ವಿಭಾಗಗಳು

ಸುದ್ದಿಪತ್ರ


 

ಕಾಲದ ಕುಲುಮೆಯಲ್ಲಿ ಬೇಯದ ಸಿದ್ಧಾಂತದ ಬಾಲಬಡುಕರು!

ನಕ್ಸಲರು ದಾಂತೇವಾಡದಲ್ಲಿ 70ಕ್ಕೂ ಹೆಚ್ಚು ಸೈನಿಕರನ್ನು ಕೊಂದರಲ್ಲ ಅವತ್ತು ಇಡಿಯ ದೇಶ ಸ್ತಂಭೀಭೂತವಾಗಿತ್ತು. ಈ ಪರಿಯ ಕ್ರೌರ್ಯವನ್ನು ಭಾರತ ಊಹಿಸಿರಲಿಲ್ಲ. ಜೆಎನ್ಯುನಲ್ಲಿ ಮರುದಿನ ಕಮ್ಯುನಿಸ್ಟ್ ವಿದ್ಯಾರ್ಥಿ ಮುಖಂಡರು ಸೇರಿ ಸಾರ್ವಜನಿಕವಾಗಿ ವಿಜಯೋತ್ಸವ ಆಚರಿಸಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ಕನ್ಹಯ್ಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಸೈನಿಕರು ಮಾನಭಂಗ ಮಾಡುತ್ತಾರೆಂದು ವೀರಾವೇಷದ ಮಾತುಗಳನ್ನಾಡಿದ್ದ. ಎಲ್ಲದರ ಹಿಂದೆ ಇರೋದೂ ಒಂದೇ ಸೂತ್ರ. ಜನ ಸಾಮಾನ್ಯರಲ್ಲಿ ದೇಶಭಕ್ತಿಯ ಜಾಗೃತಿಗೆ ಕಾರಣವಾಗುವ ಯಾವ ಅಂಶಗಳನ್ನೂ ಜೀವಂತವಾಗಿ ಇರಲು ಬಿಡಬಾರದು ಅಷ್ಟೇ! ಒಮ್ಮೆ ದೇಶಭಕ್ತಿ ನಾಶವಾಯಿತೆಂದರೆ ಚೌಕಟ್ಟು ಕಳಕೊಂಡ ವ್ಯಕ್ತಿತ್ವ ನಮ್ಮದಾಗಿಬಿಡುತ್ತದೆ. ಆಮೇಲೆ ಚೀನಾ, ರಷ್ಯಾ, ಅಮೆರಿಕಾಗಳು ನಮ್ಮನ್ನು ಆಪೋಷನ ತೆಗೆದುಕೊಳ್ಳೋದು ಬಲು ಸುಲಭ.

hammer and sickle
a respresentation of hammer and sickle symbo

ಒಂದು ಗಂಭೀರ ಸಂಗತಿ ಗಮನಿಸುತ್ತಿದ್ದೀರಾ? ಕಳೆದ 68 ವರ್ಷಗಳಲ್ಲಿ ಈ ದೇಶದಲ್ಲಿ ರಾಜಕೀಯ ಧ್ರುವೀಕರಣ ಅಂದರೆ ಹಿಂದೂ-ಮುಸ್ಲೀಂ ಪ್ರತ್ಯೇಕತೆ ಎಂದೇ ಇತ್ತು. ಜೆಎನ್ಯು ಪ್ರಕರಣ ಮತ್ತು ಭಾರತ್ ಮಾತಾ ಕಿ ಜೈ ಹೇಳಲಾರೆವೆಂದು ಕೆಲವರು ತಕರಾರೆತ್ತಿದ ಮೇಲೆ ದೇಶಪ್ರೇಮಿ ಮತ್ತು ದೇಶದ್ರೋಹಿಗಳೆಂಬ ಧ್ರುವೀಕರಣವಾಗಿಬಿಟ್ಟಿದೆ. ದೇಶದ್ರೋಹಿಗಳ ಸದ್ದನ್ನು ಪ್ರಜ್ಞಾವಂತ ನಾಗರೀಕರೇ ಅಡಗಿಸಲು ತೊಡೆ ತಟ್ಟಿ ನಿಂತಿರೋದು ವಿಶೇಷ. ಸ್ವಾತಂತ್ರ್ಯ ಕಾಲಘಟ್ಟದ ದೇಶಭಕ್ತಿ ಮತ್ತೆ ಧಗಧಗನೆ ಉರಿಯುತ್ತಿರುವಂತೆನಿಸುತ್ತಿದೆ. ಈ ಎಲ್ಲಾ ಧನಾತ್ಮಕ ಬೆಳವಣಿಗೆಗಳಿಂದ ಕಂಗಾಲಾಗಿರೋದು ಯಾರು ಗೊತ್ತಾ? ನೆಹರೂ ಕಾಲದಿಂದಲೂ ಈ ದೇಶದ ಬೌದ್ಧಿಕತೆಯ ಮೇಲೆ ಸವಾರಿ ಮಾಡುತ್ತಿರುವ ಕಮ್ಯುನಿಸ್ಟರು!
ಹೌದು. ನಾನು ಆರಂಭದಲ್ಲಿಯೇ ಹೇಳಿದ್ದೆ. ಜೆ ಎನ್ ಯು  ರೀತಿಯ ಪ್ರಕರಣಗಳಿಗೆ ನೀರೆರೆದು ಪೋಷಿಸುತ್ತಿರೋದು ಮೂರು ಶಕ್ತಿಗಳು. ಮೊದಲನೆಯದು ಕ್ರಿಶ್ಚಿಯನ್ ಇವ್ಯಾಂಜಲಿಕಲ್ ಶಕ್ತಿ. ಎರಡನೆಯದು ನಕ್ಸಲ್ ವಾದಿ ಕಮ್ಯುನಿಸ್ಟರದ್ದು. ಮತ್ತೊಂದು ಜಿಹಾದಿಗಳದ್ದು! ಇವರೆಲ್ಲರನ್ನು ಒಂದು ಸೂತ್ರದಡಿ ಬಂಧಿಸಿರೋದು ಅಮೇರಿಕಾದ ಸಿಐಎ.
ಇವ್ಯಾಂಜಲಿಕಲ್ ಶಕ್ತಿಗಳು ದೇಶ ತುಂಡು ತುಂಡು ಮಾಡುವಲ್ಲಿ ತೋರುತ್ತಿರುವ ಆಸಕ್ತಿಯನ್ನು ಕಳೆದ ವಾರಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೆ. ಈಗ ಕಮ್ಯುನಿಸ್ಟರ ಸರದಿ.
19 ನೇ ಶತಮಾನದ ಕ್ರಾಂತಿಕಾರಿ ಚಿಂತಕರೆಂದು ಕರೆಯಲ್ಪಡುವ ಮಾರ್ಕ್ – ಎಗಲ್ಸ್ ರ ಪ್ರಭಾವದಿಂದ ಹುಟ್ಟಿಕೊಂಡ ಕಮ್ಯುನಿಸ್ಟ್ ಸಿದ್ಧಾಂತಗಳು ತಾವು ಹುಟ್ಟಿದ ರಷ್ಯಾದಲ್ಲಿಯೇ ಉಧ್ವಸ್ತಗೊಂಡವು. ಕಾರ್ಮಿಕರೇ ಆಳುವಂತಹ ಸಮರ್ಥ ನಾಡಿನ ಕಲ್ಪನೆಯನ್ನು ಜಗತ್ತಿಗೇ ಹಂಚಿದ ಕಮ್ಯುನಿಸ್ಟ್ ಚೀನಾ ತನ್ನ ನಾಡಿನಲ್ಲಿಯೇ ಕಾರ್ಮಿಕರ ಶೋಷಣೆಗೆ ನಿಂತಿತು. ಅಲ್ಲಿ ಕಾರ್ಮಿಕರು ಹೆಚ್ಚು ಸಂಬಳ ಕೇಳುವಂತಿಲ್ಲ, ಬೇಕೆಂದಾಗ ರಜೆ ಹಾಕುವಂತಿಲ್ಲ. ಅವರಿಗೆ ಮೂಲ ಸೌಕರ್ಯಗಳಿಲ್ಲ, ಖಾತ್ರಿಯಾದ ಭವಿಷ್ಯವೂ ಇಲ್ಲ! ಜಗತ್ತಿನ ಬಂಡವಾಳ ಹೂಡಿಕೆದಾರರು ಚೀನಾಕ್ಕೆ ಧಾವಿಸಿ ಬರುತ್ತಿದ್ದಾರೆ. ಏಕೆ ಗೊತ್ತೆ? ಅತಿ ಕಡಿಮೆ ಸಂಬಳದ ಕಾರ್ಮಿಕರು ಸಿಗುತ್ತಾರೇಂತ!
ಹೀಗೆ ನಾಶವಾದ, ಕಾಲದ ಕುಲುಮೆಯಲ್ಲಿ ಸರಿಯಾಗಿ ಬೇಯದ, ಅಸಮರ್ಪಕ ಸಿದ್ಧಾಂತದ ಬಾಲ ಹಿಡಿದು ಅಂಡಲೆಯುತ್ತಿರುವ ಕೆಲವು ಜನ ಭಾರತದಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿ ತೀವ್ರತರವಾಗಿ ತೊಡಗಿಕೊಂಡಿದ್ದಾರೆ. ಜೀಹಾದಿಗಳದ್ದು ಬಂದೂಕಿನ ಉಗ್ರವಾದವಾದರೆ, ಇವರದ್ದು ಶಾಬ್ದಿಕ ಉಗ್ರವಾದ (verbal terrorism) ವಂತೆ. ಹಾಗೆನ್ನುತ್ತಾರೆ ಅರುಣ್ ಶೌರಿ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹೊಸ ಹೊಸ ಪದಗಳನ್ನು ಹುಡುಕಿ ಜನರ ತಲೆ ಕೆಡಿಸುವಲ್ಲಿ ಅವರು ನಿಸ್ಸೀಮರು. ಹಿಂದೂ ವಿಚಾರಧಾರೆಯವರನ್ನು ‘ಕಮ್ಯುನಲ್’ (ಕೋಮುವಾದ) ಎಂದವರು ಅವರು. ಅದೇ ವೇಳೆಗೆ ಹಿಂದೂ ವಿರೋಧಿ ಚಿಂತನೆಗಳಿಗೆ ‘ರ್ಯಾಷನಲ್'(ವಿಚಾರವಾದಿ) ಎಂಬ ಬಣ್ಣ ಹಚ್ಚಿದರು. ನಮ್ಮ ‘ರಾಷ್ಟ್ರೀಯತೆ’ಗೆ ‘ವಿಶ್ವಮಾನವತೆ’ಯನ್ನು ಎದುರಿಗೆ ತಂದು ನಿಲ್ಲಿಸಿದರು. ನಾವು ‘ಸಾಮರಸ್ಯ’ದ ಪ್ರಯತ್ನಕ್ಕೆ ನಿಂತಾಗ ‘ಪುರೋಹಿತಷಾಹಿ’ ಎಂದು ಜರಿದರು. ‘ವಿಕಾಸ’ದ ಮಾತನ್ನು ನಾವಾಡಿದರೆ ‘ಪರಿಸರ ವಿರೋಧಿ’ಗಳೆಂಬ ಹಣೆಪಟ್ಟಿ ಕಟ್ಟಿದರು. ‘ಸಾಮಾಜಿಕ ನ್ಯಾಯ’ ‘ಮಾನವ ಹಕ್ಕು’ ಅವರದ್ದೇ ಕೊಡುಗೆ. ಕೊನೆಗೆ ದೇಶದಲ್ಲಿ ‘ಅಸಹಿಷ್ಣುತೆ’ ಇದೆ ಎಂದರು. ‘ಅವಾರ್ಡ್ ವಾಪಸಿ’ ಎಂಬ ಸುಂದರ ಪದ ಹುಟ್ಟುಹಾಕಿ ಸದ್ದು ಮಾಡಿದರು. ಜೆಎನ್ಯುನಲ್ಲಿ ಕೂಗಾಡಿ ‘ಆಜಾದಿ’ ಎಂದರು. ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ‘ಆಗಸ್ಟ್ ಕ್ರಾಂತಿ’ ಎಂದು ಹೆಸರಿಸಿದ್ದೂ ಅವರೇ. ಕಮ್ಯುನಿಸ್ಟರ ‘ಮೇ ಕ್ರಾಂತಿಯ’ ನೆನಪಿಗೆ!
ಹೊಸ-ಹೊಸ ಪದಗಳ ಸೃಷ್ಟಿ ಮಾಡಿ ಆ ಪದವನ್ನು ದೇಶದಲ್ಲೆಲ್ಲಾ ಡಂಗುರ ಹೊಡೆದು ಜಗತ್ತಿನಲ್ಲೆಲ್ಲಾ ಚರ್ಚೆಗೆ ಬರುವಂತೆ ಮಾಡುವಲ್ಲಿ ನಿಸ್ಸೀಮರು ಕಮ್ಯುನಿಸ್ಟರು. ಈ ಅಪಪ್ರಚಾರ ಅದೆಷ್ಟು ವ್ಯಾಪಕವಾಗಿರುತ್ತದೆಂದರೆ ಇಡಿಯ ದೇಶ ಅದರ ಆತಂಕದಲ್ಲಿಯೇ ಮುಳುಗಿರುತ್ತದೆ. ಹೀಗಾಗಿಯೇ ಇವರದ್ದು ಶಾಬ್ದಿಕ ಭಯೋತ್ಪಾದನೆ.
ಹಾಗಂತ ಇಷ್ಟಕ್ಕೇ ನಿಲ್ಲೋದಿಲ್ಲ ಇವರು. ವೈಚಾರಿಕ ವಿರೋಧಿಗಳನ್ನು ಕಂಠಮಟ್ಟ ವಿರೋಧಿಸಿ, ಮುಕ್ತವಾಗಿ ನಿಂದಿಸುವುದರಲ್ಲಿ ಅಗ್ರಣಿಗಳು. ವೈಯಕ್ತಿಕ ದಾಳಿಗಳಿಗೂ ಹಿಂದೆಮುಂದೆ ನೋಡಲಾರರು. ಶಕ್ತಿ ಹೆಚ್ಚಿದ್ದರೆ ಎದುರಾಳಿಗಳನ್ನು ಕೊಲೆ ಮಾಡಿಸುವುದರಲ್ಲಿಯೂ ಅವರಿಗೆ ಸಂಕಟವಿಲ್ಲ. ಕೇರಳ, ಬಂಗಾಳಗಳಲ್ಲಿ ಆದದ್ದು ಇದೇ ಅಲ್ಲವೇ?
ಮುಖ್ಯವಾದ ಪ್ರಶ್ನೆ ಈಗ. ಈ ರೀತಿಯ ದೇಶವಿರೋಧಿ ಧ್ಯೇಯಕ್ಕೆ ಅವರು ಜನರನ್ನು ತಯಾರು ಮಾಡೋದು ಹೇಗೆ? ಅದಕ್ಕೆ ಬಹುಮುಖ್ಯವಾದ ಎರಡು ಮಾರ್ಗಗಳನ್ನು ಅಳವಡಿಸಿಕೊಂಡಿದ್ದಾರೆ. ಮೊದಲನೆಯದು ಕಷ್ಟ-ನೋವುಗಳನ್ನು ವೈಭವೀಕರಿಸಿ ಸುಖವಾಗಿರುವವರ ಮೇಲೆ ದ್ವೇಷ ಹುಟ್ಟಿಸುವಂತೆ ಮಾಡುವ ಭಾಷಣ-ಬರಹಗಳ ಪ್ರಹಾರ ಮಾಡೋದು. ಎರಡನೆಯದು ಇತಿಹಾಸ, ಪರಂಪರೆಗಳನ್ನು ಆಯಕಟ್ಟಿನ ಜಾಗದಲ್ಲಿ ಕುಳಿತು ತಿರುಚಿಬಿಡೋದು.
ಯಾವತ್ತಾದರೂ ಅವರ ಭಾಷಣ ಕೇಳಿದ್ದೀರಾ? ಮುಕೇಶ್ ಅಂಬಾನಿಯ ಮನೆಯ ಬೆಲೆ ಹೇಳುತ್ತಾರೆ, ಟಾಟಾ ಬಳಸುವ ಕಾರಿನ ಬೆಲೆ ಹೇಳಿ ಹೌಹಾರಿಸುತ್ತಾರೆ. ಮಲ್ಯನ ಒಂದು ದಿನದ ಖರ್ಚು ಅದೆಷ್ಟು ಗೊತ್ತಾ ಎನ್ನುತ್ತಾ ನಿಮ್ಮನ್ನು ಗಾಬರಿಗೆ ಕೆಡುವುತ್ತಾರೆ. ನಾವು ಇವರೆಲ್ಲರೊಟ್ಟಿಗೆ ನಮ್ಮ ಬದುಕನ್ನು ಸಮೀಕರಿಸಿಕೊಂಡು ನೋಡುತ್ತಿರುವಾಗಲೇ ಸಿರಿವಂತರ ವಿರುದ್ಧ ನಮ್ಮಲ್ಲಿ ಆಕ್ರೋಶ ಹುಟ್ಟುವಂತೆ ಮಾಡಿಬಿಡುತ್ತಾರೆ. ಕ್ರಮೇಣ ಇಂಥವರೇ ದೇವಸ್ಥಾನದ ಹುಂಡಿಗೆ ಹಣ ಹಾಕುವುದರಿಂದ ದೇವರು ಸಿರಿವಂತರ ಪರ ಎನ್ನುತ್ತಾರೆ. ಅವನ ಪೂಜೆಗೆ ಕುಳಿತಿರುವ ಪುರೋಹಿತ ಸಿರಿವಂತರ ಮಾತುಕೇಳಿ ಬಡವರ ಶೋಷಣೆ ಮಾಡುವ ದಲ್ಲಾಳಿ ಎನ್ನುತ್ತಾರೆ. ಅಲ್ಲೊಂದು ದಲಿತ ಪರ್ವ ಶುರುವಾಗುತ್ತದೆ. ಅವರನ್ನು ಇವರ ವಿರುದ್ಧ ಎತ್ತಿಕಟ್ಟುತ್ತಾರೆ. ಹೀಗೆ ಆಕ್ರೋಶದಿಂದ ಕುದಿಯುತ್ತಿದ್ದ ತರುಣರನ್ನು ಒಟ್ಟು ಮಾಡಿ ಅವರ ಕೈಲಿ ಬಂದೂಕುಗಳನ್ನು ಕೊಟ್ಟುಬಿಟ್ಟರೆ ಮುಗಿಯಿತು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ನಕ್ಸಲರ ಪಡೆಯ ಸೃಷ್ಟಿ!
ಯಾರಿಗೂ ಗೊತ್ತೇ ಇಲ್ಲದ ಯುವಕನೊಬ್ಬ ತಲೆಗೆ ಕೇಸರಿ ಪಟ್ಟಿ ಕಟ್ಟಿಕೊಂಡು ಯಾರಿಗಾದರೂ ಹೊಡೆದರೆ ಬೊಂಬಡಾ ಬಜಾಯಿಸುವ ಇವರು ನಕ್ಸಲರು ದಿನಬೆಳಗಾದರೆ ಹತ್ಯೆಮಾಡುತ್ತಾರಲ್ಲಾ ಅದರ ವಿರುದ್ಧ ಒಮ್ಮೆಯೂ ಮಾತನಾಡಲಾರರು. ಉಲ್ಟಾ ಈ ಹತ್ಯೆಗಳನ್ನು ಸಮರ್ಥಿಸಿಕೊಂಡು ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತಾರೆ; ಸೈನಿಕರು ಹೋದೆಡೆಯೆಲ್ಲಾ ಅತ್ಯಾಚಾರ ಮಾಡುತ್ತಾರೆಂದು ಹೆಸರು ಕೆಡಿಸುತ್ತಾರೆ.
ನಕ್ಸಲರು ದಾಂತೇವಾಡದಲ್ಲಿ 70ಕ್ಕೂ ಹೆಚ್ಚು ಸೈನಿಕರನ್ನು ಕೊಂದರಲ್ಲ ಅವತ್ತು ಇಡಿಯ ದೇಶ ಸ್ತಂಭೀಭೂತವಾಗಿತ್ತು. ಈ ಪರಿಯ ಕ್ರೌರ್ಯವನ್ನು ಭಾರತ ಊಹಿಸಿರಲಿಲ್ಲ. ಜೆಎನ್ಯುನಲ್ಲಿ ಮರುದಿನ ಕಮ್ಯುನಿಸ್ಟ್ ವಿದ್ಯಾರ್ಥಿ ಮುಖಂಡರು ಸೇರಿ ಸಾರ್ವಜನಿಕವಾಗಿ ವಿಜಯೋತ್ಸವ ಆಚರಿಸಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ಕನ್ಹಯ್ಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಸೈನಿಕರು ಮಾನಭಂಗ ಮಾಡುತ್ತಾರೆಂದು ವೀರಾವೇಷದ ಮಾತುಗಳನ್ನಾಡಿದ್ದ. ಎಲ್ಲದರ ಹಿಂದೆ ಇರೋದೂ ಒಂದೇ ಸೂತ್ರ. ಜನ ಸಾಮಾನ್ಯರಲ್ಲಿ ದೇಶಭಕ್ತಿಯ ಜಾಗೃತಿಗೆ ಕಾರಣವಾಗುವ ಯಾವ ಅಂಶಗಳನ್ನೂ ಜೀವಂತವಾಗಿ ಇರಲು ಬಿಡಬಾರದು ಅಷ್ಟೇ! ಒಮ್ಮೆ ದೇಶಭಕ್ತಿ ನಾಶವಾಯಿತೆಂದರೆ ಚೌಕಟ್ಟು ಕಳಕೊಂಡ ವ್ಯಕ್ತಿತ್ವ ನಮ್ಮದಾಗಿಬಿಡುತ್ತದೆ. ಆಮೇಲೆ ಚೀನಾ, ರಷ್ಯಾ, ಅಮೆರಿಕಾಗಳು ನಮ್ಮನ್ನು ಆಪೋಷನ ತೆಗೆದುಕೊಳ್ಳೋದು ಬಲು ಸುಲಭ.
ಈ ಹಿನ್ನೆಲೆಯಲ್ಲಿಯೇ ಅವರು ಭಾರತೀಯ ಪರಂಪರೆಯನ್ನು ಆಡಿಕೊಳ್ಳೋದು, ಅದು ನಿಸ್ಸತ್ವವಾದುದೆಂದು ಬಗೆ-ಬಗೆಯಲ್ಲಿ ಸಾಬೀತು ಪಡಿಸಲು ಹೆಣಗಾಡೋದು. ಇನ್ನೂ ಅಚ್ಚರಿ ಏನು ಗೊತ್ತೇ? ಭಾರತೀಯತೆಯನ್ನು ಜರಿಯಲು ಸುಳ್ಳುಗಳನ್ನು ಹೇಳಬೇಕಾದ ಪ್ರಸಂಗ ಬಂದರೂ ನಾಚದ ಜನ ಇವರು. ಯಾವಾಗಲಾದರೊಮ್ಮೆ ಅರುಣ್ ಶೌರಿಯವರು ಬರೆದಿರುವ ಎಮಿನೆಂಟ್ ಹಿಸ್ಟಾರಿಯನ್ ಕೃತಿ ಓದಿ ನೋಡಿ. ಈ ಧೂರ್ತರ ಬಂಡವಾಳ ಬಯಲಾಗಿಬಿಡುತ್ತದೆ.

shourie-modi-story_650_050115092612
1998 ರ ಜೂನ್-ಜುಲೈ ವೇಳೆಗೆ ನಡೆದ ಘಟನೆ. ಕಮ್ಯುನಿಸ್ಟ್ ಇತಿಹಾಸಕಾರರ ಒಕ್ಕೂಟ ಅಂದಿನ ಎನ್ ಡಿ ಎ ಸರ್ಕಾರದ ವಿರುದ್ಧ ತಿರುಗಿ ಬಿದ್ದಿತ್ತು. ಇತಿಹಾಸವನ್ನು ತಿರುಚುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ ಎಂದು ಸಂಸತ್ತಿನಲ್ಲೂ ಗಲಾಟೆಯಾಗುವಂತೆ ನೋಡಿಕೊಂಡಿತ್ತು. ಅರುಣ್ ಶೌರಿಗೆ ಎಡಪಂಥದ ಇತಿಹಾಸಕಾರ ಶ್ರೀ ಮಾಲಿಯವರೊಂದಿಗೆ ಟಿ ವಿ ಪರದೆಯ ಮೇಲೆ ಜಿದ್ದಾ-ಜಿದ್ದಿಯಾಯಿತು. ‘ಪ್ರಾಚೀನ ಭಾರತದಲ್ಲಿ ಗೋಮಾಂಸ ಭಕ್ಷಣೆ ಮಾಡಲಾಗುತ್ತಿತ್ತು. ಈಗ ಅದನ್ನು ಮರೆಮಾಚುತ್ತಿದ್ದಾರೆ’ ಎಂಬ ಮಾತಿನ ಮೇಲೆ ಚರ್ಚೆ ಜೋರಾಯಿತು. ಸಾಕ್ಷ್ಯ ಬೇಕಾದಷ್ಟಿದೆ ಎಂದ ಶ್ರೀಮಾಲಿ ಒಂದೇ ಒಂದು ಸಾಹಿತ್ಯ ಉದಾಹರಿಸುವಲ್ಲಿ ಸೋತರು. ವೇದ-ಪುರಾಣಗಳನ್ನು ಎದುರಿಗೆ ಹರವಿಟ್ಟರೂ ಅದರಿಂದ ಒಂದು ವಾಕ್ಯವನ್ನು ತೆಗೆದು ತೋರಿಸುವುದು ಅವರಿಂದಾಗಲಿಲ್ಲ. ಕೊನೆಗೆ ಗೋಹತ್ಯೆ ಮಾಡಲೇಬಾರದೆಂದು ಹೇಳಿರುವ ಸಾಲುಗಳನ್ನು ಮೊಗೆ ಮೊಗೆದು ಶೌರಿಯವರು ಎದುರಿಗಿಡುತ್ತಿದ್ದಂತೆ ಶ್ರೀಮಾಲಿ ಪೆಚ್ಚಾದರು. ‘ನಿಷೇಧ ಇತ್ತು ಎಂದ ಮಾತ್ರಕ್ಕೆ ತಿನ್ನುತ್ತಿರಲಿಲ್ಲವೆನ್ನುವುದು ಸರಿಯಲ್ಲ. ಕೊಲೆ ಮಾಡಬಾರದೆಂದು ಕಾನೂನಿದ್ದರೂ ಕೊಲೆಗಳು ನಡೆಯುತ್ತಿಲ್ಲವೇ?’ ಎಂಬ ಹೊಸ ವಾದ ಮುಂದಿಟ್ಟು ಸಮಥರ್ಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
ಇವರುಗಳ ಯೋಗ್ಯತೆಯೇ ಇಷ್ಟು. ಸುಳ್ಳುಗಳನ್ನು ಪೋಣಿಸಿ ಪೋಣಿಸಿಯೇ ಹಾರ ಕಟ್ಟೋದು, ಎದುರಾಳಿಗಳನ್ನು ಸುಳ್ಳುಗಾರರೆಂದು ಜರಿಯೋದು. ಹೌದು. ಕಮ್ಯುನಿಸ್ಟ್ ಸಿದ್ಧಾಂತದೆಡೆಗೆ ಜನರನ್ನು ಸೆಳೆಯುವ ಎರಡನೇ ಬಹುಮುಖ್ಯ ಮಾರ್ಗ ಇದೇ.
ಆಯಕಟ್ಟಿನ ಜಾಗಗಳನ್ನು ಮೊದಲು ಆರಿಸಿಕೊಂಡು ಅಲ್ಲಿ ತಳವೂರುವುದು. ಮುಂದೆ ತಮ್ಮ ಸಿದ್ಧಾಂತವನ್ನು ಬೆಂಬಲಿಸುವವನನ್ನೇ ಅಲ್ಲಿಗೆ ತಂದು ಕೂರಿಸೋದು. ಆರ್ಥಿಕ ಬಂಡವಾಳವಾದವನ್ನು ಧಿಕ್ಕರಿಸುವ ಕಮ್ಯುನಿಸ್ಟರು ವಿಶ್ವವಿದ್ಯಾಲಯದಲ್ಲಿ ಬೌದ್ಧಿಕ ಬಂಡವಾಳವಾದವನ್ನು ಆಚರಣೆಗೆ ತಂದಿದ್ದು ಹೀಗೆಯೇ! ಅರುಣ್ ಶೌರಿ ತಮ್ಮ ಕೃತಿಯಲ್ಲಿ ಯುವ ಪತ್ರಕರ್ತೆಯೊಬ್ಬರ ಲೇಖನವನ್ನು ಉಲ್ಲೇಖಿಸಿ ಜೆ ಎನ್ ಯು ಬಂಡವಾಳ ಬಯಲಿಗೆಳೆದಿದ್ದಾರೆ. ಈ ವಿವಿಯಲ್ಲಿ ಕೈತುಂಬಾ ಅವಕಾಶಗಳಿರುವ ಇತಿಹಾಸ ವಿಭಾಗಕ್ಕೆ ಬೇಡಿಕೆ ಹೆಚ್ಚಂತೆ. ಹೀಗಾಗಿ ಪ್ರೊಫೆಸರ್ ನವಾಬರ ಮನೆಗೆಲಸ, ಅಡುಗೆ ಮಾಡುವುದೂ, ಅಸೈನ್ಮೆಂಟಿನ ಭಾಗವಾಗಿರುತ್ತಿತ್ತಂತೆ. ವಿಶ್ವವಿದ್ಯಾಲಯದ ಅನೇಕ ಸಮಿತಿಗಳಲ್ಲಿ ಈ ನವಾಬರು ಮಾರ್ಕ್ಸ್ ವಾದ , ಲೆನಿನ್ ವಾದ ಮತ್ತು ಉದಾರವಾದದ ವಿಚಾರ-ರಥ ಮುನ್ನಡೆಸುವ ಸೈದ್ಧಾಂತಿಕ ಉತ್ತರಾಧಿಕಾರಿಗಳಿಗೆ ಅವಕಾಶ ಕಲ್ಪಿಸುತ್ತಿದ್ದುದಂತೆ. ಒಟ್ಟಾರೆ ಹೊರಗಿನವರು ಅಂದರೆ ರಾಷ್ಟ್ರವಾದಿಗಳು ಒಳಗೇ ನುಸುಳದಂತೆ ಈ ಬೌದ್ಧಿಕ ಬಂಡವಾಳ ಶಾಹಿಗಳ ಪಡೆ ನಿಯಂತ್ರಿಸುತ್ತಿರುವುದಂತೆ!
ಅಂತೆ-ಕಂತೆ ಏನು? ಈಗಲೂ ಹಾಗೆಯೇ ಇದೆ. ಜೆ ಎನ್ ಯು ಮಾತ್ರವಲ್ಲ ಈ ಕಮ್ಯುನಿಸ್ಟ್ ಧೂರ್ತರು ಕಾಲಿಟ್ಟೆಡೆಯೆಲ್ಲ ಹಾಗೆಯೇ ಇದೆ. ತಾವು ಹೇಳಿದ ‘ಮನೆಗೆಲಸ’ಗಳನ್ನು ಮಾಡದ ವಿದ್ಯಾರ್ಥಿಗಳಿಗೆ ಅದೆಷ್ಟು ಕಿರಿ ಕಿರಿ ಮಾಡುತ್ತಾರೆಂದು ನೀವು ಊಹಿಸಲೂ ಸಾಧ್ಯವಿಲ್ಲ. ಅನ್ಯ ವಿಚಾರಧಾರೆಯವ ಮಧ್ಯೆ ಇದ್ದರಂತೂ ಅವನ ಕಥೆ ಮುಗಿಸಿಯೇ ಬಿಡುತ್ತಾರೆ.
ಅವರದ್ದೊಂದು ಭರ್ಜರಿ ನೆಟ್ವರ್ಕ್ ಇದೆ. ವಿಶ್ವವಿದ್ಯಾಲಯಗಳ ಆಯಕಟ್ಟಿನ ಜಾಗದಲ್ಲಿದ್ದಾರೆ, ಪತ್ರಿಕೆ-ವಾಹಿನಿಗಳ ಮೇಲೆ ನಿಯಂತ್ರಣವೂ ಅವರದ್ದೇ ಇದೆ. ಯಾವ ಪಕ್ಷದ ಸರ್ಕಾರ ಬಂದರೂ ಮಹತ್ವದ ಜಾಗ ಆರಿಸಿಕೊಂಡು ಕೂತುಬಿಡುತ್ತಾರೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಜಾಗ ಪಡಕೊಂಡು ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಿಸಿ ಅವರು ಹೇಳುವ ಮಾತುಗಳಿಗೆ ಬೆಲೆ ಬರುವಂತೆ ಮಾಡುತ್ತಾರೆ. ಇಷ್ಟೆಲ್ಲಾ ಒಬ್ಬರು ಮತ್ತೊಬ್ಬರ ಬೆನ್ನು ಕೆರೆಯುವ ಕಾರ್ಯದಲ್ಲಿ ನಿರತವಾಗಿರುವಾಗ ಇವರುಗಳ ವಿರುದ್ಧ ಹೇಳಿದ ಸತ್ಯ ಗಟ್ಟಿಯಾಗಿ ನಿಲ್ಲುವುದಾದರೂ ಹೇಗೆ? ಹೇಳಿ.
ನೆಹರೂ ಅಧಿಕಾರಾವಧಿಯಿಂದ ಶುರುಮಾಡಿ 1980 ರವರೆಗೆ ಇವರು ಆಡಿದ್ದೇ ಆಟವಾಗಿತ್ತು. ಸಣ್ಣ-ಸಣ್ಣ ಮುಷ್ಕರಗಳ ಮೂಲಕವೂ ದೇಶದ ವ್ಯವಸ್ಥೆಯನ್ನು ನಡುಗಿಸುವಷ್ಟು ಸಾಮಥ್ರ್ಯ ಅವರಿಗಿತ್ತು. ಸಿರಿವಂತರನ್ನು ವಿರೋಧಿಸುವ ಭರದಲ್ಲಿ ಸಾಮಾನ್ಯ ಕಾರ್ಮಿಕರು ಕಡು ಬಡವರಾಗಿಬಿಟ್ಟರು. ಸರಿ ಸುಮಾರು ಅದೇ ವೇಳೆಗೆ ಆರ್ಥಿಕ ವ್ಯವಸ್ಥೆ ಆಧುನಿಕವಾಯಿತು. ಮುಕ್ತ ಆರ್ಥಿಕವಾದ ವಿಕಾಸದ ಹೊಸ ವಿಧಾನಗಳನ್ನು ಹುಡುಕಿಕೊಟ್ಟಿತು. ಅಲ್ಲಿಗೆ ಕಮ್ಯುನಿಸ್ಟರ ತರ್ಕಗಳಿಗೆ, ವಾದಗಳಿಗೆ ಕಿಮ್ಮತ್ತಿಲ್ಲದಂತಾಯಿತು. ರಷ್ಯಾ ಛಿದ್ರವಾದ ಮೇಲೆ, ಜರ್ಮನಿಗಳೆರಡೂ ಒಂದುಗೂಡಿದ ಮೇಲೆ, ಚೀನಾ ಭಾರತ-ವಿಯೆಟ್ನಾಂಗಳ ಮೇಲೆ ದಾಳಿ ಮಾಡಿದ ಮೇಲೆ ಕಮ್ಯುನಿಸ್ಟರು ಅಯೋಗ್ಯರೆನಿಸಿದರಷ್ಟೇ ಅಲ್ಲ, ಅಪಹಾಸ್ಯಕ್ಕೂ ಒಳಗಾದರು. ಯುವಕರು ಮಾರ್ಕ್ಸ್ – ಮಾವೋಗಳ ಅಫೀಮುವಾದದಿಂದ ದೂರ ಬಂದು ಹಣಗಳಿಕೆಯ ಮಾರ್ಗವನ್ನು ಅರಸಲಾರಂಭಿಸಿದರು.
ಮೊದಲೆಲ್ಲಾ ಮಾತು-ಮಾತಿಗೆ ಬೀದಿಗಿಳಿದು ಬಸ್ಸಿಗೆ ಬೆಂಕಿ ಇಡುತ್ತಿದ್ದ, ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದ, ಟೆಲಿಫೋನ್ ಕಂಬಗಳನ್ನು ಉರುಳಿಸುತ್ತಿದ್ದ ಜನರು ಈಗ ಇಲ್ಲವೇ ಇಲ್ಲ. ಒಂದಷ್ಟು ಜೀಹಾದಿ ಮಾನಸಿಕತೆಯವರು ಮಾತ್ರ ಇನ್ನೂ ಹಳೆಯ ಮಾರ್ಗದಲ್ಲಿದ್ದಾರೆಯೇ ಹೊರತು ಉಳಿದವರು ಬುದ್ಧಿವಂತರಾಗಿದ್ದಾರೆ. ಪ್ರಜ್ಞಾವಂತರು ಹೆಚ್ಚಾದಷ್ಟೂ ಸುಳ್ಳು ಹೇಳುವವರ ಬೆಲೆ ಕಡಿಮೆಯಾಗುತ್ತದೆ. ಪ್ರಶ್ನಿಸುವವರ ಸಂಖ್ಯೆ ಹೆಚ್ಚುತ್ತದೆ.

ICHR
ಇಂದು ಮಾಧ್ಯಮಗಳಲ್ಲಿ ರಾಷ್ಟ್ರೀಯವಾದಿಗಳ ಸಂಖ್ಯೆ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರತವನ್ನೇ ಸರ್ವಸ್ವ ಎಂದುಕೊಂಡಿರುವವರ ಸಂಖ್ಯೆ ಹೆಚ್ಚಾಗಿದೆ. ಅದೇ ಬಲದ ಮೇಲೆ ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕಳೆದ ವಾರ ಇತಿಹಾಸ ಸಂಶೋಧನೆಗೆಂದೇ ಮೀಸಲಾದ ಭಾರತದ ಪ್ರತಿಷ್ಠಿತ ಸಂಸ್ಥೆ ‘ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್’ನ ಮಾರ್ಗದರ್ಶಕ ಮಂಡಳಿಯನ್ನು ವಿಸರ್ಜಿಸಿ ಭಾರತದ ಪರಂಪರೆಗೆ ಅವಮಾನ ಮಾಡಿದ್ದ ರೋಮಿಲಾ ಥಾಪರ್, ಇರ್ಫಾನ್ ಹಬೀಬ್ ರಂತಹ ಇತಿಹಾಸಕಾರರಿಗೆ ಸರಿಯಾದ ಪಾಠ ಕಲಿಸಿದ್ದಾರೆ! ಮೊದಲೆಲ್ಲಾ ಪಠ್ಯಪುಸ್ತಕದಲ್ಲಿ ಒಂದು ಪದ ಬದಲಾವಣೆಯಾದರೆ ಬೊಬ್ಬಿಡುತ್ತಿದ್ದ ಕಮ್ಯುನಿಸ್ಟ್ ಬರಹಗಾರರು, ಬೆಂಬಲಿಗರು ಈಗ ಮಂಡಳಿಯೇ ಬದಲಾದರೂ ತುಟಿಪಿಟಿಕ್ ಎನ್ನುತ್ತಿಲ್ಲ. ಏಕೆ?
ಅದೊಂದು ದೊಡ್ಡ ಕಥೆ. ಭಾರತದಲ್ಲೂ ಸಮಾಧಿಯಾಗುತ್ತಿರುವ ಮಾರ್ಕ್ಸ್ – ಮಾವೋವಾದಗಳ ರೋಚಕ ಗಾಥೆ!

Comments are closed.