ವಿಭಾಗಗಳು

ಸುದ್ದಿಪತ್ರ


 

ಇದು ಟ್ರೇಲರ್ ಮಾತ್ರ. ಸಿನಿಮಾ ಇನ್ನೂ ಬಾಕಿ ಇದೆ..

ಮುಲಾಜಿಲ್ಲದೇ ಭಯೋತ್ಪಾದನೆಯನ್ನು ಮಟ್ಟಹಾಕುವ ಘೋಷಣೆಗೆ ಬದ್ಧವಾದ ಮೋದಿಯವರ ಈ ನಿರ್ದಯ ನಡೆ ಫ್ರಾನ್ಸ್, ಜರ್ಮನಿಯಂತಹ ರಾಷ್ಟ್ರಕ್ಕೂ ಮಾದರಿಯಾಗಿದ್ದರಲ್ಲಿ ಅಚ್ಚರಿಯಲ್ಲ. ಹೀಗಾಗಿ ಅಂತರಾಷ್ಟ್ರೀಯ ಮಾಧ್ಯಮಗಳೂ ನಮ್ಮ ಬೆಂಬಲಕ್ಕೆ ನಿಂತವು. ಜೊತೆಗೆ ಬೇರೆ-ಬೇರೆ ಪಕ್ಷಗಳ ಮೀಟಿಂಗು ಕರೆದು ಕಾಶ್ಮೀರದ ಪರಿಸ್ಥಿತಿಯನ್ನು ವಿವರಿಸಿದ ಮೋದಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೆಜ್ಜೆ ಇಟ್ಟರು. ಅಲ್ಲಿಗೆ ಕಾಶ್ಮೀರದ ಕೈ ಬೆರಳೆಣಿಕೆಯಷ್ಟು ಪ್ರತ್ಯೇಕತಾವಾದಿಗಳಿಗೆ ದೇಶ ಮತ್ತು ಜಗತ್ತಿನಾದ್ಯಂತ ಸಿಗುತ್ತಿದ್ದ ಬೆಂಬಲ ಇಲ್ಲವಾಗಿ ಕಣಿವೆ ಕುದಿಯಿತು, ನಿಧಾನವಾಗಿ ಆರಿತು.

0,,16916110_303,00

ಜುಲೈ ತಿಂಗಳ ಮೊದಲ ವಾರದಲ್ಲಿ ಭಾರತದ ಸಾರ್ವಭೌಮತೆಗೆ ಸವಾಲಾಗಿದ್ದ ಬುಹರ್ಾನ್ ವನಿಯನ್ನು ಭಾರತೀಯ ಸೇನೆ ತಣ್ಣನೆಯ ಎನ್ಕೌಂಟರ್ನಲ್ಲಿ ಮುಗಿಸಿದೊಡನೆ ದೇಶದಾದ್ಯಂತ ಅನೇಕರು ಬೆಚ್ಚಗಾಗಿಬಿಟ್ಟಿದ್ದಾರೆ. ಪತ್ರಿಕೋದ್ಯಮದ ಹೆಸರಲ್ಲಿ ದೇಶ ಮಾರುವ ಧಂಧೆಗೆ ಕೈ ಹಾಕಿರುವ ಪತ್ರಕರ್ತರು, ಸಾಹಿತಿಗಳು, ಬುದ್ಧಿಜೀವಿಗಳೆಲ್ಲ ಅರ್ಧರಾತ್ರಿಯಲ್ಲಿ ಚೇಳು ಕಡಿಸಿಕೊಂಡಂತಾಗಿದ್ದಾರೆ. ಇವರುಗಳ ನೈತಿಕತೆಯ ಮೇಲೆ ಪ್ರಶ್ನೆ ಹುಟ್ಟಲು ಕಾರಣವಿದೆ. ಬುಹರ್ಾನನ ಸಾವಿಗೆ ಕುಪಿತಗೊಂಡಿದ್ದು ಹಿಜ್ಬುಲ್ ಮುಜಾಹಿದೀನ್ ಎಂಬ ಜೀಹಾದೀ ಸಂಘಟನೆ. ಬುಹರ್ಾನ್ ಸತ್ತ ನಂತರ ಎಗರಾಡಿದ್ದು ಪಾಕಿನಲ್ಲಿರುವ ಜೀಹಾದಿ ಉನ್ಮತ್ತ ಭಯೋತ್ಪಾದಕ ಹಾಫೀಜ್ ಸಯೀದ್, ಚೀನಾ ಈತನ ಸಾವಿನ ನಂತರ ಪಾಕೀಸ್ತಾನದ ಪರವಾಗಿ ಮಾತನಾಡಿತು. ಸ್ವತಃ ಪಾಕೀಸ್ತಾನ ಒಂದು ದಿನವನ್ನು ‘ಬ್ಲ್ಯಾಕ್ ಡೇ’ ಅಂತ ಆಚರಣೆ ಮಾಡಿತು. ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ಬೊಂಬಡಾ ಬಜಾಯಿಸಿದರು. ಪಾಕೀಸ್ತಾನದಿಂದ ಹಣ ಪಡೆಯುವ ಕಾಶ್ಮೀರದ ಪತ್ರಕರ್ತರು ಬೊಬ್ಬೆಯಿಟ್ಟರು. ಇವರ ಸಾಲಿನಲ್ಲಿಯೇ ನಿಂತು ಬಖರ್ಾ, ರಾಜ್ದೀಪ್, ಸಾಗರಿಕಾ, ರಾಣಾ ಅಯೂಬ್ ಅರಚಾಡಿದರು. ಕನ್ನಡದ ಕೆಲವು ‘ಕ್ಯಾತೆ’ ಪತ್ರಕರ್ತರು ಮೈ ಪರಚಿಕೊಂಡರು. ಹೀಗಾಗಿಯೇ ಇಂದು ಸಾಮಾನ್ಯ ಭಾರತೀಯ ಇವರನ್ನೆಲ್ಲ ದೇಶದ್ರೋಹದ ತಕ್ಕಡಿಯಲ್ಲಿಟ್ಟು ತೂಗಿ ನೋಡುತ್ತಿರೋದು.
ಕಾಂಗ್ರೆಸ್ನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧ್ಯ ‘ಕಾಶ್ಮೀರದಲ್ಲಿ ಜನಮತ ಗಣನೆ ನಡೆಸುವುದೊಳಿತು’ ಎಂದ. ಕನರ್ಾಟಕದಲ್ಲಿ ಪತ್ರಕರ್ತರೊಬ್ಬರು ಬುಹರ್ಾನ್ ವನಿಯ ಶವ ಸಂಸ್ಕಾರಕ್ಕೆ ಸೇರಿರುವ ಜನ ಕಾಶ್ಮೀರ ಎತ್ತ ಹೋಗಬೇಕೆಂಬುದರ ಸಂಕೇತ ಎಂದು ಹೇಳಿ ಅಕ್ಷರಶಃ ಪ್ರತ್ಯೇಕತಾವಾದಿಯ ಭಾಷೆ ಮಾತನಾಡಿಬಿಟ್ಟರು. ತಮ್ಮ ಪತ್ರಿಕೆಯನ್ನು ಮನೆಯವರೊಂದಿಗೆ ಹಂಚಿಕೊಳ್ಳುವಾಗಲೇ ರಂಪಾಟ ಮಾಡಿಕೊಂಡಿದ್ದವರೆಲ್ಲ ದೇಶದ ಭಾಗವನ್ನೇ ತುಂಡರಿಸಿ ಕೊಟ್ಟು ಮಹಾ ಮಾನವತೆಯ ಸೋಗು ಹಾಕ ಹೊರಟಿದ್ದಾರೆ. ಧಿಕ್ಕಾರವಿರಲಿ ಇವರಿಗೆಲ್ಲ!
ಎಂದಿನಂತೆ ಮೋದಿ ಬಲು ಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟಿದ್ದಾರೆ. ಕಾಶ್ಮೀರದಲ್ಲಿ ಬಲವಾದ ಹೆಜ್ಜೆ ಊರುವ ಮುನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕೀಸ್ತಾನದ ನೈಜ ಬಣ್ಣವನ್ನು ಮತ್ತೆ ಮತ್ತೆ ಬಯಲಿಗೆಳೆದಿದ್ದಾರೆ. ಅವರು ವಿಶ್ವಸಂಸ್ಥೆಯಿಂದ ಹಿಡಿದು ಅಮೇರಿಕದ ಸಂಸತ್ತಿನವರೆಗೆ ಎಲ್ಲೆಲ್ಲಿ ಭಾಷಣ ಮಾಡಿದ್ದಾರೋ ಅಲ್ಲೆಲ್ಲಾ ಸಾಮಾನ್ಯವಾಗಿ ಭಯೋತ್ಪಾದನೆಯ ಕುರಿತಂತೆ, ವಿಶೇಷವಾಗಿ ಪಾಕೀಸ್ತಾನದ ಪಾತ್ರದ ಕುರಿತಂತೆ ಉಲ್ಲೇಖ ಮಾಡಿಯೇ ಮಾಡಿದ್ದಾರೆ. ಭಾರತದ ವಿದೇಶಾಂಗ ಸಚಿವರಿರಲಿ, ರಕ್ಷಣಾ ಸಚಿವರೇ ಇರಲಿ ಎಲ್ಲರೂ ಜಾಗತಿಕ ವೇದಿಕೆಯಲ್ಲಿ ಪಾಕೀಸ್ತಾನದ ಜೀಹಾದಿ ಉನ್ಮತ್ತತೆಯ ಕುರಿತಂತೇ ಮಾತನಾಡಿರೋದು. ಒಟ್ಟಾರೆ ಇದರ ಪರಿಣಾಮ ಪಾಕೀಸ್ತಾನವನ್ನು ಸಮಥರ್ಿಸಿಕೊಳ್ಳಲು ಜಗತ್ತು ಸಾಧ್ಯವೇ ಆಗದ ಸ್ಥಿತಿಗೆ ತಲುಪಿಬಿಟ್ಟಿದೆ. ಅದಕ್ಕೇ ಚೀನಾ ಕೂಡ ಮುಂಬೈ ದಾಳಿಯಲ್ಲಿ ಪಾಕೀಸ್ತಾನದ ಪಾತ್ರವಿರುವುದನ್ನು ಒಪ್ಪಿಕೊಳ್ಳಲೇಬೇಕಾಗಿಬಂದಿತ್ತು.
ಇತ್ತ ಭಾರತೀಯ ಸೇನೆ ಕಾಶ್ಮೀರದ ಭಯೋತ್ಪಾದಕರನ್ನು ಮುಗಿಸಿಬಿಡಬೇಕೆಂಬ ಹಠ ಹೊತ್ತು ಕಾಯರ್ಾಚರಣೆ ಶುರುಮಾಡಿ ಬುಹರ್ಾನ್ ವನಿಯನ್ನು ಕೊಂದಿತಲ್ಲ ಆಗ ಅಕ್ಕಪಕ್ಕದ ಊರಿನ ತರುಣರು ಧಾವಿಸಿ ಬಂದು ಸೈನಿಕರ ಮೇಲೆ ಕಲ್ಲೆಸೆಯಲಾರಂಭಿಸಿದ್ದರು. ಪರಿಸ್ಥಿತಿಯ ಲಾಭ ಪಡೆದು ಒಳನುಗ್ಗಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ ಭಯೋತ್ಪಾದಕರನ್ನು ಮತ್ತೆ ಸೈನ್ಯ ಹುಡುಕಿ ಕೊಂದು ಹಾಕಿತು. ಅಲ್ಲಿಗೆ ಭಾರತದ ಕಾಶ್ಮೀರ ನೀತಿಗೆ ಹೊಸ ಆಯಾಮ ದಕ್ಕಂತಾಗಿತ್ತು. ಭಾರತ ಈಗ ಹೆದರಿ ಕೂರುವ ಹೇಡಿಯಾಗುಳಿಯಲಿಲ್ಲ. ತದುಕಿ ಬಿಡುವ ಶಕ್ತಿಯಾಗಿ ಬೆಳೆದು ನಿಂತಿತ್ತು. ಅದೇ ಅನೇಕರಿಗೆ ನುಂಗಲಾರದ ತುತ್ತು.
ಈ ಹಿಂದೆ ಪಂಜಾಬಿನಲ್ಲಿ ಪ್ರತ್ಯೇಕ ಖಲಿಸ್ತಾನದ ಬೇಡಿಕೆ ಇಟ್ಟಿದ್ದ ಭಯೋತ್ಪಾದಕರು ಅಟ್ಟಹಾಸ ಮೆರೆಯುತ್ತಿದ್ದಾಗಲೂ ಹಿಂಗೇ ಆಗಿತ್ತು. ಒಂದಷ್ಟು ಜನ ಮಾನವ ಹಕ್ಕುಗಳ ನೆಪ ಹೇಳುತ್ತ ಪ್ರತ್ಯೇಕತೆಯ ಅಗ್ನಿಕುಂಡಕ್ಕೆ ತುಪ್ಪ ಸುರಿಯುತ್ತಿದ್ದರು. ಆದರೆ ಪೊಲೀಸ್ ಜನರಲ್ ಕೆ ಸಿ ಎಸ್ ಗಿಲ್ ಮುಲಾಜು ನೋಡಲಿಲ್ಲ. ಪ್ರತ್ಯೇಕತಾವಾದಿಗಳನ್ನು ಸರಿಯಾಗಿ ಬಡಿದು ಕೂಗಡಗಿಸಿಬಿಟ್ಟರು. ಈಗ ಅಲ್ಲಿ ಆ ರೀತಿಯ ಯಾವ ಕೂಗೂ ಉಳಿದಿಲ್ಲ. ಅವರ ಬೆಂಬಲಕ್ಕೆ ಅಂದು ನಿಂತವರಿಗೆ ಇಂದು ಖಲಿಸ್ತಾನ್ ಮರೆತೇ ಹೋಗಿದೆ! ಕಾಶ್ಮೀರ ಸಮಸ್ಯೆ ಅದಕ್ಕಿಂತಲೂ ಸ್ವಲ್ಪ ಬೆಳೆದಿದೆ ನಿಜ. ಆದರೆ ಭಾರತ ಶಕ್ತಿಯುತವಾಗಿ ನಿಂತುಬಿಟ್ಟರೆ ಇನ್ನು ಕೆಲವು ವರ್ಷಗಳಲ್ಲಿಯೇ ಈ ಸಮಸ್ಯೆಯಿಂದ ನಾವು ಪೂರ್ಣ ಮುಕ್ತಿ ಪಡೆಯಬಹುದಷ್ಟೇ ಅಲ್ಲ ಪಾಕೀಸ್ತಾನಕ್ಕೆ ಹೊಸದೊಂದಷ್ಟು ಸಮಸ್ಯೆ ಸೃಷ್ಟಿಸಬಹುದು!
ಇಷ್ಟಕ್ಕೂ ಕಾಶ್ಮೀರದ ಕದನ ಸ್ವಾತಂತ್ರ್ಯದ ಕದನವೆಂಬುದನ್ನು ಮುಸಲ್ಮಾನರೇ ಒಪ್ಪಲಾರರು. ಕುಂವರ್ ಶಾಹಿದ್ ಎಂಬ ಪಾಕೀಸ್ತಾನದ ಪತ್ರಕರ್ತ ದಿ ನೇಶನ್ಗೆ ಬರೆದ ಲೇಖನವೊಂದರಲ್ಲಿ, ‘ಕಳೆದ ಶತಮಾನದ ಕೊನೆಯಲ್ಲಿ ಇಸ್ಲಾಮೇತರರ ವಿರುದ್ಧ ಶುರುವಾದ ಜೀಹಾದ್ ಚಳವಳಿ ಮುಸಲ್ಮಾನ ಬಹುಸಂಖ್ಯಾತರ ಸ್ವಾತಂತ್ರ್ಯಾಂದೋಲನವಾಗಿ ರೂಪುಗೊಂಡಿತು. ಇದರ ಬಹುಮುಖ್ಯ ಸಮಸ್ಯೆಯೆಂದರೆ ಈ ಇಸ್ಲಾಮೀ ಸ್ವಾತಂತ್ರ್ಯ ಚಳವಳಿ ಸ್ವಾತಂತ್ರ್ಯದ ಮೂಲ ಕಲ್ಪನೆಗೇ ವಿರುದ್ಧವಾದುದು’ ಎಂದ. ನಿಜವಾದ ಇಸ್ಲಾಮೀ ಕಾಶ್ಮೀರ ಸೂಫಿ ಚಿಂತನೆಯ ಆಧಾರದ ಮೇಲೆ ರಚಿತವಾದುದಾಗಿತ್ತು. ಅದು ಬಲವಾಗಿರುವವರೆಗೆ ಎಲ್ಲರೊಳಗೆ ಒಂದಾಗಿ ಹಾಯಾಗಿ ಬದುಕಿದ್ದರು ಅವರು. ಸೌದಿಯ ಹಣ ಪಾಕೀಸ್ತಾನದ ಮೂಲಕ ಹರಿಯಲಾರಂಭಿಸಿದೊಡನೆ ಸೂಫಿ ಚಿಂತನೆಗಳನ್ನು ವಹಾಬಿ ಚಳವಳಿ ಆಕ್ರಮಿಸಿತು. ಯಾರೊಂದಿಗೂ ಸಹಬಾಳ್ವೆ ನಡೆಸಲಾಗದ ಈ ವಹಾಬಿಗಳು ಕಾಶ್ಮೀರವನ್ನು ಅಗ್ನಿಕುಂಡ ಮಾಡಿಬಿಟ್ಟರು.
ಅದಕ್ಕೇ, ಮಾತುಕತೆ ನಡೆಸಿದ ಮಾತ್ರಕ್ಕೆ ಕಾಶ್ಮೀರದ ಪರಿಸ್ಥಿತಿ ಸುಧಾರಿಸುವುದೆಂಬ ವಿಶ್ವಾಸವೇನಿಲ್ಲ. ವಾಜಪೇಯಿ ಬಲುದೊಡ್ಡ ಪ್ರಯೋಗವೊಂದನ್ನು ಮಾಡಲು ಯತ್ನಿಸಿ ಕಾಗರ್ಿಲ್ ಯುದ್ಧಕ್ಕೆ ಭಾಷ್ಯ ಬರೆದದ್ದು ನೆನಪಿರಬೇಕಲ್ಲ. ಮನಮೋಹನ ಸಿಂಗರೂ ಪ್ರತ್ಯೇಕತಾವಾದಿಗಳನ್ನು ಸೇರಿಸಿ ಎಲ್ಲರೊಂದಿಗೆ ಮಾತಾಡಿದ್ದರು. ಮಾತಾಡಿದ್ದನ್ನು ಕ್ರಿಯೆಯ ರೂಪಕ್ಕೆ ಇಳಿಸಲೆಂದೇ ಗುಂಪುಗಳನ್ನು ರಚಿಸಲಾಗಿತ್ತು. ಇದರ ಚಟುವಟಿಕೆ ಶುರುವಾಗುತ್ತಿದ್ದಂತೆ ಮತ್ತೆ ಕಲ್ಲೆಸೆತ ಶುರುವಾಯ್ತು. ನೆನಪು ಮಾಡಿಕೊಳ್ಳಿ, 2010 ರಲ್ಲಿ ಎನ್ಕೌಂಟರ್ ಒಂದನ್ನು ಸುಳ್ಳೆಂದು ಜರಿದು ಸಿಡಿದೆದ್ದ ಕಾಶ್ಮೀರಿ ತರುಣರನ್ನು ತಡೆಯಲೆತ್ನಿಸಿದ ಸೈನ್ಯ ನೂರಕ್ಕೂ ಹೆಚ್ಚು ಜನರನ್ನು ಕೊಂದು ಬಿಸಾಡಿತ್ತು. ಆಗ ಉತ್ಪಾತಗಳೇ ಆಗಿ ಹೋಗಿತ್ತು. ಈ ಬಾರಿ ಹಾಗಾಗಲಿಲ್ಲ. ತಲೆಗೆ ಬೆಲೆ ಕಟ್ಟಿದ್ದ ಉಗ್ರನನ್ನು ಕೊಂದ ನಂತರ ಕಲ್ಲೆಸೆತಕ್ಕಿಳಿದವರನ್ನು ಸೈನ್ಯ ಎಚ್ಚರಿಕೆಯಿಂದ ಸಂಭಾಳಿಸಿತು. ಸಾವಿನ ಸಂಖ್ಯೆ 40 ದಾಟಲಿಲ್ಲ. ಪರಿಣಾಮವೇನು ಗೊತ್ತೇ? ಪ್ರತಿಭಟನೆಗೆ ದೇಶಾದ್ಯಂತ ಸಜ್ಜಾದವರಿಗೆ ಸೂಕ್ತ ವಿಷಯವೂ ಸಿಗಲಿಲ್ಲ, ಸಮರ್ಥನೆಯೂ ಸಿಗಲಿಲ್ಲ. ತೆಪ್ಪಗಾಗಲೇಬೇಕಾಯ್ತು.
ಈ ಬಾರಿ ಬುದ್ಧಿಜೀವಿಗಳು ತುಟಿಪಿಟಿಕ್ ಎನ್ನದಿರಲು ಎರಡು ಪ್ರಮುಖ ಕಾರಣವಿದೆ. ಮೊದಲನೆಯದು ಇಂಗ್ಲೀಷ್ ಮಾಧ್ಯಮಗಳ ಸುಳ್ಳುಗಳನ್ನು ಸೋಸಿ ತೆಗೆದು ಈ ದ್ರೋಹಿಗಳ ಮುಖವಾಡ ಕಳಚಲು ಟೈಮ್ಸ್ ನೌ ನ ಅರ್ಣಬ್ ಗೋಸ್ವಾಮಿ ಟೊಂಕಕಟ್ಟಿ ನಿಂತಿದ್ದು. ಅನುಮಾನವೇ ಇಲ್ಲ. ಇಡಿಯ ದೇಶದ ಬೌದ್ಧಿಕ ಪ್ರಪಂಚ ವಾರಗಟ್ಟಲೆ ಅರ್ಣಬ್ನ ಮಾತುಗಳಿಗೆ ಕಿವಿಯಾಯ್ತು. ಆತನಂತೂ ರಾಷ್ಟ್ರೀಯತೆಯ ವಿರುದ್ಧ ಒಟ್ಟಾದ ಪ್ರತಿಯೊಬ್ಬರನ್ನೂ ಮುಲಾಜಿಲ್ಲದೇ ಝಾಡಿಸಿದ. ಪಾಕೀಸ್ತಾನದಿಂದಲೂ ಕೆಲವರನ್ನು ಕರೆತಂದು ಮಸಿ ಬಳಿದು ಕಳಿಸಿದ. ಕಾಶ್ಮೀರದ ಪ್ರತ್ಯೇಕತಾವಾದಿಗಳಿಗಂತೂ ಭಾರತ ಬೇಡವೆಂದರೆ ಪಾಸ್ ಪೋಟರ್್ ಕೊಟ್ಟು ಪಾಕೀಸ್ತಾನಕ್ಕೆ ಮರಳಿಬಿಡಿರೆಂದ. ಓಹ್! ಅವನ ಮಾತುಗಳು ಆ ದಿನಗಳಲ್ಲಂತೂ ಕಣರ್ಾನಂದಕರವೇ! ಆತನ ಸದ್ದು ರಾಷ್ಟ್ರದ ಮೂಲೆ ಮೂಲೆಗೂ ಅಪ್ಪಳಿಸುತ್ತಿದ್ದಂತೆ ಪತ್ರಿಕೋದ್ಯಮದ ಧಂಧೆಕೋರರು ಬೆಚ್ಚಿಬಿದ್ದರು, ಮೂಲೆಗುಂಪಾದರು. ಜéೀ ಟೀವಿಯ ಬಳಗ ಅಸ್ಲಿ ಕಾಶ್ಮೀರ್ ಎನ್ನುವ ಕಾರ್ಯಕ್ರಮ ಮಾಡಿ ನೆಮ್ಮದಿ ಬಯಸುವ ಕಾಶ್ಮೀರಿಗಳ ದರ್ಶನ ಮಾಡಿಸಿ, ಅವರಿಂದ ಭಾರತ ಮಾತಾ ಕಿ ಜೈ ಹೇಳಿಸಿ ದೇಶವನ್ನು ಬೆಚ್ಚಿಬೀಳಿಸಿತು. ಆದರೆ ರಾಣಾ ಅಯೂಬ್ ತರದ ಪತ್ರಕರ್ತರು ಏಟುತಿಂದ ಕಾಶ್ಮೀರಿ ತರುಣರ ಹೆಸರಲ್ಲಿ ಇಸ್ರೇಲ್ ದಾಳಿಗೆ ಬಲಿಯಾದ ತರುಣರ ಚಿತ್ರಗಳನ್ನು ಶೇರ್ ಮಾಡಿ ಛೀಮಾರಿಗೆ ಒಳಗಾದರು. ಪತ್ರಿಕಾ ಧಂಧೆಕೋರರು ಬೆಚ್ಚಿಬಿದ್ದದ್ದು ಕಣ್ಣಿಗೆ ರಾಚುತ್ತಿತ್ತು.
ಮುಲಾಜಿಲ್ಲದೇ ಭಯೋತ್ಪಾದನೆಯನ್ನು ಮಟ್ಟಹಾಕುವ ಘೋಷಣೆಗೆ ಬದ್ಧವಾದ ಮೋದಿಯವರ ಈ ನಿರ್ದಯ ನಡೆ ಫ್ರಾನ್ಸ್, ಜರ್ಮನಿಯಂತಹ ರಾಷ್ಟ್ರಕ್ಕೂ ಮಾದರಿಯಾಗಿದ್ದರಲ್ಲಿ ಅಚ್ಚರಿಯಲ್ಲ. ಹೀಗಾಗಿ ಅಂತರಾಷ್ಟ್ರೀಯ ಮಾಧ್ಯಮಗಳೂ ನಮ್ಮ ಬೆಂಬಲಕ್ಕೆ ನಿಂತವು. ಜೊತೆಗೆ ಬೇರೆ-ಬೇರೆ ಪಕ್ಷಗಳ ಮೀಟಿಂಗು ಕರೆದು ಕಾಶ್ಮೀರದ ಪರಿಸ್ಥಿತಿಯನ್ನು ವಿವರಿಸಿದ ಮೋದಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೆಜ್ಜೆ ಇಟ್ಟರು. ಅಲ್ಲಿಗೆ ಕಾಶ್ಮೀರದ ಕೈ ಬೆರಳೆಣಿಕೆಯಷ್ಟು ಪ್ರತ್ಯೇಕತಾವಾದಿಗಳಿಗೆ ದೇಶ ಮತ್ತು ಜಗತ್ತಿನಾದ್ಯಂತ ಸಿಗುತ್ತಿದ್ದ ಬೆಂಬಲ ಇಲ್ಲವಾಗಿ ಕಣಿವೆ ಕುದಿಯಿತು, ನಿಧಾನವಾಗಿ ಆರಿತು.
ಈಗ ನೋಡಿದ್ದು ಟ್ರೇಲರ್ ಮಾತ್ರ. ಸಿನಿಮಾ ಇನ್ನೂ ಬಾಕಿ ಇದೆ. ಭಾರತ ಸಾರ್ವಭೌಮತೆಗೆ ಧಕ್ಕೆ ತರುವ ಯಾವುದನ್ನೂ ಇನ್ನು ಮುಂದೆ ಭಾರತ ಸಹಿಸಲಾರದು. ಎಚ್ಚರಿಕೆ ಸ್ಪಷ್ಟವಾಗಿ ರವಾನೆಯಾಗಿದೆ.

Comments are closed.