ವಿಭಾಗಗಳು

ಸುದ್ದಿಪತ್ರ


 

ಹಾಲು ನೆಪ, ಕುಡಿಯುತ್ತಿರೋದು ಹಾಲಾಹಲ!

ಹಾಲು ಅಂದಾಗ ಹೇಳಲೇಬೇಕಾದ ಸಂಗತಿಯೊಂದಿದೆ. ನಾವು ಕುಡಿಯುವ ಹಾಲೇ ನಮಗೆ ಅನೇಕ ರೋಗಗಳನ್ನು ತಂದೊಡ್ಡುತ್ತವೆಯೆಂಬ ಅಚ್ಚರಿಯ ಸಂಗತಿ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಹಾಲನ್ನು ಬಿಳಿಯ ವಿಷ ಅಂತಲೂ ಕರೆಯುತ್ತಾರೆ. ಸಕ್ಕರೆ ಮತ್ತು ಮೈದಾಗಳು ದೇಹಾರೋಗ್ಯಕ್ಕೆ ಅದೆಷ್ಟು ಕೆಟ್ಟದ್ದೋ ಹಾಲೂ ಅಷ್ಟೇ ಕೆಟ್ಟದ್ದು ಅಂತ ಪುರಾವೆ ಸಹಿತ ವಾದಿಸುವವರಿದ್ದಾರೆ. ಇದೆಲ್ಲವೂ ಶುರುವಾಗಿದ್ದು 1993ರಲ್ಲಿ.

ಚಿತ್ರದುರ್ಗದ ಸಿರಿಗೊಂಡನ ಹಳ್ಳಿಗೆ ಹೋಗುವ ಅವಕಾಶ ಸಿಕ್ಕಿತು. ಒಟ್ಟು 90 ದನಗಳನ್ನು ಮನೆಯಲ್ಲಿಯೇ ಸಾಕಿರುವ 93 ವರ್ಷದ ಹಿರಿಯ ರೈತ ನಾಗಣ್ಣರವರನ್ನು ಅವರ ಮನೆಯಲ್ಲಿಯೇ ಭೇಟಿಯಾಗಿದ್ದೆ. ಇಷ್ಟರಲ್ಲಿಯೂ ಒಂದೇ ಒಂದು ವಿದೇಶೀ ತಳಿಯ ಗೋವಿಲ್ಲ. ಹಾಗಂತ ಅಷ್ಟು ಗೋವು ಸೇರಿ ಕೊಡುವ ಹಾಲು ಅದೆಷ್ಟು ಗೊತ್ತೇ? ಹೆಚ್ಚೆಂದರೆ ಹದಿನೈದು ಲೀಟರ್ ಮಾತ್ರ. ಅದನ್ನೂ ಅವರು ಮಾರುವುದಿಲ್ಲ. ಪುಟ್ಟ ಮಕ್ಕಳಿರುವ ಮನೆಗೋ, ಮಂದಿರದಲ್ಲಿ ಅಭಿಷೇಕಕ್ಕೋ ಅದನ್ನು ಕೊಟ್ಟು ತಮ್ಮ ಮನೆತನದ ಪರಂಪರೆಯಂತೆ ನಡೆದಿದ್ದಾರೆ. ‘ಮತ್ತೆ ಗೋವುಗಳನ್ನು ಸಾಕಲು ಬೇಕಾದ ಮೂಲಧನ ಎಲ್ಲಿಂದ ತರುತ್ತೀರಿ’ ಅಂದರೆ ಗೋಮೂತ್ರ ಮತ್ತು ಸಗಣಿಯನ್ನು ನಮ್ಮ ಹೊಲಗಳಿಗೆ ಬಳಸುತ್ತೇವಲ್ಲ ಅದೇ ಸಾಕಷ್ಟಾಯ್ತು ಅಂದರು ಹಿರಿಯರು! ಓಹ್. ಪ್ರಾಚೀನ ಭಾರತದ ಮನೆಯೊಂದಕ್ಕೆ ಹೋಗಿ ಬಂದಂತಾಯ್ತು.

ಹಾಲು ಅಂದಾಗ ಹೇಳಲೇಬೇಕಾದ ಸಂಗತಿಯೊಂದಿದೆ. ನಾವು ಕುಡಿಯುವ ಹಾಲೇ ನಮಗೆ ಅನೇಕ ರೋಗಗಳನ್ನು ತಂದೊಡ್ಡುತ್ತವೆಯೆಂಬ ಅಚ್ಚರಿಯ ಸಂಗತಿ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಹಾಲನ್ನು ಬಿಳಿಯ ವಿಷ ಅಂತಲೂ ಕರೆಯುತ್ತಾರೆ. ಸಕ್ಕರೆ ಮತ್ತು ಮೈದಾಗಳು ದೇಹಾರೋಗ್ಯಕ್ಕೆ ಅದೆಷ್ಟು ಕೆಟ್ಟದ್ದೋ ಹಾಲೂ ಅಷ್ಟೇ ಕೆಟ್ಟದ್ದು ಅಂತ ಪುರಾವೆ ಸಹಿತ ವಾದಿಸುವವರಿದ್ದಾರೆ. ಇದೆಲ್ಲವೂ ಶುರುವಾಗಿದ್ದು 1993ರಲ್ಲಿ, ಬಾಬ್ ಎಲಿಯಟ್ ಎಂಬ ನ್ಯೂಜಿಲೆಂಡಿನ ಆಕ್ಲ್ಯಾಂಡ್ ವಿಶ್ವವಿದ್ಯಾಲಯದ ಮಕ್ಕಳ ಆರೋಗ್ಯದ ಕುರಿತಂತಹ ವಿಶೇಷ ಪ್ರೊಫೆಸರ್ರ ಸಂಶೋಧನೆಯ ನಂತರ. ಅಲ್ಲಿನ ಮಕ್ಕಳಿಗೆ ಟೈಪ್1 ಮಧುಮೇಹ ಕಾಯಿಲೆ ಹೆಚ್ಚುತ್ತಿರುವ ಆತಂಕ ಅವರಿಗಿತ್ತು. ಸಾಧಾರಣವಾಗಿ ಯೌವನಕ್ಕೆ ಕಾಲಿಡುವ ಮುನ್ನವೇ ಆವರಿಸುವ ಈ ಬಗೆಯ ಮಧುಮೇಹ ರೋಗಿಗಳಲ್ಲಿ ಇನ್ಸುಲೀನ್ ಉತ್ಪಾದನೆಯಾಗುವುದೇ ಇಲ್ಲ. ಗ್ಲೂಕೋಸ್ ಆಗಿ ಪರಿವರ್ತನೆಗೊಂಡ ಆಹಾರ ಇನ್ಸುಲೀನ್ ಅಭಾವದಿಂದಾಗಿ ರಕ್ತಕ್ಕೆ ಸೇರುವುದೇ ಇಲ್ಲ. ಹೀಗಾಗಿಯೇ ಬಾಲ್ಯದಲ್ಲಿಯೇ ಮಕ್ಕಳು ಶಕ್ತಿಹೀನರಾಗಿಬಿಡುತ್ತಾರೆ. ದಿನೇ ದಿನೇ ಹೆಚ್ಚು ಹೆಚ್ಚು ಮಕ್ಕಳು ಇಂತಹ ಡಯಾಬಿಟೀಸ್ನ ಕಪಿ ಮುಷ್ಟಿಗೆ ಸಿಲುಕುತ್ತಿರುವುದನ್ನು ನೋಡಿ ಬಾಬ್ ಎಲಿಯಟ್ ಸಂಶೋಧನೆಗೆ ಮನಸ್ಸು ಮಾಡಿದರು. ಆರಂಭದಲ್ಲಿ ಅವರು ಎರಡು ಬೇರೆ ಬೇರೆ ಪ್ರದೇಶದ ಮಕ್ಕಳಲ್ಲಿ ಡಯಾಬಿಟೀಸ್ನ ಸಾಂದ್ರತೆ ಭಿನ್ನ ಮಟ್ಟದಲ್ಲಿರುವುದನ್ನು ಗುರುತಿಸಿ ಅವರ ಆಹಾರದ ಕ್ರಮವನ್ನು ಅಧ್ಯಯನ ಮಾಡಿದರು. ಮಕ್ಕಳು ಕುಡಿಯುವ ಹಾಲಿನಲ್ಲಿ ನಿಜವಾದ ಸಮಸ್ಯೆ ಇದೆಯೆಂದು ಅವರಿಗೆ ಅನುಮಾನ ಹುಟ್ಟಿದ್ದೇ ಆಗ. ಅಲ್ಲಿನ ಪಶು ವಿಶ್ವವಿದ್ಯಾಲಯಕ್ಕೆ ಕರೆ ಮಾಡಿ ಈ ಕುರಿತಂತೆ ಕೇಳಿದಾಗ ತಜ್ಞರೊಬ್ಬರು ಹಾಲಿನಲ್ಲಿರುವ ಬೀಟಾ ಕೆಸೀನ್ ಪ್ರೊಟೀನ್ಗಳ ಕುರಿತಂತೆ ಗಮನ ಹರಿಸಲು ಹೇಳಿದರು. ಆ ನಂತರವೇ ಎ1 ಮತ್ತು ಎ2 ಹಾಲುಗಳ ಕುರಿತಂತಹ ವ್ಯಾಪಕ ಸಂಶೋಧನೆ ಆರಂಭವಾಗಿದ್ದು.

1

ಸ್ವಲ್ಪ ತಾಂತ್ರಿಕ ಸಂಗತಿ ಎನಿಸಿದರೂ ಸುಮ್ಮನೆ ಮನಸಿನಲ್ಲಿಟ್ಟುಕೊಳ್ಳಿ. ಹಾಲಿನಲ್ಲಿರುವ 209 ಅಮೈನೋ ಆಸಿಡ್ಗಳ ಸರಣಿಯನ್ನೇ ಬೀಟಾ ಕೇಸೀನ್ ಅಂತಾರೆ. ಈ ಸುರುಳಿ ಸುತ್ತಿದ ಮಾಲೆಯ 67ನೇ ಸ್ಥಾನದಲ್ಲಿ ಹಿಸ್ಟಿಡೀನ್ ಇದ್ದರೆ ಅದು ಎ1 ಹಾಲೆನಿಸಿಕೊಳ್ಳುತ್ತದೆ ಮತ್ತು ಅದೇ ಜಾಗದಲ್ಲಿ ಪ್ರೊಲೈನ್ ಇದ್ದರೆ ಅದು ಎ2 ಹಾಲಾಗುತ್ತದೆ. ಇದೇನೂ 93 ರಲ್ಲಿ ನಡೆದ ಸಂಶೋಧನೆಯ ಫಲಶ್ರುತಿಯಲ್ಲ. ಅದಕ್ಕೂ 25 ವರ್ಷಗಳ ಮುನ್ನವೇ ರಸಾಯನ ಶಾಸ್ತ್ರಜ್ಞರು ಈ ಸಂಗತಿಯನ್ನು ಗುರುತಿಸಿದ್ದರು. ಈಗ ಅದರ ಪ್ರಭಾವದ ಅಧ್ಯಯನ ಶುರುವಾಗಿತ್ತು ಅಷ್ಟೇ. ಪಶ್ಚಿಮದ ಗೋವಿನ ತಳಿಗಳನ್ನೆಲ್ಲ ಬೋಸ್ ಟಾರಸ್ ಕುಟುಂಬಕ್ಕೆ ಸೇರಿದವೆಂದು ಗುರುತಿಸುವುದಾದರೆ ಇವುಗಳು ಎ1 ಹಾಲನ್ನು ಉತ್ಪಾದಿಸುವಂಥವು. ಇನ್ನು ಏಷ್ಯಾದ ತಳಿಗಳನ್ನು ಬೋಸ್ ಇಂಡಿಕಸ್ ಕುಟುಂಬಕ್ಕೆ ಸೇರಿದವೆಂದು ಗುರುತಿಸುವುದಾದರೆ ಇವು ಎ2 ಹಾಲನ್ನೇ ಉತ್ಪಾದಿಸುವಂಥವು. ಸುಮಾರು 8000 ವರ್ಷಗಳ ಹಿಂದೆ ಬೀಟಾ ಕೇಸೀನ್ ಪ್ರೋಟೀನ್ನಲ್ಲಾದ ಈ ಬದಲಾವಣೆ ಪಶ್ಚಿಮದ ಗೋತಳಿಗಳ ಹಾಲನ್ನು ವಿಷವಾಗಿಸಿಬಿಟ್ಟಿತೆಂದು ಎಲಿಯಟ್ ಅಭಿಪ್ರಾಯ ಪಟ್ಟರು.

ಹಾಗಂತ ವಿಜ್ಞಾನದ ಜಗತ್ತು ನಂಬಲು ಸಿದ್ಧವಿರಲಿಲ್ಲ. ಎಲಿಯಟ್ ಮಕ್ಕಳ ಆಹಾರದ ಕ್ರಮವನ್ನು ದಾಖಲಿಸುವ ಕೆಲಸ ಶುರುಮಾಡಿದರು. ಒಟ್ಟೊಟ್ಟಿಗೆ ಇಲಿಗಳನ್ನೂ ಪ್ರಯೋಗಕ್ಕೆ ಆಯ್ದುಕೊಂಡು ಅವುಗಳಿಗೆ ಎ1 ಮತ್ತು ಎ2 ಬೀಟಾ ಕೇಸೀನ್ಗಳನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಉಣಿಸಲಾರಂಭಿಸಿದರು. ಅವರ ಊಹೆ ಸರಿಯಾಗಿತ್ತು. 250 ದಿನಗಳ ನಂತರ ಎ1 ಹಾಲಿನಲ್ಲಿರುವ ಪ್ರೊಟೀನ್ ಸೇವಿಸಿದ ಇಲಿಗಳು ಡಯಾಬಿಟೀಸ್ನ ಎಲ್ಲ ಲಕ್ಷಣಗಳನ್ನೂ ತೋರಲಾರಂಭಿಸಿದ್ದವು. ಎ2 ಹಾಲಿನಂಶ ಸೇವಿಸಿದ ಇಲಿಗಳು ಆರೋಗ್ಯವಂತವಾಗಿದ್ದವು. ಅಚ್ಚರಿಯೋ ಎಂಬಂತೆ ಅವರ ಈ ಸಂಶೋಧನಾ ಪ್ರಬಂಧವನ್ನು ಅಂತರರಾಷ್ಟ್ರೀಯ ಮಟ್ಟದ ಯಾವ ವೈಜ್ಞಾನಿಕ ಪತ್ರಿಕೆಗಳೂ ಪ್ರಕಟಿಸಲು ಒಪ್ಪಲೇ ಇಲ್ಲ. ಕೊನೆಗೆ ಡೈರಿ ಸಂಶೋಧನೆಗೆ ಸಂಬಂಧ ಪಟ್ಟ ಪತ್ರಿಕೆಯಲ್ಲಿ ಸಂಶೋಧನೆ ಮೋಕ್ಷ ಕಂಡಿತು. ಅಲ್ಲಿಂದಾಚೆಗೆ ಚಚರ್ೆ ತೀವ್ರಗೊಂಡಿತು. ಅನೇಕ ವಿಜ್ಞಾನಿಗಳು ತಾವೂ ಸಂಶೋಧನೆಗೈದು ಹೆಚ್ಚುತ್ತಿರುವ ಹೃದ್ರೋಗಕ್ಕೂ ಎ1 ಪ್ರೊಟೀನ್ನ ಪ್ರಭಾವವಿದೆ ಎಂಬುದನ್ನು ಬಲವಾಗಿ ಪ್ರತಿಪಾದಿಸಲಾರಂಭಿಸಿದರು. ಮುಂದೆ 2003 ರಲ್ಲಿ ಈ ಕುರಿತಂತೆ ವಿಶೇಷ ಅಧ್ಯಯನ ನಡೆಸಿದ ನ್ಯೂಜಿಲೆಂಡಿನ ಕೃಷಿ ವಿಜ್ಞಾನಿ ಕೀತ ವುಡ್ಫೋಡರ್್ ‘ಹಾಲಿನಲ್ಲಿರುವ ದೆವ್ವ’ ಎಂಬ ಕೃತಿಯನ್ನು ಬರೆದು ಜಗತ್ತಿನ ಗಮನ ಸೆಳೆದರು. ಆನಂತರ ಎ2 ಹಾಲಿನ ಕುರಿತಂತೆ ಜಾಗೃತಿ, ಅವುಗಳ ಮಾರಾಟ ಹೆಚ್ಚಿತು. ಭಾರತೀಯ ತಳಿಗಳಿಗೆ ಜಾಗತಿಕ ಮೌಲ್ಯ ಬಂದದ್ದೂ ಹೀಗೆಯೇ.

ಭಾರತದಲ್ಲಿ ಈ ಸಂಶೋಧನೆಗಳು ಬಲು ತಡವಾಗಿಯೇ ಆರಂಭವಾದವು. ಹರ್ಯಾಣದ ನ್ಯಾಶನಲ್ ಬ್ಯೂರೋ ಆಫ್ ಅನಿಮಲ್ ಜೆನಿಟಿಕ್ ರಿಸೋರ್ಸಸ್ನ ಕೆಲವು ವಿಜ್ಞಾನಿಗಳು ಈ ಕುರಿತಂತೆ ವಿಸ್ತೃತ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿದರು. ಬಹುತೇಕ ಭಾರತೀಯ ಗೋ ತಳಿಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿನ ಎ2 ಪ್ರೊಟೀನ್ ಗುರುತಿಸಿದ್ದರು. ಇಲ್ಲಿನ ಎಮ್ಮೆಗಳಲ್ಲೂ ಇದೇ ಮಾದರಿಯ ಹಾಲು ಸಿಗುವುದನ್ನು ಜಗತ್ತಿಗೆ ಅರುಹಿದ್ದರು. ಭಾರತೀಯರಲ್ಲಿ ಮಧುಮೇಹ ನಿವಾರಣೆಗೆ ಮತ್ತು ಅದನ್ನು ಆಧರಿಸಿದ ಹೃದ್ರೋಗದಂತಹ ಅನೇಕ ಸಮಸ್ಯೆಗಳನ್ನು ತಡೆಯಲು ದೇಸೀ ಹಸುಗಳನ್ನು ವಿದೇಶೀ ಹಸುಗಳೊಂದಿಗೆ ಸಂಕರ ಗೊಳಿಸುವುದನ್ನು ತಡೆಯಬೇಕೆಂದು ಸಲಹೆ ಕೊಟ್ಟಿದ್ದರು. 2012 ರಲ್ಲಿ ರಷಿಯಾದ ವಿಜ್ಞಾನಿಗಳು ಎ1 ಬೀಟಾ ಕೇಸೀನ್ ಪ್ರೊಟೀನ್ ಸೇವನೆಯಿಂದ ಮೆದುಳಿನಿಂದ ಮಾಂಸಖಂಡಗಳಿಗೆ ರವಾನೆಯಾಗುವ ಸಂದೇಶಗಳು ತಡವಾಗುವುದನ್ನು ಗುರುತಿಸಿದ್ದರು. ಇದೇ ಕಾರಣದಿಂದ ಬಾಲ್ಯದಲ್ಲಿಯೇ ಈ ಹಾಲನ್ನು ಸೇವಿಸುವ ಮಕ್ಕಳಲ್ಲಿ ಬುದ್ಧಿ ಮಾಂದ್ಯತೆ ಕಾಣುವುದು ಸಾಧ್ಯವೆಂದು ಭಾರತೀಯ ವಿಜ್ಞಾನಿಗಳೂ ಸಂಶೋಧಿಸಿದ್ದರು. ಅಷ್ಟೇ ಅಲ್ಲ. ಎ1 ಹಾಲಿನೊಳಗಿನ ಪ್ರೊಟೀನ್ನ್ನು ಜೀರ್ಣ ಮಾಡಬಲ್ಲ ಬ್ಯಾಕ್ಟೀರಿಯಾಗಳು ನಮ್ಮಲ್ಲಿಲ್ಲದಿರುವುದರಿಂದ ಅಜೀರ್ಣದಿಂದ ಹೊಟ್ಟೆ ನುಲಿದಂತಾಗುವ ಇರಿಟೆಬಲ್ ಬೋವೆಲ್ ಸಿಂಡ್ರೋಮ್ಗೂ ಕಾರಣವಾಗುತ್ತದೆಂದು ಸಂಶೋಧನೆ ಹೊರಬಂತು. ಇಂದಿನ ಬಹುತೇಕ ಟೆಕ್ಕಿಗಳನ್ನು ಕಾಡುತ್ತಿರುವ ಅಜೀರ್ಣದ ಸಮಸ್ಯೆಗೆ ವೈದ್ಯರು ಹೆಸರೇನೋ ಬಲು ಸುಂದರವಾಗಿ ಕೊಟ್ಟಿದ್ದಾರೆ. ಆದರೆ ಅದಕ್ಕೆ ಪರಿಹಾರ, ಸೇವಿಸುವ ಹಾಲಿನಲ್ಲಿದೆ ಅಂತ ಮಾತ್ರ ಹೇಳೋದಿಲ್ಲ. ಇದೂ ಒಂದು ದೊಡ್ಡ ಮಾಫಿಯಾವೇ. ಇನ್ನೂ ಕೆಲವೇ ವರ್ಷಗಳಲ್ಲಿ ವೇಗವಾಗಿ ಬೋಸ್ ಇಂಡಿಕಸ್ ತಳಿಗಳನ್ನು ನಾಶ ಮಾಡಿ ಅವುಗಳನ್ನು ತಮ್ಮ ನೆಲದಲ್ಲಿ ಅಭಿವೃದ್ಧಿ ಪಡಿಸಿದ ಪಶ್ಚಿಮ ರಾಷ್ಟ್ರಗಳು ಶುದ್ಧ ಹಾಲಿಗೆಂದೇ ತಮ್ಮ ತಳಿಗಳನ್ನು ನಮಗೆ ಮಾರಿದರೆ ಅಚ್ಚರಿಯಿಲ್ಲ! ನಾವು ಪೆದ್ದರಾಗುತ್ತಿದ್ದೇವೆ ಅಷ್ಟೇ. ಬಹುಶಃ ಅದಕ್ಕೂ ಜಸರ್ಿ, ಹೋಲ್ಸ್ಟೀನ್ ತಳಿಗಳ ಹಾಲೇ ಕಾರಣವಿರಬಹುದು.

4

ಭಾರತದಲ್ಲೂ ದೇಸೀ ತಳಿಗಳ ಪ್ರಚಾರಕ್ಕೆ ಒಂದು ದೊಡ್ಡ ತೊಡಕಿದೆ. ಈ ತೊಡಕಿನ ಬೀಜ ಬಿತ್ತಿದ್ದು 1970 ರಲ್ಲಿ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಬ್ರಿಟೀಷರು ಬಿಟ್ಟು ಹೋದ ಭಾರತದಲ್ಲಿ ಬಡತನ, ಅನಕ್ಷರತೆ, ಹಸಿವು, ನಿರುದ್ಯೋಗಗಳು ತಾಂಡವವಾಡುತ್ತಿದ್ದವಲ್ಲ; ಒಂದೊಂದನ್ನೇ ನಿವಾರಿಸಿಕೊಳ್ಳುತ್ತಾ ಸಾಗುವುದು ಅಗತ್ಯವಾಗಿತ್ತು. ಸಕರ್ಾರ ಹಸಿವು ಹೋಗಲಾಡಿಸಲು, ಜನರಿಗೆ ಪೌಷ್ಟಿಕ ಆಹಾರ ತಲುಪಿಸುವ ನಿಟ್ಟಿನಲ್ಲಿ ಹಾಲಿನ ಹೊಳೆ ಹರಿಸುವ ಯೋಜನೆ ಕೈಗೆತ್ತಿಕೊಂಡಿತು. ಇದಕ್ಕೆ ಆಪರೇಶನ್ ಫ್ಲಡ್ ಎಂಬ ನಾಮಕರಣವೂ ಆಯಿತು. ಕ್ಷೀರಕ್ರಾಂತಿಯ ಗುರಿಯಿಟ್ಟುಕೊಂಡು ಓಡಿದ ಸಕರ್ಾರ ಹಸು ಎಂದರೆ ಹಾಲು ಹೆಚ್ಚು ಕರೆಯುವುದು ಮಾತ್ರ ಎಂದು ಜನರನ್ನು ನಂಬಿಸಿತು. ಹಾಲು ಕರೆಯದ ಹಸುಗಳು ‘ಗೊಡ್ಡು’ ಎನಿಸಿದ್ದು ಆಗಲೇ. ಹಳ್ಳಿ ಹಳ್ಳಿಯಲ್ಲಿ ಹಾಲಿನ ಶೇಖರಣಾ ಕೇಂದ್ರ ನಿಮರ್ಾಣವಾಯಿತು. ಡೈರಿಗಳು ತಲೆಯೆತ್ತಿದವು. ಹೆಚ್ಚು ಹಾಲು ಕೊಡುವ ತಳಿಗಳನ್ನು ಆಮದು ಮಾಡಿಕೊಂಡೆವು. ಅದೊಂದು ಕಾಲಘಟ್ಟದಲ್ಲಂತೂ ಜಸರ್ಿ ಹಸು ಹಾಲು ಕರೆಯುವ ಪ್ರಮಾಣವೇ ಜನರನ್ನು ಬೆರಗಾಗಿಸುತ್ತಿತ್ತು. ಕೂತಲ್ಲಿ, ನಿಂತಲ್ಲಿ ಅದೇ ಚಚರ್ೆ. ವಿದೇಶೀ ಹಸು ಮನೆಗೆ ಬಂದ ಮೇಲೆ ಸ್ವದೇಶೀ ಗೋವಿನ ಮೇಲೆ ಮಮಕಾರ ಕಡಿಮೆಯಾಯ್ತು. ರೈತ ಈ ಗೋವುಗಳನ್ನು ಸಾಕುವುದು ಹೊರೆ ಎನ್ನಲಾರಂಭಿಸಿದ. ಹಳೆಯ ಪರಂಪರೆಯನ್ನೆಲ್ಲ ಮುರಿದು ತಾನೇ ಅವುಗಳನ್ನು ಮಾರಲು ಮುಂದಾದ. ಹುಟ್ಟಿದ ಕರು ಗಂಡಾದರೆ ಆಗಿಂದಾಗ್ಯೆ ಅದನ್ನು ಕೊಟ್ಟು ಬಿಡುವಷ್ಟು ಕ್ರೂರಿಯಾದ. ಹೌದು. 1998ರ ವೇಳೆಗೇ ಭಾರತ ಹಾಲಿನ ಉತ್ಪಾದನೆಯಲ್ಲಿ ಅಮೇರಿಕಾವನ್ನು ಹಿಂದಿಕ್ಕಿ ಮುಂದೆ ಬಂತು, ಆದರೆ ಪೌಷ್ಟಿಕತೆಯ ನೆಪದಲ್ಲಿ ಮಾರುಕಟ್ಟೆ ತುಂಬಿಕೊಂಡ ಎ1 ಹಾಲು ಆರೋಗ್ಯವನ್ನೇ ಹಾಳುಗೆಡವಿ ಭಾರತೀಯರನ್ನು ರೋಗಿಗಳನ್ನಾಗಿಸಿತು. ಎ1 ಮತ್ತು ಎ2 ಹಾಲಿನ ಚಚರ್ೆ ತೀವ್ರವಾದರೆ ಸಕರ್ಾರವೇ ನಡೆಸುವ ಡೈರಿ ಉದ್ದಿಮೆಗೆ ಬಲುದೊಡ್ಡ ಹೊಡೆತ. ಅದಕ್ಕಾಗಿಯೆ ರೋಗಿಷ್ಟ ಹಾಲಾದರೂ ಸರಿಯೇ, ಒಪ್ಪಿಕೊಂಡಿರಬೇಕಾದ ಅನಿವಾರ್ಯತೆ ಇದೆ. ರಾಷ್ಟ್ರೀಯ ಡೈರಿ ಡೆವಲಪ್ಮೆಂಟ್ ಬೋಡರ್ಿನ ಕಳೆದ ವರ್ಷದ ವರದಿಯ ಪ್ರಕಾರ ಈ ವರ್ಷದ ಹಾಲು ಉತ್ಪಾದನೆಯ ಗುರಿ 156 ಮಿಲಿಯನ್ ಟನ್ಗಳಷ್ಟು, ಇವುಗಳಲ್ಲಿ ದೊಡ್ಡದೊಂದು ಭಾಗ ಹಾಲಿನ ಸಹಕಾರಿ ಸಂಘಗಳಿಂದ ಬರುತ್ತದೆ. ಹಳ್ಳಿಗಳಲ್ಲಿ ಸುಮಾರು 50 ಲಕ್ಷ ಹೆಣ್ಣುಮಕ್ಕಳು ಹಾಲು ಸಂಗ್ರಹಣೆಯ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಒಂದೂವರೆ ಕೋಟಿಯಷ್ಟು ರೈತರು ಸಹಕಾರಿ ಸಂಘಗಳ ಮೂಲಕ ಹೈನುಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಎ1 ಮತ್ತು ಎ2 ಚಚರ್ೆ ಬೀದಿಗೆ ಬಂತೆಂದರೆ ಇಷ್ಟು ಸಂಖ್ಯೆಯ ಜನರ ಆದಾಯಕ್ಕೆ ಕುತ್ತೆಂಬುದು ಸಕರ್ಾರಕ್ಕೆ ಗೊತ್ತು. ಜೊತೆಗೆ ಅದಾಗಲೇ ಹಾಲು ಸಂಸ್ಕರಣೆ, ಪೌಡರ್ ತಯಾರಿಕೆ, ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ನಿರತವಾಗಿರುವ ಲಕ್ಷಾಂತರ ನೌಕರರ ಗತಿಯೇನು? ಹೀಗಾಗಿ ಸದ್ಯದ ದಿನಗಳನ್ನು ದೂಡಿದರೆ ಸಾಕೆಂಬುದೇ ಎಲ್ಲಾ ಸಕರ್ಾರಗಳ ಇಚ್ಛೆ. ಅದಕ್ಕೇ ನಾವಿನ್ನೂ ಅದೇ ಹಾಲನ್ನು ಕುಡಿಯುತ್ತಿದ್ದೇವೆ.

ನಾವು ಎ1 ಹಾಲು ಕುಡಿದೊಡನೆ ದೇಹದಲ್ಲಿ ಬಿಡುಗಡೆಯಾಗುವ ಮಾಫರ್ಿನ್ ಮಾದರಿಯ ಮತ್ತು ತರಿಸುವ ಬೀಟಾ ಕ್ಯಾಸೋಮಾಫರ್ಿನ್7 ಎಂಬ ರಾಸಾಯನಿಕ ನಮ್ಮ ಜೀರ್ಣ ಶಕ್ತಿಯನ್ನು ಹಾಳುಗೆಡಹುತ್ತದೆ. ಕ್ರಮೇಣ ದೇಹದ ಅಂಗಾಂಗಗಳು ಸೆಳೆತಕ್ಕೆ ಒಳಗಾಗುತ್ತವೆ. ಬೊಜ್ಜು ಕಾಣಿಸಿಕೊಳ್ಳುತ್ತದೆ. ಕೊಬ್ಬು ಹೆಚ್ಚಾಗಿದ್ದುದರಿಂದ ಹೃದಯದ ನಾಳಗಳು ಮುಚ್ಚಿಕೊಳ್ಳಲಾರಂಭಿಸುತ್ತವೆ. ನಿರಂತರವಾಗಿ ಈ ಬೀಟಾ ಕೇಸೀನ್ ಪ್ರಮಾಣ ಹೆಚ್ಚಿದರೆ ಮಧುಮೇಹ ಕಾಯಿಲೆ ಶುರುವಾಗುತ್ತದೆ. ಇದರಿಂದಾಗಿ ಕಾಲಕ್ರಮದಲ್ಲಿ ಕ್ಯಾನ್ಸರ್ ನಂತಹ ಕಿಡ್ನಿ ವೈಫಲ್ಯದಂತಹ ಕಾಯಿಲೆಗಳು ಸವರ್ೇ ಸಾಮಾನ್ಯವೆನಿಸುತ್ತವೆ. ಎ2 ಹಾಲಿನಿಂದಲೂ ಈ ರಾಸಾಯನಿಕ ಬಿಡುಗಡೆಯಾಗುವುದಾದರೂ ನಮ್ಮ ದೇಹದ ದೃಷ್ಟಿಯಿಂದ ಅದು ನಗಣ್ಯವೆನಿಸುವಷ್ಟು ಕಡಿಮೆಯಾದ್ದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗುವುದಿಲ್ಲ.

ದುರಂತವೆಂದರೆ ಭಾರತದಲ್ಲಿ ನಾವು ಅತಿ ಹೆಚ್ಚು ಸೇವಿಸುವ ಹಾಲು ಎ1 ಮಾದರಿಗೆ ಸೇರಿರುವಂಥದ್ದೇ. ಕ್ಷೀರಕ್ರಾಂತಿಯ ನಂತರ ಹೆಚ್ಚು ಹೆಚ್ಚು ಹಾಲು ಉತ್ಪಾದಿಸುವ ಭರದಲ್ಲಿ ನಾವು ಆರೋಗ್ಯವನ್ನು ಮರೆತೇ ಬಿಟ್ಟಿದ್ದೇವೆ. ಇದಕ್ಕೆ ಪ್ರತಿಯಾಗಿ ಎ2 ಹಾಲು ಉತ್ಪಾದಿಸುವ ಭಾರತೀಯ ತಳಿಗಳನ್ನು ಕಟುಕನಿಗೆ ಕೊಟ್ಟು ‘ತಿನ್ನಿ’ ಎನ್ನುತ್ತಿದ್ದೇವೆ. ದೇಸೀ ಹಸುವಿನ ಹಾಲನ್ನು ಅಮೃತ ಅಂತ ನಮ್ಮ ಹಿರಿಯರು ಕರೆದಿದ್ದು ಸುಮ್ಮ ಸುಮ್ಮನೇ ಅಲ್ಲ. ಇವು ರೋಗ ತಡೆಯುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ವಿದೇಶೀ ತಳಿಗಳ ಹಾಲಿನಂತೆ ರೋಗವನ್ನು ತರುವುದಿಲ್ಲವೆಂಬುದಂತೂ ಖಾತ್ರಿ! ಬೀಫ್ ತಿನ್ನುವ ತುಡಿತ ಇರುವವರಿಗೆ ಹೇಳಬೇಕಾಗಿರೋದು ಒಂದೇ ಮಾತು. ‘ಗೋವಿನ ಪೂಜೆ ಹಿಂದೂವಿನ ನಂಬಿಕೆ ಇರಬಹುದು ಆದರೆ ಬೀಟಾ ಕೇಸೀನ್ ಮಾತ್ರ ಶುದ್ಧ ವಿಜ್ಞಾನ’ ಈ ಕಾರಣಕ್ಕಾಗಿಯೇ ಗೋಹತ್ಯಾ ನಿಷೇಧ ಅಂದಾಗ ಅದು ಬಡವನ ಆರೋಗ್ಯ ಕಾಪಾಡುವ ನಮ್ಮೆಲ್ಲರ ಕಾಳಜಿ. ವಿರೋಧಿಸುವ ಮುನ್ನ ನಿಮ್ಮ ನಿಲುವು ಗಟ್ಟಿ ಮಾಡಿಕೊಳ್ಳಿ!

Leave a Reply