ವಿಭಾಗಗಳು

ಸುದ್ದಿಪತ್ರ


 

ಸ್ವಯಂಸೇವಕನೆಂಬ ಹೆಮ್ಮೆ

ಗೊತ್ತಿಲ್ಲ…. ಕಳೆದ ಒಂದು ತಿಂಗಳಿನಿಂದೀಚೆಗೆ ಬದಲಾವಣೆ ಬಂದಿರಬಹುದು. ಅಸ್ಸಾಮ್‌ನ ಗೌಹಾಟಿಯ ಪ್ರಮುಖ ವೃತ್ತಕ್ಕೆ ಹೋಗಿ ನಿಂತರೆ ಎರಡು – ಮೂರು ಸಾವಿರ ಜನ ಕೂಲಿ ಕಾರ್‍ಮಿಕರು ಕೈಯಲ್ಲಿ ಡಬ್ಬಿ ಹಿಡಿದು ನಿಂತಿರುತ್ತಾರೆ. ಅಷ್ಟು ಹೊತ್ತಿಗೆ ಒಂದಷ್ಟು ಜೀಪಿನಂತಹ ಗಾಡಿಗಳು ಬಂದು ಅವರಲ್ಲಿ ತಮಗೆ ಬೇಕಾದವರನ್ನು ಆರಿಸಿಕೊಂಡು ಹೋಗುತ್ತವೆ. ಸಂಜೆ ಮರಳಿ ಅದೇ ಜಗಕ್ಕೆ ತಂದುಬಿಟ್ಟರಾಯ್ತು. ಇತರರಿಗಿಂತ ಕಡಿಮೆ ಕೂಲಿ ಪಡೆಯುವ, ಹೆಚ್ಚು ಕೆಲಸ ಮಾಡುವ ಈ ಜನರನ್ನು ಅಸ್ಸಾಮ್‌ನ ಜಮೀನ್ದಾರರು, ಕಾಂಟ್ರಾಕ್ಟರುಗಳು ಬಲು ಮೆಚ್ಚುತ್ತಾರೆ. ಮತ್ತು ಇವರನ್ನು ಬಾಂಗ್ಲಾದ ಮುಸಲ್ಮಾನರೆಂದು ಕರೆಯುತ್ತಾರೆ!
ನಯವಾದ ಹೊಂದಾಣಿಕೆಯಿದ್ದು, ಪರಸ್ಪರ ಲಾಭಾಶ್ರಿತರಾದವರ ನಡುವೆ ಕೆಲಸ ಮಾಡೋದು ಎಷ್ಟು ಕಷ್ಟ ಗೊತ್ತ? ತಾನು ಕೂತ ರೆಂಬೆಯನ್ನೇ ಕಡಿಯುವವ ರೆಂಬೆ ಮುರಿದು ಬೀಳುವ ಹಂತ ತಲಪುವವರೆಗೆ ಬುದ್ಧಿ ಮಾತು ಕೇಳೋದೇ ಇಲ್ಲ! ಹಾಗೆ ಇಲ್ಲಿನವರ ಸ್ಥಿತಿ. ಅವರಿಗೆ ಪ್ರಾಚೀನ ಪರಂಪರೆ, ಹಿಂದೂ ವಾರಸಿಕತೆ, ಶಕ್ತಿಪೀಠಗಳನ್ನು ಹೊಂದಿರುವ ಕೇಂದ್ರ, ಹೇಗೆ ಹೇಳಿದರೂ ಅರ್ಥವೇ ಆಗುತ್ತಿರಲಿಲ್ಲ. ಆಕ್ರಮಣಕೋರರಿಂದ ಲಾಭವಾಗಿದೆ, ನಾವು ಉಪಕೃತರಾಗಿದ್ದೇವೆ ಎಂದಷ್ಟೆ ಅನ್ನಿಸುತ್ತಿತ್ತು. ಕಾಂಗ್ರೆಸ್ ನಾಯಕರುಗಳಂತೂ ಹೊರಗಿಂದ ಬಂದವರಿಗೆ ರೇಷನ್ ಕಾರ್ಡ್, ವೋಟರ್ ಐಡಿಗಳನ್ನು ವಿತರಿಸಿ ಧನ್ಯರಾದರು. ಈಗವರು ಅಧಿಕೃತ ನಿವಾಸಿಗಳು. ಅವರಿಗಿಲ್ಲಿ ಜಮೀನು ಖರೀದಿಸುವ, ಮಾರಾಟ ಮಾಡುವ ಅಧಿಕೃತ ಹಕ್ಕು ಲಭಿಸಿದೆ. ಇವುಗಳ ಕುರಿತು ಜಾಗೃತಿ ಮೂಡಿಸುವುದು ಎಷ್ಟು ಕಷ್ಟ ಎಂದು ಅಸ್ಸಾಮಿಗೆ ಹೋಗಿಯೇ ತಿಳಿಯಬೇಕು. ಕಳೆದ ಮೂರ್‍ನಾಲ್ಕು ದಶಕಗಳಿಂದ ರಾ.ಸ್ವ.ಸಂಘ ಮತ್ತು ವಿವೇಕಾನಂದ ಕೆಂದ್ರಗಳು ಬೆವರಿಳಿಸಿ ದುಡಿದರೂ ಜನಕ್ಕೆ ಸಂಕಟಗಳ ಅರಿವಾಗಿರಲಿಲ್ಲ. ಬರಲಿರುವ ಭಯಾನಕ ದಿನಗಳ ಚಿತ್ರಣ ಗೋಚರವಾಗಲಿಲ್ಲ. ಈಗ ತಾವೇ ಕಡಿಯುತ್ತಿದ್ದ ರೆಂಬೆ ಮುರಿದು ಬೀಳುವ ಸ್ಥಿತಿಯಲ್ಲಿದೆ. ಅಸ್ಸಾಮಿನ ಹಿಂದೂ – ಮುಸ್ಲಿಮರಿಬ್ಬರೂ ಜೀವಭಯದಿಂದ ನೇತಾಡುತ್ತಿದ್ದಾರೆ. ಮತ್ತೀಗ ಸಹಾಯಕ್ಕೆ ಇಡಿಯ ದೇಶದಲ್ಲಿ ನಿಂತಿರುವ ಏಕೈಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರ.
ಅದಕ್ಕೇ ನಾನು ಸ್ವಯಂಸೇವಕ ಅಂತ ಹೆಮ್ಮೆಯಿದೆ ಎಂದಿದ್ದು.
ದೇಶದ ಯಾವ ಮೂಲೆಯಲ್ಲಾದರೂ ಸರಿ, ದೇಶಕ್ಕೆ ಸಮಸ್ಯೆ ಬಂದಿದೆ ಎಂದಾಗ ಧಾವಿಸೋದು ಸ್ವಯಂಸೇವಕ ಮಾತ್ರ. ಅಪಘಾತಕ್ಕೀಡಾಗಿ ಸುಟ್ಟು ಕರಕಲಾದ ದೇಹಗಳನ್ನು ಹೊರಗೆಳೆಯುವುದರಿಂದ ಹಿಡಿದು, ಯುದ್ಧದಲ್ಲಿ ಪ್ರಾಣಾರ್ಪಣೆಗೈದ ಹುತಾತ್ಮರ ಶವಯಾತ್ರೆ, ಸಂಸ್ಕಾರದವರೆಗೆ ಅವರು ಯಾವಾಗಲೂ ಮುಂದೆಯೇ. ಹಸಿದವನಿಗೆ ಅನ್ನ ಕೊಡುವುದರಿಂದ ಶುರು ಮಾಡಿ ಸಾಂಕ್ರಾಮಿಕ ರೋಗಗಳಿಂದ ನರಳುತ್ತಿರುವವರ ಶುಶ್ರೂಷೆಯವರೆಗೆ ಸ್ವಯಂಸೇವಕ ಮುಂದೆ. ಹೀಗಾಗಿಯೇ ಸಂಘದ ಎರಡನೆ ಸರಸಂಘ ಚಾಲಕರಾದ ಗುರೂಜಿ ಗೋಳ್ವಲ್ಕರ್‌ರನ್ನು ಪಂಜಾಬಿನ ಕೆಲವು ಸೈನ್ಯಾಧಿಕಾರಿಗಳು “ಯಾವ ತ್ಯಾಗ ಬಲಿದಾನಗಳಿಗೂ ಸ್ವಯಂಸೇವಕರು ಸಿದ್ಧರಾಗುತ್ತಾರಲ್ಲ, ಅದು ಹೇಗೆ ಅವರನ್ನು ತಯಾರು ಮಾಡುತ್ತಿರಿ?”ಎಂದು ಪ್ರಶ್ನಿಸಿದ್ದರು. ಗುರೂಜಿ ಉತ್ತರ ಏನಾಗಿತ್ತು ಗೊತ್ತೆ? “ಯಾವ ತಯಾರಿಯೂ ಇಲ್ಲ. ಕಬಡ್ಡಿ ಆಡುತ್ತಾರೆ, ಪ್ರಾರ್ಥನೆ ಮಾಡುತ್ತಾರೆ ಅಷ್ಟೆ”!
ಕಾಂಗ್ರೆಸ್ಸಿನ ಸಾರ್ವಕಾಲಿಕ ನಾಯಕ(!) ನೆಹರೂಗೆ ಸಂಘವನ್ನು ಕಂಡರೆ ಅಷ್ಟಕ್ಕಷ್ಟೆ. ಉಹುಂ.. ಆತ ವಿರೋಧಿಯೇ ಸರಿ. ಗಾಂಧೀಜಿ ಹತ್ಯೆಯಲ್ಲಿ ಸಂಘವನ್ನು ಮುಂದಿಟ್ಟು ಅದರ ಮೇಲೆ ಜನ ದ್ವೇಷ ಕಾರುವಂತೆ ಮಾಡಿಸಬೇಕೆಂಬ ಹಠವಾದಿ ಪ್ರಯತ್ನವನ್ನೂ ಅವರು ಮಾಡಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಸರಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಸ್ವಯಂಸೆವಕರ ಮೇಲೆ ದಾಳಿ ನಡೆಸಲಾಯ್ತು. ಸಂಘವನ್ನು ಮಟ್ಟಹಾಕುವ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲಾಯ್ತು. ಆಗೆಲ್ಲ ಸತ್ವಪರೀಕ್ಷೆ. ಸಂಘ ಗೆದ್ದಿತು. ಮುಂದೆ ನೆಹರೂ ಎಡವಟ್ಟು ಮಾಡಿಕೊಂಡು ಚೀನಾ ದಾಳಿಯನ್ನು ಎದುರಿಸಲಾಗದೆ ಹೈರಾಣಾಗಿ ನಿಂತಿದ್ದಾಗ ಮತ್ತೆ ಮುಂದೆ ಬಂದಿದ್ದು ಸ್ವಯಂಸೇವಕರೇ. ಹೋರಾಡುವ ಸೈನಿಕರಿಗೆ ಯುದ್ಧಭೂಮಿಯಲ್ಲೇ ಅನೇಕ ರೀತಿಯ ಸಹಾಯ ಒದಗಿಸಿದ್ದಲ್ಲದೆ, ದೇಶಾದ್ಯಂತ ಜನಮನಸವನ್ನು ಬಡಿದೆಬ್ಬಿಸಿ ಜನರಲ್‌ನಿಂದ ಹಿಡಿದು ಜವಾನನವರೆಗೆ ಎಲ್ಲರ ಮನಸಿಕ ಸ್ಥೈರ್‍ಯ ಬಲವಾಗುವಂತೆ ಮಡಿದ್ದು ಸ್ವಯಂಸೇವಕರೇ. ಅದಕ್ಕೇ ನೆಹರೂ ಜನವರಿ ೨೬ರ ಪೆರೇಡಿಗೆ ಸ್ವಯಂಸೇವಕರನ್ನು ಆಹ್ವಾನಿಸಿದ್ದು. ಎರಡು ದಿನ ಮಾತ್ರ ಬಾಕಿ ಇತ್ತು. ಶಿಸ್ತಿನ ಸಿಪಾಯಿಗಳಾದ ೩೦೦೦ ಸ್ವಯಂಸೇವಕರು ಗಣವೇಷದಲ್ಲಿ ನಡೆಸಿದ ಪಥಸಂಚಲನ ಅಮೋಘವಾಗಿತ್ತು.
ಕಾಂಗ್ರೆಸ್ಸಿಗೆ ಕೇಳುತ್ತಿದೆಯೇನು? ಸ್ವಯಂಸೆವಕನ ಕುರಿತಂತೆ ಅವಕಾಶ ಸಿಕ್ಕಾಗೆಲ್ಲ ಕೀಳಾಗಿ ಮಾತಾಡುವ ಇಂಗ್ಲಿಷ್ ಮಾದ್ಯಮಗಳಿಗೆ ಇವೆಲ್ಲ ಗೊತ್ತಿಲ್ಲವೇನು? ಭಾರತ ಚೀನಾ ಯುದ್ಧದ ವೇಳೆಗೆ ಚೀನಾ ಪರವಾಗಿ ಬಾಲ ಆಡಿಸುತ್ತಿದ್ದ ಎಡಪಂಥೀಯರೆಲ್ಲ ಇಂದು ಕುರ್ಚಿಗೆ ಬಲು ಹತ್ತಿರದವರು. ಭಾರತದ ಆತ್ಮಸ್ಥೈರ್‍ಯ ವೃದ್ಧಿಸಲು ಕಾದಾಡಿದವರು ಮಾತ್ರ ಕೋಮುವಾದಿಗಳು. ಚೆನ್ನಾಗಿದೆ ಲೆಕ್ಕಚಾರ!
ಕಾಂಗ್ರೆಸ್ ಮೊದಲಿಂದಲೂ ಹಾಗೆಯೇ. ಪಕ್ಕಾ ಅವಕಶವಾದಿ. ನೆಹರೂ ಕುಟುಂಬವಂತೂ ಅಧಿಕಾರಕ್ಕಾಗಿ ಯಾರನ್ನು ಮಟ್ಟಹಾಕುವುದಕ್ಕೂ ಹೇಸುವಂಥದಲ್ಲ. ಪಟೇಲರನ್ನು ದುರ ಸರಿಸಿ ನೆಹರೂ ಪದವೇರಿದ್ದರಿಂದ ಹಿಡಿದು ಪ್ರಣಬ್‌ರನ್ನು ರಾಷ್ಟ್ರಪತಿ ಭವನಕ್ಕೆ ತಳ್ಳಿ ಯುವರಾಜನನ್ನು ಪಟಕ್ಕೇರಿಸುವ ಸನ್ನಾಹದವರೆಗೂ ಅವರ ಪ್ರಯಾಸಗಳು ಒಂದೆರಡಲ್ಲ. ಇದರ ವಿರುದ್ಧ ಅಂದಿನಿಂದ ಹೋರಾಡುತ್ತಿರುವ ಬೆರಳೆಣಿಕೆಯಷ್ಟು ಸಂಘಟನೆಗಳಲ್ಲಿ ಸಂಘವೂ ಒಂದು. ಸಾವರ್ಕರರ ಅಭಿನವ ಭಾರತಇತ್ತು. ಅದನ್ನು ಬೆಳೆಯಲು ಬಿಡಲೇ ಇಲ್ಲ; ಂದೂ ಮಹಾಸಭಾಇತ್ತು, ಅದರ ನಾಶಕ್ಕೆ ಬೇಕಾದುದೆಲ್ಲ ಮಡಿದರು; ರಾಮದೇವ್ ಬಾಬಾ ತಮ್ಮ ವಿರುದ್ಧ ಮಾತಾಡಿದರು, ಅವರ ಬಲಗೈಯಾಗಿದ್ದ ಆಚಾರ್‍ಯ ಬಾಲಕೃಷ್ಣರನ್ನು ಒಳತಳ್ಳಿದರು. ಒಂದೇ, ಎರಡೇ.. ಆದರೆ ಅವರು ಬೀಸಿದ ಬಲೆಯಿಂದ ಪ್ರತಿ ಬಾರಿ ಪಾರಾಗುತ್ತಿರುವವನು ಸ್ವಯಂಸೇವಕ ಮಾತ್ರ!
೧೯೬೫ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಘೋಷಣೆಯಾದೊಡನೆ ಅಂದಿನ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಮಾಡಿದ ಮೊದಲ ಕೆಲಸ ಸರಸಂಘ ಚಾಲಕರಿಗೆ ಪತ್ರ ಬರೆದು ಸಹಾಯ ಮಾಡಿಎಂದು ಕೇಳಿದ್ದು. ದೆಹಲಿಯಲ್ಲಿ ಆಗ ಪೊಲೀಸ್‌ರನ್ನು ಬೇರೆ ವ್ಯವಸ್ಥೆಗಳಿಗೆ ಕಳುಹಿಸಿ ಸ್ವಯಂಸೇವಕರು ಅಲ್ಲಿನ ಸಮಚಾರ, ರಕ್ಷಣೆಗಳ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡರಲ್ಲ; ಮೀಡಿಯಾಗಳು ಮರೆತಿರಬಹುದು, ಇತಿಹಾಸ ಮರೆತಿಲ್ಲ! ಪಂಜಾಬಿನಲ್ಲಿ ಸ್ವಯಂಸೇವಕರು ಗಾಯಗೊಂಡ ಜನರ, ಸೈನಿಕರ ಉಪಚಾರ ಮಾಡಿದ್ದನ್ನು, ರಕ್ತದಾನ ಮಾಡಿದ್ದನ್ನು ಕಂಡ ಜನರಲ್ ಕುಲವಂತ್ ಸಿಂಗ್, “ಭಾರತದ ಶಕ್ತಿ ಪಂಜಾಬು. ಪಂಜಾಬಿನ ಶಕ್ತಿನ ಆರ್‌ಎಸ್ಸೆಸ್”ಎಂದಿದ್ದ.
೧೯೪೭ರಲ್ಲಿ ಭಾರತ – ಪಾಕಿಸ್ತಾನ ವಿಭಜನೆಯಾದಾಗ ಕೈಲಿ ಲಾಠಿ ಹಿಡಕೊಂಡೇ ಹಿಂದೂಗಳನ್ನು ಸುರಕ್ಷಿತವಾಗಿ ಊರಿಗೆ ತಲಪಿಸುವ ವ್ಯವಸ್ಥೆ ಮಾಡಿದ್ದು ಯಾರೆಂದುಕೊಂಡಿರಿ? ಪ್ರೊ.ಎ.ಎನ್.ಬಾಲಿ ತಮ್ಮ ಪುಸ್ತಕದಲ್ಲಿ ಹೇಳುತ್ತಾರಲ್ಲ, “ಜನರ ಸಹಾಯಕ್ಕೆ ಧಾವಿಸಿದ್ದು ನಿಸ್ವಾರ್ಥ ಹಿಂದೂ ಯುವಕರುಅಂತ, ಅದು ಸವಯಂ ಸೇವಕರೆ!”
ಹಾಗಂತ ಸ್ವಯಂಸೇವಕರು ಹಿಂದೂಗಳ ಆರ್ತನಾದ ಮಾತ್ರ ಕೆಳುತ್ತಾರೆ ಅಂತಲ್ಲ. ಆದರೆ ಖಂಡಿತ ಅದು ಅವರ ಮೊದಲ ಆದ್ಯತೆ. ಅಲ್ಲದೆ ಮತ್ತೇನು? ಪ್ರಮುಖ ಕುರ್ಚಿಯಲ್ಲಿ ಕುಳಿತು ಹಿಂದೂ ವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳುವವರು ಇರುವವರೆಗೆ ಸಾಮಾನ್ಯ ಹಿಂದೂವಿನ ಕೂಗು ಕೇಳುವವರೊಬ್ಬರು ಬೇಕೇಬೇಕಲ್ಲವೆ? ಯೋಚಿಸಿ. ಹಿಂದೂ ಕೋಡ್ ಬಿಲ್ ಜಾರಿಗೆ ತರುವ ಕಾಲದಿಂದ ಹಿಡಿದು ಮನ್‌ಮೋಹನ್ ಸಿಂಗರು ದೇಶದ ಸಂಪತ್ತಿನ ಹಕ್ಕು ಮುಸಲ್ಮಾನರದೇ ಎಂದು ಘೋಷಿಸುವವರೆಗೂ ಉಪೇಕ್ಷೆಗೆ ಒಳಗಾಗಿದ್ದು ಹಿಂದೂವೇ ತಾನೆ? ಎಲ್ಲಿ ಸತ್ತುಹೋದವು ಮಾನವ ಹಕ್ಕುಗಳು? ಎಲ್ಲಿ ಹೋಯಿತು ಸಮಾನತೆಯ ಸಂವಿಧಾನ? ಆಯಕಟ್ಟಿನ ಜಾಗದಲ್ಲಿ ಕುಳಿತ ಅವಕಾಶವಾದಿಗಳು ನೀಚತೆಯ ಪಾತಾಳಕ್ಕಿಳಿದು ಮುಸಲ್ಮಾನರ ಬೆಂಬಲಕ್ಕೆ ನಿಂತರೆ ಹಿಂದೂವಿಗೆ ಆತುಕೊಳ್ಳುವವ ಬೇಕಲ್ಲವೆ? ಅದಕ್ಕೇ ಸ್ವಯಂಸೇವಕ ಚಡ್ಡಿಗೆ ಬೆಲ್ಟು ಬಿಗಿದು ನಿಂತಿರುವುದು.
ಹೆಡಗೇವಾರರು ಹಾಕಿಕೊಟ್ಟ ಹಾದಿಯೇ ಅದು. “ನಮ್ಮ ಧರ್ಮ ಮತ್ತು ರಾಷ್ಟ್ರವನ್ನು ರಕ್ಷಿಸುವ ಹೊಣೆ ನಾವು ಹೊತ್ತಿದ್ದೇವೆ. ನಮ್ಮ ಸೈದ್ಧಾಂತಿಕ ಹಿನ್ನೆಲೆ ಅರಿತ ಲಕ್ಷ ಕೋಟಿ ಜನರ ಸಂಘಟಿತ ಪ್ರಯತ್ನ ಇದಕ್ಕೆ ಬೇಕು. ಸಮರ್ಪಿತ ಯುವಕರ ಸಂಘಟಿತ ಜಾಲವೊಂದನ್ನೆ ಇದಕ್ಕಾಗಿ ಹೆಣೆಯಬೇಕು.”ಎಂದು ಬಲು ಹಿಂದೆ ಅವರು ಹೇಳಿದ್ದ ಮಾತು ಸಾಕಾರಗೊಂಡು ನಿಂತಿದೆ. ಬಿಹಾರದಲ್ಲಿ ಕ್ಷಾಮ ಬಂದಾಗ, ಆಂಧ್ರ, ತಮಿಳುನಾಡುಗಳಿಗೆ ಸೈಕ್ಲೋನ್ ಅಪ್ಪಳಿಸಿದಾಗ, ಯಮುನೆ ಸಾವಾಗಿ ಹರಿದಾಗ, ರಾಜಸ್ಥಾನದಲ್ಲಿ ಮಳೆಯೇ ಶಾಪವಾದಾಗ, ಭೋಪಾಲದಲ್ಲಿ ಅನಿಲ ದುರಂತವಾದಾಗ, ಕೊನೆಗೆ ಸುನಾಮಿಯಾದಾಗಲೂ ಖಾಕಿ ಚಡ್ಡಿ ತೊಟ್ಟ ವೀರರ ಪಡೆ ಹಗಲಿರುಳೆನ್ನದೆ ಸೇವಾಕಾರ್‍ಯಕ್ಕೆ ಇಳಿಯುತ್ತಿತ್ತಲ್ಲ, ಅಗೆಲ್ಲ ಹಿಂದೂ ಮುಸಲ್ಮಾನರೆಂಬ ಭೇದವಿದ್ದಿಲ್ಲ ಅಲ್ಲಿ. ಎಲ್ಲರೂ ಭಾರತೀಯರೆಂಬ ಅಭಿಮಾನ ಅಷ್ಟೆ ಅಲ್ಲಿದ್ದುದು. ಹೆಡಗೇವಾರರು ಹೇಳುವಂತೆ, ಂದೂಗಳ ಕಾರಣದಿಂದಾಗಿ ಇದು ಹಿಂದೂಸ್ಥಾನವಾಯಿತು. ಶಾಂತಿಯಿಂದ ಇತರರು ಇರಬಯಸಿದರೆ ನಮ್ಮದೇನು ಅಡ್ಡಿಯಿಲ್ಲ. ಅತಿಥಿಗಳಾಗಿ ಬಂದು ಕತ್ತಿಯಿಂದ ಆಕ್ರಮಣ ಮಾಡಬಯಸುವವರಿಗಾಗಿ ಮಾತ್ರ ಇಲ್ಲಿ ಸ್ಥಳವಿಲ್ಲ
ಈಗ ಸ್ವಯಂಸೇವಕ ಸಿಡಿದೆದ್ದಿರುವುದು ಇದಕ್ಕೇ. ಅಸ್ಸಾಮಿಗೆ ನುಗ್ಗಿಬಂದ ಬಾಂಗ್ಲಾವಾಸಿಗಳು ಅಸ್ಸಾಮನ್ನೆ ತಮ್ಮದೆನ್ನುವುದಕ್ಕೆ ಹೊರಟರೆ ಸುಮ್ಮನಿರೋದು ಹೇಗೆ ಹೇಳಿ? ಅವರಿಗೆ ಬೆಂಬಲವಾಗಿ ನಮ್ಮೂರಿನ ಮುಸಲ್ಮಾನರು ನಿಂತರೆ ಸುಮ್ಮನಿರಲಾಗತ್ತಾ? ಮುಂಬೈನ ಮತಾಂಧರು ಬಾಂಗ್ಲಾದವರ ಪರವಾಗಿ ನಿಂತು, ಹುತಾತ್ಮರ ಸ್ಮಾರಕಗಳನ್ನು ಪುಡಿಗೈದು, ಹಿಂದೂಗಳ ಮೇಲೆ ಮುಗಿಬಿದ್ದರೆ ಯಾವ ಸಭ್ಯ ಸಮಾಜ ತಾನೆ ಸಹಿಸಿಕೊಂಡೀತು? ನಮ್ಮ ನೆಲದಲ್ಲಿ ನಿಂತು ಪಾಕಿಸ್ತಾನದ ಧ್ವಜ ಹಾರಿಸಿ ಅವಮಾನಗೈದರೆ ಪ್ರಧಾನಿ ಮನಮೋಹನ ಸಿಂಗರು ತೆಪ್ಪಗಿರಬಹುದೆನೋ. ಸ್ವಯಂಸೇವಕನ ಹೃದಯವಲ್ಲ. ಹೋಗಲಿ, ಮುಸಲ್ಮಾನ ನಾಯಕರು ಈ ಸರಹೊತ್ತಲ್ಲಿ ಪುಂಡ ಪೋಕರಿಗಳಿಗೆ ನೀವು ಮಾಡ್ತಿರುವ ಕೆಲಸ ಕುರಾನಿಗೆ ಸಮ್ಮತವಲ್ಲವೆಂದು ಹೇಳಿಕೆಯನ್ನಾದರೂ ಕೊಟ್ಟಿದ್ದಾರಾ?
ಆಗಲೇ ಪ್ರಖರ ಹಿಂದೂ ಗುರ್ರೆನ್ನೋದು. ಹಿಂದೂಗಳು ತಪ್ಪು ಮಾಡಿದಾಗ ಹಿಂದೂಗಳಾಗಿ ನಾವೇ ಖಂಡಿಸ್ತೇವೆ. ಮುಸಲ್ಮಾನನ ತಪ್ಪು ತಿದ್ದಲು ಮಾತ್ರ ಯಾರೂ ಮುಂದೆ ಬರಲೊಲ್ಲರೇಕೆ? ಈ ಪ್ರಶ್ನೆಗಳು ಮೊನ್ನೆ ರೈಲು ನಿಲ್ದಾಣದಲ್ಲಿ ಹರಿದಾಡುತ್ತಿದ್ದವು. ಈಶಾನ್ಯ ರಾಜ್ಯದಿಂದ ಬಂದವರನ್ನು ಬಿಡಲಾರೆವೆಂದು ಮತಾಂಧರು ಘೋಷಿಸುತ್ತಿದ್ದಂತೆ, ಹೆದರಿ ಓಡಲಾರಂಭಿಸಿದ ಯುವಕ ಯುವತಿಯರ ರಕ್ಷಣೆಗೆ ಧಾವಿಸಿದ್ದು ಮತ್ತದೇ ಸ್ವಯಂಸೇವಕ. ನಿಮ್ಮ ಕೂದಲೂ ಕೊಂಕದಂತೆ ಕಾಯುವ ಜವಬ್ದಾರಿ ನಮ್ಮದೆಂದು ಕಾಯುತ್ತ ನಿಂತ ಆತನಿಗೆ ಸರ್ಕಾರ ಕೊಡುವ ಭಾರತರತ್ನ ಕೂಡ ಚಿಕ್ಕದಾದೀತು.
ಖಾಕಿ ಚಡ್ಡಿ, ತೋಳು ಮಡಚಿದ ಬಿಳಿ ಷರ್ಟು, ಕಾಲಿಗೆ ಬಿಗಿದ ಶೂ, ಕೈಯಲ್ಲಿ ಬಲಿಷ್ಠ ದಂಡ, ನಿಸ್ವಾರ್ಥ ಮನಸ್ಸು, ಕಲ್ಲು ಹೃದಯ – ಇವಿಷ್ಟನ್ನು ಕಂಡಾಗ, ಮತ್ತೆ ನಾನು ಸ್ವಯಂಸೇವಕನಾಗಿದ್ದು ಸಾರ್ಥಕ ಎನ್ನಿಸಿಬಿಡುತ್ತದೆ.

2 Responses to ಸ್ವಯಂಸೇವಕನೆಂಬ ಹೆಮ್ಮೆ

  1. PRASAD

    excellent article.. feels good.. want to be one swayam sevak ..admire their patriotism..salute to chakravarthiji..

  2. Nagaraj

    E Desh E Samskruti Ulibeku Andre Sangha Irabeku Adkkagi Navu Swayam Sewaka Ragona

Leave a Reply