ವಿಭಾಗಗಳು

ಸುದ್ದಿಪತ್ರ


 

ಉಸಿರು-ಹೆಸರು, ದಾನ-ಭೋಗ

ಯಾರಿಗೆ ಯಾವುದರ ಅಗತ್ಯವಿದೆಯೋ ಅದನ್ನು ಕೊಡುವವರು ನಾವಾಗಬೇಕು. ಆಗ ಭಗವಂತ ನಮಗೆ ಕೊಟ್ಟ ಹಣ ಚಲನ ಶೀಲನಗೊಳ್ಳುತ್ತೆ. ನವೇ ಅವಳನ್ನು ಚಲನೆಗೆ ಹಚ್ಚಲಿಲ್ಲವೆಂದರೆ ಅವಳೇ ಓಡುತ್ತಾಳೆ

‘ಕೂಡಿಟ್ಟು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು’ ಎಂಬ ಮಾತಿನ ರೀತಿಯೇ ಇನ್ನೊಂದು ಮಾತು ಹೇಳುವುದಾದರೆ, ‘ಕೂಡಿಡುವುದರಲ್ಲಿಯೇ ನಿರತನಾದವನಿಗೆ ಭೋಗಿಸಲು ಸಮಯ ಸಾಲದು’.
ಬಹಳ ಜನರನ್ನು ಕಂಡಾಗ ಈ ಬಗೆಯ ಅನುಮಾನವೊಂದು ಬರದೇ ಇರಲಾರದು. ಅತ್ಯಂತ ಸಾಮಾನ್ಯ ವರ್ಗದಿಂದ ಬಂದ ವ್ಯಕ್ತಿ ಬಗೆ-ಬಗೆಯ ಮಾರ್ಗ ಹಿಡಿದು ಹಣದ ಮಹಲನ್ನು ಏರಿ ತುದಿಯ ಮುಟ್ಟಲು ಧಾವಿಸುತ್ತಾನೆ. ಅದನ್ನು ಮುಟ್ಟುವುದಂತೂ ದೂರ ಬಿಡಿ. ಆದರೆ, ಆ ಓಟದಲ್ಲಿ ಪ್ರತಿ ಮಹಡಿಯಲ್ಲೂ ಇದ್ದ ಅಪರೂಪದ ದೃಶ್ಯಗಳನ್ನು ಆನಂದಿಸುವುದನ್ನು ಮರೆತು ಬಿಡುತ್ತಾನೆ. ಆ ದೃಶ್ಯಗಳಿಂದ ಸ್ಫೂತರ್ಿ ಪಡೆದು ಏರುವ ಹೊಸ ಉತ್ಸಾಹ ಪಡೆಯುವುದನ್ನು ಬಿಟ್ಟು ಓಡುತ್ತಲೇ ಇರುತ್ತಾನೆ. ಮೊದಲು ಓರಗೆಯವರಿಗಿಂತ ಶ್ರೀಮಂತನಾಗಬೇಕು. ಜಗತ್ತಿನ ನಂ.1 ಪಟ್ಟ ಸಿಕ್ಕಮೇಲೆ ಅದನ್ನು ಭದ್ರಗೊಳಿಸಲು ಹೆಣಗಾಡಬೇಕು.
‘ಯೌವ್ವನದುದ್ದಕ್ಕೂ ಆರೋಗ್ಯ ಮರೆತು, ಹಣದ ಹಿಂದೆ ಓಡಿದವರು, ಯೌವ್ವನ ಕಳೆದುಕೊಂಡ ಮೇಲೆ ಆರೋಗ್ಯಕ್ಕಾಗಿಯೇ ಹಣ ಸುರಿದರು’ ಎಂಬ ಮಾತಿದೆಯಲ್ಲವೇ.. ಹಾಗೆಯೇ ಇದು.

ಸರಸ್ವತಿಯ ಚಿತ್ರಗಳು ಹೆಚ್ಚಾಗಿ ಕುಳಿತಿರುವಂಥದ್ದು, ಲಕ್ಷ್ಮೀ ನಿಂತಿರುವ ಚಿತ್ರಗಳೇ ಹೆಚ್ಚು. ಹಾಗೇಕೆ ಬಲ್ಲಿರೇನು? ಸರಸ್ವತಿ ಬಂದರೆ ಪಟ್ಟಾಗಿ ಕುಳಿತು ಬಿಡುತ್ತಾಳೆ. ಲಕ್ಷ್ಮೀ ಓಟಕ್ಕೆ ತಯಾರಾಗಿ ನಿಂತೇ ಇರುತ್ತಾಳೆ. ಇದನ್ನು ಕಂಡೆ ಸುಭಾಷಿತಕಾರ ಹೇಳುತ್ತಾನೆ, ‘ಹಣಕ್ಕೆ ಮೂರು ಅವಸ್ಥೆಗಳು, ದಾನ-ಭೋಗ-ನಾಶ. ಯಾರು ಹಣವನ್ನು ದಾನ ಮಾಡುವುದಿಲ್ಲವೋ, ಭೋಗಿಸುವುದೂ ಇಲ್ಲವೋ ಅದು ನಾಶವೇ ಆಗುವುದು’. ಈ ಮಾತು ಕೇಳಿಯೂ ಕೂಡಿಟ್ಟವನು, ಅಗತ್ಯಕ್ಕಿಂತ-ಅನಿವಾರ್ಯಕ್ಕಿಂತ ಹೆಚ್ಚು ಪೇರಿಸಿಟ್ಟವನು ಕಳೆದುಕೊಳ್ಳಲೆಂದೇ ಸೇರಿಸಿಡುತ್ತಿದ್ದಾನೆ ಎಂದರ್ಥ. ಯಾರಿಗೆ ಯಾವುದರ ಅಗತ್ಯವಿದೆಯೋ ಅದನ್ನು ಕೊಡುವವರು ನಾವಾಗಬೇಕು. ಆಗ ಭಗವಂತ ನಮಗೆ ಕೊಟ್ಟ ಹಣ ಚಲನ ಶೀಲನಗೊಳ್ಳುತ್ತೆ. ನವೇ ಅವಳನ್ನು ಚಲನೆಗೆ ಹಚ್ಚಲಿಲ್ಲವೆಂದರೆ ಅವಳೇ ಓಡುತ್ತಾಳೆ. ಅದಕ್ಕೆ ಮುನ್ನ ಕಾರ್ಯಕ್ಕಿಳಿಯಿರಿ. ಹುಟ್ಟಿದಾಗ ನಮಗಿದ್ದುದು ಉಸಿರು ಮಾತ್ರ. ಹೆಸರು ಆಮೇಲೆ ಇಟ್ಟಿದ್ದು. ಸಾಯುವಾಗ ಉಸಿರು ನಿಲ್ಲುವುದು ನಿಜ. ಆದರೆ, ಹೆಸರು ಉಳಿಯುವಂತೆ ಮಾಡುವ ಸಾಮಥ್ರ್ಯ ನಮ್ಮ ಕೈಲಿದೆ. ಹೆಸರು ಉಳಿಯಲೆಂದಾದರೆ ಸ್ವಲ್ಪ ಯೋಚಿಸುವುದು ಒಳ್ಳೆಯದು. ಆನಂದದಿಂದ ಹಣ ಗಳಿಸಿ, ಗಳಿಸಿದ್ದನ್ನು ಆನಂದದಿಂದ ದಾನ ಮಾಡಿ, ಇಲ್ಲವೇ ಭೋಗಿಸಿ!

Comments are closed.