ವಿಭಾಗಗಳು

ಸುದ್ದಿಪತ್ರ


 

ಕಮ್ಮಿ ನಿಷ್ಠೆಗೂ ಒಂದು ಸುದೀರ್ಘ ಇತಿಹಾಸವಿದೆ!

ತಾಳೆ ಹಾಕಿ ನೋಡಿ. ಜೆಎನ್ಯುನಲ್ಲಿ ಉಮರ್ ಖಾಲಿದ್ ಕಾಶ್ಮೀರದ ಪ್ರತ್ಯೇಕತೆಯ ಮಾತನಾಡಿದರೆ ಕಮ್ಯುನಿಸ್ಟ್ ಸಂಘಟನೆಯ ನಾಯಕ ಕನ್ಹಯ್ಯ ಕುಮಾರ ಅವನ ಬೆಂಬಲಕ್ಕೆ ನಿಲ್ಲುತ್ತಾನೆ. ಇದು ಸಹಜವಾಗಿ ನಡೆದು ಹೋದ ಘಟನೆಯಲ್ಲ; ಸ್ವಾತಂತ್ರ್ಯ ಕಾಲದಿಂದಲೂ ಕಮ್ಯುನಿಸ್ಟರು ವ್ಯವಸ್ಥಿತವಾಗಿ ನಡೆಸುತ್ತಿರುವ ಸಂಚು. ಮೊದಲೆಲ್ಲಾ ರಷ್ಯಾದಿಂದ ಆಜ್ಞೆಗಳು ಹೊರಡುತ್ತಿದ್ದವು, ಈಗ ಚೀನಾ ಆ ಜಾಗದಲ್ಲಿ ನಿಂತಿದೆ ಅಷ್ಟೇ!

 

‘ಭಗವಂತ ಪ್ರತಿಯೊಂದು ರಾಷ್ಟ್ರಕ್ಕೂ ಬೇರೆ ಬೇರೆ ಪ್ರಶ್ನೆಪತ್ರಿಕೆ ಕೊಟ್ಟಿರುವುದರಿಂದ, ನಕಲು ಮಾಡಿದರೆ ಪಾಸಾಗಲಾರರು’ ಹಾಗೆಂದಿದ್ದರು ಗುರುದೇವ ರವೀಂದ್ರನಾಥ ಠಾಕೂರರು. ಇದು ಪ್ರತಿಯೊಂದು ರಾಷ್ಟ್ರಕ್ಕೂ, ಪ್ರತೀ ಸಂಸ್ಕೃತಿಗೂ ಅನ್ವಯವಾಗುವಂತಹ ಮಾತೇ ಸರಿ. ವೈವಿಧ್ಯ ಸೃಷ್ಟಿಯ ವಿಶೇಷ. ಅರಬ್ಬರಂತೆ ಭಾರತೀಯರೂ ಆಗಬೇಕೆಂದು ಆಗ್ರಹಿಸುವುದು ಸೃಷ್ಟಿಯ ವಿರೋಧ ಮಾಡಿದಂತೆಯೇ. ಮತ-ಪಂಥಗಳು, ಆಚಾರಗಳು ಕೊನೆಗೆ ಸಿದ್ಧಾಂತಗಳೂ ಅಷ್ಟೇ ಅವು ಆಯಾ ಭೌಗೋಳಿಕ ಪ್ರದೇಶಕ್ಕೆ ಹೊಂದಿಕೆಯಾಗುತ್ತವೆ. ಅಷ್ಟೇ ಅಲ್ಲ. ತನಗೆ ಹೊಂದಿಕೆಯಾಗುವ ಚಿಂತನೆಯೊಂದನ್ನು ಸಾಂದ್ರೀಕರಿಸಲು ಜನಾಂಗವೊಂದು ದೀರ್ಘಕಾಲದ ತಪಸ್ಸು ನಡೆಸಬೇಕು. ಭಾರತದ ಋಷಿ-ಮುನಿ-ಸಂತರೆಲ್ಲರ ನಿರಂತರ ಯಜ್ಞದ ಫಲವಾಗಿಯೇ ವಿಶ್ವವೇ ಧರಿಸಬಲ್ಲ ಚಿಂತನೆಯನ್ನು ನಮಗೆ ಕೊಡಲು ಸಾಧ್ಯವಾಗಿದ್ದು. ಹಾಗೆಂದೇ ಇತರೆಲ್ಲ ಮತಗಳನ್ನು ಒಳಗೊಳ್ಳುವ ವಿಶಾಲ ಧರ್ಮವಾಗಿ ‘ಹಿಂದೂ ಧರ್ಮ’ ಬೆಳೆದು ನಿಂತಿದ್ದು.
ಇಂತಹ ಸಾಲುಗಳನ್ನು ಓದಿದೊಡನೆ ಕಮ್ಯುನಿಸ್ಟರು ಕೆಂಡಕೆಂಡವಾಗಿ ಬಿಡುತ್ತಾರೆ. ‘ರಷ್ಯಾದ ಚಿಂತನೆಗಳು ಜಗತ್ತಿಗೇ ಹಬ್ಬಿದವು’ ಅಂತ ಒಂದು ಸುಳ್ಳು ಹೇಳಿ ನೋಡಿ. ಅವರ ಎದೆ ಬೀಗಲಾರಂಭಿಸುತ್ತದೆ. ಹೌದು. ಭಾರತದ ಪ್ರಶ್ನೆ ಪತ್ರಿಕೆಗೆ ರಷ್ಯನ್ ಅಥವಾ ಚೀನಿ ಉತ್ತರ ಬರೆಯುವ ಸಾಹಸವನ್ನು ಮೊದಲ ವಿಶ್ವ ಯುದ್ಧದ ಕಾಲದಿಂದಲೂ ಕಮ್ಯುನಿಸ್ಟರು ಮಾಡುತ್ತಲೇ ಬಂದಿದ್ದಾರೆ, ಸೋತು ಸುಣ್ಣವಾಗಿದ್ದಾರೆ.
ಮೊದಲ ಮಹಾಯುದ್ಧದ ವೇಳೆಗೆ ಪಶ್ಚಿಮದಲ್ಲಿ ಹಂಚಿ ಹೋಗಿದ್ದ ಗದರ್ ಕ್ರಾಂತಿಕಾರಿ ನಾಯಕರು ಮಾಕ್ಸರ್್ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿದ್ದರು. ಅವರ ಭಾಷಣಗಳಿಂದ ಪ್ರಭಾವಿತರಾದ ವಿದೇಶದಲ್ಲಿ ನೆಲೆಸಿದ್ದ ಸಾಮಾನ್ಯ ಭಾರತೀಯರು ಯುದ್ಧದ ಹೊತ್ತಲ್ಲಿಯೇ ಸಾಹಸ ಮಾಡಿ ಭಾರತಕ್ಕೆ ಬಂದು ಸೇರಿಕೊಂಡರು. ಇಲ್ಲಿ ಕ್ರಾಂತಿ ಜ್ವಾಲೆ ಧಗಧಗಿಸುತ್ತಿದೆಯೆಂಬ ಅವರ ಕಲ್ಪನೆ ಹುಸಿಯಾಗಿತ್ತು. ಬ್ರಿಟೀಷರ ದಾಸ್ಯದಲ್ಲಿಯೇ ಆನಂದದಿಂದ ದಿನ ನೂಕುತ್ತಿದ್ದ ಜನರನ್ನು ಕ್ರಾಂತಿಗೆ ಸಜ್ಜುಗೊಳಿಸಲು ಮಹತ್ವದ ಪ್ರಯತ್ನವಾಗಬೇಕಿತ್ತು. ಈ ವೇಳೆಗೇ ರಷ್ಯಾದಲ್ಲೊಂದು ಕಾಮರ್ಿಕ ಕ್ರಾಂತಿಯಾಗಿ ಜಾರ್ ದೊರೆಯನ್ನು ಹತ್ಯೆಗೈದು ಮಾನ್ಶೆವಿಕ್ ಪಕ್ಷದ ಜನ ಅಧಿಕಾರ ಪಡೆದರು. ಅವರ ಕೈಯ್ಯಿಂದ ಅಧಿಕಾರವನ್ನು ಚಾಣಾಕ್ಷತೆಯಿಂದ ಕಸಿದ ಬೋಲ್ಶೇವಿಕ್ ಪಂಗಡದ ಲೆನಿನ್ ರಷ್ಯಾದಲ್ಲಿ ಮಾಕ್ಸರ್್ವಾದದ ಸಾಮ್ರಾಜ್ಯ ನಿಮರ್ಿಸಿದ.
ಅಂದಿನ ದಿನಗಳಲ್ಲಿ ಯೂರೋಪಿನ ಬಂಡವಾಳಷಾಹಿ ಚಿಂತನೆಗೆ ಮಾಕ್ಸರ್್ನ ಸಾಮ್ಯವಾದವೇ ಸೂಕ್ತ ಪ್ರತಿಸ್ಪಧರ್ಿ ಎಂದು ಭಾರತೀಯರಿಗೆ ಎನಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಗದ್ದರ್ನ ಕೇಂದ್ರ ಪಂಜಾಬ್ ಆಗಿದ್ದುದರಿಂದ ಅಲ್ಲಿ ಬಲುಬೇಗ ರೈತರ, ಕಾಮರ್ಿಕರ ಸಂಘಟನೆಗಳು ಅಸ್ತಿತ್ವಕ್ಕೆ ಬಂದು ತಮ್ಮ ಹಕ್ಕಿಗಾಗಿ ಬಡಿದಾಡಲಾರಂಭಿಸಿದವು.
1920 ರಲ್ಲಿ ಎಂ.ಎನ್.ರಾಯ್ ರಷ್ಯಾದ ಕಮ್ಯುನಿಸ್ಟರೊಂದಿಗೆ ಸಂಬಂಧ ಗಟ್ಟಿಮಾಡಿಕೊಂಡದ್ದೇ ಅಲ್ಲದೇ ಭಾರತದ ಕಮ್ಯುನಿಸ್ಟರ ವಕ್ತಾರರೂ ಆಗಿಬಿಟ್ಟರು. ರಷ್ಯಾದ ನಾಯಕರಿಗೆ ಭಾರತದಲ್ಲಿ ಬಲವಾದ ಹಜ್ಜೆಯೂರಲು ಸಮರ್ಥ ಜೊತೆಗಾರ ಬೇಕಾಗಿತ್ತು. ಲೆನಿನ್ ಒಮ್ಮೆ ಹೇಳಿದ್ದ ಕೂಡ. ‘ರಷ್ಯಾದ ಮಾಸ್ಕೋದಿಂದ ಲಂಡನ್ನಿಗೆ ಹೋಗುವ ಮಾರ್ಗ ಚೀನಾದ ಪೀಕಿಂಗ್ ಮತ್ತು ಭಾರತದ ಕೋಲ್ಕತ್ತಾಗಳ ಮೂಲಕ ಹಾದು ಹೋಗುವುದು’ ಅಂತ. ಅಷ್ಟೊಂದು ಅವಿಚ್ಛಿನ್ನ ವಿಶ್ವಾಸ ಅವನದ್ದು. ಚೀನಾ ಆತನ ನಂಬಿಕೆ ಉಳಿಸಿತು, ಭಾರತ ಛಿದ್ರಗೊಳಿಸಿತು ಅಷ್ಟೇ.
ಒಟ್ಟಾರೆ 1920 ರ ಅಕ್ಟೋಬರ್ 17 ರಂದು ಖಿಲಾಫತ್ ಚಳವಳಿಯ ಬೆಂಬಲಿಗರಾಗಿದ್ದ ಮುಸಲ್ಮಾನರನ್ನೂ ಸೇರಿಸಿಕೊಂಡ ಭಾರತೀಯ ಕಮ್ಯುನಿಸ್ಟ್ ಪಕ್ಷ ರಷ್ಯಾದಲ್ಲಿ ಹುಟ್ಟಿತು! ಮುಂದಿನ ದಿನಗಳಲ್ಲಿ ಸಮಿತಿಯ ಕಾರ್ಯಕ್ಕೆ ಬೇಕಾದ ಹಣವೆಲ್ಲ ಮಾಸ್ಕೋದಿಂದ ಬಂತು (ಅವಸಾನದತ್ತ ಕಮ್ಯುನಿಸಂ, ಪಿ. ನಾರಾಯಣ್). ಭಾರತದಲ್ಲಿ ಅವರಿಗೆ ಬೆಳೆಯಲು ಬೇಕಾದ ಸೂಕ್ತ ವಾತಾವರಣವೇ ಇರಲಿಲ್ಲ. ಏಕೆಂದರೆ ಇಲ್ಲಿನ ಕಾಮರ್ಿಕ ಸಮಸ್ಯೆಗಳೆಲ್ಲ ಬ್ರಿಟೀಷರಿಂದ ಬಂದ ಬಳುವಳಿಯೇ ಹೊರತು ಭಾರತೀಯ ಸಮಾಜದ ತಪ್ಪೇನೂ ಇರಲಿಲ್ಲ. ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಆಯಾಯ ಸಂಕುಲವನ್ನು ಬಲಾಢ್ಯವಾಗಿರಿಸಿತ್ತು. ಸಿರಿವಂತನ ಗಳಿಕೆಯ ಹೆಚ್ಚಿನ ಹಣ ಸಮಾಜಕ್ಕೆ ವಿನಿಯೋಗವಾಗುವಂತೆ ಮಂದಿರಗಳು, ಜಾತ್ರೆ, ಹಬ್ಬ-ಹರಿದಿನಗಳನ್ನು ರೂಪಿಸಿ ಎಲ್ಲರೂ ನೆಮ್ಮದಿಯಿಂದಿರುವಂತೆ ವ್ಯವಸ್ಥೆಯಿತ್ತು. ಇಲ್ಲಿನವರಿಗಿದ್ದುದು ಒಂದೇ ಸಮಸ್ಯೆ. ಅದು ವ್ಯವಸ್ಥೆಯನ್ನು ಬುಡಮೇಲು ಗೊಳಿಸುತ್ತಿರುವ ಬ್ರಿಟೀಷ್ ದೊರೆಗಳಿಂದ ಮುಕ್ತಿ. ಅದಕ್ಕೆ ಬೇಕಿದ್ದುದು ರಾಷ್ಟ್ರೀಯತೆಯ ಪ್ರವಾಹವೇ ಹೊರತು ರಷ್ಯಾದಿಂದ ಹರಿದ ಕ್ರಾಂತಿಯ ತೊರೆಯಲ್ಲ. ಹೀಗಾಗಿ ಜನರಿಗೆ ಗಾಂಧೀಜಿ ಬಲು ಹತ್ತಿರದವರಾಗಿಬಿಟ್ಟರು. ವಿದ್ಯಾಥರ್ಿಗಳು-ತರುಣರೂ ಅವರನ್ನು ಅನುಸರಿಸಲಾರಂಭಿಸಿದರು.

ap_make_strong_nation_ll_111221_wblog
1922 ರಲ್ಲಿ ಚೌರಿಚೌರ ಘಟನೆ ಮುಂದಿರಿಸಿ ಗಾಂಧೀಜಿ ಅಸಹಕಾರ ಚಳುವಳಿ ವಾಪಸ್ಸು ಪಡೆದೊಡನೆ ಭ್ರಮನಿರಸನಕ್ಕೊಳಗಾದ ಅನೇಕ ತರುಣರಿಗೆ ಆಸರೆಯಾಗಿದ್ದು ರಷ್ಯಾದ ಕ್ರಾಂತಿಯ ಆದರ್ಶಗಳು. ಇದು ಎಡಪಂಥೀಯರಿಗೆ ಬೇರು ಬಿಡುವ ಸಂದರ್ಭವಾಯಿತು. ಬಲುಬೇಗ ಆತಂಕ ಗ್ರಹಿಸಿದ ಬ್ರಿಟೀಷರು ಈ ನಾಯಕರನ್ನು ಜೈಲಿಗೆ ತಳ್ಳಿದರು. 1925ರಲ್ಲಿ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರಮಟ್ಟದ ಅಧಿವೇಶನ ನಡೆದು ಆಂದೋಲನದ ರೂಪದಿಂದ ಅದನ್ನು ಬ್ರಿಟೀಷರೊಂದಿಗೆ ಸಮಸಮಕ್ಕೆ ಚಚರ್ಿಸಬಲ್ಲ ಪಕ್ಷದ ಮಟ್ಟಕ್ಕೇರಿಸಲಾಯ್ತು. ರೈತರು ಮತ್ತು ಕಾಮರ್ಿಕರ ಸಂಘಟನೆಯನ್ನು ತೀವ್ರಗೊಳಿಸಿ ಒಂದು ಹಂತದಲ್ಲಿ ಹಿಂಸಾತ್ಮಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಯಿತು. ಈ ಎಲ್ಲಾ ನಿದರ್ೇಶನಗಳೂ ರಷ್ಯಾದಿಂದಲೇ ಬರುತ್ತಿತ್ತು. ಕಮ್ಯುನಿಸ್ಟ್ ಇಂಟರ್ನ್ಯಾಷನಲ್ (ಕಮಿನ್ಟನರ್್) ಎಂಬ ಅಂತರರಾಷ್ಟ್ರೀಯ ಸಂಸ್ಥೆ ಹೇಳಿದಂತೆ ಇಲ್ಲಿನ ಕಾಮ್ರೇಡುಗಳು ಕೇಳುತ್ತಿದ್ದರು. ಬ್ರಿಟೀಷ್ ಕಮ್ಯುನಿಸ್ಟ್ ಪಕ್ಷದ ನಾಯಕರು ಮುಕ್ತವಾಗಿ ಭಾರತದಲ್ಲಿ ಸಂಚರಿಸುತ್ತಿದ್ದುದಲ್ಲದೇ ಇಲ್ಲಿನ ನಾಯಕರಿಗೆ ಪ್ರತಿಯೊಂದು ನಡೆಯನ್ನೂ ತಾಕೀತು ಮಾಡಿಯೇ ಇಡಿಸುತ್ತಿದ್ದರು.
ಇದೇ ವೇಳೆಗೆ ಎಂ.ಎನ್.ರಾಯ್ರಿಗೂ ಸ್ಟಾಲಿನ್ಗೂ ಮನಸ್ತಾಪ ಬಂದು ಅವರು ಕಮಿನ್ಟನರ್್ನಿಂದ ಉಚ್ಚಾಟಿಸಲ್ಪಟ್ಟರು. ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಯ್ತು. ಅಂತರರಾಷ್ಟ್ರೀಯ ನಾಯಕರು ಹರಸಾಹಸ ಮಾಡಿ ಅದನ್ನು ಒಂದುಗೂಡಿಸಿದರು. ಬ್ರಿಟೀಷ್ ಸಕರ್ಾರ ಕೂಡ ಈ ಆಂದೋಲನವನ್ನು ಹತ್ತಿಕ್ಕುವುದರಲ್ಲಿ ಯಾವ ಅವಕಾಶವನ್ನೂ ಬಿಡಲಿಲ್ಲ. ಕೊನೆಗೆ 1939 ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಲಾಯ್ತು. ಇದೂ ಒಂದು ರೀತಿ ವರದಾನವೇ. ಹರಿದು ಹಂಚಿಹೋಗಿದ್ದ ಕಾಮ್ರೇಡುಗಳೆಲ್ಲ ಅಧಿಕೃತವಾಗಿ ಕಾಂಗ್ರೆಸ್ಸು ಸೇರಿಕೊಂಡರು. ಕೆಲವು ತಿಂಗಳಲ್ಲಿಯೇ ಕಾಂಗ್ರೆಸ್ಸಿನಲ್ಲಿ ಒಡಕು ತಂದರು. ಅಲ್ಲೊಂದು ‘ಕಾಂಗ್ರೆಸ್ ಸೋಷಿಯಲಿಸ್ಟ್ ಪಕ್ಷ’ ನಿಮರ್ಾಣಗೊಂಡಿತು. ಆರಂಭದಲ್ಲಿಯೇ ಆಚಾರ್ಯ ನರೇಂದ್ರ ದೇವರು ಜೆ.ಪಿ. ನಾರಾಯಣರಿಗೆ ಎಚ್ಚರಿಕೆ ನೀಡಿದ್ದರು, ‘ಕಾಂಗ್ರೆಸ್ಸಿಗರು ಕಷ್ಟಪಟ್ಟು ಕಟ್ಟಿರುವ ಕಾಮರ್ಿಕರ ಸಂಘಟನೆಯಲ್ಲಿ ಕಮ್ಯುನಿಸ್ಟರಿಗೆ ಕೆಲಸ ಮಾಡಲು ಬಿಟ್ಟರೆ, ಅವರು ಸಮಾಜವಾದಿಗಳನ್ನು ನಾಯಕತ್ವದಿಂದ ಕಿತ್ತೆಸೆದು ತಾವೇ ಕುಳಿತುಬಿಡುತ್ತಾರೆ'(ಟಿಜಚಿಟಿ ಅಠಟಟಣಟಿಟ – ಖ ಖ ಖಟಿರ, ಅಚಿಟಠಿಚಿ ಖಟಿರ).
ಸಿಕ್ಕ ಅವಕಾಶವನ್ನು ಬಿಡದೆ ವಿಶಾಲವಾದ ಕಾಂಗ್ರೆಸ್ಸಿನ ಹಂದರ ಬಳಸಿ ರೈತರ, ಕಾಮರ್ಿಕರ, ವಿದ್ಯಾಥರ್ಿಗಳ ಸಂಘಟನೆಗಳನ್ನು ಕಮ್ಯುನಿಸ್ಟರತ ಬಲಗೊಳಿಸಿದರು. ಆಲ್ ಇಂಡಿಯಾ ಟ್ರೇಡ್ ಯುನಿಯನ್ ಕಾಂಗ್ರೆಸ್ನ ಉನ್ನತ ಹುದ್ದೆಯಲ್ಲಿದ್ದ ಕಾಂಗ್ರೆಸ್ಸಿಗರನ್ನೇ ಕಿತ್ತೊಗೆದರು. ಇಷ್ಟಾದರೂ ಕಾಂಗ್ರೆಸ್ ಸೋಷಿಯಲಿಸ್ಟ್ ಪಾಟರ್ಿಯ ಕೂಸು ಹೆತ್ತಿದ್ದ ಜಯಪ್ರಕಾಶ್ ನಾರಾಯಣ್, ನೆಹರೂರಂಥವರು ಸುಮ್ಮನೇ ಇದ್ದರು. ಯಾವಾಗ ತಮ್ಮೆಲ್ಲ ಚಟುವಟಿಕೆಗಳಿಗೂ ಕಮೀನ್ಟನರ್್ನ ಆಜ್ಞೆ ಪಡೆಯುವ, ರಷ್ಯಾ ನಿಷ್ಠೆ ತೋರುವ ಇವರ ಚಾಳಿ ಬಯಲಿಗೆ ಬಂತೋ ಆಗ ಅನಿವಾರ್ಯವಾಗಿ ಇವರನ್ನೆಲ್ಲಾ ಉಚ್ಚಾಟಿಸುವ ಪರಿಸ್ಥಿತಿ ಬಂತು. ಕಾಂಗ್ರೆಸ್ಸು ಇವರನ್ನೆಲ್ಲಾ ಹೊರದಬ್ಬಿತು.
ಹೊರಗೆ ಹೋಗುವ ವೇಳೆಗಾಗಲೇ ಕಮ್ಯುನಿಸ್ಟರು ಕಾಂಗ್ರೆಸ್ಸಿನ ಮರದ ಟೊಂಗೆಗಳನ್ನೇ ಮುರಿದು ತಾವು ಮನೆ ಕಟ್ಟಿಕೊಂಡುಬಿಟ್ಟಿದ್ದರು! ಕೇರಳ, ಆಂಧ್ರ, ತಮಿಳುನಾಡುಗಳ ಕಾಂಗ್ರೆಸ್ ಸೋಶಿಯಲಿಸ್ಟ್ ಪಾಟರ್ಿ ಪೂರ್ಣ ಪ್ರಮಾಣದಲ್ಲಿ ಕಮ್ಯುನಿಸ್ಟರಿಗೇ ಬಿಟ್ಟುಕೊಟ್ಟಂತಾಗಿತ್ತು.
ಆದರೆ ಕಮ್ಯುನಿಸ್ಟ್ ಪಕ್ಷಕ್ಕೆ ನಿಜವಾಗಿ ಜೀವ ಬಂದಿದ್ದು ಎರಡನೇ ಮಹಾಯುದ್ಧದ ವೇಳೆಗೆ. ಭಾರತೀಯ ಕ್ರಾಂತಿಕಾರಿಗಳ ದನಿಯೇ ಕಮ್ಯುನಿಸ್ಟ್ ಪಾಟರ್ಿಯೆಂಬಂತೆ ಪೂರ್ಣಸ್ವರಾಜ್ಯದ ಮಾತಾಡಿತು. ಬ್ರಿಟೀಷರ ವಿರುದ್ಧ ಈ ಹೊತ್ತಲ್ಲಿ ಕಾದಾಡಬೇಕೆಂದು ಜನರನ್ನು ಬಡಿದೆಬ್ಬಿಸಿತು. ಸ್ವತಃ ಕಾಂಗ್ರೆಸ್ಸು ಗಲಿಬಿಲಿಗೊಂಡು ಮುಂದಿನ ದಾರಿ ಕಾಣದೇ ಕೈ ಚೆಲ್ಲಿ ಕುಳಿತಿರುವಾಗಲೇ ಸುಭಾಷ್ ಚಂದ್ರ ಬೋಸರ ಗೆಲುವಿನ ಕಹಳೆ ಅಲೆಅಲೆಯಾಗಿ ಅಪ್ಪಳಿಸಲಾರಂಭಿಸಿತು. ಕಾಂಗ್ರೆಸ್ ತರಾತುರಿಯಲ್ಲಿ ಕ್ವಿಟ್ ಇಂಡಿಯಾ ಘೋಷಣೆ ಮಾಡಿತು.. ಅಷ್ಟರೊಳಗೆ ರಷ್ಯಾದ ಆಜ್ಞೆಯೂ ಬದಲಾಗಿ ಭಾರತೀಯ ಕಮ್ಯುನಿಸ್ಟರು ಬ್ರಿಟೀಷರ ಪರವಾಗಿ ನಿಂತರು.
ಎರಡನೇ ಮಹಾಯುದ್ಧದ ವೇಳೆಗೆ ತಮ್ಮ ನಿಷ್ಠೆಯನ್ನು ಬದಲಾಯಿಸಿ, ಕ್ವಿಟ್ ಇಂಡಿಯಾ ವಿರೋಧಿಸಿದ ಕಮ್ಯುನಿಸ್ಟರ ಯೋಗ್ಯತೆಯನ್ನು ಭಾರತೀಯರು ಅಳೆದಾಗಿತ್ತು. ಅವರನ್ನು ದೇಶವಿರೋಧಿ ಪಕ್ಷವೆಂದೇ ಜನ ಗುರುತಿಸಿದ್ದರು. ಭಾರತದಲ್ಲಿ ತಮ್ಮನ್ನು ವಿಸ್ತಾರಗೊಳಿಸಿಕೊಳ್ಳುವ ಯಾವ ಅವಕಾಶವನ್ನೂ ಬಿಟ್ಟುಕೊಡಲು ಅವರು ಹಿಂಜರಿಯಲಾರರೆಂಬುದು ಜನರಿಗೆ ಅರಿವಾಯ್ತು. ಅಷ್ಟೇ ಅಲ್ಲ. ರಷ್ಯಾದ ಹಿತಕ್ಕಾಗಿ ಭಾರತವನ್ನು ಬಲಿಕೊಡಲು ಹೇಸದೇವರೇ ಕಮ್ಯುನಿಸ್ಟರೆಂದು ಜನ ಮಾನಸ ನಿರ್ಧರಿಸಿಬಿಟ್ಟಿತ್ತು.

636x460design_01
ಈ ಹೊತ್ತಿಗೇ ಲೆನಿನ್ನ ಕಾಮರ್ಿಕವಾದವು ರಾಷ್ಟ್ರೀಯತೆಗಿಂತ ಮಹತ್ವದ್ದೆಂಬ ತತ್ತ್ವದ ಬೆನ್ನತ್ತಿದ್ದ ಕಮ್ಯುನಿಸ್ಟರು ಪಾಕೀಸ್ತಾನ್ ರಚನೆಗೂ ಕುಮ್ಮಕ್ಕು ಕೊಟ್ಟರು. ಖಿಲಾಫತ್ ಕಾಲದಿಂದಲೂ ಅವರಿಗೆ ಆತುಕೊಂಡಿದ್ದ ಮುಸಲ್ಮಾನರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಜೊತೆಯಾದರು. ರಾಷ್ಟ್ರದ ಗಡಿಗಳು ಚೂರಾಗಿ ಎಲ್ಲಾ ದೇಶದ ಕಾಮರ್ಿಕರೂ ಒಂದು ಛತ್ರದಡಿ ಬರಬೇಕೆಂಬ ತಮ್ಮ ಆಲೋಚನೆಗೆ ಭಾರತವನ್ನು ಚೂರಾಗಿಸುವುದೇ ಸರಿಯಾದ ಮಾರ್ಗವೆಂದರು. ಕಾಂಗ್ರೆಸ್ಸಿನ ಮೇಲೂ ಒತ್ತಡ ಹೇಗೆ ಹೇರಲಾಯ್ತೆಂದರೆ ಕೊನೆಗೂ ಸ್ವಾತಂತ್ರ್ಯ ಬರುವಷ್ಟರಲ್ಲಿ ಭಾರತ ಮೂರು ಹೋಳಾಗಿತ್ತು.
ಮತ್ತೊಮ್ಮೆ ತಾಳೆ ಹಾಕಿ ನೋಡಿ. ಜೆಎನ್ಯುನಲ್ಲಿ ಉಮರ್ ಖಾಲಿದ್ ಕಾಶ್ಮೀರದ ಪ್ರತ್ಯೇಕತೆಯ ಮಾತನಾಡಿದರೆ ಕಮ್ಯುನಿಸ್ಟ್ ಸಂಘಟನೆಯ ನಾಯಕ ಕನ್ಹಯ್ಯ ಕುಮಾರ ಅವನ ಬೆಂಬಲಕ್ಕೆ ನಿಲ್ಲುತ್ತಾನೆ. ಇದು ಸಹಜವಾಗಿ ನಡೆದು ಹೋದ ಘಟನೆಯಲ್ಲ; ಸ್ವಾತಂತ್ರ್ಯ ಕಾಲದಿಂದಲೂ ಕಮ್ಯುನಿಸ್ಟರು ವ್ಯವಸ್ಥಿತವಾಗಿ ನಡೆಸುತ್ತಿರುವ ಸಂಚು. ಮೊದಲೆಲ್ಲಾ ರಷ್ಯಾದಿಂದ ಆಜ್ಞೆಗಳು ಹೊರಡುತ್ತಿದ್ದವು, ಈಗ ಚೀನಾ ಆ ಜಾಗದಲ್ಲಿ ನಿಂತಿದೆ ಅಷ್ಟೇ!
ಸ್ವಾತಂತ್ರ್ಯ ಬಂತು ನಿಜ. ಆದರೆ ಆ ವೇಳೆಗೇ ಅಮೇರಿಕಾದೊಂದಿಗೆ ರಷ್ಯಾದ ಶೀತಲಯುದ್ಧ ಆರಂಭವಾಗಿತ್ತು. ಸ್ಟಾಲಿನ್ ಈಗ ಇಂಗ್ಲೇಂಡಿನ ವಿರೋಧಿಯಾಗಿದ್ದ. ಸ್ವಾತಂತ್ರ್ಯದ ಸಂಭ್ರಮ ಎಲ್ಲೆಡೆ ಆಚರಣೆಯಾಗುತ್ತಿದ್ದರೆ ಸ್ಟಾಲಿನ್ ‘ಇದು ನಿಜವಾದ ಸ್ವಾತಂತ್ರ್ಯವಲ್ಲ’ಎಂದ. ಕಮ್ಯುನಿಸ್ಟರಿಗೆ ಸಿಗಬೇಕಾದ ಸಂದೇಶ ಸಿಕ್ಕಿತ್ತು. ಅವರೀಗ ಕಾಂಗ್ರೆಸ್ಸನ್ನೇ ಅವಹೇಳನ ಮಾಡತೊಡಗಿದರು. ಗಾಂಧೀಜಿಯನ್ನು ಬ್ರಿಟೀಷ್ ಸಾಮ್ರಾಜ್ಯಶಾಹಿಯ ಏಜೆಂಟರೆಂದರು. ಸದರ್ಾರ್ ಪಟೇಲ್, ಜವಹರಲಾಲ್ನೆಹರೂರವರನ್ನೆಲ್ಲ ಸಾಮ್ರಾಜ್ಯಶಾಹಿಗಳ ಬಾಲಬಡುಕರೆಂದು ಅವಮಾನಿಸಿದರು. ಕಾಂಗ್ರೆಸ್ಸು ಶ್ರೀಮಂತ ಕೈಗಾರಿಕೋದ್ಯಮಿಗಳ, ವ್ಯಾಪಾರಿಗಳ, ಜಮೀನ್ದಾರರ ಮತ್ತು ದಲಿತರು-ಬಡವರನ್ನು ಶೋಷಿಸುವ ಜನರಿಂದ ಬೆಂಬಲ ಪಡೆದ ಪಾಟರ್ಿ ಎಂದು ಡಂಗುರ ಹೊಡೆದರು. ಸ್ವಾತಂತ್ರ್ಯ ಸಾಮ್ರಾಜ್ಯಶಾಹಿ ಆಡಳಿತದಿಂದ, ರಾಷ್ಟ್ರೀಯವಾದಿ ಶೋಷಕ ಬಂಡವಾಳಶಾಹಿಗಳ ಆಡಳಿತವಾಗಿ ಬದಲಾಗಿದೆ ಅಷ್ಟೇ ಎಂದು ಮೂಗುಮುರಿದರು. (ಈ ಎಲ್ಲಾ ಆರೋಪಗಳು ಕೇಂದ್ರ ಸಕರ್ಾರದ ಮೇಲೆ ಅರವಿಂದ್ ಕೇಜ್ರéೀವಾಲ್ ಮಾಡಿದಂತಿಲ್ಲವೇ? ಸುಮ್ಮನೆ ನೆನಪಿಸಬೇಕೆನ್ನಿಸಿತಷ್ಟೇ) ಕೊನೆಗೆ ತಮ್ಮ ಶಕ್ತಿ-ಸಾಮಥ್ರ್ಯ ಹೆಚ್ಚಿರುವ ಕಡೆಯಲ್ಲೆಲ್ಲಾ ಕಪ್ಪು ಬಾವುಟ ತೋರಿಸಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು!
ಕಮ್ಯುನಿಸ್ಟರೀಗ ರಷ್ಯಾ, ಚೀನಾಗಳ ಬೆಂಬಲ ಪಡೆದು ಭಾರತದಲ್ಲಿ ರೈತರ, ಕಾಮರ್ಿಕರ ದಂಗೆಗಳೇಳುವಂತೆ ಮಾಡಬೇಕೆಂದು ನಿಶ್ಚಯಿಸಿಬಿಟ್ಟಿದ್ದರು. ಭಾರತದ ಲೆನಿನ್, ಸ್ಟಾಲಿನ್, ಮಾವೋಗಳಾಗುವ ತವಕ ಅನೇಕ ನಾಯಕರಿಗಿತ್ತು. ಹೇಗೆ ರಷ್ಯಾದಲ್ಲಿ ಜಾರ್ ದೊರೆಗಳಿಂದ ಉಂಟಾದ ಗೊಂದಲದ ಲಾಭ ಪಡೆದು ಲೆನಿನ್ ಅಧಿಕಾರ ಗಳಿಸಿದನೋ ಹಾಗೇ ದೇಶ ವಿಭಜನೆಯ ಗೊಂದಲದ ನಡುವೆ ಇಲ್ಲಿಯೂ ಅಧಿಕಾರ ಕಸಿದು ಚೀನಾದೊಂದಿಗೆ ಭಾರತವನ್ನು ಸೇರಿಸಿ ರಷ್ಯಾ-ಚೀನಾ-ಭಾರತಗಳ ವಿಸ್ತಾರ ಕಮ್ಯುನಿಸ್ಟ್ ಭೂಖಂಡ ರಚಿಸಬೇಕೆಂಬ ತುಡಿತ ತೀವ್ರವಾಗಿತ್ತು.
ಕೆಲವರು ಅಡ್ಡಗಾಲು ಹಾಕಿದರು. ಪಿಸಿ ಜೋಶಿಯಂತವರು ಕ್ರಾಂತಿ ಮಾರ್ಗವನ್ನು ವಿರೋಧಿಸಿ ಕಾಂಗ್ರೆಸ್ಸಿನೊಂದಿಗೆ ಸೇರಿ ರಾಷ್ಟ್ರದ ಅಭ್ಯುದಯಕ್ಕೆ ಜೊತೆಯಾಗಬೇಕೆಂದು ಬಯಸಿದರು. ಇದು ಭಯೋತ್ಪಾದಕ ಕಮ್ಯುನಿಸ್ಟರ ಪಾಲಿಗೆ ತೀವ್ರ ಹಿನ್ನಡೆಯಾಗಿತ್ತು. ರಷ್ಯಾ-ಚೀನಾಗಳೆರಡರಿಂದಲೂ ಮೇಲಿಂದ ಮೇಲೆ ತೀವ್ರಗಾಮಿಯಾಗುವ ಆದೇಶಗಳು ಬರುತ್ತಲೇ ಇದ್ದವು. ಹಳ್ಳಿಗಳ ಜನರನ್ನು ಸಂಘಟಿಸಿ ಅವರ ಮೂಲಕ ಗೇರಿಲ್ಲಾ ಯುದ್ಧ ಮಾಡಿಸಿ ಅಧಿಕಾರವನ್ನು ಕಸಿಯುವ ಮಾವೋವಾದದೆಡೆಗೆ ಅನೇಕರಿಗೆ ತೀವ್ರತೆ ಇತ್ತು. ಅದನ್ನು ಸಾಕಾರಗೊಳಿಸಿಕೊಳ್ಳಲೆಂದೇ 1948 ರ ಫೆಬ್ರುವರಿಯಲ್ಲಿ ಕಲ್ಕತ್ತಾದಲ್ಲಿ ಎರಡೂ ಪಂಗಡಗಳ ಕಾರ್ಯಕರ್ತರು ಸಭೆ ಸೇರಿದರು. ಬಿಸಿ ಬಿಸಿ ಚಚರ್ೆಗಳಾದವು. ವಿದೇಶೀ ನೇತಾರರ ಬೆಂಬಲ ಪಡೆದಿದ್ದ ರಣದಿವೆಯರ ತಂಡ ಗೆದ್ದು ಪಿಸಿ ಜೋಶಿಯವರನ್ನು ಕಾರ್ಯದಶರ್ಿಯ ಸ್ಥಾನದಿಂದ ಕಿತ್ತೆಸೆಯಲಾಯ್ತು. ಬಂಡವಾಳಶಾಹಿಗಳ, ಪಾಳೇಗಾರಿಕೆಯ ವಿರುದ್ಧ, ಸಶಸ್ತ್ರ ಆಂದೋಲನಕ್ಕೆ ಸಾರ್ವತ್ರಿಕ ಒಪ್ಪಿಗೆ ಕೊಡಲಾಯ್ತು.
ಪಶ್ಚಿಮ ಬಂಗಾಳ, ಮದರಾಸು, ಅಸ್ಸಾಂ, ಬಿಹಾರ, ತ್ರಿಪುರಾ, ಹೈದರಬಾದು, ಮಣಿಪುರಗಳಲ್ಲಿ ಕಾಮರ್ಿಕ ವರ್ಗಗಳು ದಂಗೆಯೆದ್ದವು. ತೆಲಂಗಾಣ, ಮಲಬಾರ್ ಭಾಗಗಳಲ್ಲಿ ಚೀನಿ ಮಾದರಿಯ ಯುದ್ಧಕ್ಕೆ ಸಿದ್ಧರಾದರು. ಒಂದೆಡೆ ದೇಶ ಪಾಕೀಸ್ತಾನೀ ನಿರಾಶ್ರಿತರನ್ನು ಸಂಭಾಳಿಸುವಲ್ಲಿ ಹೈರಾಣಾಗಿದ್ದರೆ ಇತ್ತ ಕಮ್ಯುನಿಸ್ಟರು ಎಲ್ಲೆಡೆ ದೇಶದ ವಿರುದ್ಧವೇ ತಿರುಗಿ ಬಿದ್ದಿದ್ದರು. ಮೊದಲೇ ಇವುಗಳ ಮುನ್ಸೂಚನೆ ಪಡೆದಿದ್ದ ಸದರ್ಾರ್ ಪಟೇಲರು ಮುಲಾಜು ನೋಡಲಿಲ್ಲ. ಸ್ಥಳೀಯ ಸಕರ್ಾರಗಳಿಗೆ ಪೂಣರ್ಾಧಿಕಾರ ಕೊಟ್ಟರು. ಅಗತ್ಯ ಬಿದ್ದೆಡೆ ಸೈನ್ಯವನ್ನೂ ನಿಯೋಜಿಸಿ ಎಲ್ಲ ಬಂಡಾಯಗಳನ್ನು ಮುಲಾಜಿಲ್ಲದೇ ಹತ್ತಿಕ್ಕಿದರು! ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಲಾಯ್ತು. ಸ್ವತಃ ನೆಹರೂ ಕ್ರುದ್ಧರಾಗಿ ಲೂಟಿಕೋರರು, ವಿಧ್ವಂಸಕರು ಎಂದು ಕಮ್ಯುನಿಸ್ಟರನ್ನು ಸಂಬೋಧಿಸಿದರು.
ತೆಲಂಗಾಣದಂತಹ ಭಾಗಗಳಲ್ಲಿ ಪಯರ್ಾಯ ಸಕರ್ಾರವನ್ನು ರಚಿಸುವಷ್ಟು ಸಾಮಥ್ರ್ಯವಿತ್ತು ಎಂದು ಕಮ್ಯುನಿಸ್ಟರು ನಿರ್ಲಜ್ಜರಾಗಿ ಹೇಳಿಕೊಳ್ಳುತ್ತಾರಾದರೂ ಅದು ನಂಬಬೇಕಾದ ಸತ್ಯವೇನೂ ಅಲ್ಲ. ಸುಳ್ಳಿನ ಸರದಾರರಲ್ಲವೇ ಅವರು. ಭಾರತ ಈ ದಂಗೆಗಳನ್ನು ಹತ್ತಿಕ್ಕಿ ಬಲುಬೇಗ ಸದೃಢವಾಗಿ ನಿಂತಿತು. ಆದರೇನು? ಕಮ್ಯುನಿಸ್ಟರ ಅಧಿಕಾರ ವಾಂಛೆ ಇಂಗಲೇ ಇಲ್ಲ. ರಷ್ಯಾದ ಸೌಧ ಕುಸಿದುಬಿದ್ದ ನಂತರ ಮುಖವನ್ನು ಚೀನಾದೆಡೆಗೆ ತಿರುಗಿಸಿ ಕುಳಿತರು. ಭಾರತ-ಚೀನಾ ಯುದ್ಧದ ವೇಳೆಗೆ ಚೀನೀ ಸೈನಿಕರ ಬೆಂಬಲಕ್ಕೆ ನಿಂತು ಭಾರತ ಸೋತರೆ ಕಾಮರ್ಿಕರ ರಾಷ್ಟ್ರ ನಿಮರ್ಾಣ ಮಾಡಬಹುದೆಂಬ ಮತಿಹೀನ ಸಮರ್ಥನೆಗಳನ್ನು ಕೊಟ್ಟವರು ಅವರು. ಹೀಗೆ ಒಂದಲ್ಲ, ಎರಡಲ್ಲ ಅನೇಕ ಬಾರಿ ರಾಷ್ಟ್ರ ಚೂರು ಮಾಡುವ, ಸಾರ್ವಭೌಮತೆ ನಾಶ ಮಾಡುವ ಕೆಲಸ ಅವರು ಮಾಡಿಯೇ ಇದ್ದಾರೆ. ಅದೂ ವಿದೇಶೀ ಶಕ್ತಿಗಳ ಆಜ್ಞೆಯೊಂದಿಗೆ. ಜೆಎನ್ಯು ಪ್ರಕರಣ ಅದರ ಮುಂದುವರಿದ ಭಾಗವಷ್ಟೇ.
ಸುಮ್ಮ ಸುಮ್ಮನೆ ಕಮ್ಮಿ ನಿಷ್ಠರು ಅಂತಾರೇನು ಅವರನ್ನು!!

Comments are closed.