ವಿಭಾಗಗಳು

ಸುದ್ದಿಪತ್ರ


 

ಹೊಸದೊಂದು ಕ್ರಾಂತಿಗೆ ಸಜ್ಜಾಗಿದೆ ಭಾರತ. . .

ವಾಸ್ತವವಾಗಿ ಹಣ ಒಂದು ಮಾಧ್ಯಮ. ಅದು ಚಾಲ್ತಿಯಲ್ಲಿರಬೇಕೇ ಹೊರತು, ಜೇಬಿನಲ್ಲೋ, ಬೀರುವಿನಲ್ಲೋ, ನೆಲಮಾಳಿಗೆಯಲ್ಲೋ ಕೊಳೆಯಬಾರದು. ಹಾಗೆ ದೇಶದಲ್ಲಿ ಚಾಲನೆಗೆ ಬರದ ದುಡ್ಡು ದೇಹದಲ್ಲಿ ಸೂಕ್ತವಾಗಿ ಹರಿಯದ ರಕ್ತವಿದ್ದಂತೆ. ಅದು ಸ್ವಾಸ್ಥ್ಯವನ್ನು ಹಾಳುಗೆಡುವುದು ಖಾತ್ರಿ. ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರಕ್ಕೆ ಪ್ರೇರಣೆ ಕೊಟ್ಟ ರಾಜಕಾರಣಿಗಳು ಈ ದೇಶದ ಸಾಮಾನ್ಯ ಜನರ ಬದುಕು ಹಾಳು ಮಾಡಿದರು. ಈಗ ಅರ್ಥಕ್ರಾಂತಿಯ ಪ್ರಸ್ತಾವನೆ ಹೊಸದೊಂದು ಆಶಾಭಾವನೆ ಹುಟ್ಟಿಸಿದೆ. ಮೋದಿಯವರು ಇದನ್ನು ಒಪ್ಪಿಕೊಳ್ಳಬಹುದೆಂಬ ದೂರದ ಭರವಸೆಯೂ ಇದೆ. ಹೀಗಾಗಿಯೇ ಅವರು ಜನರನ್ನು ಬ್ಯಾಂಕಿನತ್ತ ಸೆಳೆದು ಆಥರ್ಿಕ ವಹಿವಾಟನ್ನು ನ್ಯಾಯಸಮಗೊಳಿಸಲು ಜನ್ಧನ್ ಯೋಜನೆಯನ್ನು ಜಾರಿಗೆ ತಂದರೆನಿಸುತ್ತದೆ. ಜಿಎಸ್ಟಿ ಜಾರಿಗೆ ತಂದು ತೆರಿಗೆ ವ್ಯವಸ್ಥೆಯನ್ನು ಹಿಡಿತಕ್ಕೆ ತಂದುಕೊಳ್ಳುವ ಯತ್ನ ಮಾಡಿದರು ಎಂದೂ ಎನಿಸುತ್ತದೆ.

ದೇಶದ ಆಥರ್ಿಕತೆ ಹೊಸದೊಂದು ದಿಕ್ಕಿಗೆ ತೆರೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದೆಯಾ? ನರೇಂದ್ರ ಮೋದಿ ನಿದರ್ಾಕ್ಷಿಣ್ಯವಾಗಿ ದೇಶ ಕಟ್ಟುವ ತಮ್ಮ ಹೆಜ್ಜೆಗಳನ್ನು ಬಲವಾಗಿಯೇ ಊರುತ್ತಿದ್ದಾರೆ. ‘ಒಂದು ದೇಶಕ್ಕೆ ಒಂದು ಎಲೆಕ್ಟ್ರಿಕಲ್ ಗ್ರಿಡ್’ ಕನಸು ಕಂಡರು ಅದು ಸಾಕಾರವಾಯ್ತು. ‘ಒಂದು ದೇಶಕ್ಕೆ ಒಂದೇ ತೆರಿಗೆ’ ಎಂದರು. ಎದುರು ಪಕ್ಷದ ಅಸಮ್ಮತಿಯನ್ನೂ ಸರಿಮಾಡಿಸಿಕೊಂಡು ಚಾಣಾಕ್ಷತೆಯಿಂದ ಜಿಎಸ್ಟಿ ಜಾರಿಗೆ ತಂದುಬಿಟ್ಟರು. ಈಗ ಏಕರೂಪ ನಾಗರಿಕ ಸಂಹಿತೆಗೆ ಸಮಾಜದಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿ ಹೊಸದೊಂದು ಮನ್ವಂತರಕ್ಕೆ ನಾಂದಿ ಹಾಡುತ್ತಿದ್ದಾರೆ ಪ್ರಧಾನ ಮಂತ್ರಿಗಳು. ಖುಷಿಯೇ ಅಲ್ಲವೇನು? ‘ನರೇಂದ್ರ ಮೋದಿ ಜಾತಿಗಳನ್ನು ಒಡೆಯುತ್ತಾರೆ, ಕೋಮುದಳ್ಳುರಿ ಹಚ್ಚುತ್ತಾರೆ. ದೇಶವನ್ನು ತುಂಡರಿಸುತ್ತಾರೆ’ ಎಂದೆಲ್ಲ ಬೊಬ್ಬೆ ಹೊಡೆಯುವವರ ನಡುವೆ ಅವರು ಸದ್ದಿಲ್ಲದೇ ದೇಶವನ್ನು ಜೋಡಿಸಿ ಒಂದು ಮಾಡುತ್ತಿದ್ದಾರೆ, ಸಾಧ್ಯವಾದರೆ ಹಿಂದಿನವರು ಕಳೆದುಕೊಂಡಿದ್ದನ್ನು ಮರಳಿ ಜೋಡಿಸುತ್ತಿದ್ದಾರೆ ಕೂಡ!

ಬಹುಶಃ ಅವರ ಮುಂದಿನ ದೃಷ್ಟಿ ಬಲು ದೊಡ್ಡದಾದ ಆಥರ್ಿಕ ವಿಕಾಸದತ್ತ ಕೇಂದ್ರೀಕೃತವಾಗಿದೆಯೇ? ಹೇಳಿಕೆಗಳನ್ನು ನೋಡಿದರೆ ಹಾಗನಿಸುತ್ತೆ. ‘ಸೆಪ್ಟೆಂಬರ್ 30 ರೊಳಗೆ ಕಪ್ಪುಹಣ ಘೋಷಣೆ ಮಾಡದವರು ಆನಂತರ ತಮ್ಮ ಮುಖಕ್ಕೆ ಮಸಿ ಬಳಸಿಕೊಳ್ಳಲು ಸಿದ್ಧರಾಗಿ’ ಎಂದು ಹೇಳುವ ಮೂಲಕ ಪ್ರಧಾನಿಗಳು ಹೊಸ ಆಸೆಯನ್ನು ಜನ ಸಾಮಾನ್ಯರಲ್ಲಿ ಹುಟ್ಟಿಸಿಬಿಟ್ಟಿದ್ದಾರೆ. ಅಷ್ಟೇ ಅಲ್ಲ. ಆ ಗಡುವಿನ ನಂತರ ಕಠಿಣ ಆಥರ್ಿಕತೆಯ ನಿಧರ್ಾರವನ್ನೂ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇತ್ತ ಅವರ ನಡೆಯನ್ನು ಅರಿತು ಹೆಜ್ಜೆ ಹಾಕುವ ಚಾಣಾಕ್ಷ ಚಂದ್ರಬಾಬು ನಾಯ್ಡು 500 ಮತ್ತು 1000 ದ ನೋಟು ನಿಷೇಧ ಮಾಡಿ ಭ್ರಷ್ಟಾಚಾರ ನಿಯಂತ್ರಿಸಬೇಕೆಂದು ಸಕರ್ಾರವನ್ನು ಎಚ್ಚರಿಸಿದ್ದಾರೆ.

rateofinterst

ಕಳೆದ ಹದಿನೈದು ವರ್ಷಗಳಿಂದ ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ಉದ್ಯಮಿಯಾಗಿದ್ದ ಅನಿಲ್ ಬೋಕಿಲ್ ಮತ್ತವರ ಮಿತ್ರರು ಭಾರತದ ಆಥರ್ಿಕ ಸ್ಥಿತಿಗತಿಗಳ ಕುರಿತಂತೆ ಬಲುವಾಗಿ ತಲೆಕೆಡಿಸಿಕೊಂಡು ಇದನ್ನು ಭ್ರಷ್ಟಮುಕ್ತ ಮಾಡುವ ಸಹಜ ವ್ಯವಸ್ಥೆಯನ್ನು ಹುಡುಕಲಾರಂಭಿಸಿದರು. ಅವರಿಗೆ ಗೋಚರವಾದ ಮಹತ್ವದ ಸಂಗತಿಯೆಂದರೆ, ಈ ದೇಶದಲ್ಲಿ ಭ್ರಷ್ಟಾಚಾರ ವ್ಯವಸ್ಥೆಗೆ ಪ್ರೇರಣೆ ಕೊಡುವುದೇ ಇಲ್ಲಿನ ತೆರಿಗೆ ವ್ಯವಸ್ಥೆ ಎನ್ನುವುದು ಅವರ ಗಮನಕ್ಕೆ ಬಂತು. ನೇರ ತೆರಿಗೆ ನೆಪಮಾತ್ರಕ್ಕೆ ಪಡೆಯುವ ಸಕರ್ಾರ ಜನರಿಗೆ ಅರಿವೇ ಇಲ್ಲದಂತೆ ಪರೋಕ್ಷ ತೆರಿಗೆಯನ್ನು ಕತ್ತುಹಿಸುಕಿ ಪಡೆಯುತ್ತಿದೆ. ಸುಮ್ಮನೆ ನಿಮ್ಮ ಅವಗಾಹನೆಗೆ ಇರಲಿ ಅಂತ. ನೀವು ಗಳಿಸಿದ ಹಣಕ್ಕೆ ಆದಾಯ ತೆರಿಗೆ ಕಟ್ಟಿದ ಮೇಲೆ, ಮನೆಗೆ ಕಂದಾಯವನ್ನು ಕಟ್ಟುತ್ತೀರಿ. ಗಾಡಿ ಕೊಂಡದ್ದಕ್ಕೆ ತೆರಿಗೆ ಕಟ್ಟಿದ್ದಲ್ಲದೇ ಅದನ್ನು ರಸ್ತೆಗಿಳಿಸಲು ರೋಡ್ ಟ್ಯಾಕ್ಸ್ ಕಟ್ಟುತ್ತೀರಿ. ಗಾಡಿಗೆ ಪೆಟ್ರೋಲ್ ಹಾಕಿದರೆ ನಾಲ್ಕಾರು ಬಗೆಯ ಸೆಸ್ಗಳೂ ಸೇರಿದಂತೆ ಅಪಾರ ತೆರಿಗೆ ಕಟ್ಟಿ, ಅಂಗಡಿಗೆ ಹೋಗಿ ಕೊಂಡುಕೊಳ್ಳುವ ವಸ್ತುಗಳಿಗೆ ವ್ಯಾಟ್ ಕಟ್ಟುತ್ತೀರಿ. ಹೋಟೆಲಿನಲ್ಲಿ ಊಟ ಮಾಡಿದರೆ ಸೇವಾ ತೆರಿಗೆ ಕಟ್ಟಬೇಕು. ಅದನ್ನು ಬಿಟ್ಟು ಸೇವೆ ಮಾಡಿದವನಿಗೆ ಟಿಪ್ಸ್ ಬೇರೆ! ಒಂದು ಅಂದಾಜಿನ ಪ್ರಕಾರ 50ಕ್ಕೂ ಹೆಚ್ಚು ರೀತಿಯ ತೆರಿಗೆಗಳು ನಮ್ಮನ್ನು ಆಳುತ್ತಿವೆ. ಹೀಗಾಗಿ ಎಲ್.ಕೆ.ಜಿ ಗೆ ಹೋಗುವ ಪೆನ್ಸಿಲ್ ಬಳಸುವ ಪುಟ್ಟ ಮಗುವಿನಿಂದ ಹಿಡಿದು ಹಾಸಿಗೆಯ ಮೇಲೆ ಮಲಗಿ ಔಷಧಿ ತಿನ್ನುವ ತೊಂಭತ್ತರ ವೃದ್ಧರವರೆಗೂ ಪ್ರತಿಯೊಬ್ಬರೂ ಈ ದೇಶದಲ್ಲಿ ತೆರಿಗೆ ಕಟ್ಟುವವರೇ.
ಮತ್ತೆ ಇದಕ್ಕೆ ಪರಿಹಾರವೇನು? ಎಲ್ಲಾ ಬಗೆಯ ತೆರಿಗೆಯನ್ನು ಮನ್ನಾ ಮಾಡಿಬಿಡುವುದಷ್ಟೇ! ಅಲ್ಲವೇ ಮತ್ತೇ? ನಾವು ಗಳಿಸಿದ್ದಕ್ಕೂ ತೆರಿಗೆ ಕಟ್ಟಬೇಕು, ಖಚರ್ು ಮಾಡಿದ್ದಕ್ಕೂ ಕಟ್ಟಬೇಕು. ಇದು ಏಕೆ? ಎಲ್ಲಾ ಬಗೆಯ ತೆರಿಗೆಯಿಂದ ಮುಕ್ತಗೊಳಿಸಿ ಎಲ್ಲರನ್ನು ಬ್ಯಾಂಕ್ ವ್ಯವಸ್ಥೆಯಡಿ ತಂದು ಅಲ್ಲಿಂದಲೇ ಎರಡೇ ಪ್ರತಿಶತ ತೆರಿಗೆಯನ್ನು ಪಾವತಿಸುವಾಗ ಕಡಿದುಕೊಂಡರಾಯ್ತು! ಈ ವ್ಯವಸ್ಥೆ ಗಳಿಕೆಗೆ ನಿರ್ಬಂಧ ಹೇರುವುದಿಲ್ಲ. ಖಚರ್ು ಮಾಡುವಲ್ಲಿ ತೆರಿಗೆ ವಸೂಲಿ ಮಾಡುತ್ತದೆ. ಇದೇ ತೆರಿಗೆಯಲ್ಲಿ ರಾಜ್ಯಕ್ಕೆ, ದೇಶಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಬ್ಯಾಂಕುಗಳಿಗೂ ಪಾಲು. ಈಗಿನ ವಹಿವಾಟಿನ ಆಧಾರದ ಮೇಲೆ ಲೆಕ್ಕ ಹಾಕಿದರೆ ಇಷ್ಟು ಅಲ್ಪಮಾತ್ರದ ತೆರಿಗೆಯಿಂದಲೇ ದೇಶದ ತೆರಿಗೆ ಸಂಗ್ರಹ ಈಗಿನ ಸಂಗ್ರಹದ ದುಪ್ಪಟ್ಟಾದರೂ ಆಗುವುದು ಖಾತ್ರಿ!
ಇದರ ಜೊತೆ ಜೊತೆಗೆ ಅನಿಲ್ ಬೋಕಿಲ್ರ ಅರ್ಥಕ್ರಾಂತಿ ತಂಡ ನೂರಕ್ಕೂ ಮೇಲ್ಪಟ್ಟ ಎಲ್ಲಾ ಮುಖ ಬೆಲೆಯ ನೋಟುಗಳನ್ನು ನಿಷೇಧಿಸುವ ಆಗ್ರಹ ಮಾಡಿಸುತ್ತಿದೆ. ಇಷ್ಟಕ್ಕೂ ದೇಶದ ಕನಿಷ್ಠ ಮುಕ್ಕಾಲು ಭಾಗ ಜನ ಬಡತನ ರೇಖೆಗಿಂತ ಕೆಳಗಿದ್ದಾರೆಂದು ಸಕರ್ಾರವೇ ಹೇಳಿದೆ. ಇವರಿಗೆ ದಿನವೊಂದಕ್ಕೆ ನೂರು ರೂಪಾಯಿ ದುಡಿಯೋದು ಕಷ್ಟ. ಇಂಥವರನ್ನು ಗಣನೆಗೆ ತೆಗೆದುಕೊಳ್ಳದೇ ಉಳಿದ ಕೆಲವೇ ಕೆಲವು ಸಿರಿವಂತರ ಉಪಯೋಗಕ್ಕೆಂದು ಐದುನೂರು, ಸಾವಿರದ ನೋಟುಗಳನ್ನು ಟಂಕಿಸಿ ಕೊಟ್ಟಿರುವುದರ ಲಾಭ ಯಾರಿಗೆ ಹೇಳಿ? ಸಕರ್ಾರಕ್ಕೆ ವಂಚಿಸಿ ಮನೆಯ ಅಡಿಯಲ್ಲಿ ಹಣ ಕೂಡಿಡುವ ಭ್ರಷ್ಟರಿಗೆ ಅಥವಾ ಈ ನೋಟುಗಳನ್ನು ಮುದ್ರಿಸಿ ನೇಪಾಳದ ಮೂಲಕ ಭಾರತಕ್ಕೆ ತುರುಕುವ ಪಾಕೀಸ್ತಾನಿ ಮಾಫಿಯಾ ಡಾನುಗಳಿಗೆ!

1947974
ಅಚ್ಚರಿಯಾದೀತು ನಿಮಗೆ. ದೇಶದಲ್ಲಿ ಮನೆಯಲ್ಲಿ ಮುಚ್ಚಿಟ್ಟಿರುವ ಕಪ್ಪು ಹಣ ಲೆಕ್ಕಕ್ಕೇ ಸಿಗದಷ್ಟು ಅಗಾಧ! ಹಾಗೆಯೇ ದೇಶದ ಒಟ್ಟಾರೆ ಕರೆನ್ಸಿಯಲ್ಲಿ ಹೆಚ್ಚು ಕಡಿಮೆ ಕಾಲುಭಾಗದಷ್ಟು ಖೋಟಾ ನೋಟುಗಳೇ. ಪಾಕೀಸ್ತಾನದಲ್ಲಂತೂ ಭಾರತದ ನೋಟುಗಳನ್ನು ಮುದ್ರಿಸಿ ಸಾಗಿಸುವ ವ್ಯವಸ್ಥಿತ ಜಾಲವೇ ಇದೆ. ಸಾವಿರವಾಗಲಿ, ಐನೂರಾಗಲಿ ಒಂದು ನೋಟನ್ನು ಮುದ್ರಿಸಿ ತಳ್ಳಲು ಸುಮಾರು ನಲವತ್ತು ರೂಪಾಯಿಯಷ್ಟು ಖಚರ್ಾಗುತ್ತದೆ. ಇನ್ನು ಅದಕ್ಕೆ ಒಂದಷ್ಟು ಕಮೀಷನ್ನು. ಹೀಗೆ ಕೂಡಿ ಕಳೆದರೂ ನೂರಾರು ರೂಪಾಯಿಗಳ ಲಾಭ. ಈಗೇನಾದರೂ ಈ ದೊಡ್ಡ ಮುಖಬೆಲೆಯ ನೋಟುಗಳನ್ನು ನಿಷೇಧಿಸಿಬಿಟ್ಟರೆ ಅಲ್ಲಿಗೆ ನೆಲಮಾಳಿಗೆಯಲ್ಲಿ ಮುಚ್ಚಿಟ್ಟ ನೋಟಿನ ಕಂತೆಗಳು ಹೊರಬರಲೇಬೇಕು ಅಥವಾ ಅದನ್ನು ಕೂಡಿಟ್ಟವರು ಅದರಲ್ಲಿಯೇ ಒಂದಷ್ಟುದಿನ ನೀರು ಕಾಯಿಸಿಕೊಂಡು ಸ್ನಾನ ಮಾಡಬೇಕು. ಹೀಗೆ ಈ ನೋಟುಗಳು ಹೊರಬಂದು ಬ್ಯಾಂಕಿಗೆ ಜಮಾವಣೆಯಾದರೆ ಬ್ಯಾಂಕುಗಳಲ್ಲಿ ಸಂಗ್ರಹಿಸಲ್ಪಟ್ಟ ಈ ಹಣ ಜನಸಾಮಾನ್ಯರ ಬಳಕೆಗೆ ಬರುತ್ತದೆ, ಅತಿ ಕಡಿಮೆ ಬಡ್ಡಿದರದಲ್ಲಿ ಸಾಲವೂ ಸಿಗುತ್ತದೆ.
ವಾಸ್ತವವಾಗಿ ಹಣ ಒಂದು ಮಾಧ್ಯಮ. ಅದು ಚಾಲ್ತಿಯಲ್ಲಿರಬೇಕೇ ಹೊರತು, ಜೇಬಿನಲ್ಲೋ, ಬೀರುವಿನಲ್ಲೋ, ನೆಲಮಾಳಿಗೆಯಲ್ಲೋ ಕೊಳೆಯಬಾರದು. ಹಾಗೆ ದೇಶದಲ್ಲಿ ಚಾಲನೆಗೆ ಬರದ ದುಡ್ಡು ದೇಹದಲ್ಲಿ ಸೂಕ್ತವಾಗಿ ಹರಿಯದ ರಕ್ತವಿದ್ದಂತೆ. ಅದು ಸ್ವಾಸ್ಥ್ಯವನ್ನು ಹಾಳುಗೆಡುವುದು ಖಾತ್ರಿ. ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರಕ್ಕೆ ಪ್ರೇರಣೆ ಕೊಟ್ಟ ರಾಜಕಾರಣಿಗಳು ಈ ದೇಶದ ಸಾಮಾನ್ಯ ಜನರ ಬದುಕು ಹಾಳು ಮಾಡಿದರು. ಈಗ ಅರ್ಥಕ್ರಾಂತಿಯ ಪ್ರಸ್ತಾವನೆ ಹೊಸದೊಂದು ಆಶಾಭಾವನೆ ಹುಟ್ಟಿಸಿದೆ. ಮೋದಿಯವರು ಇದನ್ನು ಒಪ್ಪಿಕೊಳ್ಳಬಹುದೆಂಬ ದೂರದ ಭರವಸೆಯೂ ಇದೆ. ಹೀಗಾಗಿಯೇ ಅವರು ಜನರನ್ನು ಬ್ಯಾಂಕಿನತ್ತ ಸೆಳೆದು ಆಥರ್ಿಕ ವಹಿವಾಟನ್ನು ನ್ಯಾಯಸಮಗೊಳಿಸಲು ಜನ್ಧನ್ ಯೋಜನೆಯನ್ನು ಜಾರಿಗೆ ತಂದರೆನಿಸುತ್ತದೆ. ಜಿಎಸ್ಟಿ ಜಾರಿಗೆ ತಂದು ತೆರಿಗೆ ವ್ಯವಸ್ಥೆಯನ್ನು ಹಿಡಿತಕ್ಕೆ ತಂದುಕೊಳ್ಳುವ ಯತ್ನ ಮಾಡಿದರು ಎಂದೂ ಎನಿಸುತ್ತದೆ. ಅಷ್ಟೇ ಅಲ್ಲ. ಈಗ ಚಂದ್ರಬಾಬು ನಾಯ್ಡುರಂಥವರು ಐದುನೂರು ಮತ್ತು ಸಾವಿರದ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಎನ್ನುವುದು ಅರ್ಥಕ್ರಾಂತಿಯ ಗತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿಯೇ ನವೆಂಬರ್ 11, 12, 13 ರಂದು ಪುಣೆಯ ಶನಿವಾರವಾಡಾದಲ್ಲಿ ಸೇರಲಿರುವ ಬೃಹತ್ ಜನ ಸಭೆ ಅರ್ಥಕ್ರಾಂತಿಯ ಅನುಷ್ಠಾನಕ್ಕೆ ಪ್ರಧಾನಮಂತ್ರಿಯವರಿಗೆ ಪ್ರೀತಿಯ ಆಗ್ರಹ ಮಂಡಿಸುತ್ತಿದೆ.
ಹೊಸದೊಂದು ಮನ್ವಂತರದ ಭರವಸೆ ಹೊತ್ತು ನಾವುಗಳೂ ಕಾಯುತ್ತಿದ್ದೇವೆ.

Leave a Reply