ವಿಭಾಗಗಳು

ಸುದ್ದಿಪತ್ರ


 

ಘಜ್ನಿ-ಘೋರಿಯರನ್ನೇ ನುಂಗಿದವರಿಗೆ ಅಮೀರ್ ಖಾನ್ ಯಾವ ಲೆಕ್ಕ!!

ಇಷ್ಟಕ್ಕೂ ಇಂದು ನಾವು ಸ್ವಲ್ಪ ಆಕ್ರೋಶಗೊಂಡಿರೋದು ಏಕೆ ಗೊತ್ತಾ? ಅಮೀರ್ಖಾನ್ ದೇಶ ಬಿಟ್ಟು ಹೋಗುವ ಮಾತಾಡಿದ ಅಂತ ಅಷ್ಟೇ. ನಮ್ಮ ಧರ್ಮ, ಆಚರಣೆ ಇವೆಲ್ಲವುಗಳಿಗಿಂತ ನಮಗೆ ದೇಶವೇ ದೊಡ್ಡದು. ಅದನ್ನು ನಾವು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಹಾಗೆ ಅದನ್ನ ಬಿಟ್ಟಮೇಲೆ ಇನ್ನು ಬದುಕಿದ್ದು ಪ್ರಯೋಜನವೇನು ಹೇಳಿ. ಹಾಗಂತ ಈಗಲೂ ಅಸಹಿಷ್ಣುಗಳಾಗಿಲ್ಲ. ಅಮೀರ್ನ ವಿರುದ್ಧ ಸಾಮಾಜಿಕ ತಾಣಗಳಲ್ಲಿ ನೋವು ತೋಡಿಕೊಳ್ಳುತ್ತಿದ್ದೇವೆ ಅಷ್ಟೇ. ಅಮೀರ್ ಖಾನ್ಗೆ ದೇಶವನ್ನೇ ದೂಷಿಸುವಷ್ಟು ವಾಕ್ ಸ್ವಾತಂತ್ರ್ಯ ಇರಬಹುದಾದರೆ, ನನಗೆ ಅವನನ್ನು ದೂಷಿಸುವಷ್ಟು ಬೇಡವೇ?

amir

ಶಾಂತವಾಗಿ, ಸದಾ ಸಂತುಷ್ಟವಾಗಿ, ಎಲ್ಲರನ್ನೂ ಪ್ರೀತಿಸುತ್ತ ಸಹಿಷ್ಣುವಾಗಿ ಇದ್ದ ಭಾರತದ ಮೇಲೆ ಘಜ್ನಿ-ಘೋರಿಯರು ದಾಳಿ ಮಾಡಿದರು. ಉದ್ದೇಶ ಲೂಟಿಗೈಯ್ಯುವುದೇ ಆಗಿತ್ತು. ಆದರೆ ಅವರು ಅಷ್ಟಕ್ಕೇ ತೃಪ್ತರಾಗದೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗೈದರು; ಮಂದಿರಗಳನ್ನು ಉರುಳಿಸಿ, ಮೂತರ್ಿಗಳನ್ನು ಭಗ್ನಗೈದರು. ಹಿಂದೂ ಧರ್ಮದೆಡೆಗಿನ ತಮ್ಮ ಅಸಹಿಷ್ಣುತೆಯನ್ನು ಚೆನ್ನಾಗಿಯೇ ಪ್ರದಶರ್ಿಸಿದರು. ನಲಂದಾದಂತಹ ವಿಶ್ವವಿದ್ಯಾಲಯಕ್ಕೆ ಬೆಂಕಿಹಚ್ಚಿ ಸಾಹಿತ್ಯ ನಷ್ಟ ಮಾಡಿದರು. ಬೌದ್ಧಿಕ ಸಂಪತ್ತನ್ನು ಸೂರೆಗೈದರು. ಹಿಂದುವಾಗಿರುವುದಕ್ಕೆ ತೆರಿಗೆ ಕಟ್ಟಿ ಬದುಕಬೇಕಾದ ವಾತಾವರಣ ನಿಮರ್ಿಸಿದರು. ಇವಿಷ್ಟನ್ನೂ ಕೇಳಿದಾಗ ಕಣ್ಣು ನಿಗಿ ನಿಗಿ ಕೆಂಡವಾಗುತ್ತದೆ; ರಕ್ತವೆಲ್ಲಾ ಕೊತಕೊತನೆ ಕುದ್ದು ಹೋಗುತ್ತದೆ. ಆದರೆ ಮರುಕ್ಷಣವೇ ನಾವು ಶಾಂತರಾಗಿಬಿಡುತ್ತೇವೆ. ಟಿಪ್ಪು ಮಾಡಿದ ತಪ್ಪಿಗೆ ಈಗಿನವರು ಹೇಗೆ ಹೊಣೆಯಾಗುತ್ತಾರೆಂದು ನಮಗೆ ನಾವೇ ಕೇಳಿಕೊಳ್ಳುತ್ತೇವೆ. ಏಕೆಂದರೆ ನಾವು ಸಹಿಷ್ಣುಗಳು!

ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಪಠ್ಯದಲ್ಲಿ ಶಿವಾಜಿಯ, ರಾಣಾ ಪ್ರತಾಪರ ಕಥೆ ಸೇರಿಸಿದರೆ ಒಂದು ವರ್ಗಕ್ಕೆ ನೋವಾಗಬಹುದೂಂತ ಅವರನ್ನು ಆಚೆಗಟ್ಟಿದೆವು. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಸಾವರ್ಕರರು ದೇಶ ವಿಭಜನೆಯ ಕಾಲದಲ್ಲಿ ಹಿಂದೂಗಳ ಪರವಾಗಿ ನಿಂತರೆಂಬ ಒಂದೇ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಿದೆವು. ಅದೇ ವೇಳೆಗೆ ವಿಭಜನೆಯ ಕಾಲಕ್ಕೆ ಮುಸಲ್ಮಾನರ ಪರವಾಗಿ ಮಾತನಾಡಿದವರು ನಮ್ಮಲ್ಲಿ ಸೆಕ್ಯುಲರ್ಗಳೆಂದು ಖ್ಯಾತರಾದರು. ನಾವೇ ಅವರ ಬೆಂಬಲಕ್ಕೆ ನಿಂತು ಅವರನ್ನು ಬೆಳೆಸಿದೆವು. ನಮ್ಮೊಳಗಿನ ಉರಿಯುತ್ತಿದ್ದ ಬೆಂಕಿಯನ್ನು ಆರಿಸಿಕೊಳ್ಳಲು ನಾವು ಕಂಡುಕೊಂಡ ಉಪಾಯ ಅದು. ಏಕೆ ಗೊತ್ತಾ? ನಾವು ಸಹಿಷ್ಣುಗಳು!

ವರ್ಷಕ್ಕೊಂದು ಮೆರವಣಿಗೆ ಮಾಡುವ ಹಬ್ಬ ನಮ್ಮದು, ಚೌತಿ! ಅದು ಸ್ವಾತಂತ್ರ್ಯೋತ್ಸವದ ಕಾಲಕ್ಕೆ ಶುರುವಾಯ್ತು. ನಮ್ಮೂರಲ್ಲಿ ನಾವು ಗಣೇಶನನ್ನು ಕೂರಿಸಿಕೊಂಡು ಯಾತ್ರೆ ಹೊರಟರೆ ನೀವು ಕ್ಯಾತೆ ತೆಗೆದಿರಿ. ಮಸೀದಿ ಎದುರಿಗೆ ಗಣೇಶ ಒಪ್ಪಲಾಗದು ಎಂದಿರಿ. ಯಾತ್ರೆ ಮಸೀದಿ ಎದುರಿಗೆ ಬಂದಾಗ ನಿಮ್ಮ ಮೌಲ್ವಿಗಳು ಬಂದು ಗಣೇಶನ ಪ್ರತಿಮೆಗೆ ನಾಲ್ಕು ಎಸಳು ಹೂವೇರಿಸಿ ಒಳ ಹೋಗಿಬಿಟ್ಟಿದ್ದರೆ ಉರುಸ್ ಬಂದಾಗ ನಮ್ಮವರು ಮನೆಯನ್ನೇ ಬಿಟ್ಟು ಕೊಟ್ಟುಬಿಡುತ್ತಿದ್ದರು. ನೀವು ನಿಮ್ಮವರನ್ನು ಭಡಕಾಯಿಸಿ ಗಣೇಶನ ಮೇಲೆ ಕಲ್ಲೆಸೆಯುವಂತೆ ಮಾಡಿದಿರಿ. ಮೂತರ್ಿ ಭಂಜಿಸಿದಿರಿ. ನಾವೇನು ಮಾಡಿದೆವು ಗೊತ್ತೇ? ಮುಂದಿನ ವರ್ಷ ನಿಮ್ಮ ರಸ್ತೆಗೇ ಬರಲಿಲ್ಲ. ನಮ್ಮೂರಿನಲ್ಲಿಯೇ ನಮ್ಮ ಗಣೇಶನಿಗೆ ಮೆರವಣಿಗೆ ಮಾಡಲು ಪೋಲೀಸರ ಸಹಾಯ ಕೇಳಿದೆವು. ದಿನಕ್ಕೊಂದು ಬಾರಿ ಅಜಾನ್ ಕೂಗುವಾಗ ನಾವೆಂದಾದರೂ ಕಲ್ಲೆಸೆದಿದ್ದೇವಾ? ಹೇಳಿ. ಇಷ್ಟಾದರೂ ‘ಎಲ್ಲರೂ ಒಂದೇ’ ಎಂದು ನಾವೇ ಡಂಗುರ ಬಾರಿಸಿದೆವು. ಏಕೆ ಗೊತ್ತಾ? ನಾವು ಸಹಿಷ್ಣುಗಳು!

ಅದು ಬಿಡಿ. ಭಾರತ-ಪಾಕ್ ಕ್ರಿಕೆಟ್ ಮ್ಯಾಚ್ ನಡೆವಾಗಲೆಲ್ಲ ಒಂದಷ್ಟು ಜನ ಪಾಕ್ ಗೆಲುವಿಗೆ ಪಟಾಕಿ ಸಿಡಿಸುತ್ತಿದ್ದರು. ನಾವು ಆಗಲೂ ಸ್ತಿಮಿತ ಕಳೆದುಕೊಳ್ಳಲಿಲ್ಲ. ಅನೇಕ ತರುಣ ಸಂಘಟನೆಗಳು ಹುಟ್ಟಿಕೊಂಡು ಕೈಯ್ಯಲ್ಲಿ ಪಾಕಿಸ್ತಾನ ಧ್ವಜಗಳು ಹಾರಾಡಿದವು. ಸ್ವಲ್ಪ ಕಿರಿಕಿರಿ ಎನ್ನಿಸಿದರೂ ಇಂದೋ ನಾಳೆಯೋ ಸರಿ ಹೋಗಬಹುದೆಂದು ಸುಮ್ಮನಾದೆವು. ಅಮರ್ ಜವಾನ್ನ ಶಿಲ್ಪವನ್ನು ನಿಮ್ಮ ಒಂದಷ್ಟು ಜನ ಒದೆಯುವ ಚಿತ್ರ ಈಗ ನೋಡಿದಾಗಲೂ ಹೊಟ್ಟೆಯಲ್ಲಿ ತಳಮಳವಾಗುತ್ತದೆ. ಆದರೆ ನಾವು ಪ್ರತಿಕ್ರಿಯೆ ತೋರಲಿಲ್ಲ. ಕೆಲವು ಕೆಟ್ಟ ಜನ ಎಲ್ಲಾ ಕಡೆ ಇರುತ್ತಾರೆ ಅಂತ ನಿಮಗಿಂತ ಜೋರಾಗಿ ನಾವೇ ಭಾಷಣ ಮಾಡಿದೆವು. ಏಕೆ ಗೊತ್ತಾ? ನಾವು ಸಹಿಷ್ಣುಗಳು.

ಬಾಟ್ಲಾ ಎನ್ಕೌಂಟರಿನಲ್ಲಿ ಉಗ್ರರನ್ನು ಪೊಲೀಸರು ಕೊಂದರು. ಅವತ್ತು ಅನೇಕರು ಅವರ ಬೆಂಬಲಕ್ಕೆ ನಿಂತಿರಿ. ಸಂಸತ್ತಿನ ಮೇಲೆ ದಾಳಿಗೈದ ಉಗ್ರ ಅಫ್ಜಲ್ನನ್ನು ನೇಣಿಗೇರಿಸಿದಾಗ ನೀವು ಸಕರ್ಾರದ ನಿಯತ್ತನ್ನೇ ಪ್ರಶ್ನಿಸಿದಿರಿ. ಯಾಕೂಬ್ ಮೆನನ್ ಗಲ್ಲಿಗೇರಿಸಿದಾಗ ಹತ್ತು ಸಾವಿರ ಜನ ಅಂತ್ಯ ಸಂಸ್ಕಾರಕ್ಕೆ ಸೇರಿ, ರಾಷ್ಟ್ರವನ್ನೂ ದೂಷಿಸಿದಿರಿ. ಅವತ್ತು ತೀರಿಕೊಂಡವರು ನಿಮ್ಮವರು ಕೊಂದವರು ಹಿಂದೂಗಳೆನಿಸಿತು ನಿಮಗೆ. ಅದೇ ಮುಂಬೈನಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಅಮಾಯಕರು ಬಲಿಯಾದಾಗ ‘ಭಯೋತ್ಪಾದಕರಿಗೆ ಧರ್ಮವಿಲ್ಲ’ ಎಂದಿರಿ. ಇದ್ಯಾವುದೂ ನಮಗೆ ಗೊತ್ತಾಗೋದಿಲ್ಲ ಅಂದ್ಕೊಂಡ್ರಾ. ಗೊತ್ತಾಗುತ್ತೆ. ಆದರೆ ನಾವು ಸಹಿಸಿಕೊಳ್ಳುತ್ತೇವೆ. ಯಾಕೆ ಗೊತ್ತಾ? ನಮ್ಮಪ್ಪ, ಅಜ್ಜ, ಮುತ್ತಜ್ಜ, ಎಲ್ಲರೂ ಇದನ್ನೇ ನಮಗೆ ಹೇಳಿಕೊಟ್ಟಿರೋದು.

ಇಷ್ಟಕ್ಕೂ ಇಂದು ನಾವು ಸ್ವಲ್ಪ ಆಕ್ರೋಶಗೊಂಡಿರೋದು ಏಕೆ ಗೊತ್ತಾ? ಅಮೀರ್ಖಾನ್ ದೇಶ ಬಿಟ್ಟು ಹೋಗುವ ಮಾತಾಡಿದ ಅಂತ ಅಷ್ಟೇ. ನಮ್ಮ ಧರ್ಮ, ಆಚರಣೆ ಇವೆಲ್ಲವುಗಳಿಗಿಂತ ನಮಗೆ ದೇಶವೇ ದೊಡ್ಡದು. ಅದನ್ನು ನಾವು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಹಾಗೆ ಅದನ್ನ ಬಿಟ್ಟಮೇಲೆ ಇನ್ನು ಬದುಕಿದ್ದು ಪ್ರಯೋಜನವೇನು ಹೇಳಿ. ಹಾಗಂತ ಈಗಲೂ ಅಸಹಿಷ್ಣುಗಳಾಗಿಲ್ಲ. ಅಮೀರ್ನ ವಿರುದ್ಧ ಸಾಮಾಜಿಕ ತಾಣಗಳಲ್ಲಿ ನೋವು ತೋಡಿಕೊಳ್ಳುತ್ತಿದ್ದೇವೆ ಅಷ್ಟೇ. ಅಮೀರ್ ಖಾನ್ಗೆ ದೇಶವನ್ನೇ ದೂಷಿಸುವಷ್ಟು ವಾಕ್ ಸ್ವಾತಂತ್ರ್ಯ ಇರಬಹುದಾದರೆ, ನನಗೆ ಅವನನ್ನು ದೂಷಿಸುವಷ್ಟು ಬೇಡವೇ?

ಹೋಗಲಿ ಅಮೀರ್ ಈ ದೇಶದ ಮಾದರಿ ವ್ಯಕ್ತಿಯಾಗಲು ಯೋಗ್ಯನಾ? ದೇಶದ ಪ್ರಶಸ್ತಿಗಳನ್ನೆಲ್ಲಾ ‘ಬೇಕಾಗಿಲ್ಲ’ ಎನ್ನುವಂತೆ ವತರ್ಿಸುವ ಈತ ಲಗಾನ್ಗೆ ಆಸ್ಕರ್ ಕೊಡಿಸಲು ಸುಮಾರು 9 ಕೋಟಿ ಖಚರ್ು ಮಾಡಿದ್ದನ್ನು ಅಲ್ಲಗಳಯುತ್ತೀರಾ? ಥ್ರೀ ಇಡಿಯಟ್ಸ್ನ ಕಥೆಗೆ ಪ್ರೇರಣೆ ಚೇತನ್ ಭಗತ್ರ ಕೃತಿ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಅದರ ಗೌರವವನ್ನು ಅವರಿಗೆ ಕೊಡಲು ನಿರಾಕರಿಸಿದವ ಆತ. ರಂಗ್ ದೇ ಬಸಂತಿ ಬಿಡುಗಡೆಗೆ ಮುನ್ನ ನರ್ಮದಾ ಬಚಾವೋ ಆಂದೋಲನ, ತಲಾಶ್ಗೆ ಮುನ್ನ ಅಣ್ಣಾ ಹಜಾರೆಯವರ ಆಂದೋಲನಕ್ಕೆ ಹೋಗಿ ಬಂದು ಹೆಸರು ಗಿಟ್ಟಿಸಿದ. ಆಮೇಲೆಂದಿಗೂ ಅತ್ತ ತಲೆಯೂ ಹಾಕಲಿಲ್ಲ ಪುಣ್ಯಾತ್ಮ. ಬಾಡಿಗೆ ತಾಯಂದಿರ ಬಗ್ಗೆ ಅವರ ಸಂಕಟಗಳ ಬಗ್ಗೆ ಸತ್ಯಮೇವ ಜಯತೆಯಲ್ಲಿ ಮಾತನಾಡಿದವ ತನ್ನ ಮಗುವಿಗೆ ಬಾಡಿಗೆ ತಾಯಿಯೇ ಬೇಕೆಂದು ದುಂಬಾಲು ಬಿದ್ದದ್ದು ನೆನಪಿದೆಯಾ? ಎಐಬಿಯವರು ಮಾಡಿದ ವೀಡಿಯೋ ಭಾಷೆ ಕೆಟ್ಟದಾಗಿದೆಯೆಂದು ಉಗಿದು ಉಪ್ಪಿನಕಾಯಿ ಹಾಕಿದ್ದ ಅಮೀರ್ನ ‘ಡೆಲ್ಲಿ ಬೆಲ್ಲಿ’ ಸಿನಿಮಾ ನೋಡಿದ್ದೀರಾ? ಅದು ಸೊಂಟದ ಕೆಳಗಿನ ಭಾಷೆಗಳ ಬಳಕೆಯಿಂದಲೇ ಹೆಸರು ಮಾಡಿದ್ದು. ಎಲ್ಲಾ ಬಿಡಿ. ಪೀಕೆಯಲ್ಲಿ ಹಿಂದೂ ಆಚರಣೆಗಳನ್ನು, ಮೂತರ್ಿ ಪೂಜೆಯನ್ನು ಅಣಕಿಸುವ ಅಮೀರ್, ಹಜ್ಗೆ ಹೋಗಿ ಬಂದು ಅಂತಮರ್ುಖಿಯಾಗಲು ಪ್ರೇರಣೆ ದಕ್ಕಿತು ಎಂದು ಟ್ವೀಟ್ ಮಾಡಿದ್ದನಲ್ಲ. ಮಿಸ್ಟರ್ ಅಮೀರ್, ಸೈತಾನನಿಗೆ ಕಲ್ಲು ಹೊಡೆಯುವ ಆಚರಣೆ ಅತಿ ವೈಜ್ಞಾನಿಕವೇ? ಅಥವಾ ಮೂಲ ಮಂಟಪಕ್ಕೆ ಪ್ರದಕ್ಷಿಣೆ ಬರುವ ಕ್ರಿಯೆ ಆಧುನಿಕವೇ? ಹೇಳಪ್ಪ ದೊರೆ.

ಪಾಕಿಸ್ತಾನ ಭೂಕಂಪಕ್ಕೆ ಸಿಕ್ಕು ನೊಂದುಕೊಂಡೊಡನೆ ಪರಿಹಾರ ಕೊಡುತ್ತೇವೆಂದು ನೀವುಗಳು ಧಾವಿಸಿದಿರಲ್ಲ; ಇಲ್ಲಿನ ರೈತ ತೀರಿಕೊಂಡಾಗ ಕಣ್ಣೀರಿಟ್ಟಿದ್ದೀರೇನು? ನಾಚಿಕೆಯಾಗಬೇಕು ನಿಮಗೆ. ನಾನಾ ಪಾಟೇಕರ್ ಮತ್ತು ಅಕ್ಷಯ್ ಕುಮಾರ್ ಕೋಟ್ಯಂತರ ರೂಪಾಯಿಯನ್ನು ರೈತರಿಗೆ ಪರಿಹಾರವಾಗಿ ಕೊಟ್ಟಾಗ ಬಾಯ್ಮುಚ್ಚಿ ಕುಳಿತ ನೀವು ಈಗ ಊರೆಲ್ಲಾ ಹರಟುತ್ತಿದ್ದೀರಿ. ದೇಶ ಬಿಟ್ಟು ಹೋಗುವ ಮಾತನಾಡುತ್ತಿದ್ದೀರಿ. ನಾನಾ ಮತ್ತು ಅಕ್ಷಯ್ರಂತೆ ನೀವೇನಾದರು ಈ ದೇಶದ ರೈತರಿಗೆ ಒಂದು ಹನಿ ಕಣ್ಣೀರು ಸುರಿಸಿಬಿಟ್ಟಿದ್ದರೂ ನಮ್ಮ ಮಾಧ್ಯಮಗಳು ನಿಮ್ಮನ್ನು ಅಬ್ದುಲ್ ಕಲಾಂರಿಗಿಂತ ಎತ್ತರಕ್ಕೊಯ್ದು ನಿಲ್ಲಿಸಿ ಬಿಡುತ್ತಿದ್ದವು. ಪಾಪ! ನಾನಾ-ಅಕ್ಷಯ್ ಇಬ್ಬರೂ ಹಿಂದೂಗಳಲ್ಲವೇ? ಅದಕ್ಕೇ ಅವರಿಗೆ ಆ ಭಾಗ್ಯವಿಲ್ಲ. ಇಷ್ಟಾದರೂ ನಾವು ಸುಮ್ಮನಿದ್ದೇವೆ. ಯಾಕೆ ಗೊತ್ತಾ? ನಾವು ಸಹಿಷ್ಣುಗಳು!

amir2

ಅಮೀರ್ ಖಾನ್ನಂತಹ ಕಲಾವಿದರ ಜವಾಬ್ದಾರಿ ಏನು ಗೊತ್ತೇ? ತಮ್ಮ ಕಲೆಯಿಂದ ಜಗತ್ತನ್ನು ತಿವಿಯುವುದು, ತಿದ್ದುವುದು. ಆಮೇಲೆ ಬದುಕಲು ಯೋಗ್ಯವಾಗುವಂತೆ ಮಾಡುವುದು. ಅದನ್ನು ಬಿಟ್ಟು ಈ ರೀತಿ ಭಡಕಾಯಿಸಿದರೆ ಕೈಲಿ ಕಾಸಿಲ್ಲದ, ಪಾಸ್ಪೋಟರ್್ ಇಲ್ಲದ, ವೀಸಾ ಸಿಗದ ಪಾಪದ ಮುಸಲ್ಮಾನ ಏನು ಮಾಡಬೇಕು? ಅವನೆಲ್ಲಿಗೆ ಹೋಗಬೇಕು! ಒಂದೋ ಆತ ಇಲ್ಲಿಯೇ ಸಾಯಬೇಕು; ಇಲ್ಲವೇ ಇತರರನ್ನು ಕೊಲ್ಲಬೇಕು. ಸಾಮಾನ್ಯ ವ್ಯಕ್ತಿಯೊಬ್ಬನನ್ನು ಅಸಹಿಷ್ಣುಗೊಳಿಸಿದ ಅಮೀರ್ನಂಥವರನ್ನು ಏನು ಮಾಡಬೇಕು ಹೇಳಿ. ಹಾಗಂತ ನಾವು ಂಏ47 ಹಿಡಿದು ಅವರನ್ನು ಕೊಲ್ಲುವುದಿಲ್ಲ; ತಸ್ಲೀಮಾಳನ್ನು ಓಡಿಸಿದಂತೆ ದೇಶ ಬಿಟ್ಟು ಓಡಿಸುವುದಿಲ್ಲ. ಏಕೆ ಗೊತ್ತಾ? ಸಹಿಸುವುದು ನಮಗೆ ರೂಢಿಯಾಗಿಬಿಟ್ಟಿದೆ!

ಅಬ್ದುಲ್ ಕಲಾಂರು ತೀರಿಕೊಂಡಾಗ ನನ್ನೊಬ್ಬ ಮಿತ್ರ ಕರೆ ಮಾಡಿ ‘ಅಪ್ಪನನ್ನು ಕಳಕೊಂಡ ಮೇಲೆ ಇವತ್ತೇ ಅಳುತ್ತಿರೋದು’ ಅಂದ. ಯಾಕೋ ಹೃದಯ ತುಂಬಿ ಬಂತು. ಅವತ್ತು ನಮ್ಮಲ್ಲಿ ಅನೇಕರ ಫೇಸ್ ಬುಕ್ ಡಿ.ಪಿ ಬದಲಾಗಿಬಿಟ್ಟಿತ್ತು. ನಾವ್ಯಾರೂ ಕಲಾಂರ ಜಾತಿ ಯಾವುದು ಅಂತ ಕೇಳಲೇ ಇಲ್ಲ. ಜಾಕಿರ್ ಹುಸೆನ್ರ ತಬಲಾಕ್ಕೆ, ಅಮ್ಜದ್ರ ಸರೋದ್ ವಾದನಕ್ಕೆ, ಬಿಸ್ಮಿಲ್ಲಾರ ಶಹನಾಯಿಗೆ, ಮೊಹಮ್ಮದ್ ರಫಿಯ ಹಾಡಿಗೆ, ಎ.ಆರ್. ರೆಹಮಾನ್ರ ಸಂಗೀತಕ್ಕೆ ಹಿಂದು ಎಂದಾದರೂ ಜಾತಿಯ ಸೋಂಕು ಹಚ್ಚಿದ್ದನೇನು? 1965ರ ಯುದ್ಧದ ವಿವರಣೆ ಕೊಡುವಾಗ ಅಬ್ದುಲ್ ಹಮೀದ್ರ ಕುರಿತಂತೆ ಮಾತನಾಡುವಾಗ ಎದೆ ಉಬ್ಬಿ ಬರುತ್ತಲ್ಲ, ಅವನು ಅಮೀರ್ ಖಾನ್ರ ಜಾತಿಯವನಾ ಅಂತ ಯೋಚನೇನು ಮಾಡೋಲ್ಲ ನಾವು! ಏಕೆ ಗೊತ್ತಾ? ನಾವು ಸಹಿಷ್ಣುಗಳಲ್ಲ ಬದಲಿಗೆ ಅಲ್ಲಾಹ್ನ ಮಾರ್ಗವನ್ನೂ ಒಪ್ಪಿಕೊಳ್ಳುವ ಜನ. ಅದಕ್ಕೇ ಹಿಂದೂಸ್ತಾನದ ಆಚಾರ ಪರಂಪರೆ ಇಂದಿಗೂ ಉಳಿದುಕೊಂಡು ಬಂದಿದೆ. ಬಿಡಿ. ಘಜ್ನಿ-ಘೋರಿಯರನ್ನೇ ನುಂಗಿ ನೀರು ಕುಡಿದ ಹಿಂದುಸ್ತಾನಕ್ಕೆ ಅಮೀರ್ ಖಾನ್ ಯಾವ ಲೆಕ್ಕ!

ಅದಾಗಲೇ ಯೂರೋಪಿನಿಂದ ಒದೆ ತಿಂದು ಪಾಕೀ ನಿರಾಶ್ರಿತರು ಮರಳಿ ಬರುತ್ತಿದ್ದಾರೆ. ಟಕರ್ಿಯಂತಹ ರಾಷ್ಟ್ರಗಳು ಅವಸಾನದ ಅಂಚಿಗೆ ಬಂದಿವೆ. ಜಗತ್ತು ಒಟ್ಟಾಗಿದೆ. ಅರಬ್ ರಾಷ್ಟ್ರಗಳಿಗೂ ಉಳಿಗಾಲವಿಲ್ಲ. ಅಮೀರ್ ಬೇರೆಡೆಗೆ ಹೋಗುವುದಿರಲಿ; ಅಲ್ಲಿನ ಜನರೂ ನಮ್ಮ ಕಾಲಿಗೆ ಬಿದ್ದು ತಮ್ಮನ್ನೂ ಸೇರಿಸಿಕೊಳ್ಳಬೇಕೆಂದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಅಚ್ಚೇದಿನ್ ಬರುತ್ತಿದೆ. ನಮಗಷ್ಟೇ ಅಲ್ಲ; ಜಗತ್ತಿಗೆ ಕೂಡ!!

Leave a Reply