ವಿಭಾಗಗಳು

ಸುದ್ದಿಪತ್ರ


 

ಹೇ ಕಾಶ್ಮೀರ….!

ನಿನ್ನ ವರ್ತಮಾನ ನಾನು
ಇತಿಹಾಸ, ಭವಿಷ್ಯ
ಎಲ್ಲವೂ ನಾನು.
ನಿನ್ನ ಶೃಂಗಾರಕ್ಕೆ ವೈಯಾರಕ್ಕೆ ಸೌಂದರ್ಯಕ್ಕೆ
ಕಾರಣ ನಾನೇ.
ನೀ ಮಾಡುವ ಪೂಜೆ
ನೀ ಬರೆವ ಕವನ
ಅದು ನಾನೇ.
ನೀನು ಇಲ್ಲವೆಂದು ವಾದಿಸು
ಹೌದೆಂದು ಭಾವಿಸು
ನಿನ್ನೊಳಗಿನ ನಾನು ನಾನೇ.
ನಿನ್ನ ಒಂದೊಂದು ತುತ್ತಿಗೆ
ನಾನೆಷ್ಟು ಹಸಿದೆ
ಸಿಡಿವ ಮೋಡದಂತೆ ಸುರಿದೆ.
ನಿನಗೆ ತಿಳಿಯಲಿಲ್ಲ…
ಏಣಿಯ ಒದ್ದು ಮತ್ತೊಬ್ಬನ ಆಲಂಗಿಸಿದೆ.
ಸಿದ್ಧಾಂತವ ಬದಲಿಸಿದೆ
ವೇದಾಂತವ ತೊರೆದೆ
ಬದಲಾದೆ ನೀನು ಬದಲಾದೆ…
ಛೇ!! ನಾ ಬಿಟ್ಟ ಮರುಕ್ಷಣ
ನೀನಿಲ್ಲವಾಗುವೆ
ಆದರೂ ಇಗೋ ಬಿಡುತಿರುವೆ.
ಗೊತ್ತೆನಗೆ,
ಅಸಹ್ಯದ ಬಾಳು ಬದುಕಿ
ನೀ ಮರಳಿ ಬರುವೆ
ನನ್ನ ತಬ್ಬುವೆ,
ನಾನೂ ಕಾಯುವೆ.

Leave a Reply