ವಿಭಾಗಗಳು

ಸುದ್ದಿಪತ್ರ


 

ಎದುರಿಸಿ ಗೆಲ್ಲುವಲ್ಲಿಯೇ ನಿಜವಾದ ಆನಂದ!!

ಈ ಸಮ್ಮೇಳನ ಎರಡು ವಿಶ್ವದಾಖಲೆಗಳಿಗೆ ಸಾಕ್ಷಿಯಾಯಿತು. ಪುಸ್ತಕ ಮಾರಾಟವೂ ಅಷ್ಟೇ. ರಾಷ್ಟ್ರೀಯ ಸಾಹಿತ್ಯ, ವಿವೇಕ-ನಿವೇದಿತೆಯರ ವಿಚಾರಧಾರೆಯ ಸಾಹಿತ್ಯಕ್ಕೆ ಜನ ಮುಗಿಬಿದ್ದ ರೀತಿ ರೋಚಕವಾಗಿತ್ತು. ಒಟ್ಟು ಎರಡು ದಿನಗಳಲ್ಲಿ 70 ಸಾವಿರಕ್ಕೂ ಮಿಕ್ಕಿ ಜನ ಆವರಣಕ್ಕೆ ಬಂದು ಹೋಗಿದ್ದುಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಇವೆಲ್ಲವನ್ನೂ ಗಮನಿಸಿಯೇ ರಾಜ್ಕೋಟ್ನಿಂದಾಗಮಿಸಿದ್ದ ಸ್ವಾಮಿ ಸರ್ವಸ್ಥಾನಂದಜೀ ಗುಜರಾತ್ನಲ್ಲಿ ಇಂತಹುದೇ ಸಮ್ಮೇಳನ ಮಾಡುವ ಆಲೋಚನೆ ಮಾಡಿದ್ದೇವೆಂದಾಗ ಕಾರ್ಯಕರ್ತರು ನೆಲದ ಮೇಲೆ ನಿಂತಿರಲಿಲ್ಲ! ಅಚ್ಚರಿಯೇನು ಗೊತ್ತೇ? ಈ ಸಮ್ಮೇಳನವನ್ನು ವಿರೋಧಿಸಿದ ಎಡಪಂಥೀಯರು ಸುಮ್ಮನಾಗುವುದಿರಲಿ ಹೊಗಳಲು ಆರಂಭ ಮಾಡಿದ್ದರು. ನಮ್ಮನ್ನು ಬೈದು ಬರೆದ ಪತ್ರಿಕೆಯೇ ಸಮ್ಮೇಳನದ ವರದಿಯನ್ನು ಚಿತ್ರ ಸಮೇತ ಪ್ರಕಟಿಸಿ ಹುಬ್ಬೇರುವಂತೆ ಮಾಡಿತ್ತು.

16683951_1207246782706647_3153893432562431955_n

ಸವಾಲುಗಳಿದ್ದರೇನೇ ಬದುಕಿನ ಅರ್ಥ ಅನಾವರಣಗೊಳ್ಳೋದು. ಅದರಲ್ಲೂ ವಿವೇಕಾನಂದರ ಕೆಲಸದ ಹಾದಿಯಲ್ಲಿ ಅಡೆತಡೆಗಳು ಬಂದಷ್ಟೂ ಪರಿಶ್ರಮಕ್ಕೆ ಮೌಲ್ಯ ಹೆಚ್ಚು. ಹೌದು! ನಾನು ಮಾತಾಡುತ್ತಿರೋದು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದ ಬಗ್ಗೆಯೇ. ಎಡಪಂಥೀಯರು ಕದ್ದು ಮುಚ್ಚಿ ಪ್ರಹಾರ ನಡೆಸುತ್ತಾ ಈ ಸಮ್ಮೇಳನಕ್ಕೆ ತಡೆಯೊಡ್ಡಲು ನಡೆಸಿದ ಪ್ರಯಾಸ ಒಂದೇ ಎರಡೇ. ಮೊದಲು ಪ್ರಚಾರಕ್ಕೆ ವಿರೋಧಿಸಿದರು. ಗೋಡೆಬರಹ ಮಂಗಳೂರಿನ ಅಂದ ಕೆಡಿಸುತ್ತಿದೆ ಎಂದು ಬೊಬ್ಬಿಟ್ಟರು, ತಾವೇ ಊರ ತುಂಬ ಪ್ರಚಾರ ಮಾಡಿಕೊಂಡು ಗೋಡೆ ಮೇಲೆ ಗೀಚಿದ್ದನ್ನು ಮರೆತರು. ಒಂದಷ್ಟು ಜನರನ್ನು ಭಡಕಾಯಿಸಿ ಗೋಡೆಬರಹ ಅಳಿಸಲೆಂದೇ ಕಳಿಸಿದರು. ಎಡವಾದಿಗಳ ಯಾವ ಆಟವೂ ನಡೆಯಲಿಲ್ಲ. ಹೀಗೆ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬರೆದಿದ್ದ ವಿವೇಕಾನಂದರ ಹೇಳಿಕೆಗಳನ್ನು ಅಳಿಸುವ ಮುನ್ನ ತಾವೇ ಬರೆದಿದ್ದ ಗೋಡೆ ಬರಹಗಳನ್ನು ಅಳಿಸಬೇಕಾದೀತೆಂಬ ಸೂಕ್ಷ್ಮ ಪ್ರಜ್ಞೆಯೂ ಇರದೇ ಕಾರ್ಯಕ್ಷೇತ್ರಕ್ಕೆ ಧುಮುಕಿದ್ದರು ಅವರು! ಸಮಾಜ ಉಗಿಯಿತು, ತೆಪ್ಪಗಾದರು. ಕಿರಿಕಿರಿಗಳು ಮುಂದುವರೆದೇ ಇದ್ದವು. ಅದರ ನಡುವೆಯೇ ರಾಜ್ಯಾದ್ಯಂತ ಸಮ್ಮೇಳನದ ಪ್ರಚಾರವೂ ಭರದಿಂದ ಸಾಗಿತ್ತು, ಸಕರ್ಾರಿ ಸಾಹಿತ್ಯ ಸಮ್ಮೇಳನಕ್ಕಿಂತ ವ್ಯವಸ್ಥಿತವಾಗಿ. ಇದರ ಕೋಪವೋ ಏನೋ? ಶಿವಮೊಗ್ಗದಲ್ಲಿ ಎಸ್.ಎಲ್.ಭೈರಪ್ಪನವರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದು ಬೇಡವೆಂದು ನಕ್ಸಲ್ ಬೆಂಬಲಿತ ಸಾಹಿತಿಗಳು ಬೊಬ್ಬಿಟ್ಟರು. ಸಾಹಿತ್ಯ ಸಮ್ಮೇಳನವೊಂದರಲ್ಲಿ ಕೈಲಿ ಚಪ್ಪಲಿ ಹಿಡಿದ ಸಾಹಿತಿ ರಾಜ್ಯದೆಲ್ಲೆಡೆ ಚಚರ್ೆಗೆ ಗ್ರಾಸವಾಗಿಬಿಟ್ಟ. ಅಲ್ಲಿಗೆ ನಮ್ಮ ಸಾಹಿತ್ಯ ಸಮ್ಮೇಳನದ ಅಗತ್ಯ ಜನರಿಗೆ ಮನವರಿಕೆಯಾಗಿತ್ತು. ಬೀದರ್ನಿಂದ ಹಿಡಿದು ಮಡಿಕೇರಿಯವರೆಗೆ ದಂಡು-ದಂಡಾಗಿ ಜನ ಧಾವಿಸಿ ಬರಲು ತಯಾರಿ ನಡೆಸಿದರು.
ಇತ್ತ ಎಡಚರಿಗೆ ಕಿರಿಕಿರಿ. ಅವರ ಕ್ಷೇತ್ರವಾದ ಸಾಹಿತ್ಯದಲ್ಲಿ ಬಲಪಂಥೀಯರು ಬಿತ್ತು ಬೆಳೆ ತೆಗೆಯುವುದನ್ನು ಸಹಿಸುವುದು ಹೇಗೆ? ಕಾರ್ಯಕ್ರಮದ ಆಯೋಜನೆಗೆ ಹಣ ಹುಟ್ಟದಂತೆ ಮಾಡುವ ತಯಾರಿ ಶುರುವಾಯಿತು. ಇದನ್ನು ಕೋಮುವಾದಿಗಳ ಹಬ್ಬವೆಂದು ಬಿಂಬಿಸಲಾರಂಭಿಸಿದರು. ದಾನಿಗಳಿಗೆ ಹಣಕೊಟ್ಟರೆ ಹೆಸರು ಕೆಡುವುದೆಂದು ಹೆದರಿಸಿದರು. ಅಲ್ಲಿಗೂ ನಿಲ್ಲದೇ ಅತಿಥಿಗಳಿಗೆ ಪತ್ರ ಬರೆದು ಕಾರ್ಯಕ್ರಮಕ್ಕೆ ಹೋಗದಿರುವಂತೆ ತಾಕೀತು ಮಾಡಲಾರಂಭಿಸಿದರು. ಲೇಖಕಿಯೊಬ್ಬರಿಗೆ ನಾಲ್ಕು ಪತ್ರಗಳ ದೀರ್ಘ ಪತ್ರದಲ್ಲಿ ಕಾರ್ಯಕ್ರಮದಲ್ಲಾಗಬಹುದಾದ ಅವ್ಯವಸ್ಥೆಯ ಕುರಿತಂತೆ ವಿವರಿಸಿ ಇಡಿಯ ಕಾರ್ಯಕ್ರಮ ನಡೆಯೋದೇ ಅನುಮಾನವೆಂಬಂತೆ ಬಿಂಬಿಸಿಬಿಟ್ಟರು. ಕಾಯಿನ್ ಬೂಥುಗಳಿಂದ ಕರೆ ಮಾಡಿ ಕಾರ್ಯಕ್ರಮಕ್ಕೆ ಬರದಿರುವಂತೆ ಹೆದರಿಸಿದರು. ಈ ಪತ್ರಗಳು ಒಬ್ಬರಿಗಲ್ಲ ಹೆಚ್ಚು ಕಡಿಮೆ ಎಲ್ಲಾ ಅತಿಥಿಗಳಿಗೂ ಹೋಯಿತು. ನಾಲ್ಕು ದಿನ ಮುನ್ನ ಹತಾಶಗೊಂಡ ಎಡಚರ ಪತ್ರಿಕೆಯೊಂದು ನೇರ ಸಚಿವ ರಮೇಶ್ಕುಮಾರರವರ ಮೇಲೆಯೇ ದಾಳಿ ಮಾಡಿ, ಕೋಮುವಾದಿಗಳ ಕಾಯಕ್ರಮಕ್ಕೆ ಸಭ್ಯರಾದವರು ಹೋಗಬಾರದೆಂದು ಬರೆದುಬಿಟ್ಟಿತು. ಅಲ್ಲಿಗೆ ಅವರ ತೆರೆಮರೆಯ ಕಾರ್ಯಗಳೆಲ್ಲ ಬಯಲಿಗೆ ಬಂದಂತಾಯ್ತು. ಇದನ್ನು ಸವಾಲಾಗಿ ಸ್ವೀಕಾರ ಮಾಡುವ ಹೊತ್ತಿಗೆ ಸರಿಯಾಗಿ ಅವರ ಗುಂಪಿನವನೇ ಒಬ್ಬ ‘ಅತಿಥಿಗಳ್ಯಾರೂ ಬರುವುದಿಲ್ಲ; ಆಹ್ವಾನ ಪತ್ರಿಕೆ ಮರುಮುದ್ರಿಸುವುದು ಒಳಿತು’ ಎಂದು ವಾಟ್ಸಾಪಿಸಿದ್ದು ನಮ್ಮೆದುರಿಗೆ ಬಂತು. ಅಲ್ಲಿಯವರೆಗೂ ಇವುಗಳ ಅರಿವಿರದೇ ಇದ್ದ ನಮಗೆ ಈಗ ಹೊಸ ಶಕ್ತಿ ಸಂಚಾರವಾಯ್ತು. ‘ನಿಮ್ಮೆದುರು ಎಷ್ಟು ಅಡೆ ತಡೆಗಳಿವೆ ಹೇಳಿ ನೀವು ಸಾಗುವ ದಾರಿ ಸರಿಯೋ ಅಲ್ಲವೋ ಹೇಳುತ್ತೇನೆ’ ಎಂಬ ವಿವೇಕಾನಂದರ ಮಾತು ಕಿವಿಗಳಲ್ಲಿ ಗುಂಯ್ಗುಡಲಾರಂಭಿಸಿತ್ತು. ಅಂದು ಸಂಜೆಯೇ ತುತರ್ು ಸಭೆ ಸೇರಿದ ಕಾರ್ಯಕರ್ತರು ಹೆಗಲು ವಿಸ್ತರಿಸಿಕೊಂಡರು. ಅಲ್ಲಿಯವರೆಗೂ 10 ಶಾಲಾ-ಕಾಲೇಜುಗಳಲ್ಲಿ ಮಾತ್ರ ಸಮಾನಾಂತರ ಸಮಾವೇಶಗಳು ನಡೆಯುವುದಿತ್ತು. ಈಗ ಇನ್ನಷ್ಟು ಹೆಚ್ಚಿಸುವ ನಿರ್ಣಯವಾಯ್ತು. ಯಾವ್ಯಾವ ಅತಿಥಿಗಳ ಕೊರತೆಯನ್ನು ಯಾರ್ಯಾರು ತುಂಬಿಸಬೇಕೆಂಬ ನಿರ್ಣಯವನ್ನೂ ಅಲ್ಲಿಯೇ ಮಾಡಲಾಯ್ತು. ಒಟ್ಟಾರೆ ಸಮ್ಮೇಳನದ ಸಾಹಿತ್ಯ ಚಚರ್ೆಗೆ ಒಂದಿನಿತೂ ಧಕ್ಕೆ ಬರದಂತೆ ಜವಾಬ್ದಾರಿಯನ್ನು ಹಂಚಲಾಯ್ತು.

16681966_10155016969393055_9130914437552059444_n
ಸಾಧುಗಳ ಬಳಿ ಹೋಗಿ ಬಗೆ ಬಗೆಯಲ್ಲಿ ಕಿವಿಯೂದುವ ತಂಡಗಳ ನಡುವೆಯೂ ಅವರು ಬಂದರು. ಒಬ್ಬೊಬ್ಬರಾಗಿ ನಮ್ಮನ್ನು ಸೇರಿಕೊಂಡರು. ಆರಂಭದಲ್ಲಿ ನಮ್ಮ ವ್ಯವಸ್ಥೆ ಅನುಭವಿ ಕಾರ್ಯಕರ್ತರ ಕೊರತೆಯಿಂದಾಗಿ ಸ್ವಲ್ಪ ಹಿನ್ನಡೆ ಅನುಭವಿಸಿದರೂ ಬರುಬರುತ್ತಾ ಪಕ್ವವಾಯಿತು. ತಂಡ ಬಲಗೊಂಡಿತು. ಹನ್ನೊಂದರ ಬೆಳಿಗ್ಗೆ ಪಲ್ಲಕ್ಕಿ ಉತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ 500ಕ್ಕೂ ಹೆಚ್ಚು ಕಾರ್ಯಕರ್ತರು ಒಟ್ಟಾಗಿ ಹೆಜ್ಜೆ ಹಾಕಲಾರಂಭಿಸುತ್ತಿದ್ದಂತೆ ಆನಂದದ ಬುಗ್ಗೆಯೊಡೆಯಿತು. ಗೋಷ್ಠಿಯ ಅತಿಥಿಯಾಗಿ ಆಗಮಿಸಿದ್ದ ತೇಜಸ್ವಿನಿಯವರು ಮೆರವಣಿಗೆಯನ್ನು ಕಂಡು ಆನಂದಭಾಷ್ಪ ಸುರಿಸಿ ಕೈಮುಗಿದು ನಿಂತಾಗ ಧನ್ಯವೆನಿಸಿತ್ತು. ಆಮೇಲೆ ನಡೆದಿದ್ದೆಲ್ಲವೂ ವಿವೇಕ-ನಿವೇದಿತೆಯರ ವೈಭವವೇ. ಗೋಷ್ಠಿಗಳು ನಡೆವಾಗ ಜನ ಕೂರುವುದಿಲ್ಲವೆಂದು ಮಿತ್ರರೊಬ್ಬರು ಸವಾಲೆಸೆದಿದ್ದರು. ನಾನು ಅಷ್ಟೇ ಖಡಾ-ಖಂಡಿತವಾಗಿ ‘ಇದು ಪಕ್ಷದ ಕಾರ್ಯಕರ್ತರ ಸಭೆಯಲ್ಲ; ದೇಶಭಕ್ತರ ಗಡಣ’ ಎಂದು ನುಡಿದೆದ್ದಿದ್ದೆ. ಪ್ರತೀ ಹಂತದಲ್ಲೂ ಸಭಾಂಗಣ ಆಸಕ್ತ ತರುಣರಿಂದ ತುಂಬಿರುತ್ತಿದ್ದನ್ನು ನೋಡಿ ಭಾಷಣಕಾರರ ಉತ್ಸಾಹ ನೂರ್ಮಡಿಯಾಗಿರುತ್ತಿತ್ತು. ಸಕರ್ಾರವೇ ನಡೆಸುವ ಸಮ್ಮೇಳನದ ಸಾಹಿತ್ಯ ಗೋಷ್ಠಿಯಲ್ಲಿ ನೂರು ಜನ ಕೂರುವುದು ಕಷ್ಟವೆನಿಸುವ ಈ ಹೊತ್ತಲ್ಲಿ ನೂರಾರು ತರುಣರನ್ನು ಕಲೆ ಹಾಕಿ ಸಾಹಿತ್ಯ ಗೋಷ್ಠಿ ನಡೆಸುವ ಧಾಷ್ಟ್ರ್ಯ ಮಾಡಿ ನಾವು ಗೆದ್ದು ಬಿಟ್ಟಿದ್ದೆವು!
ಇಡಿಯ ಸಮ್ಮೇಳನಕ್ಕೆ ಕೀತರ್ಿ ತಂದಿದ್ದು ಸಮ್ಮೇಳನಾಧ್ಯಕ್ಷೆಯಾದ ಮಾತಾಜಿ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ. ನಿವೇದಿತೆಯ ಕುರಿತಂತೆಯೇ ಡಾಕ್ಟರೇಟ್ ಪ್ರಬಂಧ ಮಂಡಿಸಿರುವ ಮಾತಾಜಿ ಇಳಿ ವಯಸ್ಸಿನಲ್ಲೂ ತೋರಿದ ಉತ್ಸಾಹ ಸಂಭ್ರಮ ತರುವಂಥದ್ದಾಗಿತ್ತು. ಅವರ ಮಾತುಗಳನ್ನು ಆಲಿಸಿದ ನಿವೇದಿತಾ ಪ್ರತಿಷ್ಠಾನದ ಒಂದಿಬ್ಬರು ಹೆಣ್ಣುಮಕ್ಕಳು ನಿವೇದಿತೆಯ ಕುರಿತಂತೆ ಡಾಕ್ಟರೇಟ್ ಪ್ರಬಂಧ ಮಂಡಿಸುವ ನಿಶ್ಚಯಮಾಡಿದ್ದೂ ಈ ಸಮ್ಮೇಳನದ ಹೆಗ್ಗಳಿಕೆಯೇ ಸರಿ. ಸ್ವಾಮಿ ನಿರ್ಭಯಾನಂದಜಿ ಮತ್ತು ಅವರೊಂದಿಗೆ ಸೇರಿಕೊಂಡ ಹದಿನೈದಕ್ಕೂ ಹೆಚ್ಚು ಸಾಧುಗಳು, ಮಾತಾ ವಿವೇಕಮಯಿ, ಮಾತಾ ಯೋಗಾನಂದಮಯಿಯಾದಿಯಾಗಿ ಹತ್ತಕ್ಕೂ ಹೆಚ್ಚು ಸಾಧ್ವಿಯರು ಕಾರ್ಯಕ್ರಮಕ್ಕೆ ದೈವೀರಂಗು ತುಂಬಿಬಿಟ್ಟಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ವಿವೇಕಾನಂದ-ನಿವೇದಿತೆಯರ ಪಾಲ್ಗೊಳ್ಳುವಿಕೆಯನ್ನು ಚಿತ್ರಿಸಿಕೊಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜವಾಬ್ದಾರಿ ಹೊತ್ತ ವಿ. ನಾಗರಾಜ್ ಮತ್ತು ಭಾಜಪಾದ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ಹೊಂದಿರುವ ಸಂತೋಷ್ ರವರು ಎಲ್ಲರ ಮನಸೂರೆಗೊಂಡರು. ಕಾರ್ಯಕರ್ತರೇ ರೂಪಿಸಿದ ವಸ್ತು ಪ್ರದರ್ಶನ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ವಿವೇಕಾನಂದರೊಂದಿಗೆ ಕುಳಿತು ಫೋಟೋ ತೆಗೆಸಿಕೊಂಡವರದೆಷ್ಟು ಮಂದಿಯೋ ದೇವರೇ ಬಲ್ಲ! ಈ ಸಮ್ಮೇಳನ ಎರಡು ವಿಶ್ವದಾಖಲೆಗಳಿಗೆ ಸಾಕ್ಷಿಯಾಯಿತು. ಪುಸ್ತಕ ಮಾರಾಟವೂ ಅಷ್ಟೇ. ರಾಷ್ಟ್ರೀಯ ಸಾಹಿತ್ಯ, ವಿವೇಕ-ನಿವೇದಿತೆಯರ ವಿಚಾರಧಾರೆಯ ಸಾಹಿತ್ಯಕ್ಕೆ ಜನ ಮುಗಿಬಿದ್ದ ರೀತಿ ರೋಚಕವಾಗಿತ್ತು. ಒಟ್ಟು ಎರಡು ದಿನಗಳಲ್ಲಿ 70 ಸಾವಿರಕ್ಕೂ ಮಿಕ್ಕಿ ಜನ ಆವರಣಕ್ಕೆ ಬಂದು ಹೋಗಿದ್ದುಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಾಕ್ಷಿಯಾಗಿತ್ತು. ಇವೆಲ್ಲವನ್ನೂ ಗಮನಿಸಿಯೇ ರಾಜ್ಕೋಟ್ನಿಂದಾಗಮಿಸಿದ್ದ ಸ್ವಾಮಿ ಸರ್ವಸ್ಥಾನಂದಜೀ ಗುಜರಾತ್ನಲ್ಲಿ ಇಂತಹುದೇ ಸಮ್ಮೇಳನ ಮಾಡುವ ಆಲೋಚನೆ ಮಾಡಿದ್ದೇವೆಂದಾಗ ಕಾರ್ಯಕರ್ತರು ನೆಲದ ಮೇಲೆ ನಿಂತಿರಲಿಲ್ಲ!

16711843_1208735785891080_1522244205800261171_n
ಅಚ್ಚರಿಯೇನು ಗೊತ್ತೇ? ಈ ಸಮ್ಮೇಳನವನ್ನು ವಿರೋಧಿಸಿದ ಎಡಪಂಥೀಯರು ಸುಮ್ಮನಾಗುವುದಿರಲಿ ಹೊಗಳಲು ಆರಂಭ ಮಾಡಿದ್ದರು. ನಮ್ಮನ್ನು ಬೈದು ಬರೆದ ಪತ್ರಿಕೆಯೇ ಸಮ್ಮೇಳನದ ವರದಿಯನ್ನು ಚಿತ್ರ ಸಮೇತ ಪ್ರಕಟಿಸಿ ಹುಬ್ಬೇರುವಂತೆ ಮಾಡಿತ್ತು.
ಈ ಸಮ್ಮೇಳನದ ಕಲ್ಪನೆ ಈಗ ವಿಸ್ತಾರಗೊಂಡಿದೆ. ತಾಲೂಕು ಕೇಂದ್ರಗಳಿಂದಲೂ ಲಘು ಸಾಹಿತ್ಯ ಗೋಷ್ಠಿ ನಡೆಸಲು ಆಹ್ವಾನ ಬರುತ್ತಿದೆ. ಬೆಳಗಾವಿಯಲ್ಲಿ ಸೆಪ್ಟೆಂಬರ್ನಲ್ಲಿ ಸಮಾರೋಪ ಮಾಡಬೇಕೆಂದಿದ್ದೆವು. ಬೆಂಗಳೂರಿನ ಸಾಹಿತ್ಯಾಸಕ್ತರು ಹಠಕ್ಕೆ ಬಿದ್ದು ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ಮಾಡೋಣವೆಂದಿದ್ದಾರೆ. ಪ್ರೇಮ ಕಾವ್ಯಗಳ ಚಚರ್ೆ ಜನಸಾಮಾನ್ಯರಿಗೂ ಸಾಕಾಗಿದೆ. ಈಗ ಚಚರ್ೆಯಾಗಬೇಕಿರೋದು ಕ್ರಾಂತಿಕಾವ್ಯಗಳು ಮಾತ್ರ. ತರುಣರಿಗೆ ಮಾರ್ಗ ತೋರಬಲ್ಲ, ರಾಷ್ಟ್ರ ಕಾರ್ಯಕ್ಕೆ ಪ್ರಚೋದಿಸಬಲ್ಲ ಮಹಾ ಸಾಹಿತ್ಯಗಳು ಮಾತ್ರ! ಅದನ್ನೂ ಈ ಸಮ್ಮೇಳನ ದೃಢಪಡಿಸಿದೆ.

Comments are closed.