ವಿಭಾಗಗಳು

ಸುದ್ದಿಪತ್ರ


 

ಇನ್ನೂ ಎರಡೇ ವರ್ಷ. ಸವಾಲುಗಳು ಮಾತ್ರ ಅಸಂಖ್ಯ

ಇದು ಭಾರತದ ಪಾಲಿಗೆ ಪರ್ವಕಾಲ. ತರುಣರ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ ಈಗ. ಒಂದು ರೀತಿಯಲ್ಲಿ ನೋಡುವುದಾದರೆ ಎಲ್ಲಾ ಬಗೆಯ ಹೊಸ ಕೆಲಸಗಳಿಗೂ ತರುಣರ ಪಡೆ ಸಿದ್ಧವಾಗಿದೆ. ರಾಷ್ಟ್ರ ಕಟ್ಟುವ ಯಾವುದೇ ಕೆಲಸಕ್ಕೆ ಮೋದಿ ಕರೆ ಕೊಟ್ಟಾಗ್ಯೂ ಅವರು ಧಾವಿಸಿ ಬರುತ್ತಾರೆ. ಆದರೆ ತಮ್ಮನ್ನು ತಾವು ಕಟ್ಟಿಕೊಳ್ಳಬಲ್ಲ ಕೆಲಸವನ್ನೇ ಅವರಿಗೆ ಕೊಡಲಿಲ್ಲವೆಂದರೆ ಹೇಗೆ? ಕಾಲ ಕಳೆದಂತೆ ಈ ಸಮಸ್ಯೆ ನರೇಂದ್ರ ಮೋದಿಯವರ ಎಲ್ಲಾ ಮಹತ್ವಾಕಾಂಕ್ಷೆಗೂ ತಣ್ಣೀರೆರೆಚಿಬಿಡಬಲ್ಲದು.

ತೊಂದರೆಗಳಿಲ್ಲದ ಬದುಕು ನಡೆಸಲು ಎರಡು ಮಾರ್ಗವಿದೆ. ಮೊದಲನೆಯದು ಮುಂದೆಂದೋ ಬರುವ ತೊಂದರೆಗಳನ್ನು ಇಂದೇ ಮೈ ಮೇಲೆಳೆದುಕೊಂಡು ಅದನ್ನು ಮಣಿಸಿ ಗೆಲುವಿನ ನಗೆ ಬೀರಿ ನೆಮ್ಮದಿಯಿಂದ ಇದ್ದುಬಿಡೋದು. ಅಥವಾ ಬರಲಿರುವ ತೊಂದರೆಗಳನ್ನು ಕಂಡೂ ಕಾಣದಂತೆ ನೆಮ್ಮದಿಯಿಂದಲೇ ಬದುಕುತ್ತಿದ್ದೇವಲ್ಲ ಅಂತ ನಮಗೆ ನಾವೇ ಹೇಳಿಕೊಳ್ಳುತ್ತಿರೋದು. ಮಾಜಿ ಪ್ರಧಾನಿ ಮನಮೋಹನ ಸಿಂಗರದು ಎರಡನೇ ಮಾರ್ಗ. ಅವರು ಸಮಸ್ಯೆಗಳನ್ನು ಮುಂದೂಡುತ್ತ ಹೋದರಷ್ಟೇ. ಮೋದಿಯವರದು ಮೊದಲ ಹಾದಿ, ಸಿಂಹ ಮಾರ್ಗ.

11

ಹಾಗೇ ಯೋಚಿಸಿ. ಚೀನಾ ಪಾಕೀಸ್ತಾನದ ಮೂಲಕ ಹಾದು ಹೋಗುವ ‘ಎಕಾನಾಮಿಕ್ ಕಾರಿಡಾರ್’ ರಸ್ತೆ ಮಾಡಿದ್ದರೆ ನಮಗೇನು ತೊಂದರೆ ಅಂತ ಸುಮ್ಮನಿದ್ದುಬಿಡಬಹುದಿತ್ತು. 2019ರವರೆಗೆ ಅತ್ತ ತಲೆ ಹಾಕದೇ ಮುಂದಿನ ಐದು ವರ್ಷಗಳಲ್ಲಿ ನೋಡಿಕೊಂಡರಾಯಿತು ಅಂತ ಪ್ಯಾದೆ ನಗು ಬೀರಿಕೊಂಡು ಇದ್ದು ಬಿಟ್ಟಿದ್ದರೆ ಚೀನಾಕ್ಕೂ, ರಷ್ಯಾಕ್ಕೂ ಒಳ್ಳೆಯವರಾಗಿ ಹಾಯಾಗಿ ಬದುಕಿಬಿಡಬಹುದಿತ್ತು. ಪುಣ್ಯಾತ್ಮ ಹಾಗೆ ಮಾಡಲಿಲ್ಲ. ಎದೆಗೊಟ್ಟು ನಿಂತರು. ಏಕಾಂಗಿಯಾಗಿ ಹೋರಾಡುತ್ತೇನೆಂದರು. ಭವಿಷ್ಯದ ದಿನಗಳಲ್ಲಿ ಸಕರ್ಾರ ಯಾರದ್ದೇ ಬರಲಿ, ಭಾರತದ ರಕ್ಷಣೆಗೆ ಭಂಗವಾಗದಿರಲಿ ಎಂಬ ಒಂದೇ ಕಾರಣಕ್ಕೆ ಎಲ್ಲಾ ಸಮಸ್ಯೆಗಳನ್ನು ಮೈಮೇಲೆಳೆದುಕೊಂಡರು. ಅವರ ಈ ಭಂಡತನಕ್ಕೆ ವಿರೋಧ ಪಕ್ಷಗಳಲ್ಲ ಒಳಗಿನವರೇ ಮೂಗು ಮುರಿದರು. ಏಕಕಾಲಕ್ಕೆ ಪಾಕೀಸ್ತಾನ ಮತ್ತು ಚೀನಾದವರನ್ನು ಮೈಮೇಲೆಳೆದುಕೊಳ್ಳಬಾರದೆಂಬ ಕಾಂಗ್ರೆಸ್ಸಿನ ರಣ ನೀತಿಯನ್ನೇ ಮಾತನಾಡಿದರು. ಪಾಕೀಸ್ತಾನ ಮುಖವಾಡವಷ್ಟೇ ಅದನ್ನು ತೊಟ್ಟಿರೋದು ಚೀನಾ ಎಂಬುದು ಗೊತ್ತಿರುವ ಯಾವ ಮೂರ್ಖನೂ ಹೀಗೆ ಮಾತನಾಡಲಾರ. ಮೋದಿ ಮುಖವಾಡಕ್ಕೆ ಗುದ್ದಿದರು, ಅದನ್ನು ತೊಟ್ಟವನ ಬೆನ್ನಿಗೂ ಬಾರಿಸಿದರು. ಆಗಲೇ ಅವರೊಂದಿಗೆ ಜಪಾನ್, ಅಮೇರಿಕಾಗಳು ಬೆಂಬಲವಾಗಿ ನಿಂತದ್ದು. ಎದುರಿಸುವ ಛಾತಿ ತೋರಿದರೆ ಮಾತ್ರ ಉಳಿದವರು ಬೆಂಬಲಕ್ಕೆ ನಿಲ್ಲೋದು ಅನ್ನೋದು ಮತ್ತೆ ಸಾಬೀತಾಯ್ತು.

ಹಾಗಂತ ಸವಾಲುಗಳು ಮುಗಿಯಲಿಲ್ಲ. ಈ ಬಾರಿಯ ಶಾಂಘಾಯ್ ಶೃಂಗ ಸಭೆಯಲ್ಲಿ ಪ್ರಥಮ ಬಾರಿಗೆ ಸದಸ್ಯತ್ವ ಪಡೆದ ಭಾರತ ಕಜಕಿಸ್ತಾನದ ಅಸ್ತಾನದಲ್ಲಿ ಮುಖಾಮುಖಿಯಾಗಬೇಕಿತ್ತು. ಒಂದೆಡೆ ಪಾಕೀಸ್ತಾನ ಮತ್ತೊಂದೆಡೆ ಚೀನಾ. ಮೋದಿ ಮತ್ತೆ ಇಲ್ಲಿ ಭಯೋತ್ಪಾದನೆ ನಡೆಸುವ ಮತ್ತು ಅದನ್ನು ಬೆಂಬಲಿಸುವ ಜನರಿಗೆ ತಪರಾಕಿಯನ್ನು ಕೊಟ್ಟರು. ದ್ವಿಪಕ್ಷೀಯ ನಡವಳಿಕೆಗಳು ಮತ್ತೊಬ್ಬನ ಸಾರ್ವಭೌಮತೆಗೆ ಭಂಗವಾಗದಂತೆ ಇರಬೇಕೆಂದು ತಾಕೀತು ಮಾಡಿದರು. ನಿಸ್ಸಂಶಯವಾಗಿ ಇವೆಲ್ಲವೂ ಚೀನಾವನ್ನೇ ಗುರಿಯಾಗಿಸಿಕೊಂಡು ಹೇಳಿದ ಮಾತಾಗಿತ್ತು. ಇದು ಬೇಕಿತ್ತಾ ಅಂತ ಯಾರಾದರೂ ಕೇಳಿದರೆ, ಬೇಕಿತ್ತು ಅಂತನೂ ಹೇಳಬೇಕು, ಅಗತ್ಯವಿರಲಿಲ್ಲ ಅಂತಾನೂ ಹೇಳಬೇಕು. ಏಕೆಂದರೆ ಈ ಅಂತರರಾಷ್ಟ್ರೀಯ ಚದುರಂಗದಾಟದಲ್ಲಿ ಮೋದಿ ಮುಂದಿಟ್ಟ ನಡೆಯನ್ನು ಊಹಿಸುವುದು ಅಷ್ಟು ಸುಲಭವಲ್ಲ. ಇತ್ತೀಚೆಗೆ ಟಿವಿ ಚಚರ್ೆಯೊಂದರಲ್ಲಿ ಕಾಂಗ್ರೆಸ್ಸು ಮತ್ತು ದಳದ ಮುಖಂಡರು ಮಾತನಾಡುತ್ತ ‘ಅಮೇರಿಕಾಕ್ಕೆ ಹೋಗಿ ಬಂದರೆ ಬಡವರಿಗೆ ಅನ್ನ ಸಿಗುತ್ತಾ?’ ಅಂತ ಪ್ರಶ್ನೆ ಬಾಲಿಶವಾಗಿ ಮಾಡುತ್ತಿದ್ದರು. ಅನೇಕ ಬಾರಿ ಚುನಾವಣೆಗಳಲ್ಲಿ ಗೆದ್ದು ಜನಪ್ರತಿನಿಧಿಯಾಗಿ ವಿಧಾನಸೌಧದಲ್ಲಿ ಕುಳಿತ ಈ ಜನರಿಗೇ ಚೀನಾ-ಅಮೇರಿಕಾ-ರಷ್ಯಾಗಳ ರಾಜಕೀಯಗಳು ಅರಿವಾಗದಿರುವಾಗ ಇನ್ನು ಬೇರೆಯವರ ಪಾಡೇನು? ಒಂದಂತೂ ಸತ್ಯ. ಭಾರತೀಯರೆಂದಿಗೂ ವಿದೇಶೀ ನೀತಿಯ ಬಗ್ಗೆ ತಲೆ ಕೆಡಿಸಿಕೊಂಡೇ ಇರಲಿಲ್ಲ. ಎಸ್.ಎಂ ಕೃಷ್ಣ ವಿದೇಶಕ್ಕೆ ಹೋದಾಗ ಎದುರು ರಾಷ್ಟ್ರದ ವಿದೇಶಾಂಗ ಸಚಿವರ ಭಾಷಣವನ್ನು ಓದಿ ಮುಜುಗರಕ್ಕೀಡಾಗಿದ್ದನ್ನು ನಾವು ಆಡಿಕೊಂಡು ನಕ್ಕಿದ್ದೆವಷ್ಟೇ. ಪ್ರತಿ ಪ್ರಧಾನಿ ತಮ್ಮ ಪತ್ನಿಯೊಂದಿಗೆ ಇಲ್ಲಿಂದ ಕೈ ಬೀಸಿ ಹೋಗುವುದು ಅಲ್ಲಿಂದ ಸ್ವಾಗತಿಸಲ್ಪಡುವುದು ಇಷ್ಟನ್ನೂ ದೂರದರ್ಶನದಲ್ಲಿ ಚಿಕ್ಕಂದಿನಿಂದ ನೋಡಿದ್ದಷ್ಟೇ ನೆನಪು. ಮೊದಲ ಬಾರಿಗೆ ಮೋದಿ ಇವೆಲ್ಲಕ್ಕೂ ಹೊಸ ಲೇಪ ಮಾಡಿಸಿದರು. ನಿಸ್ಸಂಶಯವಾಗಿ ಜಾಗತಿಕ ನಾಯಕನಾಗಿ ಬೆಳೆದು ನಿಂತರು.
ಮೂರು ವರ್ಷಗಳಲ್ಲಿ ಜಗತ್ತಿನಾದ್ಯಂತ ತಮ್ಮ ಪ್ರಭಾವ ಬೀರಿದರು ನಿಜ. ಆದರೆ ಒಳಗೆ ಅಂದುಕೊಂಡದ್ದನ್ನು ಸಾಧಿಸಲಾಗಲಿಲ್ಲವೆಂಬ ನೋವಂತೂ ಅವರಿಗಿರಲೇಬೇಕು. ದುರದೃಷ್ಟವಶಾತ್ ಮೋದಿಯವರನ್ನು ತರ್ಕಬದ್ಧವಾಗಿ, ವಸ್ತು ನಿಷ್ಟವಾಗಿ ಎದುರಿಸಬಲ್ಲ ವಿರೋಧ ಪಕ್ಷವೇ ಇಲ್ಲ. ಟಿವಿ ಚಚರ್ೆಯಲ್ಲಿ ಮೋದಿಯವರ ಸಕರ್ಾರ ಮೂರು ಅಪೂರ್ಣ ಭರವಸೆಗಳನ್ನು ಹೇಳಿರೆಂದು ವಿರೋಧ ಪಕ್ಷಗಳವರನ್ನು ಕೇಳಿಕೊಂಡರೆ ಒಂದನ್ನೂ ಸಮರ್ಥವಾಗಿ ಹೇಳಲಾಗಲಿಲ್ಲವಲ್ಲ; ಏನನ್ನಬೇಕು ಇವರಿಗೆ. ಹದಿನೈದು ಲಕ್ಷ ನಮ್ಮ ಅಕೌಂಟಿಗೆ ಬರಲಿಲ್ಲವಲ್ಲ ಎಂಬ ತೃತೀಯ ದಜರ್ೆಯ ಚಚರ್ೆಗೆ ಇಳಿದುಬಿಡುತ್ತಾರೆ. ಈ ಚವರ್ಿತ ಚರ್ವಣ ವಾದ ಕೇಳಿ ಜನರೂ ರೋಸಿ ಹೋಗಿದ್ದಾರೆ. ವಾಸ್ತವವಾಗಿ ಅದೇ ಪ್ರಧಾನಮಂತ್ರಿಗಳ ಶಕ್ತಿಯಾಗಿಬಿಟ್ಟಿದೆ.

Modi_PTI-L

ಹಾಗೆ ಯೋಚಿಸಿ. ನೋಟು ಅಮಾನ್ಯೀಕರಣದ ನಂತರ ನಿರಂತರವಾಗಿ ಇಳಿಯುತ್ತಿರುವ ರಾಷ್ಟ್ರೀಯ ಉತ್ಪನ್ನ ಸೂಚ್ಯಂಕ ಆತಂಕಕಾರಿಯಲ್ಲವೇನು? 2016-17 ರ ಮೊದಲ ಅವಧಿಯಲ್ಲಿ ಇದ್ದ 7.9 ರಷ್ಟು ಜಿಡಿಪಿ, 7.5ಕ್ಕೆ, 7 ಕ್ಕೆ ಮತ್ತು ಕೊನೆ ಅವಧಿಯಲ್ಲಿ 6.1ಕ್ಕಿಳಿಯಿತಲ್ಲ. ಸ್ವಲ್ಪ ಮಟ್ಟಿಗೆ ಕೃಷಿ ಚೇತರಿಸಿಕೊಂಡಿದ್ದರಿಂದ ಇಷ್ಟಾದರೂ ಬೆಳವಣಿಗೆ ಇದೆ. ಇಲ್ಲವಾದರೆ ಇನ್ನಷ್ಟು ನೆಲಕಚ್ಚಿಬಿಟ್ಟಿರುತ್ತಿತ್ತಲ್ಲ. ಹಣದ ಹರಿವಿನ ಆಧಾರದ ಮೇಲೆ ನಡೆಯುತ್ತಿದ್ದ್ದ ರಿಯಲ್ ಎಸ್ಟೇಟ್ ಉದ್ದಿಮೆ ಸಂಪೂರ್ಣ ತಳಕಚ್ಚಿದೆ. ಹೋಟೆಲ್ಲು, ಸಾಗಾಣಿಕೆಯಂತಹ ಉದ್ಯಮಗಳಂತೂ ಗಂಭೀರ ಹೊಡೆತ ಕಂಡಿದೆ. ಹೊಸ ವ್ಯಾಪಾರ ಉದ್ದಿಮೆಗಳಿಗೆ ಕೈ ಹಾಕುವ ಧೈರ್ಯವಿಲ್ಲ. ಇವೆಲ್ಲವೂ ರಾಷ್ಟ್ರ ಮುನ್ನಡೆಸುವವನಿಗೆ ಆತಂಕಗಳೇ. ಆದಷ್ಟು ಬೇಗ ಕೈಲಿ ಹಣ ಓಡಾಡುವಂತೆ ಮಾಡುವ ಮೂಲಕ ಇದಕ್ಕೆ ಪರಿಹಾರ ಕೊಡುವುದು ಸಹಜವಾದ, ಎಲ್ಲರೂ ಆಲೋಚಿಸಬಹುದಾದ ಮಾರ್ಗ. ಆದರೆ ಹಾಗೆ ಮಾಡಿದರೆ ನೋಟು ಅಮಾನ್ಯೀಕರಣದ ಸರ್ಕಸ್ ವ್ಯರ್ಥವಾಗಿಬಿಡುತ್ತದೆ. ಇನ್ನೂ ಜನರನ್ನು ಲೆಸ್ ಕ್ಯಾಶ್ನತ್ತ ತರುವುದು ಸುಲಭವಲ್ಲ. ಕೊನೆಯದೊಂದೇ ಮಾರ್ಗ. ಬ್ಯಾಂಕುಗಳಲ್ಲಿ ತುಂಬಿರುವ ಹಣವನ್ನು ಆದಷ್ಟು ಬೇಗ ಲೆಕ್ಕಾಚಾರ ಮುಗಿಸಿ ಕಡಿಮೆ ಬಡ್ಡಿಗೆ ಸಾಲ ಕೊಡಬೇಕು. ಜನರನ್ನು ಹೊಸ ಉದ್ದಿಮೆಗಳಿಗೆ ಪ್ರೋತ್ಸಾಹಿಸಬೇಕು. ಸದ್ಯಕ್ಕಂತೂ ಅದು ಸುಲಭವೆನಿಸುತ್ತಿಲ್ಲ. ಇನ್ನು ಆರೆಂಟು ತಿಂಗಳಾದರೂ ಬೇಕಾದೀತು. ಅತ್ತ ಉದ್ದಿಮೆಗಳು ಇಳಿಮುಖವಾಗುತ್ತಿದ್ದಂತೆ ನೌಕರಿಗಳು ಕಡಿಮೆಯಾಗಿ ಹಾಹಾಕಾರ ಎದ್ದಿದೆ. ಇದು ಭಾರತದ ಪಾಲಿಗೆ ಪರ್ವಕಾಲ. ತರುಣರ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ ಈಗ. ಒಂದು ರೀತಿಯಲ್ಲಿ ನೋಡುವುದಾದರೆ ಎಲ್ಲಾ ಬಗೆಯ ಹೊಸ ಕೆಲಸಗಳಿಗೂ ತರುಣರ ಪಡೆ ಸಿದ್ಧವಾಗಿದೆ. ರಾಷ್ಟ್ರ ಕಟ್ಟುವ ಯಾವುದೇ ಕೆಲಸಕ್ಕೆ ಮೋದಿ ಕರೆ ಕೊಟ್ಟಾಗ್ಯೂ ಅವರು ಧಾವಿಸಿ ಬರುತ್ತಾರೆ. ಆದರೆ ತಮ್ಮನ್ನು ತಾವು ಕಟ್ಟಿಕೊಳ್ಳಬಲ್ಲ ಕೆಲಸವನ್ನೇ ಅವರಿಗೆ ಕೊಡಲಿಲ್ಲವೆಂದರೆ ಹೇಗೆ? ಕಾಲ ಕಳೆದಂತೆ ಈ ಸಮಸ್ಯೆ ನರೇಂದ್ರ ಮೋದಿಯವರ ಎಲ್ಲಾ ಮಹತ್ವಾಕಾಂಕ್ಷೆಗೂ ತಣ್ಣೀರೆರೆಚಿಬಿಡಬಲ್ಲದು. ಹಾಗೆಂದೇ ಅವರು ನರೇಗಾದ ಮುಖಾಂತರ ಹೆಚ್ಚು ಹೆಚ್ಚು ಮೂಲ ಸೌಕರ್ಯ ಅಭಿವೃದ್ಧಿಗೆ ಗಮನ ನೀಡುತ್ತಿದ್ದಾರೆ. ಬರಲಿರುವ ಎರಡು ವರ್ಷಗಳಲ್ಲಿ ಇದುವೇ ಬಲು ದೊಡ್ಡ ಸವಾಲು. ವಿದೇಶೀ ಬಂಡವಾಳ ಹೂಡಿಕೆ, ಮೇಕ್ ಇನ್ ಇಂಡಿಯಾಗಳು ಎಷ್ಟು ಯಶಸ್ವಿಯಾಗುತ್ತವೆಯೋ ಅಷ್ಟು ವೇಗವಾಗಿ ನರೇಂದ್ರ ಮೋದಿ ಮಿಂಚಲಿದ್ದಾರೆ.

ಮೂರು ವರ್ಷಗಳ ನಂತರ ಮಧ್ಯ ಪ್ರದೇಶ, ಮಹಾರಾಷ್ಟ್ರಗಳಲ್ಲಿ ಕಂಡು ಬಂದಿರುವ ರೈತರ ಪ್ರತಿಭಟನೆ ಒಳ್ಳೆಯ ಬೆಳವಣಿಗೆಯಲ್ಲ. ರೈತರ ಸಾಲ ಮನ್ನಾ ಮಾಡುವುದು ಯಾವುದೇ ಸಕರ್ಾರದ ಬುದ್ಧಿವಂತ ನಿಧರ್ಾರವಲ್ಲ. ಸ್ವತಃ ಮೋದಿ ಅದನ್ನು ಅನುಮೋದಿಸಿದವರಲ್ಲ. ಯೋಗಿ ಆದಿತ್ಯನಾಥರು ಅದಕ್ಕೆ ಕೈ ಹಾಕುತ್ತಿದ್ದಂತೆ ಎಲ್ಲಾ ರಾಜ್ಯಗಳ ರೈತರೂ ಆಸೆ ಕಣ್ಣಿನಿಂದ ಕುಳಿತು ಬಿಟ್ಟಿದ್ದಾರೆ. ಪ್ರತೀ ರಾಜ್ಯವೂ ಸಾಲದ ಸುಳಿಯಲ್ಲಿ ಸಿಕ್ಕು ಪರಿತಪಿಸುತ್ತಿದೆ. ಸ್ವತಃ ರಿಸವರ್್ ಬ್ಯಾಂಕು ಕೆಲವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ವಿತ್ತೀಯ ಕೊರತೆ ಹೆಚ್ಚುತ್ತಿರುವ ಕುರಿತಂತೆ ಆತಂಕ ವ್ಯಕ್ತ ಪಡಿಸಿದ ರಿಸವರ್್ ಬ್ಯಾಂಕಿನ ಮುಖ್ಯಸ್ಥರು ‘ನಾವು ಎಚ್ಚರಿಸಬಹುದಷ್ಟೇ, ಉಳಿದುದನ್ನು ರಾಜ್ಯಗಳೇ ಆಲೋಚಿಸಬೇಕು’ ಎಂದಿರುವುದು ಈ ಆತಂಕದ ಅಂದಾಜು ಖಂಡಿತ ಮಾಡಿಸಬಲ್ಲದು.

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಹೂಡಿಕೆಯೂ ಆಗಿಲ್ಲ, ಕಣ್ಣಿಗೆ ರಾಚುವಂತಹ ಬದಲಾವಣೆಯೂ ಕಂಡು ಬಂದಿಲ್ಲ. ಅದರ ನಡುವೆಯೇ ಜನರಿಕ್ ಔಷಧಿಗಳ ಮಳಿಗೆಗಳು ಊರೂರಲ್ಲಿಯೂ ತೆರೆದುಕೊಳ್ಳಲು ತಯಾರಾಗಿರುವುದು ಜನ ಸಾಮಾನ್ಯರಿಗೆ ನೆಮ್ಮದಿಯಂತೂ ತಂದಿರಲು ಸಾಕು. ಸುಲಭ ಬೆಲೆಗೆ ಆರೋಗ್ಯ ದಕ್ಕುವ ವಿಶ್ವಸವಂತೂ ಸಿದ್ಧಿಸಿದೆ.

ಇವೆಲ್ಲದರ ನಡುವೆ ರಸ್ತೆ ನಿಮರ್ಾಣ ವೇಗವಾಗಿದೆ. ರೈಲಿನ ವ್ಯವಸ್ಥೆಯಲ್ಲೂ ಕಂಡು ಬಂದ ಸುಧಾರಣೆಗೆ ಅಸಾಧಾರಣ. ಭಾರತ ಪವರ್ ಸಪ್ರ್ಲಸ್ ಆಗಿದ್ದು ವಿಶೇಷ. ಎಲ್ಲಕ್ಕೂ ಮಿಗಿಲಾಗಿ ರಕ್ಷಣಾ ಇಲಾಖೆಯಲ್ಲಿ ಕಂಡು ಬಂದ ಅಭೂತಪೂರ್ವ ಮಿಂಚಿನ ಸಂಚಾರ ಇವೆಲ್ಲವೂ ಹಿಂದೆಂದೂ ಊಹಿಸಲಾಗದ ಸಾಧನೆಗಳೇ. ಇನ್ನು ಮುಂದೆ ದಿನಗಳು ವೇಗವಾಗಿ ಓಡುತ್ತವೆ. ಪ್ರತಿ ಪಕ್ಷಗಳು ಚುರುಕಾಗಿ ಬಿಡುತ್ತವೆ. ದಿನಕ್ಕೊಂದು ಹೊಸ ಆರೋಪ, ಹಳೆಯ ಶೈಲಿಯ ನಾಟಕಗಳು. ಇವೆಲ್ಲವುಗಳ ನಡುವೆ ಇಷ್ಟು ದಿನ ಮಾಡಿದ್ದನ್ನು ಉಳಿಸಿಕೊಂಡು ಹೊಸದಕ್ಕೂ ಕೈ ಹಾಕಿ ವಿಶ್ವಾಸ ಗಳಿಸಿ ಗೆಲ್ಲುವ ಕೆಲಸ ಆಗಬೇಕು. ಕೊನೆಯ ವರ್ಷ ಚುನಾವಣೆಗೆ ಅಂತ ಮೀಸಲಿಡುವುದಾದರೆ ಇನ್ನು ಒಂದೇ ವರ್ಷ ಬಾಕಿ. ಸವಾಲುಗಳು ಮಾತ್ರ ಅಸಂಖ್ಯ.

Comments are closed.