ವಿಭಾಗಗಳು

ಸುದ್ದಿಪತ್ರ


 

ಇದು ಬೌದ್ಧಿಕ ಕ್ಷತ್ರಿಯರ ಯುದ್ಧ

Screenshot_2015-07-22-06-25-28-1ಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ ಹಿಂದೂಗಳ ಅವಹೇಳನ ಮಾಡುವ ಅನೇಕ ಪುಸ್ತಕಗಳನ್ನು ಹುಡುಕಿದರು.ಅದರ ಕುರಿತಂತೆ ಇತರ ಹಿಂದೂಗಳಿಗೆ ಗೊತ್ತಿರಲಿಲ್ಲವೆಂದಲ್ಲ.ಆದರೆ ಅವರು ಅದೆಷ್ಟು ಅವಮಾನಿತರಾಗಿದ್ದರೆಂದರೆ ಬಾಯಿ ತೆರೆಯಲಾಗದೇ ಮೌನ ವಹಿಸಿ ಬಿಟ್ಟಿದ್ದರು.ಶಾಲೆಗಳಲ್ಲಿ ಹಿಂದೂವಾಗಿರುವುದು ಮಗುವೊಂದಕ್ಕೆ ಅತ್ಯಂತ ಕಠಿಣವಾಗಿತ್ತು.ಓರಗೆಯ ಕ್ರಿಶ್ಚಿಯನ್ನರು ಹಿಂದೂ ದೇವ-ದೇವಿಯರನ್ನು ಆಡಿಕೊಂಡು ನಗುವಾಗ ಇವರೆಲ್ಲ ಬರಿಯ ಮೂಕ ಪ್ರೇಕ್ಷಕರಷ್ಟೇ.

ರಾಜೀವ್ ಮಲ್ಹೋತ್ರಾ! ಬ್ರೇಕಿಂಗ್ ಇಂಡಿಯಾ, ಬೀಯಿಂಗ್ ಡಿಫರೆಂಟ್, ಇಂದ್ರಾಸ್ ನೆಟ್ ಗಳ ಮೂಲಕ ಅಮೇರಿಕಾದಾದ್ಯಂತ ಹರಡಿಕೊಂಡಿರುವ ಹಿಂದೂ ವಿರೋಧಿಗಳಿಗ ಸೂಕ್ತ ಉತ್ತರ ಕೊಡುತ್ತಿರುವ ವ್ಯಕ್ತಿ. ಎಡಪಂಥದ ಗಬ್ಬು ಘಾಟಿನಲ್ಲಿಯೇ ಕಾಲದೂಡುತ್ತಿರುವ ಭಾರತದ ಬುದ್ಧಿ ಜೀವಿಗಳ ಆರಾಧ್ಯವೆನಿಸಿದ್ದವರನ್ನೆಲ್ಲ ತನ್ನ ಭೌದ್ಧಿಕ ಗದಾಪ್ರಹಾರದಿಂದ ಝಾಡಿಸಿ ಕೊಡವಿ ಬಿಟ್ಟಿರುವ ಜಟ್ಟಿ ಆತ.

ತನ್ನ ಮಗು ಓದುತ್ತಿರುವ ಪ್ರಿನ್ಸ ಟನ್ ನ ಶಾಲೆಯೊಂದು ಆತನಲ್ಲಿ ಭಾರತದ ಕುರಿತಂತೆ, ಹಿಂದೂ ಧರ್ಮದ ಕುರಿತಂತೆ ಜಿಜ್ಞಾಸೆ ಹುಟ್ಟು ಹಾಕಿತ್ತು.ಅವರು ಅಮೇರಿಕದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನಗಳಿಗೆ ಹೋಗಲು ಶುರು ಮಾಡಿದರು.ಅವರಿಗೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು.ಜುದಾಯಿಸಂನ ಬಗ್ಗೆ ರಬ್ಬಿಗಳು,ಬುದ್ಧ ಪಂಥದ ಕುರಿತಾಗಿ ಭಿಕ್ಷುಗಳು,ಇಸ್ಲಾಂನ ಬಗ್ಗೆ ಇಮಾಮ್ ಗಳು ಮಾಡನಾಡಿದರೆ,ಹಿಂದೂ ಧರ್ಮದ ಕುರಿತಾಗಿ ಮಾತ್ರ ಹಿಂದೂಗಳೇ ಅಲ್ಲದ ಯನಿವರ್ಸಿಟಿಯ ಪ್ರೊಫೆಸರುಗಳು ಮಾಡನಾಡುತ್ತಿದ್ದರು.ಸಂಸ್ಕೃತವನ್ನು ತಿಳಿಯುವುದೆಂದರೆ ಹಿಂದೂ ಧರ್ಮದ ಸಾಹಿತ್ಯವನ್ನು ಅರೆದು ಕುಡಿದಿರುವಂತೆ ಎಂಬುದು ಅವರ ಭಾವನೆಯಾಗಿತ್ತು.ರಾಜೀವ್ ಗೆ ಇದು ಸರಿ ಕಾಣಲಿಲ್ಲ.ಅವರು ಅಮೇರಿಕನ್ನರ ಗ್ರಹಿಕೆಯನ್ನು ವ್ಯವಸ್ಥಿತವಾಗಿ ಖಂಡಿಸಿ ಪತ್ರಿಕೆಗಳಿಗೆ ಲೇಖನ ಬರೆಯಲಾರಂಭಿಸಿದರು.

ವೆಂಡಿ ಡೋನಿಯರ್ ಮತ್ತು ಆಕೆಯ ಶೀಷ್ಯ ವೃಂದ ಹಿಂದೂ ಧರ್ಮದ ಮೇಲೆ ಎಸಗಿರುವ ಆಘಾತ ಈಗ ಮುಕ್ತ ಚರ್ಚೆಗೆ ಬಂತು.ದೆಹಲಿಯ ವಕಿಲೇ ಮೋನಿಕಾ ಅರೋರಾ ಈ ಚರ್ಚೆಗಳಿಂದ ಪ್ರೇರೆಪಿತರಾಗಿ ವೆಂಡಿ ಡೋನಿಯರ್ ಳ ಹಿಂದೂ ಧರ್ಮಕ್ಕೆ ವಿರುದ್ಧವಾಗಿರುವ ಕೃತಿಯೊಂದರ ಮೇಲೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದಳು.ಅಲ್ಲಿಗೆ ಹಿಂದೂ ಧರ್ಮ ಇನ್ನು ಅಪದ್ಧಗಳನ್ನು ಸಹಿಸಲಾರದೆಂಬ ಸ್ಪಷ್ಟ ಸಂದೇಶ ಜಗತ್ತಿಗೆ ಹೋಯ್ತು.ಅಕೇಯ ಕೃತಿಯಲ್ಲಿದ್ದ ತಪ್ಪುಗಳನ್ನು ಪುಟಸಂಖ್ಯೆಗಳ ಸಮೇತ ಉಲ್ಲೇಖ ಮಾಡಿ ನ್ಯಾಯಾಲದ ಮುಂದಿರಸಲಾಯಿತು.ಆಕೆಯ ಭಾರತದ ಭಕ್ತರು,ಪಶ್ಚಿಮದ ಶಿಷ್ಯರು ಹಿಂದೂ ಧರ್ಮದ ಸಹಿಷ್ಣು ವಿಚಾರಧಾರೆ ಸತ್ತೇ ಹೊಯಿತೆಂದು ಒಂದೇ ಕಣ್ಣಿನಲ್ಲಿ ಅತ್ತರು.ಯಾರೂ ‘ಕ್ಯಾರೆ’ ಎನ್ನಲಿಲ್ಲ.ಕೊನೆಗೆ ಕೆಲವು ಗೂಂಡಾಗಳು ಈ ಕೃತಿಯ ವಿರುದ್ಧನಿಂತಿದ್ದಾರೆಂದು ಪುಕಾರು ಹಬ್ಬಿಸಿ ಜನಸ್ಪಂದನೆಗಾಗಿ ಕಾದರು.ಲಾಭವಾಗಲಿಲ್ಲ,ಪ್ರಕಾಶಕರಾದ ಪೆಂಗ್ವಿನ್ ಸಂಸ್ಥೆ ಈ ಪುಸ್ತಕವನ್ನು ಮರಳಿಪಡೆದು ಡೋನಿಯರ್ ತಪ್ಪು ಮಾಡಿದ್ದಾಳೆಂಬುದನ್ನು ಅನುಮೋದಿಸಿತು.

ಹಾಗೆ ನೋಡಿದರೆ ಈ ಇಡಿಯ ಹೋರಾಟದಲ್ಲಿ ರಾಜೀವ್ ಮಲ್ಹೋತ್ರಾ ನೇರವಾಗಿ ಇಳಿದೇ ಇರಲಿಲ್ಲ ಆದರೆ ಅಮೇರಿಕಾದಲ್ಲಿ ಅವರು ಶುರು ಮಾಡಿದ ಬೌದ್ಧಿಕ ಸಮರ ಜಗತ್ತಿನ ಎಲ್ಲ ಹಿಂದೂಗಳ ಆತ್ಮಸ್ಥೈರ್ಯ ವೃದ್ಧಿಸಿತ್ತು.

ರಾಜೀವ್ ಮಲ್ಹೋತ್ತಾ ಅಮೇರಿಕನ್ನರ,ಬುದ್ಧಿಜೀವಿಗಳ,ಕ್ರಿಶ್ಚಿಯನ್ ಮಿಷಿನರಿಗಳ ವಿರುದ್ಧ ತೊಡೆತಟ್ಟಿ ಸಮರಕ್ಕೆ ನಿಂತರು.ಎಲ್ಲಿಯೂ ಭಾವನೆಗಳು ಬೌದ್ಧಿಕ ಯುದ್ದಧವನ್ನು ಸೋಲಿಸದಂತೆ ಎಚ್ಚರಿಕೆ ವಹಿಸಿದರು.ಭಾರತದ ಕುರಿತಂತೆ,ಹಿಂದೂ ಧರ್ಮದ ಕುರಿತಂತೆ ಅಮೆರಿಕನ್ ಪಂಡಿತರು ಎತ್ತಿರುವ ಪ್ರಶ್ನೆಗಳಿಗೆ ಅವರದೇ ಶೈಲಿಯಲ್ಲಿ ಉತ್ತರಿಸಲಾರಂಭಿಸಿದರು.ಭಾರತನ್ನು ಅವಹೇಳನನ ಗೈಯುವ, ಹಿಂದೂ ಧರ್ಮವನ್ನು ತುಚ್ಛವಾಗಿ ಕಾಣುವ ಬಿಳಿಯರ ಪ್ರಯತ್ನಕ್ಕೆ ತಡೆಗೋಡೆಯಾಗಿ ನಿಂತರು.ಅಲ್ಲಿಯವರೆಗೆ ಸುಪ್ತವಗಿದ್ದ ಹಿಂದೂ ಶ್ರದ್ಧೆ ಜಾಗೃತವಾಯ್ತು.ರಾಜೀವ್ ಮಲ್ಹೋತ್ರಾ ಹಿಂದೂಗಳನ್ನು ಅಂತಾರಾಷ್ಟರೀಯ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವ ಸಮರ್ಥ ವ್ಯಕ್ತಿಯಾಗಿಬಿಟ್ಟಿದ್ದರು.ಅವರ ಬ್ರೇಕಿಂಗ್ ಇಂಡಿಯಾ ಅಂತೂ ಭಾರತವನ್ನು ಛಿದ್ರ ಛಿದ್ರವಾಗಿಸುವ ಮಿಶಿನರಿಗಳ ಕೈವಾಡಕ್ಕೆ ಹಿಡಿದ ಕೈಗನ್ನಡಿಯಾಯ್ತು.

ಸಹಜವಾಗಿಯೇ ಇಷ್ಟೂ ದಿನ ಸುಳ್ಳನ್ನು ಸತ್ಯವೆಂದುನಂಬಿಸುತ್ತಾ ಬಂದಿದ್ದ ಪಶ್ಚಿಮದ ಪಂಡಿತರ ಬೆವರು ಹರಿಯಿತು.ರಾಜೀವ್ ಮಲ್ಹೋತ್ರಾರನ್ನು ಚರ್ಚೆಗೆ ಆಹ್ವಾನಿಸುವುದನ್ನೇ ಬಿಟ್ಟು ಬಿಟ್ಟರು.ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದವರು ಅವರ ಅಧ್ಯಯನದ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆ ಎತ್ತಿದರು.ಅಮೆರಿಕದಲ್ಲಿ ಬಿಡಿ, ಭಾರತದಲ್ಲೂ ಸಮೂಹ ಮಾಧ್ಯಮದ ಆಯಕಟ್ಟಿನಲ್ಲಿರುವವರು ಈ ಎಲ್ಲ ಬೆಳವಣಿಗೆಗಳಿಂದ ವಿಚಲಿತರಾಗಿ ಮನಸ್ಸಿಗೆ ಬಂದಂತೆ ಮಾತನಾಡಿದರು.ಅದು ಹಾಗೆಯೇ.ಬರ್ಖಾ,ರಾಜ್ ದೀಪ್ ರಿಗಷ್ಟೇ ಅಲ್ಲ, ನಮ್ಮ ಅನೇಕ ವಿಶ್ವವಿದ್ಯಾಲಯಗಳ ಪ್ರಮುಖ ಪ್ರೋಫೆಸರುಗಳಿಗೆ ಈ ಅಮೇರಿಕದ ಪಂಡಿತರ ಕೃತಿಗಳೇ ಅಧ್ಯಯನಕ್ಕೆ ಆಹಾರ.ಇವರುಗಳೆಲ್ಲ ಭಾರತವನ್ನು ನೋಡುವುದು ಈ ಕೃತಿಗಳ ಕಣ್ಣಿನಿಂದಲೇ.

ಎಷ್ಟು ಅಚ್ಚರಿಯಲ್ಲವೆ? ಋಗ್ವೇದದ ಅನುವಾದ ನಮಗೆ ಮ್ಯಾಕ್ಸ್ ಮುಲ್ಲರನದೇ ಆಗಬೇಕು.ಹಿಂದೂ ಪ್ರಜ್ಞೆಯ ಕುರಿತಂತೆ ವೆಂಡಿ ಡೋನಿಯರಳೇ ಹೇಳಬೇಕು.ಕೊನೆಗೆ ಪೂರ್ವದ ಸಾಹಿತ್ಯದ ಕುರಿತಂತೆ ಅಧಿಕಾರಿಯುತವಾಗಿ ಮಾತನಾಡಲು ಶೆಲ್ಡನ್ ಪೊಲ್ಲಾಕ್ ನೇ ಬೇಕು.ಆತ ಮತ್ತೊಬ್ಬ ಮಹಾ ಮೋಸಗಾರ,ಆಚರಣೆಗಳಿಂದ ಹಿಂದುವಂತೆ ಕಾಣಿಸಿಕೊಳ್ಳುತ್ತಾನೆ.ನಿಮ್ಮ ಮನೆಗೋ,ಮಠಕ್ಕೋ ಬಂದರೆ ನೇರ ದೇವರೆದುರಿಗೆ ನಿಂತು ‘ಅಗ್ನಿಮೀಳೆ’ ಎಂದು ಮಂತ್ರ ಶುರು ಮಾಡಿಯೇಬಿಡುತ್ತಾನೆ.ಅಲ್ಲಿಗೆ ನೀವು ಕ್ಲೀನ್ ಬೊಲ್ಡ್.ನಿಧಾನವಾಗಿ ಆತ ಹಿಂದೂ ಧರ್ಮದ ಕುರಿತಂತೆ ಪ್ರಶ್ನಾರ್ಥಕವಾಗಿ ಮಾತನಾಡಲಾತಂಭಿಸುತ್ತಾನೆ.ನಾವು ತಲೆ ಅಲುಗಾಡಿಸುತ್ತಾ ಅಹುದಹುದೆನ್ನುತ್ತೇವೆ.ಈತನ ಪ್ರಭಾವದಿಂದ ಶೃಂಗೇರಿ ಮಠವೂ ಹೊರ ಬಂದಿಲ್ಲ.ಇನ್ ಫೋಸಿಸ್ ಸಂಸ್ಥೆಯಂತೂ ಪೂರ್ವದ ಸಾಹಿತ್ಯದ ಅನುವಾದಕ್ಕೆಂದು ಆತನಿಗೆ ಯಾರುಯಾರಿಗೂ ನೀಡದಷ್ಟು ಬಲುದೊಡ್ಡ ಮೊತ್ತವನ್ನು ದತ್ತಿಯಾಗಿ ನೀಡಿದೆ.ಈ ಗುಲಾಮ ಮಾನಸಿಕತೆಗೆ ಏನನ್ನುತ್ತೀರಿ?

ಜಗತ್ತೇಲ್ಲ ಈ ರೀತಿಯ ಢೋಂಗಿ ಜನರೊಂದಿಗೆ ನಿಂತಿರುವಾಗ ಏಕಾಂಗಿಯಾಗಿ ಹೋರಾಟ ಶುರು ಮಾಡಿದ್ದು ರಾಜೀವ್ ಮಲ್ಹೋತ್ತಾ.ಆದರೆ ಬರಬರುತ್ತಾ ಅವರ ಶಕ್ತಿ ವೃದ್ಧಿಯಾಯಿತು.ಭಾರತೀಯರು ಸಮಸ್ಯೆಯನ್ನು ಅರಿತುಕೊಳ್ಳಲಾರಂಭಿಸಿದರು.ಹಿಂದೂ ಧರ್ಮದ ಕುರಿತಂತೆ ಆಚರಣೆಯಲ್ಲಿ ನಿಷ್ಠರಾದ ಹಿಂದೂಗಳೇ ಮಾತನಾಡಬೇಕು,ಸಂಸ್ಕೃತದ ಕುರಿತಂತೆ ಅರಿತವರೇ ಹೇಳಬೇಕು ಇವೆಲ್ಲ ಪ್ರಜ್ಞೆ ಜಾಗೃತವಾಯಿತು.

16ನೇ ವಿಶ್ವ ಸಂಸ್ಕೃತ ಸಮ್ಮೇಳನ ಬ್ಯಾಂಕಾಕಿನಲ್ಲಿ ನಡೆದಾಗ ಅಲ್ಲಿಗೆ ರಾಜೀವ್ ಮಲ್ಹೋತ್ರಾ ವಿಶೇಷ ಅತಿಥಿ. ಅಲ್ಲಿ ಅವರು ಮಾತನಾಡುತ್ತಾ ತಾನು ಮುಂದೆ ಬರೆಯಲಿರುವ ಕೃತಿಯಲ್ಲಿ ದಾಖಲಿಸಲಿರುವ ಅಂಶಗಳ ಕುರಿತು ಗಮನ ಸೆಳೆದರು.ಪಶ್ಚಿಮದ ಜನ ಸಂಸ್ಕೃತ ಕಲಿತು ಹೇಳಿದ್ದನ್ನು ನಾವು ಕೇಳಬೇಕೆ? ನಾವು ಪಶ್ಚಿಮ ಕೊಟ್ಟದ್ದನ್ನು ಸ್ವೀಕರಿಸುವ ದಾಸರೆ ಅಥವಾ ಪಶ್ಚಿಮಕ್ಕೂ ಕೊಡಬಲ್ಲ ಸಾಮರ್ಥ್ಯ ನಮ್ಮಲ್ಲಿದೆಯೇ? ಹೀಗೆ ಅನೇಕ ಅಂಶಗಳು ಅದರಲ್ಲಿ ದಾಖಲಾಗಿವೆ ಎಂದಂತೆ ನೆರೆದಿದ್ದ ಸಾಂಪ್ರದಾಯಿಕರೆಲ್ಲ ಆನಂದದಿಂದ ಚಪ್ಪಾಳೆ ತಟ್ಟಿದರೆ ಕೆಲವರಿಗೆ ನಡುಕ ಉಂಟಾಗಿತ್ತು.ಹೇಗಾದರೂ ಮಾಡಿ ಈ ಕೃತಿ ಹೊರಬರದಂತೆ ತಡೆಯಬೇಕೆಂಬ ಪ್ರಯತ್ನ ಶುರುವಾಯ್ತು.

ಪ್ರಿನ್ಸ್ ಟನ್ ನ ಚರ್ಚ್ ಒಂದರಲ್ಲಿ ಶಿಕ್ಷಕನಾದ ರಿಚರ್ಡ್ ಫಾಕ್ಸ್ ಯಂಗ್ ಚಾಲಾಕುತನ ತೋರಿದ.ರಾಜೀವ್ ಮಲ್ಹೋತ್ರಾರ ಪುಸ್ತಕಗಳಲ್ಲಿ ಕೃತಿಚೌರ್ಯವಾಗಿದೆ ಎಂದು ಹುಯಿಲೆಬ್ಬಿಸಿದ.ಅವರ ಪುಸ್ತಕಗಳಲ್ಲಿ ತಾವು ಯಾರಿಂದ ಈ ವಿಚಾರವನ್ನು ಎರವಲು ಪಡೆದಿದ್ದಾರೋ ಅವರ ಹೆಸರನ್ನು ನಮೂದಿಸಿಲ್ಲವೆಂದು ಪುಸ್ತಕ ಪ್ರಕಾಶಕರಿಗೆ ದೂರು ಕೊಟ್ಟ.ಆತನ ಬೆಂಬಲಕ್ಕೆ ಪಿಟಿಷನ್ನಿಗೆಗೆ 192 ಜನ ಸಹಿ ಮಾಡಿದರು.ಭಾರತದಲ್ಲಿ ಅನೇಕ ಎಡಚರು ಅರ್ಧರಾತ್ರಿಯಲ್ಲೂ ಕೊಡೆ ಹಿಡಿದು ಕುಣಿದಾಡಿದರು.ಇತ್ತ ಮಧು ಕಿಶ್ವರ್ ರವರು ರಾಜೀವ್ ರ ಬೆಂವಲಕ್ಕೆ ಬಿಂತು ಪಿಟಿಷನ್ ಜನರ ಮುಂದಿಟ್ಟಾಗ ಏಳಿ ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿದರು.ಹಾಂ!ಕದನ ಈಗಲೂ ನಡೆಯುತ್ತಿದೆ.

ಹೌದು, ಇದು ನಿರ್ಣಾಯಕ ಕದನವೇ.ಸುಳ್ಳನ್ನು ಸತ್ಯವೆಂದು ನಂಬಿಸಿ ಸೌಧ ಕಟ್ಟಿದವರ ಅಡಿಪಾಯವೇ ಅಲುಗಾಡುತ್ತಿದೆ.ಆ ಸೌಧವನ್ನು ತೋರಿಸಿ ಇಷ್ಟು ದಿನ ಭಾರತದಲ್ಲಿ ತಮ್ಮ ಬೇಳೆ ಬೇಯಿಸಿಕೊಂಡ ಪುಣ್ಯಾತ್ಮರೆಲ್ಲ ಬಿಳಿಚಿಕೊಂಡಿದ್ದಾರೆ.ನೆನಪಿಡಿ,ರಾ ಜೀ ವ್ ಮಲ್ಹೋತ್ರಾ ನೆಪ ಮಾತ್ರ. ಈ ಕದನ ನಮ್ಮೆಲ್ಲರಿಗೂ ಸೇರಿದ್ದು.ಸಮಯ ಸಿಕ್ಕಾಗ ನೀವೂ ಪಿಟಿಷನ್ನಿಗೆ ಒಂದು ಸಹಿ ಹಾಕಿ.~ ಚಕ್ರವರ್ತಿ ಸೂಲಿಬೆಲೆ

1 Response to ಇದು ಬೌದ್ಧಿಕ ಕ್ಷತ್ರಿಯರ ಯುದ್ಧ

  1. ShwethaBG

    Done