ವಿಭಾಗಗಳು

ಸುದ್ದಿಪತ್ರ


 

ಆಸ್ಟ್ರೇಲಿಯಾದಲ್ಲಿ ‘ನನ್ನ ಕನಸಿನ ಕರ್ನಾಟಕ’

ಆಸ್ಟ್ರೇಲಿಯಾಕ್ಕೆ ಈ ದೇಶದಿಂದ ಬಹುತೇಕರು ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕೆಲವರು ಇಲ್ಲಿನ ಕಂಪನಿಗಳಿಂದಲೇ ವರ್ಗವಾಗಿ ಹೋಗುತ್ತಾರೆ. ಕೆಲವರು ಕೃಷಿಕರಾಗಿ ಹೋಗುತ್ತಾರೆ. ಮತ್ತೂ ಕೆಲವರು ಅವಕಾಶಗಿಟ್ಟಿಸಿಕೊಳ್ಳಲೆಂದೇ ಅಲ್ಲಿ ಹೋಗಿ ನೆಲೆಸುತ್ತಾರೆ. ಅಲ್ಲಿನ ಅನೇಕ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳೆಂದರೆ ಭಾರತ ಮತ್ತು ಚೀನಾದವರೇ. ಆಟ-ಪಾಠಗಳಲ್ಲೆಲ್ಲಾ ಇವರುಗಳೇ ಮುಂದು. ಸಕರ್ಾರದ ಯಾವ ವಿದ್ಯಾಥರ್ಿವೇತನವಿದ್ದರೂ ಇವರುಗಳ ಬುಟ್ಟಿಗೇ. ಇನ್ನೊಂದಿಪ್ಪತ್ತು ವರ್ಷ ಕಳೆದರೆ ಇದು ಬಲು ದೊಡ್ಡ ಸಮಸ್ಯೆಯಾಗಲಿದೆ.

ಆಸ್ಟ್ರೇಲಿಯಾದಲ್ಲಿ ಕನ್ನಡ ಮನಸುಗಳೊಂದಿಗೆ ಸಂಭಾಷಿಸುವ ಅವಕಾಶ ದೊರೆತಿತ್ತು ಇತ್ತೀಚೆಗೆ. ಒಂದು ವರ್ಷದಿಂದ ಶುರುಮಾಡಿ ಇಪ್ಪತ್ಮೂರು ವರ್ಷದವರೆಗಿನ ವಾಸದ ಅನುಭವವಿದ್ದವರು ಅಲ್ಲಿದ್ದರು. ಅಲ್ಲಿಯೇ ಮಕ್ಕಳಾಗಿ, ಓದಿ ಕೆಲಸಕ್ಕೆ ಸೇರಿರುವವರೂ ಇದ್ದಾರೆ. ಆರೇಳು ವರ್ಷಗಳಿಂದ ದುಡಿಯುತ್ತ ಒಂದಷ್ಟು ಗಂಟು ಕೂಡಿಸಿಕೊಂಡು ಅವಕಾಶ ಸಿಕ್ಕರೆ ಮರಳಿ ಬಂದುಬಿಡಬೇಕೆನ್ನುವವರು; ಜೊತೆಗೆ ಇನ್ನು ಅಲ್ಲಿಗೆ ಬಂದು ಮಾಡುವುದಾದರೂ ಏನು ಎನ್ನುವವರೂ ಇದ್ದಾರೆ. ಅವರ ಭವಿಷ್ಯದ ಯೋಜನೆಗಳು ಏನಾದರೂ ಇರಲಿ, ವರ್ತಮಾನದ ಯೋಚನೆಗಳು, ತುಡಿತಗಳಂತೂ ಅಮೋಘ. ಕನ್ನಡದ ಕುರಿತ ಅವರ ಪ್ರೇಮ, ಭಾರತದ ಕುರಿತ ಅವರ ಅಭಿಮಾನ ಆದರಯೋಗ್ಯವಾದವು. ಒಂದಂತೂ ಸತ್ಯ. ಭಾರತದ ಶ್ರೇಷ್ಠತೆ ಮತ್ತು ಮಾನವ ಸಂಬಂಧಗಳ ಬಾಂಧವ್ಯ ಅರಿವಾಗಬೇಕೆಂದರೆ ಒಮ್ಮೆಯಾದರೂ ಪಶ್ಚಿಮದ ಪ್ರಭಾವಕ್ಕೊಳಗಾದ ರಾಷ್ಟ್ರಗಳನ್ನು ನೋಡಿಕೊಂಡು ಬರಬೇಕು.

ಆಸ್ಟ್ರೇಲಿಯಾದ ಇತಿಹಾಸವೇ ವಿಕ್ಷಿಪ್ತ. ಯೂರೋಪಿನಲ್ಲಿ ಕೈದಿಗಳನ್ನು ಕೂಡಿಟ್ಟು ಸಾಕುವ ತಲೆನೋವು ಪರಿಹರಿಸಿಕೊಳ್ಳಲೆಂದು ಅವರನ್ನು ತಳ್ಳಿಬಿಟ್ಟ ಜಾಗ ಆಸ್ಟ್ರೇಲಿಯಾ. ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಬದುಕಿ ಎಂದು ಕಳಿಸಿಕೊಟ್ಟದ್ದು ಅವರನ್ನು. ಹೀಗೆ ಮುಕ್ತವಾಗಿ ಬದುಕುವ ಅವಕಾಶ ಪಡೆದ ಈ ಕಳ್ಳರು, ದರೋಡೆಕೋರರು ತಮ್ಮ ಎಂದಿನ ಚಾಳಿ ಮುಂದುವರೆಸಿ ಅಲ್ಲಿನ ಮೂಲನಿವಾಸಿಗಳನ್ನು ನಾಶಗೈಯ್ಯಲಾರಂಭಿಸಿದರು. ತಾವೇ ಆಸ್ಟ್ರೇಲಿಯಾದ ಮಾಲೀಕರಾದರು. ತೀರಾ ಇತ್ತೀಚಿನವರೆಗೂ ಅಳಿದುಳಿದ ಮೂಲ ನಿವಾಸಿಗಳನ್ನು ಪ್ರಾಣಿಗಳಿಗಿಂತ ಕಡೆಯಾಗಿ ನೋಡಿಕೊಂಡವರು ಅವರು. ಬಿಳಿಯರ ಈ ಧಿಮಾಕಿನ ಕುರಿತಂತೆ ಮತ್ತೊಮ್ಮೆ ವಿಸ್ತಾರವಾಗಿ ಚಚರ್ಿಸೋಣ. ಬಿಳಿಯ ಬಣ್ಣ ಶ್ರೇಷ್ಠ ಮತ್ತು ಕರಿಯದು ಕನಿಷ್ಠ ಎಂಬುದನ್ನು ಅವರು ಅದು ಹೇಗೆ ನಂಬಿಬಿಟ್ಟಿದ್ದಾರೆಂದರೆ ಹುಟ್ಟುವ ಮಗುವೂ ಅದೇ ಭಾವನೆಯಿಂದ ಹುಟ್ಟುತ್ತದೆ ಅಲ್ಲೆಲ್ಲಾ. ಹೀಗಾಗಿಯೇ ಅವರಿಗೆಲ್ಲ ಭಾರತೀಯರನ್ನು ಕಂಡರೂ ಮೈ ಉರಿ.

1

ಆಸ್ಟ್ರೇಲಿಯಾಕ್ಕೆ ಭಗವಂತ ಅಪಾರ ಖನಿಜ ಸಂಪತ್ತು ಕೊಟ್ಟುಬಿಟ್ಟಿದ್ದಾನೆ. ಅಗೆದಷ್ಟೂ ಅದಿರು; ಮೊಗೆದಷ್ಟೂ ರತ್ನ. ಓಪಲ್ ಎಂಬ ಹೆಸರಿನ ಕಲ್ಲು ಜಗದ್ವಿಖ್ಯಾತ. ಕಲ್ಲಿದ್ದಲಿನ ಅಪಾರವಾದ ದಾಸ್ತಾನು ಅವರ ಬಳಿ ಇದೆ. ಯುರೇನಿಯಂನ ಕೊರತೆ ಇಲ್ಲ. ತಮ್ಮ ಬಳಿ ಭಗವಂತನಿತ್ತ ಈ ಸಂಪತ್ತಿನ ಶೇಕಡಾ ಹತ್ತರಷ್ಟನ್ನೂ ಅವರು ಖಾಲಿ ಮಾಡಿಲ್ಲ. ಅಷ್ಟರಲ್ಲಿಯೇ ಶ್ರೀಮಂತಿಕೆ ಅವರ ಪದತಲದಲ್ಲಿದೆ. ಸುತ್ತಲೂ ಸಮುದ್ರ ಮಧ್ಯೆ ಸಾಕಷ್ಟು ಸಿಹಿ ನೀರಿನ ದಾಸ್ತಾನು. ವಿಸ್ತಾರವಾದ ಕೆರೆಗಳು ಬೇರೆ. ನಿಜವಾಗಿಯೂ ಸ್ವರ್ಗವೆಂದು ಕರೆಯಲು ಬೇಕಾದ್ದೆಲ್ಲವೂ ಅಲ್ಲಿದೆ. ಆದರೆ ಸ್ವರ್ಗದಲ್ಲಿ ವಾಸಿಸಲು ಜನರೇ ಇಲ್ಲ ಅಷ್ಟೇ. ಇಡಿಯ ಆಸ್ಟ್ರೇಲಿಯಾದ ಜನಸಂಖ್ಯೆ ಮುಂಬೈನ ಜನಸಂಖ್ಯೆಗೆ ಸಮ. ಇನ್ನೂ ಸಮೀಪದ ಕಲ್ಪನೆ ಬೇಕೆಂದರೆ ಬೆಂಗಳೂರಿನ ಎರಡೂವರೆ ಪಟ್ಟು ಅಷ್ಟೆ! ಗೂಗಲ್ ಮ್ಯಾಪ್ ತೆಗೆದು ನೋಡಿ ಸಮುದ್ರ ತೀರದುದ್ದಕ್ಕೂ ಜನ. ಒಳಗೆ ಖಾಲಿ, ಖಾಲಿ. ವಿಸ್ತಾರವಾದ ಭೂಭಾಗದಲ್ಲಿ ಅತಿ ಕಡಿಮೆ ಜನ. ಹೀಗಾಗಿ ವ್ಯವಸ್ಥೆಗಳನ್ನು ಅನುಕೂಲಕರವಾಗಿ ರೂಪಿಸಿಕೊಳ್ಳಬಹುದು. ಭಾರತವನ್ನು ಆಸ್ಟ್ರೇಲಿಯಾದೊಂದಿಗೆ ತುಲನೆ ಮಾಡುವಾಗಲೆಲ್ಲ ಈ ಒಂದು ಅಂಶ ನೆನಪಿನಲ್ಲಿಟ್ಟುಕೊಳ್ಳಬೇಕು.

ಆಸ್ಟ್ರೇಲಿಯಾದ ಸಂಸ್ಕೃತಿ ಅಂತ ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ. ಅದೊಂದು ಪುಟ್ಟ ಯೂರೋಪು. ಈಗಲೂ ಬ್ರಿಟನ್ನಿನ ರಾಣಿಗೆ ಎಲ್ಲಾ ಗೌರವಗಳನ್ನೂ ಅಪರ್ಿಸಿಯೇ ಅವರ ಕೆಲಸ ನಡೆಯೋದು. ಪ್ರೋಟೋಕಾಲ್ನಲ್ಲಿ ಆಕೆಗೇ ಪ್ರಮುಖ ಸ್ಥಾನ. ಸ್ವತಂತ್ರ ರಾಷ್ಟ್ರದ ಸ್ಥಾನಮಾನವಿದ್ದರೂ ಇಂದಿಗೂ ಆಸ್ಟ್ರೇಲಿಯಾ ಬ್ರಿಟನ್ನಿನ ವಸಾಹತಿನಂತೇ ಕೆಲಸ ಮಾಡುತ್ತದೆ. ಅಲ್ಲಿನ ಸಂಸತ್ತಿನಲ್ಲಿ ರಾಣಿ ಕೊಟ್ಟ ದಂಡವನ್ನು ಎದುರಿಗಿಟ್ಟುಕೊಂಡೇ ಎಲ್ಲಾ ನಿರ್ಣಯ ಕೈಗೊಳ್ಳೋದು ಅವರು! ಅವರ ರಾಜಕಾರಣದ ವ್ಯವಸ್ಥೆಯೂ ಬ್ರಿಟನ್ನಿನದೇ ನಕಲು. ಮೇಲ್ಮನೆ, ಕೆಳಮನೆಗಳು; ಆಯ್ಕೆಯ ಪ್ರಕ್ರಿಯೆಗಳು, ಸದನದಲ್ಲಿ ಚಚರ್ೆಗಳು ಎಲ್ಲವೂ ಅಲ್ಲಿನಂಥದ್ದೇ. ಈ ವಿಚಾರದಲ್ಲಿ ನಾವೂ ಬ್ರಿಟನ್ನಿನ ಸೆರಗು ಹಿಡಿದು ಬದುಕುತ್ತಿರುವವರೇ. ಆದರೆ ವಸಾಹತು ಕಲ್ಪನೆಯಿಂದ ದೂರ ಇದ್ದೇವೆ ಅನ್ನೋದಷ್ಟೇ ಸಮಾಧಾನ. ಬಹುಶಃ ಇತ್ತ ಪೂರ್ಣ ಭಾರತೀಯರಾಗದೇ ಅತ್ತ ಬ್ರಿಟೀಷರಂತೆಯೂ ಇರದೇ ನಾವು ತೊಳಲಾಡುತ್ತಿರುವುದೇ ನಮ್ಮೆಲ್ಲ ಸಮಸ್ಯೆಗೂ ಮೂಲ ಕಾರಣವಿರಬಹುದೇನೋ.

ಭಾರತೀಯರು 25 ವರ್ಷ ಅಲ್ಲಿದ್ದರೂ ಹೊಂದಿಕೊಳ್ಳೋದು ಬಲು ಕಷ್ಟ. ಮದುವೆಗೆ 25ಕ್ಕಿಂತ ಹೆಚ್ಚು ಜನರ ಕರೆಯೋದಿಲ್ಲ. ಮಗುವಿನ ಹುಟ್ಟಿದ ಹಬ್ಬಕ್ಕೆ ಬಂದರೂ ಹೋಟೆಲಿನಲ್ಲಿ ನೀವು ಊಟ ಮಾಡಿ ನೀವೇ ಬಿಲ್ಲು ತೆತ್ತು ಹೋಗಬೇಕು. ಗಂಡ-ಹೆಂಡತಿಯರು ಊಟಕ್ಕೊಂದು ಹೊರಗೆ ಹೋದರೂ ಅವರವರ ಬಿಲ್ಲು ಅವರವರೇ ತೆರುವುದು. ಹದಿನೆಂಟರ ನಂತರ ಮಕ್ಕಳೂ ಬಾಡಿಗೆ ಕೊಟ್ಟೇ ಮನೆಯಲ್ಲಿರಬೇಕೆನ್ನುವುದು ಇವೆಲ್ಲವೂ ನಮ್ಮವರಿಗೆ ಜೀರ್ಣವಾಗದ ಸಂಗತಿಗಳು. ಇಲ್ಲಿಂದ ಹೋದವರು ಅಲ್ಲಿನ ತಿಂಡಿ-ಊಟಗಳಿಗೂ ಒಗ್ಗಿಕೊಳ್ಳುವುದು ಕಷ್ಟ. ಅಲ್ಲಿನ ಮನೆಗಳಲ್ಲಿ ಮಸಾಲೆ ದೋಸೆ, ಅವರೆಕಾಳು ಉಪ್ಪಿಟ್ಟುಗಳು ಈಗಲೂ ಸಿಗುತ್ತವೆನ್ನುವುದು ಸಮಾಧಾನ ಅಷ್ಟೇ. ಶೌಚಾಲಯಗಳಲ್ಲಿ ನೀರಿನ ಬದಲು ಪೇಪರುಗಳ ಬಳಕೆಗೆ ಅವರು ಹೊಂದಾಣಿಕೆ ಮಾಡಿಕೊಂಡುಬಿಟ್ಟಿರುವುದೇ ಬಲು ಅಚ್ಚರಿಯಾದ ಸಂಗತಿ.

2

ಆಸ್ಟ್ರೇಲಿಯಾಕ್ಕೆ ಈ ದೇಶದಿಂದ ಬಹುತೇಕರು ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕೆಲವರು ಇಲ್ಲಿನ ಕಂಪನಿಗಳಿಂದಲೇ ವರ್ಗವಾಗಿ ಹೋಗುತ್ತಾರೆ. ಕೆಲವರು ಕೃಷಿಕರಾಗಿ ಹೋಗುತ್ತಾರೆ. ಮತ್ತೂ ಕೆಲವರು ಅವಕಾಶಗಿಟ್ಟಿಸಿಕೊಳ್ಳಲೆಂದೇ ಅಲ್ಲಿ ಹೋಗಿ ನೆಲೆಸುತ್ತಾರೆ. ಇತ್ತೀಚೆಗೆ ಶಿಕ್ಷಣ ಪಡೆಯುವ ನೆಪದಲ್ಲಿ ಬಲು ದೊಡ್ಡ ಪ್ರಮಾಣದ ತರುಣರು ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದಾರೆ. ಹಾಗೆಂದೇ ತಲೆ ಕೆಡಿಸಿಕೊಂಡು ಅಲ್ಲಿ ವಿಶ್ವವಿದ್ಯಾಲಯಗಳನ್ನು ನೋಡುವ ಬಯಕೆಯಿತ್ತು ನನಗೆ. ಅಚ್ಚರಿಯೇನು ಗೊತ್ತೇ? ಅಲ್ಲಿ ಓದುವ ವಿದ್ಯಾಥರ್ಿಗಳೂ ಅಲ್ಲಿನ ಶಿಕ್ಷಣ ಕ್ರಮಮ ಕುರಿತಂತೆ ಬಲುವಾದ ಅಭಿಮಾನವನ್ನೇನೂ ಇಟ್ಟುಕೊಂಡಿಲ್ಲ. ಆಸ್ಟ್ರೇಲಿಯಾ ನಡೆಯೋದೇ ಕಾನೂನುಗಳ ಪುಸ್ತಕದ ಮೇಲೆ. ಶಿಕ್ಷಣವೂ ಇದಕ್ಕೆ ಹೊರತಲ್ಲ. ಅಲ್ಲಿ ಕಲಿತ ವಿದ್ಯಾಥರ್ಿಗಳು ಹೊಸ ಸವಾಲನ್ನು ಸ್ವೀಕರಿಸುವಲ್ಲಿ ಸೋತು ಹೋಗುತ್ತಾರೆ. ಬಲು ಬೇಗ ಸಮಸ್ಯೆಗಳೆದುರು ಶರಣಾಗಿಬಿಡುತ್ತಾರೆ. ಭಾರತದಲ್ಲಿ ಹಾಗಲ್ಲ. ಸವಾಲೊಂದಕ್ಕೆ ಹೊಸ ಉತ್ತರವನ್ನು ಹುಡುಕುವಲ್ಲಿಯೇ ಆನಂದ. ಅಲ್ಲಿನ ಅನೇಕ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳೆಂದರೆ ಭಾರತ ಮತ್ತು ಚೀನಾದವರೇ. ಆಟ-ಪಾಠಗಳಲ್ಲೆಲ್ಲಾ ಇವರುಗಳೇ ಮುಂದು. ಸಕರ್ಾರದ ಯಾವ ವಿದ್ಯಾಥರ್ಿವೇತನವಿದ್ದರೂ ಇವರುಗಳ ಬುಟ್ಟಿಗೇ. ಇನ್ನೊಂದಿಪ್ಪತ್ತು ವರ್ಷ ಕಳೆದರೆ ಇದು ಬಲು ದೊಡ್ಡ ಸಮಸ್ಯೆಯಾಗಲಿದೆ. ಏಷ್ಯಾದ ಮಕ್ಕಳನ್ನು ಖಂಡಿತವಾಗಿಯೂ ಅಲ್ಲಿನ ಮಕ್ಕಳು ದ್ವೇಷಿಸಲಿದ್ದಾರೆ. ಕಾಲ ಚಕ್ರ ಹೀಗೇ ತಿರುಗಿದರೆ ಮೂಲ ನಿವಾಸಿಗಳನ್ನು ಮೂಲೆಗೆ ತಳ್ಳಿ ಹೇಗೆ ಬ್ರಿಟೀಷರು ಇಡಿಯ ರಾಷ್ಟ್ರಕ್ಕೆ ವ್ಯಾಪಿಸಿಕೊಂಡರೋ ಹಾಗೆಯೇ ಏಷ್ಯನ್ನರು ಈಗಿನ ಬಿಳಿಯರನ್ನು ಪಕ್ಕಕ್ಕೆ ತಳ್ಳಿದರೆ ಅಚ್ಚರಿ ಪಡಬೇಕಿಲ್ಲ.

ಆದರೆ ಶಿಕ್ಷಣವನ್ನು ಕೊಡುವಲ್ಲಿ ಆಸ್ಟ್ರೇಲಿಯಾ ಸಕರ್ಾರದ ಕಾಳಜಿ ಮೆಚ್ಚಬೇಕಾದ್ದು. ಅಲ್ಲಿ ಸಂಪೂರ್ಣ ಶಿಕ್ಷಣ ಉಚಿತವೇ. ಸಕರ್ಾರಿ ಶಾಲೆಗಳು ಹೇಗೆ ನಿಮರ್ಾಣಗೊಂಡಿವೆಯೆಂದರೆ ನಮ್ಮಲ್ಲಿನ ಖಾಸಗಿ ಸಂಸ್ಥೆಗಳೂ ನಾಚಬೇಕು. ಸಿರಿವಂತರೂ ಸಕರ್ಾರಿ ಶಾಲೆಗಳಿಗೇ ತಮ್ಮ ಮಕ್ಕಳನ್ನು ಕಳಿಸುತ್ತಾರೆ. ಹಾಗಂತ ಖಾಸಗಿ ಶಾಲೆಗಳಿಲ್ಲವೆಂದಲ್ಲ. ಖಂಡಿತ ಇವೆ. ಅವು ಬಲು ದುಬಾರಿ. ಬಹುಶಃ ವರ್ಗ ಸಂಘರ್ಷವಿರಬೇಕು. ಅಗತ್ಯಕ್ಕೂ ಮೀರಿದ ಹಣವಿದ್ದವರು ತಮ್ಮ ಯೋಗ್ಯತೆಗೆ ತಕ್ಕಂತೆ ಮಕ್ಕಳನ್ನು ಸಿರಿವಂತ ಶಾಲೆಗೆ ಕಳಿಸುತ್ತಾರೆ ಬಿಟ್ಟರೆ ಸಾಮಾನ್ಯ ಜನರೆಲ್ಲರ ಆಯ್ಕೆ ಸಕರ್ಾರಿ ಶಾಲೆಯೇ. ಕನರ್ಾಟಕಕ್ಕೆ ಅಲ್ಲಿನ ಶಿಕ್ಷಣದ ಪರಿಕಲ್ಪನೆಯನ್ನು ಆಮದು ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಶಾಲೆಗಳಲ್ಲಿ ಮಕ್ಕಳಿಗೆ ಪೆನ್ನು-ಪೇಪರು ಸ್ಲೇಟು-ಬಳಪಗಳ ಗೊಡವೆಯೇ ಇಲ್ಲ. ಚೀಲದಲ್ಲಿ ಊಟದ ಡಬ್ಬಿ ಇಟ್ಟು ಕಳಿಸಿದರಾಯ್ತು. ಹೆಚ್ಚು-ಹೆಚ್ಚು ಆಟಗಳೇ. ಮೊದಲ ನಾಲ್ಕಾರು ವರ್ಷ ಬರವಣಿಗೆಯೇ ಇಲ್ಲ. ನಮ್ಮಲ್ಲಿ ಪೂತರ್ಿ ಉಲ್ಟಾ. ಬಾಲ್ಯದ ಶಿಕ್ಷಣ ಅಲ್ಲಿನದ್ದು ವಿಶೇಷ. ಉನ್ನತ ಶಿಕ್ಷಣದಲ್ಲಿ ನಮ್ಮದು ಬಲಿಷ್ಠ. ಸಕರ್ಾರಿ ಶಿಕ್ಷಣ ಸಂಸ್ಥೆಗಳನ್ನು ಅವರು ನಿಮರ್ಾಣ ಮಾಡಿರುವ ರೀತಿ ಅನನ್ಯ. ಖಾಸಗಿ ಸಂಸ್ಥೆಗಳಿಗೆ ನಾವು ಕೊಟ್ಟಿರುವ ಮೌಲ್ಯ ದೌಭರ್ಾಗ್ಯ ಪೂರ್ಣ.

3

ಪ್ರವಾಸೋದ್ಯಮದಲ್ಲೂ ಆಸ್ಟ್ರೇಲಿಯಾ ಅನುಸರಣೀಯ. ಅಲ್ಲಿರುವ ಕಾಡಿನ ಪ್ರಾಣಿಗಳ ಸಂಗ್ರಹಾಲಯವನ್ನು ಸರಿತೂಗಿಸಲು ನಮ್ಮಲ್ಲಿರುವ ಯಾವ ನ್ಯಾಷನಲ್ ಪಾಕರ್್ಗಳೂ ಸಾಲವು. ಅವರ ಜಲಜೀವಿಗಳ ಪಾಕರ್್ನಂತಹ ಒಂದುನ್ನು ಇದುವರೆಗೂ ನಾವು ಸ್ಥಾಪಿಸಲಾಗಿಲ್ಲವೆಂಬುದು ದುದರ್ೈವದ ಸಂಗತಿ. ಮೂರು ದಿಕ್ಕಿನಲ್ಲೂ ಸಾಗರ ಹೊಂದಿರುವ ಭಾರತ ಚೆನ್ನೈನಲ್ಲೋ, ಕನ್ಯಾಕುಮಾರಿಯಲ್ಲೋ ಜಗತ್ತಿನ ಅತಿ ದೊಡ್ಡ ಜಲಜೀವಿ ಸಂಗ್ರಹಾಲಯ ನಿಮರ್ಿಸಬಹುದಿತ್ತು. ಗೋಕರ್ಣದಲ್ಲೋ, ಕಾರವಾರದಲ್ಲೋ ಸಮುದ್ರವನ್ನು ಬಳಸಿಕೊಂಡು ಬೃಹತ್ ಅಕ್ವೇರಿಯಂ ನಿಮರ್ಿಸಿದರೆ ಗೋವಾಕ್ಕೆ ಹೋಗುವ ಯಾತ್ರಿಕರು ಒಮ್ಮೆ ಬರಲೇಬೇಕು. ನಮ್ಮಲ್ಲಿರುವ ಜಲಚರಗಳ ವೈವಿಧ್ಯವನ್ನು ಜಗತ್ತಿನ ಮುಂದೆ ತೆರೆದಿಡುವ ಈ ಪ್ರಯತ್ನ ಯಶಸ್ವಿಯಾದರೆ ಇಡಿಯ ಉತ್ತರ ಕನ್ನಡ ಜಿಲ್ಲೆಯೇ ಜಗತ್ತಿನ ಆಕರ್ಷಣೆಯ ಕೇಂದ್ರವಾದೀತು. ಉತ್ತರ ಕನ್ನಡ ಅರಣ್ಯ ಪ್ರದೇಶವಾದ್ದರಿಂದ ಅಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲವೆಂದು ಜನನಾಯಕರು ಕಣ್ಣೀರಿಡುತ್ತಾರೆ; ಆದರೆ ಪರಿಸರದ ಸ್ವಾಸ್ಥ್ಯ ಕದಡದ ಅಭಿವೃದ್ಧಿಯ ಬಗ್ಗೆ ಯೋಚನೆಯೂ ಮಾಡದೇ ಮುಗುಮ್ಮಾಗಿ ಉಳಿಯುತ್ತಾರೆ.

ಆಸ್ಟ್ರೇಲಿಯಾದ ಕೃಷಿ ಬಲು ಆಕರ್ಷಕ. ಪೂರಾ ಯಾಂತ್ರಿಕ. ನೂರಾರು ಹೆಕ್ಟೇರ್ ಕೃಷಿಯನ್ನು ಒಬ್ಬಿಬ್ಬರೇ ಸೇರಿ ನಿರ್ವಹಿಸಿಬಿಡುತ್ತಾರೆ. ಎಕರೆಗಟ್ಟಲೆ ವಿಸ್ತಾರದ ಜಮೀನಿನಲ್ಲಿ ಗೋವುಗಳನ್ನು ಸಾಕುತ್ತಾರೆ. ಡೈರಿ ಉದ್ಯಮ ಬಲು ಖ್ಯಾತವಾದುದು. ಹಾಗೆಯೇ ಗೋವುಗಳನ್ನು ಗಡದ್ದಾಗಿ ಬೆಳಸಿ ಮಾಂಸಕ್ಕಾಗಿ ಅವುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯೂ ಜೋರಾಗಿದೆ. ನಾವು ಭೇಟಿ ಕೊಟ್ಟ ಸ್ಥಳೀಯನ ಜಮೀನು ಎಕರೆಗಟ್ಟಲೆ ಹಬ್ಬಿತ್ತು. ಅಷ್ಟು ಹುಲ್ಲುಗಾವಲಿನಲ್ಲಿ ಇಪ್ಪತ್ತೆಂಟು-ಮುವತ್ತು ಹಸುಗಳು ಮನಸೋ ಇಚ್ಛೆ ಮೇಯುತ್ತ ಕಟುಕನಿಗೆ ಮಾರಾಟವಾಗಲು ತಯಾರಿ ನಡೆಸಿದ್ದವು. ಮಾಂಸದ ವ್ಯಾಪಾರ ಬದಿಗಿಟ್ಟರೆ ಡೈರಿ ಉದ್ದಿಮೆ ಪೂರಾ ಆಧುನಿಕವಾಗಿಬಿಟ್ಟಿದೆ. ನೂರಾರು ಹಸುಗಳಿಂದ ಒಬ್ಬ ವ್ಯಕ್ತಿ ಎರಡೂವರೆ ಗಂಟೆಗಳಲ್ಲಿ ಹಾಲು ಕರೆದು ತನ್ನ ಕೆಲಸ ಮುಗಿಸಿ ಬಿಡಬಲ್ಲ ಈ ಬಗೆಯ ಹೊಸ ಉದ್ಯಮಕ್ಕೆ ಸಕರ್ಾರ ತೆರಿಗೆಯನ್ನು ಹಾಕಲಾರದು. ಇದು ಹಳ್ಳಿಯ ಜನರಿಗೆ ಸಾಕಷ್ಟು ಉತ್ತೇಜನ ಕೊಟ್ಟಿದೆ. ಬಹುಶಃ ಗೋ ಸಾಕಾಣಿಕೆಯನ್ನು ಆಕರ್ಷಕ ಉದ್ದಿಮೆಯಾಗಿಸಿ ಜನರನ್ನು ಅದಕ್ಕೆ ತೊಡಗಿಸಬಲ್ಲ ದಿಸೆಯಲ್ಲಿ ಕನರ್ಾಟಕದಲ್ಲೂ ಕೆಲಸವಾಗಬೇಕಿದೆ. ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ನೀಡಬಲ್ಲ ಇಂತಹ ಕನಸು ಕಾಣುವ ಬದಲು ಗೋವಧೆಯ ಮೂಲಕ ಈ ಸಂಪತ್ತನ್ನು ನಾಶ ಮಾಡುವಲ್ಲಿ ಸೊಂಟ ಕಟ್ಟಿ ನಿಂತ ನಾಯಕರಿಗೆ ಇವೆಲ್ಲ ಅರ್ಥವಾದೀತೇನು?

5

ಆಸ್ಟ್ರೇಲಿಯಾದಲ್ಲಿ ಪೊಲೀಸ್ ಠಾಣೆಗಳು ಬಲು ಸುಂದರ. ಅಲ್ಲಿ ಠಾಣೆಗೆ ಹೋಗುವಾಗ ಭಯವಾಗಲಾರದು. ಅಲ್ಲಿನ ಪೊಲೀಸರ ಸಮವಸ್ತ್ರ, ಅವರು ಓಡಾಡುವ ಬೈಕು, ಕಾರು ಎಲ್ಲವೂ ಮನಮೋಹಕ. ಅವರನ್ನು ನೋಡುವಾಗ ಖಾಕಿ ಬಟ್ಟೆ ಹಾಕಿಕೊಂಡು ಕೈಯ್ಯಲ್ಲೊಂದು ಲಾಠಿ ಹಿಡಿದಿರುವ ನಮ್ಮ ಪೊಲೀಸರು ಪ್ಯಾದೆ ಎನಿಸುತ್ತಾರೆ. ಆದರೆ ಒಂದಂತೂ ಹೌದು. ಅಲ್ಲಿನ ಪೊಲೀಸು ನಾಗರಿಕರನ್ನು ಏಕ ವಚನದಲ್ಲಿ ಮಾತನಾಡಿಸುವಂತಿಲ್ಲ. ‘ಸರ್’ ಎಂದೇ ಸಂಬೋಧಿಸಬೇಕು. ಕಾನೂನು ಮೀರಿದವನ ಮೇಲಷ್ಟೇ ಅವರ ಜಬರ್ು, ಜಬರ್ದಸ್ತಿ ಎಲ್ಲಾ. ಆಸ್ಟ್ರೇಲಿಯಾದ ನಾಗರಿಕರನ್ನು ಅವರು ಪ್ರೀತಿಯಿಂದಲೇ ಮಾತನಾಡಿಸಬೇಕು. ಹೀಗಾಗಿ ಅಲ್ಲಿನ ಪೊಲೀಸರ ಕೆಲಸ ಬಲು ಕಷ್ಟದ್ದು. ನಮ್ಮಲ್ಲಿನಂತೆ ಬಾಯಿಗೆ ಬಂದ ಭಾಷೆ ಬಳಸುವಂತಿಲ್ಲ. ಇಲ್ಲಿಯ ಕಥೆ ಬಿಡಿ. ರಾಜ್ಯ ಸಕರ್ಾರದ ಮಂತ್ರಿಗಳು ಪ್ರಧಾನ ಮಂತ್ರಿಗಳಿಗೇ ನೀಚಾತಿನೀಚ ಪದಗಳ ಪ್ರಯೋಗ ಮಾಡಿ ಮಾತನಾಡುತ್ತಾರೆ ಎಂದ ಮೇಲೆ ಪೊಲೀಸರು ಯಾವ ಲೆಕ್ಕ!

4

ಆಸ್ಟ್ರೇಲಿಯಾದ ರಸ್ತೆಗಳು ಸ್ವಚ್ಛ, ಸುಂದರ. ಸಾವಿರಾರು ಕಾರುಗಳು ದಿನನಿತ್ಯ ಪಟ್ಟಣಗಳಲ್ಲಿ ಓಡಾಡುತ್ತವೆಯಾದರೂ ತಂತಮ್ಮ ಲೇನ್ ಬಿಟ್ಟು ಯಾರೂ ಆಚೆ ಸರಿಯುವುದಿಲ್ಲ. ರಸ್ತೆಯಲ್ಲಿ ಇವೆಲ್ಲವನ್ನು ಗಮನಿಸಲು ನಿಂತ ಪೊಲೀಸು ವಾಹನಗಳು ತಮ್ಮ ಕಾರಿನ ಮೇಲೆ ಲೈಟು ಹೊತ್ತಿಸಿಕೊಂಡು ನಿಂತಿರಬೇಕು. ಇಲ್ಲಿಯಂತೆ ಪೊಲೀಸರು ಕಳ್ಳರಂತೆ ಬಚ್ಚಿಟ್ಟುಕೊಂಡು ಆಕ್ರಮಣ ಮಾಡುವಂತೆಯೇ ಇಲ್ಲ. ಅಲ್ಲಲ್ಲಿ ಇಟ್ಟಿರುವ ಕ್ಯಾಮೆರಾಗಳು ಚಾಲಕನ ವೇಗವನ್ನು ಗಮನಿಸುತ್ತಿರುತ್ತವೆ. ಸಂಚಾರಿ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡವಂತೂ ಇದ್ದೇ ಇದೆ. ಜೊತೆಗೆ ಅಂಕಗಳು ಕಡಿತವಾಗುತ್ತವೆ. ವರ್ಷಕ್ಕೆ ಹನ್ನೆರಡು ಅಂಕಗಳು ಹೋದರೆ ಮುಂದಿನ ಇಡಿ ವರ್ಷ ಗಾಡಿ ಓಡಿಸಲು ಅನುಮತಿ ಇಲ್ಲ! ಇಲ್ಲಿನ ಪೋಸ್ಟ್ ಆಫೀಸು ಬೃಹತ್ ಮಾಲ್ಗಳಲ್ಲೂ ಇವೆ. ಅಲ್ಲಿ ಬರಿ ಪತ್ರ ಬರೆದು, ಡಬ್ಬಿಗೆ ಹಾಕುವುದಷ್ಟೇ ಅಲ್ಲ; ಮುದ್ರಣಕ್ಕೆ ಸಂಬಂಧಪಟ್ಟ ಎಲ್ಲ ವಸ್ತುಗಳೂ ಮಾರಾಟಗೊಳ್ಳುತ್ತವೆ. ಪೋಸ್ಟ್ ಆಫೀಸಿನ ಫ್ರಾಂಚೈಸಿ ಪಡೆದುಕೊಂಡು ಕೋರಿಯರ್ ಅಂಗಡಿಯಂತೆ ಯಾರಾದರೂ ಕಾರ್ಯ ನಿರ್ವಹಿಸಬಹುದು. ಆಸ್ಪತ್ರೆಗಳು ಅಕ್ಷರಶಃ ಕಾಪರ್ೋರೇಟ್ ಕೇಂದ್ರಗಳು. ಪ್ರತಿಯೊಬ್ಬ ನಾಗರಿಕನಿಗೂ ಇಲ್ಲಿ ಉಚಿತ ತಪಾಸಣೆ ಮತ್ತು ಆರೈಕೆ ಖಾತ್ರಿ. ಹೆಚ್ಚು ಕಡಿಮೆ ನೂರಕ್ಕೆ ನೂರರಷ್ಟು ಸಹಜ ಹೆರಿಗೆಯೇ. ಹೆರಿಗೆಯ ನಾಲ್ಕಾರು ತಿಂಗಳ ಮುನ್ನ ಗಂಡನಿಗೆ ಹೆರಿಗೆ ಮಾಡಿಸುವ ತರಬೇತಿ ನೀಡಲಾಗುತ್ತದೆ. ಹೆರಿಗೆಯ ವೇಳೆ ಗಂಡನನ್ನು ಕೋಣೆಯೊಳಗೆ ಕಳಿಸಿ ಅವನಿಂದಲೇ ಸಹಕಾರ ಪಡೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನನ್ನ ಮಿತ್ರನೊಬ್ಬ ಆ ದಿನದಿಂದಾಚೆಗೆ ನನ್ನ ಹೆಂಡತಿಯ ಮೇಲೆ ನನ್ನ ಪ್ರೀತಿ ದುಪ್ಪಟ್ಟಾಯಿತೆಂದದ್ದು ಈಗಲೂ ಗುಂಯ್ಗುಡುತ್ತಿದೆ. ಮಾತೆತ್ತಿದರೆ ಹೊಟ್ಟೆ ಬಗಿದು ಶಸ್ತ್ರ ಚಿಕಿತ್ಸೆ ನಡೆಸುವ ನಮ್ಮ ವೈದ್ಯರುಗಳು ಇದನ್ನು ಕಲಿಯಲೇಬೇಕು.
ದುಡಿಮೆಗೆ ಇಲ್ಲಿ ದ್ವಂದ್ವವಿಲ್ಲ. ಯಾರು ಯಾವ ಕೆಲಸವನ್ನು ಬೇಕಿದ್ದರೂ ಮುಲಾಜಿಲ್ಲದೇ ಮಾಡುತ್ತಾರೆ. ತೆರಿಗೆಯೂ ಅಷ್ಟೇ ಜೋರಾಗಿದೆ. ಹೆಚ್ಚು ಕಡಿಮೆ ಶೇಕಡಾ 45 ರಷ್ಟನ್ನು ತೆರಿಗೆಯ ರೂಪದಲ್ಲಿಯೇ ಮರಳಿಸಿಬಿಡುತ್ತಾರೆ. ಆದರೆ ಅವರಿಗೆ ದೊರಕಿರುವ ಸೌಲಭ್ಯ ಲೆಕ್ಕ ಹಾಕಿದರೆ ಆ ತೆರಿಗೆ ಕಟ್ಟಲು ಯಾರೊಬ್ಬರೂ ಹಿಂದೆ ಮುಂದೆ ನೋಡಲಾರರು. ಸಕರ್ಾರಿ ಕಚೇರಿ, ಬ್ಯಾಂಕುಗಳಲ್ಲೆಲ್ಲಾ ಸೇವೆ ನೀಡುವ ಪರಿ ನಾವು ವ್ಯವಸ್ಥೆಯನ್ನು ತಿದ್ದಬೇಕಾದ ಮಾರ್ಗಗಳನ್ನು ನಮಗೆ ಖಂಡಿತ ಹೇಳಿಕೊಡುತ್ತದೆ. ನನ್ನ ಕನಸಿನ ಕನರ್ಾಟಕದ ಕಲ್ಪನೆ ಗರಿಗೆದರುವುದೇ ಇಲ್ಲಿಂದ.

ಸ್ವಾತಂತ್ರ್ಯ ಬಂದು 70 ವರ್ಷಗಳಾದವು. ಏಕೀಕರಣವಾಗಿಯೂ ಹೆಚ್ಚು ಕಡಿಮೆ ಅಷ್ಟೇ ಆಯಿತು. ಆದರೆ ಇಂದಿಗೂ ಕನರ್ಾಟಕವೆಂದರೆ ಬಿಹಾರಕ್ಕಿಂತ, ಒರಿಸ್ಸಾಗಿಂತ ಉತ್ತಮವೆನ್ನುತ್ತ ಕಾಲ ಕಳೆಯುತ್ತಿದ್ದೇವೆ. ನಾವು ಬೆಂಗಳೂರನ್ನು ಮೆಲ್ಬೋನರ್ಿಗೆ, ಸಿಡ್ನಿಗೆ, ಲಂಡನ್, ಸಿಲಿಕಾನ್ ಸಿಟಿಗಳೊಂದಿಗೆಲ್ಲ ತುಲನೆ ಮಾಡಿ ನೋಡೋದು ಯಾವಾಗ? ವ್ಯವಸ್ಥೆಯ ವಿಚಾರದಲ್ಲಿ, ತಂತ್ರಜ್ಞಾನದ ಕಲ್ಪನೆಯಲ್ಲಿ ನಾವು ಜಗತ್ತಿಗೆ ಸರಿಸಾಟಿಯಾಗಲು ಇನ್ನೂ ಎಷ್ಟು ವರ್ಷ ಬೇಕು. ನಮ್ಮ ಕೃಷಿ ಹೈನುಗಾರಿಕೆಗಳೆಲ್ಲ ರಾಜಕಾರಣಿಗಳ ಸೆರಗು ಬಿಟ್ಟು, ಸ್ವಾವಲಂಬಿಯಾಗುವುದು ಯಾವಾಗ? ವಿಶ್ವದ ಜನ ನಮ್ಮ ರಾಜ್ಯದತ್ತ ಧಾವಿಸಿ ಬಂದು ತಮ್ಮ ಡಾಲರುಗಳನ್ನು ನಮ್ಮ ರೂಪಾಯಿಯೆದುರು ಮಂಡಿಯೂರುವಂತೆ ಮಾಡುವುದು ಸಾಧ್ಯವೇನು? ನನ್ನೊಂದಿಗೆ ಮಾತನಾಡುತ್ತಿದ್ದ ಆಸ್ಟ್ರೇಲಿಯಾದ ಕನ್ನಡಿಗರಿಗೆ ಎಲ್ಲಾ ಪ್ರಶ್ನೆಗಳನ್ನು ನಾನು ಕೇಳುತ್ತಿದ್ದೆ. ಅವರೆಲ್ಲ ಕೈ ಜೋಡಿಸಿ ತಂತಮ್ಮ ಊರಿಗಾಗಿ ಕನಸು ಕಟ್ಟಿಸಿ ದೂರದ ಆಸ್ಟ್ರೇಲಿಯಾದಿಂದಲೇ ಅದನ್ನು ನನಸು ಮಾಡುವ ಭರವಸೆ ಕೊಟ್ಟರು. ಆಗಬೇಕಾದ್ದು ಇಷ್ಟೇ ಅಲ್ಲವೇನು? ಜಗತ್ತಿನ ಯಾವ ಮೂಲೆಯಲ್ಲಾದರೂ ಇರಿ, ನಮ್ಮ ಭಾಷೆಗಾಗಿ ಬದುಕಿ, ನಮ್ಮ ನಾಡಿಗಾಗಿ ಕನಸು ಕಾಣಿ. ಒಬ್ಬ ಕಂಡ ಕನಸು ನಾಡಿನ ಅಭಿವೃದ್ಧಿಗೆ ಪೂರಕವೆನಿಸಿದಾಗ ಅದನ್ನು ನನಸು ಮಾಡಲು ನಾವೆಲ್ಲ ಜೊತೆಗೂಡಿದರಾಯ್ತು ಅಷ್ಟೇ! ಈಗ ಕಾಲ ಪಕ್ವವಾಗಿದೆ. ಇನ್ನು ಹಳೆಯ ರಾಗ ಸಾಕು ಮಾಡಿ, ಹೊಸ ಗೀತೆ ಹಾಡೋಣ.

 

Comments are closed.