ವಿಭಾಗಗಳು

ಸುದ್ದಿಪತ್ರ


 

ಇಂಥಾ ತುಷ್ಟೀಕರಣದಿಂದ ಮುಸ್ಲಿಮರಿಗೇ ನಷ್ಟ ಅಲ್ಲವೆ?

ಶಿಂಧೆಯ ಹೇಳಿಕೆ ಹೊರಬೀಳುತ್ತಿದ್ದಂತೆ ಮಾರ್ಕ್ಸ್‌ವಾದಿ ಕಮ್ಯೂನಿಷ್ಟ್ ಪಾರ್ಟಿಯ ಮೊಹಮ್ಮದ್ ಸಲೀಂ ಈ ಪತ್ರ ಬರೆಸುವಲ್ಲಿ ಮಹತ್ವದ ಪ್ರಯತ್ನ ತಮ್ಮದೇ ಅಂತ ಪತ್ರಿಕಾಗೋಷ್ಠಿ ಕರೆದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಮುಸಲ್ಮಾನರ ವೋಟುಗಳು ಕಾಂಗ್ರೆಸಿಗೆ ಬಿದ್ದಾವೆಂಬ ಭಯ ಅವರಿಗೆ! ತುಷ್ಟೀಕರಣದ ರಾಜಕಾರಣ ಅಂದರೆ ಇದೇ.

ಅಯೋಧ್ಯೆಯಲ್ಲಿ ಜನ್ಮಸ್ಥಾನ್ ಮಸೀದಿ ಉರುಳಿಬಿದ್ದ ದಿನಗಳು ನೆನಪಿರಬೇಕಲ್ಲ; ಅವತ್ತು ಇಡಿಯ ಜಗತ್ತು ಸಂವಿಧಾನದ ಮೇಲೆ ಹಲ್ಲೆ, ಸೆಕ್ಯುಲರಿಸಂ ಸಿದ್ಧಾಂತಕ್ಕೇ ಕೊಡಲಿ ಪೆಟ್ಟು ಅಂತೆಲ್ಲ ಹಲುಬಿತ್ತು. ಇರಲಿ ಬಿಡ. ಕಳೆದ ವಾರ ಈ ದೇಶದ ಗೃಹಸಚಿವರಾದ ಸುಶೀಲ್ ಕುಮಾರ್ ಶಿಂಧೆ ರಾಜ್ಯಗಳಿಗೆ ಪತ್ರ ಬರೆದು ’ಭಯೋತ್ಪಾದನೆ ಹೆಸರಲ್ಲಿ ಬಂಧಿತ ಅಮಾಯಕ ಮುಸ್ಲಿಂ ತರುಣರನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು’ ಎಂದರಲ್ಲ, ಅದೇಕೆ ಯಾರೂ ಮಾತನಾಡಲೇ ಇಲ್ಲ! ಆ ಪತ್ರದ ಧ್ವನಿತ ಅರ್ಥ ಎರಡು ಬಗೆಯದು. ಒಂದು ಭಯೋತ್ಪಾದಕರೆಲ್ಲ ಮುಸಲ್ಮಾನರೇ ಅನ್ನೋದನ್ನು ಗೃಹಸಚಿವರು ಒಪ್ಪಿಕೊಂಡಿರುವುದು, ಮತ್ತೊಂದು ಈ ದೇಶದ ಇತರೆ ತರುಣರನ್ನು ಕರುಣೆಯ ವ್ಯಾಪ್ತಿಯಿಂದ ಕೇಂದ್ರ ಸರ್ಕಾರ ಹೊರಗಿಟ್ಟಿರುವುದು. ಎರಡನ್ನೂ ಗಮನಿಸಿ ನೋಡಿ, ಮೊದಲನೆಯದು ಮುಸಲ್ಮಾನರ ಪಾಲಿಗೆ ಒಳ್ಳೆಯದಲ್ಲ, ಎರಡನೆಯದು ದೇಶಕ್ಕೇ ಕಂಟಕ. shinde_jpg_1170268f
ತುಷ್ಟೀಕರಣದ ರಾಜಕಾರಣ ಅಂದರೆ ಇದೇ. ಚುನಾವಣೆ ಹತ್ತಿರ ಬಂದೊಡನೆ ವೋಟು ನೀಡಬಲ್ಲ ದೊಡ್ಡ ಗುಂಪನ್ನು ಒಲಿಸಿಕೊಳ್ಳಲು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲ ನೀಚ ಮಾದರಿ ಇದು. ಶಿಂಧೆಯ ಹೇಳಿಕೆ ಹೊರಬೀಳುತ್ತಿದ್ದಂತೆ ಮಾರ್ಕ್ಸ್‌ವಾದಿ ಕಮ್ಯೂನಿಷ್ಟ್ ಪಾರ್ಟಿಯ ’ಮೊಹಮ್ಮದ್ ಸಲೀಂ’ ಈ ಪತ್ರ ಬರೆಸುವಲ್ಲಿ ಮಹತ್ವದ ಪ್ರಯತ್ನ ತಮ್ಮದೇ ಅಂತ ಪತ್ರಿಕಾಗೋಷ್ಠಿ ಕರೆದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಮುಸಲ್ಮಾನರ ವೋಟುಗಳು ಕಾಂಗ್ರೆಸಿಗೆ ಬಿದ್ದಾವೆಂಬ ಭಯ ಅವರಿಗೆ!
ಈ ರೀತಿಯ ರಾಜಕಾರಣ ಭಾರತಕ್ಕೆ ಹೊಸತಲ್ಲ. ಹಿಂದೂ-ಮುಸಲ್ಮಾನರನ್ನು ಒಡೆದು ಆಳುವ ಆಂಗ್ಲರ ಪ್ರಯತ್ನದ ಜೊತೆಜೊತೆಗೇ ಹುಟ್ಟಿಕೊಂಡಿದ್ದು ಇದು. ಮನೆಯ ಇಬ್ಬರು ಮಕ್ಕಳಲ್ಲಿ ಒಬ್ಬ ಆಸ್ತಿಯಲ್ಲಿ ಪಾಲು ಕೇಳುತ್ತ ಮನೆಗೆ ಕಂಟಕನಾಗಿ ನಿಂತಿದ್ದಾನೆಂದರೆ ಅವನನ್ನು ಒಲಿಸಿಕೊಳ್ಳುವ ಮಾರ್ಗ ಯಾವುದು ಹೇಳಿ? ಅವನು ಕೇಳಿದ್ದನ್ನೆಲ್ಲ ಕೊಟ್ಟು ಇರುವ ಆಸ್ತಿಯನ್ನು ಕರಗಿಸಿ ನೆಮ್ಮದಿ ಹಾಳು ಮಾಡಿಕೊಳ್ಳೋದೇ ಅಥವಾ ಮನೆಯ ಏಕತೆಯ ಅರಿವು ಮೂಡಿಸಿ ತಿಳಿ ಹೇಳಿ ಅಗತ್ಯ ಬಿದ್ದರೆ ನಾಲ್ಕು ಬಾರಿಸಿ ತೆಪ್ಪಗಾಗಿಸೋದೋ? ಮನೆ -ದೇಶ ಒತ್ತಟ್ಟಿಗಿಟ್ಟು ಯೋಚಿಸಿದರೆ ಇಂತಹ ಅನೇಕ ಪ್ರಶ್ನೆಗಳು ಎದುರಾಗುತ್ತವೆ, ಇರಲಿ. ಬ್ರಿಟಿಷರು ಇಂತಹದೊಂದು ಪ್ರಯತ್ನಕ್ಕೆ ೧೮೫೭ರ ನಂತರ ಬಲುವೇಗ ಕೊಟ್ಟರು. ೧೯೦೫ರ ಬಂಗಾಳ ವಿಭಜನೆಯ ನಂತರವಂತೂ ಮುಸಲ್ಮಾಮನರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಲು ಢಾಕಾದ ನವಾಬ ಸಲೀಮುಲ್ಲಾನನ್ನು ಮುಂದಿರಿಸಿಕೊಂಡರು. ವಂಗ ಭಂಗ ಚಳವಳಿಯ ವಿರುದ್ಧ ಅವನು ಮಾತನಾಡುವಂತೆ ಮಾಡಲಾಯಿತು. ಆದರೆ, ಆ ಮಹಾ ಚಳವಳಿಯ ನೇತೃತ್ವ ವಹಿಸಿದ್ದವರು ಮಹಾತ್ಮಗಾಂಧಿಯವರಂತಹ ಅಳ್ಳೆದೆಯವರಾಗಿರಲಿಲ್ಲ. ಹೀಗಾಗಿ ಚಳವಳಿ ಗುರಿಮುಟ್ಟಿತು. ರಾಷ್ಟ್ರೀಯವಾದಿ ಮುಸಲ್ಮಾನಿರಿಗೆ ನಿಜವಾದ ಗೌರವ ದಕ್ಕಿತು. ಹಿಂದೂಗಳಿಗೂ ಅವರ ಮೇಲೆ ಪ್ರೀತಿ ಉಕ್ಕಿತು.
ಗಾಂಧೀಜಿ ಭಾರತದ ಮುಸಲ್ಮಾನರ ನಾಡಿ ಹಿಡಿಯುವಲ್ಲಿ ಸೋತರು. ಅವರಲ್ಲೂ ಬಲು ದೊಡ್ಡ ಸಂಖ್ಯೆಯ ದೇಶಭಕ್ತರಿದ್ದಾರೆನ್ನುವುದನ್ನು ಮರೆತು ದಾರಿತಪ್ಪಿದ ಪುಂಡರನ್ನು ಪುರಸ್ಕರಿಸತೊಡಗಿದರು. ಸ್ವಾತಂತ್ರ್ಯ ಪಡೆಯಲು ಹಿಂದೂ-ಮುಸಲ್ಮಾನರು ಒಟ್ಟಿಗೇ ಹೋಗಬೇಕೆಂಬ ಮೌಢ್ಯ ಅವರನ್ನಾವರಿಸಿಬಿಟ್ಟಿತ್ತು. ಹೀಗಾಗಿಯೇ ಬ್ರಿಟಿಷರು ಖಲೀಫನನ್ನು ಪದಚ್ಯುತಗೊಳಿಸಿದರೆಂಬ ಕಾರಣಕ್ಕಾಗಿ ಒಂದಷ್ಟು ಮುಸಲ್ಮಾನರು ಅವರ ವಿರುದ್ಧ ಮಾತನಾಡಿದಾಗ ಗಾಂಧೀಜಿ ಸ್ಪೂರ್ತಿಗೊಂಡರು. ಇಡಿಯ ಕಾಂಗ್ರೆಸ್ಸನ್ನು ಖಿಲಾಫತ್ ಚಳವಳಿಗೆ ತೊಡಗಿಸಿದರು. ಎಲ್ಲಿಯ ಖಿಲಾ-, ಎಲ್ಲಿಯ ಭಾರತ, ಎಲ್ಲಿಯ ಮುಸಲ್ಮಾನ ಕೊನೆಗೆ ಯಾವ ಹಿಂದೂ? ಒಂದಕ್ಕೊಂದು ಸಂಬಂಧವೇ ಇಲ್ಲ! ಆ ಕದನದೊಂದಿಗೆ ದಕ್ಷಿಣದಲ್ಲಿ ಮಾಪಿಳ್ಳೆಗಳು ಖಲೀ-ನ ರಾಜ್ಯ ಸ್ಥಾಪಿಸಲು ಬ್ರಿಟಿಷರ ವಿರುದ್ಧ ಕತ್ತಿ ಹಿರಿದರು. ದುರ್ದೆವೈ ಆ ಕತ್ತಿಯ ಬಹುಪಾಲು ಪ್ರಯೋಗವಾಗಿದ್ದು ಹಿಂದೂಗಳ ಮೇಲೆ. ನಿಜಕ್ಕೂ ಆ ದಿನಗಳು ಅವಮಾನದವೇ. ಅನೇಕ ತಾಯಂದಿರು ಮಾನಭಂಘಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡರು. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಲಾಯ್ತು. ಅನೇಕರ ಕಗ್ಗೊಲೆಯಾಯ್ತು. ಗಾಂಧೀಜಿಯ ’ಭಾಯಿ-ಭಾಯಿ’ ನಶೆ ಇಳಿದಿರಲಿಲ್ಲ. ಯಂಗ್ ಇಂಡಿಯಾದಲ್ಲಿ ’ಹಿಂದೂಗಳು ಪ್ರೀತಿಯಿಂದಲೇ ಮುಸಲ್ಮಾನರನ್ನು ಗೆಲ್ಲಬೇಕು’ ಎಂದರು. ಹೌದು, ಕ್ರೌರ್ಯವನ್ನು ನೇರವಾಗಿ ನೋಡದ, ಅನುಭವಿಸದ ಎಲ್ಲರಿಗೂ ಗಾಂಧೀಜಿಯ ಮಾತು ಸರಿ ಎನ್ನಿಸಿತು. ಪ್ರತ್ಯಕ್ಷ ಮುಸಲರ ಕತ್ತಿಗೆ ಕತ್ತುಕೊಟ್ಟ ಪರಿವಾರಗಳಿಗೆ ಪ್ರೀತಿಯ ಮೌಲ್ಯ ಅರಿವಾಗಿತ್ತು. ಗಾಂಧೀಜಿಯ ಮೇಲಿನ ಭರವಸೆ ಆರಿತ್ತು. ಇಲ್ಲಿಂದಾಚೆಗೆ ಓಲೈಕೆಯ ಪರ್ವ ಎಂತಹದಾಗಿತ್ತೆಂದರೆ ಅತ್ತ ಬ್ರಿಟಿಷರು ಇತ್ತ ಕಾಂಗ್ರೆಸ್ಸಿಗರು ಡೈವೋರ್ಸಿಗೆ ನಿಂತ ಗಂಡ-ಹೆಂಡತಿ ಮಗುವನ್ನು ತಮ್ಮೆಡೆಗೆ ಸೆಳೇಯಲು ಮಾಡುವಂತಹ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರು! ಫಲಿತಾಂಶ ನಿಜವಾದ ರಾಷ್ಟ್ರೀಯವಾದಿ ಮುಸಲ್ಮಾನರು ನಜ್ಜುಗುಜ್ಜಾದರು. ಮಹಮ್ಮದ್ ಅಲಿ ಜಿನ್ನಾರಂತಹ ಪ್ರಗತಿಪರ ಮುಸಲ್ಮಾನರೂ ಇದಕ್ಕೇ ಬಲಿಯಾಗಿ ಬಿಟ್ಟರು.
’ಓಲೈಸುವಿಕೆ ಅಂದರೆ ತನ್ನನ್ನು ಕೊನೆಯಲ್ಲಿ ತಿನ್ನಲೆಂದು ಮೊಸಳೆಗೆ ತಾನೇ ಆಹಾರ ಒದಗಿಸಿದಂತೆ’ ಅಂತ ಚರ್ಚಿಲ್ ಹೇಳಿದ್ದ. ನಮ್ಮದೂ ಅದೇ ಗತಿಯಾಯ್ತು. ಈ ಓಲೈಕೆ ರಾಜಕಾರಣಕ್ಕೆ ದೇಶವೇ ಕೊನೆಗೆ ತುಂಡಾಯ್ತು.
ಇದು ನಿಜಕ್ಕೂ ಚರ್ಚೆಯ ವಿಷಯ. ಕಾಂಗ್ರೆಸ್ ನೇಮಕ ಮಾಡಿದ ಸಾಚಾರ್ ಸಮಿತಿಯ ವರದಿಯೇ ಹಾಗಿದೆ. ಮುಸಲ್ಮಾನರ ಶಿಕ್ಷಣದ ಮಟ್ಟ ರಾಷ್ಟ್ರೀಯ ಸರಾಸರಿಗಿಂತ ಬಹುಪಾಲು ಕಡಿಮೆ ಇದೆ. ೬ರಿಂದ ೧೪ರ ನಡುವಿನ ಕನಿಷ್ಠ ಕಾಲುಭಾಗದಷ್ಟು ಜನ ಶಾಲೆಯ ಮುಖವನ್ನೇ ನೀಡಿಲ್ಲ. ಪದವಿ ಶಿಕ್ಷಣದಲ್ಲಿ ೨೫ರಲ್ಲಿ ಒಬ್ಬ ಮುಸಲ್ಮಾನನಾದರೆ, ಉನ್ನತ ಶಿಕ್ಷಣದಲ್ಲಿ ೫೦ರಲ್ಲಿ ಒಬ್ಬ! ಐಎಎಸ್ ಪಡೆದವರು ೩ ಪ್ರತಿಶತವಾದರೆ, ಐಎ-ಎಸ್ ಮತ್ತು ಐಪಿಎಸ್‌ನಲ್ಲಿ ಕ್ರಮವಾಗಿ ೧.೮ ಮತ್ತು ೪ ಪ್ರತಿಶತದಷ್ಟು. ಸರ್ಕಾರದ ಇಷ್ಟೆಲ್ಲ ಅವಕಾಶಗಳ ನಂತರವೂ ಮುಖ್ಯವಾಹಿನಿಯಲ್ಲಿ ಮುಸಲ್ಮಾನರ ಸಂಖ್ಯೆ ಬಲುಕಡಿಮೆ. ಯಾಕೆ ಗೊತ್ತಾ? ಕೆಲವೇ ಕೆಲವು ಮತಾಂಧ ಮುಸಲ್ಮಾನರ ಒತ್ತಡಕ್ಕೆ ಮಣಿದ ಪಕ್ಷಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆಯೇ ಹೊರತು ಇಡಿಯ ಸಮಾಜದ ಕುರಿತು ನೈಜ ಕಾಳಜಿ ತೋರುತ್ತಿಲ್ಲ. ಇಲ್ಲವಾದರೆ ರಾಜೀವ್ ಗಾಂಧಿ ಶಾಹ್‌ಬಾನೋ ಪ್ರಕರಣದಲ್ಲಿ ಹಾಗೆ ವರ್ತಿಸುವುದು ಸಾಧ್ಯವೇ ಇರಲಿಲ್ಲ. ನನ್ನ ಕಾಲದ ತರುಣರಿಗೆ ಆ ಘಟನೆಯ ಅರಿವೇ ಇಲ್ಲ. ತನ್ನ ಗಂಡನಿಂದ ಅಚಾನಕ್ಕಾಗಿ ತಲಾಖ್‌ಗೆ ಒಳಗಾದ ಶಾಹ್‌ಬಾನೋ ನ್ಯಾಯಾಲಯದ ಮೆಟ್ಟಿಲೇರಿ ತಿಂಗಳಿಗೆ ೫೦೦ ರೂ. ಪರಿಹಾರ ಕೇಳಿದಳು. ಆಕೆಯ ಅಹವಾಲನ್ನು ಸ್ವೀಕರಿಸಿದ ನ್ಯಾಯಾಲಯ ಅದಕ್ಕೆ ತಕ್ಕಂತೆ ತೀರ್ಪನ್ನೂ ನೀಡಿತು. ಅಲ್ಲಿಗೆ ಮತಾಂಧರನೇಕರು ಬೀದಿಗೆ ಬಂದರು. ನಮ್ಮದು ಇಸ್ಲಾಮಿಕ್ ಕಾನೂನು. ಇದರಲ್ಲಿ ಮೂಗು ತೂರಿಸಲು ನ್ಯಾಯಾಲಯಕ್ಕೆ ಅಧಿಕಾರವೇನೆಂದು ಬಹಿರಂಗವಾಗಿಯೇ ಪ್ರಶ್ನಿಸಲಾಯಿತು. ಈ ದೇಶದ ಅಸ್ಮಿತೆಗೆ ಇದೊಂದು ಬಲುದೊಡ್ಡ ಸವಾಲಾಗಿತ್ತು. ಸರ್ಕಾರವನ್ನು ಬಲಿಕೊಡುವೆನೇ ಹೊರತು ದೇಶವನ್ನಲ್ಲ ಎಂದು ರಾಜೀವ್‌ಗಾಂಧಿ ಎಂದಿದ್ದರೆ ಕತೆ ಮುಗಿದೇ ಹೋಗುತ್ತಿತ್ತು. ಹಾಗಾಗಲಿಲ್ಲ. ಸುಪ್ರೀಂ ಕೋರ್ಟ್‌ನ ವಿರುದ್ಧವಾಗಿ ಕೇಂದ್ರ ಸರ್ಕಾರ ನೀತಿ ರೂಪಿಸಿ ಮುಸಲ್ಮಾನರನ್ನು ಸಂಪ್ರೀತಿಗೊಳಿಸಿತು. ಅದಕ್ಕೆ ಪ್ರತಿಯಾಗಿ ಅಯೋಧ್ಯೆಯಲ್ಲಿ ರಾಮಮಂದಿರದ ಮುಚ್ಚಿದ ಬಾಗಿಲಿನ ಬೀಗ ತೆರೆದು ಹಿಂದೂಗಳನ್ನು ಶಾಂತಗೊಳಿಸುವ ಪ್ರಯತ್ನ ಮಾಡಿತು. ಎರಡೂ ಮತ್ತೆ ಮುಸಲ್ಮಾನರಿಗೆ ಹೊಡೆತವೇ ಆಯಿತು. ನೆನಪಿಡಿ, ಪ್ರತೀ ಬಾರಿ ರಾಜಕೀಯ ಪಕ್ಷಗಳಿಂದ ಕೊಡುಗೆ ಪಡಕೊಂಡಾಗಲೆಲ್ಲ ಮುಸಲ್ಮಾನರು ಹಿಂದೂಗಳ ಹೃದಯದಿಂದ ದೂರವಾಗುತ್ತಾರಲ್ಲದೇ, ಸ್ವತಃ ಮುಖ್ಯವಾಹಿನಿಯಿಂದ ದೂರ ನಿಲ್ಲುವಂತಾಗುತ್ತದೆ.
ಹೌದಲ್ಲವೇ ಮತ್ತೆ! ಜಗತ್ತೆಲ್ಲ ವೈಜ್ಞಾನಿಕವಾದ ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತಿರುವಾಗ ಮುಸಲ್ಮಾಮನರು ಮಾತ್ರ ಹಿಂದುಳಿಯುವುದನ್ನು ಒಪ್ಪಲು ಸಾಧ್ಯವೇನು? ಆದರೆ, ರಾಜಕೀಯ ದುರೀಣರಿಗೆ ಹಾಗಿದ್ದರೇನೇ ಆನಂದ. ಆಗಲೇ ಅವರ ಬೇಳೆ-ಕಾಳು ಬೇಯೋದು. ಅದಕ್ಕೆ ಸಲ್ಮಾನ್ ರಶ್ದಿಯ ’ದಿ ಪಟಾನಿಕ್ ವರ್ಸಸ್’ ಕೃತಿ ಹೊರಬಂದಾಗ ಜಗತ್ತು ನಿಷೇಧಿಸುವ ಮುನ್ನ, ಇರಾನ್ ಫತ್ವಾ ಹೊರಡಿಸುವ ಮುನ್ನ ಭಾರತವೇ ಆ ಕೃತಿಯನ್ನು ನಿಷೇಧಿಸಿ ಹೆಮ್ಮೆ ಪಟ್ಟಿತ್ತು. ರಾಜಸ್ಥಾನದ ಜೈಪುರದ ಸಾಹಿತ್ಯ ಸಮ್ಮೇಳನಕ್ಕೆ ಸಲ್ಮಾನ್ ರಶ್ದಿಯವರು ಬರಬಾರದೆಂದು ಸರ್ಕಾರ ಹೇಳಿತಲ್ಲ; ಕೊನೆಗೆ ವಿಡಿಯೋ ಕಾನರೆನ್ಸಿಂಗನ್ನೂ ರದ್ದು ಮಾಡಿತಲ್ಲ ನಷ್ಟ ಹಿಂದೂಗಳಿಗಾ? ಸವಾಲುಗಳನ್ನು ಎದುರಿಸಲಾಗಲಿಲ್ಲವಲ್ಲ ಎಂಬ ಹಣೆಪಟ್ಟಿ ನಮಗಾ? ಹೇಳಿ. ತಸ್ಲೀಮಾ ನಸ್ರೀನ್‌ಳಿಗೆ ಕೋಲ್ಕತದಲ್ಲಿ ಬೆದರಿಸಿ, ಹೈದರಾಬಾದ್‌ನಲ್ಲಿ ಆಕೆಯನ್ನು ಎಳೆದಾಡಿ, ದೆಹಲಿಯಿಂದ ಓಡಿಹೋಗುವಂತೆ ಮಾಡಿದರಲ್ಲ. ಸತ್ಯವನ್ನು ಸಹಿಸಲಾಗದವರು ಎಂಬ ಬಿರುದು ದಕ್ಕಿದ್ದು ಹಿಂದೂಗಳಿಗಾ? ಹೆಣ್ಣು ಮಗಳೊಂದಿಗೆ ಹೀಗೆ ವ್ಯವಹಾರ ಮಾಡಿದರಲ್ಲ ಎಂಬ ಶಾಪ ತಟ್ಟಿದ್ದು ಯಾರಿಗೆ?
ಬೆರಳೆಣಿಕೆಯಷ್ಟು ಕೆಲವರು ಮಾಡುವ ತಪ್ಪಿಗೆ ಇಡಿಯ ಸಮಾಜ ಇಂದು ಕಣ್ಣೀರಿಡುತ್ತಿದೆಯೆಂಬುದನ್ನು ಮುಸಲ್ಮಾನರು ಅರಿತುಕೊಳ್ಳಬೇಕು. ಒಟ್ಟಾರೆ ೨೪ ಕೋಟಿಯಷ್ಟಿರಬಹುದು ಅವರ ಜನಸಂಖ್ಯೆ. ಅದರಲ್ಲಿ ೧೦ ಪ್ರತಿಶತದಷ್ಟು ಪ್ರತ್ಯೇಕತಾವಾದಿಗಳೆಂದರೂ ೨೫ ಲಕ್ಷವಾಯ್ತು ಅಷ್ಟೇ. ಅಷ್ಟು ಜನರನ್ನು ಮುಸಲ್ಮಾನರು ಮತ್ತು ಸರ್ಕಾರ ಹದ್ದುಬಸ್ತಿನಲ್ಲಿರಿಸಿದರೆ ಇಡಿಯ ಸಮಾಜ ಮತ್ತು ದೇಶ ನೆಮ್ಮದಿಯಿಂದ ಬದುಕುತ್ತದೆ.
ಈ ಪ್ರಯತ್ನಕ್ಕೆ ಯಾರೂ ಕೈ ಹಾಕಿಲ್ಲವೆಂದಲ್ಲ. ಥಿಯಾಲಾಜಿಕಲ್ ಮುಸ್ಲಿಂ ಯುನಿವರ್ಸಿಟಿಯ ಉಪಕುಲಪತಿಗಳಾಗಿದ್ದ ಗುಲಾಂ ಮೊಹಮ್ಮದ ವಸ್ತಾನ್ವಿಯನ್ನು ದಾರುಲ್ ಉಲೂಮ್ ದೇವಬಂದಿಗಳು ಕಿತ್ತೆಸೆದದ್ದು ಅದೇಕೆಂದು ಕೇಳಲಿ ನೋಡೋಣ. ಮೇಲ್ನೋಟಕ್ಕೆ ಅವರು ಕೊಡುವ ಕಾರಣ ಮೋದಿಯನ್ನು ವಸ್ತಾನ್ವಿ ಹೊಗಳಿದ್ದಾರೆ ಅನ್ನೋದು. ಆದರೆ, ವಾಸ್ತವವಾಗಿ ಅವರು ವಿಶ್ವವಿದ್ಯಾಲಯದ ಆಧುನೀಕರಣಕ್ಕೆ ಕೈ ಹಾಕಿದ್ದರು. ಮಾತು ಮಾತಿಗೆ -ತ್ವಾ ಹೊರಡಿಸುವ ದೇವಬಂದಿಗಳ ಪ್ರಯತ್ನಕ್ಕೆ ಕಡಿವಾಣ ಹಾಕಿ ಶುದ್ಧ ಶಿಕ್ಷಣದ ಪರಿಕಲ್ಪನೆ ನೀಡ ಹೊರಟಿದ್ದರು. ಅವರನ್ನು ಕಿತ್ತೆಸೆಯುವ ಚರ್ಚೆ ಬಂದಾಗ ಎಂಟು ಜನ ಮೂಲಭೂತವಾದಿಗಳ ಪರವಾಗಿದ್ದರೆ ಐವರು ವಸ್ತಾನ್ವಿಯ ಜೊತೆಗೆ ನಿಂತಿದ್ದರು. ವಿಶ್ವವಿದ್ಯಾಲಯದಿಂದ ವಸ್ತಾನ್ವಿ ಹೊರಬಂದರು. ಮುಸಲ್ಮಾನ ಸಮಾಜ ಮತ್ತೆ ೫೦ ವರ್ಷ ಹಿಂದೆ ಹೋಗಿ ನಿಂತಿತು. ಪಾಕಿಸ್ತಾನದ ಅಧ್ಯಕ್ಷರು ದರ್ಗಾ ಶರೀ-ಗೆ ಬಂದಾಗ ಖ್ವಾಜಾ ಜೈನುಲಬ್ದೀನರು ’ನಮ್ಮ ಸೈನಿಕನ ತಲೆ ಕಡಿದೊಯ್ದ ದೇಶದವನು ಬಂದಾಗ ನಾನು ಕೂರಲಾರೆ’ ಎನ್ನುತ್ತ ಎದ್ದು ಹೋದರಲ್ಲ ಅವರು ಅದ್ಯಾವ ದೇಶಭಕ್ತರಿಗೆ ಕಡಿಮೆ !
ಮುಖ್ಯವಾಹಿನಿಯಲ್ಲಿ ನಿಂತು ತಮ್ಮವರನ್ನು ಕರೆಯುತ್ತಿರುವ ಇಂಥವರ ಸಂಖ್ಯೆ ಬೇಕಾದಷ್ಟಿದೆ. ಅಂಥವರನ್ನು ನಾವೂ ಗುರುತಿಸುತ್ತಿಲ್ಲ; ಸರ್ಕರವೂ ಗೌರವಿಸುತ್ತಿಲ್ಲ. ಕಾಶ್ಮೀರದಲ್ಲಿ ನಿವೃತ್ತ ಉನ್ನತ ಅಧಿಕಾರಿಯೊಬ್ಬರು ಸಿಕ್ಕಿದ್ದರು. ಅವರಿಗೆ ನಮ್ಮೆಲ್ಲರ ಮೇಲೂ ಆಕ್ರೋಶ. ’ನಾಳೆ ಬೆಳಗ್ಗೆಯೇ ದೇಶದೊಂದಿಗೆ ಉಳಿಯಬೇಕೆಂದು ಬಯಸುವ ೫ ಲಕ್ಷ ಕಾಸ್ಮೀರಿ ಮುಸಲ್ಮಾನರನ್ನು ಒಟ್ಟುಗೂಡಿಬಲ್ಲೆ. ನನಗಾಗಿ ನೀವೇನು ಮಾಡುವಿರಿ?’ ಎಂದರು. ಕಳೆದ ಅನೇಕ ವರ್ಷಗಳಿಂದ ಕಾಶ್ಮೀರವನ್ನು ಭಾರತದೊಂದಿಗೆ ಜೋಡಿಸುವ ಪ್ರಯತ್ನದಲ್ಲಿ ಅವರು ನಿಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೇನು? ಅವರಿಗೆ ರಕ್ಷಣೆಯೂ ಇಲ್ಲ, ದೇಶದಲ್ಲಿ ಅವರ ಕುರಿತು ಚರ್ಚೆಯೂ ಇಲ್ಲ. ’ಪಾಕಿಸ್ತಾನ್ ಜಿಂದಾಬಾದ್’ ಎಂದವರು ಮಾತ್ರ ಪತ್ರಿಕೆಗಳಲ್ಲಿ ಮಿಂಚುತ್ತಾರೆ. ಶಾಸಕರಾಗುತ್ತಾರೆ, ಮಂತ್ರಿ-ಮುಖ್ಯಮಂತ್ರಿಯೂ ಆಗುತ್ತಾರೆ ! ಇದೆಲ್ಲ ಓಲೈಕೆ ರಾಜಕಾರಣದ ಪರಿಣಾಮವೇ.
ಉತ್ತರಪ್ರದೇಶದಲ್ಲಿ ಇತ್ತೀಚೆಗೆ ದಂಗೆಗಳಾದವಲ್ಲ, ಅದರ ಹಿಂದೆಯೂ ಈ ಬಗೆಯ ಕ್ಷುಲ್ಲಕ ರಾಜಕಾರಣದ ಗಬ್ಬುವಾಸನೆ ಕಂಡುಬರುತ್ತಿದೆ. ನೆನಪಿಡಿ, ಅಂತಿಮವಾಗಿ ಅದರ ದುಷಲಾನುಭವಿಗಳು ಮುಸಲ್ಮಾನರೇ!
ಬೆಕ್ಕಿನ ಮೂಗಿಗೆ ತುಪ್ಪ ಸವರಿ ಬಿಟ್ಟುಬಿಡಿ. ಅದು ಇಡಿಯ ದಿನ ಹುಚ್ಚಿಗೆ ಬಿದ್ದು ತಿರುಗಾಡುತ್ತಿರುತ್ತದೆ. ತುಪ್ಪದ ವಾಸನೆ ಬರುತ್ತಿರುತ್ತೆ, ತಿನ್ನಲು ಮಾತ್ರ ದಕ್ಕುವುದಿಲ್ಲ. ೬೭ ವರ್ಷಗಳಿಂದ ಕಾಂಗ್ರೆಸ್ಸು ಮಾಡಿದ್ದು ಅದನ್ನೇ. ಅದನ್ನು ಇತರ ಪಕ್ಷಗಳೂ ಅನುಸರಿಸಿವೆ. ಇದರ ಫಲವನ್ನು ದೇಶ ಬಲು ಕೆಟ್ಟದಾಗಿ ಅನುಭವಿಸಿದೆ. ಅದರದ್ದೇ ಮುಂದುವರಿದ ಭಾಗ ಶಿಂಧೆಯ ಪತ್ರ. ಭಯೋತ್ಪಾದಕರನ್ನು ಪೊಲೀಸರು ಹಿಡಿದಿದ್ದರಿಂದ ಮುಸಲ್ಮಾನರಿಗೆ ನೋವಾಗಿದೆಯಂದು ಭಾವಿಸಿ ಹೀಗೆ ಮುಲಾಮು ಹಚ್ಚಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದಕ್ಕೆ ಪ್ರತ್ಭಿಟನೆ ವ್ಯಕ್ತವಾಗಬೇಕಿರೋದು ಹಿಂದೂಗಳೆಡೆಯಿಂದಲ್ಲ, ಸ್ವತಃ ಮುಸಲ್ಮಾನರ ಕೇರಿಗಳಿಂದಲೇ. ಸೌದಿಯಲ್ಲಿ ದೊರೆಗಳು ಮೆಕ್ಕಾ ಮಸೀದಿಯ ಒಂದು ಭಾಗವನ್ನೇ ದುರಸ್ತಿ ನೆಪ ಮಾಡಿ ಕೆಡವಿ ಹಾಕಿದರು; ಕುವೈತ್‌ನಲ್ಲಿ ಚುನಾವಣೆ ಎಂದಾಗ ಮುಲಾಜಿಲ್ಲದೇ ರಂಜಾನ್ ಪರ್ವದಲ್ಲೂ ನಡೆಸಲಾಯ್ತು. ನಮ್ಮಲ್ಲಿನ್ನೂ ಹಳೆಯ ರಾಗ. ಕೇರಳದಲ್ಲಿ ಇತ್ತೀಚೆಗೆ ಮುಸಲ್ಮಾನ ಹೆಣ್ಮಗಳಿಗೆ ಮದುವೆಯಾಗಲು ೧೮ ಆಗಿರಬೇಕೆಂದಿಲ್ಲವೆಂಬ ನಿರ್ಣಯ ಮಂಡಿಸಲು ಸರ್ಕಾರ ತಯಾರಾಗಿಬಿಟ್ಟಿತ್ತು. ನಿಜಕ್ಕೂ ಇದು ಭಯಾನಕ ಸುದ್ದಿ. ಓಲೈಕೆ ಫಲಾನುಭವಿಗಳಿಗೆ ಆರಂಭದಲ್ಲಿ ಖುಷಿಯೇ. ಆದರೆ, ನಿಜವಾದ ಸಮಯ ಬಂದಾಗ ಹೋರಾಡುವ ಕಲೆಯೇ ಮರೆತು ಹೋಗಿರುತ್ತೆ, ಎಚ್ಚರಿಕೆ !!

Comments are closed.