ಅಲ್ಲಿನ ಕೆಲ ವಿಜ್ಞಾನಿಗಳು ಕಡಿಮೆ ಕಂಪನಾಂಕದ ಇನ್ಫ್ರಾಸಾನಿಕ್ ತರಂಗಗಳನ್ನು ಕೆನಡಾದ ಗಣಿಗಳಿಗೆ, ಕಾಖರ್ಾನೆಗಳಿಗೆ ಕಳಿಸಿದ್ದರು. ಇದರ ಪ್ರಭಾವಕ್ಕೆ ಸಿಲುಕಿದ ಅಲ್ಲಿನ ಕಾಮರ್ಿಕರು ಅನೇಕ ದಿನಗಳ ಕಾಲ ಕಾಖರ್ಾನೆಯಲ್ಲಿ ಕೆಲಸ ಮಾಡಲಾಗದೇ, ಆಲಸಿಗಳಾಗಿ ನರಳುವಂತಾಗಿತ್ತು. ಕೆನಡಾ ಈ ಪರಿಯ ಛದ್ಮಯುದ್ಧಕ್ಕೆ ತಮ್ಮ ವಿರೋಧವನ್ನೂ ವ್ಯಕ್ತಪಡಿಸಿತ್ತು. ಮುಂದೆ ಅಮೇರಿಕಾದ ಮೇಲೆ ರಷ್ಯಾ ಈ ಪ್ರಯೋಗ ಮಾಡ ಹೊರಟಾಗ, ಅಮೇರಿಕಾದ ರಕ್ಷಣಾ ವಿಜ್ಞಾನಿಗಳು ಅಷ್ಟೇ ಕಂಪನಾಂಕದ ಪ್ರತಿ ತರಂಗಗಳನ್ನು ಕಳಿಸಿ ರಾಷ್ಟ್ರವನ್ನು ಉಳಿಸಿಕೊಂಡಿದ್ದರು.
ವಾದ ಬಲು ಸ್ಪಷ್ಟ. ನಮ್ಮ ದೇಹಕ್ಕೆ ಒಗ್ಗದ ಸದ್ದು, ಶಬ್ದ ನಮ್ಮ ಶಕ್ತಿಯನ್ನು ನಾಶಗೊಳಿಸಿ ಮಂಕು ಬಡಿಯುವಂತೆ ಮಾಡಬಲ್ಲುದಾದರೆ; ಮನಮೋಹಕ ಕೊಳಲ ನಾದವೊಂದು ನಮ್ಮನ್ನು ಉನ್ಮತ್ತತೆಯ ಭಾವಕ್ಕೊಯ್ದು ಚೈತನ್ಯಶೀಲವಾಗಿಸಲಾರದೇಕೆ?
ಆಗಲೇಬೇಕು. ಹಾಗಂತಲೇ ಇಲ್ಲಿ ಮಂತ್ರಶಕ್ತಿಯ ಚಿಂತನೆಗೆ ಜೀವ ಬಂದದ್ದು. ಧ್ಯಾನಸ್ಥರಾಗಿದ್ದ ಋಷಿಗಳಿಗೆ ಆಂತರ್ಯದಲ್ಲಿ ಅಪರೂಪದ ದರ್ಶನಗಳಾದವು. ಬಗೆ ಬಗೆಯ ಸದ್ದುಗಳು ಅವರ ಅಂತಗರ್ಿವಿಗೆ ಕೇಳಿದವು. ಮಂತ್ರಗಳ ರೂಪ ತಾಳಿದವು. ಈ ಮಂತ್ರಗಳ ನಿರಂತರ ಹೇಳುವಿಕೆಯಿಂದ ವಿಶ್ವಶಕ್ತಿಯನ್ನು ಅನುಭವಿಸುವುದು ಸಾಧ್ಯವಾಗುತ್ತದೆ. ಅದು ಹೇಗೆ?
ಪ್ರಯೋಗ ಶಾಲೆಯೊಂದರಲ್ಲಿ ವಿಜ್ಞಾನಿಗಳು ಪ್ರಯೋಗ ಮಾಡಿದರು. ಬೆಂಡಿಗಿಂತ ತುಸುವೇ ಭಾರವಾದ ಕಾಕರ್ೊಂದನ್ನು ಲೋಲಕದಂತೆ ಇಳಿಬಿಟ್ಟರು. ಅದರ ಪಕ್ಕದಲ್ಲಿಯೇ ಮತ್ತೊಂದು ದಾರಕ್ಕೆ ಸಿಲಿಂಡರಿನಾಕೃತಿಯ ಕಬ್ಬಿಣದ ಸಲಾಕೆಯನ್ನು ಇಳಿಬಿಡಲಾಯ್ತು. ಕಾಕರ್ಿನಿಂದ ಈ ಹೆಣ ಭಾರದ ಸಲಾಕೆಗೆ ನಿಧಾನವಾಗಿ ಬಡಿದರೆ ಏನಾದೀತು ಹೇಳಿ. ಸಲಾಕೆ ತೂಗಾಡುವುದಿರಲಿ, ಅಲುಗಾಡುವುದೂ ಇಲ್ಲ. ಹೌದು ತಾನೇ? ಈಗ ಕಾಕರ್ಿನಿಂದ ನಿಯಮಿತವಾಗಿ ಸಲಾಕೆಗೆ ಬಡಿಯುತ್ತಲೇ ಇದ್ದರೆ? ಸಲಾಕೆ ಅಲುಗಾಡುವುದು, ಬರುಬರುತ್ತ ತೂಗಾಡುವುದು. ನೀವು ಅಚ್ಚರಿಯಾಗುವಷ್ಟು ವೇಗದಲ್ಲಿ ತೂಗಾಡುವುದು.
ಮಂತ್ರಗಳು ಹೀಗೆಯೇ. ಸೂಕ್ತವಾಗಿ, ನಿಯಮಿತವಾಗಿ ಜಪ ಮಾಡಿದರೆ ಹೆಪ್ಪುಗಟ್ಟಿದ ಮೋಡ ಮಳೆ ಸುರಿಸಬೇಕು. ಸೂರ್ಯ ಧೀಶಕ್ತಿಯನ್ನು ಪ್ರಚೋದಿಸಬೇಕು. ಹಾಗಂತ ಎಲ್ಲ ಮಂತ್ರ ಎಲ್ಲಕ್ಕೂ ಅಲ್ಲ. ಋಷಿಗಳು ಒಂದೊಂದು ದೇವ ತತ್ತ್ವಕ್ಕೂ ಒಂದೊಂದು ಛಂದಸ್ಸು ರೂಪಿಸಿಕೊಟ್ಟಿದ್ದಾರೆ. ಆ ತತ್ತ್ವಕ್ಕೆ ಸಂಬಂಧಿಸಿದೆ ಬೀಜಮಂತ್ರವಿದೆ. ಈ ಬೀಜಮಂತ್ರದೊಳಗೇ ಅಡಗಿರುವುದು ಅಪಾರ ಶಕ್ತಿ. ನಿರಂತರ ಜಪದಿಂದಾಗಿ ಅದು ಮೊಳಕೆಯೊಡೆದು ಹೆಮ್ಮರವಾಗಿ ಬಯಸಿದ ಫಲ ಕೊಡುವುದು! ಹೇಗೆ ಶಿಲ್ಪಿ ಉಳಿಯಿಂದ ಮತ್ತೆ ಮತ್ತೆ ಬಡಿದು ಕೆತ್ತುವನೋ ಹಾಗೆಯೇ ಮಂತ್ರವನ್ನು ಮತ್ತೆ ಮತ್ತೆ ಉಚ್ಚರಿಸುವುದರಿಂದ ಅದಕ್ಕೆ ಸಂಬಂಧಿಸಿದ ತತ್ತ್ವ ಜಾಗೃತಿಯಾಗುತ್ತದೆ. ಗ್ರಂಥಿಗಳು ಒಸರುತ್ತವೆ. ವಾತ-ಪಿತ್ತ-ಕಫಗಳು ಏರುಪೇರಾಗುತ್ತವೆ! ಅಷ್ಟೇ ಅಲ್ಲ ದೇಹದೊಳಗೇ ನಡೆಯುವ ಈ ಮಂತ್ರದ ಸದ್ದಿನ ಘರ್ಷಣೆಯಿಂದಾಗಿ ಒಳಗಿನ ಪಂಚಭೂತಗಳ ಸದ್ದೂ ಪ್ರಭಾವಕ್ಕೆ ಒಳಗಾಗುತ್ತದೆ. ಇದು ಅತ್ಯಂತ ಸರಳ ಭೌತವಿಜ್ಞಾನ.
ಇನ್ನು ಓಂಕಾರದಂತಹ ಮಂತ್ರಗಳಂತೂ ಮನಸ್ಸನ್ನು ಶುದ್ಧ ಮಾಡಿ ಮುಂದಿನ ಸಾಧನೆಗೆ ಅಣಿಗೊಳಿಸುತ್ತದೆ. ಅದೂ ಒಪ್ಪಲು ಅಸಾಧ್ಯವಾದುದೇನಲ್ಲ. ನಿರಂತರ ಜಪ ನಡೆಯುವುದರಿಂದ ದೇಹದ ಆಂತರ್ಯದಲ್ಲಿ ಮಂತ್ರದ ವೃತ್ತವೇ ಸೃಷ್ಟಿಯಾಗಿಬಿಟ್ಟಿರುತ್ತದೆ. ‘ಸೆಂಟ್ರಿಫ್ಯೂಗಲ್ ಫೋಸರ್್’ನ್ನು ಭೌತವಿಜ್ಞಾನದಂತೆ ಅನ್ವಯಿಸುವುದಾದರೆ ಒಳಗಿರುವ ಕೊಳಕನ್ನು ಇದು ಕೇಂದ್ರದಿಂದ ದೂರಕ್ಕೆ ಚಿಮ್ಮಿಸುತ್ತದೆ. ಅಲ್ಲಿಗೆ ಮನಸ್ಸು ನಿರಾಳವಾಯ್ತು, ಶುದ್ಧವಾಯ್ತು. ಧ್ಯಾನಿಗೆ ಬೇಕಾದ ವಾತಾವರಣ ನಿಮರ್ಾಣವಾಯ್ತು.
ಸುಮಾರು 2008ರ ವೇಳೆಗಾಗಲೇ ಅಮರಾವತಿಯ ಸಿಪ್ನಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಅಜಯ್ ಅನಿಲ್ ಗುರ್ಜರ್ ಮತ್ತು ಸಿದ್ಧಾರ್ಥ ಲಡಾಖೆ ಇಬ್ಬರೂ ಸೇರಿ ಅಂತರಾಷ್ಟ್ರೀಯ ಜರ್ನಲ್ನಲ್ಲಿ ಪ್ರಬಂಧವೊಂದನ್ನು ಪ್ರಕಟಿಸಿದ್ದರು. ವೇವಲೆಟ್ ಟ್ರಾನ್ಸ್ಫಾಮರ್್ ತಂತ್ರ ಬಳಸಿ ಓಂಕಾರದ ಉಚ್ಚಾರದ ಅಧ್ಯಯನ ನಡೆಸಿದ್ದರು. ‘ಮನಸ್ಸಿನಂತೆ ಮಾತು’ ಎಂಬ ಮಾತು ಕೇಳಿದ್ದೇವಲ್ಲ ಆದ್ದರಿಂದ ಮಾತನ್ನು ಅಧ್ಯಯನ ಮಾಡಿ ಮನಸ್ಸನ್ನೇ ಓದಬಹುದು ಎಂಬ ನಿಧರ್ಾರಕ್ಕೆ ಅವರು ಬಂದರು. ಓಂಕಾರವನ್ನೇ ಪ್ರಯೋಗಕ್ಕೆ ಆಯ್ದುಕೊಂಡರು. ಮೊದಲ ಬಾರಿ ಪ್ರಯೋಗಕ್ಕೆ ಒಡ್ಡಿಕೊಂಡವನ ಆರಂಭದ ‘ಗ್ರಾಫ್’ಗೂ ಕಾಲ ಕಳೆದಂತೆ ಆತ ಹೇಳುತ್ತಿದ್ದ ಓಂಕಾರಕ್ಕೂ ಅಜಗಜಾಂತರವಿತ್ತು. ಓಂಕಾರದ ಉಚ್ಚಾರದಿಂದ ಅವನ ಮನಸ್ಸು ಶಾಂತತೆಯ ದಿಕ್ಕಿಗೆ ವಾಲುತ್ತಿರುವುದು ಸ್ಪಷ್ಟವಾಗಿ ಗೋಚರವಾಗಿತ್ತು.

om2
ಇವೆಲ್ಲ ಏಕೆ? ಮನಸ್ಸು ತುಂಬ ವ್ಯಗ್ರಗೊಂಡಾಗ, ಕಳವಳ ತುಂಬಿದಾಗ ಹಾಗೆ ಒಂದು ನಿಮಿಷ ಕಣ್ಮುಚ್ಚಿ ‘ಓಂ’ಕಾರದ ಜಪ ಶುರುಮಾಡಿ. ಅದು ವೇಗವಾಗಿಯಾದರೂ ಸರಿ, ನಿಧಾನವಾದರೂ ಸರಿ. ಕೆಲವು ಕಾಲದಲ್ಲಿಯೇ ಮನಸ್ಸು ಶಾಂತವಾಗುವುದನ್ನು, ನಿರ್ಣಯ ತೆಗೆದುಕೊಳ್ಳಲು ಶಕ್ತವಾಗುವುದನ್ನು ಗಮನಿಸುತ್ತೀರಿ! ಇದೆಲ್ಲ ಅನುಭವಕ್ಕೆ ಮಾತ್ರ ವೇದ್ಯವಾಗುವಂಥದ್ದು. ಸಂತ ರಾಮತೀರ್ಥರು ಹೇಳುತ್ತಾರಲ್ಲ ‘ನಾವು ದೇವರಾಗಿಬಿಡಬಹುದು, ಆದರೆ ಆತನನ್ನು ನೋಡುವುದೋ, ಇತರರಿಗೆ ತೋರುವುದೋ , ಅಸಾಧ್ಯ’ ಅಂತ. ಹಾಗೆಯೇ ಇದು. ಈ ಶಕ್ತಿಯನ್ನು ಒಟ್ಟಾರೆ ಅನುಭವಿಸಲು ನಿಯಮಿತವಾದ ಮಂತ್ರ ಜಪ ಶುರುಮಾಡಿಬಿಡಬೇಕು. ದಿನೇ ದಿನೇ ತನ್ನೊಳಗೆ ಮತ್ತು ಸುತ್ತಮುತ್ತಲಿನ ಜನರಲ್ಲಿ ಕಂಡುಬರುವ ಬದಲಾವಣೆಗಳನ್ನು ಗಮನಿಸುತ್ತ ಹೋಗಬೇಕು.
ಜಗತ್ತಿನ ರಾಷ್ಟ್ರಗಳಿಗೆ ಇತರ ದೇಶಗಳನ್ನು ಆಕ್ರಮಿಸಲು ಕತ್ತಿ-ಬಂದೂಕುಗಳು ಬೇಕಾಗುತ್ತವೆ. ತಮ್ಮ ಸಂಸ್ಕೃತಿಯನ್ನು ಒಪ್ಪಿಸಲು ಅವರು ಕ್ರೌರ್ಯದ ಮೊರೆ ಹೊಕ್ಕಬೇಕಾಗುತ್ತದೆ. ಆದರೆ ಭಾರತ ಶಸ್ತ್ರಗಳ ಸಹಾಯವೇ ಇಲ್ಲದೇ ಜಗತ್ತನ್ನು ಆಳಿತಲ್ಲ; ಅಸ್ತ್ರಗಳನ್ನೇ ಬಳಸದೇ ತನ್ನ ಸಂಸ್ಕೃತಿಯನ್ನು ವಿಶ್ವವ್ಯಾಪಿಗೊಳಿಸಿತಲ್ಲ ಹೇಗೆ? ಮತ್ತೆ ಹೇಗೆ? ಅದು ಆಂತರಿಕ ಶಕ್ತಿಯಿಂದಲೇ. ತನ್ನೊಳಗನ್ನು ಗೆದ್ದ ಋಷಿಗಳು ಹೊರಗಣ ಶಕ್ತಿಯನ್ನೂ ಗೆದ್ದು ಕಾಲಬುಡಕ್ಕೆ ಕೆಡವಿಕೊಂಡರು. ಆದರೆ ಅಲ್ಲಿ ಗೆದ್ದ ಅಹಂಕಾರವಿರಲಿಲ್ಲ. ಬದಲಿಗೆ ಬಿದ್ದವನನ್ನು ಮೇಲೆತ್ತಬೇಕೆಂಬ ಪ್ರೀತಿ-ಅನುಕಂಪೆಗಳು ತುಂಬಿ ತುಳುಕುತ್ತಿದ್ದವು. ತಾನು ಗಳಿಸಿದ ಜ್ಞಾನವನ್ನು ಹಂಚಬೇಕೆಂಬ ತುಡಿತವಿತ್ತು. ಹೀಗಾಗಿ ಜಗದ ಪಾಲಿಗೆ ಭಾರತ ವಿಶ್ವಗುರುವಾದದ್ದು!
ಅತಿಶಯೋಕ್ತಿ ಎನಿಸಿದರೆ ಕ್ಷಮಿಸಿ. ವಿಶ್ವಯೋಗದ ದಿನ ಜಗತ್ತೆಲ್ಲ ಒಟ್ಟಾಗಿ ಓಂಕಾರ ಜಪಿಸಿ ಸೂರ್ಯನನ್ನು ಸ್ವಾಗತಿಸಿದವಲ್ಲ; ಆನಂತರ ಜಗತ್ತು ಬದಲಾಗಿದೆ ಎನಿಸುತ್ತಿಲ್ಲವೇ? ಭಯೋತ್ಪಾದಕರ ಶಕ್ತಿ ಉಡುಗುತ್ತಿದೆ. ಮೆರೆದಾಡುತ್ತಿದ್ದ ಅನೇಕರು ಕೈ ಚೆಲ್ಲಿ ಕುಳಿತಿದ್ದಾರೆ. ನೆಮ್ಮದಿ ಅರಸುವ ಜೀವಗಳು ಪೂರ್ವದ ಕಡೆಗೆ ಮತ್ತೆ ನೋಡುತ್ತಿದೆ. ಓಹ್! ಭಾರತ ಮತ್ತೆ ವಿಶ್ವಗುರುವಾಗುತ್ತಿದೆಯಾ?

1 Response to ವಿಶ್ವಶಕ್ತಿಯನ್ನು ನಿಯಂತ್ರಿಸಬಲ್ಲ ನಮ್ಮೊಳಗಿನ ಮಂತ್ರಶಕ್ತಿ

  1. shivani

    its 100% true sir I ‘ve experienced it………wateva it could be first v ‘ve to believe in it n then v should proceed with immense trust, then it’s definitely gonna work……such practices in Hinduism truely reminds me of our beloved guru swami vivekananda who had said ” Hinduism is not a religion it’s a way of living” its damn true sir Hinduism is a way living n leading a human life at its BEST…… yaa THE BEST

Leave a Reply