ವಿಭಾಗಗಳು

ಸುದ್ದಿಪತ್ರ


 

ಸ್ವಾಮಿ ವಿವೇಕಾನಂದರ ಹೆಸರಲ್ಲಿ ಅದೆಷ್ಟು ಸುಳ್ಳು ಹೇಳುತ್ತೀರಿ?

ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಗುಡುಗಿ ಅದೆಷ್ಟೋ ದಶಕಗಳು ಕಳೆದುಹೋದವು. ಆ ಗುಡುಗಿಗೆ ಅಲುಗಾಡಿದ ಭೂಮಿ ಇಂದಿಗೂ ಕಂಪಿಸುತ್ತಿದೆ. ಆ ಕಂಪನವನ್ನು ಸಹಿಸಲಾಗದ ಒಂದಷ್ಟು #ತಿರುಪೆ_ಜೀವಿ ಗಳು ಅಂದು, ಇಂದು ಸ್ವಾಮೀಜಿಯವರ ಮೇಲೆ ಸುಳ್ಳುಗಳ ದಾಳಿಯನ್ನೇ ಮಾಡುತ್ತಿದ್ದಾರೆ. ಅವರು ಬದುಕಿದ್ದಾಗಲೇ ಅನೇಕ ಸುಳ್ಳು ಆಪಾದನೆಗಳನ್ನು ಮಾಡಿಯಾಗಿತ್ತು. ಅವರ ದೇಹತ್ಯಾಗವಾದ ಮೇಲಂತೂ ಕೇಳಲೇಬೇಡಿ. ಅವರ ಗೋಮಾಂಸ ಸೇವನೆಯ ಕುರಿತಂತೆ ಅಂತೂ ಪ್ರತಿಯೊಬ್ಬ ತಿರುಪೆ ಜೀವಿಗೂ ಹೇಳಲೊಂದು ಕಥೆಯಿದೆ. ಇದೋ! ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ. ಹಳೆಯ ಲೇಖನವನ್ನು ದಿಗ್ವಿಜಯ್ ದಿವಸದ ಹಿನ್ನೆಲೆಯಲ್ಲಿ ಪುನಬ್ಲರ್ಾಗಿಸುತ್ತಿದ್ದೇನೆ

ನೆಲದ ಮಾತು

ಮಿಷನರಿಗಳಿಗೆ ವಿವೇಕಾನಂದರ ಪ್ರಭಾವವನ್ನು ಕಡಿಮೆ ಮಾಡಲು ಸುಳ್ಳಿನ ಮೊರೆ ಹೋಗದೆ ಬೇರೆ ಮಾರ್ಗವೇ ಇರಲಿಲ್ಲ. ಇತ್ತ ಅವರು ದನದ ಮಾಂಸ ತಿಂದರೆಂದು ಹೇಳಿ, ಹಿಂದೂಗಳಿಗೆ ಅವರಲ್ಲಿದ್ದ ಶ್ರದ್ಧೆ ಕಡಿಮೆ ಮಾಡಬೇಕು; ಅಮೆರಿಕಾದ ಬಗ್ಗೆ ಅಪಪ್ರಚಾರ ಮಾಡಿದರೆಂದು ಹೇಳಿ, ತಮ್ಮವರಲ್ಲಿ ಅವರ ಬಗ್ಗೆ ಆಕ್ರೋಶ ಹುಟ್ಟುವಂತೆ ಮಾಡಬೇಕು. ಮಿಷನರಿಗಳು ಸೋತರು. ಅವರ ಆತ್ಮ, ಭಾರತದ ಬುದ್ಧಿಜೀವಿಗಳನ್ನು ಹೊಕ್ಕಿತು ಅಷ್ಟೇ.

Swami Vivekananda – The Man and His Mission11

ಹಳೆಯ ಜೋಕೊಂದು ನಿಮಗೆ ನೆನಪಿರಬೇಕು. ಗಂಡ ಹೆಂಡತಿಗೆ ಹೇಳಿದ್ನಂತೆ, ದಶರಥ ಮೂರು ಮದುವೆಯಾಗಿದ್ದ, ನನಗಿನ್ನೂ ಎರಡು ಆಯ್ಕೆಗಳು ಬಾಕಿ ಇವೆ! ಹೆಂಡತಿ ತಡ ಮಾಡಲಿಲ್ಲ, ದ್ರೌಪದಿ ನೆನಪಿದ್ದಾಳೆ ತಾನೆ? ಅಂದಳು. ಗಂಡ ಹ್ಯಾಪು ಮೋರೆ ಹಾಕಿಕೊಂಡು, ತಮಾಷೆ ಮಾಡಿದೆ ಕಣೇ ಅನ್ನುತ್ತ ಹೆಹೆ ಎಂದು ನಕ್ಕನಂತೆ.
ತಾವು ಮಾಡುವ ದುಷ್ಟ ಕೆಲಸಕ್ಕೆ ದೊಡ್ಡವರ ಸಮರ್ಥನೆ ತಂದಿಡುವುದು ಹೇತ್ಲಾಂಡಿಗಳ ಸಹಜ ಅಭ್ಯಾಸ. ಇತ್ತೀಚೆಗೆ ಗೋಮಾಂಸ ಭಕ್ಷಣೆಯ ನೆವದಲ್ಲಿ ಸ್ವಾಮಿ ವಿವೇಕಾನಂದರನ್ನು ಎಳೆತಂದ ಪರಿ ಇದೆಯಲ್ಲ, ಇದು ಅಂತಹದ್ದೆ ಒಂದು ಬಗೆ. ವೇದಗಳನ್ನು ತನಗೆ ಬೇಕಾದಂತೆ ತಿರುಚಿ, ಗೀತೆಯಲ್ಲಿ ತನಗೆ ಬೇಕಾದ ಸಾಲುಗಳನ್ನು ಮಾತ್ರ ಆರಿಸಿ, ಹಿಂದೂ ಧರ್ಮಕ್ಕಿಂತ ಇಸ್ಲಾಮ್ ಶ್ರೇಷ್ಠ ಎನ್ನುವ ಜಾಕಿರ್ ನಾಯಕನಿಗೂ ಇವರಿಗೂ ಯಾವ ವ್ಯತ್ಯಾಸವೂ ಇಲ್ಲ. ಇವರೆಲ್ಲ ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದರಚುವ ಜಾಹೀರಾತಿನ ಬಾಲ ಕಲಾವಿದರಷ್ಟೇ.

ಆದರೂ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಬೇಕೇಬೇಕಲ್ಲ? ದನದ ಮಾಂಸ ಮತ್ತು ವಿವೇಕಾನಂದರ ಕುರಿತಂತೆ ಮುಂದಿಟ್ಟಿರುವ ಚಚರ್ೆಗಳಿಗೆ ಸಮರ್ಥವಾದ ದಾಖಲೆಗಳನ್ನು ತಂದೊದಗಿಸಲೇ ಬೇಕಲ್ಲ?

ಸ್ವಾಮಿ ವಿವೇಕಾನಂದರು ದನದ ಮಾಂಸ ತಿಂದಿದ್ದರೆಂಬುದು ಇವರ ಮೊದಲ ಪಿರಿಪಿರಿ…

View original post 904 more words

Leave a Reply