ವಿಭಾಗಗಳು

ಸುದ್ದಿಪತ್ರ


 

ಏಸು ಕ್ರಿಸ್ತ ಮತ್ತು ಭಾರತ…

ಶಿಲುಬೆಗೇರಿಸಲಾಗಿದ್ದ ಏಸುಕ್ರಿಸ್ತರು ಮೃತರಾಗಲಿಲ್ಲ. ತಮ್ಮ ಅನುಯಾಯಿಗಳ ಸಹಾಯದಿಂದ ಬದುಕುಳಿದ ಅವರು ಗ್ರೇಟ್ ಬ್ರಿಟನ್ನಿನ ಕಡೆ ಹೊರಟರು. ಅಲ್ಲಿಂದ ಮೆಡಿಟರೇನಿಯನ್ ಪ್ರಾಂತ್ಯಕ್ಕೆ, ಅಲ್ಲಿಂದ ತಮ್ಮ ಗುರಿಯಾಗಿದ್ದ ಭಾರತಕ್ಕೆ!

ಮುಂದಿನ ಓದಿಗೆ ಇಲ್ಲಿ ಕ್ಲಿಕ್ ಮಾಡಿ

ಅಂದ ಹಾಗೆ, ಡಾವಿಂಚಿ ಕೋಡ್ ನೋಡಿರುವಿರಾ? ಸುಮ್ಮನೆ ಕೇಳಿದೆ.

– ವಂದೇ,

ಚಕ್ರವರ್ತಿ, ಸೂಲಿಬೆಲೆ

5 Responses to ಏಸು ಕ್ರಿಸ್ತ ಮತ್ತು ಭಾರತ…

  1. Tina

    ಚಕ್ರವರ್ತಿಯವರೆ,
    ಶಾಲಿವಾಹನ ಈಸಾ ಮಸೀಹಾ ಎಂಬ ಸಂತನನ್ನು ಭೇಟಿಮಾಡಿದ ಕುರಿತು ಓದಿ ಡ್ಯಾನ್ ಬ್ರೌನನ ’..ಕೋಡ್’ ಓದಿದಷ್ಟೆ ರೋಮಾಂಚನವಾಯಿತು. ಆದರೆ ಶೇಕ್ ಸ್ಪಿಯರ್, ಅಲೆಕ್ಸಾಂಡರ್, ಹಿಟ್ಲರ್, ಬೋಸ್ ಮುಂತಾದ ಅನೇಕ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಅವರ ಲೆಗಸಿಯ ಬಗ್ಗೆ ಕೂಡ ಅನೇಕಾನೇಕ ಕಾನ್ಸ್ಪಿರೆಸಿ ಥಿಯರಿಗಳಿರುವುದನ್ನ ಕೂಡ ನಾವು ಮರೆಯಬಾರದು. ಬಯ್ಬಲ್ಲಿನ ಹೊಸ ಟೆಸ್ಟಮೆಂಟುಗಳು ಒಂದು ಕಥೆ ಹೇಳಿದರೆ ನಾಗ್ ಹಮ್ಮಿಡಿಯ ಡೆಡ್ ಸೀ ಸ್ಕ್ರೋಲ್ಸ್ ಇನ್ನೊಂದು ಕಥೆ ಹೇಳುತ್ತವೆ!! ಸತ್ಯ ನಮ್ಮ ಕಣ್ಣೆದುರೆ ನಗ್ನವಾಗಿ ನಿಂತರೂ ಅದಕ್ಕೆ ಬಟ್ಟೆ ಹೊದಿಸಿ ಸುಮ್ಮನಾಗುವ ಚಾಳಿಯಿರುವ ಸಮಾಜ ನಮ್ಮದು. ಯಾವುದನ್ನು ನಂಬೋಣ, ಯಾವುದನ್ನು ಬಿಡೋಣ, ಈ ತ್ರಿಶಂಕುಸ್ಥಿತಿಯಲ್ಲೆ ನೇತಾಡುತ್ತಿರಬೇಕೋ ಏನೊ?
    -ಟೀನಾ.

  2. neelanjana

    ಚಕ್ರವರ್ತಿ ಅವರೆ, ನಮಸ್ಕಾರ.

    ಈ ವಿಷಯದಲ್ಲಿ ೭೦ರ ದಶಕದಲ್ಲಿ ಕಸ್ತೂರಿಯಲ್ಲಿ ಪ್ರಕಟವಾಗಿದ್ದ ಲೇಖನವೊಂದು ಓದಿದ್ದು ನೆನಪಾಯಿತು. ಕಾಶ್ಮೀರದ ಯೇಸುವಿನ ಸಮಾಧಿಯಲ್ಲಿ ಯೇಸುವಿನ ಕೂದಲಿಗೋ (ಅಥವಾ ಉಗುರಿಗೋ) ಪೂಜೆ ಮಾಡುವರು ಎಂತಲೂ ಅಲ್ಲಿ ಇತ್ತೆಂದು ನೆನಪು. ಆಮೇಲೆ,ಭವಿಷ್ಯತ್ಪುರಾಣದಲ್ಲಿನ (ನೀವು ಕೊಟ್ಟಿರುವ) ಶ್ಲೋಕಗಳನ್ನೂ ಹುಡುಕಿ ಓದಿದ್ದೆ. ಹೀಗೇಕೆ ಆಗಿರಬಾರದು ಎಂದು ಖಂಡಿತ ಎನಿಸುತ್ತೆ.

    ಒಂದು ವಿಷಯ ಹೇಳುವುದನ್ನು ನೀವು ಮರೆತಿರಾ – ಭವಿಷ್ಯತ್ಪುರಾಣ ದಲ್ಲಿ ಎಲ್ಲವೂ ಮುಂದೆ ನಡೆಯುವ ರೀತಿಯಲ್ಲಿ ಬರೆದಿದ್ದರೂ, ಅದನ್ನು ಆಯಾ ಘಟನೆಗಳು ಆದ ನಂತರವೇ ಬರೆದಿರುವುದೆಂಬ ಅಭಿಪ್ರಾಯ ಇದೆ ಅಲ್ಲವೇ? ನನಗೆ ಅದು ಸರಿ ಎನ್ನಿಸುತ್ತೆ ಕೂಡ. ಚರಿತ್ರೆಯ ಬಗ್ಗೆ ಹೇಳುವಾಗ ಒಂದು ರೀತಿಯ ದೂರದಿಂದ ಹೇಳುವಾಗ – ಉದಾಹರಣೆಗೆ “ಅಯೋಧ್ಯೆಯಲ್ಲಿ ದಶರಥನೆಂಬ ರಾಜನಿರುವನು – ಅವನಿಗೆ ನಾಕು ಮಕ್ಕಳಾಗುವುದು. ಮೊದಲ ಮಗ ರಾಮನಿಗೆ ಪಟ್ಟ ತಪ್ಪಿಹೋಗುವುದು…” ಇವೇ ಮೊದಲಾದ ವಾಕ್ಯಗಳಲ್ಲಿ, ಕಥೆ ಭೂತಕಾಲದ್ದಾದರೂ, ಭವಿಷ್ಯಕಾಲದ ಕ್ರಿಯಾಪದಗಳು ಇರುವುದನ್ನು ನೋಡಬಹುದಲ್ಲವೇ?

    ಈ ದೃಷ್ಟಿಯಲ್ಲಿ ಭವಿಷ್ಯತ್ ಪುರಾಣದಲ್ಲಿ ಹೇಳಿರುವುದನ್ನು ಚಾಣಕ್ಯ, ಇಸ್ಲಾಂ ಅಥವಾ ಬುದ್ಧನ ಮುನ್ಸೂಚನೆಯಲ್ಲದೆ, ಅವರ ಚರಿತ್ರೆಯನ್ನು (ಭವಿಷ್ಯತ್ತಿಗೆ) ದಾಖಲಿಸುವ ಪ್ರಯತ್ನ ಯಾಕಾಗಿರಬಾರದು? ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಿರಾ?

    -ನೀಲಾಂಜನ

  3. sunaath

    ಚಕ್ರವರ್ತಿಯವರೆ,
    ಟೀನಾ ಮತ್ತು ನೀಲಾಂಜನ ಇವರ ಟಿಪ್ಪಣಿಗಳು ಹಿಡಿಸಿದವು. ನಾನು ಅನೇಕ ವರ್ಷಗಳ ಹಿಂದೆ, ಆಗ ಪ್ರಕಟವಾಗುತ್ತಿದ್ದ Illustrated Weekly of Indiaದಲ್ಲಿ ಒಂದು ಲೇಖನ ಓದಿದ್ದೆ. ಅದರಲ್ಲಿ ಯೇಶು ಈತನು ಓರ್ವ ರೋಮನ್ ಯೋಧನಿಗೆ ವೇಷ್ಯೆಯಲ್ಲಿ ಹುಟ್ಟಿದ ಮಗನಿರಬಹುದೆನ್ನುವ theoryಯ ಬಗೆಗೆ ಬರೆಯಲಾಗಿತ್ತು. My point is this: ಯುರೋಪಿಯನ್ನರು ಇಂತಹ ಸಂಶೋಧನೆಗಳನ್ನು ಎಷ್ಟು proper spiritನಲ್ಲಿ ತೆಗೆದುಕೊಳ್ಳುತ್ತಾರಲ್ಲ! ಅಷ್ಟರಲ್ಲಿಯೇ ಭಾರತದಲ್ಲಿ ನೋಡಿರಿ. ಶ್ರೀ ಎಮ್.ಎಮ್.ಕಲಬುರ್ಗಿಯವರು ಚನ್ನಬಸವೇಶ್ವರನ ಬಗೆಗೆ
    ಎಲ್ಲರಿಗೂ ಗೊತ್ತಿದ್ದ ಕತೆಯನ್ನೇ ತಮ್ಮ “ಮಾರ್ಗ”ದಲ್ಲಿ ಬರೆದಾಗ ಅದರ ಬಗೆಗೆ ಎಂಥಾ ಗಲಾಟೆಯಾಯಿತು. ಓರ್ವ ಪ್ರವಾದಿಯ ಹೆಸರಿನ ಕಥಾನಾಯಕನ ಕತೆ Deccan Heraldದಲ್ಲಿ ಬಂದಾಗ ಇಲ್ಲಿ ಎಂಥಾ
    ಗಲಾಟೆಯಾಯಿತು. Even ‘Da Vinchi Code ಬಗೆಗೆ ಭಾರತದಲ್ಲಿ
    ಸ್ವಲ್ಪ ಮಟ್ಟಿಗೆ ಗಲಾಟೆಯಾಯಿತೇ ಹೊರತು ಯುರೋಪಿನಲ್ಲಾಗಲಿಲ್ಲ. ಒಟ್ಟಿನಲ್ಲಿ ಭಾರತದಲ್ಲಿ ವಿಚಾರಸ್ವಾತಂತ್ರ್ಯದ ವಿಷಯದಲ್ಲಿ ಸಾಕಷ್ಟು ಅಸಹಿಷ್ಣುತೆ ಇದೆ ಅಲ್ಲವೆ?

  4. neelanjala

    hechchagi eradu tingala hinde National geo.dalli ‘Da Vinchi Code’ n yesu bagge vandu programm bandittu. Da Vinchi Code nalli iruvudara satya hudukutta hoguvudara bagge. alli bareda ella factgala baggeyu hudukutta hoguvudu. main agi yesu hendati(?) bagge. filmnalli torisida tarahada jagagalu nijavagiyu ive. but lastnalli authentic(dna) proof sigade iro karana , writer ella factgalnnu link madi bareda mere a imagination anta concludege baralagutte.

    amele yesu shavakke hodisiddu ennalaguva batteya baggeyu bandittu.

    eradu tumba chennagittu.nivu nodiddira?

  5. Chakravarty

    ನಮಸ್ತೇ ನೀಲಾಂಜನರೇ,
    ನಾನು ಅವನ್ನು ನೋಡಲಾಗಲಿಲ್ಲ. ಏಸು ಮಾತ್ರವಲ್ಲ, ಪಾಶ್ಚಾತ್ಯ ಸಂಸ್ಕೃತಿ, ಧರ್ಮ ಮತ್ತಿತರ ಸಂಗತಿಗಳ ಬಗ್ಗೆ ಬಹಳಷ್ಟು ಕುತೂಹಲಕರ ಅಂಶಗಳನ್ನು ಇತ್ತೀಚೆಗೆ ಓದುತ್ತಿರುವೆ. ಬಹಳ ಆಸಕ್ತಿಕರವಾಗಿವೆ. ಆ ನಿಟ್ಟಿನಲ್ಲಿ ಬರವಣಿಗೆ ಸಾಗಬೇಕಿರುವುದರಿಂದ ವೈಯಕ್ತಿಕ ಸಂಶೋಧನೆಯೂ ನಡೆದಿದೆ.
    ಇಂತಹ ಕಾರ್ಯಕ್ರಮಗಳ ಬಗ್ಗೆ ನಿಮಗೆ ಪೂರ್ವ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ. ಸಮಯ ಮಾಡಿಕೊಂಡು ಅಗತ್ಯವಾಗಿ ನೋಡುತ್ತೇನೆ.
    ಧನ್ಯವಾದ.
    ವಂದೇ,
    ಚಕ್ರವರ್ತಿ