ವಿಭಾಗಗಳು

ಸುದ್ದಿಪತ್ರ


 

ಐದು ಶತಮಾನ ಕಾದವರಿಗೆ ಐದು ವರ್ಷ ಹೆಚ್ಚಾಯಿತೇ?

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಮುಸಲ್ಮಾನರಿಗೆಂದೇ ಪ್ರತ್ಯೇಕ ರಾಷ್ಟ್ರ ಕೊಟ್ಟಾಗಿತ್ತಲ್ಲ ಆಗ ನಾವು ಎಲ್ಲರನ್ನೂ ಒಲಿಸಿಯೇ ರಾಮ ಮಂದಿರ ಕಟ್ಟಿಬಿಡಬಹುದಿತ್ತು. ಆದರೆ ನೆಹರೂ ಕುಟುಂಬ ಬ್ರಿಟೀಷರ ಹಾದಿಯಲ್ಲಿಯೇ ಹೆಜ್ಜೆ ಇಟ್ಟ ಕುಟುಂಬ. ಅವರು ಭೇದ ಬೆಳೆದಷ್ಟೂ ಆಳುವುದು ಸುಲಭವೆಂದೆಣಿಸಿ ಈ ಅಂತರವನ್ನು ಕಾಯ್ದುಕೊಳ್ಳಲು ಬೇಕಾದ ಎಲ್ಲ ಏಪರ್ಾಟುಗಳನ್ನು ಮಾಡಿದರು.

ತಿಪ್ಪರಲಾಗ ಹೊಡೆದರೂ ರಾಮ ಮಂದಿರ ನಿಮರ್ಾಣ ತಡೆಯುವುದು ಸಾಧ್ಯವಿಲ್ಲವೆಂದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಅಚ್ಚರಿಯೆಂದರೆ ಈ ಬಾರಿ ಮಂದಿರ ನಿಮರ್ಾಣದ ಕೂಗು ಜೋರಾಗಿರುವುದು ಮುಸಲ್ಮಾನರ ಪಾಳಯದಿಂದಲೇ. ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲಿ ಬಹುಶಃ ಮೊದಲ ಬಾರಿಗೆ ಸಜ್ಜನ ಮುಸಲ್ಮಾನರು ದುಷ್ಟ ಶಕ್ತಿಗಳ ವಿರುದ್ಧ ಮಾತನಾಡುವ ಛಾತಿ ಬೆಳೆಸಿಕೊಂಡು ಭಾರತದ ಪರವಾದ ದನಿ ಎತ್ತಿದ್ದಾರೆ. ಎಂದಿನಂತೆ ಆಂತರಿಕ ಜಗಳದ ತೊಳಲಾಟ ಇರುವುದು ಹಿಂದೂ ಸಂಘಟನೆಗಳು ಎನಿಸಿಕೊಂಡವರಲ್ಲಿ ಮಾತ್ರ!

featured

ಮೋದಿ ಅಧಿಕಾರಕ್ಕೆ ಬರುವಾಗಲೇ ಅವರು ಅತ್ಯುಗ್ರವಾದಿಗಳನ್ನು ಬದಿಗೆ ಸರಿಸಿ ಎಲ್ಲ ಪಂಥಗಳ ಸಮಾಜದಲ್ಲೂ ಇರುವ ಶಾಂತಿಪ್ರಿಯ, ಸಜ್ಜನರನ್ನು ಜೊತೆಗೂಡಿಸಿಕೊಂಡೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತ ಹೆಜ್ಜೆ ಇಡುವುದು ಖಾತ್ರಿಯಾಗಿತ್ತು. ಮೋದಿಯವರ ಗೆಲುವಿನ ನಂತರ ತಮ್ಮಿಂದಲೇ ಅವರ ಗೆಲುವು ಸಾಧ್ಯವಾಗಿದ್ದೆಂದು ಹೇಳಿಕೊಂಡು ತಿರುಗಾಡುವ ಕೆಲವರು ಅವರನ್ನು ಕೈಗೊಂಬೆ ಮಾಡಿಕೊಂಡುಬಿಡುತ್ತಾರೇನೋ ಎಂಬ ಹೆದರಿಕೆ ಅನೇಕರಿಗೆ ಇದ್ದದ್ದು ನಿಜ ಆದರೆ ರಾಷ್ಟ್ರ ಪ್ರಜ್ಞೆಯ ಅತ್ಯುತ್ಕೃಷ್ಟ ನಿದರ್ಶನವಾದ ನರೇಂದ್ರ ಮೋದಿ, ದೇಶವನ್ನು ತುಂಡರಿಸುವ ಯಾವ ಪ್ರತ್ಯೇಕತಾವಾದದ ಭಾವನೆಗಳಿಗೂ ಸೊಪ್ಪು ಹಾಕಲಾರರೆಂಬುದು ಅವರನ್ನು ಹತ್ತಿರದಿಂದ ಬಲ್ಲ ಪ್ರತಿಯೊಬ್ಬರಿಗೂ ಗೊತ್ತೇ ಇತ್ತು. ಅಂಥವರಲ್ಲೇ ಒಂದಷ್ಟು ಜನ ಗುಂಪುಗೂಡಿ ಮೋದಿಯ ವಿರುದ್ಧ ಕೂಗಾಡಿ ಗುಜರಾತಿನಲ್ಲಿ ರಾಹುಲ್ ಗಾಂಧಿಗೆ ದೇವಸ್ಥಾನಗಳ ಯಾತ್ರೆ ಕೈಗೊಳ್ಳುವ ಐಡಿಯಾ ಕೊಟ್ಟು ಅವನನ್ನು ಸಾಫ್ಟ್ ಹಿಂದು ಎಂದು ಸಾಬೀತು ಪಡಿಸುವ ಜವಾಬ್ದಾರಿಯನ್ನೂ ಹೊತ್ತಿದ್ದರು. ನೆನಪಿಡಿ. ಮೋದಿಯವರಿಗೆ 2019ರ ಚುನಾವಣೆಗೆ ವಿರೋಧ ಎದುರಾಗೋದು ಪ್ರತಿಪಕ್ಷಗಳಿಂದಲ್ಲ ಬದಲಿಗೆ ಒಳಗೇ ಬೀಡುಬಿಟ್ಟಿರುವ ಅತ್ಯುಗ್ರವಾದಿಗಳಿಂದಲೇ! ಹಾಗೆ ನೋಡಿದರೆ 2014ರ ಚುನಾವಣೆಯ ಅಜೆಂಡಾದಲ್ಲಿ ರಾಮ ಮಂದಿರದ ಪ್ರಶ್ನೆಯನ್ನು ಮೋದಿ ಮುಖ್ಯವಾಹಿನಿಗೆ ತಂದಿರಲಿಲ್ಲ. ಆದರೆ ಅವರು ರಾಷ್ಟ್ರದ ಗೌರವ, ಘನತೆಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಾಡಬೇಕಾದ ಎಲ್ಲ ಕೆಲಸಗಳನ್ನೂ ಮಾಡುವುದು ಖಾತ್ರಿಯಾದ್ದರಿಂದ ಮಂದಿರವನ್ನು ಕಟ್ಟಿಯೇ ಕಟ್ಟುತ್ತಾರೆಂಬ ಅದಮ್ಯ ವಿಶ್ವಾಸ ಎಲ್ಲರಿಗೂ ಇತ್ತು!

ಆದರೆ ಮಂದಿರ ನಿಮರ್ಾಣ ಸುಲಭದ ಕೆಲಸವಾಗಿರಲಿಲ್ಲ. ಐದುನೂರು ವರ್ಷಗಳ ಸವಾಲು ಅದು. ಸ್ಥೂಲವಾಗಿ ಅದಕ್ಕಿದ್ದುದು ಎರಡೇ ದಾರಿ. ಮೊದಲನೆಯದು ಆಕ್ರಾಮಕ ಹೆಜ್ಜೆಯನ್ನಿಟ್ಟು ಬಡಿದಾಡಿ, ರಕ್ತ ಚೆಲ್ಲಿ ಮಂದಿರ ನಿಮರ್ಿಸುವುದು. ಇದು ದೇಶದಾದ್ಯಂತ ದಂಗೆಗಳನ್ನು ಹುಟ್ಟುಹಾಕುತ್ತದೆ, ಕಟ್ಟರ್ ಮುಸಲ್ಮಾನರು ಇತರೆ ಸಾಮಾನ್ಯ ಮುಸ್ಲೀಂರನ್ನು ತಮ್ಮೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಹಣ, ಶಸ್ತ್ರ, ಅಂತರಾಷ್ಟ್ರೀಯ ಬೆಂಬಲ ಮತ್ತು ಒಗ್ಗಟ್ಟಿನ ದೃಷ್ಟಿಯಿಂದ ಅವರು ನಮಗಿಂತ ಒಂದು ಕೈ ಮೇಲಿರುತ್ತಾರೆ. ದೇಶದ ವಿವಿಧೆಡೆಗಳಲ್ಲಿ ನಡೆಯುವ ದಂಗೆಯಲ್ಲಿ ಅಪಾರ ಸಾವು-ನೋವುಗಳಾಗುತ್ತವೆ. 1947ರಲ್ಲಿ ನಿಮರ್ಾಣವಾದಂತಹ ತೀರಾ ವಿಪತ್ತಿಕರ ಸನ್ನಿವೇಶವೂ ಬರಬಹುದು. ಇನ್ನು ಎರಡನೇ ಮಾರ್ಗವದ್ಯಾವುದು ಗೊತ್ತೆ? ಕೋಟರ್ಿನ ತೀಪರ್ಿಗೆ ಕಾಯೋದು, ಸುದೀರ್ಘವಾಗಿ ಕಾಯೋದು. ಸಮಸ್ಯೆಯನ್ನು ಜೀವಂತವಾಗಿರಿಸೋದು!
ನಿಜವಾದ ಸಮಸ್ಯೆ ಎದುರಾಗೋದು ಕಟ್ಟರ್ ಮುಸಲ್ಮಾನರ ಕೈ ಮೇಲಾದಾಗ. ಅವರೇ ಇಲ್ಲಿ ಐಸಿಸ್ನ ಮೂಲ ಪ್ರವರ್ತಕರು. ಆದರೆ ಅವರ ಸಂಖ್ಯೆ ಒಟ್ಟಾರೆ ಮುಸಲ್ಮಾನರಲ್ಲಿ ಶೇಕಡಾ ಹತ್ತರಷ್ಟಿದ್ದರೆ ಹೆಚ್ಚು. ಉಳಿದವರು ತೀರಾ ಹಿಂದುಗಳ ಪರವಾಗಿ ನಿಲ್ಲುವ ಜನ ಎಂದೇನೂ ನಾನು ಹೇಳುತ್ತಿಲ್ಲ ಆದರೆ ಕಟ್ಟರ್ಗಳ ಸಹವಾಸ ಬೇಡವೆಂದಷ್ಟೇ ಬಯಸುವವರು. ಹೊನ್ನಾವರದಲ್ಲಿ ನಮ್ಮ ಹೊಟೇಲಿನೆದುರಿಗೇ ಒಂದು ಮಸೀದಿ ಇದೆ. ಅದು ದಗರ್ಾವನ್ನೂ ಗೌರವಿಸುವ ಜನಾಂಗಕ್ಕೆ ಸೇರಿದ ಮುಸಲ್ಮಾನರದ್ದು. ಅಚ್ಚರಿಯೆಂದರೆ ಈ ಮಸೀದಿಗೆ ದಗರ್ಾ ಗೌರವಿಸುವುದನ್ನು ಧಿಕ್ಕರಿಸುವ ಮುಸಲ್ಮಾನರಿಗೆ ಪ್ರವೇಶವೇ ಇಲ್ಲ. ಈ ಕಾರಣಕ್ಕಾಗಿ ಅಲ್ಲಿ ಭಯಾನಕ ಕದನಗಳಾಗಿವೆ. ಅವ್ಯಾವುವೂ ಹೊರಗೆ ಬರುವುದಿಲ್ಲವೆಂದ ಮಾತ್ರಕ್ಕೆ ನಡೆದಿಲ್ಲವೆಂದಲ್ಲ. ಅವರುಗಳು ಕ್ರಿಕೇಟ್ ಆಡುವಾಗಲೂ ಈ ಥರದ ಕಟ್ಟರ್ಗಳನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ. ಆದರೆ ಪರೇಶ್ ಮೇಸ್ತನ ಹತ್ಯೆ ಮತ್ತು ಆನಂತರದ ಘಟನೆಗಳ ನಂತರ ಊರಿಗೆ ದೂರದೂರದಿಂದ ಹಣ ಸಹಾಯಕ್ಕೆ, ಸೈದ್ಧಾಂತಿಕ ಬೆಂಬಲಕ್ಕೆ ಜನ ಬರಲಾರಂಭಿಸಿದ್ದಾರೆ. ಭಯದ ವಾತಾವರಣದಲ್ಲಿರುವ ಅನೇಕರು ಇವರುಗಳನ್ನು ವಿರೋಧಿಸಲಾಗದಷ್ಟು ಗೊಂದಲಕ್ಕೆ ಸಿಲುಕಿದ್ದಾರೆ. ಹಿಡಿಯಷ್ಟಿರುವ ಕಟ್ಟರ್ ಪಂಥಿಗಳ ಕೈಗೆ ಮಧ್ಯಮ ಮಾರ್ಗದಲ್ಲಿರುವವರು ಸಿಕ್ಕಿಬಿದ್ದರೆಂದರೆ ಕಥೆ ಮುಗಿದಂತೆಯೇ.

3

ತಮ್ಮ ಅಧಿಕಾರ, ತಮ್ಮ ಗೆಲುವು ಎಂದಷ್ಟೇ ಆಲೋಚಿಸುವ ಮಂದಿ ಮಾತ್ರ ಕೂಗಾಡಿ-ಅರಚಾಡಿ ದೇಶವನ್ನು ಕಂಟಕಕ್ಕೆ ನೂಕಬಲ್ಲರು. ಅತ್ತ ಮೋದಿ ಮಾತ್ರ ಅತ್ಯಂತ ಸಾವಧಾನದಿಂದ ಒಂದೊಂದೇ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅಧಿಕಾರದ ಸುತ್ತ ಅಮರಿಕೊಂಡಿದ್ದ ವಹಾಬಿಗಳನ್ನು ದೂರ ಅಟ್ಟಿ ಸಾಫ್ಟ್ ಮುಸಲ್ಮಾನರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಂತ ಹಂತವಾಗಿ ಅವರನ್ನು ಮುಖ್ಯವಾಹಿನಿಗೆ ತಂದು ಆತ್ಮಸ್ಥೈರ್ಯ ತುಂಬಿದ್ದಾರೆ. ‘ಹಿಂದೂಗಳೆಂದರೆ ಹೆದರಿಕೆ’ ಎಂಬ ಯಾವ ಭಾವನೆಯನ್ನು ಕಾಂಗ್ರೆಸ್ಸು ಎಪ್ಪತ್ತು ವರ್ಷಗಳಲ್ಲಿ ತುಂಬಿಸಿಬಿಟ್ಟಿತ್ತೋ ಅದರಿಂದ ಅವರನ್ನು ಆಚೆ ತಂದು ಸೌಹಾರ್ದ ವಾತಾವರಣಕ್ಕೆ ಬೇಕಾದುದನ್ನೆಲ್ಲ ರೂಪಿಸಿಕೊಟ್ಟಿದ್ದಾರೆ. ಹಾಗಂತ ಅವರದ್ದು ತುಷ್ಟೀಕರಣದ ರಾಜಕಾರಣವಲ್ಲ. ಟ್ರಿಪಲ್ ತಲಾಖ್ನ್ನು ನಿಷೇಧಿಸಿ ಸ್ತ್ರೀಯರಿಗೆ ಬಲ ತುಂಬಿದರು. ಹೆಣ್ಣುಮಕ್ಕಳ ಅಧ್ಯಯನಕ್ಕೆ ಬೇಕಾದ ಹಣವನ್ನೂ ಹೊಂದಿಸಿಕೊಟ್ಟು ಅವರನ್ನು ಧಾಮರ್ಿಕ ಶಿಕ್ಷಣಕ್ಕಷ್ಟೇ ಮೀಸಲು ಮಾಡಿಟ್ಟಿದ್ದ ಪರಂಪರೆಯ ಕಟ್ಟಳೆಗಳಿಂದ ಆಚೆಗೆ ತಂದರು. ಇದಕ್ಕೂ ಹಣವನ್ನೇನು ಹೊಸದಾಗಿ ತೆಗೆದಿರಿಸಿಲ್ಲ; ಹಜ್ ಯಾತ್ರೆಯ ಸಬ್ಸಿಡಿಯನ್ನು ನಿಲ್ಲಿಸಿ ಕೊಟ್ಟಿದ್ದಷ್ಟೇ. ಇವೆಲ್ಲವುಗಳ ಪರಿಣಾಮ ಹೇಗಾಗಿದೆಯೆಂದರೆ ಮುಸಲ್ಮಾನರ ಮನೆಗಳಲ್ಲಿ ಈಗ ಗಂಡಸರು ಕಾಂಗ್ರೆಸ್ನ ಪರವಿರಬಹುದೇನೋ? ಹೆಂಗಸರು ವೋಟು ಹಾಕೋದು ಮೋದಿಗೇ ಎನ್ನುವಂತಾಗಿಬಿಟ್ಟಿದೆ! ಇವೆಲ್ಲವುಗಳ ಫಲಿತಾಂಶವೇ ರಾಮ ಮಂದಿರ ನಿಮರ್ಾಣದಲ್ಲಿ ಮುಸಲ್ಮಾನರೂ ಆಸ್ಥೆ ವಹಿಸಿರೋದು. ಮೋದಿ ಮಂದಿರ ಕಟ್ಟಲಿದ್ದಾರೋ ಇಲ್ಲವೋ ಎಂಬ ಅನುಮಾನ ಕಠೋರವಾದಿ ಹಿಂದುಗಳಿಗಿರಬಹುದು, ಮುಸಲ್ಮಾನರಿಗಿಲ್ಲ. ಹೀಗಾಗಿಯೇ ಅವರು ಅದಾಗಲೇ ಸಂಧಾನ ಮಾರ್ಗಕ್ಕೆ ಬಂದು ಕೋಟರ್ಿನಿಂದಾಚೆಗೆ ಸಮಸ್ಯೆಗೆ ಪರಿಹಾರ ಹುಡುಕುವ ಬಯಕೆ ವ್ಯಕ್ತ ಪಡಿಸಿದ್ದಾರೆ. ಖುಷಿಯೇ ಅಲ್ಲವೇ?
ಹಾಗೆ ನೋಡಿದರೆ ರಾಮ ಮಂದಿರದ ಸಮಸ್ಯೆ ಶುರುವಾಗಿರೋದು 16ನೇ ಶತಮಾನದ ಆರಂಭದಲ್ಲಿ. ಬಾಬರ್ನ ಸೇನಾಧಿಪತಿ ಮೀರ್ ಬಾಕಿ ಮಂದಿರವನ್ನು ಕೆಡವಿ ಅಲ್ಲಿ ಮಸೀದಿ ನಿಮರ್ಿಸಿದನಂತೆ. ಅಲ್ಲಿಂದಾಚೆಗೆ ಸುಮಾರು ಮೂರು ಶತಮಾನಗಳ ಕದನ ಒಳಗೊಳಗೇ ನಡೆದು ಬ್ರಿಟೀಷರ ಕಾಲದಲ್ಲಿ ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮಸೀದಿಯ ಮೇಲೆ ದಾಳಿ ಮಾಡಲಾಯ್ತು. ಅವರು ಅದನ್ನು ಹಿಂದೂ-ಮುಸ್ಲೀಂ ಕದನದ ಕೇಂದ್ರಬಿಂದುವಾಗಿ ಬಳಸಿಕೊಂಡರು. ಒಳಗೆ ಮುಸಲ್ಮಾನರಿಗೆ, ಹೊರಗೆ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶವೆಂಬ ಸೂತ್ರ ಕೊಟ್ಟರು. ಪರಿಹಾರ ಕಾಣದ ಸಮಸ್ಯೆಯಾಗಿ ಅದನ್ನು ಉಳಿಸುವಲ್ಲಿ ಅವರದ್ದೇ ಸಾಕಷ್ಟು ಕೊಡುಗೆ.

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಮುಸಲ್ಮಾನರಿಗೆಂದೇ ಪ್ರತ್ಯೇಕ ರಾಷ್ಟ್ರ ಕೊಟ್ಟಾಗಿತ್ತಲ್ಲ ಆಗ ನಾವು ಎಲ್ಲರನ್ನೂ ಒಲಿಸಿಯೇ ರಾಮ ಮಂದಿರ ಕಟ್ಟಿಬಿಡಬಹುದಿತ್ತು. ಆದರೆ ನೆಹರೂ ಕುಟುಂಬ ಬ್ರಿಟೀಷರ ಹಾದಿಯಲ್ಲಿಯೇ ಹೆಜ್ಜೆ ಇಟ್ಟ ಕುಟುಂಬ. ಅವರು ಭೇದ ಬೆಳೆದಷ್ಟೂ ಆಳುವುದು ಸುಲಭವೆಂದೆಣಿಸಿ ಈ ಅಂತರವನ್ನು ಕಾಯ್ದುಕೊಳ್ಳಲು ಬೇಕಾದ ಎಲ್ಲ ಏಪರ್ಾಟುಗಳನ್ನು ಮಾಡಿದರು. ಹಾಗಂತ ಆಗೆಲ್ಲ ಹೋರಾಟ ನಡೆದಿರಲಿಲ್ಲವೆಂದಲ್ಲ. 1949ರಲ್ಲಿ ಗೋರಖನಾಥ ಮಠದ ಸಂತ ದಿಗ್ವಿಜಯ್ ನಾಥ್ರು ಅಖಿಲ ಭಾರತೀಯ ರಾಮಾಯಣ ಮಹಾಸಭಾದ ಮೂಲಕ ಒಂಭತ್ತು ದಿನಗಳ ಕಾಲ ನಿರಂತರವಾಗಿ ರಾಮ ಚರಿತ ಮಾನಸ ಪಠಣ ಮಾಡುವ ಮೂಲಕ ಮತ್ತೊಮ್ಮೆ ರಾಮ ಭಕ್ತಿಯನ್ನು ಜಾಗೃತಗೊಳಿಸಿದರು. ಕೊನೆಯ ದಿನ ಭಕ್ತರು ಮಸೀದಿಯ ಒಳಗೆ ನುಗ್ಗಿ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿಯೇ ಬಿಟ್ಟರು. ಆಗ ಅಯೋಧ್ಯೆಯ ನಿವಾಸಿಯಾಗಿದ್ದ ಹಶಿಮ್ ಅನ್ಸಾರಿ ಕೋಟರ್ಿಗೆ ಹೋಗಿ ವಿಗ್ರಹ ತೆರವು ಮಾಡುವಂತೆ ಕೇಳಿಕೊಂಡಿದ್ದು ಕಾನೂನಿನ ಕದನವಾಗಿ ತಿರುಗಿತು. ಮಂದಿರಕ್ಕೆ ಬೀಗ ಜಡಿಯಲಾಯ್ತು. ಪೂಜಾರಿ ಬೀಗ ತೆಗೆದು ಪೂಜೆಯಷ್ಟೇ ಮಾಡುತ್ತಿದ್ದ. 1980ರಲ್ಲಿ ವಿಶ್ವ ಹಿಂದೂ ಪರಿಷತ್ತು ಮಂದಿರ ಚಳವಳಿ ಶುರುಮಾಡಿ ಮತ್ತೊಮ್ಮೆ ರಾಮ ಮಂದಿರದ ಚಿಂತನೆಯನ್ನು ವ್ಯಾಪಕವಾಗಿಸಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಹಿಂದೂಗಳನ್ನೂ ಏಕ ಛತ್ರದಡಿ ತರುವ ಪ್ರಯತ್ನ ನಿಜಕ್ಕೂ ಯಶಸ್ವಿಯಾಗಿತ್ತು. ಮುಂದೊಮ್ಮೆ ಹೀಗಾಗುವುದೆಂಬುದರ ಅರಿವಿದ್ದರೆ ನೆಹರು ಮಂದಿರವನ್ನು ತಮ್ಮ ಅಧಿಕಾರಾವಧಿಯಲ್ಲಿಯೇ ನಿಮರ್ಿಸಿಬಿಡುತ್ತಿದ್ದರೇನೋ! 1986ರಲ್ಲಿ ಹಿಂದೂಗಳಿಗೆ ಮಂದಿರದ ಒಳಗೆ ಪೂಜೆ ಸಲ್ಲಿಸುವ ಅವಕಾಶ ದೊರೆಯಿತು. 1990ರಲ್ಲಿ ಅಡ್ವಾಣಿ ಅಯೋಧ್ಯೆ ರಥಯಾತ್ರೆ ಆರಂಭಿಸಿ ಪರಂಪರೆಯ ತಂತುವನ್ನು ಮೀಟಿದರು. ಅದಾದ ಎರಡೇ ವರ್ಷದಲ್ಲಿ ಕಾರಸೇವಕರು ಮಸೀದಿಯ ಕಟ್ಟಡವನ್ನು ಉರುಳಿಸಿ ಸುಮಾರು ಐದು ಶತಮಾನಗಳ ಹಳೆಯ ಕಳಂಕವನ್ನು ತೊಡೆದು ಹಾಕಿಬಿಟ್ಟರು. ಅದೇ ಮಂದಿರ ಕದನ ಅಟಲ್ ಬಿಹಾರಿ ವಾಜಪೇಯಿಯವರನ್ನು ಪ್ರಧಾನಿ ಗಾದಿಯ ಮೇಲೆ ಕೂರಿಸಿತು!

4

ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದಾಗಿನ ಸನ್ನಿವೇಶಕ್ಕೂ ಈಗಿನ ಪರಿಸ್ಥಿತಿಗೂ ಅಜಗಜಾಂತರವಿದೆ. ಒಂದೆಡೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕೋಟರ್ಿನಲ್ಲಿ ಇಡಿಯ ಕದನವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ್ದರೆ ಇತ್ತ ಆಟರ್್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಸಂಧಾನದ ಬಾಗಿಲನ್ನು ಕೆಲವು ತಿಂಗಳ ಹಿಂದೆ ತೆರೆದು ಪೂರಕವಾದ ಪ್ರಯತ್ನಕ್ಕೆ ಕಟಿ ಬದ್ಧವಾಗಿದ್ದಾರೆ. ಅತ್ತ ಮೋದಿ ಕಾಲಕ್ಕೆ ತಕ್ಕಂತೆ ಸಾಫ್ಟ್ ಮುಸಲ್ಮಾನರ ಪಡೆಯನ್ನು ವಿಸ್ತರಿಸುತ್ತ ಈ ಶತಮಾನದ ಬಲು ಮಹತ್ವದ ಕ್ರಾಂತಿಯೊಂದಕ್ಕೆ ಭಾಷ್ಯ ಬರೆಯಲು ಹೊರಟಿದ್ದಾರೆ. ಮಂದಿರದ ವಿಷಯದ ಜಾಡು ಹಿಡಿದ ಷಿಯಾ ಮತ್ತು ಸುನ್ನಿಗಳ ನಡುವಿನ ಕಂದಕ ಬಲು ಜೋರಾಗಿಯೇ ಕಾಣಿಸಿಕೊಂಡಿದೆ. ಷಿಯಾ ವಕ್ಫ್ ಬೋಡರ್್ ಈ ವಿವಾದದಲ್ಲಿ ಕೈಯ್ಯಾಡಿಸಿ ಬಾಬರ್ನ ಮೂಲವನ್ನು ಕೆದಕಿ ಈ ಜಾಗವೇ ಷಿಯಾಗಳಿಗೆ ಸೇರಿದ್ದಾದ್ದರಿಂದ ಸುನ್ನಿಗಳು ಮಾತನಾಡುವುದೇ ತಪ್ಪು ಎಂದು ಬಿಟ್ಟಿತು. ಮಂದಿರವನ್ನು ಕಟ್ಟಿಕೊಳ್ಳಿ ಆದರೆ ಲಕ್ನೌನ ಹುಸೇನಾಬಾದ್ ಪರಿಸರದಲ್ಲಿ ‘ಸೌಹಾರ್ದತೆಯ ಮಸೀದಿ’ಯೊಂದನ್ನು ಕಟ್ಟಿಕೊಡುವಂತೆ ಪ್ರಾಥರ್ಿಸಿಕೊಂಡಿತು. ನನಗೆ ಗೊತ್ತು ಹಿಂದೂ ಅತ್ಯುಗ್ರವಾದಿಗಳು ಈಗ ಮಂದಿರ ನಿಮರ್ಾಣ ಖಾತ್ರಿ ಎಂದಾದ ಮೇಲೆ ಮಸೀದಿ ಕಟ್ಟಿಕೊಡಬಾರದೆಂದು ಕೂಗೆಬ್ಬಿಸುತ್ತಾರೆ. ಸಂಧಾನ ಸೂತ್ರದಲ್ಲಿ ದೂರದಲ್ಲೊಂದು ಮಸೀದಿಯಾಗಲೆಂಬ ಬಯಕೆ ಇದ್ದರೆ ಅದು ಮೋದಿಯವರ ಸೋಲೆಂದು ಬಣ್ಣಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅರಚಾಡುತ್ತಾರೆ.

ಇದೇ ಜನ ರವಿಶಂಕರ್ ಗುರೂಜಿಯವರ ಮೇಲೂ ಮುಗಿಬಿದ್ದಿದ್ದರು. ಅವರೇಕೆ ಸಂಧಾನಕ್ಕೆ ಹೋಗಬೇಕೆಂದು ಕೂಗಾಡಿದ್ದರು. ಮಂದಿರ ನಿಮರ್ಾಣದ ಗೌರವ ಅವರಿಗೆ ಹೋಗಿಬಿಡುವ ಹೆದರಿಕೆಯಿತ್ತು ಅವರಿಗೆಲ್ಲ. ಆದರೆ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಕಳೆದ ನವೆಂಬರ್ನಲ್ಲಿಯೇ ಅವರು ಹಿಂದೂ ಸಂತರನ್ನು, ಮುಸಲ್ಮಾನ ಮೌಲ್ವಿಗಳನ್ನು ಮಾತನಾಡಿಸಿ ಬೆಸೆಯುವ ಪ್ರಯತ್ನ ಆರಂಭಿಸಿದ್ದರು. ಯೋಗಿ ಆದಿತ್ಯನಾಥರಂತಹ ಕಟ್ಟರ್ ಹಿಂದುತ್ವವಾದಿಯೇ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸುವ ಎಲ್ಲ ಪ್ರಯತ್ನಕ್ಕೂ ನನ್ನ ಸಹಮತವಿದೆ ಎಂದಾಗಲೇ ನಾವು ಈ ಹಿಂದಿನ ಸೂತ್ರಧಾರಿ ಯಾರೆಂಬ ಸೂಕ್ಷ್ಮವನ್ನು ಅರಿತುಕೊಳ್ಳಬೇಕಿತ್ತು. ಈ ಪ್ರಕ್ರಿಯೆಗೂ ಮುನ್ನ ಸುಬ್ರಮಣಿಯನ್ ಸ್ವಾಮಿ ಆಟರ್್ ಆಫ್ ಲಿವಿಂಗ್ನಲ್ಲಿ ಕೆಲವು ದಿನಗಳ ಕಾಲ ಇದ್ದು ಬಂದಿದ್ದರು. ಸಂಧಾನಕ್ರಿಯೆಗೆ ಶ್ರೀಶ್ರೀಯೇ ಸೂಕ್ತ ಎಂಬುದನ್ನು ಆಲೋಚಿಸಿಯೇ ವ್ಯವಸ್ಥೆ ರೂಪಿಸಲಾಗಿತ್ತು. ದೇಶದಾದ್ಯಂತ ಸಾವಿರಾರು ಮುಸ್ಲೀಂ ಹೆಣ್ಣುಮಕ್ಕಳು ಮನೆಯ ಹೊರಗೆ ಬಂದು ಅಯೋಧ್ಯೆಯಲ್ಲಿ ಸೇರಿ ಮಂದಿರದ ಪರವಾದ ದನಿ ಹೊರಡಿಸಲೂ ಸಿದ್ಧರಾದರು. ಈ ಹೊತ್ತಲ್ಲೇ ಅಬುದಾಬಿಯಲ್ಲಿ ಮಂದಿರ ನಿಮರ್ಾಣಕ್ಕೆ ಅಡಿಪಾಯ ಹಾಕಿ ಮೋದಿ ಭಾರತದಲ್ಲಿನ ಮುಸಲ್ಮಾನರಿಗೆ ಸ್ಪಷ್ಟ ಸಂದೇಶವನ್ನೂ ಕೊಟ್ಟಿದ್ದಾರೆ. ಇವೆಲ್ಲವುಗಳ ಕಾರಣದಿಂದಾಗಿ ಕ್ರಮೇಣ ಮುಸಲ್ಮಾನರ ವಿರೋಧ ಅದೆಷ್ಟು ಕಡಿಮೆಯಾಗಿದೆಯೆಂದರೆ ನ್ಯಾಯಾಲಯದಲ್ಲಿ ತೀಪರ್ು ಮಂದಿರದ ಪರವಾಗಿ ಬಂದರೂ ವಿರೋಧ ಮಾಡುವ ಸ್ಥಿತಿಯಲ್ಲಿ ಅವರಿಲ್ಲ.

ಬಹಳ ದೂರವಿಲ್ಲ. ಯಾವ ಗಲಾಟೆಯಿಲ್ಲದೇ, ರಕ್ತದ ಕಲೆಗಳನ್ನು ಮೆತ್ತಿಕೊಳ್ಳದೇ ರಾಮ ಮಂದಿರ ನಿಮರ್ಾಣವಾಗಲಿದೆ. ಇಷ್ಟೊಂದು ವಿಶ್ವಾಸ ಹೇಗೆ ಅಂದಿರೋ? ಇದು ಎದುರಾಳಿಗಳ ಕಂಗಳಿನೊಳಗಿರುವ ಭಯವನ್ನು ಕಂಡಾಗಲೇ ಅರಿವಾಗಿತ್ತು. ಗುಜರಾತ್ ಚುನಾವಣೆಯ ಹೊತ್ತಲ್ಲಿ ಕಪಿಲ್ ಸಿಬಲ್ 2019ಕ್ಕೂ ಮುನ್ನ ರಾಮ ಮಂದಿರದ ಕುರಿತಂತಹ ನಿರ್ಣಯ ಕೊಡಲೇಬಾರದು ಎಂಬ ಅಹವಾಲು ಮಂಡಿಸಿದ್ದರಲ್ಲಿಯೇ ರಾಮ ಮಂದಿರದ ಅಡಿಪಾಯ ಕಂಡಿದೆ. ಆದರೆ ನಮ್ಮವರಿಗೆಲ್ಲ ಬಲು ಧಾವಂತ. ಈಗಿಂದೀಗಲೇ ಮಂದಿರ ನಿಮರ್ಾಣವಾಗಿಬಿಡಬೇಕೆಂಬ ಕೂಗೆಬ್ಬಿಸಿ ಅದಕ್ಕೆಲ್ಲ ತಾನೇ ಕಾರಣ ಎಂದು ಹೇಳಿಕೊಳ್ಳುವ ತವಕ, ಅಷ್ಟೇ ಮತ್ತೇನಿಲ್ಲ!

Comments are closed.